ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 07-12-2021

ವಡಗೇರಾ ಪೊಲೀಸ ಠಾಣೆ
138/2021 ಕಲಂ: 447 ಸಂ 34 ಐಪಿಸಿ : ಇಂದು ದಿನಾಂಕ: 06/12/02021 ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಹನುಮನಗೌಡ ಪೋಲಿಸ ಪಾಟೀಲ್, ವ:40, ಜಾ:ಲಿಂಗಾಯತ, ಉ:ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ, ಸಾ: ಕನಾರ್ಟಕ ರಾಜ್ಯ ಅಗ್ನಿಶಾಮಕದಳ & ಮತ್ತು ತುತರ್ು ಸೇವೆಗಳ ಕಾರ್ಯಲಯ ಯಾದಗಿರಿ. ಜಿ:ಯಾದಗಿರಿ ಇವರು ಪೋಲಿಸ ಠಾಣೆಗೆ ಹಾಜರಾಗಿ ನೀಡಿದ ದೂರು ಅಜರ್ಿಯ ಸಾರಾಂಶವೇನೆಂದರೆ ಯಾದಗರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ವಡಗೇರಾ ಪಟ್ಟಣದಲ್ಲಿ ಸವರ್ೆ ನಂಬರ: 581 ರಲ್ಲಿ 02 ಎಕರೆ ಜಮೀನುನ್ನು ನಮ್ಮ ಇಲಾಖೆಯ ಮಾನ್ಯ ಪೋಲಿಸ ಮಹಾ ನಿದರ್ೇಶಕರು ಹಾಗೂ ಮಹಾ ನಿದರ್ೇಶಕರವರು ಕನರ್ಾಟಕ ರಾಜ್ಯ ಅಗ್ನಿ ಶಾಮಕದಳ ಮತ್ತು ತುತರ್ು ಸೇವೆಗಳು ಬೆಂಗಳೂರು ರವರ ಹೆಸರಿನಲ್ಲಿ ಮಾಡಿ ಆದೇಶಿಸಲಾಗಿದೆ. ಆದರೆ ಪ್ರಸುತ್ತ 2021 ನೇ ಸಾಲಿನಲ್ಲಿ ನಮ್ಮ ಇಲಾಖೆಗೆ ನೀಡಿರುವ ಸವರ್ೇ ನಂಬರ: 581 ರ 02 ಎಕರೆ ಜಮೀನಿನಲ್ಲಿ ದಿನಾಂಕ: 17/08/2021 ರಂದು ಹೋಗಿ ಸ್ಥಳ ಪರೀಶಿಲನೆ ಮಾಡಿದಾಗ ಶ್ರೀಮತಿ ರಂಗಮ್ಮ ಗಂಡ ಹಣಮಂತ ಭಜಂತ್ರಿ ಮತ್ತು ಸರಸ್ವತಿ ಗಂಡ ದಶರಥ ಭಜಂತ್ರಿ ಸಾ: ವಡಗೇರಾ ರವರು ಕಾನೂನು ಬಾಹಿರವಾಗಿ ನಮ್ಮ ಇಲಾಖೆಯ ಜಮೀನಿನಲ್ಲಿ ಉಳುಮೆ ಮಾಡಿದ್ದು ಕಂಡು ಬಂದಿರುತ್ತದೆ. ಹಾಗೂ ಸದರಿ ಜಾಗವು ನಮ್ಮ ಇಲಾಖೆಗೆ ಸಂಬಂಧಿಸಿದ ಬಗ್ಗೆ ನಾಮಫಲಕ ಹಾಕಲು ಹೋದಾಗ ವಿರೋಧಿಸಿರುತ್ತಾರೆ. ಸವರ್ೆ ನಂಬರ 581 ರಲ್ಲಿ ನಮ್ಮ ಇಲಾಖೆಗೆ ನೀಡಿರುವ 02 ಎಕರೆ ಜಮೀನಿನಲ್ಲಿ ಶ್ರೀಮತಿ ರಂಗಮ್ಮ ಗಂಡ ಹಣಮಂತ ಭಜಂತ್ರಿ ಮತ್ತು ಸರಸ್ವತಿ ಗಂಡ ದಶರಥ ಭಜಂತ್ರಿ ಸಾ:ವಡಗೇರಾ ರವರು ಉಳುಮೆ ಮಾಡಿದ್ದುನ್ನು ತೆರವುಗೊಳಿಸಿಕೊಡಬೇಕೆಂದು ಇಲ್ಲದಿದ್ದರೆ, ಸದರಿಯವರ ವಿರುದ್ದ ದೂರು ದಾಖಲಿಸಬೇಕೆಂದು ತಮ್ಮಲ್ಲಿ ಕೋರಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ :138/2021 ಕಲಂ: 447 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡೇನು.

 


ಭೀಗುಡಿ ಪೊಲೀಸ್ ಠಾಣೆ
88/2021 ಕಲಂ 78[3] ಕೆಪಿ ಯ್ಯಾಕ್ಟ : ಇಂದು ದಿನಾಂಕ 06/12/2021 ರಂದು 4 ಪಿ.ಎಮ್ ಕ್ಕೆ ಶಿರವಾಳ ಗ್ರಾಮದಕೆನರಾ ಬ್ಯಾಂಕ್ ಹತ್ತಿರಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಫಿಯರ್ಾದಿದಾರರಿಗೆ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿಆರೋಪಿನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿಕರೆದು ಬಾಂಬೆ ಕಲ್ಯಾಣ ಮಟಕಾದೈವದ ಆಟ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬರ್ರಿ ನಂಬರ ಬರೆಯಿಸಿರಿ ಅಂತಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿಆರೋಪಿತನಿಂದ 1) ನಗದು ಹಣರೂಪಾಯಿ 2160=00, 2) ಒಂದು ಮಟಕಾ ನಂಬರ ಬರೆದಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 5.10 ಪಿಎಮ್ ದಿಂದ 6.10 ಪಿಎಮ್ಅವಧಿಯವರೆಗೆ ಜಪ್ತಿಪಡಿಸಿಕೊಂಡು 6.30 ಪಿಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಠಾಣೆಗುನ್ನೆ ನಂ:88/2021 ಕಲಂ 78(3) ಕೆ.ಪಿ. ಎಕ್ಟ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

 

ಗೋಗಿ ಪೊಲೀಸ ಠಾಣೆ
ಗುನ್ನೆ ನಂ: 109/2021 ಕಲಂ: 279 ಐಪಿಸಿ ಸಂಗಡ 187 ಐಎಂವಿ ಯಾಕ್ಟ : ಇಂದು ದಿನಾಂಕ: 06/12/2021 ರಂದು 07.30 ಪಿಎಂ ಕ್ಕೆ ಶ್ರೀ. ಅಂಬ್ರೇಶ ತಂದೆ ಭೀಮಣ್ಣ ಭೂಪತಿ ವಯಾ:50 ಉ: ಕುರಿ ಕಾಯುವದು ಜಾ: ಯಾದವ ಸಾ: ಗೋಗಿ ಕೆ ತಾ:ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಅದರ ಸಾಂರಂಶ ಏನಂದರೆ, ಇಂದು ದಿನಾಂಕ:06/12/2021 ರಂದು ಬೆಳಿಗ್ಗೆ ನಾನು ಮತ್ತು ನನ್ನ ಮಗನಾದ ಗೂಳಪ್ಪ ತಂದೆ ಅಂಬರೇಶ ಭಪತಿ ಇಬ್ಬರು ನಮ್ಮ ಕುರಿಗಳುನ್ನು ಮೇಯಿಸಲು ನಮ್ಮ ಗೋಗಿ ಕೆ ಗ್ರಾಮದ ದೊಡ್ಡ ಕೆಯರ ಕಡೆಗೆ ಹೋಗಿದ್ದೇವು, ಸಾಯಂಕಾಲ 05.30 ಪಿಎಂ ಸುಮಾರಿಗೆ ನಾನು ಮತ್ತು ನಮ್ಮ ಮಗನಾದ ಗೂಳಪ್ಪ ಇಬ್ಬರು ಸಿಂದಗಿ-ಶಹಾಪೂರ ಮುಖ್ಯ ರಸ್ತೆಯ ಕರಕಳ್ಳಿ ಕ್ರಾಸ್ ದಿಂದ ಸ್ವಲ್ಪ ಮುಂದೆ ರಬ್ಬನಳ್ಳಿ ಕಡೆಗೆ ಶಮರ್ೋದ್ದೀನ್ ಸಾಹುಕಾರ ಇವರ ಹೊಲದ ಪಕ್ಕದ ರೋಡಿನ ಸೈಡಿನಲ್ಲಿಂದ ನಮ್ಮ ಕುರಿಗಳನ್ನು ಹೊಡೆದುಕೊಂಡು ನಮ್ಮ ಊರ ಕಡೆಗೆ ಬರುತ್ತಿದ್ದಾಗ, ಎದುರಿನಿಂದ ಅಂದರೆ ಶಹಾಪೂರ ಕಡೆಯಿಂದ ಒಂದು ಕೆಂಪು ಬಣ್ಣದ ಕಾರ್ ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರೋಡಿನ ಸೈಡಿನಲ್ಲಿ ಅಂದರೆ ರೋಡಿನ ಉತ್ತರ ಸೈಡಿನಲ್ಲಿಂದ ಬರುತ್ತಿದ್ದ ನಮ್ಮ ಕುರಿಗಳಿಗೆ ಡಿಕ್ಕಿ ಪಡೆಸಿದ್ದು, ಆಗ ನಾವು ಗಾಬರಿಯಾಗಿ ಚಿರಾಡುತ್ತಾ ಇದ್ದಾಗ ಅಲ್ಲೆ ಕೆಲಸದಿಂದ ಮನೆಗೆ ಹೊರಟಿದ್ದು ಮಲ್ಲಪ್ಪ ತಂದೆ ಚಂದಪ್ಪ ಮಂಟೋಳ್ಳಿ ಮತ್ತು ರಾಘವೇಂದ್ರ ತಂದೆ ಹಣಮಂತ ಹುಣಸಿಮರದ ಇವರು ಕೂಡ ಬಂದು ನೋಡಿದರು. ನಾವು ಎಲ್ಲರೂ ಸದರಿ ಅಪಘಾತ ಮಾಡಿದ ಕೆಂಪು ಬಣ್ಣದ ಕಾರ್ ಚಾಲಕಿನಿಗೆ ಕಾರನ್ನು ಸೈಡಿಗೆ ತಗೆದುಕೊಂಡು ನಿಲ್ಲಿಸಲು ಹೇಳಿದೆವು, ಆಗ ಸದರಿ ಕಾರ ಚಾಲಕನು ಕಾರನ್ನು ಸೈಡಿಗೆತೆಗದುಕೊಂಡಂತೆ ಮಾಡಿ ಕಾರನ್ನು ಅತೀವೇಗದಿಂದ ಓಡಿಸಿಕೊಂಡು ಹೋಗಿರುತ್ತಾನೆ. ರಾಘವೇಂದ್ರ ಮತ್ತು ಮಲ್ಲಪ್ಪ ಇವರುಗಳು ಕಾರ ನಂಬರ ನೋಡಿದ್ದು, ಅದರ ನಂಬರ ಕೆಎ-04-ಎಮ್.ಎಲ್-837 ಅಂತಾ ಇತ್ತು, ನಾವು ನಮ್ಮ ಕುರಿಗಳಿಗೆ ನೋಡಿದಾಗ ನಮ್ಮ ನಾಲ್ಕು ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದವು. ಒಂದು ಕುರಿಗೆ 08 ಸಾವಿರದಂತೆ ಒಟ್ಟು 32,000/- ರೂ ಬೆಲೆಬಾಳುವ ನಾಲ್ಕು ಕುರಿಗಳು ಮೃತಪಟ್ಟು ನನಗೆ ಹಾನಿ ಆಗಿರುತ್ತವೆ. ನಾವು ಕಾರ ಕಾಲಕನಿಗೆ ನೋಡಿದ್ದು ಪುನಃ ನೋಡಿದಲ್ಲಿ ಗುರುತಿಸುತ್ತೇವೆ.
ಕಾರನ್ನು ಅತವೇಗ ಮತ್ತು ಅಲಕ್ಷತನದಿಂದ ನಡೆಸಿ ನಮ್ಮ 04 ಕುರಿಗಳಿಗೆ ಡಿಕ್ಕಿ ಪಡಿಸಿ ಕುರಿಗಳು ಸಾಯುವಂತೆ ಅಪಘತಾ ಮಾಡಿ ಕಾರ ನಂ:ಕೆಎ-04-ಎಮ್.ಎಲ್-837 ನೇದ್ದನ್ನು ನಿಲ್ಲಸದೆ ಓಡಿಸಿಕೊಂಡು ಹೋಗಿರುವ ಚಾಲಕನಿಗೆ ಪತ್ತೆ ಮಾಡಿ ಕಾನೂನಿನ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 109/2021 ಕಲಂ,:279 ಐಪಿಸಿ ಮತ್ತು 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 07-12-2021 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080