ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 07-10-2021

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 75/2021 ಕಲಂ: 87 ಕೆ.ಪಿ ಯಾಕ್ಟ : ದಿನಾಂಕ:06/10/2021 ರಂದು 01.30 ಎ.ಎಮ್ಕೆ ಹುಣಸಗಿ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ ಚಿದಾನಂದ ಸೌದಿ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಸಾರಾಂಶವೆನೆಂದರೆ ದೇವಾಪೂರ(ಜೆ) ಗ್ರಾಮದ ಕ್ವಾರಿಯ ಬೈಲು ಜಾಗದಲ್ಲಿ ಕೆನಾಲ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ಸಮಯವಾಗಿದ್ದರಿಂದ ದೊಡ್ಡ ಮೇಣದ ಭತ್ತಿಗಳನ್ನು ಹಚ್ಚಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದಿದ್ದು, ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:75/2021 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರಾದ ಶ್ರೀ ಚಿದಾನಂದ ಸೌದಿ ಪಿಎಸ್ಐ ರವರು ಠಾಣೆಗೆ 03.30 ಎ.ಎಮ್ಕ್ಕೆ ಗಂಟೆಗೆ ಮರಳಿ ಠಾಣೆಗೆ ಬಂದು 12 ಜನ ಆರೋಪಿತರು & ನಗದು ಹಣ 77500/- ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳು & 5 ದೊಡ್ಡ ಮೇಣದ ಭತ್ತಿಗಳು ಅರ್ದಮರ್ದ ಸುಟ್ಟಿದ್ದು, ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಹಾಜರಪಡಿಸಿದ್ದು ಇರುತ್ತದೆ. ಆರೋಪಿತರ ಹೆಸರು ಈ ರೀತಿ ಇದೆ, 1) ಸುರೇಶ ತಂದೆ ಗುರಪ್ಪ ಹುರಿಕಡ್ಲಿ ಸಾ:ಹುಣಸಗಿ, 2) ದೊಡ್ಡಪ್ಪ @ ದೊಡ್ಡಪ್ಪಗೌಡ ತಂದೆ ದೇವಿಂದ್ರಪ್ಪ ಕೊಳೂರ ಸಾ:ಹುಣಸಗಿ 3) ಮಲ್ಲಿಕಾಜರ್ುನ ತಂದೆ ಚನ್ನಮಲ್ಲಪ್ಪ ಜಂಬಲದಿನ್ನಿ ಸಾ:ಹುಣಸಗಿ, 4) ರಾಘವೇಂದ್ರ ತಂದೆ ಯಂಕಪ್ಪ ಕೂಡ್ಲಿಗಿ ಸಾ:ಹುಣಸಗಿ, 5) ಶರಣಬಸಪ್ಪ ತಂದೆ ಹಳ್ಳೆಪ್ಪ ಗುತ್ತೆದಾರ ಸಾ:ಹುಣಸಗಿ, 6) ಪವನ ತಂದೆ ಬಸವರಾಜ ಬಾಕ್ಲಿ ಸಾ:ಹುಣಸಗಿ, 7) ಭೀಮಪ್ಪ ತಂದೆ ಸೋಮಪ್ಪ ಬಾಕ್ಲಿ ಸಾ:ಹುಣಸಗಿ, 8) ಇಮಾಮಸಾಬ ತಂದೆ ಪಾಡೇಸಾಬ ನದಾಫ್ ಸಾ:ಹುಣಸಗಿ, 9) ಸೋಪಿಸಾಬ ತಂದೆ ಅಬುಲ್ಸಾಬ ಸುರಪುರ ಸಾ:ಹುಣಸಗಿ, 10) ಬಸವರಾಜ ತಂದೆ ಯಂಕಣ್ಣ ಕಟ್ಟಿಮನಿ ಸಾ:ಹುಣಸಗಿ, 11) ಬಸವರಾಜ ತಂದೆ ಭೀಮಣ್ಣ ಕಟ್ಟಿಮನಿ ಸಾ:ಹುಣಸಗಿ, 12) ಮಂಜುನಾಥ ತಂದೆ ಬಾಲಣ್ಣ ದೊರಿ ಸಾ:ಹುಣಸಗಿ, ಈ ರೀತಿ ಇರುತ್ತದೆ.

 


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 154/2021 ಕಲಂ. 279, 337, 338 ಐಪಿಸಿ : ದಿನಾಂಕ: 06-10-2021 ರಂದು ಸಾಯಂಕಾಲ 04-15 ಗಂಟೆಗೆ ಸೈದಾಪೂರ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ಇದೆ ಅಂತಾ ಪೊನ್ ಮೂಲಕ ತಿಳಿಸಿದ ಮೇರಗೆ ನಾನು ಸರಕಾರಿ ಆಸ್ಪತ್ರೆ ಸೈದಾಪೂರಕ್ಕೆ ಭೆಟಿ ನೀಡಿ ಅಲ್ಲಿ ಗಾಳುವನ್ನು ವಿಚಾರಿಸಿದ್ದು ಪಿಯರ್ಾಧಿ ನೀಡಿದ ಸಾರಂಶವೆನೆಂದರೆ, ದಿನಾಂಕ: 06-10-2021 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಹಳಿಗೇರಾ ಗ್ರಾಮದಿಂದ ನನ್ನ ಮಗಳನ್ನು ಮಾತಾಡಿಸಿಕೊಂಡು ಹೋಗಲು ಕೂಡ್ಲೂರ ಗ್ರಾಮಕ್ಕೆ ಬಂದಿದ್ದೆನು. ನಂತರ ಮೋಟರ ಸೈಕಲ್ ನಂ. ಕೆಎ-33 ಎಲ್-5040 ನೇದ್ದರ ಮೇಲೆ ಸೈದಾಪೂರಕ್ಕೆ ಬರುತಿದ್ದೆವು, ನಾವು ಸೈದಾಪೂರಕ್ಕೆ ಬರುತ್ತಿರುವಾಗ ಕೂಡ್ಲೂರ ಕ್ರಾಸ ದ್ವಾರ ಬಾಗಿಲು ಹತ್ತಿರ ಸಾಯಂಕಾಲ 03-45 ಗಂಟೆ ಸುಮಾರಿಗೆ ಬರುತ್ತಿರುವಾಗ ಮೋಟರ ಸೈಕಲ್ ನಡೆಸುವ ನನ್ನ ಅಳಿಯ ಮರೆಪ್ಪ ತಂದೆ ಕಳಸಯ್ಯ ಹಜಾರಿ ಈತನು ತಾನು ನಡೆಸುವ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತಿದ್ದು ಸೈದಾಪೂರ ಕಡೆಯಿಂದ ಒಂದು ಬಸ್ ಕೂಡ್ ವೇಗವಾಗಿ ಬರತಿದ್ದು ಇಬ್ಬರು ಚಾಲಕರು ವಾಹನಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಒಬ್ಬರಿಗೊಬ್ಬರು ಅಪಘಾತಪಡಿಸಿದ್ದು ಅಪಘಾತದಲ್ಲಿ ನನಗೆ ಹಣೆಗೆ ಎರಡು ಕಾಲುಗಳಿಗೆ ಮತ್ತು ಎರಡು ಕೈಗಳಿಗೆ ರಕ್ತಗಾಯವಾಗಿರುತ್ತದೆ, ಮೋಟರ ಸೈಕಲ್ ನಡೆಸುವ ಮರೆಪ್ಪ ತಂದೆ ಕಳಸಯ್ಯ ಈತನಿಗೆ ಬಲಗಾಲಿನ ಮೋಣಕಾಲಿನ ಕೇಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಂತೆ ಆಗಿರುತ್ತದೆ ಮೈಗೆ ಮುಖಕ್ಕೆ ಸಣ್ಣಪುಟ್ಟ ಗಾಯಗಳು ಆಗಿರುತ್ತವೆ, ಬಸ್ ಚಾಲಕ ಮತ್ತು ಕಂಡೆಕ್ಟರ್ ಹಾಗೂ ಬಸನಲ್ಲಿರುವವರಿಗೆ ಯಾವುದೆ ಗಾಯಗಳು ಆಗಿರಲಿಲ್ಲ. ಬಸನ್ನು ಪರಿಶೀಲಿಸಿ ನೋಡಲಾಗಿ ಅದರ ನಂ. ಕೆಎ-32 ಎಫ್-2262 ಅಂತಾ ಇರುತ್ತದೆ.

 


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 228/2021 ಕಲಂ 498ಎ. 323, 504, 326, 506 .ಐ.ಪಿ.ಸಿ. : ಇಂದು ದಿನಾಂಕ: 06-10-2021 ರಂದು ಫಿರ್ಯಾದಿ ಶ್ರೀಮತಿ ನಿರ್ಮಲಾ ಗಂಡ ಮೌನೇಶ ಶಾಸ್ತ್ರೀ ವಯ: 25 ವರ್ಷ ಜಾ: ಮಾದಿಗ ಉ: ಮನೆಗೆಲಸ ಸಾ: ಅಣಬಿ ತಾ: ಶಹಾಪುರ ಹಾಲಿ ವಸತಿ ದೇವಿ ನಗರ ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ ನನ್ನ ತವರು ಮನೆಯು ಚಿತ್ತಾಪುರ ತಾಲೂಕಿನ ಆಲೂರ ಗ್ರಾಮವಿದೆ. ನನಗೆ ಈಗ 9 ತಿಂಗಳ ಹಿಂದೆ ಶಹಾಪುರ ತಾಲೂಕಿನ ಅಣಬಿ ಗ್ರಾಮದ ಮೌನೇಶ @ ಮಾನಪ್ಪ ತಂದೆ ಯಮನಪ್ಪ ಶಾಸ್ತ್ರೀ ಎಂಬುವವರೊಡನೆ ನಮ್ಮ ಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿದ್ದು ಇದೆ. ನನ್ನ ಗಂಡನು ಗೌಂಡಿಯವರ ಕೈಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ನಾವು ಶಹಾಪುರ ನಗರದ ದೇವಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದೇವೆ. ನನ್ನ ಗಂಡನು ಮದುವೆಯಾದ ಮೂರು ತಿಂಗಳ ವರೆಗೆ ನನಗೆ ಚೆನ್ನಾಗಿ ನೋಡಿಕೊಂಡು ನಂತರದ ದಿನಗಳಲ್ಲಿ ಪ್ರತಿ ದಿನ ನಿತ್ಯ ರಾತ್ರಿ ವೇಳೆಯಲ್ಲಿ ಕುಡಿದು ಬಂದು ನನ್ನ ಮೇಲೆ ಹೊಡೆ ಬಡೆ ಮಾಡಿ ಕಿರುಕುಳ ಕೊಡುತ್ತಾ ಬಂದನು.ಆ ವಿಷಯವನ್ನು ನಾನು ನನ್ನ ತಂದೆ ತಾಯಿಗೆ ತಿಳಿಸಿದಾಗ ಅವರು ನನಗೆ ಬುದ್ದಿವಾದ ಹೇಳಿ ಹೊಂದಾಣಿಕೆ ಮಾಡಿಕೊಂಡು ಹೋಗು ಮುಂದೆ ಸರಿಯಾಗುತ್ತಾನೆ ಎಂದು ಹೇಳಿದರು. ಆದರೂ ಸಹಿತ ನನ್ನ ಗಂಡನು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಚಿತ್ರ ಹಿಂಸೆ ಮಾಡಿ ಮನ ಬಂದಂತೆ ಹೊಡೆಯುವುದು ಮಾಡುತ್ತಿದ್ದನು.ಆದ ಕಾರಣ ನಾನು ಅವನ ಹಿಂಸೆ ತಾಳಲಾರದೆ ಎರಡು ತಿಂಗಳ ಹಿಂದೆ ನನ್ನ ತವರು ಮನೆಯಾದ ಆಲೂರು ಗ್ರಾಮಕ್ಕೆ ಹೋಗಿದ್ದೆನು. ಅವನು ನನ್ನ ತವರು ಮನೆಗೆ ಆಗಾಗ ಕುಡಿದು ಬಂದು ಲೇ ಬೋಸುಡಿ ರಂಡಿ ಎಂದು ನಿಮ್ಮ ತಾಯಿ ಹೇಳಿದಂತೆ ಕೇಳಿ ನಾಟಕ ಮಾಡುತ್ತಿಯಾ ನೀನು ಎಂದು ಮೊದಲು ನಿನ್ನ ತಾಯಿಯ ಕೊಲೆ ಮಾಡುತ್ತೇನೆ. ನಂತರ ನಿನ್ನ ಪಾಳಿ ಎಂದು ಹೇಳುತ್ತಿದ್ದನು. ಆಗ ನಮ್ಮ ತಾಯಿಯು ನನ್ನ ಗಂಡನ ಮನೆಯವರಿಗೆ ಸುದ್ದಿ ತಿಳಿಸಿದ್ದು ಇದೆ. ನನ್ನ ಗಂಡನು ಆಗ ನಮ್ಮ ಮನೆಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ದಿನಾಂಕ:27-09-2021 ರಂದು ಸಾಯಂಕಾಲ6:30 ಗಂಟೆಗೆ ನನಗೆ ನಮ್ಮ ತಾಯಿಯಾದ ರಂಗಮ್ಮ ಗಂಡ ಶಿವಪ್ಪ ಲಾಡ್ಲಾಪುರ ಇವಳು ಶಹಾಪುರದ ಗಂಡನ ಮನೆಗೆ ಕರೆದುಕೊಂಡು ಬಂದಳು. ಆಗ ನನ್ನ ಗಂಡನು ಅಂದು ರಾತ್ರಿ ಊಟಕ್ಕೆ ಮಾಂಸ ತರುತ್ತೇನೆಂದು ಹೋಗಿ ಮರಳಿ ಮನೆಗೆ ಬಂದು ಲೇ ಬೋಸುಡೇರ್ಯಾ ಲೇ ರಂಡೇರ್ಯಾ ನಿಮ್ಮಿಬ್ಬರದ್ದು ಬಹಳ ಆಗಿದೆ ಎಂದು ಜಗಳ ತೆಗೆದನು. ಆಗ ಹೀಗೇಕೆ ಮಾಡುತ್ತಿ ಎಂದು ನನ್ನ ತಾಯಿ ಹೇಳಿದ್ದಕ್ಕೆ ಅವಳಿಗೆ ಏ ಸೂಳಿ ಮೊದಲು ನಿನ್ನನ್ನು ಬಿಡುವುದಿಲ್ಲ ಎಂದು ಮಾಡುತ್ತೇನೆ ಎಂದು ನನ್ನ ತಾಯಿಗೆ ಅಲ್ಲೇ ಇದ್ದ ಒಂದು ರಾಡಿನಿಂದ ತಲೆಗೆ ಹೊಡೆದನು. ಮತ್ತೆ ಅದೇ ರಾಡಿನಿಂದ ಎಡಗೈ ಭುಜಕ್ಕೆ ಹೊಡೆದು ಭಾರೀ ರಕ್ತಗಾಯ ಮಾಡಿದ್ದು ಅದರಿಂದ ರಕ್ತ ಸೋರುತ್ತಿತ್ತು. ನಂತರ ನನಗೆ ಹೊಡೆಯಲು ಬಂದನು. ನಾನು ತಪ್ಪಿಸಿಕೊಂಡು ಚೀರಾಡುತ್ತಿದ್ದಾಗ ಮನೆಯ ಮಂದೆ ಪೈನಾನ್ಸಿಗೆ ಬಂದಿದ್ದ ಮಂಜುನಾಥ ತಂದೆ ನರಸಪ್ಪ ಮೋಟನಳ್ಳಿ ಸಾ: ಮೋಟನಳ್ಳಿ ಮತ್ತು ಹುಸೇನಪ್ಪ ತಂದೆ ಹೊನ್ನಪ್ಪ ಸಾ: ನಂದೇಪಲ್ಲೇರ ಸಾ: ಶಹಾಪುರ ಇವರು ಬಂದು ಬಿಡಿಸಿಕೊಂಡರು. ನನ್ನ ಗಂಡನು ಸೂಳಿ ನಿನ್ನನ್ನು ಬಿಡುವುದಿಲ್ಲ ಜೀವ ತೆಗೆಯುತ್ತೇನೆ ಎಂದು ಜೀವದ ಬೆದರಿಕೆ ಹಾಕಿರುತ್ತಾನೆ. ಆಗ ನನ್ನ ತಾಯಿಗೆ ಶಹಾಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಸೇರಿಕೆ ಮಾಡಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಯಾದಗಿರಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇನೆ ನನ್ನ ತಂದೆ ಶಿವಪ್ಪನಿಗೆ ವಿಷಯ ತಿಳಿಸಿ ಯಾದಗಿರಿಗೆ ಕರೆಯಿಸಿಕೊಂಡು ನಾನು ನನ್ನ ತಾಯಿಗೆ ಚಿಕಿತ್ಸೆ ಮಾಡಿಸಿ ಇಲ್ಲಿಯ ವರೆಗೆ ಆಕೆಯೊಂದಿಗೆ ಉಪಚಾರಕ್ಕಾಗಿ ಇದ್ದು ಇಂದು ದಿನಾಂಕ:06-10-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ನನಗೆ ಕೌಟುಂಬಿಕವಾಗಿ ಕಿರುಕುಳ ನೀಡಿ ನನ್ನ ತಾಯಿಗೆ ಕಬ್ಬಿಣದ ರಾಡಿನಿಂದ ಹೊಡೆದು ಭಾರೀ ಗಾಯ ಮಾಡಿ ಜೀವದ ಬೆದರಿಕೆ ಹಾಕಿದ ನನ್ನ ಗಂಡ ಮೌನೇಶನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 228/2021 ಕಲಂ. 498 (ಎ), 323, 504, 326, 506 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

 


ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 133/2021 ಕಲಂ.78(3) ಕೆ.ಪಿ.ಆಕ್ಟ್. : ಇಂದು ದಿನಾಂಕ 06-10-2021 ರಂದು ಬೆಳಗೆ 11-30 ಗಂಟೆಗೆ ಮೈಲಾಪುರ ಬಂದೊಬಸ್ತ ಮುಗಿಸಿಕೊಂಡು ಮರಳಿ ರಾಮಸಮುದ್ರ ಮಾರ್ಗವಾಗಿ ಯಾದಗಿರಿಗೆ ಬರುವಾಗ ರಾಮಸಮುದ್ರ ಗ್ರಾಮದ ಬ್ರೀಜ್ ಕೇಳಗಡೆ ಯಾರೋ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಕೂಡಲೇ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಪ್ರಭುಗೌಡ ಸಿಪಿಸಿ-361, ಶ್ರೀ ಬೀಮಪ್ಪ ಸಿಪಿಸಿ-33 ಎಲ್ಲರೊಂದಿಗೆ ಬ್ರೀಜ್ ಹತ್ತಿರ ಹೋಗಿ ಅಲ್ಲಿ ದಾಳಿ ಮಾಡುವ ಸಲುವಾಗಿ ಇಬ್ಬರೂ ಪಂಚರನ್ನು ಕರೆಯಿಸಿ ಅವರಿಗೆ ದಾಳಿಯ ಮಾಹಿತಿ ತಿಳಿಸಿ ಅಲ್ಲಿಂದ ಬ್ರೀಜ್ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆದ್ದು ಮಜಾ ಮಾಡಿರಿ ಅಂತಾ ಕೂಗಾಡುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಕರೆಯುತ್ತಿದ್ದನು ಮತ್ತು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನು, ಆಗ ನಾವೆಲ್ಲರೂ ಕೂಡಿ ಒಮ್ಮೆಲೆ ದಾಳಿ ಮಾಡಿ ಮಧ್ಯಾಹ್ನ 12-10 ಗಂಟೆಗೆ ಅವನನ್ನು ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ರವಿ ತಂದೆ ಮಹಾದೇವಪ್ಪ ವ:21 ಜಾ:ಬೆಡರ ಉ:ಒಕ್ಕಲುತನ ಸಾ: ರಾಮಸಮುದ್ರ ಅಂತಾ ತಿಳಿಸಿದನು. ಅವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 1200/ ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲಪೆನ್ನ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ಪಡೆದುಕೊಂಡೆನು, ಈ ಸವಿಸ್ತಾರವಾದ ಪಂಚನಾಮೆಯನ್ನು ಮಧ್ಯಾಹ್ನ 12-10 ಗಂಟೆಯಿಂದ 1-10 ಗಂಟೆಯವರೆಗೆ ಮಾಡಿಕೊಂಡು ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಮಧ್ಯಾಹ್ನ 1-45 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಇರುತ್ತದೆ. ಸದರಿಯವನ ವಿರುಧ ಕಲಂ 78(3) ಕೆ.ಪಿ. ಆ್ಯಕ್ಟ ಪ್ರಕಾರ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ.ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿ ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ವರದಿ ಸಾರಾಂಶದ ಆಧಾರದ ಮೇಲಿಂದ ಠಾಣಾ ಎನ್.ಸಿ.ಆರ್ ನಂ: 25/2021 ಕಲಂ 78 (3) ಕೆ.ಪಿ ಎಕ್ಟ ರಲ್ಲಿ ದಾಖಲಿಸಿಕೊಂಡಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಅಪಲರಾಧವಾಗಿದ್ದರಿಂದ ಮಾನ್ಯರವರು ಗುನ್ನೆ ದಾಖಲು ಮಾಡಲು ಪರವಾನಿಗೆ ನೀಡಲು ವಿನಂತಿ. ಸದರಿ ವರದಿ ಸಾರಾಂಸವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಈ ಬಗ್ಗೆ ಗುನ್ನೆ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿದ್ದು ಮಾನ್ಯ ನ್ಯಾಯಾಲಯವು ಗುನ್ನೆ ದಾಖಲು ಮಾಡಿಕೊಳ್ಳಲು 2-15 ಪಿ.ಎಮ್ ಕ್ಕೆ ಪರವಾನಿಗೆ ನೀಡಿದ್ದದರಿಂದ ಠಾಣಾ ಗುನ್ನೆ 133/2021 ಕಲಂ 78(3) ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

 

ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ: 59/2021 ಕಲಂ: 143, 147, 148, 323, 324, 504, 506, ಸಂಗಡ 149 ಐಪಿಸಿ : ಇಂದು ದಿನಾಂಕ 06/10/2021 ರಂದು 2:10 ಪಿ.ಎಂ ಕ್ಕೆ ಶ್ರೀ ಭೀಮಪ್ಪ ತಂದೆ ನೇಮಣ್ಣ ಜಾದವ ವ:55 ವರ್ಷ ಉ:ಒಕ್ಕಲುತನ ಜಾ:ಹಿಂದು ಲಮಾಣಿ ಸಾ:ಮಾರನಾಳ ತಾಂಡಾ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ರಾಯನಗೋಳ ಸೀಮಾಂತರದಲ್ಲಿ ಸವರ್ೆನಂ 28 ರಲ್ಲಿ ನಮ್ಮದು 4 ಎಕರೆ ಜಮೀನು ಇದ್ದು ಈ ಜಮೀನಿಗೆ ಹೊಂದಿಕೊಂಡು ನಮ್ಮ ಅಣ್ಣ ರಾಮಪ್ಪ ರವರ ಹೊಲವಿರುತ್ತದೆ. ಇಂದು ದಿನಾಂಕ 06/10/2021 ರಂದು ಮುಂಜಾನೆಯಿಂದ ನಾನು ಹಾಗೂ ನನ್ನ ಮಗ ಮಾನಪ್ಪ ಹಾಗೂ ನನ್ನ ಹೆಂಡತಿ ತಾರಾಬಾಯಿ ರವರು ಕೂಡಿಕೊಂಡು ನಮ್ಮ ಹೊಲದಲ್ಲಿ ಜೆ.ಸಿ.ಬಿ ಯಿಂದ ಕಲ್ಲುಕಿತ್ತಿಸಿ ನಮ್ಮ ಹೊಲದಲ್ಲಿ ಬದುವನ್ನು ಹಿಡುತ್ತಿದ್ದೇವು. ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ನಮ್ಮ ಅಣ್ಣ ರಾಮಪ್ಪನ ಮಕ್ಕಳಾದ ಚಂದ್ರಶೇಖರ ತಂದೆ ರಾಮಪ್ಪ, ಗೋಪಿ ತಂದೆ ರಾಮಪ್ಪ, ಶಿವಪ್ಪ ತಂದೆ ರಾಮಪ್ಪ, ಸಂತೋಷ ತಂದೆ ರಾಮಪ್ಪ ಹಾಗೂ ಅವರ ಮನೆಯವರಾದ ರತ್ತುಬಾಯಿ ಗಂಡ ಚಂದ್ರಶೇಖರ, ಲಕ್ಷ್ಮೀಂಬಾಯಿ ಗಂಡ ಶಿವಪ್ಪ, ರುಕ್ಮಾಬಾಯಿ ಗಂಡ ರಾಮಪ್ಪ, ತಾರಾಬಾಯಿ ತಂದೆ ರಾಮಪ್ಪ ರವರು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಅಲ್ಲಿಗೆ ಬಂದು ಅವರಲ್ಲಿಯ ಚಂದ್ರಶೇಖರ ಈತನು ನನಗೆ ಕಲ್ಲುಗಳನ್ನು ಕಿತ್ತಿ ಯಾಕೆ ನಮ್ಮ ಹೊಲದಲ್ಲಿ ಹಚ್ಚುತ್ತಿದ್ದಿರಿ ಅಂತಾ ಕೇಳಿದನು, ಆಗ ನಾನು ಅವನಿಗೆ ಕಲ್ಲುಗಳನ್ನು ಕಿತ್ತಿ ನಮ್ಮ ಹೊಲದ ಬದುವಿಗೆ ಹಚ್ಚುತ್ತಿದ್ದೇವೆ ಅಂತಾ ಅಂದೇನು. ಆಗ ಅವರಲ್ಲಿಯ ಗೋಪಿ ಈತನು ಬೋಸುಡಿ ಸೂಳೆ ಮಗನೆ ನಮ್ಮ ಹೊಲದಲ್ಲಿಯ ಕಲ್ಲುಗಳನ್ನು ಹಚ್ಚಿ ನಿಮ್ಮ ಹೊಲದಲ್ಲಿ ಹಚ್ಚಿಕೊಂಡಿದ್ದೇವೆ ಅಂತಾ ಸುಳ್ಳು ಹೇಳಿತ್ತಿಯಾ ಹಲಕಟ್ಟಸೊಳೆಮಗನೆ ಅಂತಾ ಅಂದನು. ಆಗ ಅಲ್ಲಿಯೇ ಇದ್ದ ನನ್ನ ಮಗ ಮಾನಪ್ಪನು ಗೋಪಿ ಈತನಿಗೆ ಸರಿಯಾಗಿ ಮಾತನಾಡು ಅಂತಾ ಅಂದನು. ಆಗ ಅಲ್ಲಿಯೇ ಇದ್ದ ಚಂದ್ರಶೇಖರನು ಬೋಸುಡಿ ಮಕ್ಕಳೆ ಕಲ್ಲುಗಳನ್ನು ನಮ್ಮ ಹೊಲದಲ್ಲಿ ಹಚ್ಚಿ ಮತ್ತೆ ನಮಗೆ ಸರಿಯಾಗಿ ಮಾತನಾಡಿರಿ ಅಂತಾ ಎದರು ಮಾತನಾಡುತ್ತಿಯಾ ಅಂದು ನನ್ನ ಮಗ ಮಾನಪ್ಪನೊಂದಿಗೆ ತೆಕ್ಕೆಕುಸ್ತಿಗೆ ಬಿದ್ದು ಅಲ್ಲಿಯೇ ಇದ್ದ ಕಲ್ಲಿನಿಂದ ನನ್ನ ಮಗ ಮಾನಪ್ಪನ ತಲೆಗೆ, ಹಾಗೂ ಬಾಯಿಗೆ ಹೊಡೆದು ರಕ್ತಗಾಯ ಮಾಡಿದನು ಆಗ ಬಿಡಿಸಿಕೊಳ್ಳಲು ಹೋದ ನನಗೆ ಮತ್ತು ನನ್ನ ಹೆಂಡತಿ ತಾರಾಬಾಯಿಗೆ ಅವರೊಂದಿಗೆ ಬಂದಿದ್ದ ಶಿವಪ್ಪ ಈತನು ನನಗೆ ತನ್ನ ಕೈಯಲ್ಲಿ ಇದ್ದ ಬಡಿಗೆಯಿಂದ ನನ್ನ ಎದೆಗೆ ಹಾಗೂ ಬೆನ್ನಿಗೆ ಹೊಡೆದು ಗುಪ್ತ ಪೆಟ್ಟು ಪಡಿಸಿದ್ದು ನನ್ನ ಹೆಂಡತಿ ತಾರಾಬಾಯಿಗೆ ರತ್ತುಬಾಯಿ ಇವಳು ಕಲ್ಲಿನಿಂದ ಎಡಗಡೆ ಕಣ್ಣಿನ ಹುಬ್ಬಿನ ಮೇಲೆ ಹೊಡೆದು ರಕ್ತಗಾಯಪಡಿಸಿದ್ದು ಮೊಳಕಾಲ ಕೆಳಗೆ ಅದೆ ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿದ್ದು ಲಕ್ಷಿಂಬಾಯ ಹಾಗೂ ರುಕ್ಮಾಬಾಯಿ ರವರು ನನ್ನ ಹೆಂಡತಿಯೊಂದಿಗೆ ತೆಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಕಪಾಳಕ್ಕೆ ಹಾಗೂ ಬೆನ್ನಿಗೆ ಹೊಡೆದರು. ನಾವು ಜಗಳವಾಡುವದನ್ನು ನೋಡಿ ಬಿಡಿಸಿಕೊಳ್ಳಲು ಬಂದ ನನ್ನ ಮಗ ರವಿ ಈತನಿಗೆ ಅವರಲ್ಲಿಯ ಸಂತೋಷ ಈತನು ಕೈಯಿಂದ ಹೊಟ್ಟೆಗೆ ಹಾಗೂ ಬೆನ್ನಿಗೆ ಗುದ್ದಿ ಗುಪ್ತಗಾಯ ಮಾಡಿದ್ದು ಇರುತ್ತದೆ. ನಾವು ಜಗಳವಾಡುವದನ್ನು ನೋಡಿ ಜೆ.ಸಿ.ಬಿ ನಡೆಸುತಿದ್ದ ಕುಮಾರ ತಂದೆ ಶಂಕ್ರಪ್ಪ ರಾಠೋಡ ರವರು ನಮ್ಮ ಜಗಳವನ್ನು ಬಿಡಿಸಿದ್ದು ಇರುತ್ತದೆ. ನಂತರ ಅವರಲ್ಲಿಯ ತಾರಾಬಾಯಿ ಇವಳು ನಮಗೆ ಬೋಸುಡಿ ಮಕ್ಕಳೆ ಇಷ್ಟಕ್ಕೆ ಸುಮ್ಮನಾದರೆ ಸರಿ ಮತ್ತೆ ಈ ಹೊಲದ ಬದುವಿನ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ನನ್ನ ಮಗ ಮಾನಪ್ಪ, ಹಾಗೂ ನನ್ನ ಹೆಂಡತಿ ತಾರಾಬಾಯಿ ಹಾಗೂ ನನ್ನ ಮಗ ರವಿ ರವರು ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ ದವಾಖಾನೆಗೆ ಹೋಗಿದ್ದು ನಾನು ಇಲ್ಲಿಗೆಬಂದಿದ್ದು ಇರುತ್ತದೆ ಆದ್ದರಿಂದ ನಮಗೆ ಹೊಡೆದವರ ಮೇಲೆ ಕೇಸು ಮಾಡಬೇಕೆಂದು ನೀಡಿದ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 59/2021 ಕಲಂ 143, 147, 148, 323, 324, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ನಾರಾಯಣಪೂರ ಪೊಲೀಸ ಠಾಣೆ
ಗುನ್ನೆ ನಂ: 60/2021 ಕಲಂ: 143,147,148,323,324,504,506 ಸಂಗಡ 149ಐಪಿಸಿ : ಇಂದು ದಿನಾಂಕ 06/10/2021 ರಂದು ಎಂ.ಎಲ್.ಸಿ ವಿಚಾರಣೆ ಕುರಿತು ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ 3:45 ಪಿ.ಎಂ ಕ್ಕೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ಶ್ರೀ ಶಿವಪ್ಪ ತಂದೆ ರಾಮಪ್ಪ ಜಾದವ ವ:27 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಲಮಾಣಿ ಸಾ:ಮಾರನಾಳ ದೊಡ್ಡತಾಂಡಾ ರವರಿಗೆ ಘಟನೆಯ ಬಗ್ಗೆ ವಿಚಾರಿಸಿದ್ದು ಸದರಿಯವನು ತಾನು ಘಟನೆಯ ಬಗ್ಗೆ ಅಜರ್ಿ ನೀಡುವದಾಗಿ ಹೇಳಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿಯನ್ನು ಹಾಜರು ಪಡಿಸಿದ್ದು ಸದರಿ ಅಜರ್ಿಯನ್ನು ಪಡೆದುಕೊಂಡು 4:20 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದಿದ್ದು ಪಿಯರ್ಾದಿಯ ಅಜರ್ಿಯ ಸಾರಾಂಶವೆನೆಂದರೆ ರಾಯನಗೋಳ ಸೀಮಾಂತರದಲ್ಲಿ ಸವರ್ೆನಂ 28 ರಲ್ಲಿ ನಮ್ಮದು 3 ಎಕರೆ ಜಮೀನು ಇದ್ದು ಈ ಜಮೀನಿಗೆ ಹೊಂದಿಕೊಂಡು ನಮ್ಮ ಚಿಕ್ಕಪ್ಪ ಭೀಮಪ್ಪ ರವರ ಹೊಲವಿರುತ್ತದೆ. ನಮ್ಮ ಹೊಲದಲ್ಲಿಯೇ ನಾವು ಮನೆಯನ್ನು ಕಟ್ಟಿಕೊಂಡು ವಾಸವಿರುತ್ತವೆ. ಇಂದು ದಿನಾಂಕ 06/10/2021 ರಂದು ಮುಂಜಾನೆಯಿಂದ ನಮ್ಮ ಚಿಕ್ಕಪ್ಪ ಭೀಮಪ್ಪ ರವರು ತಮ್ಮ ಹೊಲದಲ್ಲಿ ಜೆ.ಸಿ.ಬಿ ಯಿಂದ ಕಲ್ಲುಗಳನ್ನು ಕಿತ್ತುತ್ತಿದ್ದರು ಮದ್ಯಾಹ್ನ 1:10 ಗಂಟೆಯ ಸುಮಾರಿಗೆ ನಮ್ಮ ಚಿಕ್ಕಪ್ಪನವರು ಜೆ.ಸಿ.ಬಿ ಯಿಂದ ಕಲ್ಲುಗಳನ್ನು ಕಿತ್ತುತ್ತಿ ನಮ್ಮ ಹೊಲದ ಬದುವಿನ ಕಡೆಗೆ ಬಂದು ಕಲ್ಲುಗಳನ್ನು ಕಿತ್ತಲು ಪ್ರಾರಂಬಿಸಿದರು ಆಗ ಮನೆಯಲ್ಲಿ ನಾನು ಹಾಗೂ ನಮ್ಮ ಅಣ್ಣ ಚಂದ್ರಶೇಖರ ಹಾಗೂ ನಮ್ಮ ತಮ್ಮ ಗೋಪಾಲ ರವರು ಕೂಡಿಕೊಂಡು ನಮ್ಮ ಹೊಲದ ಬದುವಿನ ಕಡೆಗೆ ಹೋದೆವು ಆಗ ನಮ್ಮ ಚಿಕ್ಕಪ್ಪ ರವರು ಕಲ್ಲುಗಳನ್ನು ಕಿತ್ತಿ ನಮ್ಮ ಹೊಲದಲ್ಲಿ ಹಾಕಹತ್ತಿದರು ಆಗ ನಮ್ಮ ಅಣ್ಣ ಚಂದ್ರಶೇಖರನು ನಮ್ಮ ಚಿಕ್ಕಪ್ಪ ಭೀಮಪ್ಪನಿಗೆ ಕಲ್ಲುಗಳನ್ನು ನಮ್ಮ ಹೊಲದಲ್ಲಿ ಹಾಕಬೇಡಿರಿ ನಿಮ್ಮ ಹೊಲದಲ್ಲಿ ಹಾಕಿಕೊಳ್ಳಿರಿ ಅಂತಾ ಅಂದನು ಆಗ ನಮ್ಮ ಚಿಕ್ಕಪ್ಪ ಭೀಮಪ್ಪನು ಬೋಸುಡಿ ಮಕ್ಕಳೆ ಕಲ್ಲುಗಳನ್ನು ನಮ್ಮ ಹೊಲದಲ್ಲಿಯೇ ಹಾಕುತ್ತಿದ್ದೇವೆ ಅಂತಾ ಅಂದನು ಆಗ ನಮ್ಮ ಅಣ್ಣ ಚಂದ್ರಶೇಖರನು ನೋಡ ಬರಿ ಕಲ್ಲು ನಮ್ಮ ಹೊಲದಲ್ಲಿ ಬೀಳುತ್ತಿವೇ ಅಂತಾ ಅಂದಾಗ ನಮ್ಮ ಚಿಕ್ಕಪ್ಪನ ಮನೆಯಲ್ಲಿ ಇದ್ದ ಅವರ ಮನೆಯವರಾದ, ಮಾನಪ್ಪ ತಂದೆ ಭೀಮಪ್ಪ ಜಾದವ, ರವಿ ತಂದೆ ಭೀಮಪ್ಪ ಜಾದವ, ತಾರಾಬಾಯಿ ಗಂಡ ಭೀಮಪ್ಪ ಜಾದವ ಹಾಗೂ ಕವಿತಾ ಗಂಡ ಮಾನಪ್ಪ ಜಾದವ ರವರು ಅಲ್ಲಿಗೆ ಕೈಯಲ್ಲಿ ಕಲ್ಲು ಬಡಿಗೆಯನ್ನು ಹಿಡಿದುಕೊಂಡು ಬಂದು ಅವರಲ್ಲಿಯ ಮಾನಪ್ಪ ಈತನು ನಮ್ಮ ಅಣ್ಣ ಚಂದ್ರಶೇಖರಿಗೆ ರಂಡಿಮಗನೇ ನಮ್ಮ ಅಪ್ಪ ಕಲ್ಲುಗಳನ್ನು ಕಿತ್ತಿ ನಮ್ಮ ಹೊಲದ ಬದುವಿನಲ್ಲಿ ಹಚ್ಚಿಕೊಂಡರೆ ನಿಮ್ಮ ಹೊಲದಲ್ಲಿ ಬಿದ್ದಾವ ಅಂತಾ ಬೋಗಳಕತ್ತಿಯಾ ಅಂತಾ ನಮ್ಮ ಅಣ್ಣ ಚಂದ್ರಶೇಖರನೊಂದಿಗೆ ಜಗಳಕ್ಕೆ ಬಿದ್ದು ತನ್ನ ಕೈಯಲ್ಲಿಯ ಬಡಿಗೆಯಿಂದ ನಮ್ಮ ಅಣ್ಣ ಚಂದ್ರಶೇಖರನ ಎಡಗೈ ಮೊಳಕೈಗೆ ಹಾಗೂ ಬೆನ್ನಿಗೆ ಹೊಡೆದು ಗುಪ್ತಪೆಟ್ಟು ಪಡಿಸಿದ್ದು ನಂತರ ನಮ್ಮ ಚಿಕ್ಕಪ್ಪ ಬೀಮಪ್ಪ ಈತನು ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ನಮ್ಮ ತಮ್ಮ ಗೋಪಾಲನ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ರವಿ ಈತನು ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ನನ್ನ ಎಡಗಡೆ ಕಿವಿಗೆ ಹೊಡೆದು ರಕ್ತಗಾಯ ಮಾಡಿದ್ದು ಕಾಲನಿಂದ ಸೊಂಟಕ್ಕೆ ಹೊದ್ದು ಗುಪ್ತಪೆಟ್ಟು ಪಡಿಸಿದ್ದು ಇರುತ್ತದೆ. ತಾರಾಬಾಯಿ ಗಂಡ ಭೀಮಪ್ಪ ಜಾದವ ರವರು ಕೈಯಿಂದ ನನ್ನ ಕಪಾಳಕ್ಕೆ ಹೊಡೆದಿದ್ದು ಕವಿತಾ ಗಂಡ ಮಾನಪ್ಪ ಜಾದವ ರವರು ನನ್ನ ಎಡಗಡೆ ಕಿವಿಗೆ ತನ್ನ ಕೈಯಿಂದ ಚೂರಿ ರಕ್ತಗಾಯ ಮಾಡಿದ್ದು ಇರುತ್ತದೆ ಆಗ ನಾವು ಚೀರಾಡಹತ್ತಿದಾಗ ನಮ್ಮ ಹೊಲದಲ್ಲಿ ಇದ್ದ ನಮ್ಮ ಸಂತೋಷ ತಂದೆ ರಾಮಪ್ಪ ಜಾದವ ಹಾಗೂ ಜೆ.ಸಿ.ಬಿ ಚಾಲಕ ಕುಮಾರ ತಂದೆ ಶಂಕ್ರಪ್ಪ ರಾಠೋಡ ರವರು ನಮ್ಮ ಜಗಳವನ್ನು ಬಿಡಿಸಿದ್ದು ಇರುತ್ತದೆ. ನಂತರ ಅವರೆಲ್ಲರು ನಮಗೆ ಬೋಸುಡಿ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು ನಂತರ ನಾನು ಮತ್ತು ನಮ್ಮ ಅಣ್ಣ ಚಂದ್ರಶೇಖರ ಹಾಗೂ ನಮ್ಮ ತಮ್ಮ ಗೋಪಾಲ ರವರು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೊಡೆಕಲ್ಲ ಬಂದಿದ್ದು ಇರುತ್ತದೆ ಆದ್ದರಿಂದ ನಮಗೆ ಹೊಡೆದವರ ಮೇಲೆ ಕೇಸು ಮಾಡಬೇಕು ಅಂತಾ ನೀಡಿದ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 60/2021 ಕಲಂ 143, 147, 148, 323, 324, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 50/2021 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 06/10/2021 ರಂದು ಸಮಯ 6-30 ಪಿ.ಎಂ.ದ ಸುಮಾರಿಗೆ ಯಾದಗಿರಿ ನಗರದ ಕೋಟರ್ು-ಅಂಬೇಡ್ಕರ್ ಮುಖ್ಯ ರಸ್ತೆಯ ಮೆಥೋಡಿಸ್ಟ್ ಚರ್ಚ ಹತ್ತಿರ, ಈ ಕೇಸಿನ ಗಾಯಾಳು ರಸ್ತೆ ಬದಿಯಲ್ಲಿ ನಿಂತಿದ್ದಾಗ ಮೋಟಾರು ಸೈಕಲ್ ನಂ.ಕೆಎ-37, ವಿ-2946 ನೇದ್ದರ ಸವಾರನು ತನ್ನ ಮೋಟಾರು ಸೈಕಲನ್ನು ಕೊಟರ್ು ರಸ್ತೆ ಕಡೆಯಿಂದ ಅಂಬೆಡ್ಕರ್ ನಗರದ ರಸ್ತೆ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಇರುತ್ತದೆ ಈ ಅಪಘಾತದಲ್ಲಿ ಬಾಯಿಗೆ ಭಾರೀ ರಕ್ತಗಾಯವಾಗಿ ಹಲ್ಲುಗಳು ಮುರಿದು ರಕ್ತ ಹೊರಬರುತ್ತಿದ್ದು ಮತ್ತು ಎಡಗಾಲಿನ ಮೊಣಕಾಲು ಕೆಳಗೆ ಭಾರೀ ಗುಪ್ತಗಾಯವಾಗಿರುತ್ತದೆ. ಈ ಅಪಘಾತದ ನಂತರ ಮೋಟಾರು ಸೈಕಲ್ ಸವಾರನು ತನ್ನ ವಾಹನ ಸಮೇತ ಘಟನಾ ಸ್ಥಳದಿಂದ ಓಡಿ ಹೋಗಿರುತ್ತಾನೆ ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 50/2021 ಕಲಂ 279, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು

ಇತ್ತೀಚಿನ ನವೀಕರಣ​ : 07-10-2021 10:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080