ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-01-2022

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 03/2022 ಕಲಂ 406. ಐ.ಪಿ.ಸಿ. : ಇಂದು ದಿನಾಂಕ 07/01/2022 ರಂದು 13-00 ಗಂಟೆಗೆ ಪಿಯರ್ಾದಿ ಶ್ರೀ ಚಂದ್ರಶೇಖರ ತಂದೆ ನಾಗಣ್ಣ ದಂಡಿನ ವ|| 46 ವರ್ಷ, ಜಾ|| ಲಿಂಗಾಯತ ಉ|| ವ್ಯಾಪಾರ (ದಂಡಿನ ಮೋಟರ್ಸ್ ಮಾಲಿಕ) ಸಾ|| ಶಹಾಪೂರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶ ವೆನೆಂದರೆ. ನಾನು ಜಾನ್ ಡಿಯರ್ ಟ್ರ್ಯಾಕ್ಟರ್ ಡಿಲರ್ ಇದ್ದು. ಶಹಾಪೂರ ತಾಲೂಕಿನ ರಾಕಂಗೇರಾ ಇಂಡಸ್ಟ್ರೀಯಲ್ ಏರಿಯಾದಲ್ಲಿ ಶೋರೂಂ ಇರುತ್ತದೆ. ದಿನಾಂಕ 19-04-2022 ರಂದು 15-00 ಗಂಟೆಗೆ ಪ್ರತಾಪರೆಡ್ಡಿ ತಂದೆ ಲಿಂಗಾರೆಡ್ಡಿ ಸಾ|| ವದಾವತ ಮಾಗನೂರ ಮಂಡಲ್ ಆದಿವಷ್ಟಾಯವರಮ ವಡವಟ, ಮಹಿಬೂಬ ನಗರ ತೆಲಂಗಾಣ ಇವರು ನಮ್ಮ ಶಹಾಪೂರದ ಟ್ರ್ಯಾಕ್ಟರ್ ಶೋಂ ರೂಂಗೆ ಬಂದು, ತನಗೆ ಜಾನ್ ಡಿಯರ್ ಕಂಪನಿಯ ಟ್ರ್ಯಾಕ್ಟರ್ ಬೇಕಾಗಿದೆ ಅಂತಾ ಹೇಳಿ ನಮ್ಮ ಶೋ ರೂಮನಲ್ಲಿರುವ ಜಾನ್ ಡಿಯರ್ (ಎಔಊಓ ಆಇಇಖಇ) ಕಂಪನಿಯ ಟ್ರ್ಯಾಕ್ಟರ್ ಇಂಜಿನ್ ಸಂಖ್ಯೆ ಕಙ3029ಊ163701 ಚೆಸ್ಸಿ ನಂ 1ಕಙ5075ಇಅಒಂ602547 ನೇದ್ದನ್ನು ಒಟ್ಟು 14,25,000=00 ರೂಗಳ ಶೋ ರೂಂ ಬೆಲೆಗೆ ಖರೀದಿ ಮಾಡಲು ಒಪ್ಪಿಕೊಂಡು ಸದರಿ ಟ್ರ್ಯಾಕ್ಟರ್ ಇಂಜಿನಿಗೆ ಭತ್ತ ಕಟಾವು ಮಾಡುವ ಮಷೀನ್ ಅಳವಡಿಸಿಕೊಡಿ ಅದರ ಖಚರ್ು ಕೊಡುತ್ತೇನೆ ಅಂತಾ ಹೇಳಿದನು. ಅದಕ್ಕೆ ನಾನು ನಮಗೆ ಪರಿಚಯವಿದ್ದ ಕಂಪ್ಲಿಯಲ್ಲಿರುವ ಕಂಪನಿಗೆ ಈ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿರಿ ಅಂತಾ ಹೇಳಿದೆ ಅದಕ್ಕೆ ಪ್ರತಾಪರಡ್ಡಿ ಈತನು ಸದ್ಯ ನಾನು ಟ್ರ್ಯಕ್ಟರ್ ಇಂಜಿನ್ ತೆಗೆದುಕೊಂಡು ಕಂಪ್ಲಿಗೆ ಹೋಗಿಬರುತ್ತೇನೆ ನಂತರ ಎರಡರದು ಫೈನಾನ್ಸ್ ಮಾಡಿ ಹಣ ಸಂದಾಯ ಮಾಡುತ್ತೇನೆ ಅಂತಾ ಹೇಳಿದಾಗ, ಟ್ರ್ಯಾಕ್ಟರ್ನ್ನು ತಾತ್ಕಾಲಿಕ ಪರವಾನಿಗೆಯನ್ನು ಮಾಡುವುದಕಿಂತ ಪೂರ್ವದಲ್ಲಿ ವಾಹನಕ್ಕೆ ಸಂಬಂಧಿಸಿದ ಡಿಲೇವರಿ ವಿವರವನ್ನು ನೀಡಿದ ಮೇರೆಗೆ ಪ್ರತಾಪರಡ್ಡಿ ಸದರಿ ಟ್ರ್ಯಾಕ್ಟರ್ ಇಂಜಿನ್ ತೆಗೆದುಕೊಂಡು ಹೋದನು. ಆ ಸಮಯದಲ್ಲಿ ನಮ್ಮ ಶೋರೂಂನಲ್ಲಿ ಕೆಲಸ ಮಾಡುವ ಮ್ಯಾನೇಜರ್, ವಿರುಪಾಕ್ಷಪ್ಪ ತಂದೆ ರಾಚಪ್ಪ ಸಾ|| ಶಹಾಪೂರ, ಶೇಲ್ಸ್ ಮ್ಯಾನೇಜರ್ ಸಂಗಮೇಶ ತಂದೆ ಶಾಂತಪ್ಪ ಬಿರೆದಾರ ಇದ್ದರು. ನಂತರ 2 ದಿನಗಳ ವರೆಗೆ ನಮಗೆ ಯಾವುದೆ ಮಾಹಿತಿ ಬರದಿದ್ದರಿಂದ ನಾನು ಕಂಪ್ಲೀಯಲ್ಲಿರುವ ಭತ್ತ ರಾಶಿ ಮಷೀನ್ ಕಂಪನಿಗೆ ಫೋನ ಮಾಡಿ ಕೆಳಿದೆನು. ಆಗ ಅವರು ನಿಮ್ಮ ಯಾವುದೆ ಹೋಸ ಟ್ರ್ಯಾಕ್ಟರ್ ಬಂದಿರುವುದಿಲ್ಲಾ ಎಂದು ಹೇಳಿದರು. ಕೂಡಲೆ ನಾನು ಸದರಿ ಪ್ರತಾಪರೆಡ್ಡಿ ರವರ ಮೋ-ನಂ 9908707999 ಇದಕ್ಕೆ ಪೋನ ಮಾಡಿದ್ದು, ಸದರಿ ವ್ಯಕ್ತಿಯು ನಮ್ಮ ಕರೆಯನ್ನು ಸ್ವೀಕರಿಸದೆ ಕಣ್ಣು ತಪ್ಪಿಸಿಕೊಂಡಿರುತ್ತಾನೆ. ಪ್ರತಾಪರೆಡ್ಡಿ ಈತನು ಈ ಮೇಲೆ ಹೆಳಿದ ವಿಳಾಸದಲ್ಲಿ ಇರುವುದಾಗಿ ತಿಳಿಸಿದ್ದು, ಅಲ್ಲಿಗೆ ಹೋಗಿ ವಿಚಾರಿಸಲಾಗಿ ಸದರಿ ವಿಳಾದಲ್ಲಿ ಇರಲಿಲ್ಲಾ. ಈತನ ಬಗ್ಗೆ ಎಲ್ಲಾಕಡೆ ಹುಡುಕಾಡಿದ್ದು, ನಮಗೆ ಸಿಕ್ಕಿರುವುರುದಿಲ್ಲಾ. ಸದರಿ ಪ್ರತಾಪರೆಡ್ಡಿ ತಂದೆ ಲಿಂಗಾರೆಡ್ಡಿ ಇವರು ಟ್ರ್ಯಾಕ್ಟರ್ಗೆ ಬತ್ತ ರಾಶೀ ಮಾಡುವ ಮಷೀನ್ ಅಳವಡಿಸಲು ಕಂಪ್ಲೀಗೆ ತೆಗೆದುಕೊಂಡು ಹೋಗುತ್ತೆನೆ ಅಂತ ಹೇಳಿ ಈ ಮೇಲ್ಕಂಡ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗದೆ ನಮಗೆ ನಂಬಿಕೆ ದ್ರೋಹ ಮಾಡಿ ಹೋಗಿರುತ್ತಾನೆ. ಪ್ರತಾಪರೆಡ್ಡಿ ಇವರು ಇಂದಲ್ಲಾ ನಾಳೆ ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ಕೊಡಬಹುದು ಅಂತ ತಿಳಿದು ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಕಾರಣ ಪ್ರತಾಪರೆಡ್ಡಿ ಈತನು ನನಗೆ ನಂಬಿಸಿ ಈ ಮೇಲ್ಕಂಡ ಟ್ರ್ಯಾಕ್ಟರ್ನ್ನು ತೆಗೆದುಕೊಂಡು ಹೋಗಿ ಹಣ ಕೊಡದೆ ಮತ್ತು ಟ್ರ್ಯಾಕ್ಟರ್ನ್ನು ಕೊಡದೆ ನಂಬಿಕೆ ದ್ರೋಹ ಮಾಡಿರುತ್ತಾನೆ ಸದರಿಯವನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೆಕು ಅಂತ ದೂರು ನಿದ್ದರ ಸಾರಾಂಶದ ಮೇರೆಗೆ ಠಾಣೆ ಗುನ್ನೆ ನಂ 3/2022 ಕಲಂ 406 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂ. 04/2022 ಕಲಂ 75 ಕೆ.ಪಿ ಆಠ್ಟಿ್ : ಇಂದು ದಿನಾಂಕ 07/01/2022 ರಂದು ಮಧ್ಯಾಹ್ನ 14-30 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಬಾಬು ಹೆಚ್.ಸಿ 162 ಶಹಾಪೂರ ಪೊಲೀಸ್ ಠಾಣೆ ಇವರು ಒಂದು ಸಿಲ್ವರ್ ಬಣ್ಣದ ನಂಬರ ಇಲ್ಲದ ಮಾರುತಿ ಸುಜುಕಿ ಸ್ವೀಪ್ಟ್ ಕಾರ್ ಹಾಜರ ಪಡಿಸಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಮಾನ್ಯ ಪಿ.ಐ ಸಾಹೇಬರ ಆದೇಶದ ಮೇರೆಗೆ ಇಂದು ದಿನಾಂಕ 07/01/2022 ರಂದು, ಮುಂಜಾನೆ 09-00 ಗಂಟೆಗೆ ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ 02/2022 ಕಲಂ 366(ಎ) ಐ.ಪಿ.ಸಿ ಪ್ರಕರಣದಲ್ಲಿ ಅಪಹರಣಕ್ಕಿಡಾದ ಕುಮಾರಿ ರೇಣುಕಾ ಇವಳ ಪತ್ತೆಗಾಗಿ ನಾನು ಜೊತೆಯಲ್ಲಿ ಭಾಗಣ್ಣ ಪಿ.ಸಿ 194 ರವರೊಂದಿಗೆ ಪತ್ತೆ ಕುರಿತು ಹೊರಟೆವು. ನೇರವಾಗಿ ದೋರನಹಳ್ಳಿ ಗ್ರಾಮಕ್ಕೆ ಭೇಟಿ ಮಾಡಿ, ಖಾಸ ಪೊಲೀಸ್ ಬಾತ್ಮಿದಾರರಿಗೆ ವಿಚಾರಿಸಿ ಮಾಹಿತಿ ಸಂಗ್ರಹಿಸಿಕೊಂಡು ಇನ್ನೇನು ಬೇರೆ ಊರಿಗೆ ಹೋಗಬೇಕೆನ್ನುವಷ್ಟರಲ್ಲಿ ಮುಂಜಾನೆ 10-10 ಗಂಟೆಯ ಸುಮಾರಿಗೆ ದೋರನಹಳ್ಳಿ ಸೀಮಾಂತರ ಮಹಾಂತೇಶ್ವರ ಗುಡ್ಡದಲ್ಲಿ ಸುಮಾರು 15 ರಿಂದ 20 ದಿನಗಳಾಯಿತು ಒಂದು ಕಾರ್ ನಿಂತಿದೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ನಾನು ಮತ್ತು ಭಾಗಣ್ಣ ಪಿ.ಸಿ ಇಬ್ಬರೂ ದೋರನಹಳ್ಳಿ ಸೀಮಾಂತರದ ಮಹಾಂತೇಶ್ವರ ಗುಡ್ಡದಲ್ಲಿ ಹೋಗಿ ನೋಡಲಾಗಿ, ಒಂದು ಸಿಲ್ವರ ಬಣ್ಣದ ಮಾರುತಿ ಸುಜುಕಿ ಸ್ವೀಪ್ಟ್ ಕಾರ ಇದ್ದು, ನಂಬರ ಇರುವುದಿಲ್ಲ ಮುಂಭಾಗ ಸ್ವಲ್ಪ ಜಖಂಗೊಂಡಿದ್ದು, ಕಾರಿನ ಮುಂಭಾಗದ ಗ್ಲಾಸ್ ಮೇಲೆ ಆಂಗ್ಲ ಭಾಷೆಯಲ್ಲಿ ಖಖ ಅಊಂಓಆ ಃಂ ಏಖಗಕಂ ಅಂತಾ ಬರೆದು ಸ್ಟೀಕರ್ ಅಂಟಿಸಿದ್ದು ಇರುತ್ತದೆ. ಸದರಿ ವಾಹನದ ಅಂ.ಕಿ 50,000 ರೂಪಾಯಿ ಕಿಮ್ಮತ್ತಿನದು ಇರಬಹುದು.ನಂತರ ಮಹಾಂತೇಶ್ವರ ಗುಡ್ಡದ ಮಠದಲ್ಲಿರುವವರಿಗೆ ಮತ್ತು ದೋರನಹಳ್ಳಿ ಗ್ರಾಮದ ಹೊಲಕ್ಕೆ ಹೋಗುವ ಜನರಿಗೆ ಕಾರಿನ್ ಬಗ್ಗೆ ವಿಚಾರಿಸಿದ್ದು, ಸದರಿ ಕಾರ್ ಸುಮಾರು 15 ರಿಂದ 20 ದಿನಗಳಾಯಿತು ಇಲ್ಲೆ ನಿಂತಿದೆ. ಈ ವಾಹನದ ಮಾಲೀಕರು ಯಾರು ಇರುತ್ತಾರೆ ಅಂತಾ ನಮಗೆ ಗೊತ್ತಿರುವುದಿಲ್ಲ ಅಂತಾ ತಿಳಿಸಿದರು. ಸದರಿ ವಾಹನವು ವಾರಸ್ಸುದಾರರು ಇಲ್ಲದ ವಾಹನವಾಗಿದ್ದರಿಂದ ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದುಕೊಂಡು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 04/2022 ಕಲಂ 75 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 

ಹುಣಸಗಿ ಪೊಲೀಸ ಠಾಣೆ
ಗುನ್ನೆ ನಂ: 02/2022 ಕಲಂ:78 (3) ಕೆ.ಪಿ ಯಾಕ್ಟ : ದಿನಾಂಕ:07/01/2022 ರಂದು ಸಾಯಂಕಾಲ 4.15 ಗಂಟೆಯ ಸುಮಾರಿಗೆ ಆರೋಪಿತನು ಚನ್ನೂರ ಕ್ರಾಸ್ ಹತ್ತಿರ ಇರುವ ಬಸ್ ನಿಲ್ದಾಣದ ಹತ್ತಿರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯ ರೊಂದಿಗೆ ದಾಳಿ ಮಾಡಿದ್ದು ಆರೋಪಿತನಿಂದ 1150=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.


.
ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 02/2022 ಕಲಂ: 504, 341, 323, 506 ಸಂ 34 ಐಪಿಸಿ : ಇಂದು ದಿನಾಂಕ:07/01/2022 ರಂದು 4-30 ಪಿಎಮ್ ಕ್ಕೆ ಶ್ರೀಮತಿ ಶರಣಮ್ಮ ಗಂಡ ಸಿದ್ದಪ್ಪ ವ:55ಸಾ:ಹಂಚನಾಳ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ದಿನಾಂಕ:05/01/2022 ರಂದು ಬೆಳಗ್ಗೆ 11:00 ಗಂಟೆ ಸುಮಾರಿಗೆ ಹಂಚನಾಳದಿಂದ ಶಹಾಪೂರಕ್ಕೆ ಬರುವಾಗ ಹಂಚನಾಳ ಬಸ್ಸ್ಟ್ಯಾಂಡನಲ್ಲಿ ಬಸ್ ಮತ್ತು ಅಟೋಗಳು ಇರಲಿಲ್ಲ. ಆದಕಾರಣ ಹಂಚನಾಳದಿಂದ ಹೈಯಾಳಕ್ಕೆ ನಡೆದುಕೊಂಡು ಬರುತ್ತಿದ್ದೆ. ಹಂಚನಾಳ ಒಂದುವರೆ ಕಿ. ಮೀ. ದಾಟಿದ ನಂತರ ಅಲ್ಲಿ ಆಗ ನನ್ನ ಜೊತೆ ಯಾರೂ ಇರಲಿಲ್ಲ. ನಾನು ಒಬ್ಬಳೆ ಇದ್ದೆ ಅಲ್ಲಿಗೆ ನನ್ನ ತಮ್ಮಂದಿರಾದ 1) ಅಯ್ಯಪ್ಪ ತಂದೆ ರಾಯಪ್ಪ ಜಂಗಳಿ, 2) ಶರಣಪ್ಪ ತಂದೆ ರಾಯಪ್ಪ ಜಂಗಳಿ ಬಂದು ಅಕ್ರಮವಾಗಿ ತಡೆದು ಒಮ್ಮಿಂದೊಮ್ಮೆಲೆ ಎಲೇ ಸೂಳಿ, ಬಸವಿ, ರಂಡಿ ಹಾಗೂ ಭೊಸುಡಿ ಎಂದವರೆ ಕೈ ಹಿಡಿದು ಕಪಾಳಕ್ಕೆ ಹಾಗೂ ಬೆನ್ನಿಗೆ ಮತ್ತು ಕೂದಲೂ ಹಿಡಿದು ಜಗ್ಗಾಡಿ ಹೊಡೆದರು ಮತ್ತು ಕೈಯಲ್ಲಿ ಕಲ್ಲುಗಳು ಹಿಡಿದು ಹೊಡೆಯುವಾಗ ತಪ್ಪಿಸಿಕೊಂಡು ಓಡಿ ಹೋಗುವಾಗ ಎಲೆ ಬೊಸುಡಿ ಎಲ್ಲಿಗೆ ಹೊಗುತ್ತಿ ನೀನು ಶಹಾಪೂರಕ್ಕೆ ಹೊಲದ ಪಾಲ ಕೆಳಲಾಕ ಬರುತ್ತಿ ಏನು ಅಂತಾ ಅವಾಚ್ಯವಾಗಿ ಬೈಯುತ್ತಾ ಮತ್ತು ನಿನ್ನ ಮಗಳ ಜೊತೆ ಬಾಳಲಿಕ್ಕೆ ಆಗುವುದಿಲ್ಲ. ತಾಳಿ ಹರಿದು ಕೊಡು ಅಂತಾ ಅಯ್ಯಪ್ಪ ಅಂದು ಇಬ್ಬರೂ ಸೇರಿ ಹೊಡೆಯಲು ಮೈಮೇಲೆ ಬಂದರು. ಅವರ ಜೊತೆಯಲ್ಲಿ ಬಂದಿದ್ದ 1) ಯಲ್ಲಪ್ಪ ತಂದೆ ಹೈಯಾಳಪ್ಪ, 2) ಮಲ್ಲಪ್ಪ ಜಂಗಳಿ ತಂದೆ ಭೀಮಪ್ಪ ದನಕಾಯಿ ಇವರಿಬ್ಬರೂ ಇವರು ಹೊಡೆಯುವುದನ್ನು ಬಿಡಿಸಿರುತ್ತಾರೆ. ಇವರು ಇರಲಿಲ್ಲ ಎಂದರೆ ನನಗೆ ಅಲ್ಲಿಯೇ ಕಲ್ಲು ಎತ್ತಿ ಹಾಕಿ ಸಾಯಿಸುತ್ತಿದ್ದರು. ಇವರಿಬ್ಬರೂ ಜಗಳ ಬಿಡಿಸಿದ್ದು ಇರುತ್ತದೆ. ನಂತರ ನನ್ನ ಅಣ್ಣತಮ್ಮಂದಿರು ರವಿವಾರ ಬಂದು ನಿನಗೆ ನಿನ್ನ ಮಗಳಿಗೆ ಮತ್ತು ನಿನ್ನ ಮಗನಿಗೆ ಜೀವ ಹೊಡೆದು ಖಲಾಸ ಮಾಡುತ್ತೇವೆ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಆದಕಾರಣ ಮಾನ್ಯರವರಲ್ಲಿ ವಿನಂತಿಸಿಕೊಳ್ಳುವುದೇನಂದರೆ ನನಗೆ ನನ್ನ ಅಣ್ಣತಮ್ಮಂದಿರೆಲ್ಲರೂ ಸೇರಿ ಒಂದು ವರ್ಷದ ಹಿಂದೆ ಮಳೆ ಇರುವ ಚಪ್ಪಲಿಯಿಂದ ತುಟಿಗೆ ಹೊಡೆದು ಗಂಭಿರ ಗಾಯ ಮಾಡಿರುತ್ತಾರೆ. ಆದ ಕಾರಣ ಸದರಿಯವರಿಂದ ನನಗೆ ಮತ್ತು ಕುಟುಂಬದವರಿಗೆ ಜೀವ ಭಯ ಇರುತ್ತದೆ. ಆದ್ದರಿಂದ ಮಾನ್ಯರವರು ಸದರಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 02/2022 ಕಲಂ: 504, 341, 323, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 03/2022 ಕಲಂ: 143, 147, 341, 427, 504, 506 ಸಂಗಡ 149 ಐಪಿಸಿ : ದಿನಾಂಕಃ 07/01/2022 ರಂದು 08:30 ಪಿ.ಎಂ ಕ್ಕೆ ಶ್ರೀ ಪರಶುರಾಮ ತಂದೆ ರಾಮಣ್ಣ ಬಡಿಗೇರ ವ|| 32 ವರ್ಷ ಜಾ|| ಕಬ್ಬಲಿಗ ಸಾ|| ವೆಂಕಟಾಪೂರ ಸುರಪುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಒಂದು ದೂರು ಅಜರ್ಿ ನೀಡಿದ್ದು, ಅಜರ್ಿ ಸಾರಾಂಶವೇನೆಂದರೆ, ನಾನು ಸುಮಾರು 5 ವರ್ಷಗಳಿಂದ ನಮ್ಮೂರ ಅಕ್ಷರಾ ಪಬ್ಲಿಕ್ ಶಾಲೆಯ ಬಸ್ ಚಾಲಕನಾಗಿ ಕೆಲಸ ಮಾಡಿಕೊಂಡು ಇರುತ್ತೇನೆ. ದಿನಾಂಕ: 03/01/2022 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಮ್ಮ ಗ್ರಾಮದ ಅಂಬೀಗರ ಚೌಡಯ್ಯನ ಕಟ್ಟೆಯ ಹತ್ತಿರ ನಮ್ಮೂರ ವಿಶ್ವರಾಜ ದೊಡ್ಡಮನಿ ಈತನೊಂದಿಗೆ ಸುರಪುರದ ಬಿಚಗತಕೇರಿಯ ಮೌನೇಶ, ಕಾಮಣ್ಣ ಮತ್ತು ಗೂಡಿಹಾಳ (ಜೆ) ಗ್ರಾಮದವರು ಬಾಯಿ ಮಾತಿನ ಜಗಳವಾಡುತ್ತಿದ್ದಾಗ ನಾನು ಜಗಳವನ್ನು ಬಿಡಿಸಲು ಹೋಗಿದ್ದು ಇರುತ್ತದೆ. ಆ ಸಮಯದಲ್ಲಿ ಮೌನೇಶ ಮತ್ತು ಕಾಮಣ್ಣ ಇವರು ನನ್ನೊಂದಿಗೆ ಬಾಯಿ ಮಾತಿನ ತಕರಾರು ಮಾಡಿದ್ದರು. ಹೀಗಿದ್ದು ಇಂದು ದಿನಾಂಕ: 07/01/2022 ರಂದು ಸಾಯಂಕಾಲ 5 ಗಂಟೆಗೆ ಶಾಲೆ ಬಿಟ್ಟ ತಕ್ಷಣ ಮಕ್ಕಳನ್ನು ಶಾಲೆ ಬಸ್ ನಂಬರ್ ಕೆಎ-33. ಬಿ-0422 ನೇದ್ದರಲ್ಲಿ ಕೂಡಿಸಿಕೊಂಡು ನಾನು ಮತ್ತು ಬಸ್ಸಿನ ಕ್ಲೀನರ್ ದೇವರಾಜ ತಂದೆ ಗಿರೆಪ್ಪ ಲಗಳೇರ ಸಾ|| ಕವಡಿಮಟ್ಟಿ ಇಬ್ಬರು ಕವಡಿಮಟ್ಟಿಯಿಂದ ಸುರಪುರ ನಗರದ ಕುಂಬಾರಪೇಠ, ಜೈನ್ ಮಂದಿರ, ಎಸ್.ಬಿ.ಐ. ಬ್ಯಾಂಕ್, ದರಬಾರ ರೋಡ್, ಗಾಂಧಿಚೌಕ್, ಫಕೀರ ಓಣಿಯ ವಿದ್ಯಾಥರ್ಿಗಳನ್ನು ಬಿಟ್ಟು ಮರಳಿ ಸಾಯಂಕಾಲ 5-45 ಗಂಟೆ ಸುಮಾರಿಗೆ ಕವಡಿಮಟ್ಟಿಗೆ ಹೋಗುವ ಕುರಿತು ವೆಂಕಟಾಪೂರ ದಿಬ್ಬಿ ಇಳಿಜಾರಿನಲ್ಲಿ ನಿದಾನವಾಗಿ ಹೋಗುತ್ತಿರುವಾಗ ಮೌನೇಶ ಬಿಚಗತಕೇರಿ, ಕಾಮಣ್ಣ ಬಿಚಗತಕೇರಿ ಆಟೋ ಚಾಲಕ ಹಾಗೂ ಸಂಗಡ ಇತರೆ 10-12 ಜನರೆಲ್ಲರು ಗುಂಪುಕಟ್ಟಿಕೊಂಡು ಏಕಾಏಕಿ ರೋಡಿನ ಮೇಲೆ ಬಂದವರೇ ನಾನು ಚಲಾಯಿಸುತ್ತಿದ್ದ ಬಸಗೆ ತಡೆದು ನಿಲ್ಲಿಸಿ, ಎಲೇ ಪರಶ್ಯಾ ಸೂಳೇ ಮಗನೇ, ನಿನ್ನದು ಬಹಳ ಆಗಿದೆ, ಅವತ್ತು ಜಗಳ ಬಿಡಿಸುತ್ತಿ ಏನಲೇ ರಂಡಿ ಮಗನೇ ಅಂತಾ ಅವಾಚ್ಯವಾಗಿ ಬೈದವರೇ, ಅವರಲ್ಲಿಯ ಮೌನೇಶ ಈತನು ಅಲ್ಲೇ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನಗೆ ಹೊಡೆಯಲು ಬೀಸಿದಾಗ ಆ ಕಲ್ಲು ಬಸ್ನ ಎಡಗಡೆ ಕಿಟಿಕಿಯ ಗ್ಲಾಸಿಗೆ ಬಡೆದು ಗ್ಲಾಸ್ ಒಡೆದಿರುತ್ತದೆ. ಆಗ ನಾನು ಜೀವಕ್ಕೆ ಅಂಜಿ ಬಸ್ಸನ್ನು ಚಾಲು ಮಾಡಿಕೊಂಡು ಹೋಗುತ್ತಿದ್ದಾಗ ಎಲ್ಲರು ಲೇ ಪರಶ್ಯಾ ಇವತ್ತು ನೀನು ಉಳಿದಿದಿ, ಇನ್ನೊಮ್ಮೆ ಈ ದಾರಿಗೆ ಬಂದಾಗ ನಿನ್ನನ್ನು ಬಸ್ ಸಮೇತ ಸುಟ್ಟುಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದರು. ನಂತರ ನಾನು ಜೀವದ ಭಯದಿಂದ ಬಸ್ ಸಮೇತ ಠಾಣೆಗೆ ಬಂದು ಈ ದೂರು ಅಜರ್ಿಯನ್ನು ನೀಡಿದ್ದು ಇರುತ್ತದೆ. ಕಾರಣ ಅಕ್ರಮ ಕೂಟ ರಚಿಸಿಕೊಂಡು ಬಂದು ಬಸ್ಸಿಗೆ ತಡೆದು, ನನಗೆ ಅವಾಚ್ಯವಾಗಿ ಬೈದು, ಬಸ್ಸಿಗೆ ಕಲ್ಲಿನಿಂದ ಹೊಡೆದು, ಕಿಟಕಿಯ ಗ್ಲಾಸ್ ಹಾನಿ ಮಾಡಿ, ಜೀವದ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 03/2022 ಕಲಂ: 143, 147, 341, 427, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

 

ಯಾದಗಿರಿ ಪೊಲೀಸ್ ಠಾಣೆ
ಗುನ್ನೆ ನಂ: 01/2022 ಕಲಂ.279,337, ಐ.ಪಿ.ಸಿ. : ಇಂದು ದಿನಾಂಕ 07/01/2022 ರಂದು ಬೆಳಗ್ಗೆ 10-00 ಗಂಟೆಗೆ ಗಾಯಾಳು ಫಿರ್ಯಾಧಿದಾರಳಾದ ಶ್ರೀ ಮತಿ ಜ್ಯೊತಿ ಗಂಡ ಸೊಮಶೇಖರ ಮಠಪತಿ ವಯಾಃ36 ವರ್ಷ ಜಾಃಜಂಗಮ ಉಃಮನೆ ಕೆಲಸ ಸಾಃಶಕ್ತಿನಗರ ರಾಯಚೂರ ತಾಃಜಿ:ರಾಯಚೂರ. ಇವರ ಠಾಣೆಗೆ ಹಾಜರಾಗಿ ಹೇಳಿಕೆಯನ್ನು ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಮನೆ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ಹೀಗಿರುವಾಗ ನಿನ್ನೆ ದಿನಾಂಕ 06/01/2022 ರಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಮಾವನವರಾದ ಶ್ರೀ ನಾಗಯ್ಯ ಸ್ವಾಮಿ,ಅತ್ತೆಯವರಾದ ಶ್ರೀ ಮತಿ ಸಿದ್ದಮ್ಮ,ನನ್ನ ಮಗನಾದ ಪ್ರತಿಕ ಮಠಪತಿ ನಮಗೆ ಪರಚಯಸ್ಥರಾದ ಶ್ರೀ ಮತಿ ನಾಗಮ್ಮ,ಹಾಗೂ ನಮ್ಮ ಚಾಲಕನಾದ ಶ್ರೀ ಮಲ್ಲಿಕಾಜರ್ುನ ನಾವೇಲ್ಲರೂ ಕೂಡಿಕೊಂಡು ನಮ್ಮ ತಮ್ಮನ ಮಗಳ ಜವಳದ ಕಾರ್ಯಕ್ರಮವಿದ್ದ ಪ್ರಯುಕ್ತ ಕಲಬುಗರ್ಿ ಜಿಲ್ಲೆಯ ಚಿಣಮಗೇರಿಗೆ ನಮ್ಮ ಕಾರ ನಂ ಕೆ.ಎ-36 ಎಮ್-9610 ನೇದ್ದರಲ್ಲಿ ಕುಳಿತುಕೊಂಡು ಚಿಣಮಗೇರಿಗೆ ಹೋಗಿ ಮರಳಿ ಯಾದಗಿರ ಮಾರ್ಗವಾಗಿ ಪುನಃ ನಮ್ಮ ಊರಾದ ಶಕ್ತಿ ನಗರಕ್ಕೆ ಹೊಗುತ್ತಿರುವಾಗ ಸಾಯಂಕಲ 7:30 ಗಂಟೆಯ ಸುಮಾರಿಗೆ ರಾಮಸಮುದ್ರ ಗ್ರಾಮದಲ್ಲಿನ ಮೆಲುಸೇತುವೇ ಮೇಲೆ ಮುಖಾಂತರ ಹೋಗುತ್ತಿರುವಾಗ ಗುರಮಿಠಕಲ್ ಮಾರ್ಗವಾಗಿ ಮೆಲಸೆತುವೇಗೆ ಕೂಡುವಂತ ರಸ್ತೆಯ ಮೇಲೆ ಒಂದು ಸಕರ್ಾರಿ ಬಸ್ ನಂ,ಕೆ.ಎ.-33 ಎಫ್-0126 ನೆದ್ದರ ಚಾಲಕನು ರಸ್ತೆ ಕ್ರಾಸ ಮಾಡುವಾಗ ಒಮ್ಮೆಲೆ ನಮ್ಮ ಕಾರಿನ ಎದುರಿಗೆ ಬಂದದ್ದರಿಂದ ನಾವು ಪ್ರಯಾಣಿಸಿಕೊಂಡು ಹೊಗುತ್ತಿರುವ ಕಾರಿನ ಚಾಲಕನು ಕೂಡಾ ಅತಿ ವೆಗವಾಗಿ ಚಲಾಯಿಸಿಕೊಂಡು ಹೊಗುತ್ತಿದ್ದನು ಈ ಇಬ್ಬರೂ ಅತಿ ವೇಗ ಮತ್ತು ನೀಷ್ಕಾಳಿಜಿಯಿಂದ ಮೇಲ ಸೆತುವೇ ಮೇಲೆ ನಾವು ಪ್ರಯಾಣಿಸುತ್ತಿರುವ ಕಾರು ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ಇರುತ್ತದೆೆ. ಸದರಿ ಅಪಘಾತದಲ್ಲಿ ನನ್ನ ಮೂಗಿಗೆ ಕಾರಿನ ಮುಂದಿನ ಸಿಟು ಬಡೆದು ಗುಪ್ತಗಾಯವಾಗಿರುತ್ತದೆ ನಮ್ಮ ಮಾವನವರಾದ ನಾಗಯ್ಯ ಸ್ವಾಮಿ ತಂದೆ ಶರಣಯ್ಯ ಸ್ವವಾಮಿ ಮಠಪತಿ ಇವರಿಗೆ ಬಲಭುಜಕ್ಕೆ ಗುಪ್ತಗಾಯ ಮತ್ತು ರಕ್ತ ಗಾಯವಾಗಿರುತ್ತದೆ,ಎಡಗಣ್ಣಿನ ಉಬ್ಬಿನ ಮೇಲೆ ರಕ್ತ ಗಾಯವಾಗಿರುತ್ತದೆ,ಬಲಗಡೆ ಟೊಂಕಕ್ಕೆ ಭಾರಿ ಗುಪ್ತಗಾಯವಾಗಿರುತ್ತದೆ,ನನ್ನ ಮಗನಾದ ಪ್ರತೀಕ ತಂದೆ ಸೊಮಶೇಖರ ಇತನಿಗೆ ಮುಖದ ಮೇಲೆ ತರಚಿದ ಗಾಯಗಳಾಗಿರುತ್ತದೆ,ನಮ್ಮ ಅತ್ತೆಯಾದ ಶ್ರೀಮತಿ ಸಿದ್ದಮ್ಮ ಗಂಡ ನಾಗಯ್ಯ ಇವರಿಗೆ ತಲೆಗೆ ತರಚಿದ ಗಾಯಗಳಾಗಿರುತ್ತದೆ,ಶ್ರೀ ಮಲ್ಲಿಕಾಜರ್ುನ ತಂದೆ ವೀರಣ್ಣ ತಡಿಬಿಡಿಯರ ಇವರಿಗೆ ಬಲಗಡೆ ಎದೆಗೆ ಗುಪ್ಪಗಾಯ ವಾಗಿರುತ್ತದೆ,ಕುತ್ತಿಗೆ ಬಾಗಕ್ಕೆ ಗುಪ್ಪ ಗಾಯವಾಗಿರುತ್ತದೆ,ಶ್ರೀಮತಿ ನಾಗಮ್ಮ ಗಂಡ ಮಲ್ಲಿಕಾಜರ್ುನ ಇವರಿಗೆ ಬಲ ಕೈಗೆ ಗುಪ್ತ ಗಾಯವಾಗಿರುತ್ತದೆ.. ಸದರಿ ಅಪಘಾತವು ಸಾಯಂಕಾಲ 7-30 ಗಂಟೆಯ ಸುಮಾರಿಗೆ ರಾಮಸಮುದ್ರ ಮೆಲ ಸೇತುವೆ ಮೆಲೆ ರಸ್ತೆಯ ಮೇಲೆೆ ನಡೆದಿರುತ್ತದೆ. ಸದರಿ ಅಪಘಾತದ ವಿಷಯವನ್ನು ತಿಳಿದು ಯಾದಗಿರ ಗ್ರಾಮೀಣ ಠಾಣೆಯ ಪೊಲಿಸರು ಸ್ಥಳಕ್ಕೆ ಬಂದು ತಮ್ಮ ಸಕರ್ಾರಿ ಜೀಪ ನಲ್ಲಿ ಹಾಕಿ ಕೊಂಡು ನಮಗೆ ಯಾದಗಿರ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಉಪಚಾರ ಕುರಿತು ತಂದು ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಬಸ್ ಚಾಲಕ ಮತ್ತು ಪ್ರಯಾಣಿಕರಿಗೆ ಯಾವುದೆ ರೀತಿಯಾದ ಗಾಯಗಳು ಆಗಿರುವುದಿಲ್ಲ ಸದರಿ ಅಪಘಾತ ಪಡಿಸಿದ ಬಸ್ ನಂ ಕೆಎ-33 ಎಫ್-0126 ನೇದ್ದರ ಬಸ ಚಲಾಲಕನ ಹೆಸರು ವೀರಯ್ಯ ತಂದೆ ವೀರಭದ್ರಯ್ಯ ಸ್ವಾಮಿ ಯಾದಗಿರ ಅಂತಾ ತಿಳಿದು ಬಂದಿರುತ್ತದೆ. ಸದರಿ ವಿಷಯದ ಬಗ್ಗೆ ನಾವು ನಮ್ಮ ಹಿರಿಯರ ಜೊತೆಗೆ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ 07-01-2022 ರಂದು ಬೆಳಗ್ಗೆ 10-00 ಗಂಟೆಗೆ ಠಾಣೆಗೆ ಬಂದಿದ್ದು. ಸದರಿ ಅಪಘಾತ ಮಾಡಿದ ಚಾಲಕರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ ಅಂತಾ ಹೇಳಿಕೆ ನೀಡಿದ್ದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 01/2022 ಕಲಂ 279, 337 ಐಪಿಸಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 3/2022 ಕಲಂ.380,457, ಐ.ಪಿ.ಸಿ. : ಇಂದು ದಿನಾಂಕ 07/01/2022 ರಂದು 10:30 ಪಿ.ಎಮ್ ಸುಮಾರಿಗೆ ಫಿರ್ಯಾಧಿದಾರರಾದ ಶ್ರೀ ವಿಶ್ವರಾಧ್ಯ ತಂದೆ ಭೀಮರಾಯ ಸಕ್ರೆರ ವ:30 ಜಾ:ದಾಸರ ಉ:ಕೂಲಿ ಕೆಲಸ ಸಾ:ರಾಮಸಮುದ್ರ ತಾ:ಜಿ:ಯಾದಗಿರಿ ಅಜರ್ಿ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು.
ಹೀಗಿರುವಾಗ ದಿನಾಂಕ:24/12/2021 ರಂದು ನಮ್ಮ ತಾಯಿಯವರಿಗೆ ಹೃದಯ ಸಂಬಂದಿ ಕಾಯಿಲೆ ಇದ್ದ ಕಾರಣ ಬೇಂಗಳೂರಿನ ಜಯದೇವ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೊಗಿದ್ದು ಇರುತ್ತದೆ.ನಾನು ನನ್ನ ಹೆಂಡತಿಯನ್ನು ನಮ್ಮ ಮಾವನವರ ಮನೆಯಲ್ಲಿ ಬಿಟ್ಟು ನಮ್ಮ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೊಗಿದ್ದು ಅಲ್ಲಿ ನನ್ನ ತಾಯಿಗೆ ಹೃದಯ ಶಸ್ತ್ರ ಚಿಕಿತ್ಸೆಯಾದ ಕಾರಣ ನಾನು ನನ್ನ ತಾಯಿಯ ಜೊತೆಗೆ ಅಲ್ಲಿಯ ಇದ್ದೆನು.ದಿನಾಂಕ.31/12/2021 ರಂದು ನಮ್ಮ ಗ್ರಾಮದವರಾದ ಶ್ರೀ ಶ್ರೀನಿವಾಸ ತಂದೆ ಚಿದಾನಂದ ದಾಸರ ಇವರು ಪೊನ ಕರೆಮಾಡಿ ತಿಳಿಸಿದ್ದೆನೆಂದರೆ ನಿಮ್ಮ ಮನೆಯ ಬಾಗಿಲು ಯಾರೋ ತೆರೆದಿರುತ್ತಾರೆ ಅಂತಾ ತಿಳಿಸಿದನು.ನಾನು ತಕ್ಷಣ ನಮ್ಮ ಚಿಕ್ಕಪ್ಪನಾದ ವೇಂಕೊಬಾ ತಂದೆ ರಾಮಕೃಷ್ಣ ದಾಸರ ಇವರಿಗೆ ತಿಳಿಸಿದ್ದು ನಮ್ಮ ಚಿಕ್ಕಪ್ಪನು ನಮ್ಮ ಮನೆಗೆ ಹೊಗಿ ನೊಡಲಾಗಿ ಮನೆಯಲ್ಲಿನ ಸಾಮಾನುಗಳು ಮತ್ತು ಬಟ್ಟೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು,ಮನೆಯಲ್ಲಿರುವ ಕಬ್ಬಿಣದ ಅಲಮರಿ ಕೀಲಿ ಮುರಿದಿದ್ದು ಅದರಲ್ಲಿಯಾ ಸಾಮಾನುಗಳಾದ 1)ಬೋರಮಳ ಸರ ಅ.ಕಿ.10,000/-ರೂ.2)ಕರಳಿ ಸರ ಅ.ಕಿ.10,000/-ರೂ.3)ಫ್ರಿಡ್ಜ್(ಎಲ್.ಜಿ.) ಅ.ಕಿ.5000/-ರೂ.4)ಕಲರ್ ಟಿ.ವಿ. ಅ.ಕಿ.1000/-ರೂ. 5)ಸಿಲಿಂಡರ ಟ್ಯಾಂಕ್ ಅ.ಕಿ.1000/- ರೂ. 6)ಗ್ಯಾಸ್ ಒಲೆ ಅ.ಕಿ.1000/-ರೂ.7)ಹೊಂ ಥೀಯಟರ ಅ.ಕಿ.1000/-ರೂ.8)ಕಬ್ಬಿಣದ ಪೆಟ್ಟಿಗೆ ಅ.ಕಿ.100/-ರೂ 9)ಬಟ್ಟೆ ಇಡುವ ಬಾಸ್ಕೆಟ್ ಅ.ಕಿ.50/-ರೂ 10) ಇಸ್ತ್ರಿ ಪೆಟ್ಟಿಗೆ.ಅ.ಕಿ.100/-ರೂ. ಹಿಗೆ ಒಟ್ಟು 29250/- ರೂಗಳ ಕಿಮ್ಮತ್ತಿನ ಸಾಮಾನುಗಳು ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಮನೆಯ ಬಿಗ ಮುರಿದು ಮತ್ತು ಅಲಮರಿ ಕಿಲಿ ಮುರಿದು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ತಿಳಿಸಿದರು ಸದರಿ ಘಟನೆಯು ದಿನಾಂಕ:- 31/12/2021 ರ ರಾತ್ರಿಯಿಂದ 01/01/2022ರ ಬೆಳಿಗ್ಗೆ 09:30ರ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ.ಅಂತಾ ತಿಳಿಸಿದರು ನಾನು ಬೆಂಗಳೂರಿನಿಂದ ಬಂದು ನಾನು ಮತ್ತು ಹೆಂಡತಿಯಾದ ಭೀಮಭಾಯಿ,ಮತ್ತು ನಮ್ಮ ಅತ್ತೆಯಾದ ಸರಸ್ವತಿ ಗಂಡ ಚಂದಪ್ಪ ದಾಸರ ನಾವೇಲ್ಲರೂ ಕೂಡಿಕೊಂಡು ನೊಡಲಾಗಿ ಈ ಮೇಲಿನಂತೆ ವಸ್ತುಗಳು ನಮ್ಮ ಮನೆಯಿಂದ ಕಳ್ಳತನವಾಗಿರುತ್ತವೆ. ಆದ್ದರಿಂದ ಕಳ್ಳತನವಾದ ಈ ಮೇಲ್ಕಾಣಿಸಿದ ಸಾಮಾನುಗಳನ್ನು ನಮಗೆ ಹುಡುಕಿ ಕೊಟ್ಟು, ಕಳ್ಳತನ ಮಾಡಿಕೊಂಡು ಹೋದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ವಿನಂತಿ. ಈ ಬಗ್ಗೆ ನಾನು ನಮ್ಮ ಮನೆಯವರ ಜೊತೆಗೆ ಮತ್ತು ನಮ್ಮ ಸಂಬಂದಿಕರ ಹತ್ತಿರ ಚಚರ್ೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಅಂತಾ ಒಂದು ಗಣಕ ಯಂತ್ರದಲ್ಲಿ ಟೈಪ್ ಮಾಡಿದ ಅಜರ್ಿ ನೀಡಿದ್ದು ಅದರ ಸಾರಾಂಶದ ಮೇಲೀಂದ ಠಾಣೆ ಗುನ್ನೆ ನಂ.3/2022 ಕಲಂ.457,380 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 


ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ:03/2022 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ.07/01/2022 ರಂದು 5-45 ಪಿಎಂಕ್ಕೆ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 07/01/2022 ರಂದು 3-15 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಹತ್ತಿಕುಣಿ ಕ್ರಾಸಿನಲ್ಲಿ ಚೌದ್ರಿ ಹೋಟೇಲ್ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರೂ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಪ್ರಕಾಶ ಎ.ಎಸ್.ಐ, ಜಗನ್ನಾಥರಿಡ್ಡಿ ಹೆಚ್.ಸಿ. 10, ಅಬ್ದುಲ ಬಾಷಾ ಪಿಸಿ-237, ರವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 4-30 ಪಿಎಂಕ್ಕೆ ದಾಳಿ ಮಾಡಿ ಆರೋಪಿತರಿಗೆ ಹಿಡಿದು ವಿಚಾರಿಸಲು ಆರೋಪಿತರಾದ 1) ಕಾಶೀನಾಥ ತಂದೆ ದೇವಿಂದ್ರಪ್ಪ ಈರಣ್ಣೋರ ವಃ52 ಜಾಃ ಕಬ್ಬಲಿಗ ಉಃ ಕೂಲಿಕೆಲಸ ಸಾಃ ಲಕ್ಷೀ ನಗರ ಯಾದಗಿರಿ 1) ನಗದು ಹಣ 4530/-ರೂ. 2) ಒಂದು ಮಟಕಾ ಚಿಟಿಗಳು ಅ.ಕಿ.00=00 ರೂ. 3) ಒಂದು ಬಾಲಪೆನ್ ಅ.ಕಿ.00=00 ರೂ. ನೇದ್ದವುಗಳು ಸಿಕ್ಕಿದ್ದು (2) ವಾಸುದೇವ ತಂದೆ ಲಕ್ಷ್ಮಣರಾವ ಸತವಾಸೆ ವಃ50 ಜಾಃ ಮರಾಠ ಉಃ ಕಾರಪೆಂಟರ ಕೆಲಸ ಸಾಃ ಹನುಮಾನ ನಗರ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ 1) ನಗದು ಹಣ 7470/-ರೂ. 2) ಒಂದು ಮಟಕಾ ಚಿಟಿಗಳು ಅ.ಕಿ.00=00 ರೂ. 3) ಒಂದು ಬಾಲಪೆನ್ ಅ.ಕಿ.00=00 ರೂ. ನೇದ್ದವುಗಳು ಸಿಕ್ಕಿದ್ದು ಹಿಗೇ ಒಟ್ಟು 1) ನಗದು ಹಣ 12,000/-ರೂ. 2) ಎರಡು ಮಟಕಾ ಚೀಟಿ 3) ಎರಡು ಬಾಲ ಪೆನ್ ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ.07/01/2022 ರಂದು 4-30 ಪಿಎಂ ದಿಂದ 5-30 ಪಿಎಂ ದವರೆಗೆ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಇಬ್ಬರೂ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ 5-45 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.03/2022 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ: 1/2022 ಕಲಂ: 379 ಕಅ : ದಿನಾಂಕ:07/01/2022 ರಂದು ಆರೋಪಿತನು ಖಘಂಖಂಎ 744 ಇ ಕಂಪನಿ ಟ್ರ್ಯಾಕ್ಟರ್ ಇದ್ದು ಅದರ ನೊಂದಣಿ ನಂಬರ್ ಏಂ 28 ಖಿಅ 1114 ಇಂಜಿನ್ ನಂ.43.1024/ಖಖಿಉ13340 ಚೆಸ್ಸಿ ನಂ.ತಿಥಛಿರ42606002275 ಇದ್ದು ಅದಕ್ಕೆ ಜೋಡಿಸಿದ ಎರಡು ಟೇಲರ್ಗಳಿದ್ದು ಒಂದರ ಟೇಲರ್ ನೊಂದಣಿ ನಂಬರ ಏಂ 28 ಖಿಅ 8740 ಚೆಸ್ಸಿ ನಂಬರ್: 890 ಮತ್ತು ಇನ್ನೊಂದು ಟ್ರೇಲರ್ಗೆ ಚಸ್ಸಿ ನಂಬರ್: ಕ042 ನೊಂದಣಿ ನಂಬರ್ ಇರುವುದಿಲ್ಲ. ಅದಕ್ಕೆ ಜೋಡಿಸಿದ ಟ್ರೇಲರ್ ನೇದ್ದರಲ್ಲಿ ಸರಕಾರಕ್ಕೆ ಯಾವುದೆ ರಾಜಧನ (ರಾಯಲ್ಟಿ) ಭರಿಸದೆ ಅಕ್ರಮ ಮರಳು ಗಣಿಗಾರಿಕೆಯಿಂದ ಮರಳನ್ನು ಕಳ್ಳತನ ಮಾಡಿಕೊಂಡು ಟ್ರ್ಯಾಕ್ಟರಗಳಲ್ಲಿ ಸಾಗಿಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿವರೊಂದಿಗೆ ದಾಳಿಮಾಡಿ ಹಿಡಿದು ಈ ಬಗ್ಗೆ ಸಕರ್ಾರಿ ತಪರ್ೆರವರು ಜಪ್ತಿ ಪಂಚನಾಮೆಯನ್ನು ದಿನಾಂಕ:07/01/2022 ರಂದು 06:10 ಎ.ಎಮ್ ರಿಂದ 07:10 ಎ.ಎಮ್ ವರೆಗೆ ಕೈಕೊಂಡು ಮುಂದಿನ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.

 


ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ: 02/2022 ಕಲಂ: 379 ಕಅ : ದಿನಾಂಕ :07/01/2022 ರಂದು ಗಂಟೆಗೆ ಸುಜಾತಾ ಗಂಡ ಗೋಪಿಲಾಲ ಜಾಧವ ವಯ :35 ವರ್ಷ ಜಾ:ಲಂಬಾಣಿ ಉ :ಹೊಲಮನೆಕೆಲಸ ಸಾ :ಸಣ್ಣಚಾಪಿ ತಾಂಡಾತಾ :ಹುಣಸಗಿ ಜಿ :ಯಾದಗಿರ ಇವರ ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಪಿರ್ಯಾದಿ ಹೊಲದ ನೀರಾವರಿಗಾಗಿ ಸಣ್ಣಚಾಪಿತಾಂಡಾ ಸೀಮಾಂತರ ನಾರಾಯಣಪೂರ ಎಡದಂಡೆಯ ಕಾಲುವೆ ರ್ಯಾಂಪ್ ಹತ್ತಿರ ಕೂಡಿಸಿದ ನೀರು ಎಳೆಯುವ 5 ಹೆಚ್.ಪಿ ಮೋಟಾರ್ ಮತ್ತು ಕೇಬಲ್ ಅಕಿ:45000-00 ರೂ ನೇದ್ದನ್ನು ದಿನಾಂಕ:06/12/2021 ರಂದು 18.00 ಗಂಟೆಯಿಂದ ದಿ:07/12/2021 ರಂದು ಬೆಳಿಗ್ಗೆ 10.00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಬೇಕು ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.

 

ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ: 03/2022 ಕಲಂ:323, 354, 504, 506 ಸಂಗಡ 34 ಐಪಿಸಿ : ದಿನಾಂಕ 07/01/2021 ರಂದು ಎಂ.ಎಲ್.ಸಿ ವಿಚಾರಣೆ ಕುರಿತು ತಾಲೂಕಾ ಸರಕಾರಿ ಆಸ್ಪತ್ರೆ ಲಿಂಗಸೂರಕ್ಕೆ ಬೇಟಿಕೊಟ್ಟು ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ಶ್ರೀ ಪರಶುರಾಮ ತಂದೆ ಸೋಮಪ್ಪ ಪವಾರ್ ವ:54 ವರ್ಷ ಜಾತಿ:ಲಂಬಾಣಿ ಉ:ಒಕ್ಕಲುತನ ಸಾ|| ದೊಡ್ಡ ಚಾಪಿತಾಂಡ. ತಾ||ಹುಣಸಗಿ ಜಿ||ಯಾದಗಿರ ರವರಿಗೆ ಘಟನೆಯ ಬಗ್ಗೆ ವಿಚಾರಣೆ ಮಾಡಿದ್ದು ಸದರಿ ಗಾಯಾಳು ಘಟನೆಯ ಬಗ್ಗೆ ಹೇಳಿಕೆ ನೀಡಿದ್ದು, ಲ್ಯಾಪ್ಟಾಪ್ನಲ್ಲಿ ಗಣಕೀರಿಸಿಕೊಂಡಿದ್ದು, ಸದರಿ ಪಿಯರ್ಾದಿ ಹೇಳಿಕೆಯನ್ನು ಇಂದು ದಿನಾಂಕ: 07/01/2022 ರಂದು ಮದ್ಯಾಹ್ನ 14:00 ಪಿ.ಎಮ್ ದಿಂದ 15:00 ಪಿ.ಎಮ್ ವರೆಗೆ ಹೇಳಿಕೆ ಪಡೆದುಕೊಂಡು ಇಂದು ದಿನಾಂಕ:07/01/2022 ರಂದು 16:30 ಪಿ.ಎಮ್ ಗಂಟೆಗೆ ಪಿಯರ್ಾದಿ ಅಜರ್ಿಯೊಂದಿಗೆ ಮರಳಿ ಠಾಣೆಗೆ ಬಂದಿದ್ದು, ಪಿಯರ್ಾದಿ ಹೇಳೀಕೆಯ ಸಾರಾಂಶವೆನೆಂದರೆ ದಿನಾಂಕ:06/01/2022 ರಂದು ರಾತ್ರಿ 8:30 ಪಿ.ಎಮ್ ಸುಮಾರಿಗೆ ನಾನು ನನ್ನ ಹೆಂಡತಿ ಮನೆಯಲ್ಲಿ ಮಾತನಾಡುತ್ತ ಕುಳಿತುಕೊಂಡಿದ್ದು, ಆಗ ನನ್ನ ಮೋಬೈಲ್ಗೆ ನಮ್ಮ ಸಂಬಂಧಿಯೊಬ್ಬರು ಫೋನ್ ಮಾಡಿದ್ದರಿಂದ ನಾನು ಮಾತನಾಡುತ್ತ ನಮ್ಮ ಮನೆಯ ಹೊರಗಡೆ ಬಂದಾಗ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ನನ್ನ ಅಣ್ಣನ ಮೊಮ್ಮಕ್ಕಳು ಹಾಗು ಬಾಲಚಂದ್ರ ಈತನ ಮಕ್ಕಳು ಆಟವಾಡುತ್ತಿದ್ದು, ಆಗ ನಾನು ಅವರಿಗೆ ಇಲ್ಲಿ ಆಟ ಆಡಬೇಡ್ರಿ ಬೇರೆ ಕಡೆಗೆ ಹೋಗ್ರಿ ಅಂತ ಬೆದರಿಸಿದ್ದು, ಅಲ್ಲಿಯೇ ಇದ್ದ ಶಾಂತಾಬಾಯಿ ಗಂಡ ಕೃಷ್ಣಪ್ಪ ಪವಾರ ಇವರು ಬಂದು ನನ್ನ ಮೊಮ್ಮಕ್ಕಳ್ಳಿಗೆ ಯಾಕೆ ಬೈತಿ ಅಂತಾ ನನಗೆ ಅವಾಚ್ಯವಾಗಿ ಬೈಯುತ್ತಿರುವದನ್ನು ಕೇಳಿ ಶಾಂತಾಬಾಯಿಯ ಮಗ ಬಾಲಚಂದ್ರ ತಂದೆ ಕೃಷ್ಣಪ್ಪ ಪವಾರ ಈತನು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಯಾಕಲೇ ಬೋಸಡಿ ಮಗನೇ ನನ್ನ ಮಕ್ಕಳು ಆಟ ಆಡಿದರ ಬೈಯೋದು ಹೊಡೆಯೋದು ಮಾಡತಿಯಾ ಬೋಸಡಿ ಮಗನ ನಿಂದು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈಯುತ್ತ ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ಮೂಗಿನ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಜಗಳವಾಡುವದನ್ನು ಕೇಳಿ ಮನೆಯೊಳಗಿದ್ದ ನನ್ನ ಹೆಂಡತಿ ರೇಣುಕಾಬಾಯಿಯು ಹೊರಗೆ ಬಂದು ನನ್ನ ಗಂಡನಿಗೆ ಯಾಕೆ ಹೊಡೆಯುತ್ತಿರಿ ಅಂತ ಅನ್ನುತ್ತಿರುವಾಗ ಬಾಲಚಂದ್ರ ಈತನು ನನ್ನ ಹೆಂಡತಿಗೆ ನಿನೇನು ಕೇಳುತಿ ಅಂತ ಅಂದವನೇ ನನ್ನ ಹೆಂಡತಿಯ ಸೀರೆಯನ್ನು ಎಳೆದು ಕೈಯಿಂದ ಬೆನ್ನ ಮೇಲೆ ಗುದ್ದಿ ಗುಪ್ತಗಾಯ ಮಾಡಿದನು. ಅಲ್ಲಿಯೇ ಇದ್ದ ಬಾಲಚಂದ್ರನ ಹೆಂಡತಿ ಕಸ್ತೂರಿಬಾಯಿ ಮತ್ತು ಶಾಂತಾಬಾಯಿಯು ಕೂಡಿ ಅವಾಚ್ಯವಾಗಿ ಬೈದು ನನ್ನ ಹೆಂಡತಿಗೆ ಬೆನ್ನ ಮೇಲೆ ಹೊಡೆಯುತ್ತಿದ್ದರು. ಬಾಲಚಂದ್ರ ಈತನ ತಮ್ಮ ಟಾಟಾ ಏಸ್ ವಾಹನ ನಂಬರ ಕೆ.ಎ-33, 5393 ನೇದ್ದನ್ನು ತೆಗೆದುಕೊಂಡು ಬಂದು ಬೋಸಡಿ ಮಗನೇ ನಿನಗೆ ಮಾಡತೀನಿ ತಡಿ ಅಂತ ಅಂದವನೇ ನನಗೆ ಡಿಕ್ಕಿ ಪಡಿಸಿ ಎಡಗೈ ಮುಂಗೈ ಮೇಲೆ ಮತ್ತು ಬಲಗಾಲ ಹೆಬ್ಬೆರಳ ಮೇಲೆ ರಕ್ತಗಾಯ, ಸೊಂಟ, ಬೆನ್ನಿನ ಮೇಲೆ ತರಚಿದ ಮತ್ತು ಗುಪ್ತಗಾಯಪಡಿಸಿರುತ್ತಾನೆ. ಗಾಡಿಯಿಂದ ಕೆಳಗೆ ಇಳಿದು ಮತ್ತೆ ನನಗೆ ಹೊಡೆಯಲು ಬರುತ್ತಿರುವಾಗ ಅಲ್ಲಿಯೇ ದಾರಿಯ ಮೇಲೆ ಹೋಗುತ್ತಿದ್ದ ನಮ್ಮ ತಾಂಡಾದವರಾದ ಥಾವರಪ್ಪ ತಂದೆ ಗೋವಿಂದ ಪವಾರ, ರೂಪಲೆಪ್ಪ ತಂದೆ ಖೀರಪ್ಪ ಪವಾರ ಮತ್ತು ಗಂಗಪ್ಪ ತಂದೆ ಬೀಲಪ್ಪ ರಾಠೋಡ ರವರುಗಳ ಬಂದು ಜಗಳ ಬಿಡಿಸಿದವರು. ಬಾಲಚಂದ್ರ ಈತನು ಹೋಗುವಾಗ ಲೇ ಮಗನ ಪರಶ್ಯಾ ಈ ಸಲ ನೀ ಉಳಕೊಂಡಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬೀಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದನು. ಜಗಳದಲ್ಲಿ ಗಾಯಹೊಂದಿದ್ದರಿಂದ ನನಗೆ ನಮ್ಮ ಸಂಬಂಧಿಯೊಬ್ಬರು ನನಗೆ ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ: 03/2022 ಕಲಂ:323, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 09-01-2022 10:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080