ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-02-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ 21/2022 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನಾನು ಸಿ.ಇ.ಎಸ್ ಪದವಿ ಮಹಾವಿದ್ಯಾಲಯ ಯಾದಗಿರಿ ಹಾಗೂ ಬಸವೇಶ್ವರ ಪದವಿ ಮಹಾವಿದ್ಯಾಲಯ ಯಾದಗಿರಿಯಲ್ಲಿ ಗನಕಯಂತ್ರ ನಿವರ್ಾಹಕ ಅಂತಾ ಕೆಲಸ ಮಾಡುತ್ತೇನೆ. ನನ್ನದೊಂದು ಹೊಂಡಾ ಶೈನ್ ಮೋಟರ್ ಸೈಕಲ್ ನಂ ಏಂ 33 ಙ 0590, ಇಟಿರಟಿಜ ಓಠ-ಎಅ65ಇಉ0090044, ಅಊಂಖಖಖ ಓಔ-ಒಇ4ಎಅ65ಆಉಏಉ041587, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 60,000/-ರೂ|| ಗಳು. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು ಪ್ರತಿನಿತ್ಯದಂತೆ ನಾನು ನನ್ನ ಮೋಟರ್ ನಂ ಏಂ 33 ಙ 0590, ನೇದ್ದನ್ನು ತೆಗೆದುಕೊಂಡು ದಿನಾಂಕ 02/02/2022 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಕೆನರಾ ಬ್ಯಾಂಕ್ ಹತ್ತಿರ ನನ್ನ ಮೋಟರ್ ಸೈಕಲ್ ನಿಲ್ಲಿಸಿ, ಇದೇ ಬ್ಯಾಂಕ್ ಮೇಲೆ ಇರುವ ನಮ್ಮ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕೆಲಸ ಮಾಡಿ, ಮರಳಿ ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ಮನೆಗೆ ಊಟಕ್ಕೆಂದು ಹೋಗಲು ಕೆಳಗೆ ಬಂದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ಸುತ್ತಾ ಮುತ್ತ ನೋಡಿದರು ಮೋಟರ್ ಸೈಕಲ್ ಕಾಣಲಿಲ್ಲ. ನಾನು ಗಾಬರಿಯಾಗಿ ನಮ್ಮ ಗೆಳೆಯರಾದ 1] ಮಾರ್ಥಂಡಪ್ಪ ತಂದೆ ಬಸ್ಸಪ್ಪ ಕಂಬಾರ ಹಾಗೂ 2] ನರಸಪ್ಪ ತಂದೆ ನಾಗಪ್ಪ ಬೆಟ್ಟದ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಎಲ್ಲರು ಕೂಡಿ ಕೋಟರ್್ ರೋಡ್, ಹೊಸಾ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಚಿತ್ತಾಪೂರ ರೋಡ್ ಹಾಗೂ ಇತರ ಕಡೆಗಳಲ್ಲಿ ತಿರುಗಾಡಿ ನೋಡಲಾಗಿ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 21/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 16/2022 ಕಲಂ 379 ಐಪಿಸಿ : ದಿನಾಂಕ: 07-02-2022 ರಂದು ಸಾಯಂಕಾಲ 06-00 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ತಳಕ ಗ್ರಾಮದ ರೈತರು ಭೀಮಾನದಿಯ ದಂಡೆಯ ಮೇಲೆ ಹೊಲಕ್ಕೆ ನೀರು ಬಿಡಲು ಮೋಟರಗಳನ್ನು ಇಟ್ಟಿದ್ದು ಹೊಲಗಳಲ್ಲಿ ರೈತರು ಯಾರು ಇರಲಾರದನ್ನು ನೋಡಿ ಒಟ್ಟು 29 ಮೋಟರಗಳ ಕೆಬಲ್ ವೈರನ್ನು ದಿನಾಂಕ: 05-02-2022 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 06-02-2022 ರಂದು ಬೆಳಿಗ್ಗೆ 06-00 ಗಂಟೆ ಅವಧಿಯಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾದ ಕೆಬಲ್ ವೈರ ಅ|| ಕಿ|| 188500=00 ಇರುತ್ತದೆ ಕೆಬಲ್ ವೈರ ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಪಿಯರ್ಾಧಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.16/2022 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಗೋಗಿ ಪೊಲೀಸ್ ಠಾಣೆ :-
ಗುನ್ನೆ ನಂ: 12/2022 ಕಲಂ: ಮನುಷ್ಯ ಕಾಣೆಯಾದ ಬಗ್ಗೆ. : ಇಂದು ದಿನಾಂಕ: 07/02/2022 ರಂದು ರಂದು 12.30 ಪಿಎಮ್ ಕ್ಕೆ ಶ್ರೀಮತಿ. ಪಂಕಜಾ ಗಂಡ ಶ್ರೀಕಾಂತ ಜಿಂದೆ ವಯಾ:28 ಉ: ಮನೆಗೆಲಸ ಜಾ: ಸ್ವಕುಳಸಾಳಿ ಸಾ:ಗೋಗಿ ಪೇಠ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಸಾರಾಂಶವೆನೆಂದರೆ, ನಾನು ಪಂಕಜಾ ಗಂಡ ಶ್ರೀಕಾಂತ ಜಿಂದೆ ವಯಾ:28 ವರ್ಷ ಉ: ಮನೆಗೆಲಸ ಜಾ: ಸ್ವಕುಳಸಾಳಿ ಸಾ: ಗೋಗಿ ಪೇಠ ತಾ: ಶಹಾಪೂರ ಜಿ: ಯಾದಗಿರಿ ಇದ್ದು, ನನಗೆ ಸುಮಾರು 07 ವರ್ಷ ಗಳ ಹಿಂದೆ ಶ್ರೀಕಾಂತ ಚಂದಪ್ಪ ಜಿಂದೆ ವಯಾ: 30 ವರ್ಷ ಉ|| ವ್ಯಾಪಾರ ಜಾ|| ಸ್ವಕುಳ ಸಾಳಿ ಸಾ: ಗೋಗಿ ಪೇಟ ತಾ: ಶಹಾಪೂರ ಇವರೊಂದಿಗೆ ಮದುವೆ ಆಗಿದ್ದು, ನಮಗೆ ವೈಷ್ಣವಿ ಅಂತಾ 2 ವರ್ಷದ ಹೆಣ್ಣು ಮಗಳು ಇರುತ್ತಾಳೆ. ನನ್ನ ಗಂಡನು ಗೋಗಿ ಪೇಠ ಗ್ರಾಮದಲ್ಲಿ ಝರಾಕ್ಷ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದನು. ಯಾವಾಗಲು ಪೋನನಲ್ಲಿ ಮಾತಾಡುತ್ತಿದ್ದರಿಂದ ನಾನು ಯಾವಗಲು ಪೋನದಲ್ಲಿ ಯಾರಿಗೆ ಮಾತಾಡುತ್ತಿ ಅಂತಾ ಕೇಳುತ್ತಿದ್ದೆನು ಆಗ ನನಗೆ ಬೈಯುತ್ತಿದ್ದನು ನಾನು ಸುಮ್ಮನೆ ಇರುತ್ತೆದ್ದೆನು.
ಹಿಗಿದ್ದು ನಮ್ಮ ಬೀಗರ ಊರಾದ ಬೀದರ ದಲ್ಲಿ ದೇವರ ಕಾರ್ಯಕ್ರಮ ಇದ್ದುದರಿಂದ ದಿನಾಂಕ: 06/11/2021 ರಂದು ನಾನು, ಮತ್ತು ನಮ್ಮ ಅತ್ತೆಯವರಾದ ಗೋದಾಬಾಯಿ ಗಂಡ ಚಂದಪ್ಪ, ನಮ್ಮ ನೆಗೆಣ್ಣಿ ಪಾವನಿ ಗಂಡ ವಿಶ್ವನಾಥ ಮೂರು ಜನರು ನನ್ನ ಮಗುವಿನೊಂದಿಗೆ ಬೆಳಿಗ್ಗೆ 11.00 ಎಎಂ ಕ್ಕೆ ಬೀದರಕ್ಕೆ ಹೊಗುವಾಗ ನನ್ನ ಗಂಡನಾದ ಶ್ರೀಕಾಂತ ಈತನು ನಮಗೆ ಬಸ್ಸಿಗೆ ಕೂಡಿಸಿ ಕಳುಹಿಸಿ, ತಾನು ನಂತರ ತಮ್ಮ ಅಣ್ಣನ ಜೋತೆಗೆ ಅಂದರೆ ನಮ್ಮ ಬಾವನ ಜೋತೆಗೆ ಸಾಯಂಕಾಲ ಬರುವದಾಗಿ ಹೇಳಿದ್ದನು. ನಂತರ ನಮ್ಮ ಬಾವ ಬೀದರಕ್ಕೆ ಬರುವಾಗ ಪೋನ ಮಾಡಿ ಕೇಳಿದಾಗ ಶಹಾಪೂರದಲ್ಲಿ ಕೆಲಸ ಇದೆ ನಂತರ ಬರುತ್ತೇನೆ ನೀನು ಹೋಗು ಅಂತಾ ಹೇಳಿ ಕಳುಹಿಸಿರುತ್ತಾನೆ. ಮರುದಿನ ಅಂದರೆ 07/11/2021 ರಂದು ಕೂಡ ಬೀದರಕ್ಕೆ ಬರಲಿಲ್ಲ. ನಮ್ಮ ಬಾವನವರು ವಿಚಾರಿಸಿದಾಗ ರಾತ್ರಿ ಬಸ್ ಮಿಸ್ ಆಗಿದೆ ನಾನು ಶಹಾಪೂರಕ್ಕೆ ಹೋಗಿ ಮರಳಿ ಗೋಗಿ ಗೆ ಬಂದಿದ್ದೆನೆ. ನಾನು ಬರುವದಿಲ್ಲ ಅಂಗಡಿಯಲ್ಲಿ ಇರುತ್ತೇನೆ ನೀವು ಮುಗಿಸಿಕೊಂಡು ಬನ್ನಿರಿ ಅಂತಾ ತಿಳಿಸಿದ. ಅದರಂತೆ ನಾವು ಕಾರ್ಯಕ್ರಮ ಮುಗಿಸಿಕೊಂಡಾಗ ಸಾಯಂಕಾಲ ನಮ್ಮ ಬಾವನ ಪೋನ ಗೆ ನಾನು ಮನೆ ಬಿಟ್ಟು ಹೊಗುತ್ತಿದ್ದೆನೆ ಸಾಕಾಗಿದೆ, ಬೇರೆ ಮದುವೆ ಮಾಡಿಕೊಳ್ಳುತ್ತೇನೆ, ನನ್ನ ಮಗಳಿಗೆ ಸರಿಯಾಗಿ ನೋಡಿಕೊ ಅಂತಾ ಇತ್ಯಾದಿ ಮೇಸೆಜ ಮಾಡಿದ್ದರಿಂದ ನಾವೆಲ್ಲರೂ ಗಾಬರಿಯಾಗಿ ನಮ್ಮ ಗೋಗಿ ಪೇಠ ಗ್ರಾಮಕ್ಕೆ ಬಂದು ನೋಡಲಾಗಿ ನನ್ನ ಗಂಡನು ನಮ್ಮ ಮನೆಯಲ್ಲಿ ಮತ್ತು ಅಂಗಡಿಯಲ್ಲಿ ಎಲ್ಲಿಯೂ ಇರಲಿಲ್ಲ. ನಂತರ ನಾನು ನಮ್ಮ ಅತ್ತೆ ಗೋದಾಬಾಯಿ, ನಮ್ಮ ಬಾವ ವಿಶ್ವನಾಥ ನಮ್ಮ ನೆಗೆಣ್ಣಿ ಪಾವನಿ ಮತ್ತು ನಮ್ಮ ಪರಿಚಯದವರಾದ ದೇವರಾಜ ತಂದೆ ಮಲ್ಲಪ್ಪ ಚೂರಿ ಸಾ: ಗೋಗಿ ಪೇಠ ಶ್ರೀನಿವಾಸ ತಂದೆ ಗೋವಿಂದಪ್ಪ ಗೋಳೆದ ಸಾ: ಗೋಗಿ ಪೇಠ ಎಲ್ಲರೂ ಕೂಡಿ ನನ್ನ ಗಂಡನಾದ ಶ್ರೀಕಾಂತ ಜಿಂದೆ ಈತನಿಗೆ ಹುಡುಕಾಡಿದೆವು ಎಲ್ಲಿಯೂ ಸಿಗಲಿಲ್ಲ. ನಂತರ ನಮ್ಮ ಸಂಬಂದಿಕರ ಊರುಗಳಾದ ತುಳಜಾಪೂರ, ಸುರಪೂರ, ತಿಂತಣಿ, ಆಲಮೇಲ್, ಹೈದ್ರಾಬಾದ, ಕಲಬುರಗಿ ಮತ್ತು ಸೊಲ್ಲಾಪೂರ ಮುಂತಾದ ಕಡೆಗೆ ಇಲ್ಲಿಯವರೆಗೆ ಹುಡುಕಾಡಲಾಗಿ ಎಲ್ಲಯೂ ನನ್ನ ಗಂಡನು ಸಿಕ್ಕಿರುವದಿಲ್ಲ. ನಮ್ಮ ಗಂಡನನ್ನು ಎಲ್ಲಾಕಡೆ ಹುಡಕಾಡಿ ಸಿಗದಿದ್ದ ಕಾರಣ ತಡವಾಗಿ ಇಂದು ದಿನಾಂಕ:07/02/2022 ರಂದು ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ನನ್ನ ಗಂಡನು 05.6 ಅಡಿ ಎತ್ತರ ಇದ್ದು, ಕೆಂಪು ಬಣ್ಣದವನು, ಇದ್ದು ಮನೆಯಿಂದ ಹೊಗುವಾಗ ಲೈಟ ಪಿಂಕ ಕಲರ ಶರ್ಟ ಮತ್ತು ಕಪ್ಪು ಬಣ್ಣದ ಪ್ಯಾಂಟ ಹಾಕಿಕೊಂಡಿದ್ದು ಕನ್ನಡ, ಹಿಂದಿ, ಮರಾಠಿ ಮಾತನಾಡುತ್ತಾನೆೆ. ನನ್ನ ಗಂಡನಾದ ಶ್ರೀಕಾಂತ ತಂದೆ ಚಂದಪ್ಪ ಜಿಂದೆ ಸಾ: ಗೋಗಿ ಪೇಠ ಈತನು ದಿನಾಂಕ:06/11/2021 ರಂದು 11.00 ಎಎಂ ದಿಂದ ದಿನಾಂಕ:07/11/2021 ರಂದು 04.00 ಪಿಎಂ ಮಧ್ಯದ ಅವಧಿಯಲ್ಲಿ ನಮ್ಮ ಗೋಗಿ ಪೇಠ ಗ್ರಾಮದಲ್ಲಿಯ ಮನೆಯಿಂದ ಹೋಗಿ ಕಾಣೆಯಾಗಿದ್ದು ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವದಿಲ್ಲ. ಕಾಣೆಯಾದ ನನ್ನ ಗಂಡನಿಗೆ ಹುಡುಕಿ ಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 12/2022 ಕಲಂ:ಮನುಷ್ಯ ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ.25/2022 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ: 07/02/2022 ರಂದು 7.00 ಪಿ.ಎಂ.ಕ್ಕೆ ಶ್ರೀ ಅಜೀಜ್ ತಂ/ ಖಲೀಲ್ ಅಹ್ಮದ್ ಮುಲ್ಲಾರ, ಸಾ|| ನೀಲಗಲ್, ತಾ|| ದೇವದುರ್ಗ, ರವರು ಇಂದ ಠಾಣೆಗೆ ಹಾಜರಾಗಿ ಒಂದು ಗಣಕೀಕರಿಸಿದ ದೂರು ಅಜರ್ಿಯನ್ನು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ನನ್ನ ತಮ್ಮ ಅಯಾಜ್ ತಂ/ ಖಲೀಲ್ ಅಹ್ಮದ್ ಮುಲ್ಲಾರ ಈತನು ಇಂದು ದಿನಾಂಕ: 07/02/2022 ರಂದು 11.30 ಎ.ಎಂ ಸುಮಾರಿಗೆ ಬಾಡಿಗೆ ಇದೆ ಶಹಾಪೂರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ನೀಲಗಲ್ನಿಂದ ಹೋಗಿದ್ದನು. ಇಂದು ಮಧ್ಯಾಹ್ನ 2.15 ಪಿ.ಎಂ.ಕ್ಕೆ ನನಗೆ ಪರಿಚಯದ ನರಸಪ್ಪ ತಂ/ ರಾಜಪ್ಪ ಸಾ|| ನೀಲಗಲ್ ಕ್ಯಾಂಪ್ ಈತನು ನನಗೆ ಫೋನ್ ಮಾಡಿ ನಾನು ಮತ್ತು ಯಲ್ಲಪ್ಪ ತಂ/ ಯಂಕಪ್ಪ ಇಳಿಗೇರ ಸಾ|| ನೀಲಗಲ್ ಈತನೊಂದಿಗೆ ಶಹಾಪೂರಕ್ಕೆ ಹೋಗಿ ಮರಳಿ ಊರಿಗೆ ಬರುತ್ತಿದ್ದಾಗ, 2.00 ಪಿ.ಎಂ. ಸುಮಾರಿಗೆ ಹತ್ತಿಗುಡೂರ-ಬೀರನೂರ ಕ್ರಾಸ್ ಮಧ್ಯ ಇರುವ ಒಂದು ಕೆನಾಲ್ ಹತ್ತಿರ ಇದ್ದಾಗ ನನ್ನ ಮುಂದಿನಿಂದ ಅಂದರೆ ದೇವದುರ್ಗ ಕ್ರಾಸ್ ಕಡೆಯಿಂದ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಾ ಲಾರಿಯನ್ನು ಒಮ್ಮೆಲೆ ರೋಡಿನ ಬಲಭಾಗಕ್ಕೆ ಕಟ್ ಹೊಡೆದು ಎದರುನಿಂದ ಬರುತ್ತಿದ್ದ ಒಂದು ಮಿನಿ ಗೂಡ್ಸ್ ವಾಹನಕ್ಕೆ ಡಿಕ್ಕಿಪಡಿಸಿದನು. ಆಗ ನಾನು ಹತ್ತಿರ ಹೋಗಿ ನೋಡಲಾಗಿ ಲಾರಿ.ನಂ. ಎಂ.ಹೆಚ್-30 ಎಬಿ-3865 ಅಂತಾ ಇದ್ದು, ಮಿನಿ ಗೂಡ್ಸ.ನಂ.ಕೆಎ-36 ಎ-7065 ನೇದ್ದರ ಚಾಲಕನಿಗೆ ನೋಡಲಾಗಿ ಇವನು ನಿನ್ನ ತಮ್ಮ ಅಯಾಜ್ ತಂ/ ಖಲೀಲ್ ಅಹ್ಮದ್ ಮುಲ್ಲಾರ ಈತನಿದ್ದು ಭಾರೀ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಇಲ್ಲಿಯೇ ಇದ್ದ ಲಾರಿ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಶೇಖ್ @ ಮಹ್ಮದ್ ಇಮ್ತಿಯಾಜ್ ತಂದೆ ಶೇಖ ಬುರಾನ್, ಸಾ|| ಮೇಡಸಿ, ತಾ|| ಮಾಲೆಗಾಂವ, ಜಿ|| ವಾಶಿಮ್(ಮಹಾರಾಷ್ಟ್ರ ರಾಜ್ಯ) ಅಂತಾ ಹೇಳಿ ಜನ ಸೇರುವುದನ್ನು ನೋಡಿ ತನ್ನ ಲಾರಿಯನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಹೇಳಿದಾಗ ನಾನು ನಮ್ಮೂರಿನಿಂದ ಶಹಾಪೂರಕ್ಕೆ ಬರುವಾಗ ರಸ್ತೆ ಮಧ್ಯದಲ್ಲಿರುವ ಘಟನೆ ಸ್ಥಳಕ್ಕೆ ಬಂದು ನೋಡಲಾಗಿ ಇಲ್ಲಿ ಲಾರಿ ಮತ್ತು ಮಿನಿ ಗೂಡ್ಸ್ ವಾಹನಗಳು ನಿಂತಿದ್ದು, ನನ್ನ ತಮ್ಮನ ಮೃತ ದೇಹ ಇರಲಿಲ್ಲ ನಂತರ ನರಸಪ್ಪನಿಗೆ ಫೋನ್ ಮಾಡಿ ವಿಚಾರಿಸಿದಾಗ ಪೊಲೀಸರು ಶವವನ್ನು ಶಹಾಪೂರ ಸರಕಾರಿ ಆಸ್ಪತ್ರೆಗೆ ಸಾಗಿಸಿರುತ್ತಾರೆ ಅಂತಾ ಹೇಳಿದನು.
ನಾನು ಶಹಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ಮರ್ಚರಿ ಕೋಣೆಯಲ್ಲಿದ್ದ ನನ್ನ ತಮ್ಮನ ಶವವನ್ನು ನೋಡಲಾಗಿ ಎಡಗಣ್ಣ ಕೆಳಗೆ ಭಾರೀ ರಕ್ತಗಾಯವಾಗಿದ್ದು, ಎಡಗಾಲ ತೊಡೆಗೆ ಭಾರೀ ಪೆಟ್ಟಾಗಿ ಮುರಿದಂತೆ ಕಂಡು ಬಂದಿದ್ದು, ಎಡಗಾಲ ಮೊಳ ಕಾಲ ಕೆಳಗೆ ಭಾರೀ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ, ಮತ್ತು ಎಡಗಾಲ ಹೆಬ್ಬೆರಳಿಗೆ, ಹಿಂಬಡದ ಹತ್ತಿರ ರಕ್ತಗಾಯವಾಗಿ ನನ್ನ ತಮ್ಮನು ಮೃತಪಟ್ಟಿದ್ದನು.
ಕಾರಣ ಅಪಘಾತಪಡಿಸಿ ನನ್ನ ತಮ್ಮ ಅಯಾಜ್ ತಂ/ ಖಲೀಲ್ ಅಹ್ಮದ್ ಮುಲ್ಲಾರ, ಈತನ ಸಾವಿಗೆ ಕಾರಣನಾದ ಲಾರಿ.ನಂ. ಎಂ.ಹೆಚ್-30 ಎಬಿ-3865 ನೇದ್ದರ ಚಾಲಕ ಶೇಖ್ @ ಮಹ್ಮದ್ ಇಮ್ತಿಯಾಜ್ ತಂದೆ ಶೇಖ ಬುರಾನ್, ಸಾ|| ಮೇಡಸಿ, ತಾ|| ಮಾಲೆಗಾಂವ, ಜಿ|| ವಾಶಿಮ್(ಮಹಾರಾಷ್ಟ್ರ ರಾಜ್ಯ) ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.25/2022 ಕಲಂ 279, 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 30/2022 ಕಲಂ 143, 147, 148, 341, 323, 324, 307, 354, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 07/02/2022 ರಂದು 4.00 ಪಿ.ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ಸಿದ್ದಮ್ಮ ಗಂಡ ರಾಯಪ್ಪ ಗುಂಡಾಪೂರ ವ|| 48 ಜಾ|| ಕುರುಬರ ಉ|| ಹೊಲಮನೆಕೆಲಸ ಸಾ|| ಮಾವಿನಮಟ್ಟಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನನ್ನ ಗಂಡನಾದ ರಾಯಪ್ಪನ ಅಣ್ಣನ ಹೆಂಡತಿ ಅಂದರೆ ತಿಪ್ಪಮ್ಮ ಗಂಡ ನಿಂಗಪ್ಪ ಗುಂಡಾಪೂರ ಇವರಿಗೂ ಮತ್ತು ನಮ್ಮೂರ ಮಲ್ಲಮ್ಮ ಗಂಡ ಭೀಮಣ್ಣ ಹೊಸಮನಿ ಇವರಿಗೂ ಮನೆಯ ಮುಂದಿನ ಜಾಗದ ವಿಚಾರದಲ್ಲಿ ತಕರಾರು ಬಂದು ಜಗಳವಾಗಿ ಮಲ್ಲಮ್ಮಳ ಮಗನಾಧ ಗುರಪ್ಪ ತಂದೆ ಭೀಮಣ್ಣ ಹೊಸಮನಿ ಈತನು ತನ್ನೊಂದಿಗೆ ಕೆಲವು ಜನರನ್ನು ಕರೆದುಕೊಂಡು ಬಂದು ನಮ್ಮ ಅಕ್ಕಳಾದ ತಿಪ್ಪಮ್ಮಳೊಂದಿಗೆ ಹಾಗೂ ಅಕ್ಕನ ಮಕ್ಕಳಾದ ದೇವಪ್ಪ, ಮಾಳಪ್ಪ, ಮತ್ತು ಭೀಮರಾಯ ಹಾಗೂ ನನ್ನ ಮಗನಾದ ಬೀರಪ್ಪ ತಂದೆ ರಾಯಪ್ಪ ಗುಂಡಾಪೂರ ಇವರೊಂದಿಗೆ ಅನೇಕ ಸಲ ಜಗಳ ಮಾಡಿ ದ್ವೇಷ ಸಾಧಿಸುತ್ತಾ ಬಂದಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ 06/02/2022 ರಂದು ಮುಂಜಾನೆ 9.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಅಕ್ಕಳಾದ ತಿಪ್ಪಮ್ಮ ಗಂಡ ನಿಂಗಪ್ಪ ಗುಂಡಾಪೂರ ಇಬ್ಬರೂ ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಿದ್ದೆವು. ಅದೇ ಸಮಯಕ್ಕೆ ನಮ್ಮ ಅಕ್ಕನ ಮಗನಾದ ದೇವಪ್ಪ ಗುಂಡಾಪೂರ ಈತನು ಹೊರಗಡೆಯಿಂದ ಮನೆಗೆ ಬರುತ್ತಿದ್ದನು ಆಗ ನಮ್ಮೂರ 1) ಗುರಪ್ಪ ತಂದೆ ಭೀಮಣ್ಣ ಹೊಸಮನಿ 2) ವೇಗೇಶ ತಂದೆ ಕಾಳಪ್ಪ ಹೊಸಮನಿ 3) ಕರೆಪ್ಪ ತಂದೆ ಭೀಮಣ್ಣ ಹೊಸಮನಿ 4) ರಾಜಪ್ಪ ತಂದೆ ಭೀಮಣ್ಣ ಹೊಸಮನಿ 5) ಮಲ್ಲಮ್ಮ ಗಂಡ ಭೀಮಣ್ಣ ಹೊಸಮನಿ 6) ಸೀತಮ್ಮ ಗಂಡ ಕಾಳಪ್ಪ ಹೊಸಮನಿ 7) ರಾಜಮ್ಮ ಗಂಡ ರಾಜಪ್ಪ ಹೊಸಮನಿ ಇವರೆಲ್ಲರೂ ಕೂಡಿ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು, ಬಡಿಗೆ, ಕೊಡಲಿ ಹಿಡಿದುಕೊಂಡು ಬಂದು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಬರುತ್ತಿದ್ದ ನಮ್ಮ ಅಕ್ಕನ ಮಗನಾದ ದೇವಪ್ಪ ಗುಂಡಾಪೂರ ಈತನಿಗೆ ತಡೆದು ನಿಲ್ಲಿಸಿ ಏನಲೇ ದೇವ್ಯಾ ಸೂಳೆ ಮಗನೇ ನಿಮಗೆ ಎಷ್ಟು ಸಲ ಹೊಡಿದರೂ ನಿಮ್ಮ ಸೊಕ್ಕು ಹೋಗಿಲ್ಲವಲ್ಲಾ ಅಂತಾ ಬೈಯುತ್ತಾ ಜಗಳ ತೆಗೆದು ಬಡಿಗೆಯಿಂದ ಬೆನ್ನಿಗೆ ಹೊಡೆದಿದ್ದರಿಂದ ದೇವಪ್ಪನು ಸತ್ತೆನೆಪ್ಪೋ ಅಂತಾ ನೆಲಕ್ಕೆ ಬಿದ್ದು ಚೀರುವ ಸಪ್ಪಳ ಕೇಳಿ ತಕ್ಷಣ ನಾನು ಮತ್ತು ನಮ್ಮ ಅಕ್ಕಳಾದ ತಿಪ್ಪಮ್ಮ ಇಬ್ಬರೂ ಬಿಡಿಸಲು ಹೋದಾಗ ಗುರಪ್ಪನು ನಮ್ಮ ಅಕ್ಕನ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದನು. ಮಲ್ಲಮ್ಮಳು ನನ್ನ ಕೂದಲು ಹಿಡಿದು ಎಳೆದಾಡಿ ಕೈಯಿಂದ ನನ್ನ ಕಪಾಳಕ್ಕೆ ಹೊಡೆದಳು. ಕರೆಪ್ಪ ಮತ್ತು ವೇಗೇಶ ಇಬ್ಬರೂ ಕೂಡಿ ನಮ್ಮ ಮಗನಾದ ದೇವಪ್ಪನಿಗೆ ಕೊಲೆ ಮಾಡಿ ಸಾಯಿಸುವ ಉದ್ದೇಶದಿಂದ ನೆಲಕ್ಕೆ ಕೆಡವಿ ಕುತ್ತಿಗೆ ಹಿಚುಕುತ್ತಿದ್ದಾಗ ನನ್ನ ಮಗನಾದ ಬೀರಪ್ಪ ತಂದೆ ರಾಯಪ್ಪ ಗುಂಡಾಪೂರ ಈತನು ಬಂದು ದೇವಪ್ಪನಿಗೆ ಕುತ್ತಿಗೆ ಹಿಚುಕಿ ಸಾಯಿಸುವುದನ್ನು ಬಿಡಿಸಿಕೊಂಡನು. ಆಗ ಕರೆಪ್ಪನು ನಮ್ಮ ಮಗನಾದ ಬೀರಪ್ಪನಿಗೆ ಕಪಾಳಕ್ಕೆ ಹೊಡೆದನು. ಅವರಲ್ಲಿನ ರಾಜಪ್ಪನು ನಮ್ಮ ಅಕ್ಕನ ಬೆನ್ನಿಗೆ ಬಡಿಗೆಯಿಂದ ಹೊಡೆದು ಗುಪ್ತಗಾಯ ಮಾಡಿದನು. ಆಗ ಸೀತಮ್ಮ ಮತ್ತು ರಾಜಮ್ಮ ಇವರು ನಮ್ಮ ಅಕ್ಕಳಿಗೆ ನೆಲಕ್ಕೆ ಕೆಡವಿ ಒದ್ದಿದ್ದರಿಂದ ಅವಳಿಗೆ ಭಾರೀ ಗುಪ್ತಗಾಯ ಮಾಡಿದ್ದು ಗುರಪ್ಪನು ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ಇರುತ್ತದೆ. ಅವರು ನಮಗೆ ಅವಾಚ್ಯವಾಗಿ ಬೈಯುತ್ತಾ ಕೈಯಿಂದ, ಬಡಿಗೆಯಿಂದ ಹೊಡೆಯುತ್ತಿದ್ದಾಗ ನಾವು ನೆಲಕ್ಕೆ ಬಿದ್ದು ಸತ್ತೆವೆಪ್ಪೋ ಅಂತಾ ಚೀರುತ್ತಿದ್ದಾಗ ಬೀರಪ್ಪ ತಂದೆ ಮಲ್ಲಣ್ಣ ಪೂಜಾರಿ ಮತ್ತು ರಮೇಶ ತಂದೆ ತಂದೆ ಭೀಮಣ್ಣ ಜಂಗಳಿ ಮತ್ತು ಮಾಳಪ್ಪ ತಂದೆ ನಿಂಗಪ್ಪ ಹೂಗಾರ ಇವರು ಬಂದು ಜಗಳ ಬಿಡಿಸಿಕೊಂಡರು. ನಂತರ ಎಲ್ಲರೂ ನಮಗೆ ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಕೊಲೆ ಮಾಡದೇ ಬಿಡುವುದಿಲ್ಲ ಅಂತ ಜೀವದ ಭಯ ಹಾಕಿದರು. ನಮ್ಮ ಅಕ್ಕಳಾದ ತಿಪ್ಪಮ್ಮ ಗಂಡ ನಿಂಗಪ್ಪ ಗುಂಡಾಪೂರ ವ|| 55 ಇವಳಿಗೆ ಗಾಯಗಳಾಗಿದ್ದರಿಂದ ಸಕರ್ಾರಿ ಆಸ್ಪತ್ರೆ ಯಾದಗಿರಿಯಲ್ಲಿ ಸೇರಿಕೆ ಮಾಡಿದ್ದು ಮತ್ತು ನನಗೆ ಹಾಗೂ ನಮ್ಮ ಮಕ್ಕಳಾದ ದೇವಪ್ಪ, ಬೀರಪ್ಪ ಇವರಿಗೆ ಅಷ್ಟೊಂದು ಗಾಯಗಳಾಗದ ಕಾರಣ ನಾವು ಆಸ್ಪತ್ರೆಗೆ ತೋರಿಸಿಕೊಂಡಿಲ್ಲ. ನಂತರ ನಾನು ಊರಲ್ಲಿ ಹಿರಿಯರಿಗೆ ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ ಗುರಪ್ಪ ತಂದೆ ಭೀಮಣ್ಣ ಹೊಸಮನಿ ಸಂಗಡ 6 ಜನರು ಕೂಡಿಕೊಂಡು ಹಳೆಯ ದ್ವೇಷದಿಂದ ನನ್ನ ಅಕ್ಕನ ಮಗನಾದ ದೇವಪ್ಪನಿಗೆ ರಸ್ತೆಯ ಮೇಲೆ ತಡೆದು ನಿಲ್ಲಿಸಿ ಜಗಳ ಮಾಡಿ ಕೊಲೆ ಮಾಡುವ ಉದ್ದೇಶದಿಂದ ದೇವಪ್ಪನಿಗೆ ನೆಲಕ್ಕೆ ಕೆಡವಿ ಹೊಡೆಯುತ್ತಾ ಕುತ್ತಿಗೆ ಹಿಚುಕಿ ಸಾಯಿಸಲು ಪ್ರಯತ್ನಿಸಿದ್ದು ಅಲ್ಲದೇ ನಮ್ಮ ಅಕ್ಕಳಾದ ತಿಪ್ಪಮ್ಮಳಿಗೆ ಕೈಯಿಂದ, ಬಡಿಗೆಯಿಂದ ಹೊಡೆದು ಗಾಯಗೊಳಿಸಿದ್ದು ಅಲ್ಲದೇ ಸೀರೆ ಹಿಡಿದು ಜಗ್ಗಾಡಿ ಕೈಯಿಂದ ಹೊಡೆದು ಮಾನಭಂಗ ಮಾಡಲು ಪ್ರಯತ್ನಿಸಿ, ನನಗೆ, ನಮ್ಮ ಮಗನಾದ ಬೀರಪ್ಪನಿಗೆ ಕೈಯಿಂದ ಹೊಡೆದು ಗುಪ್ತಗಾಯ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 07 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 30/2022 ಕಲಂ 143, 147, 148, 341, 323, 324, 307, 354, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 31/2022 ಕಲಂ: 279, 337, 338 ಐಪಿಸಿ : ಇಂದು ದಿನಾಂಕ 07.02.2022 ರಂದು 06.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಪರಮವ್ವ ಗಂಡ ಜುಮ್ಮಪ್ಪ ಬಡಿಗೇರ ವ|| 45ವರ್ಷ ಜಾ|| ಹಿಂದೂ ಹೊಲೆಯ ಉ|| ಕೂಲಿಕೆಲಸ ಸಾ|| ರಾಂಪೂರ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನನ್ನ ಗಂಡನಾದ ಜುಮ್ಮಪ್ಪ ತಂದೆ ಮಲ್ಲಯ್ಯ ಬಡಿಗೇರ ವ|| 50 ವರ್ಷ ಈತನು ಕೂಲಿಕೆಲಸ ಮಾಡಿಕೊಂಡು ಇರುತ್ತಾನೆ. ಹೀಗಿದ್ದು ದಿನಾಂಕ 29.01.2022 ರಂದು 6.30 ಪಿಎಂ ಸುಮಾರಿಗೆ ನನ್ನ ಗಂಡನು ಕೆಂಭಾವಿಯಲ್ಲಿ ಕೆಲಸವಿದೆ ಅಂತ ಹೇಳಿ ನನ್ನ ಗಂಡನಿಗೆ ಪರಿಚಯದವನಾದ ಅಮಲಿಹಾಳ ಗ್ರಾಮದ ಬಸವರಾಜ ತಂದೆ ಸೋಮಪ್ಪ ಅಂಗಡಿ ಇವರ ಮೋಟರ ಸೈಕಲ ಮೇಲೆ ಕೆಂಭಾವಿಗೆ ಹೋದನು. ನಂತರ 7 ಪಿಎಮ್ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನಾದ ಜುಮ್ಮಪ್ಪ ಈತನು ನನಗೆ ಪೋನ ಮಾಡಿ ತಾನು ಕುಳಿತು ಹೊರಟ ಮೋಟರ ಸೈಕಲ ಮೇಲೆ ಕೆಂಭಾವಿ ಸಮೀಪದ ಹೋಲಿಪೇತ ಶಾಲೆಯ ಮುಂದೆ ರೋಡಿನಲ್ಲಿ ಹೋಗುತ್ತಿದ್ದಾಗ ನಾನು ಕುಳಿತ ಮೋಟರ್ ಸೈಕಲ ಚಾಲಕನಾದ ಬಸವರಾಜ ತಂದೆ ಸೋಮಪ್ಪ ಅಂಗಡಿ ಸಾ|| ಅಮಲಿಹಾಳ ಈತನು ತನ್ನ ಮೋಟರ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿ ಒಮ್ಮಲೇ ಬಲಕ್ಕೆ ಕಟ್ ಮಾಡಿದಾಗ ಮೋಟರ್ ಸೈಕಲ ಸ್ಕಿಡ್ಡಾಗಿ ಬಿದ್ದು ನಾವಿಬ್ಬರೂ ನೆಲಕ್ಕೆ ಬಿದ್ದಿದ್ದು ಮೋಟರ ಸೈಕಲ ಚಾಲಕನಿಗೆ ಯಾವದೇ ಗಾಯಗಳಾಗಿರುವದಿಲ್ಲ ಆದರೆ ನನಗೆ ಎಡಗಾಲ ಮೊಳಕಾಲಿನ ಕೆಳಗೆ ಭಾರೀ ರಕ್ತಗಾಯವಾಗಿ ಕಾಲು ಮುರಿದಂತಾಗಿರುತ್ತದೆ ಕೂಡಲೇ ನೀನು ಬರಬೇಕು ಅಂತ ತಿಳಿಸಿದಾಗ ನಾನು ಹಾಗು ನಮ್ಮ ಸಂಬಂದಿಯಾದ ಲಕ್ಷ್ಮಣ ತಂದೆ ನಿಂಗಪ್ಪ ಹೊಸಮನಿ ನಾವಿಬ್ಬರೂ ಕೂಡಿ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ ನನ್ನ ಗಂಡನು ರೋಡಿನ ಪಕ್ಕದಲ್ಲಿ ಬಿದ್ದಿದ್ದು, ನೊಡಲಾಗಿ ಎಡಗಾಲ ಮೊಳಕಾಲ ಕೆಳಗೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ. ನಂತರ ನನ್ನ ಗಂಡನಿಗೆ ಅಪಘಾತ ಪಡಿಸಿದ ಮೋಟರ ಸೈಕಲ ಅಲ್ಲಿಯೇ ಬಿದ್ದಿದ್ದು ಅದು ನೋಡಲಾಗಿ ಅದು ಹೊಸ ಮೋಟರ್ ಸೈಕಲ ಆಗಿದ್ದರಿಂದ ಯಾವದೇ ನಂಬರ ಕಾಣಲಿಲ್ಲ ನಂತರ ಅಲ್ಲಿಯೇ ಇದ್ದ ನಮ್ಮ ಸಂಬಂದಿಯಾದ ಲಕ್ಷ್ಮಣ ಇವರಿಂದ ಅದರ ಚೆಸ್ಸಿ ನಂಬರ ಕೇಳಿ ತಿಳಿಯಲಾಗಿ ಎಮ್ಡಿ625ಬಿಕೆ2ಎಕ್ಸ್ಎಲ್1ಬಿ02274 ಅಂತ ಗೊತ್ತಾಯಿತು. ನಂತರ ಅಪಘಾತ ಪಡಿಸಿದ ಮೋಟರ ಸೈಕಲ ಚಾಲಕ, ನಾನು ಹಾಗು ನಮ್ಮ ಸಂಬಂದಿ ಲಕ್ಷ್ಮಣ ನಾವೂ ಮೂರು ಜನರು ಸೇರಿ ನನ್ನ ಗಂಡನಿಗೆ ಉಪಚಾರ ಕುರಿತು ಕೆಂಭಾವಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿದ್ದು ನನ್ನ ಗಂಡನಿಗೆ ಕಾಲಿನಿಂದ ಬಹಾಳಷ್ಟು ರಕ್ತಸ್ರಾವವಾಗುತ್ತಿದ್ದರಿಂದ ವೈದ್ಯರು ಹೆಚ್ಚಿನ ಉಪಚಾರ ಕುರಿತು ಬೇರೆಡೆ ಹೋಗಲು ತಿಳಿಸಿದ ಮೇರೆಗೆ ನಾನು ಹಾಗು ನಮ್ಮ ಸಂಬಂದಿ ಲಕ್ಷ್ಮಣ ಇಬ್ಬರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ನನ್ನ ಗಂಡನಿಗೆ ಕೂಡಿಸಿಕೊಂಡು ಹೆಚ್ಚಿನ ಉಪಚಾರ ಕುರಿತು ವಿಜಯಪುರದ ಸನ್ನತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನ್ನ ಗಂಡನಿಗೆ ಅಪಘಾತ ಪಡಿಸಿ ಭಾರೀ ರಕ್ತಗಾಯ ಪಡಿಸಿದ ಮೋಟರ ಸೈಕಲ ಚೆಸ್ಸಿ ನಂಬರ ಎಮ್ಡಿ625ಬಿಕೆ2ಎಕ್ಸ್ಎಲ್1ಬಿ02274 ನೇದ್ದರ ಚಾಲಕ ಬಸವರಾಜ ತಂದೆ ಸೋಮಪ್ಪ ಅಂಗಡಿ ಸಾ|| ಅಮಲಿಹಾಳ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 31/2022 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 34/2022 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 07/02/2022 ರಂದು 05.20 ಪಿ.ಎಮ್ ಕ್ಕೆ ನಾನು ಠಾಣೆಯ ಎಸ್.ಹೆಚ್.ಡಿ. ಕರ್ತತ್ಯದಲ್ಲಿದ್ದಾಗ ಶ್ರೀ ನಬಿಲಾಲ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ: 07/02/2022 ರಂದು 3:00 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ, ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸುರಪುರ ನಗರದ ನಗರಸಭೆ ಕಾಯರ್ಾಲಯದ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಡಾ|| ದೇವರಾಜ ಬಿ. ಡಿ.ಎಸ್.ಪಿ. ಸಾಹೇಬರು ಸುರಪೂರ ಉಪ-ವಿಭಾಗ ಸುರಪೂರ ರವರ ಮಾರ್ಗದರ್ಶನದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಹೊನ್ನಪ್ಪ ಸಿಪಿಸಿ 427 ಸುರಪುರ ಠಾಣೆ 2) ಶ್ರೀ ಶರಣಗೌಡ ಸಿಪಿಸಿ 218 ಡಿಎಸ್ಪಿ ಆಫೀಸ್ ಸುರಪುರ ಇವರಿಗೆ ವಿಷಯ ತಿಳಿಸಿ, ಹೊನ್ನಪ್ಪ ಸಿಪಿಸಿ-427 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೊನ್ನಪ್ಪ ಸಿಪಿಸಿ-427 ರವರು ಇಬ್ಬರು ಪಂಚರಾದ 1) ಬಸನಗೌಡ ತಂದೆ ಶಿವಪ್ಪಗೌಡ ಮೇಟಿ ವ|| 60 ವರ್ಷ ಜಾ|| ಹಿಂದೂ ರೆಡ್ಡಿ ಉ|| ಒಕ್ಕಲುತನ ಸಾ|| ಮಲ್ಲಾ (ಕೆ) ತಾ|| ಸುರಪೂರ 2) ಶ್ರೀ ಮಾನಪ್ಪ ತಂದೆ ಭೀಮಣ್ಣ ಚಳ್ಳಿಗಿಡ ವ|| 34 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಸಾ|| ಭೋವಿಗಲ್ಲಿ ಸುರಪುರ ತಾ|| ಸುರಪೂರ ಇವರನ್ನು 03:30 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಪಂಚರಿಗೂ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 03:40 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ. ಕೆಎ-33. ಜಿ-0094 ನೇದ್ದರಲ್ಲಿ ಹೊರಟು 03:50 ಪಿ.ಎಮ್ ಕ್ಕೆ ಸುರಪುರ ನಗರದ ನಗರಸಭೆ ಕಾಯರ್ಾಲಯದ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ನಗರಸಭೆ ಕಾಯರ್ಾಲಯದ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಿದ್ದು, ಇನ್ನೊಬ್ಬನು ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 04:00 ಪಿ.ಎಮ್ ಕ್ಕೆ ದಾಳಿ ಮಾಡಿ ಇಬ್ಬರಿಗೂ ಹಿಡಿದಿದ್ದು, ಅವರ ಹೆಸರು ವಿಳಾಸ ವಿಚಾರಿಸಲಾಗಿ ಅವರ ಹೆಸರು 1) ಶರಣಪ್ಪ ತಂದೆ ನಿಂಗಪ್ಪ ಕುಂಬಾರ ವ|| 35 ವರ್ಷ ಜಾ|| ಕುಂಬಾರ ಉ|| ಟೇಲರ್ ಸಾ|| ಶರಣಬಸವೇಶ್ವರ ಗುಡಿ ಹತ್ತಿರ ತಿಮ್ಮಾಪುರ ತಾ|| ಸುರಪುರ 2) ಶಿವಪುತ್ರ ತಂದೆ ಯಂಕಪ್ಪ ದಾಸರ ವಯಾ|| 32 ಜಾ|| ದಾಸರ ಉ|| ಕೂಲಿ ಸಾ|| ದಾಸರ ಓಣಿ ಸುರಪುರ ಅಂತಾ ತಿಳಿಸಿದ್ದು, ಸದರಿಯವರು ತಾವು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವರ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 1360=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು, ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 04:00 ಪಿಎಮ್ ದಿಂದ 05:00 ಪಿಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ 05:20 ಪಿಎಮ್ಕ್ಕೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತರೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು, ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂ 34/2022 ಕಲಂ: 78 (3) ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

 


ಸ್ಶೆದಾಪೂರ ಪೊಲೀಸ್ ಠಾಣೆ:-
ಗುನ್ನೆ ಸಂಖ್ಯೆ 22/2022 ಕಲಂ 417, 420 ಸಂಗಡ 34 ಐಪಿಸಿ : ದಿನಾಂಕ 07.02.2022 ರಂದು ರಾತ್ರಿ 8 ಗಂಟೆಗೆ ದೇವಿಂದ್ರಮ್ಮ ಗಂಡ ಮೋಹನರೆಡ್ಡಿ ವ|| 46 ವರ್ಷ, ಜಾ|| ಲಿಂಗಾಯತ ಉ|| ಮನೆಕೆಲಸ, ಸಾ|| ರಾಚನಳ್ಳಿ ಗ್ರಾಮ ಹಾ|| ವ|| ಜೋಳದಡಿಗಿ ಗ್ರಾಮ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ಶ್ರೀ ಮೋಹನರೆಡ್ಡಿ ತಂದೆ ಮಹಾದೇವಪ್ಪ ಸಂಗಾರೆಡ್ಡಿ ಸಾ|| ರಾಚನಳ್ಳಿ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀಲಹಳ್ಳಿ ಈತನು ನನ್ನನ್ನು 11-05-1993 ರಂದು ಜೋಳದಡಿಗಿ ಗ್ರಾಮದಲ್ಲಿ ನನ್ನ ತವರು ಮನೆಯ ಮುಂದೆ ಗುರುಹಿರಿಯರ ಸಮಕ್ಷಮ ಮದುವೆ ಮಾಡಿಕೊಂಡಿದ್ದು ನಂತರ 3-4 ವರ್ಷದವರೆಗೆ ಚನ್ನಾಗಿ ಸಂಸಾರ ಮಾಡಿದ್ದು ನನಗೆ ಸಿದ್ದಲಿಂಗರೆಡ್ಡಿ ತಂದೆ ಮೋಹನರೆಡ್ಡಿ ಸಂಗಾರೆಡ್ಡಿ ಎಂಬ ಮಗನಿದ್ದು 3-4 ನರ್ಷಗಳಾದ ನಂತರ ವರದಕ್ಷಿಣೆ ಕಿರುಕುಳ ಮಾನಸಿಕ ಹಿಂಸೆ ದಹಿಕ ಕಿರುಕುಳ ಹೊಡೆಬಡೆ ಮಾಡಿರುತ್ತಾನೆ. ಈ ಬಗ್ಗೆ ತಮ್ಮಲ್ಲಿ ಠಾಣಾ ಪ್ರಕರಣ ದಾಖಾಲಾಗಿದಿರುತ್ತದೆ. ನಂತರ ನನ್ನನ್ನು ಮನೆಯಲ್ಲಿ ಸೇರಿಸಿಕೊಳ್ಳದೆ ಹೊಡೆಬಡೆ ಮಾಡಿ ಹೊರಹಾಕಿದ್ದರಿಂದ ನಾನು ಜೀವನಾಂಶ ಕೋರಿ ಮಾನ್ಯ ನ್ಯಾಯಾಲಯಕ್ಕೆ 2021 ರಲ್ಲಿ ಜೀವನಾಂಶ ಕೋರಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ನನ್ನ ಗಂಡನಾದ ಮೋಹನರೆಡ್ಡಿ ಈತನು ಮಾನ್ಯ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದೆನೆಂದರೆ ದಿನಾಂಕ 24-03-1988 ರಂದು ಶ್ರೀ ಬಸವೇಶ್ವರ ದೇವಾಸ್ಥಾನ ತಾ|| ಸುರಪುರದಲ್ಲಿ ಶ್ರೀಮತಿ ತಿಪ್ಪಮ್ಮ ಈಕೆಯನ್ನು ಮದುವೆಯಾಗಿರುತ್ತೇನೆ. ಮತ್ತು ರೇಖಾ ಎಂಬ ಮಗಳು ಇರುತ್ತಾಳೆ ಅಂತಾ ಹೇಳಿಕೆ ಕೊಟ್ಟಿದ್ದಕ್ಕಾಗಿ ನನಗೆ ಮೊದಲ ಹೆಂಡತಿ ಜೀವಂತ ಇರುವ ಬಗ್ಗೆ ಗೊತ್ತಾಗಿದ್ದು ನನಗೆ ಬಾರಿ ಮೋಸ, ವಂಚನೆ ನನ್ನ ಗಂಡನಾದ ಮೋಹನರೆಡ್ಡಿ ಮಾಡಿರುತ್ತಾನೆ. ಮೊದಲ ಹೆಂಡತಿ ಜೀವಂತ ಇರುವುದನ್ನು ನನಗೆ ಹೇಳದೆ ಮೋಸ ಮಾಡಿ ಮದುವೆ ಮಾಡಿಕೊಂಡಿದ್ದು ಮತ್ತು ನನ್ನ ಬಿಟ್ಟು 3ನೇ ಮದುವೆ ಮಾಡಿಕೊಂಡಿರುತ್ತಾನೆ. 25-06-2007 ರಂದು ಶ್ರೀ ಅಮರೇಶ್ವರ ದೇವಾಸ್ಥಾನ ಗುರಗುಂಟದಲ್ಲಿ 3ನೇ ಮದುವೆ ಆದ ಬಗ್ಗೆ ಲಗ್ನ ಪತ್ರಿಕೆ ಹಾಗೂ ಪೊಟೊಗಳನ್ನು ತಾನೆ ಸಲ್ಲಿಸಿದ್ದು ಸೇವಾಪುಸ್ತಕದಲ್ಲಿ ಕಾನೂನು ಪ್ರಕಾರ ಮೊದಲನೆ ಹೆಂಡತಿ ಸೇರಿಸದೇ 3ನೇ ಹೆಂಡತಿಯಾದ ಗುರುಸಂಗಮ್ಮ ಹೆಂಡತಿಯನ್ನು ಸೇರ್ಪಡೆಮಾಡಿದ್ದು ನಾವಿಬ್ಬರೂ ಹೆಂಡತಿಯರಿದ್ದು ಗೊತ್ತಿದ್ದು ಮದುವೆ ಮಾಡಿಕೊಂಡಿರುತ್ತಾಳೆ. ಮಾನ್ಯರವರು ಶ್ರೀ ಮೋಹನರೆಡ್ಡಿ ಶಿಕ್ಷಕರು ಮತ್ತು 3ನೇ ಹೆಂಡತಿಯಾದ ಗುರುಸಂಗಮ್ಮಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ತಮ್ಮಲ್ಲಿ ವಿನಂತಿ. 1997 ಇಸ್ವಿ ಯಿಂದ ಇಲ್ಲಿಯವರೆಗೆ ನನ್ನ ಗಂಡ ಮೋಸ ಮಾಡಿರುತ್ತಾನೆ ಅಂತಾ ಆಪಾದನೆ.

 


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ. 26/2022 ಕಲಂ: 00 ಒಕ ಕಅ (ಮಹಿಳೆ ಕಾಣೆ) : ಪಿರ್ಯಾಧಿಯ ಮಗಳು ದಿನಾಂಕ: 04.02.2022 ರಂದು ಸಾಯಂಕಾಲ 5.00 ಗಂಟೆಯಿಂದ 8.00 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಎರಡನೇ ಮಗಳಾದ ಭೀಮಮ್ಮ ಈಕೆಯು ಗಬರ್ಿಣಿ ಇರುವುದರಿಂದ ಈಕೆಗೆ ಆಸ್ಪತ್ರೆಗೆ ತೋರಿಸಿಕೊಂಡು ಬರಲು ಫಿಯರ್ಾದಿಯು ಗಾಜರಕೋಟ್ ಗ್ರಾಮಕ್ಕೆ ಹೋಗಿದ್ದಾಗ ಮನೆಯಲ್ಲಿ ತನ್ನ ಕೊನೆಯ ಮಗಳಾದ ಸಾವಿತ್ರಮ್ಮ ಈಕೆಯು ಯಾರಿಗೂ ಹೇಳದೇ ಮನೆಯಿಂದ ಕಾಣೆಯಾಗಿರುತ್ತಾಳೆ. ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕು ಅಂತಾ ನೀಡಿದ ನೀಡಿದ ಗಣಕಿಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 26/2022 ಕಲಂ: 00 ಒಕ ಕಅ (ಮಹಿಳೆ ಕಾಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 27/2022 ಕಲಂ 279, 304 (ಎ) ಐಪಿಸಿ : ಫಿಯರ್ಾದಿಯ ತಾಯಿಯು ತನ್ನ ಮಗನೊಂದಿಗೆ ಅನ್ನಪೂರ ಸೀಮಾಂತರ ಹೊಲಕ್ಕೆ ಹೋಗಿ ಮರಳಿ ತಮ್ಮ ಮನೆಗೆ ಬರುತ್ತಿರುವಾಗ ಅಮ್ಮಪಲ್ಲಿ ಗೇಟ್ ಹತ್ತಿರ ಇಂದು ದಿನಾಂಕ: 18.12.2021 ರಂದು ಮಧ್ಯಾಹ್ನ 1.30 ಗಂಟೆಯ ಸುಮಾರಿಗೆ ನಡೆದುಕೊಂಡು ಹೋಗುತ್ತಿರುವಾಗ ಮೋಟರ ಸೈಕಲ ನಂಬರ ಕೆಎ-33 ವಾಯ್-3708 ನೇದ್ದರ ಸವಾರ ಆರೋಪಿತನು ತನ್ನ ಮೋಟರ ಸೈಕಲನ್ನು ಅತಿವೇಗ ಹಾಗು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ಪಿರ್ಯಾಧಿಯ ತಾಯಿ ತಲೆಗೆ ಬಾರಿ ಸ್ವರೂಪದ ಗುಪ್ತ ಗಾಯಗೊಂಡು ಉಪಚಾರಕ್ಕಾಗಿ ನಾರಾಯಪೇಟ್ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಸದರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ 03.15 ಪಿಎಮ್ ಕ್ಕೆ ಮೃತಪಟ್ಟಿದ್ದು ಸದರಿ ಮೋಟರ್ ಸೈಕಲ್ ಸವಾರನ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ಫಿಯರ್ಾದಿ ವಗೈರೆ ಸಾರಾಂಶ ಇರುತ್ತದೆ.


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 05/2022 ಕಲಂ 279, 338 ಐಪಿಸಿ : ಇಂದು ದಿನಾಂಕ 07/02/2022 ರಂದು ಬೆಳಿಗ್ಗೆ 9 ಎ.ಎಂ.ಕ್ಕೆ ಈ ಕೇಸಿನ ಪಿಯರ್ಾದಿಯ ಗಂಡನಾದ ಗಾಯಾಳು ಶರಣಪ್ಪ ಇವರು ತಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಯು-5458 ನೇದ್ದರ ಮೇಲೆ ತಮ್ಮ ಮಗನಿಗೆ ಶಾಲೆಗೆ ಬಿಡಲು ಆತನಿಗೆ ಹಿಂಬದಿ ಕೂಡಿಸಿಕೊಂಡು ತಮ್ಮ ಮೋಟಾರು ಸೈಕಲ್ನ್ನು ನಡೆಸಿಕೊಂಡು ಹೋಗುವಾಗ ಮಾರ್ಗ ಮದ್ಯೆ ಹೊಸಳ್ಳಿ ಕ್ರಾಸ್ ಹತ್ತಿರ ಬೂದಿ ಲಾರಿ ಟ್ಯಾಂಕರ್ ನಂ.ಕೆಎ-36, ಬಿ-2446 ನೆದ್ದರ ಚಾಲಕ ಲಕ್ಷ್ಮಣ ತಂದೆ ರಾಮಪ್ಪ ಜಾಧವ ಸಾ;ಮಾರನಾಳ, ತಾ;ಸುರಪುರ ಈತನು ತನ್ನ ವಾಹನವನ್ನು ಹೊಸ ಬಸ್ ನಿಲ್ದಾಣದ ರಸ್ತೆ ಕಡೆಯಿಂದ ಗಂಜ್ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ತನ್ನ ಮುಂದೆ ಹೊರಟಿದ್ದ ಮೋ.ಸೈಕಲ್ ನೇದ್ದಕ್ಕೆ ಹಿಂದಿನಿಂದ ಹೋಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಗಾಯಾಳು ಶರಣಪ್ಪರವರಿಗೆ ಎಡಗಾಲು ಪಾದದ ಮೇಲೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯ ಹಾಗೂ ಬಲಗಾಲಿನ ಹೆಬ್ಬೆರೆಳಿಗೆ ರಕ್ತಗಾಯ ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ, ಮೋಟಾರು ಸೈಕಲ್ ಹಿಂಬದಿ ಕುಳಿತಿದ್ದ ಸಂಜಯ್ ಈತನಿಗೆ ಯಾವುದೇ ಗಾಯ, ವಗೈರೆ ಕಂಡು ಬಂದಿರುವುದಿಲ್ಲ, ಅಪಘಾತಪಡಿಸಿದ ಬೂದಿ ಲಾರಿ ಟ್ಯಾಂಕರ್ ನಂ.ಕೆಎ-36, ಬಿ-2446 ನೆದ್ದರ ಚಾಲಕನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಈ ಘಟನೆ ಬಗ್ಗೆ ಮನೆಯ ಹಿರಿಯರು ವಿಚಾರಿಸಿ ತಡವಾಗಿ ನೀಡಿದ ಪಿಯರ್ಾದಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 05/2022 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಇತ್ತೀಚಿನ ನವೀಕರಣ​ : 08-02-2022 11:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080