ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-05-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 62/2022, ಕಲಂ, 338 ಐ ಪಿ ಸಿ : ದಿನಾಂಕ: 07-05-2022 ರಂದು ಮದ್ಯಾಹ್ನ 02-30 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 04-05-2022 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ನನ್ನ ಮಗ ಲಕ್ಷ್ಮಯ್ಯ ಈತನು ಕೆಲಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದನು. ಬೆಳಿಗ್ಗೆ 10-20 ಗಂಟೆ ಸುಮಾರಿಗೆ ನಾನು ನನ್ನ ಮಗ ಸಾಬಯ್ಯ ಮನೆಯಲ್ಲಿರುವಾಗ ನಮ್ಮೂರಿನ ಸಾಬಯ್ಯ ತಂದೆ ನಾಗಪ್ಪ ನಾಗಮಕ್ಕಳ ಈತನು ನನ್ನ ಮಗ ಸಾಬಯ್ಯ ಈತನಿಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ತಮ್ಮ ಲಕ್ಷ್ಮಯ್ಯ ಈತನಿಗೆ ಕೆ.ಇ.ಬಿ ಹತ್ತಿರ ಇರುವ ಹಣಮಂತ ದೋರನಳ್ಳಿ ಇವರ ಹೊಲದಲ್ಲಿರುವ ಕರೆಂಟ್ ಟಿ.ಸಿ ಯಲ್ಲಿ ಕಂಬ ಹತ್ತುವ ಕಾಲಕ್ಕೆ ಕರೆಂಟ್ ಶಾಕ್ ಆಗಿದೆ ಆತನಿಗೆ ಗಾಯ ಆಗಿದೆ ಬೇಗ ಬಾ ಅಂತಾ ಹೇಳಿದ್ದರಿಂದ ಆಗ ನಾನು ನನ್ನ ಮಗ ಸಾಬಯ್ಯ ಮತ್ತು ನನ್ನ ತಮ್ಮ ಶರಣಪ್ಪ ಎಲ್ಲರು ಕೂಡಿ ಹೋಗಿ ನೋಡಲಾಗಿ ನನ್ನ ಮಗ ಲಕ್ಷ್ಮಯ್ಯ ಈತನಿಗೆ ಕರೆಂಟ್ ಶಾಕ್ ನಿಂದ ಎದೆಗೆ ಭಾರಿ ಸುಟ್ಟಗಾಯ, ಎರಡು ಕಾಲು ಕೈಗಳಿಗೆ ಸುಟ್ಟಗಾಯವಾಗಿತ್ತು ಆಗ ನಾನು ನನ್ನ ಮಗನಿಗೆ ಹೇಗಾಯಿತು ಅಂತಾ ಕೇಳಿದಾಗ ಆತನು ಹೇಳಿದ್ದೆನೆಂದರೆ ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಮ್ಮೂರಿನ ಕರೆಂಟ್ ಟಿ.ಸಿ ಗೆ ಡಿವಲ್ ಹೋಗಿದ್ದರಿಂದ ಊರಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಿದ್ದರಿಂದ ಕೆ.ಇ.ಬಿ ಗೆ ಹೋಗಿ ವಿಷಯ ತಿಳಿಸಿ ಸರಿ ಮಾಡಿರಿ ಅಂತಾ ಹೇಳಿದಾಗ ಅಲ್ಲಿದ್ದ ಶಿವಾಜಿ ತಂದೆ ಹಿರಾಸಿಂಗ್ ಮತ್ತು ಮುನ್ಯ ತಂದೆ ಚಂದ್ರು ಇವರು ಕರೆಂಟ್ ತೆಗೆಯುತ್ತೇವೆ ನೀವು ಡಿವಲ್ ಹಾಕಿರಿ ಅಂತಾ ಹೇಳಿದಾಗ ಆಗ ನಾನು ಮತ್ತು ಸಾಬಯ್ಯ ಇಬ್ಬರು ಕೂಡಿ ಕರೆಂಟ್ ಟಿ.ಸಿ ಗೆ ಹೋಗಿ ಅಲ್ಲಿ ಡಿವಲ್ ಹಾಕುತ್ತಿರುವಾಗ ಕರೆಂಟ್ ಹತ್ತಿರುತ್ತದೆ ಅಂತಾ ತಿಳಿಸಿದ್ದು ನನ್ನ ಮಗನಿಗೆ ಕರೆಂಟ್ ಶಾಕ್ ಆಗಿ ಗಾಯವಾಗಲು ನಿರ್ಲಕ್ಷತನ ತೋರಿಸಿದ ಠಾಣಗುಂದಿ ಕೆ.ಇ.ಬಿ ಗೆ ಸಂಬಂದಪಟ್ಟವರ ಮೇಲೆ ಸೂಕ್ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾಧಿ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 37/2022 ಕಲಂ.363, 504, 506 ಐಪಿಸಿ : ಅಪಹರಣಕ್ಕೊಳಾದ ಮಹಿಳೆ ವಿಜಯಲಕ್ಷ್ಮೀ ಇವರು ದಿನಾಂಕ:06/04/2022 ರಂದು ತಮ್ಮ ಹೊಲಕ್ಕೆ ಹೋಗಲು ದೇವತ್ಕಲ್ ಗ್ರಾಮದಿಂದ ತಮ್ಮ ಹೊಲಕ್ಕೆ ಹೋಗುವ ರಸ್ತೆಯ ಮೇಲೆ ಹೊರಟಾಗ, ಆರೋಪಿತನು ತನ್ನ ಮೋಟಾರ್ ಸೈಕಲ್ ತೆಗೆದುಕೊಂಡು ಅಲ್ಲಿಗೆ ಹೋಗಿ ಸದರಿ ವಿಜಯಲಕ್ಷ್ಮೀ ಇವಳಿಗೆ ಪುಸಲಾಯಿಸಿ ತನ್ನ ಮೋಟಾರ್ ಸೈಕಲ್ ಮೇಲೆ ಅಪಹರಿಸಿಕೊಂಡು ಹೋಗಿದ್ದು, ಅಲ್ಲದೆ ಫಿರ್ಯಾಧಿಗೆ ಪೋನ್ ಮಾಡಿ ನಿನ್ನ ಮಗಳಿಗೆ ನಾನೇ ಕರೆದುಕೊಂಡು ಬಂದಿದ್ದೇನೆ, ನೀನು ಏನು ಮಾಡಿಕೊಳ್ಳುತ್ತಿ ಮಾಡಿಕೊ ಅಂತಾ ಬೈದಾಡಿದ್ದು, ಅಲ್ಲದೆ ನೀನು ಕೇಸ್ ಕೊಟ್ಟರೆ ನಿನಗೆ ಜೀವಂತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು, ಫಿರ್ಯಾಧಿಯು ತನ್ನ ಮಗಳಿಗೆ ಅಲ್ಲಿಂದ ಇಲ್ಲಿಯವರೆಗೆ ಹುಡುಕಾಡಿ ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಇರುತ್ತದೆ.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 66/2022 ಕಲಂ 279, 337, 338 ಐಪಿಸಿ : ದಿನಾಂಕ 04.05.2022 ರಂದು ಸಂಜೆ 04:30 ಗಂಟೆಯ ಸುಮಾರಿಗೆ ತಾತಳಗೇರಾ-ಅರಕೇರಾ(ಕೆ) ಗ್ರಾಮಗಳ ನಡುವೆ ರೋಡಿನ ಮೇಲೆ ಟಂ ಟಂ ನಂಬರ ಕೆಎ-33-4780 ನೇದ್ದರ ಚಾಲಕನಾದ ಬಸವರಾಜ ತಂದೆ ಹಣನಮಂತ ಬಾಲಚಡ್ ವ|| 27 ವರ್ಷ ಜಾ||ಬೇಡರ ಉ||ಡ್ರೈವರ್ ಸಾ||ಕಾಳಬೆಳಗುಂದಿ ಇತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಿಸಲು ಸಾಧ್ಯವಾಗದೇ ಒಮ್ಮೇಲೆ ಎಡಕ್ಕೆ ಕಟ್ ಹೊಡೆದಿದ್ದರ ಪರಿಣಾಮವಾಗಿ ಅಪಘಾತ ಸಂಭವಿಸಿದ್ದು ಸದರಿ ಅಪಘಾತದಲ್ಲಿ ಗಾಯಾಳುವಿಗೆ ಭಾರಿ ಹಾಗೂ ಸಾಧಾ ಸ್ವರೂಪದ ರಕ್ತಗಾಯವಾಗಿದ್ದು ಆ ಬಗ್ಗೆ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ: 66/2022 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ:49/2022 ಕಲಂ: 341, 323, 324, 307, 109, 504, 506 ಸಂ. 149 ಐಪಿಸಿ : ಪಿರ್ಯಾಧಿ ಸಾರಾಂಶವೆನೆಂದರೆ, ನಮ್ಮ ಅಣ್ಣಂದಿರಾದ ರಾಮಲಿಂಗಪ್ಪ ತಂದೆ ಅಯ್ಯಪ್ಪ ಜೋಗೇರ, ಬಸವರಾಜ ತಂದೆ ಅಯ್ಯಪ್ಪ ಜೋಗೇರ ಇವರಿಗೂ ನಮಗೂ ಆಸ್ತಿಯ ವಿಚಾರವಾಗಿ ಜಗಳ ನಡೆದಿರುತ್ತದೆ. ನ್ಯಾಯಾ ಪಂಚಾಯತಿ ಮಾಡುವಾಗ ಜಗಳವಾಗಿದ್ದು ಆಗ ಊರಿನ ಹಿರಿಯರು ನ್ಯಾಯ ಪಂಚಾಯತಿ ಮಾಡಿ ಬಗೆಹರಿಸಿದ್ದರು. ಆದರು ಕೂಡಾ ನಮ್ಮ ಅಣ್ಣ ಬಸವರಾಜ ಇತನು ಆಗಾಗ ತನ್ನ ಸಂಗಡ ಬೇರೆ ಬೇರೆ ಹುಡುಗರನ್ನು ಮನೆಗೆ ಕರೆದುಕೊಂಡು ಬಂದು ನಮ್ಮ ಸಂಗಡ ಆಸ್ತಿಯ ವಿಷಯವಾಗಿ ಜಗಳ ಮಾಡುತ್ತಾ ಬಂದಿರುತ್ತಾನೆ. ಇಂದು ದಿನಾಂಕ. 07/05/2022 ರಂದು 11-00 ಎಎಮ್ ಸುಮಾರಿಗೆ ಬಂದಾಗ ಆರೋಫಿತರೆಲ್ಲರೂ ಕೂಡಿಕೊಂಡು ಪಿರ್ಯಾಧಿಗೆ ಡಿ.ಎಮ್.ಸಿ ಬಾರ್ ಮುಂದುಗಡೆ ಹಣದ ವಿಷಯವಾಗಿ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯಪಡಿಸಿ ಕೊಲೆ ಪ್ರಯತ್ನ ಮಾಡಿದ್ದು ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.49/2022 ಕಲಂ.341, 323, 324, 307, 109, 504, 506 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 50/2022 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ.07/05/2022 ರಂದು 6-30 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 07/05/2022 ರಂದು 4-00 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಲಕ್ಕಿಬಾರ್ ಕ್ರಾಸ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 5-10 ಪಿಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು ಕಾಲೇತ ತಂದೆ ಮಹ್ಮದ ಹನೀಫ ಚಾವುಸ ವ;22 ಜಾ; ಮುಸ್ಲಿಂ ಉ; ಕೂಲಿಕೆಲಸ ಸಾ; ಗಚ್ಚಿಬೌಡಿ ಯಾದಗಿರಿ ಅಂತಾ ತಿಳಿಸಿದ್ದು ನಂತರ ಸದರಿಯವನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 1320-00 ರೂ. 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು ನಂತರ ಆರೋಪಿತನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ಅಂತಾ ಕೇಳಿದಾಗ ಆತನು ಆರೀಫ ನ್ಯೂ ಕನ್ನಡ ಶಾಲೆ ಹತ್ತಿರ ಯಾದಗಿರಿ ಇತನಿಗೆ ಕೊಡುತ್ತೇನೆ ಅಂತಾ ತಿಳಿಸಿದ್ದು ಇರುತ್ತದೆ. ಸದರಿ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ.07/05/2022 ರಂದು 5-10 ಪಿಎಂ ದಿಂದ 6-10 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ಮರಳಿ ಠಾಣೆಗೆ 6-30 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿರವರಿಗೆ ಜ್ಞಾಪನಾ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ಜ್ಞಾಪನದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.50/2022 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 08-05-2022 10:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080