ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 07-11-2022

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 161/2022 ಕಲಂ 279, 337, 338 ಐಪಿಸಿ:ದಿನಾಂಕಃ 04.11.2022 ರಂದು ಸಂಜೆ 4-45 ಗಂಟೆಯ ಸುಮಾರಿಗೆ ಚಪೇಟ್ಲಾ ಗ್ರಾಮದ ಸೀಮಾಂತರದಲ್ಲಿ ಬರುವ ಗಂಡಿಕೋಟಿ ಮಶೆಮ್ಮ ಗುಡಿಯ ಹತ್ತಿರ ಗುರುಮಠಕಲ್-ಚಪೇಟ್ಲಾ ಮುಖ್ಯ ರಸ್ತೆಯ ಮೇಲೆ ಈ ಪ್ರಕರಣದಲ್ಲಿ ಆಪಾದಿತನಾದ ಹೋಂಡಾ ಯುನಿಕಾರ್ನ ಮೋಟಾರ ಸೈಕಲ ನಂ.ಕೆ.ಎ-33-ವೈ-1728 ನೇದ್ದರ ಚಾಲಕನಾದ ಮಹೇಶ ತಂದೆ ಉಮ್ಲಾನಾಯಕ ರಾಠೋಡ ಸಾ|| ಯಂಪಾಡ ತಾಂಡಾ ಇತನು ಗುರುಮಠಕಲ್ ಕಡೆಯಿಂದ ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ತನ್ನ ಮೋಟಾರ ಸೈಕಲ ಮೇಲೆ ನಿಯಂತ್ರಣವನ್ನು ಕಳೆದುಕೊಂಡು ಎದುರಗಡೆಯಿಂದ ಸೈಕಲ ಮೇಲೆ ಹೊರಟಿದ್ದ ಅನಿಲ ಮತ್ತು ರಾಕೇಶ ಇವರ ಸೈಕಲಗೆ ಡಿಕ್ಕಿ ಪಡಿಸಿದ ಪರಿಣಾಮ ಈ ಅಪಘಾತದಲ್ಲಿ ಅನಿಲ ಮತ್ತು ರಾಕೇಶ ಇವರಿಗೆ ಸಾದಾ ಮತ್ತು ಭಾರಿ ಸ್ವರೂಪದ ರಕ್ತ ಮತ್ತು ಗುಪ್ತಗಾಯಗಳಾಗಿದ್ದು, ಮೋಟಾರ ಸೈಕಲ ಸವಾರ ಮತ್ತು ಆತನ ಹಿಂದುಗಡೆ ಕುಂತ್ತಿದ್ದವನಿಗೂ ಕೂಡ ಸಾದಾ ಸ್ವರೂಪದ ರಕ್ತ ಗುಪ್ತುಗಾಯಗಳಾಗಿರುವ ಬಗ್ಗೆ ದೂರು

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 143/2022 ಕಲಂ: 279 ಐಪಿಸಿ: ಇಂದು ದಿನಾಂಕ. 06/11/2022 ರಂದು 8-00 ಪಿಎಂಕ್ಕೆ ಶ್ರೀ ಶ್ರೀಶೈಲ್ ತಂದೆ ರುದ್ರಶೇಟ್ಟಿ ಹೊಳಕುಂದಿ ವ|| 52 ವರ್ಷ ಜಾ|| ಲಿಂಗಾಯತ ಉ|| ಶ್ರೀ ವೀರಭದ್ರೆಶ್ವರ ರೋಡಲೈನ್ಸ್ದ ಮಾಲಿಕ ಸಾ|| ಶಿವಾಜಿ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ದಿನಾಂಕ:04/11/2022 ರಂದು ರಾತ್ರಿ 10:30 ಗಂಟೆಗೆ ನಮ್ಮ ಟ್ರಾನ್ಸ್ಪೋರ್ಟ ವತಿಯಿಂದ ಅಶೋಕ ಲ್ಯಾಲೆಂಡ್ ಲಾರಿ ನಂ. ಕೆಎ-04 ಎಬಿ-9621 ನೇದ್ದರಲ್ಲಿ ಯಶ್ ಪ್ರೋಟಿನ್ಸ್ ಪ್ರೈವೇಟ್ ಲಿಮಿಟೆಡ್ ಕಪನೂರ ಇಂಡಸ್ಟ್ರೀಯಲ್ ಏರಿಯಾ ಕಲಬುರಗಿಯಿಂದ ಸರಕು ಮಾಲು (ದಾಲ್) ಲೋಡ ಮಾಡಿಕೊಂಡು ಬೆಂಗಳೂರಿನ ಟಾಟಾ ಕಂಪನಿಗೆ ಅನ್ಲೋಡ ಮಾಡಲು ಲಾರಿ ಚಾಲಕನಾದ ರಹಿಮ್ ಶರೀಫ್ ತಂದೆ ನಿಸಾರ ಅಹಮದ ಶರೀಫ್ ಸಾ|| # 126 11 ನೇ ಕ್ರಾಸ್ ನಾಗಪೂರ ರೋಡ ಎನ್.ಸಿ.ಆರ್ 2ನೇ ಸ್ಟೇಜ್ ಬೆಂಗಳೂರ ಉತ್ತರ, ಮತ್ತು ಕ್ಲೀನರನಾದ ವಿಶ್ವನಾಥ ತಂದೆ ವೀರಸಂಘಪ್ಪ ಕೊಡೆಕಲ್ ಸಾ|| ರಂಗಮಪೇಟ್ ಸುರಪುರ ಇಬ್ಬರು ಹೋಗಿದ್ದರು. ನಂತರ ದಿನಾಂಕ:05/11/2022 ರಂದು ಬೆಳಿಗ್ಗೆ 5:00 ಎ.ಎಂ ಕ್ಕೆ ಲಾರಿ ಕ್ಲೀನರಾದ ವಿಶ್ವನಾಥ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಬೀದರ-ಬೆಂಗಳೂರ ಮುಖ್ಯ ರಸ್ತೆಯ ಸುರಪುರ ದಾಟಿ ಕವಡಿಮಟ್ಟಿಯ ಕೃಷಿ ಸಂಶೋಧನಾ ಕೆಂದ್ರದ ಮುಂದೆ ಇಂದು ಬೆಳಿಗ್ಗೆ 03:30 ಎ.ಎಂ ಕ್ಕೆ ಲಾರಿ ಚಾಲಕನಾದ ರಹಿಮ್ ಶರೀಪ್ ಇತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಒಮ್ಮೆಲೆ ಎಡಕ್ಕೆ ಕಟ್ ಮಾಡಿದ್ದರಿಂದ ನಿಯಂತ್ರಣ ತಪ್ಪಿ ಲಾರಿಯು ಎಡಕ್ಕೆ ಪಲ್ಟಿಯಾಗಿ ಬಿದ್ದು, ಲಾರಿಯ ಎಡಭಾಗಕ್ಕೆ ಜಖಂಗೊಂಡಿರುತ್ತದೆ. ಲಾರಿಯಲ್ಲಿದ್ದ ನನಗೆ ಮತ್ತು ಲಾರಿ ಚಾಲಕನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ ಅಂತಾ ತಿಳಿಸಿದ್ದರಿಂದ ನಾನು ಲಾರಿ ಬಿದ್ದ ಸ್ಥಳಕ್ಕೆ ಬಂದು ನೋಡಿ, ಟಾಟಾ ಕಂಪನಿಯವರ ಜೊತೆ ವಿಚಾರ ಮಾಡಿ ಲಾರಿಯಲ್ಲಿದ್ದ ಸರಕು ಮಾಲನ್ನು ಬೇರೆ ಲಾರಿಯಲ್ಲಿ ಹಾಕಿ ಕಳುಹಿಸಿಕೊಟ್ಟು ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೆನೆ. ಕಾರಣ ಅಶೋಕ ಲ್ಯಾಲೆಂಡ್ ಲಾರಿ ನಂ. ಕೆಎ-04 ಎಬಿ-9621 ನೇದ್ದರ ಚಾಲಕನಾದ ರಹಿಮ್ ಶರೀಫ್ ತಂದೆ ನಿಸಾರ ಅಹಮದ ಶರೀಫ್ ಸಾ|| # 126 11ನೇ ಕ್ರಾಸ್, ನಾಗಪೂರ ರೋಡ, ಎನ್.ಸಿ.ಆರ್ 2ನೇ ಸ್ಟೇಜ್ ಬೆಂಗಳೂರ ಉತ್ತರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿನಂತಿ ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.143/2022 ಕಲಂ. 279 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 08-11-2022 05:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080