ಅಭಿಪ್ರಾಯ / ಸಲಹೆಗಳು

                                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08-05-2021
ವಡಗೇರಾ ಪೊಲೀಸ್ ಠಾಣೆ :- 55/2021 ಕಲಂ: 504, 341, 323, 324 ಸಂ 34 ಐಪಿಸಿ : ಇಂದು ದಿನಾಂಕ: 07/05/2021 ರಂದು 1-30 ಪಿಎಮ್ಕ್ಕೆ ಶ್ರೀ ನಿಂಗಪ್ಪ ತಂದೆ ಸಿದ್ದಪ್ಪ ದುಪ್ಪಲ್ಲಿ, ವ:50, ಜಾ:ಕುರುಬರ, ಉ:ಒಕ್ಕಲುತನ ಸಾ:ಉಳ್ಳೆಸುಗೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮೇಲ್ಕಂಡ ವಿಳಾಸದವನಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ: 06/05/2021 ರಂದು ರಾತ್ರಿ 9-30 ಗಂಟೆ ಸುಮಾರಿಗೆ ನಮ್ಮೂರಿನಿಂದ ಹೊರಟೂರುಗೆ ಹೋಗುವ ರಸ್ತೆ ಬಾಜು ಇರುವ ಸೈಯದ ಬಾಷಾ ದಗರ್ಾಕ್ಕೆ ಹೋಗಿ ಕಾಯಿ ಕೊಟ್ಟು ಮರಳಿ ಬರುತ್ತಿದ್ದೆನು. ಆಗ ಸದರಿ ದಗರ್ಾದ ಹತ್ತಿರ ರೋಡಿನ ಮೇಲೆ ನಮ್ಮ ಗ್ರಾಮದ ನಮ್ಮ ಜಾತಿಯವರಾದ 1) ನಿಂಗಪ್ಪ ತಂದೆ ಮರಿಲಿಂಗಪ್ಪ ದುಪ್ಪಲ್ಲಿ, 2) ದೇವಪ್ಪ ತಂದೆ ಮರಿಲಿಂಗಪ್ಪ ದುಪ್ಪಲ್ಲಿ, 3) ರವಿ ತಂದೆ ಮರಿಲಿಂಗಪ್ಪ ದುಪ್ಪಲ್ಲಿ ಮತ್ತು 4) ಯಲ್ಲಪ್ಪ ತಂದೆ ನಿಂಗಪ್ಪ ದುಪ್ಪಲ್ಲಿ ಎಲ್ಲರೂ ಸಾ:ಉಳ್ಳೆಸೂಗೂರು ಇವರೆಲ್ಲರೂ ಸೇರಿಕೊಂಡು ಬಂದವರೆ ವಿನಾಕಾರಣ ನನಗೆ ತಡೆದು ನಿಲ್ಲಿಸಿ, ಭೊಸುಡಿ ಮಗನೆ ಊರಲ್ಲಿ ನಿನ್ನ ತಿಂಡಿ ಬಹಳ ಆಗಿದೆ ನಮಗೆ ನೋಡಿ ಎದೆ ಉಬ್ಬಿಸಿ ತಿರುಗಾಡುತಿ ನಿನ್ನ ಸೊಕ್ಕು ಮುರಿಯುತ್ತೇವೆ ಸೂಳೆ ಮಗನೆ ಎಂದು ಅವಾಚ್ಯ ಬೈದು ನನಗೆ ಯಲ್ಲಪ್ಪ ಮತ್ತು ರವಿ ಇಬ್ಬರೂ ಹಿಡಿದುಕೊಂಡಾಗ ನಿಂಗಪ್ಪನು ಕೈ ಮುಷ್ಟಿ ಮಾಡಿ ಬೆನ್ನಿಗೆ ಗುದ್ದಿದನು. ದೇವಪ್ಪನು ಕಾಲಿನಿಂದ ಸೊಂಟಕ್ಕೆ ಒದ್ದನು. ಇದನ್ನು ನೋಡಿ ಅಲ್ಲಿಯೇ ಹೊಲದಿಂದ ಬರುತ್ತಿದ್ದ ನನ್ನ ಮಗ ಮಾಳಪ್ಪನು ಬಿಡಿಸಲು ಬಂದರೆ ಅವನಿಗೆ ನೀನು ನಡುವೆ ಬರುತ್ತಿ ಭೊಸುಡಿ ಮಗನೆ ಎಂದು ಸದರಿ ನಿಂಗಪ್ಪನು ಅಲ್ಲೆ ಬಿದ್ದ ಹಿಡಿಗಲ್ಲು ತೆಗೆದುಕೊಂಡು ತೆಲೆ ಹಿಂಭಾಗ ಮತ್ತು ಬೆನ್ನಿನ ಹಿಂದೆ ಹೊಡೆದು ಒಳಪೆಟ್ಟು ಮಾಡಿದನು. ಆಗ ಜಗಳವನ್ನು ನನ್ನ ಹೆಂಡತಿ ಸಾಬಮ್ಮ ಗಂಡ ನಿಂಗಪ್ಪ ಮತ್ತು ನಮ್ಮೂರ ಚಂದ್ರಾಮಪ್ಪ ತಂದೆ ಮಲ್ಲಪ್ಪ ದುಪ್ಪಲ್ಲಿ ಇಬ್ಬರೂ ಬಂದು ನಮಗೆ ಹೊಡೆಯುವುದು ಬಿಡಿಸಿಕೊಂಡರು. ಕಾರಣ ರಾತ್ರಿಯಾಗಿದ್ದರಿಂದ ಇಂದು ಬೆಳಗ್ಗೆ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ವಿನಾಕಾರಣ ನನಗೆ ಮತ್ತು ನನ್ನ ಮಗನೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 55/2021 ಕಲಂ: 504, 341, 323, 324 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ :- 56/2021 ಕಲಂ: 504, 324, 323, 34 ಐಪಿಸಿ : ಇಂದು ದಿನಾಂಕ: 07/05/2021 ರಂದು 3 ಪಿಎಮ್ಕ್ಕೆ ಶ್ರೀ ನಿಂಗಪ್ಪ ತಂದೆ ಮರಿಲಿಂಗಪ್ಪ ದುಪ್ಪಲ್ಲಿ, ವ:46, ಜಾ:ಕುರುಬರ, ಉ:ಒಕ್ಕಲುತನ ಸಾ:ಉಳ್ಳೆಸುಗೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮೇಲ್ಕಂಡ ವಿಳಾಸದವನಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ: 06/05/2021 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನಾನು ಉಳ್ಳೆಸೂಗುರು ಗ್ರಾಮದ ನಮ್ಮ ಮನೆಯಲ್ಲಿದ್ದಾಗ ನಮ್ಮ ಗ್ರಾಮದ ನಮ್ಮ ಜಾತಿಯವರಾದ 1) ಮಾಳಪ್ಪ ತಂದೆ ನಿಂಗಪ್ಪ್ಪ ದುಪ್ಪಲ್ಲಿ, 2) ನಿಂಗಪ್ಪ್ಪ ತಂದೆ ಸಿದ್ದಪ್ಪ್ಪ ದುಪ್ಪಲ್ಲಿ, 3) ಸಣ್ಣರಾಯಪ್ಪ ತಂದೆ ಮಹಾದೇವಪ್ಪ ಬದ್ದೆಹಳ್ಳಿ ಮತ್ತು 4) ಶರಣಗೌಡ ತಂದೆ ಮಲ್ಲಣ್ಣಗೌಡ ಪೋಲಿಸ ಪಾಟೀಲ್ ಎಲ್ಲರೂ ಸಾ:ಉಳ್ಳೆಸೂಗೂರು ಇವರೆಲ್ಲರೂ ಸೇರಿಕೊಂಡು ನಮ್ಮ ಮನೆಗೆ ಬಂದವರೆ ವಿನಾಕಾರಣ ನನ್ನೊಂದಿಗೆ ಜಗಳ ತೆಗೆದು ಮಾಳಪ್ಪನು ನನಗೆ ಭೊಸುಡಿ ಮಗನೆ ಸೈಯದ ಬಾಷ ದಗರ್ಾದ ಹತ್ತಿರ ನಮ್ಮ ಅಪ್ಪನಿಗೆ ಹೊಡೆದು ಬಂದು ಮನೆಗೆ ಬಂದು ಕುಂತಿಯಾ ಸೂಳೆ ಮಗನೇ ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಅವಾಚ್ಯ ಬೈದು ನನಗೆ ನಿಂಗಪ್ಪ್ಪ ತಂದೆ ಸಿದ್ದಪ್ಪ ದುಪ್ಪಲ್ಲಿ ಮತ್ತು ಸಣ್ಣರಾಯಪ್ಪ ತಂದೆ ಮಹಾದೇವಪ್ಪ ಬದ್ದೆಹಳ್ಳಿ ಇಬ್ಬರೂ ಹಿಡಿದುಕೊಂಡಾಗ ಮಾಳಪ್ಪ ತಂದೆ ನಿಂಗಪ್ಪ ಅಲ್ಲಿಯೇ ಬಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ಯಿಂದ ತೆಲೆಗೆ ಮತ್ತು ಬೆನ್ನಿಗೆ ಹೊಡೆಯುತ್ತಿರುವಾಗ ನಾನು ಅದನ್ನು ತಪ್ಪಿಸಿಕೊಂಡಾಗ ಆ ಏಟು ನನ್ನ ಎರಡು ಕೈ ಬೆರಳುಗಳಿಗೆ ಬಿದ್ದು ಒಳಪೆಟ್ಟಆಗಿರುತ್ತದೆ. ಶರಣಗೌಡ ತಂದೆ ಮಲ್ಲಣ್ಣಗೌಡ ಪೋಲಿಸ ಪಾಟೀಲ ಈತನು ಕಾಲಿನಿಂದ ನನ್ನ ಸೊಂಟಕ್ಕೆ ಒದ್ದನು. ಆಗ ಅಲ್ಲಿಯೇ ಇದ್ದ ನಮ್ಮೂರ ದೇವಪ್ಪ ತಂದೆ ರಾಯಪ್ಪ ದುಪ್ಪಲ್ಲಿ ಮತ್ತು ಮಾಳಪ್ಪ ತಂದೆ ಮಲ್ಲಪ್ಪ ರಂಗಪೂರ ಇಬ್ಬರೂ ಬಂದು ನನಗೆ ಹೊಡೆಯುವುದು ಬಿಡಿಸಿಕೊಂಡರು. ಕಾರಣ ರಾತ್ರಿಯಾಗಿದ್ದರಿಂದ ಇಂದು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ವಿನಾಕಾರಣ ನನ್ನೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 56/2021 ಕಲಂ: 504, 323, 324 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ :- 97/2021 ಕಲಂ 269, 270, ಐ.ಪಿ.ಸಿ ಮತ್ತು ಕಲಂ 5(1) ಕನರ್ಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ-2020 : ಇಂದು ದಿನಾಂಕ 07/05/2021 ರಂದು ಮದ್ಯಾಹ್ನ 13-30 ಗಂಟೆಗೆ ಸರಕಾರಿ ತಫರ್ೆ ಫಿಯರ್ಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ್ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ, ಒಂದು ಆಟೋ ನಂಬರ ಕೆಎ-33-ಎ-1990 ನೆದ್ದು, ಹಾಜರ ಪಡಿಸಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಕೊವಿಡ್-19 ಸಾಂಕ್ರಾಮಿಕ ಕಾಯಿಲೆ ತಡೆಗಟ್ಟುವ ಸಂಬಂಧ ಸರಕಾರದ ಅದೇಶದಂತೆ ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಇತರೆ ಸೇವೆಗಳನ್ನು ನೀಡುವ ಕಛೇರಿ/ಅಂಗಡಿ/ಮುಂಗಟ್ಟುಗಳನ್ನು ಮಚ್ಚಲು ಸರಕಾರದ ಆದೇಶಿಸಲಾಗಿರುತ್ತದೆ. ಈ ವಿಷಯ ಕುರಿತು ಈಗಾಗಲೇ ಪೊಲೀಸ್ ಇಲಾಖೆ ವತಿಯಿಂದ ಹಾಗೂ ನಗರಸಭೆ ವತಿಯಿಂದ ಪಟ್ಟಣ/ಹಳ್ಳಿಯ ಸಾರ್ವಜನಿಕರಿಗೆ ದ್ವನಿವರ್ಧಕ ಮೂಲಕ ಮಾಹಿತಿ ನೀಡಿ ಜಾಗೃತಿ ಮೂಡಿಸಿರುತ್ತದೆ.
ಹೀಗಿರುವಾಗ ಇಂದು ದಿನಾಂಕ 07/05/2021 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ನಾನು, ಜೊತೆಯಲ್ಲಿ ಸಿಬ್ಬಂದಿಯವರಾದ ಭೀಮಣ್ಣಗೌಡ ಪಿ.ಸಿ 402 ಹಾಗೂ ಜೀಪ್ ಚಾಲಕ ನಾಗರಡ್ಡಿ ಎ.ಹೆಚ್.ಸಿ 25 ರವರೊಂದಿಗೆ ಸರಕಾರಿ ಜೀಪ್ ನಂಬರ ಕೆಎ-33-ಜಿ-0138 ನೇದ್ದರಲ್ಲಿ ಠಾಣೆಯಿಂದ ಹೊರಟು ಕೊವಿಡ್-19 ರ ಲಾಕ್ಡೌನ್ ಸಂಬಂಧವಾಗಿ ಶಹಾಪೂರ ಪಟ್ಟಣದಲ್ಲಿ ಅವಶ್ಯಕ ಸೇವೆಗಳನ್ನು ನೀಡುವ ಕಛೇರಿ/ಅಂಗಡಿ/ಮುಂಗಟ್ಟುಗಳನ್ನು ಹೊರತುಪಡಿಸಿ ಇತರೆ ಸೇವೆ ನೀಡುವ ಅಂಗಡಿ/ಮುಂಗಟ್ಟುಗಳ ಬಗ್ಗೆ ನಿಗಾ ಮಾಡುತ್ತಾ ನಗರದಲ್ಲಿ ಪೆಟ್ರೊಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಮಧ್ಯಾಹ್ನ ಚಾಂದ್ ಪೆಟ್ರೋಲ್ ಪಂಪ್ ಕಡೆಗೆ ಹೋದಾಗ 12-30 ಗಂಟೆಯ ಸುಮಾರಿಗೆ ವಿಭೂತಿಹಳ್ಳಿ ಕಡೆಯಿಂದ ಒಬ್ಬ ಆಟೋ ಚಾಲಕನು, ತನ್ನ ಆಟೋದಲ್ಲಿ ಹೆಚ್ಚಿಗೆ ಪ್ರಯಾಣಿಕರನ್ನು ಕೂಡಿಸಿಕೊಂಡು ಬಂದಿದ್ದು, ಸದರಿ ವಾಹನವನ್ನು ನಾವುಗಳು ನಿಲ್ಲಿಸಿ ತಪಾಸಣೆ ಮಾಡಿದಾಗ ಆಟೋದಲ್ಲಿ 7 ಜನ ಮಹಿಳೆಯರು ಮತ್ತು 7 ಜನ ಗಂಡಸರು ಒಟ್ಟು 14 ಜನ ಪ್ರಯಾಣಿಕರಿದ್ದು, ಆಟೋ ಚಾಲಕನನ್ನು ಸೇರಿಸಿ ಒಟ್ಟು 15 ಜನ ಆಗಿರುತ್ತಾರೆ. ಆಟೋ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಶರಣಪ್ಪ ತಂದೆ ಮಲ್ಲಣ್ಣ ಕಂದಕೂರ, ವಯಸ್ಸು 28 ವರ್ಷ, ಜಾತಿ ಕುರುಬ, ಸಾಃ ಇಂಗಳಗಿ ತಾಃ ಶಹಾಪೂರ ಅಂತ ಹೇಳಿದನು. ಆಟೋ ಚಾಲಕನು ತನ್ನ ಲಾಭಕ್ಕಾಗಿ ಇಕ್ಕಟ್ಟಾದ ಸ್ಥಳದಲ್ಲಿ 14 ಜನ ಪ್ರಯಾಣಿಕರನ್ನು ತನ್ನ ಆಟೋದಲ್ಲಿ ಕೂಡಿಸಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹಾಗೂ ಕೆಲವೊಬ್ಬರು ಮಾಸ್ಕ್ ಧರಿಸಿದ್ದು ಮತ್ತು ಇನ್ನೂ ಕೆಲವೊಬ್ಬರು ಮಾಸ್ಕ್ ಧರಿಸದೇ ಇದ್ದರು, ಕೊವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆ ತಡೆಗಟ್ಟುವಲ್ಲಿ ಅಸಹಕಾರ ತೋರಿಸಿ ಅತೀವ ನಿರ್ಲಕ್ಷ್ಯತನ ವಹಿಸಿರುತ್ತಾನೆ. ಇದರಿಂದ ಕೊವಿಡ್-19 ಸಾಂಕ್ರಾಮಿಕ ಕಾಯಿಲೆ ಉಲ್ಬಣಿಸಿ, ಸಾರ್ವಜನಿಕರ ಜೀವಕ್ಕೆ ಪ್ರಾಣ ಹಾನಿಯಾಗುವ ಸಾಧ್ಯತೆ ಇರುತ್ತದೆ ಅಂತ ಗೊತ್ತಿದ್ದರೂ ಸಹಿತ, ಆಟೋ ಚಾಲಕನು ಯಾವುದೇ ಮುಂಜಾಗ್ರತೆ ಕ್ರಮ ವಹಿಸದೇ ನಿರ್ಲಕ್ಷ್ಯತನದಿಂದ ಕೃತ್ಯ ಎಸಗಿರುವುದು ಕಂಡು ಬಂದಿರುತ್ತದೆ. ಪ್ರಯಾಣಿಕರು ತುಂಬಿದ ಆಟೋದ ಭಾವಚಿತ್ರವನ್ನು ತೆಗೆದು ಸದರಿ ಆಟೋವನ್ನು ಮಧ್ಯಾಹ್ನ 12-45 ಗಂಟೆಗೆ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ 13-00 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಸರಕಾರಿ ತಫರ್ೇ ಫಿಯರ್ಾದಿದಾರನಾಗಿ ಮದ್ಯಾಹ್ನ 13-30 ಗಂಟೆಗೆ ವರದಿ ನೀಡಿದ್ದು ಆಟೋ ನಂಬರ ಕೆಎ-33-ಎ-1990 ನೇದ್ದರ ಚಾಲಕ ಶರಣಪ್ಪನ ತಂದೆ ಮಲ್ಲಣ್ಣ ಸಾಃ ಇಂಗಳಗಿ ಎಂಬುವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ ವರದಿಯ ಸಾರಾಂಶದದ ಮೇಲಿಂದ ಠಾಣೆ ಗುನ್ನೆ ನಂಬರ 97/2021 ಕಲಂ 269, 270 ಐ.ಪಿ.ಸಿ ಮತ್ತು ಕಲಂ 5(1) ಕನರ್ಾಟಕ ಎಪಿಡೆಮಿಕ್ ಡಿಸೀಸಸ್ ಯಾಕ್ಟ್ -2020 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗೋಗಿ ಪೊಲೀಸ್ ಠಾಣೆ:- 46/2021 ಕಲಂ, 87 ಕೆ.ಪಿ ಆ್ಯಕ್ಟ್ : ದಿನಾಂಕ 07/05/2021 ರಂದು 06.30 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಠಾಣೆಗೆ ಆರೋಪಿತರು, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಬಂದು ಒಂದು ವರದಿ ನೀಡಿದ್ದು ಅದರ ಸಾರಂಶವೇನಂದರೆ, ಕಕ್ಕಸಗೇರಾ ಗ್ರಾಮದಲ್ಲಿಂದ ತಾಂಡಾದ ಕಡೆಗೆ ಹೊಗುವ ರೋಡಿನ ಪಕ್ಕದ ಸಾರ್ವಜನಿಕ ಜಾಗದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 07 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 7150=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 04.30 ಪಿಎಮ್ ದಿಂದ 05.30 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 06.30 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಹಾಜರಪಡಿಸಿದ್ದರಿಂದ ವರದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ 46/2021 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 08-05-2021 09:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ