ಅಭಿಪ್ರಾಯ / ಸಲಹೆಗಳು

                                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08-06-2021
ವಡಗೇರಾ ಪೊಲೀಸ್ ಠಾಣೆ :- 72/2020 ಕಲಂ: 420 ಐಪಿಸಿ : ದಿನಾಂಕ: 07/06/2021 ರಂದು 6-15 ಪಿಎಮ್ ಕ್ಕೆ ಶ್ರೀ ಮಾರುತಿ ತಂದೆ ಮೇಲಪ್ಪ ಚೂರಿ, ವ:41, ಜಾ:ಉಪ್ಪಾರ, ಉ:ಒಕ್ಕಲುತನ ಸಾ:ಕಾಟಮದೇವರಹಳ್ಳಿ ತಾ:ಚಿತ್ತಾಪೂರ ತಾ:ಕಲಬುರಗಿ ಇದ್ದು, ಈ ಮೂಲಕ ತಮ್ಮಲ್ಲಿ ಸಲ್ಲಿಸುವ ದೂರು ಅಜರ್ಿಯೇನಂದರೆ ನಮ್ಮ ಸ್ವಂತ ಹೊಲ ಇದ್ದು, ಆ ಹೊಲದಲ್ಲಿ ಮಾರ್ಚ-2020 ನೇ ತಿಂಗಳಿನಲ್ಲಿ ಕಬ್ಬು ಬೆಳೆನ್ನು ಹಾಕಿದ್ದೇನು. ಅಗಷ್ಟ-2020 ನೇ ತಿಂಗಳಿನಲ್ಲಿ ಕಬ್ಬು ಬೆಳೆ ಸರಿಯಾಗಿ ಬಂದಿತು. ಆ ಸಮಯದಲ್ಲಿ ವಡಗೇರಾ ತಾಲೂಕಿನ ಕೋರ ಗ್ರೀನ ಶುಗರ್ಸ & ಫುಯೆಲ್ಸ್ ಲಿಮಿಟೆಡ್ ತುಮಕೂರು ರವರು ಬಂದು ನಮ್ಮ ಶುಗರ ಫ್ಯಾಕ್ಟರಿಗೆ ಕಬ್ಬು ಮಾರಾಟ ಮಾಡಿ ಎಂದು ಹೇಳಿ ಫ್ಯಾಕ್ಟರಿಗೆ ಕರೆಸಿ, ನಮ್ಮೊಂದಿಗೆ ಅಗ್ರಿಮೆಂಟ್ ಅನ್ನು ಮಾಡಿಕೊಂಡರು. ಅದರಂತೆ ಡಿಸೆಂಬರ್-2020 ನೇ ತಿಂಗಳಿನಲ್ಲಿ ಕಬ್ಬು ಕಟಾವಿಗೆ ಬಂದಿದ್ದರಿಂದ ನಾವು ಕಬ್ಬನ್ನು ಕಟಾವು ಮಾಡಿ ಕೋರ ಗ್ರೀನ ಶುಗರ ಫ್ಯಾಕ್ಟರಿ ತುಮಕೂರಿಗೆ ಕಬ್ಬು ತಂದು ಹಾಕಿದ್ದೇವು. ನನ್ನ ಕಬ್ಬು ಫ್ಯಾಕ್ಟರಿಗೆ ಜಮಾ ಮಾಡಿದ್ದಕ್ಕೆ ನನಗೆ ಖಙಔಖಿ ಅಔಆಇ:ಅಉಖಿ 029459 ಕೊಟ್ಟಿದ್ದು, ಒಟ್ಟು 209 ಟನ್ ಕಬ್ಬನ್ನು ಫ್ಯಾಕ್ಟರಿಗೆ ಹಾಕಿದ್ದು, ಅಂದಾಜು 2300/- ರೂ. ಟನದಂತೆ ಒಟ್ಟು 4,80,700/- (ನಾಲ್ಕು ಲಕ್ಷ ಎಂಬತ್ತು ಸಾವಿರದ ಏಳನೂರು) ರೂ. ಹಣ ಆಗಿದ್ದು, ಅಂತಿಮ ಕಟಿಂಗ್ ಆದ 15 ದಿನಗಳ ಒಳಗಾಗಿ ಹಣವನ್ನು ನಮ್ಮ ಬ್ಯಾಂಕ ಖಾತೆಗೆ ಜಮಾ ಮಾಡುವುದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆ ಪ್ರಕಾರ ನನಗೆ ಹಣ ಸಂದಾಯ ಮಾಡಿರಿ ಎಂದು ಕೋರ ಗ್ರೀನ ಶುಗರ ಫ್ಯಾಕ್ಟರಿಯವರಿಗೆ ಕೇಳಿದರೆ ಅವರು ನನಗೆ ಸ್ಪಂದನೆ ಮಾಡಿರುವುದಿಲ್ಲ. ಇಲ್ಲಿಯವರೆಗೆ ನಾನು ಸುಮಾರು 15-20 ಸಲ ಕಾಖರ್ಾನೆಗೆ ಬಂದು ನನ್ನ ಕಬ್ಬಿನ ಹಣ ವಿಚಾರಿಸಿದರೆ ಯಾರು ಕಿವಿಯಲ್ಲಿ ಹಾಕಿಕೊಂಡಿಲ್ಲ ಮತ್ತು ಇಲ್ಲಿಯವರೆಗೆ ನನ್ನ ಬ್ಯಾಂಕ ಖಾತೆಗೆ ಶುಗರ ಫ್ಯಾಕ್ಟರಿಯಿಂದ ಕಬ್ಬಿನ ಬಾಕಿ ಹಣ ಒಂದು ರೂಪಾಯಿ ಕೂಡಾ ಪಾವತಿಯಾಗಿಲ್ಲ. ಕೋರ ಗ್ರೀನ ಶುಗರ ಫ್ಯಾಕ್ಟರಿಯವರು ನನ್ನ ಕಬ್ಬಿನ ಹಣವನ್ನು ಅಗ್ರಿಮೆಂಟ್ ಪ್ರಕಾರ ನನಗೆ ಪಾವತಿ ಮಾಡದೆ ಮೋಸ ಮಾಡಿರುತ್ತಾರೆ. ನನ್ನಂತೆಯೇ ಈ ಕೆಳಕಂಡ ರೈತರಿಗೂ ಕೂಡಾ ಅಗ್ರಿಮೆಂಟ್ ಮಾಡಿಕೊಂಡು ಅವರಿಂದ ಕಬ್ಬು ಖರೀದಿ ಮಾಡಿ ಅವರಿಗೂ ಕೂಡಾ ಹಣವನ್ನು ಪಾವತಿಸದೆ ಮೋಸ ಮಾಡಿರುತ್ತಾರೆ. ಅವರ ವಿವರ ಈ ಕೆಳಗಿನಂತೆ ಇರುತ್ತದೆ.
1) ಅಂಬೋಜಿ ತಂದೆ ಈಶ್ವರಪ್ಪ ಕಾಟಮದೇವರಹಳ್ಳಿ ಖಙಔಖಿ ಅಔಆಇ:ಅಉಖಿ 025094
2) ಮಲ್ಲಪ್ಪ ತಂದೆ ಶ್ರೀಮಂತಪ್ಪ ದಂಡನಾಯ್ಕ ಕಾಟಮದೇವರಹಳ್ಳಿ ಖಙಔಖಿ ಅಔಆಇ:ಅಉಖಿ 029288
3) ರಮೇಶ @ ರಾಮಣ್ಣ ತಂದೆ ಶರಣಪ್ಪ ಭೋವಿ ಕಾಟಮದೇವರಹಳ್ಳಿ ಖಙಔಖಿ ಅಔಆಇ:ಅಉಖಿ 029497
4) ಸಿದ್ರಾಮ ತಂದೆ ಸಣ್ಣ ಸಾಬಣ್ಣ ಭೋವಿ ಕಾಟಮದೇವರಹಳ್ಳಿ ಖಙಔಖಿ ಅಔಆಇ:ಅಉಖಿ 029496
5) ತಿಮ್ಮಯ್ಯ ತಂದೆ ಯಮನಪ್ಪ ಭೋವಿ ಕಾಟಮದೇವರಹಳ್ಳಿ ಖಙಔಖಿ ಅಔಆಇ:ಅಉಖಿ 030228
ಹೀಗೆ ನಾನು ಮತ್ತು ಮೇಲ್ಕಂಡ 5 ಜನರು ಒಂದೇ ಗ್ರಾಮದವರಿದ್ದು, ನಮಗೆ ಕೋರ ಗ್ರೀನ ಶುಗರ ಫ್ಯಾಕ್ಟರಿ ಆಡಳಿತ ಮಂಡಳಿಯವರು ನಮಗೆ ಕಬ್ಬಿನ ಹಣ ಕೊಡದೆ ಮೋಸ ಮಾಡಿರುತ್ತಾರೆ. ಆದ್ದರಿಂದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಇನ್ನು ನಮ್ಮ ಭಾಗದ ರೈತರಿಗೂ ಇದೇ ರೀತಿ ಮೋಸ ಮಾಡಿರುತ್ತಾರೆ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 72/2021 ಕಲಂ: 420 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ :- 121/2021 ಕಲಂ, 457, 380 ಐ.ಪಿ.ಸಿ : ಇಂದು ದಿನಾಂಕ:07/06/2021 ರಂದು 14-00 ಗಂಟೆಗೆ ಫಿಯರ್ಾದಿ ಶ್ರೀ ಹಣಮಂತ್ರಾಯ ತಂದೆ ಸಂಗಪ್ಪ ಸೋಮಾಪೂರ ವ|| 39 ಜಾ|| ರೆಡ್ಡಿ ಉ|| ಆದರ್ಶ ಶಾಲೆಯ ಮುಖ್ಯಗುರುಗಳು ಸಾ|| ಭೈರವಾಡಗಿ ತಾ|| ದೇವರ ಹಿಪ್ಪರಿಗಿ ಹಾ|| ವ|| ಬಾಪೂಗೌಡ ನಗರ ಶಹಾಪೂರ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕರಣ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಶಹಾಪೂರದಲ್ಲಿ ಇರುವ ನಮ್ಮ ಆದರ್ಶ ವಿದ್ಯಾಲಯದಲ್ಲಿ ಟಿ,ಎ,ಎಲ್,ಪಿ, ಯೋಜನೇತರ ಅಡಿಯಲ್ಲಿ ಗಣಕಯುಂತ್ರ ಪ್ರಯೋಗಾಲಯಕ್ಕೆ ಕಂಪ್ಯೂಟರ್ಗಳು ಸರಬರಾಜು ಆಗಿದ್ದು ಇರುತ್ತದೆ. ಸಿವಪ್ಪ ತಂದೆ ತಿಲ್ಲಣ್ಣ ಈತನು ನನಗೆ ದಿನಾಂಕ 4/06/2021 ರಂದು 7-00 ಗಂಟೆಗೆ ಪೋನ ಮಾಡಿ ತಿಳಿಸಿದ್ದೆನೆಂದರೆ. ನಾನು ದಿನಾಂಕ 03/06/2021 ರಂದು ಸಾಯಂಕಾಲ 7-00 ಗಂಟೆಗೆ ನಮ್ಮ ಶಾಲೆಯ ಬಾಗಿಲು ಹಾಕಿಕೊಂಡ ಮನೆಗೆ ಹೋಗಿದ್ದು. ಮರಳಿ ಮರು ದಿವಸ ದಿ: 04/06/2021 ರಂದು 6-00 ಗಂಟೆಗೆ ಎಂದಿನಂತೆ ಶಾಲೆಗೆ ಹೋಗಿ ನೋಡಲಾಗಿ ಶಾಲೆಯ ಪ್ರಯೋಗಾಲಯದಲ್ಲಿನ ಬಾಗಿಲ ಕಿಲಿ ಮುರಿದ್ದು, ಬಾಗಿಲ ತೆರೆದಿದ್ದು, ಪ್ರಯೋಗಾಲಯದಲ್ಲಿಯ 2 ಕಂಪ್ಯೂಟರ್ಗಳು ಕಾಣಿಸುತ್ತಿಲ್ಲಾ ಅಂತ ತಿಳಿಸಿದ್ದರಿಂದ, ನಾನು ಮತ್ತು ಅಮಿನರೆಡ್ಡಿ ತಂದೆ ಬಸವರಾಜಪ್ಪ ಪ್ರ.ದ.ಸ. ಇಬ್ಬರು ಕೂಡಿ ಆದರ್ಶ ವಿದ್ಯಾಲಯದ ಒಳಗಡೆ ಹೋಗಿ ನೋಡ ಲಾಗಿ ಪ್ರಯೋಗಾಲಯದಲ್ಲಿನ ಬಾಗಿಲ ಕಿಲಿ ಮುರಿದ್ದು ಪ್ರಯೋಗಾಲಯದಲ್ಲಿನ 10ಯುಎಲ್ಎಸ್03ಯು00 ಲೇನೊವಾ ಕಂಪನಿಯ ವಿ330-201ಸಿಬಿ ಎಐಒ ನೇದ್ದು 2 ಕಂಪ್ಯೂಟರ್ಗಳು ಇರಲಿಲ್ಲಾ ನಾವೆಲ್ಲರು ಹುಡುಕಾಡಿದರು ಸಿಕ್ಕಿರುವದಿಲ್ಲಾ. ಯಾರೋಕಳ್ಳರು 2 ಕಂಪ್ಯೂಟರ್ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಎರಡು ಕಂಪ್ಯೂಟರ್ಗಳ ಅ:ಕಿ: 30,000=00 ರೂ. ಇರುತ್ತದೆ. ನಮ್ಮ ಮೇಲಾಧಿಕಾರಿಗಳೊಂದಿಗೆ ತಿಳಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ.
ಕಾರಣ ನಮ್ಮ ಶಾಲೆಯ ಪ್ರಯೋಗಾಲಯದಲ್ಲಿನ 2 ಕಂಪ್ಯೂಟರ್ಗಳನ್ನು ರಾತ್ರಿ ಸಮಯದಲ್ಲಿ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿಯವುಗಳನ್ನು ಪತ್ತೆ ಮಾಡಿ ಕ್ರಮ ಕೈಕೊಳ್ಳಲು ವಿನಂತಿ ಅಂತ ನೀಡಿದ ಫಿಯರ್ಾದಿಯವರ ದೂರಿನ ಸಾರಾಂಶದ ಮೇಲಿಂದ ಠಾಣೆಗುನ್ನೆ ನಂಬರ 121/2021 ಕಲಂ 457, 380 ಐ.ಪಿ.ಸಿ ಅಡಿಯಲ್ಲಿ ಪ್ರರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ :- 122/2021 ಕಲಂ 87 ಕೆಪಿ ಆಕ್ಟ್ : ಇಂದು ದಿನಾಂಕ: 07-06-2021 ರಂದು 3:30 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಶಾಮಸುಂದರ ಪಿ.ಎಸ್.ಐ (ಅ.ವಿ.) ಶಹಾಪುರ ರವರು ಒಂದು ಜಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಹಾಜರು ಪಡಿಸಿದ್ದು ಅದರ ಸಾರಾಂಶವೇನಂದರೆ, ಇಂದು ದಿನಾಂಕ: 07-06-2021 ರಂದು 3:00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಶಹಾಪುರ ನಗರ ಜಾಲಗಾರ ಓಣಿಯ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಮದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದು ಸದರಿ ಅಪರಾಧವು ಅ ಸಂಜ್ಞೇಯವಾಗಿದ್ದಿರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 30/2021 ನೇದ್ದನ್ನು ಧಾಖಲಿಸಿದ್ದು ಇದೆ. ಮತ್ತು ಕಲಂ 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ದಾಳಿಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಕೊಡೆದುಕೊಂಡು ಪರವಾನಿಗೆ ಪತ್ರ ಈ ಕೂಡಾ ಲಗತ್ತಿಸಿದ್ದು ಇದೆ ಆದ್ದರಿಂದ ಸದರಿ ಇಸ್ಪೀಟ ಜುಜಾಟ ಆಡುವ ವ್ಯಕ್ರಿಗಳ ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತರ ಮೇಲೆ ಕಲಂ. 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.122/2021 ಕಲಂ 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು. ನಂತರ ದಾಳಿಗೆ ಹೋಗಿ ದಾಳಿಮಾಡಿ 4 ಜನ ಆರೋಪಿತರು ಮತ್ತು ನಗದು 3130/- ಹಣ ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಬಂದು ಜಪ್ತಿ ಪಂಚನಾಮೆಯೊಂದಿಗೆ ವರದಿ ನೀಡಿದ್ದು ಇದೆ.

ಶೋರಾಪೂರ ಪೊಲೀಸ್ ಠಾಣೆ :- 104/2021 ಕಲಂ:341, 323, 504, 506 ಸಂ. 34 ಐಪಿಸಿ : ಇಂದು ದಿನಾಂಕ:07/06/2021 ರಂದು 05:00 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರನಾದ ಶ್ರೀ ಹಣಮಂತ ತಂದೆ ಹೊನ್ನೆಕೆರೆಪ್ಪ ಗೊಲಪಲ್ಲಿ ವ|| 35 ವರ್ಷ ಜಾ|| ಯಾದವ್ ಉ|| ಒಕ್ಕಲತನ ಸಾ|| ಪೇಠ ಅಮ್ಮಾಪುರ ತಾ|| ಸುರಪುರ ಜಿ|| ಯಾದಗಿರಿ ಈತನು ಠಾಣೆಗೆ ಬಂದು ಒಂದು ಗಣಕಿಕರಿಸಿದ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ನನಗೆ ಮೂರು ಜನ ಮಕ್ಕಳಿದ್ದು, ಇಬ್ಬರು ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇರುತ್ತಾಳೆ. ನಮ್ಮ ತಂದೆಯವರ ಹೆಸರಿನಲ್ಲಿ ನಮ್ಮದು ಒಟ್ಟು 10 ಎಕರೆ ಹೊಲ ಇದ್ದು ಈಗ ನಮ್ಮ ತಂದೆಯವರು ನನಗೆ ಮತ್ತು ನನ್ನ ತಮ್ಮಂದಿಯವರಿಗೆ ತಲಾ ಒಂದೊಂದು ಎಕರೆ ಉಪ-ಜೀವನಕ್ಕೆ ಕೊಟ್ಟಿರುತ್ತಾರೆ. ನಮ್ಮೂರ ಸಮಿಪ ಇರುವ ಒಂದು ಎಕರೆ ಹೊಲದಲ್ಲಿ ನಮ್ಮ ತಂದೆಯವರು ಪ್ಲಾಟ್ ಮಾಡಿ ಮಾರುತಿದ್ದು, ನನ್ನ ಪಾಲಿಗೆ ಬರುವ ಪ್ಲಾಟ್ ಬೇಕು ಅಂತಾ ಕೆಳಿದಕ್ಕೆ ನಮ್ಮ ತಂದೆ ನಿನ್ನ ತಮ್ಮಂದಿಯರನ್ನು ಕೇಳಿ ಕೊಡುತ್ತೇನೆ ಅಂತಾ ಹೇಳಿದಾಗ ನಾನು ಸುಮ್ಮನಿದ್ದೆನು. ಇಂದು ದಿನಾಂಕ:07/06/2021 ರಂದು 10:00 ಗಂಟೆ ಸುಮಾರಿಗೆ ನಾನು ನನ್ನ ಮಗನಿಗೆ ಆರಾಮ ಇಲ್ಲದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೊಗಲು ನಮ್ಮೂರ ಬಸ್ ನಿಲ್ದಾಣದ ಹತ್ತಿರ ಇದ್ದಾಗ ನಮ್ಮ ನನ್ನ ತಮ್ಮಂದಿಯರಾದ 1) ಮಲ್ಲಪ್ಪ ತಂದೆ ಹೊನಕೆರೆಪ್ಪ ಗೊಲಪಲ್ಲಿ, 2) ಮೈಲಾರೆಪ್ಪ ತಂದೆ ಹೊನಕೆರೆಪ್ಪ ಗೊಲಪಲ್ಲಿ, 3) ನಿಂಗಪ್ಪ ತಂದೆ ಹೊನಕೆರೆಪ್ಪ ಗೊಲಪಲ್ಲಿ, 4) ಸಂಗಯ್ಯ ತಂದೆ ಹೊನಕೆರೆಪ್ಪ ಗೊಲಪಲ್ಲಿ ಎಲ್ಲರು ಕೂಡಿ ಬಸ್ ನಿಲ್ದಾಣದ ಹತ್ತಿರ ಇದ್ದ ನನಗೆ ತಡೆದು ನಿಲ್ಲಿಸಿ, ಏನಲೇ ಹಣಮೆ ನಿನಗೆ ಊರ ಮುಂದಿನ ಜಾಗದಲ್ಲಿ ಪ್ಲಾಟ್ ಬೇಕು ಅಂತಾ ಅಪ್ಪನಿಗೆ ಕೇಳತಿ ಸೂಳೆಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನಾನು ಯಾಕೆ ನನಗೆ ಬೈಯುತ್ತಿರಿ ನನಗೂ ಜಾಗದಲ್ಲಿ ಹಕ್ಕಿದೆ ಕೇಳಿನಿ ಅಂತಾ ಅಂದಾಗ ಮಲ್ಲಪ್ಪ ಇತನು ನನಗೆ ಹೊಟ್ಟೆಗೆ ಒದ್ದು ಎದೆಯ ಮೇಲಿನ ಅಂಗಿ ಹಿಡಿದು ನೇಲಕ್ಕೆ ಕೆಡವಿದನು. ಮೈಲಾರೆಪ್ಪ, ನಿಂಗಪ್ಪ, ಸಂಗಯ್ಯ ಎಲ್ಲರೂ ಕೈಯಿಂದ ಕಪಾಳಕ್ಕೆ ಬೆನ್ನನಿಗೆ, ಎದೆಗೆ ಹೊಡೆದು ಕಾಲಿನಿಂದ ಒದ್ದು ಗುಪ್ತಗಾಯ ಮಾಡಿದರು. ಬಾಯಿ ಮಾತಿನಿ ಜಗಳ ಕೇಳಿ ನನ್ನ ಹೆಂಡತಿ ಭಾಗಮ್ಮ, ಅಲ್ಲೆ ಹೊರಟಿದ್ದ ಸಣ್ಣೆಪ್ಪ ತಂದೆ ಪರಸಪ್ಪ ಪ್ಯಾಟಿ, ರಾಯಪ್ಪ ತಂದೆ ಮಲ್ಲಪ್ಪ ಕೊಕ್ಕಣವರಿ ಮೂರು ಜನರು ಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ಆರೋಪಿತರೆಲ್ಲರು ಇವರು ಬಂದು ಜಗಳ ಬಿಡಿಸಿದ್ದಾರೆ ಅಂತಾ ಇವತ್ತು ನಿನಗೆ ಬಿಟ್ಟಿವಿ ಸೂಳೆ ಮಕ್ಕಳೆ ಇಲ್ಲದಿದ್ದರೆ ನಿಮ್ಮ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಅಲ್ಲಿಂದ ಹೊರಟು ಹೊದರು. ಕಾರಣ ನನಗೆ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿ ಹೋಗಿರುವ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿಯ ಸರಾಂಶದ ಮೇಲಿಂದ ಠಾಣೆ ಗುನ್ನೆ ನಂ. 104/2021 ಕಲಂ: 341, 323, 504, 506 ಸಂ. 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 80/2021 ಕಲಂ 379 ಐಪಿಸಿ : ಇಂದು ದಿನಾಂಕ 07/06/202021 ರಂದು ಸಾಯಂಕಾಲ 5-30 ಪಿ.ಎಂ.ಕ್ಕೆ ಶ್ರೀ ಸುನೀಲಕುಮಾರ ಮೂಲಿಮನಿ ಪಿ.ಐ. ಸಿ.ಇ.ಎನ್. ಪೊಲೀಸ್ ಠಾಣೆ ಯಾದಗಿರಿ ರವರು ಠಾಣೆಗೆ ಬಂದು ವರದಿ ಮತ್ತು ಜಪ್ತಿ ಪಂಚನಾಮೆ ತಂದು ಹಾಜರಪಡಿಸಿದ್ದೆನೆಂದರೆ ಈ ಮೂಲಕ ನಾನು ಸುನೀಲಕುಮಾರ ಮೂಲಿಮನಿ ಪಿ.ಐ. ಸಿ.ಇ.ಎನ್. ಪೊಲೀಸ್ ಠಾಣೆ ಯಾದಗಿರಿ ವರದಿ ನೀಡುವುದೆನೆಂದರೆ ಇಂದು ದಿನಾಂಕ 07/06/2021 ರಂದು ಮಧ್ಯಾಹ್ನ 1-30 ಗಂಟೆಗೆ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಶ್ರೀಮಂತ ಸಿಂಗೆ ಸಿ.ಹೆಚ್.ಸಿ-141, ಶ್ರೀ ಸಯ್ಯದ ಶಫಿಯೊದ್ದಿನ ಸಿ.ಹೆಚ್.ಸಿ-97 ಮತ್ತು ಶ್ರೀ ಸಯ್ಯದಲಿ ಸಿ.ಹೆಚ್.ಸಿ-191 ಮತ್ತು ಜೀಪ ಚಾಲಕ ಶರಣಬಸವ ಎಹೆಚ್ಸಿ-19 ಎಲ್ಲರೂ ಠಾಣೆಯಲ್ಲಿ ಇರುವಾಗ ಬಾತ್ಮಿ ಬಂದಿದೆನೆಂದರೆ ಕೌಳೂರ ಗ್ರಾಮದ ಸೀಮೆಯಲ್ಲಿ ಬರುವ ಹೊಲ ಸವರ್ೆ ನಂ 202 ನೆದ್ದರಲ್ಲಿ ಅಕ್ರಮವಾಗಿ ಮತ್ತು ಅನದಿಕೃತವಾಗಿ ಉಸುಕು ಸಂಗ್ರಹಿಸಿಟ್ಟಿದ್ದಾರೆ ಅಂತಾ ಬಾತ್ಮಿ ಬಂದಿದ್ದರಿಂದ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ಶ್ರೀ ಸುರೇಶಕುಮಾರ ಪಿ.ಎಸ್.ಐ(ಕಾ.ಸು) ಮತ್ತು ಸಿಬ್ಬಂಧಿಯವರಾದ ಶ್ರೀ ಮೋನಪ್ಪ ಸಿಪಿಸಿ-263, ಶ್ರೀ ಶ್ರೀಶೈಲ ಸಿ.ಹೆಚ್.ಸಿ-98, ಶ್ರೀ ಭೀಮರಾಯ ಸಿಪಿಸಿ-33 ರವರನ್ನು ಕಛೆರಿಗೆ ಕರೆಯಿಸಿ ಎಲ್ಲರೂ ಕೂಡಿಕೊಂಡು ಜೀಪನಲ್ಲಿ ಕುಳಿತುಕೊಂಡು ಮಾನ್ಯ ಎಸ್.ಪಿ. ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ನಾನು ಮಧ್ಯಾಹ್ನ 2-15 ಗಂಟೆಯ ಸುಮಾರಿಗೆ ಆಫೀಸಿನಿಂದ ಹೊರಟು 3-00 ಪಿ.ಎಂ.ಕ್ಕೆ ಕೌಳೂರ ಗ್ರಾಮದ ಸೀಮೆಯಲ್ಲಿ ಬರುವ ಹೊಲ ಸವರ್ೆ ನಂ 202 ರಲ್ಲಿ ಹೋಗಿ ನೋಡಲಾಗಿ ಅಕ್ರಮವಾಗಿ ಮತ್ತು ಅನಧಿಕೃತವಾಗಿ ಮರಳು ಸಂಗ್ರಣೆ ಮಾಡಿದ್ದು ಕಂಡುಬಂದಿದ್ದು, ಪೊಲೀಸ್ ಬಾತ್ಮಿದಾರರಿಗೆ ಅಕ್ರಮವಾದ ಮರಳು ಸಂಗ್ರಣೆ ಮಾಡಿದವರ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ 1)ದೇವಪ್ಪ ಮಸ್ಕಿ 2)ಮಲ್ಕಪ್ಪ ಹರಿಜನ 3)ಈಶಪ್ಪ ಗುದಗೇರ 4)ಬಸಲಿಂಗಪ್ಪ ಹರಿಜನ ಸಾಃ ಎಲ್ಲರೂ ಕೌಳೂರ ಅಂತಾ ಗೋತ್ತಾಗಿದ್ದು, ಇವರೆಲ್ಲರೂ ಕೂಡಿಕೊಂಡು ಭೀಮಾ ನದಿಯಲ್ಲಿ ಮರಳು ಕಳ್ಳತನ ಮಾಡಿ ಮರಳು ಸಂಗ್ರಹಣೆ ಮಾಡಿ ಬೇರೆ ಕಡೆಗೆ ಸಾಗಿಸಲು ಸಕರ್ಾರದಿಂದ ಪರವಾನಿಗೆ ಪಡೆಯದೆ, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಹೊಲ ಸವರ್ೆ 202 ನೆದ್ದರಲ್ಲಿ ಸಂಗ್ರಹಿಸಿಟ್ಟಿದ್ದು ಇರುತ್ತದೆ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಅಂದಾಜ 16 ರಿಂದ 17 ಟಿಪ್ಪರಗಳಷ್ಟು ಇದ್ದು, ಅದರ ಅಂದಾಜ ಕಿಮ್ಮತ್ತು 68,000/ರೂ ಆಗುತ್ತದೆ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ನಮ್ಮ ವಶಕ್ಕೆ ತೆಗೆದುಕೊಂಡೆನು, ವಶಕ್ಕೆ ಪಡೆದುಕೊಂಡ ಮರಳು ಸ್ಥಳದಲ್ಲಿಯೇ ಇರುತ್ತದೆ, ನಂತರ ಇಬ್ಬರೂ ಪಂಚರನ್ನಾಗಿ 1)ಶ್ರೀ ಚಂದ್ರಾಮ ತಂದೆ ಭೀಮರಾಯ ಬಾಗಲಿ ಸಾಃಕೌಳುರ ಮತ್ತು 2)ಬಸವಲಿಂಗಪ್ಪ ತಂದೆ ಶಿವಣ್ಣ ಮಗ್ಗಾ ಸಾಃ ಹೊಸಳ್ಳಿ ಕ್ರಾಸ್ ಯಾದಗಿರಿ ಇವರನ್ನು ಸ್ಥಳಕ್ಕೆ ಬರಮಾಡಿಕೊಂಡು 4-00 ಪಿ.ಎಂ. ದಿಂದ 5-00 ಪಿ.ಎಂ. ವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮಾಡಿಕೊಂಡು ಮರಳು ಜಪ್ತಿ ಮಾಡಿಕೊಂಡೆನು, ಸದರಿ ಮರಳು ಸ್ಥಳದಲ್ಲಿಯೇ ಬಿಡಲಾಗಿದೆ. ನಂತರ ಸಾಯಂಕಾಲ 5-30 ಗಂಟೆಯ ಸುಮಾರಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ ರವರಿಗೆ ವರದಿ ಮತ್ತು ಜಪ್ತಿ ಪಂಚನಾಮೆ ಸಲ್ಲಿಸಿದ್ದು ಇರುತ್ತದೆ. ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟಿದ್ದವರ ಮೆಲೆ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 80/2021 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,


ಯಾದಗಿರ ನಗರ ಪೊಲೀಸ್ ಠಾಣೆ :- 66/2021 ಕಲಂ. ಮನುಷ್ಯಕಾಣೆ : ಇಂದು ದಿನಾಂಕ.07/06/2021 ರಂದು 8-15 ಪಿಎಂಕ್ಕೆ ಶ್ರೀ ಬಸವರಾಜಪ್ಪ ತಂದೆ ಗುರುಬಸ್ಸಪ್ಪ ಬೋನಾಳ ವಃ 73 ವರ್ಷ ಜಾಃ ಲಿಂಗಾಯತರೆಡ್ಡಿ ಉಃ ಒಕ್ಕಲುತನ ಸಾಃ ಲಕ್ಷ್ಮೀ ನಗರ ಯಾದಗಿರಿ ರವರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಮಗೆ 1.ದೇವಿಂದ್ರಪ್ಪ 2.ಮಲ್ಲರೆಡ್ಡಿ 3.ಗುರುನಾಥರೆಡ್ಡಿ ಮೂರು ಜನ ಮಕ್ಕಳಿದ್ದು ನಾವು ಯಾದಗಿರಿಯ ಲಕ್ಷ್ಮೀ ನಗರದಲ್ಲಿ ಸ್ವಂತ ಮನೆಯಿದ್ದು ಎಲ್ಲರೂ ವಾಸವಾಗಿರುತ್ತೇವೆ. ನಮ್ಮ ಎರಡನೇ ಮಗನಾದ ಮಲ್ಲರೆಡ್ಡಿ ತಂದೆ ಬಸವರಾಜಪ್ಪ ಬೋನಾಳ ವ; 40 ಜಾ; ಲಿಂಗಾಯತರೆಡ್ಡಿ ಉ; ವ್ಯಾಪಾರ ಸಾ; ಲಕ್ಷ್ಮೀ ನಗರ ಯಾದಗಿರಿ ಈತನು ಯಾದಗಿರಿಯ ಹತ್ತಿಕುಣಿ ರಓಡಿನ ಮೇಲೆ ಮೋಬೈಲ್ ರಿಚಾರ್ಜ, ಟಿ.ವಿ ರಿಚಾರ್ಜ ಅಂಗಡಿ ಇಟ್ಟುಕೊಂಡು ಇದ್ದನು. ಆತನಿಗೆ ಯಾವುದೇ ದುಶ್ಚಟಗಳು ಇರಲಿಲ್ಲಾ. ದಿನಾಂಕ; 06/06/2021 ರಂದು 5-30 ಎಎಮ್ ಸುಮಾರಿಗೆ ಎಂದಿನಂತೆ ನನ್ನ ಮಗನಾದ ಮಲ್ಲರೆಡ್ಡಿ ಈತನು ವಾಕಿಂಗ ಕುರಿತು ಮನೆಯಿಂದ ಹೋದನು. ಎಷ್ಟೋತ್ತಾದರೂ ಮನೆಗೆ ವಾಪಸ ಮನೆಗೆ ಬರಲಿಲ್ಲ. ಆಗ ನಾನು ಮತ್ತು ನನ್ನ ಮಕ್ಕಳಾದ ದೇವಿಂದ್ರಪ್ಪ ಮತ್ತು ಗುರುನಾಥರೆಡ್ಡಿ ಹಾಗೂ ನಮ್ಮ ಸಂಭಂದಿಕರಾದ ವೆಂಕಟರೆಡ್ಡಿ ತಂ. ದೇವಿಂದ್ರಪ್ಪಾ ಹತ್ತಿಕುಣಿ, ಕೂಡಿಕೊಂಡು ಅವನು ಹೋದ ಕಡೆಗೆ ಹೋಗಿ ನೋಡಲಾಗಿ ಎಲ್ಲಿಯೂ ಕಾಣಿಸಲಿಲ್ಲ. ಆಗ ಎಲ್ಲರೂ ಮನೆಗೆ ಬಂದೆವು. ನಂತರ ನಮ್ಮ ಸಂಭಂದಿಕರಲ್ಲಿ ಕೂಡಾ ವಿಚಾರಿಸಲು ನನ್ನ ಮಗನ ಸುಳಿವು ಸಿಗಲಿಲ್ಲಾ. ಎಲ್ಲಿಗೆ ಹೋಗಿರುತ್ತಾನೆ ಎಂಬುವುದರ ಮಾಹಿತಿ ಸಿಕ್ಕಿರುವುದಿಲ್ಲಾ ಕಾರಣ ಎಲ್ಲಾ ಕಡೆ ವಿಚಾರಿಸಿ ನನ್ನ ಮಗನ ಸುಳಿವು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುತ್ತಿದ್ದು ಕಾಣೆಯಾದ ನನ್ನ ಮಗನ ಚಹರೆ ಪಟ್ಟಿ, ಸಾದಾಕಪ್ಪು ಬಣ್ಣ, ದುಂಡನೆಯ ಮುಖ, ಎತ್ತರ 5 ಪೀಟ್ 6 ಇಂಚು ಎತ್ತರ, ಸಾದಾರಣ ಮೈಕಟ್ಟು, ತಲೆ ಹಿಂದೆ ವಆಳದ ಗುರುತು ಇದ್ದು ಬೆಳಿಗ್ಗೆ ನಸುಕಿನ ಜಾವ ಹೋಗಿದ್ದರಿಂದ ಮೈಮೇಲೆ ಯಾವ ಬಟ್ಟೆಗಳು ಧರಿಸಿಕೊಂಡು ಹೋಗಿರುತ್ತಾನೆ ಎಂಬುವುದು ನಮಗೆ ಗೊತ್ತಿರುವುದಿಲ್ಲಾ. ಕನ್ನಡ ಭಾಷೆ, ಹಿಂದಿ ಬಾಷೆ ಮಾತನಾಡುತ್ತಾನೆ. ಕಾರಣ ಕಾಣೆಯಾದ ನನ್ನ ಮಗ ಮಲ್ಲರೆಡ್ಡಿ ತಂದೆ ಬಸವರಾಜಪ್ಪ ಬೋನಾಳ ಸಾಃ ಯಾದಗಿರಿ ಈತನಿಗೆ ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಂದ ಠಾಣೆ ಗುನ್ನೆ ನಂ.66/2021 ಕಲಂ.ಮನುಷ್ಯಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 08-06-2021 10:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080