ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 07-09-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 132/2022, ಕಲಂ, 323, 324, 504.506. ಸಂಗಡ 34 ಐ ಪಿ ಸಿ: ಇಂದು ದಿನಾಂಕ: 06-09-2022 ರಂದು ಸಾಯಂಕಾಲ 06-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನಿಡಿದ ಸಾರಂಶವೆನೆಂದರೆ ದಿನಾಂಕ: 06-09-2022 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಪಿಯರ್ಾಧಿ & ಆತನ ಮನೆಯವರು ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರು ಕೂಡಿಕೊಂಡು ಬಂದು ಲೇ ಸೂಳೆ ಮಕ್ಕಳೆ ನಿಮ್ಮದು ಸೊಕ್ಕು ಬಹಳ ಆಗಿದೆ ನಮ್ಮ ತಮ್ಮನಿಗೆ ಯಾಕೆ ಹೊಡೆದಿದ್ದಿ ಅಂತಾ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಗುಪ್ತ ಪೆಟ್ಟು ಮತ್ತು ರಕ್ತಗಾಯ ಮಾಡಿ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಮಕ್ಕಳೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಪಿಯರ್ಾಧಿ ಸಾರಂಶ


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 102/2022 ಕಲಂ. ಮನುಷ್ಯಕಾಣೆ: ಪಿರ್ಯಾಧಿ ಸಾರಾಂಶವೆನೆಂದರೆ, ನಾವು ನಮ್ಮ ತಂದೆ ತಾಯಿಗೆ 3 ಜನ ಗಂಡು ಮಕ್ಕಳು ಇದ್ದು ನಾನು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ನನ್ನ ತಮ್ಮನಾದ ಯೋಗರಾಜ ಈತನು ಅಬ್ಯಾಸ ಮಾಡುತ್ತಿದ್ದು ಇನ್ನೊಬ್ಬ ತಮ್ಮನಾದ ಗಿರಿರಾಜ ಈತನು ಸುಮಾರು 1 ವರ್ಷದ ಹಿಂದೆ ಓಣಜಥ ಣಡಿಚಿಟಿಠಿಠಡಿಣಚಿಣಠಟಿ ಜಚಿಟತಜಡಿಥಿ ಠಿಚಿಡಿಣಟಿಜಡಿ ಅಂತಾ ಕೆಲಸ ಮಾಡಿಕೊಂಡಿದ್ದು ಅವನೊಂದಿಗೆ ನಮಗೆ ಪರಿಚಯದವರಾದ ಶಿವಾನಂದ ಭೂಸಣಗಿ, ನಾಗರಾಜ ಕಲಬುರಗಿ ಸುಭಾಶ ದನ್ನೂರ ಹಾಗೂ ವಿರೇಶ ಭೂಸಣಗಿ ಎಂಬುವವರು ಸಹ ಕೆಲಸ ಮಾಡಿಕೊಂಡಿದ್ದು ಯಾದಗಿರಿ ನಗರದಲ್ಲಿರುವ ಬಸವೇಶ್ವರ ನಗರದ ಬಡಾವಣೆಯಲ್ಲಿ ಮನೆ ಮಾಡಿಕೊಂಡಿರುತ್ತಾರೆ. ಹೀಗಿದ್ದು ದಿನಾಂಕ 05/09/2022 ರಂದು ರಾತ್ರಿ ನಮ್ಮ ತಮ್ಮ ಗಿರಿರಾಜ ಹಾಗೂ ಅವರ ಸಂಗಡಿಗರು ತಾವಿರುವ ಮನೆಯಲ್ಲಿ ಊಟ ಮಾಡಿ ನಂತರ ರಾತ್ರಿ ಸಮಯದಲ್ಲಿ ಮಲಗಿಕೊಂಡಿದ್ದು ಇಂದು ದಿನಾಂಕ 06/09/2022 ರಂದು ಬೆಳಿಗ್ಗೆ 05.00 ಗಂಟೆಗೆ ಆತನ ಗೆಳೆಯನಾದ ಶಿವಾನಂದ ಈತನು ಎದ್ದು ಲಿಂಗೇರಿ ಕೋನಪ್ಪ ಜಿನ್ನಿಂಗ ಪ್ಯಾಕ್ಟರಿಗೆ ಹೋಗಿ ಅಲ್ಲಿ ತಮ್ಮ ವ್ಯವಹಾರ ಆರಂಭಿಸಲು ವೆಬ್ಸೈಟ್ ಓಪನ ಮಾಡುವುದಕ್ಕಾಗಿ ಬೆಳಿಗ್ಗೆ 05.19 ಗಂಟೆಗೆ ಗಿರಿರಾಜ ಈತನಿಗೆ ಪೋನ್ ಮಾಡಿ ಓ.ಟಿ.ಪಿ ಪಡೆಯುವುದಕ್ಕೆ ವಿಚಾರಿಸಿದ್ದು ಆಗ ಗಿರಿರಾಜ ಈತನು ಗೋಡಾವನಕ್ಕೆ ಬಂದು ವೆಬ್ಸೈಟ್ ಓಪನ್ ಮಾಡಲು ಪ್ರತ್ನಿಸಿದ್ದು ಅದು ಓಪನ ಆಗದ ಕಾರಣ ಶಿವಾನಂದ ಇವರಿಗೆ ವೆಬ್ಸೈಟ್ ಓಪನ್ ಆಗುತಿಲ್ಲ ನೀನು ಮ್ಯಾನಿವಲ್ನಲ್ಲಿ ಓಪನ್ ಮಾಡು ನಾನು ನೈಸಗರ್ಿಕ ಕ್ರಿಯೇಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಬೈಕ್ ನಂಬರ ಕೆಎ-32 ಇಕೆ-5525 ನೇದ್ದರ ಮೇಲೆ ಗೋಡಾವನನಿಂದ ಹೋಗಿದ್ದು ಆಗ ಅಂದಾಜು 05.40 ಆಗಿರಬಹುದು, ಆಗ ಮಳೆ ಬರುತ್ತಿದ್ದರಿಂದ ತನ್ನ ಪೋನನ್ನು ಗೋಡಾವನನಲ್ಲಿ ಬಿಟ್ಟು ಹೋಗಿದ್ದು ಇರುತ್ತದೆ. ಸ್ವಲ್ಪ ಸಮಯದ ನಂತರ ಗಿರಿರಾಜ ಈತನು ಬರದೆ ಇದ್ದಾಗ ಶಿವಾನಂದ ಈತನು ಗಾಬರಿಗೊಂಡು ತನ್ನ ಮೇಲ್ಕಂಡ ಗೆಳೆಯರನ್ನು ಕರೆಯಿಸಿಕೊಂಡು ನನ್ನ ತಮ್ಮನನ್ನು ಹುಡುಕಾಡಿದ್ದು ಆತನು ಎಲ್ಲಿ ಕಾಣದೆ ಇದ್ದಾಗ ಯಾದಗಿರಿಯಿಂದ ಶಹಾಪೂರ ಕಡೆಗೆ ಹೋಗುವ ರಸ್ತೆಯಲ್ಲಿ ನೋಡಿದ್ದು ಭೀಮಾ ಬ್ರಿಜ್ ಮೇಲೆ ಸೈಡಿನಲ್ಲಿ ತಾನು ತೆಗೆದುಕೊಂಡು ಹೋಗಿದ್ದ ಮೋಟಾರ ಸೈಕಲನ್ನು ನಿಲ್ಲಿಸಿ ಸದರಿ ಬೈಕಿನ ಚಾವಿಯನ್ನು ಡೂಮಿನಲ್ಲಿ ಇಟ್ಟಿರುವುದು ಸಿಕ್ಕಿರುತ್ತದೆ ಅಂತಾ ನನಗೆ 11.30 ಗಂಟೆಗೆ ಶಿವಾನಂದ ಈತನು ಪೋನ್ ಮಾಡಿ ತಿಳಿಸಿದ್ದು ತಕ್ಷಣ ನಾನು ನಮ್ಮ ಚಿಕ್ಕಪ್ಪ ರಾಜಶೇಖರ ಟೆಂಗಳಿ ಇಬ್ಬರೂ ಕೂಡಿಕೊಂಡು ಬಂದಿದ್ದು ಇರುತ್ತದೆ. ಕಾರಣ ಇಂದು ಬೆಳಿಗ್ಗೆ 05.40 ರ ಸಮಯದಲ್ಲಿ ನೈಸಗರ್ಿಕ ಕ್ರಿಯೇಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ. ಚಹರಾ ಪಟ್ಟಿ ಗೋದಿಬಣ್ಣ ತೆಳುವಾದ ಮೈಕಟ್ಟು ಕಪ್ಪನೆಯ ಕೂದಲು ಚಿಕ್ಕದಾಗಿ ದಾಡಿ ಬಿಟ್ಟಿದ್ದು ಹಳದಿ ಬಣ್ಣದ ಟೀಶರ್ಟ ಬೂದು ಬಣ್ಣದ ಜೀನ್ಸ ಬರಮಡ ಹಾಕಿಕೊಂಡಿದ್ದು ಅದೆ. ಕಾರಣ ನನ್ನ ತಮ್ಮ ಗಿರಿರಾಜ ಈತನನ್ನು ಹುಡುಕಿಕೊಡಲು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಅಂತಾ ಕೊಟ್ಟ ಪಿರ್ಯಾಧಿ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.102/2022 ಕಲಂ. ಮನುಷ್ಯಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

 

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 103/2022 ಕಲಂ; 420, ಐಪಿಸಿ: ಇಂದು ದಿನಾಂಕ. 06/09/2022 ರಂದು 4-30 ಪಿಎಂಕ್ಕೆ ಶ್ರೀಮತಿ ಸುಶೀಲಮ್ಮ ಗಂಡ ಹಣಮಂತ ದಂಡಗುಡಕರ್ ವ; 63 ಜಾ; ಕಬ್ಬಲಿಗ ಉ; ಮನೆಗೆಲಸ ಸಾ; ಮನೆ ನಂ.5-3-101 ಟಿ.ಬಿ ರೋಡ್ ಸ್ಟೇಷನ್ ಏರಿಯಾ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನಗೆ ಪರಿಚಯವಿರುವ ಅಶೋಕ ತಂದೆ ತಿಪ್ಪಣ್ಣ ಮುದ್ನಾಳಕರ್ ಮತ್ತು ಅವನ ಅಣ್ಣ ಹಣಮಂತ ತಂದೆ ತಿಪ್ಪಣ್ಣ ಮುದ್ನಾಳಕರ್ ಸಾ; ಇಬ್ಬರು ವಿವೇಕಾನಂದನಗರ ಯಾದಗಿರಿ ಇವರು ಇಬ್ಬರು ಕೂಡಿಕೊಂಡು ನನಗೆ ಮುದ್ನಾಳ ಸೀಮಾಂತರದಲ್ಲಿರುವ ಹೊಲ ಸವರ್ೆ ನಂ.207 ಮತ್ತು 189 ನೇದ್ದರಲ್ಲಿ ಫ್ಲಾಟ್ಗಳನ್ನು ಮಾಡಿ ಮಾರಾಟ ಮಾಡುತಿದ್ದೇವೆ ನಿನಗೆ ಅಲ್ಲಿ ಒಂದು ಫ್ಲಾಟ್ ಕೊಡುತ್ತೇವೆ ಸದ್ಯ ಫ್ಲಾಟಗಳನ್ನು ಮಾಡಲು ನಮಗೆ ಹಣದ ಅಡಚಣೆ ಇರುತ್ತದೆ ಅದಕ್ಕಾಗಿ ನೀನು ಸದ್ಯ ನಮಗೆ ಕೈಗಡವಾಗಿ ಹಣ ಕೊಡು ಅಂತಾ ಹೇಳಿ ನನ್ನಿಂದ ದಿನಾಂಕ; 24/08/2013 ರಂದು ಕೈಗಡ ಒಪ್ಪಿಗೆ ಪತ್ರ ಅಂತಾ ಬರೆಯಿಸಿಕೊಟ್ಟು ನನ್ನಿಂದ ರೂ.1,40,000/- ಗಳನ್ನು ತೆಗೆದುಕೊಂಡಿದ್ದು ಅದಕ್ಕೆ ದತ್ತು ತಂದೆ ನಾಗಶೆಟ್ಟಿ, ಅವರ ತಾಯಿ ಕಸ್ತೂರಿಬಾಯಿ ಗಂಡ ನಾಗಶೆಟ್ಟಿ ಸಾ; ಇಬ್ಬರು ಟಿ.ಬಿ ರೋಡ್ ಸ್ಟೇಷನ್ ಏರಿಯಾ ಯಾದಗಿರಿ ಇವರು ಸಾಕ್ಷಿ ಅಂತಾ ಸಹಿ ಮಾಡಿಸಿರುತ್ತಾರೆ. ಸದರಿ ಹೊಲ ಸಮಗೊಳಿಸಿ ಫ್ಲಾಟಗಳನ್ನು ಮಾಡಿ ಜೈ ಭವಾನಿ ಎಂಬ ಫ್ಲಾಟ್ ಸ್ಕೀಮ್ ಮಾಡಿ ಸದರಿ ಸ್ಕೀಮದಲ್ಲಿ ಸದಸ್ಯರಾಗುವವರು ಪ್ರತಿ ತಿಂಗಳು 15,000/-ರೂ. ಗಳಂತೆ ಒಟ್ಟು 2,60,000/-ರೂ. ಆಗುವವರೆಗೆ ಹಣ ತುಂಬಬೇಕು ಮತ್ತು ಪ್ರತಿ ತಿಂಗಳು ಡ್ರಾ ಮೂಲಕ ಆಯ್ಕೆ ಮಾಡಿ ಫ್ಲಾಟಗಳನ್ನು ನೀಡುತ್ತೇವೆ ಅಂತಾ ಹೇಳಿ ಬಾಂಡಗಳನ್ನು ಮಾಡಿಸಿಕೊಟ್ಟಿದ್ದು ಅದರಂತೆ ನಾನು ಈ ಮೊದಲೇ ಮುಂಗಡವಾಗಿ ಹಣ ಕೊಟ್ಟಿದ್ದರಿಂದ ಅದರಲ್ಲಿ ನನಗೆ ಸದಸ್ಯತ್ವ ಸಂ.41 ಅಂತಾ ಸದಸ್ಯಳನ್ನಾಗಿ ಮಾಡಿಕೊಂಡು ದಿನಾಂಕ;31/01/2014 ರಂದು ಬಾಂಡ್ ಮಾಡಿಸಿಕೊಟ್ಟಿದ್ದು ಅದಕ್ಕೆ ದೀಪಕ್ ಆರ್.ಪಿ ಯಾದಗಿರಿ ಎಂಬುವವನು ಮತ್ತು ನನ್ನ ಮಗ ಬಸವರಾಜ ಇವರು ಸಾಕ್ಷಿದಾರರಾಗಿ ಸಹಿ ಮಾಡಿರುತ್ತಾರೆ. ನಾನು ಈ ಮೊದಲು ಕೊಟ್ಟ ಹಣದಲ್ಲಿಯೇ ಕಂತಿನ ಹಣವನ್ನು ಮುರಿದುಕೊಳ್ಳುತ್ತಿದ್ದರು. ಸದರಿಯವರ ನನ್ನಿಂದ ಮುಂಗಡ ಹಣ ಪಡೆದುಕೊಂಡು ನಂತರ ಸ್ಕೀಮ ಸದಸ್ಯಳನ್ನಾಗಿ ಮಾಡಿಕೊಂಡು ನನಗೆ ಫ್ಲಾಟ ಕೊಡುವಲ್ಲಿ ವಿಳಂಬ ಮಾಡಿದ್ದು ನಾವು ಇಲ್ಲಿಯವರೆಗೆ ಅವರಿಗೆ ಫ್ಲಾಟ ಕೊಡುವಂತೆ ಕೇಳುತ್ತಾ ಬಂದಿದ್ದು ಅವರು ನನಗೆ ಮೋಸ ಮಾಡಿ ನಾನು ಕೊಟ್ಟ ಹಣವನ್ನಾಗಲಿ, ಅವರು ಮಾಡಿದ ಸ್ಕೀಮ್ದಲ್ಲಿಯ ಫ್ಲಾಟನ್ನು ಕೊಡದೇ ಮೋಸ ಮಾಡಬೇಕೆಂಬ ಉದ್ದೇಶದಿಂದ ನನ್ನಿಂದ ಹಣ ತೆಗೆದುಕೊಂಡು ಮೋಸ ಮಾಡಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 103/2022 ಕಲಂ. 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 67/2022 ಕಲಂ: 323, 324, 504, 506 ಐಪಿಸಿ ಸಂ: 34 ಐಪಿಸಿ: ದಿನಾಂಕ:04/09/2022 ರಂದು ನಾನು ಮತ್ತು ನಮ್ಮ ತಮ್ಮನಾದ ಅನೀಲ ತಂದೆ ಸೇವುನಯಕ ರಾಠೋಡ ವಯಾ:26 ವರ್ಷ ಜಾ: ಲಂಬಾಣಿ ಸಾ: ಗಂಗನಾಳ ತಾಂಡಾ ಇಬ್ಬರು ನಮ್ಮ ಕುರಿಗಳನ್ನು ಮೇಯಿಸಲು ಗಂಗನಾಳ ಗುಡ್ಡದ ವಾರಿಯಲ್ಲಿ ಇರುವ ದೇಸು ತಂದೆ ಪರಶುರಾಮ ರಾಠೋಡ ಸಾ: ಹೊಸಕೇರಾ ಬಾಂಗ್ಲಾ ತಾಂಡಾ ಇವರ ಹೋಲದ ಪಕ್ಕದ ನಮ್ಮ ಕುರಿ ಮೇಯಿಸುವಾಗ ಅಂದಾಜು ಸಮಯ 12.30 ಪಿಎಮ್ ಸುಮಾರಿಗೆ ಸದರಿ ದೇಸು ತಂದೆ ಪರಶುರಾಮ ರಾಠೋಡ, ಕಿಶನ್ ತಂದೆ ದೇಸು ರಾಠೋಡ ಮತ್ತು ಚಾಂದಿಬಾಯಿ ಗಂಡ ದೇಸು ನಾಯಕ ರಾಠೋಡ ಮೂರು ಜನರು ಸಾ: ಹೊಸಕೇರಾ ಬಾಂಗ್ಲಾ ತಾಂಡಾ ಇವರುಗಳು ಕೂಡಿ ರಂಡಿ ಮಕ್ಕಳೆ ನಮ್ಮ ಹೊಲದ ಪಕ್ಕದಲ್ಲಿ ಯಾಕೆ ಕುರಿ ಮೇಯಿಸುತ್ತಿದ್ದಿರಿ ಅಂತಾ ಅವಾಶ್ಚವಾಗಿ ಬೈಯುತ್ತಾ ಬಂದರು, ಆಗ ನಮ್ಮ ತಮ್ಮನಾದ ಅನೀಲ ಈತನು ಇದು ಗುಡ್ಡದ ಜಾಗ ಇದೆ ಇಲ್ಲ ಮೇಯಿಸಿದರೆ ನಿಮಗೇನು ಆಗುತ್ತದೆ ಅಂತಾ ಅಂದಾಗ ದೇಸು ರಾಠೋಡ ಈತನು ಒಮ್ಮೇಲೆ ಸಿಟ್ಟಿಗೆ ಬಂದು ಮೈ ಮೇಲಿನ ಅಂಗಿ ಹಿಡಿದು ಕೈಯಿಂದ ನಮ್ಮ ತಮ್ಮನ ಹೊಟ್ಟೆಗೆ ಹೊಡೆದನು. ಆಗ ಕಿಶನ್ ತಂದೆ ದೇಸು ಈತನು ಏಕಾಎಕಿ ಒಂದು ಬಡಿಗೆ ತಗೆದುಕೊಂಡು ನಮ್ಮ ತಮ್ಮನ ಬೆನ್ನಿಗೆ ಹೊಡೆದು, ತೋಡೆಗೆ ಕಾಲಿನಿಂದ ಒದ್ದು ಒಳಪೆಟ್ಟು ಮಾಡಿರುತ್ತಾನೆ. ಚಾಂದಿಬಾಯಿ ಗಂಡ ದೇಸು ಇವಳು ಒಂದು ಕಲ್ಲಿನಿಂದ ನಮ್ಮ ತಮ್ಮನ ಬೆನ್ನಿಗೆ ಹೊಡೆದು ಗುಪ್ತ ಪೆಟ್ಟು ಮಾಡಿರುತ್ತಾಳೆ. ಅಷ್ಟರಲ್ಲಿ ಇನ್ನೊಂದು ತುದಿಯಲ್ಲಿ ಕುರಿಗಳನ್ನು ಕಾಯುತ್ತಿದ್ದ ನಾನು ಮತ್ತು ಅಲ್ಲೆ ಕೆಲಸ ಮಾಡುತ್ತಿದ್ದ ದೇವಪ್ಪ ತಂದೆ ಮಾನಪ್ಪ ಕವಲಿ ಸಾ: ಗಂಗನಾಳ, ಪರಶುರಾಮ ತಂದೆ ಖಂಡಪ್ಪ ಚವ್ಹಾಣ ಸಾ: ಹೊಸಕೇರಾ ಮತ್ತು ಸಕ್ರೆಪ್ಪ ತಂದೆ ಗೊಲ್ಲಾಳಪ್ಪ ಕಿಲಾರಿ ಸಾ: ಗಂಗನಾಳ ಇವರುಗಳು ನಮ್ಮ ತಮ್ಮನಿಗೆ ಹೊಡೆಯುವದನ್ನು ನೊಡಿ ಬಿಡಿಸಿಕೊಂಡಿರುತ್ತೇವೆ. ಆಗ ದೇಸು ರಾಠೋಡ, ಕಿಶನ್ ರಾಠೋಡ ಮತ್ತು ಚಾಂದಿಬಾಯಿ ರಾಠೋಡ ಇವರುಗಳು ಮಕ್ಕಳೇ ಇನ್ನೊಮ್ಮೆ ಈ ಕಡೆಗೆ ಕುರಿಗಳನ್ನು ಮೇಯಿಸಲು ಬಂದರೆ ನಿಮ್ಮ ಕಾಲುಗಳನ್ನು ಕಡದು, ನಿಮಗೆ ಸುಟ್ಟು ಖಲಾಸ್ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ. ನಾವು ಗುಡ್ಡದ ವಾರಿಯಲ್ಲಿ ಕುರಿಗಳನ್ನು ಮೇಯಿಸಿದರೂ ಕೂಡ ಮೇಲಿನ ಮೂರು ಜನರು ಕೂಡಿ ನಮ್ಮ ತಮ್ಮನಿಗೆ ಅವಾಶ್ಚವಾಗಿ ಬೈಯ್ದು, ಕೈಯಿಂದ, ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಎದು ಕಾಲಿನಿಂದ ಒದ್ದು ಗುಪ್ತ ಪೆಟ್ಟು ಮಾಡಿದ್ದರಿಂದ ನಮ್ಮ ತಮ್ಮ ಅನೀಲ ರಾಠೋಡ ಈತನಿಗೆ ಮೊದಲು ಶಹಾಪೂರ ಸರಕಾರಿ ಆಸ್ಪತ್ರೆಗೆಯಲ್ಲಿ ಉಪಚಾರಕ್ಕೆ ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ತಡವಾಗಿ ಇಂದು ದಿನಾಂಕ:06/09/2022 ರಂದು 12.30 ಪಿಎಮ್ ಕ್ಕೆ ಠಾಣೆಗೆ ಬಂದು ಅಜರ್ಿ ನೀಡಿರುತ್ತೇನೆ. ನಮ್ಮ ತಮ್ಮನು ಇನ್ನು ಉಪಚಾರ ಪಡೆಯುತ್ತಿದ್ದಾರೆ ಕಾರಣ ನನ್ನ ಅಜರ್ಿಯನ್ನು ಸ್ವೀಕರಿಸಿ, ನಮ್ಮ ತಮ್ಮನಿಗೆ ಹೊಡೆದು ಜೀವ ಭಯ ಹಾಕಿದ ಮೇಲಿನವರ ಮೇಲೆ ಕಾನೂನಿನ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಅಜರ್ಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 64/2022 ಕಲಂ: 279, 283 304(ಎ) ಐಪಿಸಿ: ಇಂದು ದಿನಾಂಕ:06.09.2022 ರಂದು ರಾತ್ರಿ 1000 ಗಂಟೆಗೆ ಫಿರ್ಯಾದಿದಾರನಾದ ಸವಾಯಿರಾಮ ತಂದೆ ಮನ್ನಾರಾಮ ಜಾಕಡ್ ವ:24 ವರ್ಷ ಜಾ:ಜಾಠ ಉ:ಬಟ್ಟೆ ವ್ಯಾಪಾರ ಸಾ:ಕಕ್ಕೇರಾ ತಾ: ಸುರಪೂರ ಜಿಲ್ಲಾ:ಯಾದಗಿರ ಇವರು ಕೊಡೆಕಲ್ ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪಮಾಡಿಸಿದ ದೂರು ಅಜರ್ಿಯನ್ನು ಹಾಜರಪಡಿಸಿದ್ದರ ಸಾರಂಶವೆನಂದರೆ ನಮ್ಮ ತಂದೆ ತಾಯಿಗೆ ಇಬ್ಬರೂ ಗಂಡು ಮಕ್ಕಳು ಒಬ್ಬರು ಹೆಣ್ಣು ಮಗಳು ಇದ್ದು, ನಮ್ಮ ತಂದೆ ತಾಯಿ ಹಾಗೂ ನನ್ನ ತಂಗಿಯಾದ ತಿಪ್ಪುಕುಮಾರಿ ಇವರು ರಾಜಸ್ಥಾನದಲ್ಲಿ ಇರುತ್ತಿದ್ದು, ನಾನು ಮತ್ತು ನನ್ನ ಅಣ್ಣನಾದ ತೇಜಾರಾಮ ವ:30 ವರ್ಷ ಇಬ್ಬರೂ ಕಕ್ಕೇರಾ ಪಟ್ಟಣದಲ್ಲಿ ಬಾಡಿಗೆ ಮನೆಮಾಡಿಕೊಂಡು ಸುಮಾರು 7 ವರ್ಷಗಳಿಂದಾ ಬಟ್ಟೆ ಅಂಗಡಿಯನ್ನು ಇಟ್ಟುಕೊಂಡು ಬಟ್ಟೆ ವ್ಯಾಪಾರ ಮಾಡಿಕೊಂಡು ಇರುತ್ತಿದ್ದೇವು. ಇಂದು ದಿನಾಂಕ:06/09/2022 ರಂದು ಸಾಯಾಂಕಾಲ 5-30 ಗಂಟೆಯಮ ಸುಮಾರಿಗೆ ನನ್ನ ಅಣ್ಣನಾದ ತೇಜರಾಮ ಈತನು ನಮ್ಮ ಬಾಜು ಅಂಗಡಿಯವರ ಹೆಚ್.ಎಫ್. ಡಿಲೇಕ್ಸ್ ಮೊಟಾರ ಸೈಕಲ್ ನಂ. ಕೆ.ಎ. 33 ಎಸ್.3081 ನೇದ್ದನ್ನು ತೆಗೆದುಕೊಂಡು ರಾಜಕೊಳೂರ ದಲ್ಲಿರುವ ನಮ್ಮ ಸಂಬಂಧಿ ಬಟ್ಟೆ ಅಂಗಡಿಗೆ ಹೋಗಿ ಬರುವದಾಗಿ ಹೇಳಿ ಮೊಟಾರ ಸೈಕಲ್ ತೆಗೆದುಕೊಂಡು ಹೋಗಿದ್ದನು.ನಂತರ ರಾತ್ರಿ 8 ಗಂಟೆಯ ಸುಮಾರಿಗೆ ನಾನು ನಮ್ಮ ಬಟ್ಟೆ ಅಂಗಡಿಯಲ್ಲಿದ್ದಾಗ ರಾಜನಕೋಳೂರ ಗ್ರಾಮದ ವಿರೇಶ ತಂದೆ ಪ್ರಭುಗೌಡ ಗುಳಬಾಳ ಎಂಬುವರು ನನಗೆ ಫೋನಮಾಡಿ ಹೇಳಿದ್ದೆನಂದರೆ ನಿನ್ನ ಅಣ್ಣನಾದ ತೇಜರಾಮ ಎಂಬುವನು ನಾರಾಯಣಪೂರ-ಹುಣಸಗಿ ರಸ್ತೆಯ ರಾಜನಕೋಳೂರ ಹೆಚ್.ಸಿ ಪಾಟೀಲ್ ರವರ ರೈಸ್ ಮಿಲ್ದಾಟಿ ಇಳಿಜಾರಿನಲ್ಲಿ ಹುಣಸಗಿ ಕಡೆಗೆ ಹೋಗುವ ರೋಡಿನ ಮೇಲೆ ನಿಂತಿದ್ದ ಟ್ರ್ಯಾಕ್ಟರಕ್ಕೆ ಮೊಟಾರ ಸೈಕಲ್ ಡಿಕ್ಕಿಪಡಿಸಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದಾಗ ನಾನು ಗಾಬರಿಕೊಂಡು ನಮ್ಮ ಸಮಾಜದ ದೇವಾರಾಮ ಜಾಟ್, ಜವಾರಲಾಲ ತಂದೆ ಗೇವರಚಂದ್ ಗಜೇಂದ್ರ ತಂದೆ ಪುರಕಾರಾಮ ಎಲ್ಲರೂ ಕೂಡಿಕೊಂಡು ರಾಜನಕೋಳೂರ ಇಳಿಜಾರಿ ನಲ್ಲಿ ಅಪಘಾತಸ್ಥಳಕ್ಕೆ ಹೋಗಿ ನೋಡಲು ನನ್ನ ಅಣ್ಣನಾದ ತೇಜರಾಮ ಈತನ ಹಣೆಗೆ ಭಾರಿ ರಕ್ತಗಾಯ, ಎದೆಗೆ ಬಾರಿ ಒಳಪೇಟ್ಟು, ಬಲಗೈ ಮೊಳಕೈಗೆ ಭಾರಿ ರಕ್ತಗಾಯವಾಗಿ ಬಲಕಿವಿಯಿಂದ ರಕ್ತ ಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ನಿಜವಿತ್ತು, ಆಗ ಸ್ಥಳದಲ್ಲಿ ಅಪಘಾತ ನೋಡಿ ನನಗೆ ಫೋನಮಾಡಿದ ವಿರೇಶ ತಂದೆ ಪ್ರಭುಗೌಡ ಎಂಬುವರಿಗೆ ವಿಚಾರಿಸಿದಾಗ ಹೇಳಿದ್ದೇನಂದರೆ ಇಂದು ರಾತ್ರಿ 7-45 ಗಂಟೆಯ ಸುಮಾರಿಗೆ ನಾನು ಇಳಿಜಾರಿನ ರಸ್ತೆಯ ಮೇಲಿಂದ ನನ್ನ ಮೊಟಾರ ಸೈಕಲ್ ಮೇಲೆ ರಾಜನಕೋಳೂರ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ರೋಡಿನ ಎಡಗಡೆ ಒಂದು ಟ್ರ್ಯಾಕ್ಟರ ಟ್ರಾಲಿ ಸಮೇತ್ ಯಾವದೇ ಸೂಚನಾ ಫಲಕವನ್ನು ಹಾಕದೇ ವಾಹನವನ್ನು ರೋಡಿಗೆ ನಿಲ್ಲಿಸಿದೇ ಮಾನವ ಜೀವಕ್ಕೆ ಅಪಾಯವಾಗುತ್ತದೆ ಅಂತಾ ಗೊತ್ತಿದ್ದು, ನಿಲ್ಲಿಸಿದ ಟ್ರ್ಯಾಕ್ಟರಕ್ಕೆ ರಾಜನಕೋಳೂರ ಕಡೆಯಿಂದ ನಿನ್ನ ಅಣ್ಣನಾದ ತೇಜರಾಮ ಈತನು ತನ್ನ ಮೊಟಾರ ಸೈಕಲನ್ನು ಅತೀವೇಗದಿಂದ ಹಾಗೂ ನಿಷ್ಕಾಳಜೀತನದಿಂದ ಓಡಿಸಿಕೊಂಡು ಬಂದು ಟ್ರ್ಯಾಕ್ಟರ ಟ್ರಾಲಿಗೆ ಜೋರಾಗಿ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ತೇಜರಾಮನ ಹಣೆಯ ಭಾರಿ ರಕ್ತಗಾಯ, ಎದೆಗೆ ಭಾರಿ ಒಳಪೇಟ್ಟಾಗಿ ಬಲಗೈ ಮೊಳಕೈ ಹತ್ತಿರ ಭಾರಿ ರಕ್ತಗಾಯವಾಗಿ ಬಲಕಿವಿಯಿಂದ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು, ಟ್ರ್ಯಾಕ್ಟರ ನೊಂದಣಿ ನಂಬರ ನೋಡಲು ನಂಬರ ಇರಲಿಲ್ಲಾ. ಅದರ ಇಂಜಿನ್ ನಂ. ನೋಡಲಾಗಿ, ಕಙ3029ಖಿ251323 ಇದ್ದು, ಅದಕ್ಕೆ ಜೋಡಿಸಿದ ಟ್ರಾಲಿ ನಂ ಕೆ.ಎ.33 ಟಿ.ಬಿ 0510 ಇದ್ದು ಅಲ್ಲಿ ಇದ್ದ ಟ್ರ್ಯಾಕ್ಟರ ಚಾಲಕನಿಗೆ ವಿಚಾರಿಸಲು ಅವನು ತನ್ನ ಹೆಸರು ರಾಘವೇಂದ್ರ ತಂದೆ ಮುದಕಪ್ಪ ಪೂಜಾರಿ ಸಾ:ಹುಣಸಗಿ ಅಂತಾ ಹೇಳಿದಾಗ ನನಗೆ ಗೊತ್ತಾಗಿರುತ್ತದೆ ಅಂತಾ ಹೇಳಿದಾಗ ಈ ಎಲ್ಲಾ ವಿಷಯ ನನಗೆ ಗೊತ್ತಾಗಿರುತ್ತದೆ.ಕಾರಣ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರವನ್ನು ಯಾವದೇ ಸೂಚನಾ ಫಲಕವನ್ನು ಹಾಕದೇ ವಾಹನವನ್ನು ರೋಡಿಗೆ ನಿಲ್ಲಿಸಿ ಮಾನವ ಜೀವಕ್ಕೆ ಅಪಾಯವಾಗುತ್ತದೆ ಅಂತಾ ಗೊತ್ತಿದ್ದು ರೋಡಿಗೆ ನಿಲ್ಲಿಸಿ ಟ್ರ್ಯಾಕ್ಟರಕ್ಕೆ ನನ್ನ ಅಣ್ಣನಾದ ತೇಜರಾಮ ಜಾಟ್ ಈತನು ಟ್ರ್ಯಾಕ್ಟರ ಹಿಂದಿನ ಟ್ರಾಲಿಗೆ ಡಿಕ್ಕಿಪಡಿಸಿದ್ದರಿಂದ ನನ್ನ ಅಣ್ಣನಿಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದು, ಕಾರಣ ಮಾನ್ಯರವರು ಮುಂದಿನ ಕಾನೂನ ಕ್ರಮ ಜರುಗಿಸಬೇಕು ಅಂತ ಪಿರ್ಯಾಧಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:64/2022 ಕಲಂ 279, 283, 304(ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 07-09-2022 04:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080