ಅಭಿಪ್ರಾಯ / ಸಲಹೆಗಳು

                      ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-01-2023ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ : 04/2023 279, 304(ಂ) ಕಅ ಡಿ/ತಿ  187 ಒಗಿ ಚಿಛಿಣ: ಇಂದು ದಿನಾಂಕ 07/01/2023 ರಂದು ಬೆಳಿಗ್ಗೆ ಫಿರ್ಯಾದಿಯ ತಾಯಿ ಕಮಲಿಬಾಯಿ ಹಾಗು ಅದೇ ತಾಂಡಾದ ಸೀತಾಬಾಯಿ ಹಾಗು ಶಾಂತಿಬಾಯಿ ಹತ್ತಿಬಿಡಿಸಲು ಹಾರಣಗೇರಾ ಸೀಮಾಂತರದ ಹೊಲಕ್ಕೆ ಆನಂದ ತಂದೆ ಪಾಪಣ್ಣ ರಾಠೋಡ ಸಾ:ಹೊಸಕೇರಾ ತಾಂಡಾ ಈತನ ಅಟೋ ನಂ ಕೆಎ-33, ಎ-5917 ನೇದ್ದರಲ್ಲಿ ಹೋಗುವಾಗ ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಅಟೋ ಚಾಲಕ ಆನಂದ ಈತನು ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ಹೊಸಕೇರಾ-ರಬ್ಬನಳ್ಳಿ ಮದ್ಯದ ರೋಡಿನ ಕರಕಳ್ಳಿ ಹತ್ತಿರ ಭೀಮನಗೌಡ ಗೋಗಿ ಇವರ ಹೊಲದ ಪಕ್ಕದ ರೋಡಿನಲ್ಲಿ ಅಟೋವನ್ನು ಪಲ್ಟಿ ಮಾಡಿ ಅಟೋ ಬಿಟ್ಟು ಓಡಿ ಹೋಗಿದ್ದು, ಅಟೋದಲ್ಲಿದ್ದ ಕಮಲಿಬಾಯಿಯವರಿಗೆ ಹಣೆಯ ಮದ್ಯದಲ್ಲಿ ಮೂಗಿನ ಮೇಲೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು, ಎಡಗಾಲು ಪಾದದ ಮೇಲೆ ಮತ್ತು ಕೆಳಗೆ ರಕ್ತಗಾಯಗಳಾಗಿ ಉಪಚಾರಕ್ಕಾಗಿ ಹೋಗುವಾಗ ಮಾರ್ಗ ಮದ್ಯ ಮೃತಪಟ್ಟಿದ ಬಗ್ಗೆ

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 03/2023 ಕಲಂ 279, 338  ಐಪಿಸಿ::-  ಇಂದು ದಿನಾಂಕ 07/01/2023 ರಂದು  3-30 ಪಿ.ಎಂ.ಕ್ಕೆ  ಫಿಯರ್ಾದಿ ಶ್ರೀ ಮಲ್ಲಪ್ಪ ತಂದೆ ಬಂಗಾರೆಪ್ಪ ಮೈಲಾರಿ ವಯ;37 ವರ್ಷ, ಜಾ;ಕುರಬರ, ಉ;ಒಕ್ಕುಲುತನ, ಸಾ;ರಾಮಸಮುದ್ರ ತಾ;ಜಿ;ಯಾದಗಿರಿ ಇವರು ಠಾಣೆಗೆ ಖುದ್ದಾಗಿ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ನೀಡಿದ್ದರ ಸಾರಾಂಶವೇನೆಂದರೆ ನಾನು ಮಲ್ಲಪ್ಪ ತಂದೆ ಬಂಗಾರೆಪ್ಪ ಮೈಲಾರಿ ವಯ;37 ವರ್ಷ, ಜಾ;ಕುರಬರ, ಉ;ಒಕ್ಕುಲುತನ, ಸಾ;ರಾಮಸಮುದ್ರ ತಾ;ಜಿ;ಯಾದಗಿರಿ ಆಗಿದ್ದು  ಈ ಮೂಲಕ ದೂರು ಅಜರ್ಿ ಸಲ್ಲಿಸುವುದೇನೆಂದರೆ  ಇಂದು ದಿನಾಂಕ 07/01/2023 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನನ್ನ ತಂದೆಯವರಾದ ಬಂಗಾರೆಪ್ಪ ತಂದೆ ಸಾಬಣ್ಣ ಮೈಲಾರಿ ವಯ;60 ವರ್ಷ ಇದ್ದು  ಯಾದಗಿರಿಗೆ  ಹೋಗಿ ಸಂತೆ ಮಾಡಿಕೊಂಡು ಬರುತ್ತೇನೆಂದು ನಮಗೆ ಹೇಳಿ ಹೋಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 07/01/2023 ರಂದು ಮದ್ಯಾಹ್ನ 01-15 ಪಿ.ಎಂ,ದ ಸುಮಾರಿಗೆ ನಾನು ರಾಮಸಮುದ್ರದ ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಅಳಿಯ ರಮೇಶ ತಂದೆ ಮಲ್ಲಯ್ಯ ಟೊಕಾಪುರ  ಸಾ;ಯಾದಗಿರಿ ಈತನು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಯಾದಗಿರಿಯ ಶುಭಂ ಪೆಟ್ರೋಲ್ ಬಂಕ್ ಮುಂದೆ ನಿಮ್ಮ ತಂದೆಯವರು ಸಿಕ್ಕಾಗ ನಾವಿಬ್ಬರು ಮಾತನಾಡುತ್ತಾ ಮುಖ್ಯ ರಸ್ತೆಯ ಬದಿಯಲ್ಲಿ ನಿಂತಿದ್ದಾಗ ಸಮಯ ಅಂದಾಜು 12-45 ಪಿ.ಎಂ.ಕ್ಕೆ ಹೊಸಳ್ಳಿ ಕ್ರಾಸ್ ಕಡೆಯಿಂದ ಗಂಜ್ ಕಡೆಗೆ ಹೊರಟಿದ್ದ ಒಂದು ಕೆ.ಕೆ.ಎಸ್.ಆರ್.ಟಿ.ಸಿ  ಬಸ್ ನಂಬರ ಕೆಎ-32, ಎಫ್-2263 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ನಮ್ಮಲ್ಲಿ ನಿಮ್ಮ ತಂದೆಗೆ ನೇರವಾಗಿ ಡಿಕ್ಕಿ ಹೊಡೆದಾಗ, ಡಿಕ್ಕಿ ಹೊಡೆದ ರಭಸಕ್ಕೆ ನಿಮ್ಮ ತಂದೆಯವರು ಹಿಂಬರಕಿಯಾಗಿ ರಸ್ತೆಗೆ ಬಿದ್ದಾಗ ನಾನು ಎಬ್ಬಿಸಿ ನೋಡಲಾಗಿ ಸದರಿ ಅಪಘಾತದಲ್ಲಿ ನಿಮ್ಮ ತಂದೆಯವರ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು, ಎಡ ಮೆಲಕಿಗೆ ರಕ್ತಗಾಯ, ಬಾಯಿಗೆ ಭಾರೀ ರಕ್ತಗಾಯವಾಗಿದ್ದು, ಮುಖಕ್ಕೆ ಅಲ್ಲಲ್ಲಿ ರಕ್ತಗಾಯವಾಗಿರುತ್ತವೆ. ಅಪಘಾತಪಡಿಸಿದ ಬಸ್ ಕಲಬುರಗಿ-ರಾಯಚೂರು ಮಾರ್ಗವಾಗಿ ಹೋಗುವ ಬಸ್ ಇದ್ದು, ಅದರ ಚಾಲಕನು ಘಟನಾ ಸ್ಥಳದಲ್ಲಿ ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಓಂಕಾರ ತಂದೆ ಮಾಣಿಕಪ್ಪ ದೊಡ್ಡಗೊಂಡ ವಯ;46 ವರ್ಷ, ಉ;ಬಸ್ ಚಾಲಕ, ಜಾ;ಕುರಬರ, ಸಾ;ಗಣೇಶ ನಗರ ಕಲಬುರಗಿ ಅಂತಾ ತಿಳಿಸಿರುತ್ತಾನೆ. ಘಟನಾ ಸ್ಥಳಕ್ಕೆ ಸಾಬಣ್ಣ ತಂದೆ ಮಲ್ಲಯ್ಯ ಕರಿನಾಗಪ್ಪನೋರ ಸಾ;ಯಾದಗಿರಿ ಈತನು ಬಂದು ನನಗೆ ಘಟನೆ ಬಗ್ಗೆ ವಿಚಾರಿಸಿದ್ದು, ನಂತರ ಇಬ್ಬರು ಸೇರಿಕೊಂಡು ಒಂದು ಖಾಸಗಿ ಆಟೋದಲ್ಲಿ ನಿಮ್ಮ ತಂದೆಗೆ ಉಪಚಾರಕ್ಕಾಗಿ ಯಾದಗಿರಿಯ ಶ್ರೀ ಶರಣಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದು ನೀನು ಕೂಡಲೇ ಅಲ್ಲಿಗೆ ಬಾ ಅಂತಾ ತಿಳಿಸಿದಾಗ ನನಗೆ ಗಾಬರಿಯಾಗಿ ಈ ವಿಷಯವನ್ನು ನಮ್ಮ ಮನೆಯಲ್ಲಿದ್ದ ನನ್ನ ಅಣ್ಣ ಬಸಲಿಂಗಪ್ಪನಿಗೆ ಘಟನೆ ಬಗ್ಗೆ ಆತನಿಗೆ ಮಾಹಿತಿ ತಿಳಿಸಿ ಇಬ್ಬರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಯಾದಗಿರಿಯ ಶರಣಬಸವೇಶ್ವರ ಆಸ್ಪತ್ರೆಗೆ ಬಂದು ನೋಡಲು ನನ್ನ ತಂದೆಯವರು ಉಪಚಾರ ಹೊಂದುತ್ತಿದ್ದು, ಅವರಿಗೆ ವಿಚಾರಿಸಲಾಗಿ ಮೈಮೇಲೆ ಪ್ರಜ್ಞೆ ಇರುವುದಿಲ್ಲ ಆಸ್ಪತ್ರೆಯಲ್ಲಿ ಉಪಚಾರ ನೀಡುತ್ತಿದ್ದ ವೈದ್ಯರು ನನ್ನ ತಂದೆಗೆ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಹೋಗಲು ತಿಳಿಸಿದ ಮೇರೆಗೆ ನನ್ನ ಅಣ್ಣ ಬಸಲಿಂಗಪ್ಪನ ಸಂಗಡ ನನ್ನ ತಂದೆಗೆ ಅಂಬುಲೆನ್ಸ್ ನಲ್ಲಿ ಕಲಬುರಗಿಗೆ ಕಳಿಸಿರುತ್ತೇನೆ. ಹೀಗಿದ್ದು  ಇಂದು ದಿನಾಂಕ 07/01/2023 ರಂದು ಸಮಯ 12-45 ಪಿ.ಎಂ.ಕ್ಕೆ ಯಾದಗಿರಿ ನಗರದ ಶುಭಂ ಪೆಟ್ರೋಲ್ ಬಂಕ್ ಹತ್ತಿರದ ಮುಂದಿನ ಮುಖ್ಯ ರಸ್ತೆ ಬದಿಯಲ್ಲಿ ನಿಂತಿದ್ದ ನನ್ನ ತಂದೆ ಬಂಗಾರೆಪ್ಪನವರಿಗೆ ಸಕರ್ಾರಿ ಬಸ್ ನಂಬರ ಕೆಎ-32, ಎಫ್-2263 ನೇದ್ದರ ಚಾಲಕ ಓಂಕಾರ ಎಂಬಾತನು ಬಸ್ಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನೇರವಾಗಿ ಡಿಕ್ಕಿ ಹೊಡೆದಿದ್ದರಿಂದ ಘಟನೆ ಜರುಗಿದ್ದು, ನನ್ನ ತಂದೆಗೆ ಉಪಚಾರಕ್ಕಾಗಿ ಕಲಬುರಗಿಗೆ ಕಳಿಸಿ ನಿಮ್ಮ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು,  ಅಪಘಾತಪಡಿಸಿದ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ವಿನಂತಿ ಕೊಟ್ಟ ದೂರು ಅಜರ್ಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 03/2023 ಕಲಂ 279,  338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 03/2023 ಕಲಂ: 341.324.504,506 ಸಂ.34 ಐಪಿಸಿ:ಈ ಪ್ರಕರಣದಲ್ಲಿ ಫಿಯರ್ಾದಿ ಮತ್ತು ಆತನ ಮಗ ವಿಜಯಕುಮಾರ, ಅಣ್ಣತಮ್ಮಕಿಯವರಾದ ಶರಣಪ್ಪ ತಂದೆ ಬಸಲಿಂಗರೆಡ್ಡಿ ಯಲ್ಹೇರಿ, ಶರಣಪ್ಪ ತಂದೆ ಚಂದ್ರಯ್ಯ ಚಂದನೋರ ನಾಲ್ಕು ಜನರು ಕೂಡಿ ಚಿನ್ನಾಕಾರ ಗ್ರಾಮದ ಸೀಮಾಂತರದಲ್ಲಿರುವ ಜಮೀನು ಸವರ್ೆ ನಂ. 397 & 398 ನೇದ್ದರಲ್ಲಿರುವ ಜಮೀನಿನ ಬಗ್ಗೆ ಕೇಳಲಿಕ್ಕೆಂದು ಸಾಬರೆಡ್ಡಿ ಇವರ ಮನೆಗೆ ಹೋಗುತ್ತಿರುವಾಗ ದಿನಾಂಕಃ 03/01/2023 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ಚಿನ್ನಾಕಾರ ಗ್ರಾಮದ ಬೀರಪ್ಪ ಗುಡಿ ಹತ್ತಿರ ರಸ್ತೆಯ ಮೇಲೆ ಮೂರು ಜನ ಆರೋಪಿರು ಫಿಯರ್ಾದಿ ಮತ್ತು ಜೊತೆಯಲ್ಲಿದ್ದವರಿಗೆ ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು, ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುವ ಬಗ್ಗೆ ದೂರು

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 02/2023 ಕಲಂ:379 ಐಪಿಸಿ:ಶಿವಪೂರ ಗ್ರಾಮದ ಸೀಮಾಂತರದಲ್ಲಿ ಬರುವ ಪಟ್ಟಾ ಜಮೀನು ಸವರ್ೇ ನಂ. 105/*/* ರಲ್ಲಿ ಅಂದಾಜು ಪ್ರಮಾಣ 261 ಮೆಟ್ರಿಕ್ ಟನ್ ರಷ್ಟು ಪ್ರಮಾಣದ ಮರಳನ್ನು ಮಾರಾಟದ ಉದ್ದೇಶದಿಂದ ಗೋನಾಳ ಗ್ರಾಮದ ಕೃಷ್ಣಾ ನದಿಯಿಂದ ಸಕರ್ಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಕಳ್ಳತನ ಮಾಡಿ ಸಂಗ್ರಹಿಸಿದ್ದು ಕಂಡುಬಂದಿರುತ್ತದೆ. ಇದರ ರಾಜಧನ ಮೊತ್ತವು ರೂ. 20,880/- ಆಗಿರುತ್ತದೆ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 03/2023 ಕಲಂ:143, 147, 504, 323, 341 ಸಂ 149 ಐಪಿಸಿ: ಮನೆ ಮುಂದೆ ನಲ್ಲಿ ನೀರು ಬಿಡಬೇಡ್ರಿ ಎಂದು ಜಗಳ ತೆಗೆದು ತಡೆದು ನಿಲ್ಲಿಸಿ, ಕೈಯಿಂದ ಹೊಡೆಬಡೆ ಮಾಡಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 04/2023 ಕಲಂ:143, 147, 504, 323, 324, 506 ಸಂ 149 ಐಪಿಸಿ:ಮನೆ ಮುಂದೆ ಹಾಕಿದ ಹತ್ತಿಯನ್ನು ಆಕಳು ಬಂದು ಮೆಯ್ದಿದಕ್ಕೆ ಆಕಳಿಗೆ ಆಚೆ ಕಡೆ ಕಳುಹಿಸಿದ್ದಕ್ಕೆ ಜಗಳ ತೆಗೆದು ಎಲ್ಲರೂ ಸೇರಿ ಬಂದು ಮಂಗಿಲಾಲ ಮತ್ತು ಪಂಪಣ್ಣನಿಗೆ ಕಟ್ಟಿಗೆಯಿಂದ ಮತ್ತು ಕೈಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ:07/2023 ಕಲಂ379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್: ಇಂದು ದಿನಾಂಕ 07/01/2023 ರಂದು 02.15 ಗಂಟೆಗೆ ಶ್ರೀ ಚೆನ್ನಯ್ಯ ಹಿರೇಮಠ ಪಿ.ಐ. ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಕೊಟ್ಟ ವರಧಿ ಏನಂದರೆ ಇಂದು ದಿನಾಂಕ 07/01/2023 ರಂದು 12.05 ಗಂಟೆಗೆ ಮಾನ್ಯ ಎಸ್ ಪಿ ಸಾಹೇಬರು ಯಾದಗಿರಿ ರವರ ಆದೇಶದಂತೆ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ಕುರಿತು ವಿಶೇಷ ಕರ್ತವ್ಯದ ನಿಮಿತ್ಯ ಶಹಾಪೂರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಾ ನಿಂತಾಗ ಬಂದ ಬಾತ್ಮಿ ಏನಂದರೆ ಶಹಾಪೂರ ಠಾಣಾ ವ್ಯಾಪ್ತಿಯ ಹೈಯಾಳ [ಬಿ] ಗ್ರಾಮದ ನದಿಯಿಂದ  ಒಂದು ಟಿಪ್ಪರದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದು ತಾವು ಕೂಡಲೇ ಬರಬೇಕು ತಡವಾದರೆ ತಪ್ಪಿಸಿಕೊಳ್ಳುವ ಸಾದ್ಯತೆ ಇರುತ್ತದೆ ಅಂತ ಬಾತ್ಮಿ ಬಂದ ಮೇರೆಗೆ ನಾನು ಹಾಗು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರಾದ ನಿಂಗಪ್ಪ ಪಿಸಿ 284, ಮಹಾದೇವಪ್ಪ ಪಿಸಿ 334  ಹಾಗು ನಮ್ಮ ಜೀಪ ಚಾಲಕ ರುದ್ರಗೌಡ ಎಪಿಸಿ 34 ರವರಿಗೆ ಬಾತ್ಮೀ ವಿಷಯ ತಿಳಿಸಿ ನಂತರ ರಾತ್ರಿ ಗಸ್ತ ಸಿಬ್ಬಂದಿಯವರಾದ ಶಿವಲಿಂಗಪ್ಪ ಹೆಚ್ ಸಿ 185 ರವರಿಗೆ ಬಸವೇಶ್ವರ ವೃತ್ತಕ್ಕೆ ಕರೆಯಿಸಿಕೊಂಡು ಅವರಿಗೂ ಬಾತ್ಮೀ ವಿಷಯ ತಿಳಿಸಿ ನಂತರ ಎಲ್ಲರೂ ಕೂಡಿಕೊಂಡು ನಮ್ಮ ಸರಕಾರಿ ಜೀಪ್. ನಂ. ಕೆಎ-33 ಜಿ-0316 ನೇದ್ದರಲ್ಲಿ 12.15 ಗಂಟೆಗೆ ಹೊರಟು 12.45 ಗಂಟೆಗೆ ಹೈಯಾಳ [ಬಿ] ಗ್ರಾಮವನ್ನು ತಲುಪಿ, ಹೈಯಾಳ ಬಿ ಗ್ರಾಮದಿಂದ ಕೃಷ್ಣಾ ನದಿಗೆ ಹೋಗುವ ರಸ್ತೆಯ ಜಾಲಿಗಿಡಗಳ ಮರೆಯಲ್ಲಿ ನಿಂತು ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿರುವ ಟಿಪ್ಪರ ಬರುವದನ್ನು ಗಮನಿಸುತ್ತಾ ನಿಂತಾಗ, ರಾತ್ರಿ 01.00 ಗಂಟೆಗೆ ಒಂದು ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬಂದಿದ್ದು ಅದನ್ನು ನಾನು ಹಾಗು ಸಿಬ್ಬಂದಿಯವರೊಂದಿಗೆ ಸದರಿ ಟಿಪ್ಪರ ಹಾಗು ಚಾಲಕನನ್ನು ಹಿಡಿದು ವಿಚಾರಿಸಲಾಗಿ ಚಾಲಕನು ತನ್ನ ಹೆಸರು ಶರಣಪ್ಪ ತಂದೆ ಭೀಮಣ್ಣ ಕಂಬಾರ ವ|| 32 ಜಾ|| ಬೋವಿ ವಡ್ಡರ ಉ|| ಟಿಪ್ಪರ ಚಾಲಕ ಸಾ|| ಕಕ್ಕಸಗೇರಾ ತಾ|| ಶಹಾಪೂರ ಅಂತ ತಿಳಿಸಿದನು. ನಂತರ ಸದರಿ ಟಿಪ್ಪರದಲ್ಲಿದ್ದ ಮರಳಿನ ಬಗ್ಗೆ ದಾಖಲಾತಿಗಳನ್ನು ಹಾಜರುಪಡಿಸುವಂತೆ ಕೇಳಿದಾಗ ಆತನು ತನ್ನ ಹತ್ತಿರ ಯಾವದೇ ದಾಖಲಾತಿಗಳು ಇರುವದಿಲ್ಲ ಸದರಿ ಮರಳನ್ನು ತಮ್ಮ ಮಾಲೀಕರು ಹೇಳಿದಂತೆ ಹೈಯಾಳ [ಬಿ] ಪಕ್ಕದಲ್ಲಿರುವ ಕೃಷ್ಣಾ ನದಿಯಿಂದ ತೆಗೆದುಕೊಂಡು ಬರುತ್ತಿದ್ದು ನಮ್ಮ ಮಾಲೀಕರ ಹೆಸರು ಯಲ್ಲಪ್ಪ ಸಾ|| ಬೀರನಕಲ್ ಅಂತ ತಿಳಿಸಿದನು. ನಂತರ ಅಲ್ಲಿಯೇ ನಿಂತಿದ್ದ ಟಿಪ್ಪರ ನಂಬರ ನೋಡಲಾಗಿ ಅದರ ನಂಬರ ಕೆಎ-33 ಎ- 9835 ಅಂತ ಇದ್ದು ಸದರಿ ಟಿಪ್ಪರದಲ್ಲಿ ಅಂದಾಜು 12 ಕ್ಯೂಬಿಕ್ ಮೀಟರ್ ಮರಳು ಇದ್ದು ಅದರ ಅ,ಕಿ. 9,000/- ರೂ ಇದ್ದದ್ದು ಕಂಡು ಬಂದಿದ್ದು ಹಾಗು ಟಿಪ್ಪರನ ಅಂದಾಜು ಕಿಮ್ಮತ್ತು 10,00,000/- ರೂ ಆಗುತ್ತಿದ್ದು ಸದರಿ ಟಿಪ್ಪರ ಚಾಲಕನು ಸರಕಾರದಿಂದ ಯಾವದೇ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಪಡೆಯದೇ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ, ಸದರಿ ಮರಳು ತುಂಬಿದ ಟಿಪ್ಪರ ಸಮೇತ 01.15 ಗಂಟೆಗೆ ಹೈಯಾಳ [ಬಿ] ಗ್ರಾಮವನ್ನು ಬಿಟ್ಟು ಮರಳು ತುಂಬಿದ ಟಿಪ್ಪರನ್ನು ಅದರ ಚಾಲಕನ ಸಹಾಯದಿಂದ ತೆಗೆದುಕೊಂಡು ಮರಳಿ ಠಾಣೆಗೆ 01.45 ಗಂಟೆಗೆ ಬಂದು ವರಧಿಯನ್ನು ತಯಾರಿಸಿ 02.15 ಗಂಟೆಗೆ ಮರಳು ತುಂಬಿದ ಟಿಪ್ಪರ ಹಾಗು ಅದರ ಚಾಲಕ ಮತ್ತು ಮಾಲೀಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಸಿಬೇಕು ಅಂತ ಸ||ತ|| ಫಿಯರ್ಾದಿದಾರನಾಗಿ ಈ ವರದಿ   ಸಲ್ಲಿಸಿದ್ದು ಸದರಿ ವರಧಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 07/2023 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ                                                                      


ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 02/2023 ಕಲಂ: 78 (3) ಕೆ.ಪಿ ಯಾಕ್ಟ್: ದಿನಾಂಕ 07/01/2023 ರಂದು 3:00 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀಮತಿ ದಿವ್ಯಮಹಾದೇವ್ ಪಿ.ಎಸ್.ಐ (ಕಾ&ಸು) ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ, ತಾವು ಠಾಣೆಯಲ್ಲಿ ಇದ್ದಾಗ 10:00 ಎ.ಎಂ ಕ್ಕೆ  ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪೂರ ಗ್ರಾಮದ ವಾಲ್ಮಿಕಿ ವೃತ್ತದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು 1 ರೂ 80/- ರೂ ಕೊಡುತ್ತೇನೆ ಇದು ಮಟಕಾ ಜೂಜಾಟ ಅಂತಾ ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 02/2023 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ:04/2023 ಕಲಂ: 279, 337, 338 ಐಪಿಸಿ: ನಿನ್ನೆ ದಿನಾಂಕ 06.01.2023 ರಂದು ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ಮಲ್ಲಿಕಾಜರ್ುನ ಇತನು ವೈಯಕ್ತಿಕ ಕೆಲಸದ ಮೇಲೆ ಗುರುಮಠಕಲ್ಗೆ ಹೋಗಿ ಬರುವುದಾಗಿ ಮನೆಯಲ್ಲಿ ಗುರುಮಠಕಲ್ ಪಟ್ಟಣಕ್ಕೆ ಬಂದು ತನ್ನ ಕೆಲಸ ಮುಗಿಸಿಕೊಂಡು ಮರಳಿ ರಾತ್ರಿ 9:30 ಗಂಟೆಯ ಸುಮಾರಿಗೆ ಗುರುಮಠಕಲ್ ಪಟ್ಟಣದಿಂದ ಚಪೆಟ್ಲಾ ಮಾರ್ಗವಾಗಿ ತಮ್ಮೂರಗೆ ಹೋಗುವಾಗ ತನ್ನ ಚಪೆಟ್ಲಾ-ಗಾಜರಕೊಟ್ ಗ್ರಾಮಗಳ ನಡುವೆ ರೋಡಿನ ಮೇಲೆ ತನ್ನ ವಾಹನವನ್ನ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಗಾಜರಕೊಟ್ ಗ್ರಾಮ ಸಿಮಾಂತರದಲ್ಲಿ ತನ್ನ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೇ ಸ್ಕೀಡಾಗಿ ಬಿದ್ದಿದ್ದರಿಂದ ಮಲ್ಲಿಕಾಜರ್ುನನಿಗೆ ಬಲ ತಲೆಗೆ ಭಾರಿ ರಕ್ತಗಾಯವಾಗಿದ್ದು ಅಲ್ಲಲ್ಲಿ ಭಾರಿ ಹಾಗೂ ಸಾಧಾ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು. ನಂತರ ಆ ವೇಳೆಗೆ ದಾರಿಯ ಮೇಲೆ ಹೋಗಿ ಬರುವವರು ಮಲ್ಲಿಕಾಜರ್ುನನಿಗೆ ಚಿಕಿತ್ಸೆ ಕುರಿತು ಗುರುಮಠಕಲ್ ಸರಕಾರಿ ದವಾಖಾನೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ ನಂತರ ಫೀರ್ಯಾದಿ ಮತ್ತು ಇತರರು ಕೂಡಿಕೊಂಡು ಗಾಯಾಳು ಮಲ್ಲಿಕಾಜರ್ುನನಿಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಆ ಬಗ್ಗೆ ಫಿರ್ಯಾದಿಯು ನೀಡಿದ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 04/2023 ಕಲಂ: 279, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
 

ಇತ್ತೀಚಿನ ನವೀಕರಣ​ : 08-01-2023 10:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080