ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-04-2022
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 44/2022 ಕಲಂ. 279, 337, 338 ಐಪಿಸಿ : ದಿನಾಂಕ: 07-04-2022 ರಂದು ಮದ್ಯರಾತ್ರಿ 12-10 ಗಂಟೆಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆ ಯಿಂದ ಎಮ್.ಎಲ್.ಸಿ ಇದೆ ಅಂತಾ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಭೆಟಿ ನೀಡಿ ಅಲ್ಲಿ ಉಪಚಾರ ಪಡೆಯುತಿದ್ದ ಗಾಯಾಳುಗಳನ್ನು ವಿಚಾರಿಸಿ ಅವರಲ್ಲಿ ಕಮಲಿಬಾಯಿ ಈಕೆಯು ಹೇಳಿಕೆ ಪಿರ್ಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 06-04-2022 ರಂದು ರಾತ್ರಿ ಸಮಯದಲ್ಲಿ ನನ್ನ ತಾಯಿ ಗೋಜಿಬಾಯಿ ಈಕೆಗೆ ಆರಾಮ ಇಲ್ಲದ ಕಾರಣ ಆಟೋ ನಂ. ಕೆಎ-33 ಬಿ-1367 ನೇದ್ದರಲ್ಲಿ ನಾನು ಮತ್ತು ನಮ್ಮ ಮನೆಯವು ಕೂಡಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಹೋಗುತ್ತಿರುವಾಗ ರಾತ್ರಿ 11-40 ಗಂಟೆ ಸುಮಾರಿಗೆ ರಾಮಸಮುದ್ರದ ಹೈವೇ ದಾಬ ಹತ್ತಿರ ಆಟೋ ಚಾಲಕನು ತಾನು ನಡೆಸುವ ಆಟೋವನ್ನು ನಾಯಿ ಅಡ್ಡ ಬಂದಿದ್ದರಿಂದ ಒಮ್ಮಲೆ ಬ್ರೇಕ್ ಹಾಕಿದ್ದರಿಂದ ಆಟೋ ಪಲ್ಟಿಯಾಗಿದ್ದು ಇರುತ್ತದೆ ಅಂತಾ ಪಿರ್ಯಾಧಿ.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 28/2022 ಕಲಂ: 306 ಸಂ: 149 ಐಪಿಸಿ : ಇಂದು ದಿನಾಂಕ: 07/04/2022 ರಂದು 10.30 ಎ.ಎಮ್ ಕ್ಕೆ ಶ್ರೀಮತಿ. ಧಾನಿಬಾಯಿ ಗಂಡ ಚಂದು ಜಾಧವ ವಯಾ:52 ಉ: ಮನೆಗೆಲಸ ಜಾ: ಲಂಬಾಣಿ ಸಾ: ಕಾಳುನಾಯ್ಕತಾಂಡಾ ಉಕ್ಕನಾಳ ತಾ: ಶಹಾಪೂರ ಜಿ: ಯಾದಗಿರಿ ಇವರು ಒಂದು ಲಿಖಿತ ಅಜರ್ಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ಮಗನಾದ ಲಕ್ಷ್ಮಣ ತಂದೆ ಚಂದು ಜಾದವ ಇತನ ಹೆಂಡತಿಯಾದ ಸೋನಾ ಗಂಡ ಲಕ್ಷ್ಮಣ ಜಾಧವ ಇವಳು ವಿಜಯಕುಮಾರ ತಂದೆ ನಿಲಕಂಠ ಜಾಧವ ಸಾ|| ಕಾಳುನಾಯ್ಕ ತಾಂಡಾ ಉಕ್ಕಿನಾಳ ಇವನೊಂದಿಗೆ ಅನೈತಿಕ ಸಂಬಂದ ಇಟ್ಟುಕೊಂಡ ಬಗ್ಗೆ ತಾಂಡಾದಲ್ಲಿ ಸುದ್ದಿ ಆಗಿದ್ದರಿಂದ ನ್ಯಾಯ-ಪಂಚಾಯತಿ ಮಾಡಿ ಸೋನಾ ಗಂಡ ಲಕ್ಷಣ ಜಾಧವ ಇವಳಿಗೆ ವಿಜಯಕುಮಾರನೊಂದಿಗೆ ಇರಲು ಕಳಿಸಲಾಗಿತ್ತು, ಈಗ 5-6 ದಿನಗಳ ಹಿಂದೆ ಸೋನಾ ಗಂಡ ಲಕ್ಷ್ಮಣ ಜಾಧವ ಇವಳು ಪುನಃ ನಮ್ಮ ಮನೆಗೆ ಬಂದು ತನ್ನ ಗಂಡನಾದ ಲಕ್ಷ್ಮಣ ಇವನೊಂದಿಗೆ ಸಂಸಾರ ಮಾಡುವದಾಗಿ ಹೇಳಿ ನಮ್ಮ ಮನೆಯಲ್ಲಿ ಇದ್ದಳು. ಹೀಗಿದ್ದು, ಇಂದು ದಿನಾಂಕ:07/04/2022 ರಂದು ನಮ್ಮ ಮಗ ಲಕ್ಷ್ಮಣನ ಹೆಂಡತಿಯಾದ ಸೋನಾ ಇವಳು ನನ್ನ ಗಂಡನಿಗೆ ಮಾತಾಡುತ್ತಾ ಬೆಳಿಗ್ಗೆ 06.00 ಎಎಂ ಸುಮಾರಿಗೆ ನಾನು ಎಲ್ಲಿಗಾದರೂ, ಯಾವಾಗ ಆದರೂ ಹೋಗಿ ಬರುತ್ತೇನೆ ನನಗೆ ನೀನು ಏನು ಕೇಬಾರದು ಅಂತಾ ನನ್ನ ಗಂಡನಾದ ಚಂದು ಇವನೊಂದಿಗೆ ಜೋರು ದ್ವನಿಯಲ್ಲಿ ಮಾತಾಡುವಾಗ ಅಲ್ಲೆ ಹತ್ತಿರದಲ್ಲಿದ್ದ 1) ವಿಜಯಕುಮಾರ ತಂದೆ ನೀಲಕಂಠ ಜಾಧವ 2) ರಾಜಕುಮಾರ ತಂದೆ ನೀಲಕಂಠ 3) ಅನೀಲ ತಂದೆ ನೀಲಕಂಠ ಜಾಧವ 4) ಘಮಲಿಬಾಯಿ ಗಂಡ ನೀಲಕಂಠ ಜಾಧವ 5) ನೀಲಕಂಠ ತಂದೆ ಸೋಮ್ಲು ಜಾಧವ 6) ವಿಕಾಸ ತಂದೆ ಗೋಪಾಲ 7) ಪ್ರಕಾಶ ತಂದೆ ಗೋಪಾಲ ಎಲ್ಲರೂ ಸಾ: ಕಾಳೂನಾಯ್ಕ ತಾಂಡಾ ಉಕ್ಕನಾಳ ಇವರುಗಳು ಕೂಡ ಕೆಟ್ಟದಾಗಿ ನಕ್ಕು ಅವಳು ಆಗಾಗ ಮನೆಯಿಂದ ಹೋದರು ಇವರು ಹೀಗೆ ಇರುತ್ತಾರೆ ನಾಚಿಕೆ ಇಲ್ಲ ಬೇರೆ ಯಾರಾದರೂ ಆದರೆ ಎಣ್ಣಿ ಕುಡಿದು ಸಾಯುತ್ತಿದ್ದರು ಅಂತಾ ಅಂದು ಹಿಯ್ಯಾಳಿಸಿ ಮಾತನಾಡಿದ್ದು ಆಗ ನಾನು ಮತ್ತು ನನ್ನ ಮಕ್ಕಳಾದ ರಾಮು, ಲಕ್ಷ್ಮಣ ಹಾಗೂ ದೇವಪುತ್ರ ತಂದೆ ಭೀಮಲು, ಬೀಮು ತಂದೆ ಕಸನು ಎಲ್ಲರೂ ಕೂಡಿ ನನ್ನ ಗಂಡನಾದ ಚಂದು ಈತನಿಗೆ ಸಮಾಧಾನ ಮಾಡಿ ಜನಾ ಹಾಂಗೆ ಮಾತಾಡತಾರ ನೀ ಮನಸ್ಸಿಗೆ ಹಚ್ಚಿಕೊಳ್ಳಬ್ಯಾಡ ಎಂದು ಹೇಳಿ ಮನೆಯಲ್ಲಿ ಕರೆದುಕೊಂಡು ಹೋಗಿದ್ದೇವು. ನಂತರ ಸ್ವಲ್ಪ ಸಮಯದಲ್ಲಿ ನನ್ನ ಗಂಡನಾದ ಚಂದು ಈತನು ಹೊಲಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದನು ನಮಗೆ ಸಂಶಯ ಬದು ನಾನು ಮತ್ತು ಗುರುನಾಥ ತಂದೆ ಶಿವರಾಮ ಕೂಡಿ ನಮ್ಮ ಹೊಲಕ್ಕೆ ಬಂದು ನೋಡಿದಾಗ ನನ್ನ ಗಂಡ ಹೊಲದಲ್ಲಿ ವಿಷ ಸೇವನೆ ಮಾಡಿ ಮೃತಪಟ್ಟಿದ್ದನು. ನನ್ನ ಮಗ ಲಕ್ಷ್ಮಣ ಈತನ ಹೆಂಡತಿಯಾದ ಸೋನಾ @ ಮೇನುಕಾ ಗಂಡ ಲಕ್ಷ್ಮಣ ಮತ್ತು ವಿಜಯಕುಮಾರ ಹಾಗೂ ಆತನ ಮನೆಯವರು ನನ್ನ ಗಂಡನಿಗೆ ಆತ್ಮ-ಹತ್ಯ ಮಾಡಿಕೊಳ್ಳಲು ಪ್ರಚೋಧನೆ ಮಾಡಿದ್ದರಿಂದ ನನ್ನ ಗಂಡನು ಇದು ದಿನಾಂಕ:07/04/2022 ರಂದು 06.30 ಎಎಂ ಸುಮಾರಿಗೆ ನಮ್ಮ ಹೊಲದಲ್ಲಿ ವಿಷ ಸೇವನೆ ಮಾಡಿ ಮೃತಪಟ್ಟಿದ್ದು. ಕಾರಣ ಸೋನಾ ಮತ್ತು ಇತರ 7 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 28/2022 ಕಲಂ: 306 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 24/2022 ಕಲಂ.457, 380 ಐಪಿಸಿ : ದಿನಾಂಕ:05/04/2022 ರಂದು ಸಾಯಂಕಾಲ ಫಿರ್ಯಾದಿ & ಫಿರ್ಯಾದಿಯ ಹೆಂಡತಿ ಕೂಡಿ, ತಮ್ಮ ಮಗನಿಗೆ ಆರಾಮ ಇರದ್ದರಿಂದ ಮಗನ ಹತ್ತಿರ ಹೋಗಲು ಸಾಯಂಕಾಲ ಹೋಗಿದ್ದು, ದಿನಾಂಕ:06/04/2022 ರಂದು ಬೆಳಿಗ್ಗೆ ಮಂಗಳೂರ ಜಿಲ್ಲೆಯ ಮೂಡಬಿದರಿಗೆ ಹೋಗಿ ಮಗನಿಗೆ ಆಸ್ಪತ್ರೆಗೆ ತೋರಿಸಿ, ಅಂದೆ ಸಾಯಂಕಾಲ ವಾಪಸು ಹುಣಸಗಿಗೆ ಬರಲು ಹೊರಟು ದಿನಾಂಕ:07/04/2022 ರಂದು ಬೆಳಿಗ್ಗೆ 8.30 ಗಂಟೆಗೆ ಹುಣಸಗಿಗೆ ಬಂದು ತಮ್ಮ ಮನೆಯ ಹತ್ತಿರ ಹೋಗಿ ನೋಡಿದ್ದು, ಮನೆಯ ಕೀಲಿ ಮುರಿದು ಮತ್ತೆ ಕೊಂಡಿಗೆ ಹಾಕಿದ್ದನ್ನು ನೋಡಿ ಇಬ್ಬರೂ ಕೂಡಿ ಗಾಬರಿಯಾಗಿ ಬಾಗೀಲು ತೆರೆದು ಒಳಗಡೆ ಹೋಗಿ ಬೆಡ್ ರೂಮ್ ಹತ್ತಿರ ಹೋಗಿ ನೋಡಿದಾಗ, ಒಳಗಡೆ ದೊಡ್ಡ ಸೂಟಕೇಸದಲ್ಲಿ ಇಟ್ಟ 1)ನನ್ನ ಹೆಂಡತಿಯ 1 1/2 ತೊಲೆಯ ಬಂಗಾರದ ನಕ್ಲೇಸ್ ಅ:ಕಿ:60,000/- ರೂ.ಗಳು, 2) ನನ್ನ 1 1/2 ತೊಲೆಯ ಬಂಗಾರದ ಲಾಕೇಟ್ ಅ:ಕಿ:60,000/- ರೂ,ಗಳು 3) ನನ್ನ ಹೆಂಡತಿಯ ಕಿವಿಯಲ್ಲಿಯ ವಿವಿಧ ನಮೂನೆಯ 2 1/2 ತೊಲೆಯ ಬಂಗಾರದ ಓಲೆಗಳು ಅ:ಕಿ:90,000/- ರೂ.ಗಳು 4) 1/2 ತೊಲೆಯ ಬಂಗಾರದ ಉಂಗುರ ಅ:ಕಿ:20,000/- ರೂ.ಗಳು ಈ ರೀತಿಯಾಗಿ ಒಟ್ಟು ಅ:ಕಿ:2,30,000/- ರೂ.ಗಳ ಕಿಮ್ಮತ್ತಿನವುಗಳು ಕೆಂಪುಕಲರದ ಒಂದು ಬಂಗಾರದ ಆಭರಣಗಳು ಇಡುವ ಬ್ಯಾಗದಲ್ಲಿಟ್ಟಿದ್ದು, ಸದರಿಯವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಇನ್ನುಳಿದ ಬಂಗಾರದ ಬೋರಮಳ ಸರ & ಬಂಗಾರದ ತಾಳಿ ಚೈನ್, & ನನ್ನ ಮಗನ ಬೆಳ್ಳಿಯ ಕಡಗ ಅದೇ ಬ್ಯಾಗಿನಲ್ಲಿಟ್ಟಿದ್ದು, ಅವುಗಳನ್ನು ಅಲ್ಲಿಯೇ ಬಿಟ್ಟು ಹೋದ ಬಗ್ಗೆ ಅಪರಾಧ.
ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 36/2022 ಕಲಂ. 143, 147, 148, 324, 353, 355, 307, 504, 506(2) ಸಂಗಡ 149 ಐಪಿಸಿ : ಫಿಯರ್ಾದಿ ಮತ್ತು ಆರೋಪಿತರ ನಡುವೆ ರಾಜಕೀಯ ಹಳೆಯ ವೈಷಮ್ಯವಿದ್ದುದಿನಾಂಕ:06/04/2022 ರಂದು ಮುಂಜಾನೆ 10 ಗಂಟೆ ಸುಮಾರಿಗೆ ಫಿಯರ್ಾದಿ ಮತ್ತುರಾಮಪ್ಪಜೆ.ಇ. ಇವರು ಹಳೆಯ ಬ್ರಿಜ್ ಪರಿಶೀಲನೆ ಮಾಡುತ್ತಿರುವಾಗಆರೋಪಿತರೆಲ್ಲರೂಕೂಡಿ ಫಿಯರ್ಾದಿಗೆ ಕೊಲೆ ಮಾಡಬೇಕೆಂಬ ಉದ್ದೇಶದಿಂದತಮ್ಮಕೈಯ್ಯಲ್ಲಿ ಬಡಿಗೆ, ಕೊಡಲಿ ಹಿಡಿದುಕೊಂಡು ಬಂದವರೇದ್ಯಾವಪ್ಪಈತನುರಾಮಪ್ಪಜೆ.ಇ. ಇವರಿಗೆ ಭೋಸಡಿ ಮಗನೆ ಇಲ್ಲೇನು ಕಿಸಿಯಲು ಬಂದೀದಿ ಅಂತಾಅವಾಚ್ಯ ಶಬ್ದಗಳಿಂದ ಬೈದುಅವರಕರ್ತವ್ಯಕ್ಕೆಅಡೆತಡೆ ಮಾಡುತ್ತಿರುವಾಗ ಫಿಯರ್ಾದಿ ಹೋಗಿ ಯಾಕೆ ಸುಮ್ಮನೆತಕರಾರು ಮಾಡಕತ್ತೀರಿಅಂತಾ ಕೇಳಿದಾಗ ದ್ಯಾವಪ್ಪಈತನುತನ್ನ ಕಾಲಲ್ಲಿಯಚಪ್ಪಲಿ ತೆಗೆದುಕೊಂಡು ಫಿಯರ್ಾದಿಗೆ ಹೊಡೆಯುತ್ತಿರುವಾಗ ಅವನ ಮಕ್ಕಳಾದ ದೇವರಾಜ, ವಿಜಯಕುಮಾರ, ಬಸಲಿಂಗಪ್ಪಇವರುತಮ್ಮಕೈಯ್ಯಲ್ಲಿದ್ದ ಬಡಿಗೆಯಿಂದ ಫಿಯರ್ಾದಿಗೆ ಹೊಡೆಬಡೆ ಮಾಡಿ ಒಳಪೆಟ್ಟು ಮಾಡಿದ್ದುತಿರುಪತಿಈತನು ಭೋಸಡಿ ಮಗನೆ ನಿನ್ನಿಂದಲೇಇಷ್ಟೆಲ್ಲಆಗಿದ್ದುಊರಉಸಾಬರಿ ಭಾಳ ಮಾಡಕತ್ತೀದಿ, ನಿಂದು ಭಾಳ ಆಗ್ಯಾದ ನಿನಗೆ ಬಿಡುವುದಿಲ್ಲ ಖಲಾಸ್ ಮಾಡುತ್ತೇನೆಅಂತಾ ಬೈದುತನ್ನಕೈಯ್ಯಲ್ಲಿದ್ದಕೊಡಲಿಯಿಂದ ಫಿಯರ್ಾದಿಯತಲೆಗೆ ಹೊಡೆದು ಕೊಲೆ ಮಾಡಲು ಬಂದಾಗತನ್ನ ಬಲಗೈ ಅಡ್ಡತಂದಿದ್ದರಿಂದ ಬಲಗೈಗೆ ಕೊಡಲಿ ಕಾವಿನ ಏಟು ಬಿದ್ದು ಒಳಪೆಟ್ಟಾಗಿದ್ದು, ಆರೋಪಿತರು ಫಿಯರ್ಾದಿಗೆಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.
ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 29/2022 ಕಲಂ:147, 148, 447, 448, 504, 506, 307 ಸಂಗಡ 34 ಐಪಿಸಿ : ಇಂದು ದಿನಾಂಕ:07.04.2022 ರಂದು ಬೆಳಿಗ್ಗೆ 09:00 ಗಂಟೆಗೆ ಠಾಣೆಯ ನ್ಯಾಯಾಲಯ ಕರ್ತವ್ಯ ಮಾಡುವ ಕಜ್ಜಪ್ಪ ಪಿಸಿ-251 ರವರು ಮಾನ್ಯ ನ್ಯಾಯಾಲಯದಿಂದ ಮರಳಿ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರ ರವರ ನ್ಯಾಯಾಲಯದ ಪತ್ರ ನಂ: ನೇದ್ದನ್ನು ಮತ್ತು ಅದರ ಜೊತೆಗೆ ಮಾನ್ಯ ನ್ಯಾಯಾಲಯದ ಖಾಸಗಿ ಫಿಯರ್ಾದಿ ಸಂಖ್ಯೆ: /2022 ನೇದ್ದನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು 156(3) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖಾ ವರದಿಯನ್ನು ಸಲಿಸಲು ಆದೇಶಿಸಿದ್ದು ಸದರಿ ಖಾಸಗಿ ಫಿಯರ್ಾದಿ ನಂ: /2022 ನೇದ್ದರ ಫಿಯರ್ಾದಿದಾರರಾದ ಶ್ರೀ ಮಂಜುನಾಥ ತಂದೆ ಗೋಪಿಚಂದ ರಾಠೋಡ ವ:31 ವರ್ಷ ಉ:ಖಾಸಗಿ ಕೆಲಸ ಜಾ:ಹಿಂದೂ ಲಂಬಾಣಿ ಸಾ:ರಾಜನಕೋಳೂರ ತಾಂಡಾ ತಾ:ಹುಣಸಗಿ ರವರ ಸದರಿ ಖಾಸಗಿ ಫಿಯರ್ಾದದ ಸಾರಾಂಶವೆನೆಂದರೆ, ಪಿಯರ್ಾದಿದಾರನು ರಾಜನಕೋಳೂರ ತಾಂಡಾದ ನಿವಾಸಿಯಾಗಿದ್ದು ಆರೋಪಿ ನಂ:04 ಕಾವ್ಯಶ್ರೀ ರವರ ಗಂಡನಾಗಬೇಕು ಮತ್ತು ಆರೋಪಿ ನಂ:01 ಶೇವ್ಯಾನಾಯಕ ರವರು ಪಿಯರ್ಾದಿದಾರನ ಮಾವನಾಗಬೇಕು ಅಂದರೆ ಆರೋಪಿ ನಂ:04 ಕಾವ್ಯಶ್ರೀ ರವರ ತಂದೆಯಾಗಬೇಕು ಮತ್ತು ಆರೋಪಿ ನಂ:02 ಚಂದ್ರಶೇಖರ @ ಶೇಕರನಾಯಕ ರವರು ಒಂದನೇ ಆರೋಪಿ ಶೇವ್ಯಾನಾಯಕ ರವರ ಅಣ್ಣನಾಗಬೇಕು ಆರೋಪಿ ನಂ:03 ಪವನ ರವರು ಆರೋಪಿ ನಂ:01 ಶೇವ್ಯಾನಾಯಕ ರವರ ಮಗನಾಗಬೇಕು, ಆರೋಪಿ ನಂ:04 ಕಾವ್ಯಶ್ರೀ ಪಿಯರ್ಾದಿಯ ಹೆಂಡತಿಯಾಗಬೇಕು ಮತ್ತು ಒಂದನೇ ಆರೋಪಿ ಶೇವ್ಯಾನಾಯಕ ರವರ ಮಗಳಾಗಬೇಕು. ಪಿಯರ್ಾದಿದಾರನ ಮತ್ತು ಆರೋಪಿ ನಂ:04 ಕಾವ್ಯಶ್ರೀ ರವರು ಸಂಬಂಧದಲ್ಲಿ ಗಂಡ-ಹೆಂಡತಿಯಾಗಬೇಕು ಇವರಿಬ್ಬರ ಮದುವೆ ದಿನಾಂಕ:18/11/2019 ರಂದು ನಾಲ್ಕು ಜನ ಆರೋಪಿತರ ಮನೆಯ ಮುಂದೆ ಅವರ ಜಾತಿ ಪದ್ದತಿಯಂತೆ ಆಗಿರುತ್ತದೆ. ನಂತರ ಆ ಮದುವೆಯನ್ನು ದಿನಾಂಕ:06/12/2019 ರಂದು ಅರಸೀಕೆರೆ ಉಪ-ನೊಂದಣಾಧಿಕಾರಿಗಳ ಕಾಯರ್ಾಲಯದಲ್ಲಿ ನೊಂದಣಿಯಾಗಿರುತ್ತದೆ. ನೊಂದಣಿ ಸಂಖ್ಯೆ:ಎ.ಆರ್.ಎಸ್.ಹೆಚ್.ಎಮ್.221/19-20 ಇರುತ್ತದೆ. ಈ ವಿವಾಹ ನೊಂದಣಿ ಪತ್ರವನ್ನು ಈ ಖಾಸಗಿ ಪಿಯರ್ಾದಿ ಜೊತೆ ಮಾನ್ಯ ನ್ಯಾಯಾಲಯದ ಅವಗಾಹನೆಗಾಗಿ ಸಲ್ಲಿಸಲಾಗಿದೆ. ಮತ್ತು ಪಿಯರ್ಾದಿದಾರ ಹಾಗೂ ಆರೋಪಿ ನಂ:04 ಕಾವ್ಯಶ್ರೀ ರವರು ವಿದ್ಯಾವಂತರಿದ್ದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಮಾಡುತ್ತಿದ್ದು ಪ್ರತೀ ತಿಂಗಳಿಗೆ ತಲಾ 80,000/- ರೂಗಳಂತೆ ಸಂಬಳವನ್ನು ಪಡೆಯುತ್ತಿದ್ದಾರೆ. ಪಿಯರ್ಾದಿದಾರ ಮತ್ತು ಆರೋಪಿ ನಂ:04 ಕಾವ್ಯಶ್ರೀ ರವರು ಮದುವೆಯ ನಂತರ ಸುಖಕರವಾದ ದಾಂಪತ್ಯ ಜೀವನವನ್ನು ಕೆಲವೇ ತಿಂಗಳು ನಡೆಸಿದ್ದಾರೆ. ನಂತರ ಕೆಲ ಸಣ್ಣ ಪುಟ್ಟ ವಿಷಯಗಳಿಂದ ಮತ್ತು ಆರೋಪಿ ನಂ:01 ಶೇವ್ಯಾನಾಯಕ ರವರು ಆಗಾಗ ಪಿಯರ್ಾದಿದಾರನ ಮನೆಗೆ ಬಂದು ಪಿಯರ್ಾದಿದಾರ ಮತ್ತು ಆರೋಪಿ ನಂ:04 ಕಾವ್ಯಶ್ರೀ ರವರಿಗೆ ನಿಮ್ಮ ಸಂಬಳದಲ್ಲಿ ಪ್ರತೀ ತಿಂಗಳು ಅರ್ಧ ಸಂಬಳ ಅಂದರೆ ತಲಾ 40,000/- ರೂ ಹಣವನ್ನು ನನಗೆ ಕೊಡಬೇಕೆಂದು ಕಿರುಕುಳ ಕೊಡುತ್ತಿದ್ದನು. ಪಿಯರ್ಾದಿದಾರ ಮತ್ತು ಆರೋಪಿ ನಂ:04 ಕಾವ್ಯಶ್ರೀ ರವರು ಯಾವುದೇ ಸಂಬಳ ಕೊಡದಿದ್ದ ಕಾರಣ ನನಗೆ ಒಂದು ಕಾರು ಹಾಗೂ ಬೆಂಗಳೂರಿನಲ್ಲಿ ಒಂದು ಮನೆಯನ್ನು ಖರೀದಿಸಿಕೊಡಬೇಕೆಂದು ಕರಾರು ಮಾಡಿದನು. ಪಿಯರ್ಾದಿದಾರ ಮತ್ತು ಆರೋಪಿ ನಂ:04 ಕಾವ್ಯಶ್ರೀ ರವರು ಆರೋಪಿ ನಂ:01 ಶೇವ್ಯಾನಾಯಕ ರವರಿಗೆ ಅದನ್ನು ಸಹ ಕೊಡಲಿಲ್ಲ. ಆದ ಕಾರಣ ಅಲ್ಲಿಂದ ಪಿಯರ್ಾದಿದಾರ ಮತ್ತು ಆರೋಪಿತರ ಕುಟುಂಬದಲ್ಲಿ ಸಣ್ಣ-ಪುಟ್ಟ ಜಗಳಗಳು ನಡೆಯುತ್ತಾ ಬಂದಿರುತ್ತವೆ. ಹೀಗಿರುವಾಗ ದಿನಾಂಕ:22.02.2022 ರಂದು ಆರೋಪಿ ನಂ:01 ಶೇವ್ಯಾನಾಯಕ ರವರು ಪಿಯರ್ಾದಿದಾರನ ಬೆಂಗಳೂರಿನ ಮನೆಗೆ ನುಗ್ಗಿ ನಿಮ್ಮಿಬ್ಬರ ಗಂಡ-ಹೆಂಡತಿ ಸಂಬಳದಲ್ಲಿ ನನಗೆ ತಲಾ ಅರ್ಧದಂತೆ ಕೊಡಬೇಕು ಹಾಗೂ ನಿಮ್ಮ ಮನೆಯ ಖಚರ್ು ವೆಚ್ಚಗಳನ್ನು ನನಗೆ ತೋರಿಸಬೇಕೆಂದು ಹೇಳಿದ್ದು ಆಗ ಪಿಯರ್ಾದಿದಾರ ತಿರಸ್ಕರಿಸಿದಾಗ ಆರೋಪಿ ನಂ:01 ಶೇವ್ಯಾನಾಯಕ ರವರು ಪಿಯರ್ಾದಿದಾರನಿಗೆ ಬಾಯಿಗೆ ಬಂದಂತೆ ಬೈದಿದ್ದು ಅಲ್ಲದೇ ಆರೋಪಿ ನಂ:04 ಕಾವ್ಯಶ್ರೀ ರವರು ಸಹ ಆರೋಪಿ ನಂ:01 ಶೇವ್ಯಾನಾಯಕ ರವರಿಗೆ ಸಹಾಯ ಮಾಡಿ ಇಬ್ಬರೂ ಸೇರಿ ಪಿಯರ್ಾದಿದಾರನ ಮೇಲೆ ಹಲ್ಲೆ ಮಾಡಿ ಗಂಭೀರವಾದ ಗಾಯಗಳನ್ನು ಮಾಡಿದ್ದಾರೆ. ಆರೋಪಿ ನಂ:01 ಶೇವ್ಯಾನಾಯಕ ರವರು ಪಿಯರ್ಾದಿದಾರನಿಗೆ ಕುತ್ತಿಗೆ ಹಿಸುಕಿ ಸಾಯಿಸಲು ಪ್ರಯತ್ನಮಾಡಿದಾಗ ಪಿಯರ್ಾದಿದಾರನ ತಾಯಿಯು ಬಂದು ಬಿಡಿಸಿಕೊಂಡಳು ಆಗ ಪಿಯರ್ಾದಿದಾರ ಸದರಿ ವಿಷಯವನ್ನು ಸೆಕ್ಯೂರಿಟಿ ಗಾರ್ಡಗೆ ತಿಳಿಸಿದ್ದು ಆದರೂ ಸಹ ಪಿಯರ್ಾದಿದಾರರು ಸಂಬಂಧಿಸಿದ ಪೊಲೀಸ್ ಠಾಣೆಗೆ ಯಾವುದೇ ದೂರನ್ನು ಕೊಟ್ಟಿಲ್ಲ. ಆದಾದ ನಂತರ ಆರೋಪಿ ನಂ:01 ಶೇವ್ಯಾನಾಯಕ ರವರು ಒಬ್ಬ ಮಂತ್ರಗಾರನಿದ್ದು ಆತನ ಮನೆಯಾದ ಅರಸೀಕೆರೆಯಲ್ಲಿ ಹೋಮ ಕುಂಡವನ್ನು ಮಾಡಿ ಪಿಯರ್ಾದಿದಾರನ ಅಂಗಿಯನ್ನು ಕಳಚಿ ಪಿಯರ್ಾದಿದಾರನನ್ನು ಹೋಮ ಕುಂಡದ ಮುಂದೆ ಕೂಡಿಸಿ ಆತನ ಮೇಲೆ ಕುಂಕುಮ ರಕ್ತವನ್ನು ಆರೋಪಿ ನಂ:01 ಶೇವ್ಯಾನಾಯಕನು ಎರಚಿದನು. ನಂತರ ಶೇವ್ಯಾನಾಯಕ ರವರು ಪಿಯರ್ಾದಿದಾರನಿಗೆ ನಾನು ಹೇಳುವಂತೆ ಹೇಳು ಎಂದು ಮಂತ್ರವನ್ನು ಹೇಳುತ್ತಿದ್ದ ಆದರೆ ಪಿಯರ್ಾದಿದಾರ ಅದನ್ನು ನಿರಾಕರಿಸಿದ್ದು ಆ ನಂತರ ಪಿಯರ್ಾದಿದಾರ ಮತ್ತು ಆರೋಪಿ ನಂ:04 ಕಾವ್ಯಶ್ರೀ ಇಬ್ಬರೂ ಕೂಡಿಕೊಂಡು ಆರೋಪಿ ನಂ:01 ಶೇವ್ಯಾನಾಯಕ ರವರ ಮನೆಯಿಂದ ತಪ್ಪಿಸಿಕೊಂಡು ಪಿಯರ್ಾದಿದಾರನ ಸ್ವ-ಗ್ರಾಮವಾದ ರಾಜನಕೋಳೂರ ತಾಂಡಾಕ್ಕೆ ಬಂದಿದ್ದು ಇದನ್ನು ಕೂಡಾ ಪಿಯರ್ಾದಿದಾರ ಯಾರ ಮುಂದೆಯೂ ಹೇಳಲಿಲ್ಲ ಹಾಗೂ ಯಾವುದೇ ದೂರು ಸಲ್ಲಿಸಲಿಲ್ಲ ಏಕೆಂದರೆ ತನ್ನ ಸಂಸಾರ ಹಾಳಾಗುತ್ತದೆ ಎಂದು ಸುಮ್ಮನಿದ್ದ ಪಿಯರ್ಾದಿದಾರ ಮತ್ತು ಆರೋಪಿ ನಂ:04 ಕಾವ್ಯಶ್ರೀ ರವರು ಸುಮಾರು 4 ದಿನಗಳ ಕಾಲ ರಾಜನಕೋಳೂರ ತಾಂಡಾದಲ್ಲಿ ಇದ್ದು ನಂತರ ತಮ್ಮ ಕಂಪನಿ ಕೆಲಸದ ನಿಮಿತ್ಯ ಮತ್ತೇ ಬೆಂಗಳೂರಿಗೆ ಹೋಗಿ ಅಲ್ಲಿ ಇಬ್ಬರೂ ಚನ್ನಾಗಿ ಜೀವನ ಸಾಗಿಸುತ್ತಿದ್ದರು. ಅದಾದ ಕೆಲವೇ ದಿನಗಳ ನಂತರ ಅಂದರೆ ಸುಮಾರು ಒಂದೂವರೆ ವರ್ಷದ ಹಿಂದೆ ಆರೋಪಿ ನಂ:04 ಕಾವ್ಯಶ್ರೀ ರವರು ತನ್ನ ತವರುಮನೆಯಾದ ಅರಸೀಕೆರೆಗೆ ಹೋಗಿ ಬರುತ್ತೇನೆ ಎಂದು ಹೋದಳು. ನಂತರ ಪಿಯರ್ಾದಿದಾರ 15 ದಿವಸಗಳಾದ ಮೇಲೆ ಆರೋಪಿ ನಂ:04 ಕಾವ್ಯಶ್ರೀ ರವರನ್ನು ಕರೆದುಕೊಂಡು ಬರುವುದಕ್ಕೆ ಆರೋಪಿ ನಂ:01 ಶೇವ್ಯಾನಾಯಕ ರವರ ಮನೆಯಾದ ಅರಸೀಕೆರೆಗೆ ಹೋದಾಗ ಪಿಯರ್ಾದಿದಾರನ ಮೇಲೆ ಆರೋಪಿ ನಂ:01 ಶೇವ್ಯಾನಾಯಕ, ಆರೋಪಿ ನಂ:02 ಚಂದ್ರಶೇಖರ @ ಶೇಖರನಾಯಕ, ಆರೋಪಿ ನಂ:03 ಪವನ ಎಲ್ಲರೂ ಸೇರಿ ಪಿಯರ್ಾದಿದಾರನ ಮೇಲೆ ಹಲ್ಲೆ ಮಾಡಿದ್ದಾರೆ. ಆಗಲೂ ಸಹ ಪಿಯರ್ಾದಿದಾರ ಯಾವುದೇ ದೂರನ್ನು ಸಲ್ಲಿಸಿಲ್ಲ. ಆ ನಂತರ ಪಿಯರ್ಾದಿದಾರ ತನ್ನ ಸ್ವಂತ ಊರಾದ ರಾಜನಕೋಳೂರ ತಾಂಡಾಕ್ಕೆ ಬಂದಿರುತ್ತಾನೆ. ಮತ್ತೆ ಪುನಃ ಪಿಯರ್ಾದಾರನ ಹೆಂಡತಿಯಾದ ಆರೋಪಿ ನಂ:04 ಕಾವ್ಯಶ್ರೀ ರವರಿಗೆ ಫೋನ್ ಮೂಲಕ ಕರೆಮಾಡಿ ಪಿಯರ್ಾದಿದಾರ ತನ್ನ ಮನೆಗೆ ಬರಲು ಹೇಳಿದ್ದಾನೆ ಆದರೂ ಕೂಡಾ ಕಾವ್ಯಶ್ರೀ ರವರು ಪಿಯರ್ಾದಿದಾರನ ಮನೆಗೆ ಬರದೇ ತನ್ನ ತವರು ಮನೆಯಲ್ಲೇ ಉಳಿದುಕೊಂಡಿದ್ದಾಳೇ. ಹೀಗಿದ್ದರೂ ಸಹ ದಿನಾಂಕ:17.10.2020 ರಂದು ಪಿಯರ್ಾದಿದಾರನ ಚಿಕ್ಕಪ್ಪನಾದ ತಾರಾಸಿಂಗ್ ರಾಠೋಡ ಮತ್ತು ಪರಶುರಾಮ ರಾಠೋಡ ಹಾಗೂ ಪಿಯರ್ಾದಿದಾರನ ಮೇಲೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಕೇಸನ್ನು ದಾಖಲಿಸಿದ್ದಾರೆ. ಇದರಲ್ಲಿಯ ಪಿಯರ್ಾದಿದಾರ ಮತ್ತು ಆತನ ಚಿಕ್ಕಪ್ಪ ಹಾಗೂ ಇತರರು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಪಿಯರ್ಾದಿದಾರ ದಿನಾಂಕ:17.01.2022 ರಂದು ತನ್ನ ವೈಯಕ್ತಿಕ ಕೆಲಸದ ನಿಮಿತ್ಯ ಕೊಡೆಕಲ್ಲ ಪೊಲೀಸ್ ಠಾಣೆಗೆ ಹೋಗಿದ್ದು ತಮ್ಮ ಮೇಲೆ ಕೇಸುಮಾಡಲು ಹೋಗಿದ್ದಾನೆ ಎಂಬ ವಿಷಯನ್ನು ತಿಳಿದುಕೊಂಡು ಆರೋಪಿತರೆಲ್ಲರೂ ದಿನಾಂಕ:23.01.2022 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ರಾಜನಕೋಳೂರ ತಾಂಡಾದಲ್ಲಿರುವ ಪಿಯರ್ಾದಿಯ ಮನೆಗೆ ಒಂದು ಕಾರಿನಲ್ಲಿ ಬಂದು, ಆ ಕಾರ್ ನಂ:ಕೆಎ-02 ಎಮ್ಸಿ-9709 ರಲ್ಲಿ ಕೊಡಲಿ, ಲಾಂಗ್ ಹಾಗೂ ಚೂರಿಗಳನ್ನು ತೆಗೆದುಕೊಂಡು ಪಿಯರ್ಾದಿದಾರನನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ಪಿಯರ್ಾದಿದಾರನ ಮನೆಯ ಮುಂದೆ ಕಾರು ನಿಲ್ಲಿಸಿ ಪಿಯರ್ಾದಿದಾರನಿಗೆ ಅವಾಚ್ಛ ಶಬ್ಧಗಳಿಂದ ಎಲೇ ಮಂಗ್ಯಾ ಸೂಳೇ ಮಗನೇ ಇವತ್ತು ನಿನ್ನನ್ನು ಮುಗಿಸಿಬಿಡುತ್ತೇವೆ ಎಂದು ಆರೋಪಿ ನಂ:01 ಶೇವ್ಯಾನಾಯಕ ರವರು ಪಿಯರ್ಾದಿದಾರನ ಮನೆಯ ಒಳಗಡೆ ಅಕ್ರಮವಾಗಿ ಪ್ರವೇಶಮಾಡಿಪಿಯರ್ಾದಿದಾರನ ಎದೆಯ ಮೇಲಿನ ಅಂಗಿಯನ್ನು ಹಿಡಿದು ಎಳೆದುಕೊಂಡು ಹೊರಗೆ ತಂದನು. ಆ ವೇಳೆಯಲ್ಲಿ ಅಲ್ಲಿಯೇ ಇದ್ದ ಆರೋಪಿ ನಂ:02 ಚಂದ್ರಶೇಖರ @ ಶೇಖರನಾಯಕ ರವರು ಪಿಯರ್ಾದಿದಾರನನ್ನು ಹೊಡೆಯಬೇಕೆಂದು ಲಾಂಗನ್ನು ತೆಗೆದುಕೊಂಡು ಹೊಡೆಯಬೇಕೆನ್ನುವಷ್ಟರಲ್ಲಿ ಪಿಯರ್ಾದಿದಾರ ತಪ್ಪಿಸಿಕೊಂಡನು. ಆ ವೇಳೆಯಲ್ಲಿ ಪಿಯರ್ಾದಿದಾರ ಮತ್ತು ಆತನ ತಂದೆ ತಾಯಿಯವರು ಚೀರಾಡುತ್ತಿದ್ದಾಗ ಪಿಯರ್ಾದಿದಾರನ ಅಕ್ಕ-ಪಕ್ಕದ ಮನೆಯವರಾದ ಈ ಪಿಯರ್ಾದಿಯಲ್ಲಿ ತೋರಿಸಿದ ಸಾಕ್ಷಿ ಜನರಾದ 1) ಕೀಟಾನಾಯಕ ತಂದೆ ರಾಮಪ್ಪನಾಯಕ 2) ಭೀಮಾನಾಯಕ ತಂದೆ ರಾಮಪ್ಪ ಬೊಂಬಾಯಿ 3) ಶಿವು ತಂದೆ ಶಂಕರನಾಯಕ ರಾಠೋಡ 4) ಶಂಕರ ತಂದೆ ಕೀರಪ್ಪ ರಾಠೋಡ 5) ಬಾಬು ತಂದೆ ಸುಬ್ಬಣ್ಣ ಪವ್ಹಾರ ರವರು ಬಂದು ಬಿಡಿಸಿಕೊಂಡರು. ನಂತರ ಆರೋಪಿ ನಂ:03 ಪವನ, ಆರೋಪಿ ನಂ:04 ಕಾವ್ಯಶ್ರೀ ರವರು ಪಿಯರ್ಾದಿದಾರನಿಗೆ ಅವಾಚ್ಛ ಶಬ್ಧಗಳಿಂದ ಈ ಮಂಗ್ಯಾ ಸೂಳೀ ಮಗನನ್ನು ಜೀವ ಸಹಿತ ಬಿಡಬೇಡಿರಿ, ಖಲಾಸ ಮಾಡಿರಿ ಅವನಿಂದ ನಮಗೆ ಬಹಳ ತೊಂದರೆಯಾಗಿದೆ ಅಂತಾ ಬೈಯ್ಯುತ್ತಿದ್ದರು. ಇದನ್ನು ಕೂಡಾ ಸಾಕ್ಷಿದಾರರು ಎಲ್ಲರನ್ನು ಸಮಾಧಾನ ಪಡಿಸಿ ಕಳುಹಿಸಿದರು. ಆಗ ಆರೋಪಿತರು ಪಿಯರ್ಾದಿದಾರನಿಗೆ ಇವತ್ತು ನಿನ್ನ ತಾಯಿ ಹೊಟ್ಟೆ ತಣ್ಣಗಿದೆ ಉಳಿದುಕೊಂಡಿ ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು ಕಾರಣ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿಯ ಖಾಸಗಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:29/2022 ಕಲಂ:147, 148, 447, 448, 504, 506, 307 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡೆನು.