ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-06-2022
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 94/2022 ಕಲಂ. ಮಹಿಳೆ ಕಾಣೆಯಾದ ಬಗ್ಗೆ.: ದಿನಾಂಕ 30.05.2022 ರಂದು ಫಿರ್ಯಾದಿಯು ಗವಿ ಸಿದ್ದಲಿಂಗೇಶ್ವರ ಗುಡಿಯಲ್ಲಿ ಕೆಲಸ ಮಾಡಲು ಹೋಗಿ ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ಮತ್ತೆ ಮನೆಗೆ ಬಂದಾಗ ಮನೆಯಲ್ಲಿ ಆತನ ಹೆಂಡತಿ ಕಾಣಿಸಲಿಲ್ಲ. ಆಗ ಮನೆಲ್ಲಿದ್ದ ತನ್ನ ತಂಗಿಗೆ ವಿಚಾರಿಸಿದಾಗ ಆಕೆ ತಿಳಿಸಿದ್ದೆನೇಂದರೆ ಅಣ್ಣ ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ಮನೆಯಲ್ಲಿ ನಾನು ಮತ್ತು ಅತ್ತಿಗೆ ಸರಸ್ವತಿ ಇಬ್ಬರೇ ಇದ್ದವು. ಆಗ ಆಕೆ ಕಾಲು ಮಡಿಯಲು ಹೋಗಿ ಬರುತ್ತೆನೆಂದು ಹೋದವಳು ವಾಪಸ ಬರಲೇ ಇಲ್ಲ ನಿನಗೆ ಫೋನ್ ಮಾಡಿದಾಗ ನಿನ್ನ ಫೋನ್ ಹತ್ತಲಿಲ್ಲ ನಾವೆಲ್ಲಾರು ನಮ್ಮೂರಲ್ಲಿ ಹುಡುಕಿದರು ಸಿಗಲಿಲ್ಲ ಅಂತಾ ತಿಳಿಸಿದ ನಂತರ ಫಿರ್ಯಾದಿ ಮತ್ತು ಆತನ ಮನೆಯವರು ತಮ್ಮ ಸಂಬಂದಿಕರು ಇರುವ ಕಡೆಗಳಲ್ಲಿ ಫೋನ್ ಮಾಡಿ ವಿಚಾರಿಸಿದರು ಪತ್ತೆಯಾಗದೇ ಇದ್ದಾಗ ಫಿರ್ಯಾದಿಯು ದಿನಾಂಕ 30.05.2022 ರಿಂದ ಇಲ್ಲಿಯವರೆಗೂ ಹುಡುಕಿದರು ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ನೀಡಿದ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೆಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ. 94/2022 ಕಲಂ. ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡೆನು.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನ: 84/2022 ಕಲಂ: 504, 341, 326, 323, 506 ಸಂ 34 ಐಪಿಸಿ: ಇಂದು ದಿನಾಂಕ:07/06/2022 ರಂದು 6-30 ಪಿಎಮ್ ಕ್ಕೆ ಶ್ರೀ ಉಸ್ಮಾನಸಾಬ ತಂದೆ ಯೂಸೂಫಸಾಬ ಬಂಡೆ, ವ:32, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಬೆಂಡೆಬೆಂಬಳ್ಳಿ ತಾ:ವಡಗೇರಾ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೆಪ ಮಾಡಿದ ದೂರು ಹಾಜರಪಡಿಸಿದ್ದರ ಸಾರಾಂಶವೇನಂದರೆ ನಮ್ಮ ತಂದೆ ಯೂಸೂಫಸಾಬ, ಲಾಳೆಸಾಬ @ ಲಾಡ್ಲೆಸಾಬ ಮತ್ತು ಜಾಫರಸಾಬ ಅಂತಾ ಮೂರು ಜನ ಅಣ್ಣತಮ್ಮಂದಿರು ಇದ್ದು, ಅವರಲ್ಲಿ ನಮ್ಮ ತಂದೆ ಎಲ್ಲರಿಗಿಂತ ಚಿಕ್ಕವರಿರುತ್ತಾರೆ. ಲಾಳೆಸಾಬ @ ಲಾಡ್ಲೆಸಾಬ ಹಿರಿಯವನಿದ್ದು, ಅವನ ಬೆನ್ನಿಗೆ ಜಾಫರಸಾಬ ನಂತರ ನಮ್ಮ ತಂದೆ ಹೀಗೆ ಮೂರು ಜನ ಅಣ್ಣತಮ್ಮಂದಿರು ಇರುತ್ತಾರೆ. ನಮ್ಮ ಪಿತ್ರಾಜರ್ಿತ ಆಸ್ತಿ ಬೆಂಡೆಬೆಂಬಳ್ಳಿ ಸೀಮಾಂತರದಲ್ಲಿ ಸವರ್ೆ ನಂ. 478/3 ವಿಸ್ತೀರ್ಣ 00 ಎಕರೆ 28 ಗುಂಟೆ ಜಮೀನು ಇದ್ದು, ನಮ್ಮ ದೊಡ್ಡಪ್ಪನಾದ ಲಾಳೆಸಾಬ @ ಲಾಡ್ಲೆಸಾಬ ತಂದೆ ಉಸ್ಮಾನಸಾಬ ಈತನು ಹಿರಿಯವನಾಗಿದ್ದರಿಂದ ಸದರಿ ಜಮೀನು ಆತನ ಹೆಸರಿನಲ್ಲಿ ಇತ್ತು. ನಮ್ಮ ದೊಡ್ಡಪ್ಪ ಲಾಳೆಸಾಬ @ ಲಾಡ್ಲೆಸಾಬ ಈತನು ಸುಮಾರು 5-6 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ಹೀಗಿದ್ದು ಸದರಿ ಜಮೀನನ್ನು ನಮ್ಮ ಎರಡನೇ ಅಣ್ಣತಮ್ಮಕೀಯ ಅಬ್ದುಲ್ ಕರಿಂಸಾಬ ತಂದೆ ಲಾಳೆಸಾಬ ಬಂಡೆ ಎಂಬುವನು ನಮ್ಮ ದೊಡ್ಡಪ್ಪನ ಹೆಸರಿನಲ್ಲಿರುವ ಜಮೀನು ಸವರ್ೆ ನಂ. 478/3 ವಿಸ್ತೀರ್ಣ 00 ಎಕರೆ 28 ಗುಂಟೆ ನೇದನ್ನು ಆಂದ್ರದವರಿಗೆ ಮಾರಾಟ ಮಾಡಿರುತ್ತಾನೆ ಎಂದು ನಮಗೆ ಇತ್ತಿಚ್ಚೆಗೆ ಗೊತ್ತಾಗಿತ್ತು. ಹೀಗಿದ್ದು ನಿನ್ನೆ ದಿನಾಂಕ:06/06/2022 ರಂದು ಬೆಳಗ್ಗೆ ನಾನು ಮತ್ತು ನಮ್ಮ ದೊಡ್ಡಪ್ಪನ @ ಲಾಡ್ಲೆಸಾಬನ ಗೂಡುಸಾಬ, ಅವರ ತಮ್ಮ ಖಾಜಾಹುಸೇನ ಹಾಗೂ ಇನ್ನೊಬ್ಬ ದೊಡ್ಡಪ್ಪನ ಮಗನಾದ ಜಮಾಲ ತಂದೆ ಜಾಫರಸಾಬ ಮತ್ತು ಇತರರು ಸೇರಿಕೊಂಡು ವಡಗೇರಾ ತಹಸೀಲ್ ಕಾರ್ಯಲಯಕ್ಕೆ ತಕರಾರು ಅಜರ್ಿ ಸಲ್ಲಿಸಲು ಬಂದಿದ್ದೇವು. ಗೂಡುಸಾಬನು ತನ್ನ ಹೆಸರಿನಲ್ಲಿ ಅಜರ್ಿಯನ್ನು ಟೈಪ ಮಾಡಿಸಿದನು. ಮದ್ಯಾಹ್ನ ಸಮಯದಲ್ಲಿ ತಹಸೀಲ್ ಕಾರ್ಯಲಯಕ್ಕೆ ನಾವು ತಕರಾರು ಅಜರ್ಿಯನ್ನು ಸಲ್ಲಿಸಿ, ಮದ್ಯಾಹ್ನ 3-30 ಗಂಟೆ ಸುಮಾರಿಗೆ ವಾಪಸ ಊರಿಗೆ ಹೋಗಬೇಕೆಂದು ತಹಸೀಲ್ದಾರರ ಕಾರ್ಯಲಯದ ಕಂಪೌಂಡ ಗೇಟ್ ಹತ್ತಿರ ಹೋಗುತ್ತಿದ್ದಾಗ 1) ಅಬ್ದುಲ್ ಕರಿಂಸಾಬ ತಂದೆ ಲಾಳೆಸಾಬ ಬಂಡೆ, 2) ಜಮಾಲ ತಂದೆ ಬಾಬುಮಿಯಾ ಬಂಡೆ ಮತ್ತು 3) ಸಿರಾಜ್ ತಂದೆ ಲಾಳೆಸಾಬ ಬಂಡೆ ಎಲ್ಲರೂ ಸಾ:ಬೆಂಡೆಬೆಂಬಳ್ಳಿ ಕೂಡಿ ಬಂದವರೆ ನಮಗೆ ತಡೆದು ನಿಲ್ಲಿಸಿ, ಮಕ್ಕಳೆ ನಾವು ಮಾರಾಟ ಮಾಡುತ್ತಿರುವ ಹೊಲಕ್ಕೆ ತಕರಾರು ಅಜರ್ಿ ಸಲ್ಲಿಸುತ್ತಿದ್ದಿರಿ ನಿಮ್ಮ ಸೊಕ್ಕು ಜಾಸ್ತಿಯಾಗಿದೆ. ಇವತ್ತು ನಿಮ್ಮ ಸೊಕ್ಕು ಮುರಿಯುತ್ತೇವೆ ಎಂದು ಅವಾಚ್ಯ ಬೈದು ಜಗಳ ತೆಗೆದವರೆ ಜಮಾಲ ಮತ್ತು ಸಿರಾಜ್ ಇಬ್ಬರೂ ಗೂಡುಸಾಬನಿಗೆ ಹಿಡಿದು ನೆಲಕ್ಕೆ ಕೆಡವಿದಾಗ ಅಬ್ದುಲ್ ಕರಿಂಸಾಬ ಈತನು ಅಲ್ಲಿಯೇ ಬಿದ್ದ ಹಿಡಿಗಲ್ಲನ್ನು ತನ್ನ ಕೈಯಲ್ಲಿ ಹಿಡಿದು ಮುಷ್ಟಿ ಮಾಡಿ ಅದೇ ಹಿಡಿಗಲ್ಲಿನಿಂದ ಗೂಡುಸಾಬನ ಎಡಗಡೆ ಬಾಯಿಗೆ ಬಲವಾಗಿ ಹೊಡೆದಿದ್ದರಿಂದ ಗೂಡುಸಾಬನ ಎಡಗಡೆ ಮೇಲಿನ ಒಂದು ಹಲ್ಲು ಮುರಿದು ಭಾರಿ ಗಾಯವಾಯಿತು. ನಂತರ ಅವನು ತನ್ನ ಬಲಗಾಲಿನಿಂದ ಗೂಡುಸಾಬನ ಎಡಗಡೆ ತಲೆಗೆ ಒದ್ದಿದ್ದರಿಂದ ತಲೆ ಎಡಭಾಗಕ್ಕೆ ಬುಗುಟಿ ಬಂದು ಒಳಪೆಟ್ಟಾಯಿತು. ಆಗ ಜಗಳ ಬಿಡಿಸಲು ಹೋದ ನನಗೆ ಜಮಾಲನು ಕೈಯಿಂದ ಕಪಾಳಕ್ಕೆ ಹೊಡೆದು ಜಾಡಿಸಿ ದಬ್ಬಿಸಿಕೊಟ್ಟನು. ಆಗ ಜಗಳವನ್ನು ನಮ್ಮೊಂದಿಗೆ ಬಂದಿದ್ದ ಗೂಡುಸಾಬನ ತಮ್ಮ ಖಾಜಾಹುಸೇನ ಮತ್ತು ನಮ್ಮ ಇನ್ನೊಬ್ಬ ದೊಡ್ಡಪ್ಪ ಜಾಫರಸಾಬನ ಮಗ ಜಮಾಲ ಮತ್ತು ಖಾಜಾ ಪಟೇಲ್ ಮತ್ತು ಇತರರರು ಬಂದು ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಆಜ್ ಬಚಗಯೇ ಸಾಲೆ ಔರ ಏಕ ಬಾರ ಖೇತಕೆ ಬಾರೆ ಮೇ ಅಪ್ಲಿಕೇಶನ ದಾಲನೆ ಆಯಿತೊ ತುಮೆ ಖಲಾಸ ಕರತೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಲ್ಲಿಂದ ನಾವು ಗೂಡುಸಾಬನಿಗೆ ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಉಪಚಾರ ಕುರಿತು ಸೇರಿಕೆ ಮಾಡಿ, ಈಗ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದೇವೆ. ಕಾರಣ ನಮ್ಮ ಪಿತ್ರಾಜರ್ಿತ ಆಸ್ತಿ ಅವರು ಇನ್ನೊಬ್ಬರಿಗೆ ಮಾರಾಟ ಮಾಡುತ್ತಿರುವುದು ನಮಗೆ ಗೊತ್ತಾಗಿ ನಾವು ತಹಸೀಲ್ ಕಾರ್ಯಲಯಕ್ಕೆ ತಕರಾರು ಅಜರ್ಿ ಸಲ್ಲಿಸಲು ಹೋದರೆ ಜಗಳ ತೆಗೆದು ಹೊಡೆಬಡೆ ಮಾಡಿ, ಕಾಲಿನಿಂದ ಒದ್ದು ಹಲ್ಲು ಮುರಿದು, ಭಾರಿ ಗಾಯ ಮಾಡಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 84/2022 ಕಲಂ: 504, 341, 326, 323, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 98/2022 ಕಲಂ 279, 337, 338 ಐ.ಪಿ.ಸಿ: ಇಂದು ದಿನಾಂಕ 07/06/2022 ರಂದು ಸಾಯಂಕಾಲ 19-00 ಗಂಟೆಗೆ ಫಿಯರ್ಾದಿ ಶ್ರೀ ದೇವಿಂದ್ರಪ್ಪ ಸಾಃವಿಭೂತಿಹಳ್ಳಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 06/06/2022 ರಂದು ಫಿಯರ್ಾದಿ ಮತ್ತು ಗ್ರಾಮದ ಹೂಯೆಪ್ಪ ತಂದೆ ಭೀಮಣ್ಣ ಅನಸೂರ ಇಬ್ಬರೂ ಕೂಡಿ ತಿಪ್ಪನಹಳ್ಳಿ ಕ್ರಾಸ್ ಹತ್ತಿರ ಇರುವ ಹೋಟೆಲ್ಕ್ಕೆ ಚಹಾ ಕುಡಿಯಲು ಹೋಗುತಿದ್ದಾಗ ಸಾಯಂಕಾಲ 16-30 ಗಂಟೆಗೆ ಹೋಟೆಲ್ ಸಮೀಪ ಬಂದಾಗ ಫಿಯರ್ಾದಿ ಎರಡನೇ ಅಣ್ಣ-ತಮ್ಮಕಿಯಾದ ಭೀಮರಾಯ ಈತನು ಮೋಟರ್ ಸೈಕಲ್ ನಂ ಕೆಎ-01-ಇಡಬ್ಲ್ಯೂ-3837 ನೇದ್ದರ ಹಿಂದೆ ಮರೆಪ್ಪ ತಂದೆ ಹೊನ್ನಪ್ಪ ಅನಸೂರ ಇವರಿಗೆ ಕೂಡಿಸಿಕೊಂಡು ವಿಭೂತಿಹಳ್ಳಿ ಗ್ರಾಮದ ಕಡೆಯಿಂದ ಶಹಾಪೂರ ಕಡೆಗೆ ಹೋಗುತಿದ್ದಾಗ ಎದರುಗಡೆಯಿಂದ ಆರೋಪಿತನು ತನ್ನ ಕ್ರಷರ್ ಜೀಪ್ ನಂ ಕೆಎ-29-ಎಮ್-9230 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟರ್ ಸೈಕಲ್ಗೆ ಡಿಕ್ಕಿ ಮಾಡಿದ್ದರಿಂದ ಮೋಟರ್ ಸೈಕಲ್ ಸವಾರ ಭೀಮರಾಯ ಮತ್ತು ಹಿಂಬದಿ ಸವಾರ ಮರೆಪ್ಪ ಇವರಿಗೆ ಸೊಂಟ ಮತ್ತು ತೊಡೆಯ ಎಲಬು ಮುರಿದು ಭಾರಿ ಗುಪ್ತಗಾಯಗಳಾಗಿರುತ್ತವೆ ಸದರಿ ಅಪಘಾತಕ್ಕೆ ಕ್ರಷರ್ ಜೀಪನ್ ಚಾಲಕನಾದ ಮಕ್ತುಂಸಾಬ ಈತನ ಅತಿವೇಗದಿಂದ ಜರುಗಿದ್ದು ಸದರಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 98/2022 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 97/2022 ಕಲಂ: 457, 380 ಐ.ಪಿ.ಸಿ: ಇಂದು ದಿನಾಂಕ: 07/06/2022 ರಂದು 9.00 ಎಎಮ್ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಹನುಮಂತ ತಂದೆ ಕೊಟ್ರೇಶ ಬಿಂಗಿ ವ|| 22 ಉ|| ಗ್ರಾಮ ಲೆಕ್ಕಾಧಿಕಾರಿ ಯಕ್ತಾಪೂರ ತಾ|| ಸುರಪೂರ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಒಂದು ಅಜರ್ಿ ಸಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಾನು ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆಗೆ ಸೇರಿಕೊಂಡು ತಹಸೀಲ್ದಾರರು ಸುರಪೂರ ರವರ ಆದೇಶದಂತೆ ಯಕ್ತಾಪೂರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಕೆಂಭಾವಿ ಪಟ್ಟಣದಲ್ಲಿ ಮನೆ ಮಾಡಿಕೊಂಡು ಇರುತ್ತಿದ್ದೇನೆ. ಸಕರ್ಾರಿ ಸ್ವಾಧೀನದಲ್ಲಿ ಅಂದರೆ ಧಾಮರ್ಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಮತ್ತು ತಹಸೀಲ್ದಾರರು ಸುರಪೂರ ರವರ ಅಧ್ಯಕ್ಷತೆಯಲ್ಲಿ ಇರುವ ಶ್ರೀ ಗುತ್ತಿ ಬಸವೇಶ್ವರ ದೇವಸ್ಥಾನ ಯಕ್ತಾಪೂರ ಗುಡಿಯ ಸಂಪೂರ್ಣ ಜವಾಬ್ದಾರಿಯು ನಮ್ಮ ಕಂದಾಯ ಇಲಾಖೆಗೆ ಇರುತ್ತದೆ. ಗುತ್ತಿ ಬಸವೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಬೆಲೆಬಾಳುವ ಮೂರು ಬೆಳ್ಳಿಯ ಬಸವಣ್ಣನ ಮೂತರ್ಿಗಳು ಇದ್ದವು. ಅವುಗಳಲ್ಲಿ ಎರಡು ನೇರವಾಗಿ ಕಾಣುವಂತೆ ಇದ್ದು, ಒಂದು ಹಳೆಯದಾಗಿದ್ದರಿಂದ ಸ್ವಲ್ಪ ಪಕ್ಕಕ್ಕೆ ಇಡಲಾಗುತ್ತಿತ್ತು. ದೇವಸ್ಥಾನಕ್ಕೆ ಅಮರಣ್ಣ ತಂದೆ ಗುತ್ತಪ್ಪ ದೇವರಮನಿ ಎಂಬುವವರಿಗೆ ಪೂಜಾರಿ ಕೆಲಸಕ್ಕೆ ನೇಮಿಸಿದ್ದು ಪ್ರತಿದಿನ ಅಮರಣ್ಣ ರವರು ಮುಂಜಾನೆ 5.00 ಗಂಟೆಗೆ ದೇವಸ್ಥಾನ ಸ್ವಚ್ಚಗೊಳಿಸಿ ಗರ್ಭಗುಡಿ ತೆರೆದಿಟ್ಟು ಗುಡಿಯನ್ನು ಹಾಗೂ ಗುಡಿಯಲ್ಲಿನ ಸಾಮಾನುಗಳು ನೋಡಿಕೊಳ್ಳುತ್ತಾ ಇದ್ದು ಪ್ರತಿದಿನ ರಾತ್ರಿ 10.00 ಗಂಟೆಗೆ ಗರ್ಭಗುಡಿಯ ಬಾಗಿಲು ಹಾಕಿ ಅದಕ್ಕೆ ಕೀಲಿ ಹಾಕಿಕೊಂಡು ಅಮರಣ್ಣನು ಗುಡಿಯ ಮುಂದೆ ಮಲಗುತ್ತಿದ್ದನು. ಹೀಗಿದ್ದು ಇಂದು ದಿನಾಂಕ 07/06/2022 ರಂದು ಮುಂಜಾನೆ 5.50 ಗಂಟೆಗೆ ಬೇವಿನಾಳ ಗ್ರಾಮದ ಗುತ್ತಪ್ಪಗೌಡ ಪಾಟೀಲ್ ರವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಇಂದು ಬೆಳಗಿನ ಜಾವ 5.30 ಗಂಟೆಗೆ ನಾನು ಗುಡಿಯ ಹತ್ತಿರ ಬಂದಾಗ ಗುಡಿ ಪೂಜಾರಿ ಕೆಲಸ ಮಾಡುವ ಅಮರಣ್ಣನು ನನಗೆ ತಿಳಿಸಿದ್ದೇನೆಂದರೆ, ಅಮರಣ್ಣನು ತನ್ನ ಮಗನಾದ ಅರುಣನೊಂದಿಗೆ ನಿನ್ನೆ ದಿನಾಂಕ 06/06/2022 ರಂದು ರಾತ್ರಿ 10.00 ಗಂಟೆಗೆ ಗರ್ಭಗುಡಿಯ ಬಾಗಿಲು ಕೀಲಿ ಹಾಕಿ ಮತ್ತು ಗುಡಿಯ ಮುಂದಿನ ಬಾಗಿಲು ಕೀಲಿ ಹಾಕಿಕೊಂಡು ಎಂದಿನಂತೆ ಗುಡಿಯ ಮುಂದೆ ಮಲಗದೇ ಇಂದು ಸ್ವಲ್ಪ ಮಳೆ ಬರುತ್ತಿದ್ದುದರಿಂದ ಗುಡಿಯ ಹಿಂದಿನ ಕೋಣೆಯಲ್ಲಿ ಮಲಗಿಕೊಂಡಿದ್ದು ಪ್ರತಿ ದಿನದಂತೆ ಇಂದು ಮುಂಜಾನೆ 5.00 ಗಂಟೆಗೆ ಗುಡಿಯನ್ನು ಸ್ವಚ್ಚಗೊಳಿಸಲು ಗರ್ಭಗುಡಿಯ ಬಾಗಿಲು ತೆರೆಯಲು ಹೋದಾಗ ಗುಡಿಯ ಮುಖ್ಯ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು ಅಲ್ಲದೇ ಗರ್ಭಗುಡಿಯ ಕೀಲಿ ಮುರಿದು ಗರ್ಭಗುಡಿಯಲ್ಲಿ ಇದ್ದ 2 ಬೆಳ್ಳಿ ಮೂತರ್ಿಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಅಮರಣ್ಣನು ಹೇಳಿದ್ದಾನೆ ಅಂತಾ ಈ ವಿಷಯ ಗುತ್ತಪ್ಪಗೌಡರು ನನಗೆ ಫೋನಿನಲ್ಲಿ ತಿಳಿಸಿದ್ದರಿಂದ ನಾನು ಇಂದು ಮುಂಜಾನೆ 6.30 ಗಂಟೆಗೆ ಗುತ್ತಿ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ನೋಡಲಾಗಿ ದೇವಸ್ಥಾನದಲ್ಲಿ ಇದ್ದ 2 ಬೆಲೆ ಬಾಳುವ ಬೆಳ್ಳಿ ಮೂತರ್ಿಗಳು ಅಂದಾಜು 2600 ಗ್ರಾಂ ತೂಕವುಳ್ಳ 1,05,000/- ಬೆಲೆಬಾಳುವ ಮೂತರ್ಿಗಳು ಗುಡಿಯಲ್ಲಿ ಇರಲಿಲ್ಲ. ಮತ್ತು ಗುಡಿಯ ಬಾಗಿಲಿಗೆ ಹಾಕಿದ್ದ 2 ಕೀಲಿಗಳನ್ನು ಕೂಡಾ ಮುರಿದಿದ್ದು ಕಂಡು ಬಂದಿದ್ದು ಯಾರೋ ಕಳ್ಳರು ದಿನಾಂಕ 06/06/2022 ರ ರಾತ್ರಿ 10.00 ಗಂಟೆಯಿಂದ ದಿನಾಂಕ 07/06/2022 ರ ಬೆಳಿಗ್ಗೆ 4.50 ಗಂಟೆಯ ಮಧ್ಯದ ಅವಧಿಯಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಅಳವಡಿಸಿದ 2 ಬೆಳ್ಳಿ ಮೂತರ್ಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಯಾರೋ ಕಳ್ಳರು ಗುತ್ತಿ ಬಸವೇಶ್ವರ ದೇವಸ್ಥಾನದ ಗರ್ಭಗುಡಿಯ ಕೀಲಿ ಮುರಿದು ಗುಡಿಯಲ್ಲಿದ್ದ ಅಂದಾಜು 1,05,000/-(ಒಂದು ಲಕ್ಷದ ಐದು ಸಾವಿರ) ರೂಪಾಯಿ ಕಿಮ್ಮತ್ತಿನ 2600 ಗ್ರಾಂ ತೂಕವುಳ್ಳ 2 ಬೆಳ್ಳಿ ಮೂತರ್ಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಾರಣ ಸದರಿ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ: 97/2022 ಕಲಂ: 457, 380 ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 98/2022 ಕಲಂ: 78(3) ಕೆಪಿ ಯಾಕ್ಟ: ಇಂದು ದಿನಾಂಕ 07.06.2022 ರಂದು 7.00 ಪಿಎಂ ಕ್ಕೆ ಮಾನ್ಯ ಶ್ರೀ ವಿಶ್ವನಾಥ ಮುದರೆಡ್ಡಿ ಪಿ.ಎಸ್.ಐ ಸಾಹೇಬರು ಕೆಂಭಾವಿ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ವಿಶ್ವನಾಥ ಮುದರೆಡ್ಡಿ ಪಿ.ಎಸ್.ಐ ಕೆಂಭಾವಿ ಠಾಣೆ ಇದ್ದು ನಾನು ಇಂದು ದಿನಾಂಕ 07.06.2022 ರಂದು 5.00 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಮಾಲಗತ್ತಿ ಗ್ರಾಮದ ಅಂಬೇಡ್ಕರ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಠಾಣೆಯ ಆನಂದ ಪಿಸಿ 43, ಮಾಳಪ್ಪ ಪಿಸಿ 29 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 5.10 ಪಿಎಂ ಕ್ಕೆ ಹೊರಟು ಮಾಲಗತ್ತಿ ಗ್ರಾಮದ ಅಂಬೇಡ್ಕರ ಕಟ್ಟೆಯ ಹತ್ತಿರ 5.25 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 5.30 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಭೀಮರಾಯ ತಂದೆ ಮಲ್ಲಪ್ಪ ಕಂಬಾರ ವ|| 55 ವರ್ಷ ಜಾ|| ಹಿಂದು ಹೊಲೆಯ ಉ|| ಕೂಲಿ ಮತ್ತು ಮಟಕಾ ನಂಬರ ಬರೆದುಕೊಳ್ಳುವುದು ಸಾ|| ಮಾಲಗತ್ತಿ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 820/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 5.30 ಪಿಎಂ ದಿಂದ 6.30 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 98/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.