Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 07-08-2022


ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 29/2022 ಕಲಂ 323, 498(ಎ), 504, 506, ಸಂಗಡ 34 ಐಪಿಸಿ: ಇಂದು ದಿನಾಂಕ: 06/08/2022 ರಂದು 4:30 ಪಿ.ಎಂ ಕ್ಕೆ ಸಿದ್ದಮ್ಮ ಗಂಡ ಯಮನಪ್ಪ ಕುರಿಯರ್ ವ: 25 ವರ್ಷ ಉ:ಹೊಲಮನೆ ಕೆಲಸ ಜಾ:ಹಿಂದು ಕುರಬರ ಸಾ:ಅಮ್ಮಾಪೂರ ತಾ: ಹುಣಸಗಿ ಜಿ:ಯಾದಗೀರಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪುಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ತವರು ಮನೆ ಹೊರಟ್ಟಿ ಗ್ರಾಮವಿದ್ದು ನನ್ನನ್ನು ಈಗ ಸುಮಾರು 6 ವರ್ಷಗಳ ಹಿಂದೆ ಅಮಾಪೂರ ಗ್ರಾಮದ ಯಮನಪ್ಪ ತಂದೆ ರಾಯಪ್ಪ ಕುರಿಯರ್ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆ ದಿನಾಂಕ ನನಗೆ ನೆನಪು ಇರುವದಿಲ್ಲ ಮದುವೆಯಾದ ನಂತರ ನನ್ನ ಗಂಡನು ನನ್ನೊಂದಿಗೆ ಚೆನ್ನಾಗಿ ಇದ್ದು ಇದರಿಂದ ನನಗೆ ಒಂದು ಗಂಡು ಹಗೂ ಒಂದು ಹೆಣ್ಣುಮಗು ಜನಿಸಿದ್ದು ಇರುತ್ತದೆ. ಈಗ ಮೂರು ತಿಂಗಳುಗಳಿಂದ ನನ್ನ ಗಂಡ ಯಮನಪ್ಪ ಕುರಿಯರ್ ಹಾಗೂ ನನ್ನ ಅತ್ತೆ ಮಾಳಮ್ಮ ಕುರಿಯರ್, ಹಾಗೂ ನನ್ನ ಮಾವ ರಾಯಪ್ಪ ಕುರಿಯರ್, ಮತ್ತು ನನ್ನ ಮೈದುನ ಮೌನೇಶ ಕುರಿಯರ ಎಲ್ಲರೂ ಕೂಡಿ ನನಗೆ ನಿನಗೆ ಅಡುಗೆ ಸರಿಯಾಗಿ ಮಾಡಲು ಬರುವದಿಲ್ಲ, ನಿನಗೆ ಮನೆ ಕೆಲಸ ಮಾಡಲು ಬರುವದಿಲ್ಲ ಅಂತಾ ನನಗೆ ಹೊಡೆಯುವದು ಮತ್ತು ಬಡಿಯುವದು ಮಾಡುತ್ತಿದ್ದರು, ಮತ್ತು ಚುಚ್ಚು ಮಾತುಗಳಿಂದ ಮಾತನಾಡುವದು ಮಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ಮಾಡುತ್ತಿದ್ದರು. ನಂತರ ನನ್ನ ಗಂಡನು ನನ್ನ ಮೇಲೆ ವಿನಾಕಾರಣ ಅನುಮಾನ ಪಡುತ್ತಾ ನೀನು ಅವನ ಜೊತೆ ಯಾಕ ಮಾತನಾಡುತ್ತಿ, ಇವನ ಜೊತೆ ಯಾಕೆ ಮಾತನಾಡುತ್ತಿ ನೀನು ಅವನ ಜೊತೆ ಇದಿ ನೀನು ಇವನ ಜೊತೆ ಇದಿ ಅಂತಾ ನನ್ನ ಮೇಲೆ ಅನುಮಾನ ಪಟ್ಟು ನನಗೆ ಹೊಡೆಯುವದು ಬಡಿಯುವದು ಮಾಡಿ ಚುಚ್ಚು ಮಾತುಗಳಿಂದ ಮಾತನಾಡಿ ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ಮಾಡುತ್ತಿದ್ದನು, ಆಗ ನಾನು ಈ ವಿಷಯವನ್ನು ನನ್ನ ತವರು ಮನೆಯವರ ಮುಂದೆ ಹೇಳಿದ್ದು ನನ್ನ ತವರು ಮನೆಯಿಂದ ನಮ್ಮ ಅಣ್ಣ ಮಾಳಪ್ಪ ನಾಗೂರ ಹಾಗೂ ನಮ್ಮ ಸಂಬಂದಿ ಬಸಪ್ಪ ಲಿಂಗದಳ್ಳಿ ಇಬ್ಬರು ಕೂಡಿ ನಮ್ಮೂರಿನ ಮುಖಂಡರಾದ ಗುರಪ್ಪ ಲಿಂಗದಳ್ಳಿ, ಆಮಲಿಂಗಪ್ಪ ತಂದೆ ಮಾಳಪ್ಪ ನಾಗೂರ, ಪರಸಪ್ಪ ಲಿಂಗದಳ್ಳಿ, ಮಲ್ಲಪ್ಪ ತಂದೆ ಮಾಳಪ್ಪ ನಾಗೂರ ರವರನ್ನು ಕರೆದುಕೊಂಡು ಅಮ್ಮಾಪೂರ ಗ್ರಾಮಕ್ಕೆ ಬಂದು ಮದುವೆ ಕಾಲಕ್ಕೆ ಇದ್ದ ನಮ್ಮ ಸಮಾಜದ ಮುಖಂಡರಾದ ಹಣಮಸಾಗರ ಗ್ರಾಮದ ಅಡಿವೆಪ್ಪ ರವರಿಗೆ ಕರೆಯಿಸಿಕೊಂಡು ಎಲ್ಲರು ಕೂಡಿ ನನ್ನ ಗಂಡನ ಮನೆಯಲ್ಲಿ ಕುಳಿತು ನನ್ನ ಗಂಡನಿಗೆ ವಿಚಾರ ಮಾಡಿದ್ದು ನನ್ನ ಗಂಡನು ಅವರ ಎದುರಿಗೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಇನ್ನು ಮುಂದೆ ನನ್ನ ಮೇಲೆ ಅನುಮಾನ ಪಡುವದಿಲ್ಲ ಅಂತಾ ಹೇಳಿದ್ದನು ಆಗ ನನ್ನ ತವರು ಮನೆಯವರು ಮರಳಿ ಹೋಗಿದ್ದರು ನಂತರ ನನ್ನ ಗಂಡನು ಸ್ವಲ್ಪ ದಿನ ನನ್ನೊಂದಿಗೆ ಚೆನ್ನಾಗಿ ಇದ್ದನು ದಿನಾಂಕ 02/08/2022 ರಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ನಾನು ನಮ್ಮ ಮಾವನ ಪೋನ ತಗೆದುಕೊಂಡು ನನ್ನ ಅಣ್ಣನಿಗೆ ಪೋನ ಹಚ್ಚಿ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ನನ್ನ ಗಂಡ ಯಮನಪ್ಪ ತಂದೆ ರಾಯಪ್ಪ ಕುರಿಯರ್ ಈತನು ನನಗೆ ಬೋಸುಡಿ ಸೂಳಿ ಪೋನ ಯಾರಿಗೆ ಹಚ್ಚಿ ಮಾತನಾಡುತ್ತಿರುವಿ ಅಂತಾ ನನ್ನೊಂದಿಗೆ ಜಗಳ ತಗೆದು ಕೈಯಿಂದ ನನ್ನ ಕಪಾಳಕ್ಕೆ ಹೊಡೆಯತೊಡಗಿದನು ಆಗ ಅಲ್ಲಿಗೆ ಬಂದ ನನ್ನ ಅತ್ತೆ ಮಾಳಮ್ಮ ಕುರಿಯರ್ ಈತಳು ಬೋಸುಡಿ ಸೂಳಿ ಮನ್ಯಾಗ ಅಡುಗೆ ಮಾಡಂದರ ಸರಿಯಾಗಿ ಅಡುಗೆ ಮಾಡಂಗಿಲ್ಲ ಇಲ್ಲಿ ಪೋನ್ಯಾಗ ಮಾತನಾಡುತ್ತಾ ನಿಂತಿರುವಿಯಾ ಅಂತಾ ಅಂದು ಕಾಲಿನಿಂದ ನನ್ನ ಸೊಂಟಕ್ಕೆ ಒದ್ದಳು ನಂತರ ಅಲ್ಲಿಗೆ ಬಂದ ನನ್ನ ಮಾವ ರಾಯಪ್ಪ ಕುರಿಯರ್ ಹಾಗೂ ನನ್ನ ಮೈದುನ ಮೌನೇಶ ಕುರಿಯರ್ ಇಬ್ಬರು ನನಗೆ ಬೋಸುಡಿ ಸೂಳಿ ಇನ್ನೊಮ್ಮೆ ನೀನು ಪೋನ ತಗೆದುಕೊಂಡು ಯಾರಿಗಾದರು ಪೋನ ಹಚ್ಚಿ ಮಾತನಾಡಿದರೆ ನಿನಗೆ ಜಿವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಆಗ ನಾನು ಚಿರಾಡುತ್ತಿದ್ದಾಗ ನಮ್ಮ ಪಕ್ಕದ ಮನೆಯವರಾದ ಗದ್ದೆಪ್ಪ ಕುರಿಯರ್, ಹಣಮಂತ ಕುರಿಯರ್ ಹಾಗೂ ಇತರರು ಬಂದು ಬಿಡಿಸಿದ್ದು ಇರುತ್ತದೆ ನಂತರ ನಾನು ಪೋನ ಹಚ್ಚಿ ಈ ವಿಷಯವನ್ನು ನನ್ನ ತವರು ಮನೆಯವರಿಗೆ ಹೇಳಿದ್ದು ಆಗ ನನ್ನ ಅಣ್ಣ ಮಾಳಪ್ಪ ಹಾಗೂ ನಮ್ಮ ಕಾಕ ಮಲ್ಲಪ್ಪ ರವರು ಕೂಡಿ ನಮ್ಮ ಊರಿಗೆ ಬಂದು ನನ್ನನ್ನು ಕರೆದುಕೊಂಡು ನನ್ನ ತವರ ಮನೆಗೆ ಹೋಗಿದ್ದು ಅಲ್ಲಿಂದ ಜಗಳದ ಬಗ್ಗೆ ನಮ್ಮ ಮನೆಯಲ್ಲಿ ಹಾಗೂ ನಮ್ಮ ಸಮಾಜದ ಮುಖಂಡರಲ್ಲಿ ಮಾತನಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ಪಿಯರ್ಾದಿಕೊಟಿದ್ದು ಇರುತ್ತದೆ. ಈ ಜಗಳದಲ್ಲಿ ನನಗೆ ಅಷ್ಟೇನು ಪೆಟ್ಟಾಗಿರುವದಿಲ್ಲ ನಾನು ಆಸ್ಪತ್ರೆಗೆ ಹೋಗುವದಿಲ್ಲ. ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಮಾಡಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಪಿಯರ್ಾದಿ ಅಜರ್ಿ ಇರುತ್ತದೆ. ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 29/2022 ಕಲಂ 323, 498(ಎ), 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 30/2022 ಕಲಂ: 78 (3) ಕೆ.ಪಿ ಯಾಕ್ಟ್: ಇಂದು ದಿನಾಂಕ: 06/08/2022 ರಂದು 6:00 ಪಿ.ಎಮ್ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಇಂದು ದಿನಾಂಕ 06/08/2022 ರಂದು 5:30 ಪಿ.ಎಂ ಕ್ಕೆ ನಾರಾಯಣಪೂರ ಗ್ರಾಮದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿ ಇದ್ದಾಗ ನಾರಾಯಣಪೂರ ಗ್ರಾಮದ ವಾಲ್ಮಿಕಿ ವೃತ್ತದ ಹತ್ತಿರ ಒಬ್ಬ ವೆಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 30/2022 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ನಂತರ ಮಾನ್ಯ ಪಿಎಸ್ಐ ಸಾಹೇಬರು 7:55 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಆರೋಪಿ ಹಾಗೂ ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 700/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1) ರಾಜು ತಂದೆ ಸೋಮ್ಲೆಪ್ಪ ರಾಠೋಡ ವ: 26 ವರ್ಷ ಉ: ಕೂಲಿ ಕೆಲಸ ಜಾ:ಹಿಂದು ಲಮಾಣಿ ಸಾ:ನಾರಾಯಣಪೂರ


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 128/2022 ಕಲಂ: 323, 324, 504, 506 ಸಂ 34 ಐಪಿಸಿ: ಇಂದು ದಿನಾಂಕ 06/08/2022 ರಂದು 6.00 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀ ಗುತ್ತಪ್ಪಗೌಡ ತಂದೆ ಸಂಗನಗೌಡ ಮಾಲಿ ಪಾಟೀಲ್ ವ|| 28 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಹದನೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ನಮ್ಮ ತಂದೆಯಾದ ಸಂಗನಗೌಡ ತಂದೆ ಬಾಪುಗೌಡ ಮಾಲಿ ಪಾಟೀಲ್ ಇವರು 10 ತಿಂಗಳ ಹಿಂದೆ ಮೃತಪಟ್ಟಿದು,್ದ ನಮ್ಮ ತಂದೆಯವರು 3 ಜನ ಅಣ್ಣ ತಮ್ಮಂದಿರರಿದ್ದು ಹಿರಿಯವನು ನಮ್ಮ ತಂದೆಯಾದ ಬಾಪುಗೌಡ, 2ನೇಯವನು ಬಸನಗೌಡ ಮತ್ತು 3ನೇಯವನು ಮಲ್ಲನಗೌಡ ಅಂತಾ ಇದ್ದು ಮೂರೂ ಜನರ ನಡುವೆ ಒಟ್ಟು 60 ಎಕರೆ ಜಮೀನು ಇದ್ದು ನಮ್ಮ ತಂದೆಯು ಮೃತಪಟ್ಟ ನಂತರ ನಮ್ಮ ತಂದೆಯ ತಮ್ಮಂದಿರರಿಬ್ಬರೂ ನನ್ನೊಂದಿಗೆ ಜಮೀನಿನ ವಿಷಯದಲ್ಲಿ ಜಗಳ ಮಾಡುತ್ತಾ ಬಂದಿದ್ದು ಇರುತ್ತದೆ. ಹೀಗಿದ್ದು ದಿನಾಂಕ 04/08/2022 ರಂದು 12.30 ಪಿಎಂ ಸುಮಾರಿಗೆ ಮಲ್ಲಾ ಕೆಂಭಾವಿ ರಸ್ತೆಯ ಪಕ್ಕದಲ್ಲಿ ಇರುವ ನಮ್ಮ ಹೊಲದಲ್ಲಿ ನಮ್ಮ ಕಾಕಂದಿರರಾದ 1) ಬಸನಗೌಡ ತಂದೆ ಬಾಪುಗೌಡ ಮಾಲಿ ಪಾಟೀಲ್, 2) ಮಲ್ಲನಗೌಡ ತಂದೆ ಬಾಪುಗೌಡ ಮಾಲಿ ಪಾಟೀಲ್ ಮತ್ತು ನಮ್ಮ ಅಜ್ಜನಾದ 3)ಬಾಪುಗೌಡ ತಂದೆ ಗುತ್ತಪ್ಪಗೌಡ ಮಾಲಿ ಪಾಟೀಲ್ ಈ ಮೂರೂ ಜನರು ಕೂಡಿ ಕೂಲಿ ಆಳುಗಳನ್ನು ಕರೆದುಕೊಂಡು ಬಂದು ಕವಳಿ ನಾಟಿ ಹಚ್ಚುತ್ತಿದ್ದರು. ಅದೇ ವೇಳೆಗೆ ನಾನು ನಮ್ಮ ಹೊಲಕ್ಕೆ ಹೋಗಿ ನಮ್ಮ ಕಾಕಾನವರಿಗೆ ಮತ್ತು ನಮ್ಮ ಅಜ್ಜನಿಗೆ ನನಗೆ ಸಂಬಂಧಿಸಿದ ಹೊಲ ನನಗೆ ಬಿಟ್ಟು ಕೊಡಬೇಕು ನೀವು ಬಿಟ್ಟು ಕೊಡುತ್ತಿಲ್ಲ ಅದಕ್ಕೆ ನಾನು ಕೋಟರ್ಿನಿಂದ ಸ್ಟೇ ಆರ್ಡರ ತಂದೀನಿ ಹೊಲದಲ್ಲಿ ನಾಟಿ ಹಚ್ಚಬೇಡರಿ ಅಂದಾಗ ಅವರು ಮೂರು ಜನರು ಕೂಡಿ ಏನಲೇ ಗುತ್ಯಾ ಸೂಳೆಮಗನೇ ನಮ್ಮ ಹೊಲದಲ್ಲಿ ನಾವು ನಾಟಿ ಹಚ್ಚಿದರೆ ನಿನಗೇನಾಗುತ್ತದೆ ಮಗನೇ ನಮ್ಮ ಹೊಲಕ್ಕೆ ಸ್ಟೇ ತರಲು ನೀನ್ಯಾರು ಸೂಳೆ ಮಗನೇ ಅಂತಾ ಅವಾಚ್ಯವಾಗಿ ಬೈಯುತ್ತಾ ನನ್ನೊಂದಿಗೆ ಜಗಳಕ್ಕೆ ಬಿದ್ದು ಮಲ್ಲನಗೌಡನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಆಗ ಬಸನಗೌಡನು ಒಂದು ಕಲ್ಲನ್ನು ತೆಗೆದುಕೊಂಡು ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಆಗ ನಾನು ಸತ್ತೆನೆಪ್ಪೋ ಅಂತಾ ನೆಲಕ್ಕೆ ಬಿದ್ದಾಗ ಬಾಪುಗೌಡನು ನನಗೆ ಕಾಲಿನಿಂದ ಒದೆಯುತ್ತಿದ್ದನು. ನನಗೆ ಅವರು ಮೂರೂ ಜನರು ಕೂಡಿ ಹೊಡೆಯುವಾಗ ಅಲ್ಲಿಯೇ ದಾರಿಯ ಮೇಲೆ ಹೋಗುತ್ತಿದ್ದ ನಮ್ಮೂರ ಭಾಷಾಸಾಬ ತಂದೆ ಇಮಾಮಸಾಬ ಮುಲ್ಲಾ ಇವರು ಬಂದು ಜಗಳ ಬಿಡಿಸಿಕೊಂಡಿದ್ದು ಇಲ್ಲದಿದ್ದರೆ ನನಗೆ ಇನ್ನೂ ಹೊಡೆಯುತ್ತಿದ್ದರು. ಅವರು ನನಗೆ ಹೊಡೆಯುವುದು ಬಿಟ್ಟು ಎಲೇ ಗುತ್ಯಾ ಸೂಳೆ ಮಗನೇ ಇನ್ನೊಮ್ಮೆ ಹೊಲದ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಹೊಡೆದು ಹಾಕುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ನನಗೆ ಗಾಯವಾಗಿದ್ದರಿಂದ ಒಂದು ಖಾಸಗಿ ವಾಹನದಲ್ಲಿ ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ಚಿಕಿತ್ಸೆ ಪಡೆದುಕೊಂಡು ಹಿರಿಯರಿಗೆ ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಹೊಲದ ವಿಷಯದಲ್ಲಿ ನನ್ನೊಂದಿಗೆ ಜಗಳ ತೆಗೆದು ಕೈಯಿಂದ, ಬಡಿಗೆಯಿಂದ, ಕಲ್ಲಿನಿಂದ ಹೊಡೆದು ತಲೆಗೆ ರಕ್ತಗಾಯ, ಬೆನ್ನಿಗೆ ಗುಪ್ತಗಾಯ ಮಾಡಿ, ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ ಬಸನಗೌಡ, ಮಲ್ಲನಗೌಡ ಮತ್ತು ಬಾಪುಗೌಡ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 128/2022 ಕಲಂ 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಯಾದಗಿರಿ ಮಹಿಳಾ ಪೊಲೀಸ್ ಠಾಣೆ:-
ಗುನ್ನೆ ನಂ: ಇಂದು ದಿನಾಂಕ:06.08.2022 ರಂದು ಮಧ್ಯಾಹ್ನ 02-30 ಗಂಟೆಗೆ ಶ್ರೀ ಜೀತೇಂದ್ರ ತಂದೆ ಲಕ್ಷ್ಮಣ ರಾಠೋಡ, ವ-7 ವರ್ಷ ಉ-ಗೃಹ ಪಾಲಕರು ಜಾತಿ-ಎಸ್.ಸಿ(ಲಂಬಾಣಿ), ಮಾತೃ ಛಾಯಾ ನಿಲಯ ಬಸವೇಶ್ವರ ನಗರ ತಾ/ಜಿ/ ಯಾದಗಿರಿ ಇವರು ಮಹಿಳಾ ಪೊಲೀಸ್ ಠಾಣೆಗೆ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಅರ್ಜಿಯನ್ನು ಹಾಜರುಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ  ನಮ್ಮ ಬಾಲಕರ ಬಾಲ ಬಂದಿರದಲ್ಲಿ ವಾಸವಾಗಿದ್ದ ಕುಮಾರ ಕೇಶವ ತಂದೆ ಆಂಜನೆಯ ವ-11 ವರ್ಷ 10 ತಿಂಗಳು, ಜಾತಿ-   ಎಸ್.ಸಿ(ಮಾದಿಗ) ಉ-ವಿದ್ಯಾರ್ಥಿ  ಸಾ-ಅಂಬೇಡ್ಕರ ನಗರ ಯಾದಗಿರಿ ಹಾ.ವ// ಬಾಲಕರ ಬಾಲ ಮಂದಿರ ಯಾದಗಿರಿ ಸದರಿ ಬಾಲಕರನ ತಾಯಿ ಸಿದ್ದಮ್ಮ ಇವರ ಮೃತ ಪಟ್ಟಿರುತ್ತಾರೆ. ಬಾಲಕನ ತಂದೆ ಕುಡಿತದ ದುಷ್ಚಟದ ಪೀಡಿತನಾಗಿರುತ್ತಾನೆ. ಸದರಿ ಕಾಣೆಯಾಗಿರುವ ಬಾಲಕನ ತಂದೆ ಬಾಲಕನಿಗೆ ಮತ್ತು ಬಾಲಕನ ತಮ್ಮನಾದ ಪರಶುರಾಮ ತಂದೆ ಆಂಜನೆಯ ವಿಶೇಷ ದತ್ತು ಕೇಂದ್ರ ಯಾದಗಿರಿಯಲ್ಲಿ ವಾಸವಾಗಿರುತ್ತಾನೆ ಇಬ್ಬರಿಗೂ ಭಿಕ್ಷೆ ಬೇಡಲು ಕಳುಹಿಸುತ್ತಿದ್ದರು. ಆದ್ದರಿಂದ ಬಾಲಕರನ್ನು ಪಾಲನೆ ಮತ್ತು ಪೋಷಣೆಗಾಗಿ ಹಾಗೂ ವಿದ್ಯಾಭ್ಯಾಸದ ಹಿತದೃಷ್ಟಿ ಯಿಂದ ನಮ್ಮ ಸಂಸ್ಥೆಯಲ್ಲಿ ಇರಿಸಿಕೊಳ್ಳಲಾಗಿತ್ತು.    ಸದರಿ ಕೇಶವ ತಂದೆ ಆಂಜನೆಯ ಈ ಬಾಲಕನು ಯಾದಗಿರಿ ಜಿಲ್ಲೆಗೆ ಸಂಬಂಧ ಪಟ್ಟಿರುವುದುರಿಂದ ಬಾಲಕನನ್ನು ದಿನಾಂಕ:04-06-2022 ರಂದು ಕಲಬುರಗಿ ಜಿಲ್ಲೆಯ ಬಾಲಕರ ಬಾಲ ಮಂದಿರದಿಂದ ಯಾದಗಿರಿ ಜಿಲ್ಲೆಗೆ ವರ್ಗಾವಣೆ ಮಾಡಿರುತ್ತಾರೆ. ನಂತರ ಬಾಲಕನ ವಿದ್ಯಾಭ್ಯಾಸದ ಸಲುವಾಗಿ ಯಾದಗಿರಿ ಜಿಲ್ಲೆಯಲ್ಲಿ ಸ್ಟೇಷನ್ ಬಜಾರ ಶಾಲೆಗೆ ನೊಂದಣಿ ಮಾಡಲಾಗಿತ್ತು. ಆದರೆ ದಿನಾಂಕ:05-08-2022 ರಂದು ಮಧ್ಯಾಹ್ನ 3 ಗಂಟೆಯ ನಂತರ ಶಾಲೆಯಿಂದ ಓಡಿ ಹೋಗಿರುತ್ತಾನೆ. ಬಾಲಕ ಕಾಣೆಯಾಗಿರುವುದನ್ನು ಅದೇ ಶಾಲೆಯ ನಮ್ಮ ಬಾಲಕರ ಬಾಲ ಮಂದಿರ ಕುಮಾರ ತಿಮ್ಮಯ್ಯ,ಶಿವಸಾಯಿ ರೆಡ್ಡಿ,ನರಸಿಂಹ ಈ ಬಾಲಕರು ಸಾಯಂಕಾಲ ಶಾಲೆಯಿಂದ ಬಂದ ನಂತರ ನಮಗೆ ತಿಳಿಸಿರುತ್ತಾರೆ.  ನಂತರ ಅದೇ ದಿನ ವಿಷಯ ತಿಳಿದ ತಕ್ಷಣ ಬಾಲಕರ ಬಾಲ ಮಂದಿರ ಸಿಬ್ಬಂದಿಯಾದ ಶ್ರೀ ಜೀತೇಂದ್ರ ಗೃಹ ಪಾಲಕರು , ಶ್ರೀ ನಿಂಗಪ್ಪ ರಕ್ಷಕರು ಮತ್ತು ಶ್ರೀ ಮಂಜುನಾಥ ರಕ್ಷಕರು ರವರು ಶಾಲೆಯ ಸುತ್ತಮುತ್ತ, ಹಳೆ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಹಾಗೂ ಬಾಲಕನ ಸ್ವಂತ ಮನೆ ದುರ್ಗಮ್ಮ ದೇವಸ್ಥಾನದ ಹತ್ತಿರ ಅಂಬೇಡ್ಕರ್ ನಗರ, ಲಂಬಾಣಿ ಗಾರ್ಡನ ಹಾಗೂ ಗಾಂಧಿ ಚೌಕ್ ಹುಡುಕಾಡುರುತ್ತೇವೆ. ಬಾಲಕನು ಎಲ್ಲಿಯೂ ಸಿಕ್ಕಿರುವುದಿಲ್ಲ. ಸದರಿ ಬಾಲಕನು ಕಾಣೆಯಾದ ಸಮಯದಲ್ಲಿ ಕೆಂಪು ಬಣ್ಣ  ಶರ್ಟ ತಿಳಿ ನೀಲಿ ಬಣ್ಣದ  ಜೀನ್ಸ್ ಪ್ಯಾಂಟ್ ಹಾಕಿರೊಂಡಿರುತ್ತಾರೆ. ಕುಮಾರ ಕೇಶವ ಎತ್ತರ ಅಂದಾಜು 3-12 ಫೀಟ್ ಬಿಳಿ ಬಣ್ಣ ದಪ್ಪನೇಯ ಮೈಕಟ್ಟು ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ.   ಸದರಿ ಬಾಲ ಕುಮಾರ  ಕೇಶವ ತಂದೆ ಆಂಜನೇಯ ವಯಾ- 11 ವರ್ಷ 10 ತಿಂಗಳು ಜಾತಿ – ಎಸ್.ಸಿ     (ಮಾದಿಗ)  ಉ – ವಿದ್ಯಾರ್ಥಿ ಸಾ- ಅಂಬೇಡ್ಕರ ನಗರ ಯಾದಗಿರಿ ಹಾ.ವ- ಬಾಲಕರ ಬಾಲ ಮಂದಿರ ಯಾದಗಿರಿ ಈತನು ದಿನಾಂಕ -; 05-08-2022 ರಂದು ಮಧ್ಯಾಹ್ನ 3 ಗಂಟೆಯ ನಂತರ ಕಾಣೆಯಾಗಿರುತ್ತಾನೆ. ಸದರಿ ಬಾಲಕನನ್ನು ಎಲ್ಲಾ ಹುಡುಕಾಡಲಾಗಿ ಸಿಗದೇ ಇದ್ದುದ್ದರಿಂದ ಕಾಣೆಯಾದ ಬಾಲಕನನ್ನು ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ಕೋರಲಾಗಿದೆ. ಅಂತಾ ಕೊಟ್ಟ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:44/2022 ಕಲಂ: 363 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
                                                                                                                                       

Last Updated: 07-08-2022 11:32 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080