ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08-07-2021

ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ : 37/2021 ಕಲಂ 279, 338 ಐಪಿಸಿ : ಇಂದು ದಿನಾಂಕ 07/07/2021 ರಂದು ಸಮಯ 11-45 ಎ.ಎಂ.ಕ್ಕೆ ಗಾಯಾಳು ಪಿಯರ್ಾದಿ ಶ್ರೀ ಕಿರಣ್ ತಂದೆ ಸಿದ್ದುನಾಯಕ ಚವ್ಹಾಣ ವಯ;20 ವರ್ಷ, ಜಾ;ಲಂಬಾಣಿ, ಉ;ಕೂಲಿ, ಸಾ; ಬೈಲಾಪುರ ತಾಂಡ, ತಾ;ಹುಣಸಗಿ, ಜಿ;ಯಾದಗಿರಿ ರವರು ನಿನ್ನೆ ದಿನಾಂಕ 06/07/2021 ರಂದು ಸಾಯಂಕಾಲ 4-30 ಪಿ.ಎಂ.ಕ್ಕೆ ಜರುಗಿದ ರಸ್ತೆ ಅಪಘಾತದ ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನಿನ್ನೆ ದಿನಾಂಕ 06/07/2021 ರಂದು ಬೆಳಿಗ್ಗೆ ಸುಮಾರಿಗೆ ನಾನು ಮತ್ತು ನನ್ನ ತಂಗಿಯಾದ ಕಾವೇರಿ ಈಕೆಯು ವರ್ಕನಳ್ಳಿ ಹತ್ತಿರ ಮುರಾಜರ್ಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯ ಹಾಲ್ ಟಿಕೇಟ್ ತೆಗೆದುಕೊಂಡು ಹೋಗಲು ನಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಯು-3589 ನೇದ್ದರ ಮೇಲೆ ನಮ್ಮೂರಿನಿಂದ ಯಾದಗಿರಿಗೆ ಬಂದಿರುತ್ತೇವೆ. ಹೀಗಿದ್ದು ವರ್ಕನಳ್ಳಿಯ ಮುರಾಜರ್ಿ ಶಾಲೆಗೆ ಬಂದು ಹಾಲ್ ಟಿಕೇಟ್ ಪಡೆದುಕೊಂಡು ಮರಳಿ ನಮ್ಮೂರಿಗೆ ಹೋಗುವಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಲಾಲ್ ಬಹೂದ್ದರ್ ಶಾಸ್ತ್ರಿ ವೃತ್ತದ ಹತ್ತಿರ ಸಮಯ ಅಂದಾಜು ಸಾಯಂಕಾಲ 4-30 ಪಿ.ಎಂ.ಕ್ಕೆ ರೆಡ್ ಸಿಗ್ನಲ್ ಬಿದ್ದಾಗ ಎಲ್ಲಾ ವಾಹನಗಳ ಜೊತೆ ನಾವು ಕೂಡ ನಿಂತಿದ್ದಾಗ ನಮ್ಮ ಹಿಂದಿನಿಂದ ಒಂದು ಬೂದಿ ಲಾರಿ ಟ್ಯಾಂಕರ್ ನೇದ್ದರ ಚಾಲಕನು ರೆಡ್ ಸಿಗ್ನಲ್ ಬಿದ್ದಿದ್ದರೂ ಕೂಡ ಯಾದಗಿರಿ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣದ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಮೊಟಾರು ಸೈಕಲ್ ನೇದ್ದಕ್ಕೆ ಹಿಂದೆ ಜೋರಾಗಿ ಡಿಕ್ಕಿಕೊಟ್ಟಾಗ ನಾನು ಮತ್ತು ನನ್ನ ತಂಗಿ ಮೊಟಾರು ಸೈಕಲ್ ಮೇಲಿಂದ ಸಿಡಿದು ರಸ್ತೆ ಮೇಲೆ ಬಿದ್ದೆವು. ಸದರಿ ಅಪಘಾತದಲ್ಲಿ ನನಗೆ ಎಡಗೈ ಮೊಣಕೈ ಹತ್ತಿರ ಭಾರೀ ಗುಪ್ತಗಾಯವಾಗಿ ಕೈ ಮುರಿದಿರುತ್ತದೆ. ನನ್ನ ತಂಗಿಗೆ ಸಣ್ಣ-ಪುಟ್ಟ ತರಚಿದ ಗಾಯಗಳಾಗಿರುತ್ತವೆ. ನಮಗೆ ಅಪಘಾತಪಡಿಸಿದ ಬೂದಿ ಲಾರಿ ಟ್ಯಾಂಕರ್ ನಂಬರ ನೋಡಲಾಗಿ ಕೆಎ-32, ಸಿ-7042 ನೇದ್ದು ಇದ್ದು ಅದರ ಚಾಲಕನು ಘಟನಾ ಸ್ಥಳದಲ್ಲಿ ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು ತಾನಸಿಂಗ್ ತಂದೆ ಕಿಲಾನ್ ಸಿಂಗ್ ಪಾಠಕ ವಯ;28 ವರ್ಷ, ಸಾ; ವಿಲ್ ಟೋಂಕ್ರಾ, ಪೋಸ್ಟ;ಶ್ರೀಕೇಡ, ತಾ;ಲತೇರಿ ವಿದಿಶಾ, ಮದ್ಯಪ್ರದೆಶ, ಮದ್ಯಪ್ರದೆಶ ರಾಜ್ಯ ಅಂತಾ ತಿಳಿಸಿರುತ್ತಾನೆ. ಅದೇ ಸಮಯಕ್ಕೆ ಅಪಘಾತವನ್ನು ಕಂಡು ಮುದ್ನಾಳ ಪೆಟ್ರೋಲ್ ಬಂಕ್ ಹತ್ತಿರ ಇದ್ದ ನಮ್ಮೂರಿನ ಸಂತೋಷಕುಮಾರ ತಂದೆ ಹಿರುಸಿಂಗ್ ಚವ್ಹಾಣ ಹಾಗೂ ಸುರೇಶ ತಂದೆ ಮನ್ಯಾ ನಾಯಕ ರಾಠೋಡ ಇವರುಗಳು ಬಂದು ನಮಗೆ ವಿಚಾರಿಸಿ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ನನಗೆ ಯಾದಗಿರಿ ನಗರದ ಖಾಸಗಿ ಆಸ್ಪತ್ರೆಯಾದ ನೀಲಕಂಠ ಸೈದಾಫುರ ಇವರಲ್ಲಿ ಇಲ್ಲಿಯವರೆಗೆ ಚಿಕಿತ್ಸೆ ಪಡೆದುಕೊಂಡಿದ್ದು ಇರುತ್ತದೆ. ನನ್ನ ತಂಗಿ ಕಾವೇರಿಗೆ ಸಣ್ಣ-ಪುಟ್ಟ ತರಚಿದ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲ. ಇಂದು ನಮ್ಮುರಿನಿಂದ ನಮ್ಮ ಮನೆಯ ಹಿರಿಯರು ಬಂದು ನಮಗೆ ವಿಚಾರಿಸಿದ್ದು ಈ ಘಟನೆ ಬಗ್ಗೆ ಕೇಸು ಮಾಡೋಣ ಅಂದಾಗ ನಾನು ತಡವಾಗಿ ನಿಮ್ಮ ಠಾಣೆಗೆ ಬಂದು ದೂರು ನೀಡುತ್ತಿದ್ದು, ನನಗೆ ಉಪಚಾರ ಕುರಿತು ಯಾದಗಿರಿ ಸಕಾರಿ ಆಸ್ಪತ್ರೆಗೆ ಕಳಿಸಿ ಹಾಗೂ ನಿನ್ನೆ ದಿನಾಂಕ 06/07/2021 ರಂದು ಸಾಯಂಕಾಲ 4-30 ಪಿ.ಎಂ.ಕ್ಕೆ ಯಾದಗಿರಿ ನಗರದ ಲಾಲ್ ಬಹುದ್ದರ್ ಶಾಸ್ತ್ರಿ ವೃತ್ತದ ಹತ್ತಿರ ನಾವು ನಮ್ಮ ಮೋಟಾರು ಸೈಕಲ್ ಮೇಲೆ ಸಿಗ್ನಲ್ ಹತ್ತಿರ ನಿಂತಿದ್ದಾಗ ಅದೇ ಸಮಯಕ್ಕೆ ಬೂದಿ ಲಾರಿ ಟ್ಯಾಂಕರ ನಂಬರ ಕೆಎ-32, ಸಿ-7042 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಘಟನೆ ಜರುಗಿದ್ದು ಲಾರಿ ಚಾಲಕನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ನೀಡಿದ್ದನ್ನು ಪಡೆದುಕೊಂಡಿದ್ದು, ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 37/2021 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 88/2021 ಕಲಂ:143, 147, 504, 341, 323 ಸಂ 149 ಐಪಿಸಿ : ಇಂದು ದಿನಾಂಕ:07/07/2021 ರಂದು 1-45 ಪಿಎಮ್ ಕ್ಕೆ ಶ್ರೀ ಚಂದ್ರಶೇಖರ ತಂದೆ ದೊಡ್ಡಪ್ಪ ನಿಡಗಿ, ವ:55, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಾನು ಮತ್ತು ನಮ್ಮ ಅಣ್ಣತಮ್ಮಕೀಯ ನೀಲಕಂಠಪ್ಪ ತಂದೆ ಪರಮಣ್ಣ ನಿಡಗಿ ಇಬ್ಬರಿಗೆ ನಮ್ಮ ಹಿರಿಯರ ಹಳೆಯ ತಲಬಾಗಿಲ ಮನೆಯಲ್ಲಿ ಭಾಗ ಬಂದಿದ್ದು, ಅದರಲ್ಲಿ ಕುಟುಂಬದೊಂದಿಗೆ ವಾಸವಾಗಿರುತ್ತವೆ. ನೀಲಕಂಠಪ್ಪನ ಅಣ್ಣನಾದ ಕರಣಪ್ಪನಿಗೆ ಮನೆ ಹೊರಗಡೆ ಭಾಗ ಬಂದಿರುತ್ತದೆ. ಸದರಿ ಕರಣಪ್ಪನು ತನ್ನ ಪಾಲಿಗೆ ಬಂದಿರುವ ಜಾಗದ ಪಕ್ಕದಲ್ಲಿ ಸುಮಾರು 10 ವರೆ ಫೀಟ ಜಾಗವನ್ನು ಬೇರೆಯವರಿಂದ ಖರೀದಿ ಮಾಡಿಕೊಂಡಿದ್ದು, ಆ ಜಾಗದಲ್ಲಿ ಮನೆ ಕಟ್ಟುತ್ತಿದ್ದಾನೆ. ಆದರೆ ಸದರಿ ಮನೆಯ ಸಜ್ಜಾವನ್ನು ತಾನು ಖರೀದಿ ಮಾಡಿದ 10ವರೆ ಫೀಟ ಜಾಗದಲ್ಲಿ ಹಾಕದೆ ಸುಮಾರು 1 1/2 ಫೀಟ ನೆಂಟಲ್ ಸಜ್ಜಾ ನಮ್ಮ ಕಡೆ ಬಿಟ್ಟು ಕಟ್ಟುತ್ತಿದ್ದರಿಂದ ನಾವು ನಮ್ಮ ಜಾಗದಲ್ಲಿ ನೆಂಟಲ್ ಸಜ್ಜಾ ಬಿಡಬೇಡ ಎಂದು ಹೇಳುತ್ತಿದ್ದೆವು. ಆದರೂ ಕೂಡಾ ಅವರು ನಮ್ಮ ಮಾತು ಕೇಳಿರಲಿಲ್ಲ. ಹೀಗಿದ್ದು ನಿನ್ನೆ ದಿನಾಂಕ:06/07/2021 ರಂದು ಸಂಜೆ 5-30 ಗಂಟೆ ಸುಮಾರಿಗೆ ನಾನು ಹೊರಗಡೆಯಿಂದ ನಮ್ಮ ಮನೆಗೆ ಬರುತ್ತಿದ್ದಾಗ ನಮ್ಮ ಮನೆ ಅಂಗಳದಲ್ಲಿ 1) ಕರಣಪ್ಪ ತಂದೆ ಪರಮಣ್ಣ ನಿಡಗಿ, 2) ನೀಲಕಂಠಪ್ಪ ತಂದೆ ಪರಮಣ್ಣ ನೀಡಗಿ, 3) ಸಚೀನ ತಂದೆ ಕರಣಪ್ಪ ನೀಡಗಿ, 4) ಶರಣಪ್ಪ ತಂದೆ ನೀಲಕಂಠಪ್ಪ ನೀಡಗಿ, 5) ಬಸ್ಸು ತಂದೆ ಕರಣಪ್ಪ ನೀಡಗಿ, 6) ತಾರಾಬಾಯಿ ಗಂಡ ಕರಣಪ್ಪ ನೀಡಗಿ, 7) ನೀಲಮ್ಮ ಗಂಡ ನೀಲಕಂಠಪ್ಪ ನೀಡಗಿ ಎಲ್ಲರೂ ಸಾ:ನಾಯ್ಕಲ್ ಇವರೆಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿ, ಈ ಮುದಿ ಸೂಳೆ ಮಗ ನಮ್ಮ ಮನೆಗೆ ನೆಂಟಲ್ ಸಜ್ಜಾ ಹಾಕುವುದಕ್ಕೆ ಅಡ್ಡ ಬರುತ್ತಿದ್ದಾನೆ. ಇವನಿಗೆ ಇವತ್ತು ಒಂದು ಗತಿ ಕಾಣಿಸೆ ಬಿಡೋಣ ಎಂದು ಜಗಳ ತೆಗೆದವರೆ ನನಗೆ ತಡೆದು ನಿಲ್ಲಿಸಿ, ನೀಲಕಂಠಪ್ಪ ಮತ್ತು ಸಚಿನ ಇಬ್ಬರೂ ನನಗೆ ತೆಕ್ಕೆ ಕುಸ್ತಿಗೆ ಬಿದ್ದು ಗಟ್ಟಿಯಾಗಿ ಹಿಡಿದುಕೊಂಡಾಗ ಕರಣಪ್ಪ ಈತನು ಬಂದು ಕೈ ಮುಷ್ಠಿ ಮಾಡಿ ನನ್ನ ಎದೆ ಮತ್ತು ಹೊಟ್ಟೆಗೆ ಬಲವಾಗಿ ಗುದ್ದಿದ್ದನು. ಶರಣಪ್ಪ ಈತನು ಬಂದು ನನಗೆ ಜಾಡಿಸಿ ಪಕ್ಕೆಗೆ ಒದ್ದನು. ಬಸ್ಸು ಈತನು ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ತುಳಿದನು. ಬಿಡಿಸಲು ಬಂದ ನನ್ನ ಸೋಸೆ ಅಕ್ಷತಾ ಗಂಡ ವಿಜಯಕುಮಾರ ಇವಳಿಗೆ ತಾರಾಬಾಯಿ ಇವಳು ತೆಲೆ ಮೇಲಿನ ಕೂದಲು ಹಿಡಿದು ಭೊಸುಡಿ ನೀನು ನಡುವೆ ಬರುತ್ತಿ ಎಂದು ಕೈ ಮುಷ್ಠಿ ಮಾಡಿ ಹೊಟ್ಟೆಗೆ ಗುದ್ದಿದ್ದಳು. ನೀಲಮ್ಮ ಇವಳು ಬೆನ್ನಿಗೆ ಗುದ್ದಿ ಒಳಪೆಟ್ಟು ಮಾಡಿದಳು. ಆಗ ನನ್ನ ಮಗ ವಿಜಯಕುಮಾರ ಮತ್ತು ನನ್ನ ತಮ್ಮನ ಮಗ ಪ್ರಶಾಂತ ತಂದೆ ಮಹಾದೇವಪ್ಪ ನೀಡಗಿ ಹಾಗೂ ಪಕ್ಕದ ಮನೆಯ ಮೌನೇಶ ತಂದೆ ಸಿದ್ರಾಮಪ್ಪ ಪತ್ತಾರ ಇವರುಗಳು ಬಂದು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ನಾನು ಮತ್ತು ನನ್ನ ಸೋಸೆ ಅಕ್ಷತಾ ಇಬ್ಬರೂ ಯಾದಗಿರಿ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ತೋರಿಸಿಕೊಂಡೆವು. ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದ್ದು, ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಮ್ಮ ಹಿರಿಯರಿಗೆ ವಿಚಾರ ಮಾಡಿ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ಹೇಳಿರುತ್ತೇವೆ. ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನಮ್ಮ ಜಾಗದಲ್ಲಿ ನೆಂಟಲ್ ಸಜ್ಜಾ ಹಾಕಬೇಡಿ ಎಂದು ಹೇಳಿದ್ದಕ್ಕೆ ಮೇಲ್ಕಂಡವರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ನಮಗೆ ತಡೆದು ನಿಲ್ಲಿಸಿ, ಕೈಯಿಂದ ಹೊಡೆಬಡೆ ಮಾಡಿದ ಮೇಲ್ಕಂಡರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 88/2021 ಕಲಂ:143, 147, 504, 341, 323 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ : 89/2021 ಕಲಂ:143, 147, 504, 341, 323 ಸಂ 149 ಐಪಿಸಿ : ದಿನಾಂಕ:07/07/2021 ರಂದು 3-45 ಪಿಎಮ್ ಕ್ಕೆ ಶ್ರೀ ಸಚಿನ ತಂದೆ ಕರಣಪ್ಪ ನೀಡಗಿ, ವ:23, ಜಾ:ಲಿಂಗಾಯತ, ಉ:ವಿದ್ಯಾಭ್ಯಾಸ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಪದವಿ ವಿದ್ಯಾಭ್ಯಾಸ ಮುಗಿಸಿ, ಸದ್ಯ ಮನೆಯಲ್ಲಿ ಒಕ್ಕಲುತನ ಮಾಡಿಕೊಂಡಿರುತ್ತೇನೆ. ನಮ್ಮ ತಂದೆ ಮತ್ತು ನಮ್ಮ ತಂದೆಯ ಅಣ್ಣತಮ್ಮಕೀಯಯವರು ನಮ್ಮ ಪೂರ್ವಜರ ಹಳೆ ಮನೆಯನ್ನು ಭಾಗ ಮಾಡಿಕೊಂಡಿರುತ್ತಾರೆ. ನಮ್ಮ ತಂದೆ ಕರಣಪ್ಪ ಈತನ ಪಾಲಿಗೆ ಹೊರಗಡೆ ಮನೆ ಬಂದಿರುತ್ತದೆ. ನಮ್ಮ ತಂದೆಯ ಪಾಲಿಗೆ ಬಂದ ಜಾಗದ ಪಕ್ಕದಲ್ಲಿ ನಮ್ಮ ತಂದೆಯು ಸುಮಾರು 10-1/2ಘಿ34 ಫಿಟ್ ಉದ್ದ-ಅಗಲದ ಜಾಗವನ್ನು ನನ್ನ ಹೆಸರಿನಲ್ಲಿ ಖರೀದಿ ಮಾಡಿದ್ದು ಇರುತ್ತದೆ. ಸದರಿ ಖರೀದಿ ಮಾಡಿದ ಜಾಗದಲ್ಲಿ ನಾವು ಮನೆ ಕಟ್ಟುತ್ತಿದ್ದೇವೆ. ಸದರಿ ಮನೆ ನೆಂಟಲ್ ವರೆಗೆ ಬಂದಿದ್ದು, ಕಿಡಕಿ ನೆಂಟಲ್ ಸಜ್ಜಾವನ್ನು ಬಿಟ್ಟಿರುತ್ತೇವೆ. ಆದರೆ ನಮ್ಮ ಅಣ್ಣತಮ್ಮಕಿಯವರಾದ ಚಂದ್ರಶೇಖರ ತಂದೆ ದೊಡ್ಡಪ್ಪ ಮತ್ತು ಅವನ ಮಗ ವಿಜಯಕುಮಾರ ಮತ್ತು ಇತರರು ಬಂದು ನೀವು ನೆಂಟಲ್ ಸಜ್ಜಾ ನಮ್ಮ ಜಾಗದಲ್ಲಿ ಬಿಡುತ್ತಿದ್ದಿರಿ, ನಮ್ಮ ಜಾಗದಲ್ಲಿ ಬಿಡಬೇಡಿ ಎಂದು ಹೇಳಿದಾಗ, ನಾವು ಖರೀದಿ ಮಾಡಿದ 10 ವರೆ ಫೀಟ ಅಗಲದ ಜಾಗದಲ್ಲಿಯೇ ನಮ್ಮ ನೆಂಟಲ್ ಸಜ್ಜಾ ಬಿಟ್ಟಿರುತ್ತೆವೆ. ನಿಮ್ಮ ಜಾಗದಲ್ಲಿ ಬಿಟ್ಟಿರುವುದಿಲ್ಲ ಎಂದು ಹೇಳಿದರು ಕೂಡಾ ಅವರು ಕೇಳದೆ ನಮ್ಮೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ: 06/07/2021 ರಂದು ಸಂಜೆ 5-30 ಪಿಎಮ್ ಸುಮಾರಿಗೆ ನಾನು ಹೊರಗಡೆಯಿಂದ ಮರಳಿ ನಮ್ಮ ಮನೆಗೆ ಬರುತ್ತಿದ್ದಾಗ ನಮ್ಮ ಹೊಸ ಮನೆಯ ಅಂಗಳದಲ್ಲಿ 1) ವಿಜಯಕುಮಾರ ತಂದೆ ಚಂದ್ರಶೇಖರ ನೀಡಗಿ, 2) ಪ್ರಶಾಂತ ತಂದೆ ಮಹಾದೇವಪ್ಪ ನೀಡಗಿ, 3) ಚಂದ್ರಶೇಖರ ತಂದೆ ದೊಡ್ಡಪ್ಪ ನೀಡಗಿ, 4) ಬಸವರಾಜಪ್ಪ ತಂದೆ ಮಹಾದೇವಪ್ಪ ನೀಡಗಿ, 5) ಮಹಾದೇವಪ್ಪ ತಂದೆ ದೊಡ್ಡಪ್ಪ ನೀಡಗಿ, 6) ಮಹಾಂತಮ್ಮ ಗಂಡ ಚಂದ್ರಶೇಖರ ನೀಡಗಿ, 7) ಅಕ್ಷತಾ ಗಂಡ ವಿಜಯಕುಮಾರ ನೀಡಗಿ ಎಲ್ಲರೂ ಸಾ:ನಾಯ್ಕಲ್ ಇವರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ, ಈ ಭೋಸುಡಿ ಮಗ ನಮ್ಮ ಜಾಗದಲ್ಲಿ ತನ್ನ ಮನೆ ನೆಂಟಲ್ ಸಜ್ಜಾ ಬಿಡುತ್ತಿದ್ದಾನೆ ಹೇಳಿದರೆ ಕೇಳುತ್ತಿಲ್ಲ ಇವನಿಗೆ ಇವತ್ತು ಬಿಡುವುದು ಬೇಡ ಎಂದು ಅವಾಚ್ಯ ಬೈದು ನನ್ನೊಂದಿಗೆ ಜಗಳ ತೆಗೆದು ಪ್ರಶಾಂತ ಮತ್ತು ಬಸವರಾಜಪ್ಪ ಇಬ್ಬರು ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ವಿಜಯಕುಮಾರ ಈತನು ಕೈ ಮುಷ್ಟಿ ಮಾಡಿ ಎದೆಗೆ, ಹೊಟ್ಟೆಗೆ ಬಲವಾಗಿ ಗುದ್ದಿದ್ದನು. ಚಂದ್ರಶೇಖರ ಮತ್ತು ಮಹಾದೇವಪ್ಪ ಇಬ್ಬರೂ ಬಂದು ನನಗೆ ಕಾಲಿನಿಂದ ಮೈ ಕೈಗೆ ಒದ್ದು ಒಳಪೆಟ್ಟು ಮಾಡಿದರು. ಮಹಾಂತಮ್ಮ ಮತ್ತು ಅಕ್ಷತಾ ಇಬ್ಬರೂ ನನ್ನ ಎದೆ ಮೇಲೆ ಕುತ್ತಿಗೆ ಮೇಲೆ ಚೂರಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ಇದ್ದ ವಿನೋದ ತಂದೆ ವೆಂಕಟರೆಡ್ಡಿ ಕೇಶವನೋರ ಮತ್ತು ಮಹಾದೇವಿ ಗಂಡ ಬಸವರಾಜ ಇವರುಗಳು ಬಂದು ಬಿಡಿಸಿರುತ್ತಾರೆ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಈಗ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನಮ್ಮ ಜಾಗದಲ್ಲಿ ನಾವು ನೆಂಟಲ್ ಸಜ್ಜಾ ಹಾಕುತ್ತಿದ್ದರೆ ಅದಕ್ಕೆ ಮೇಲ್ಕಂಡವರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ, ಕೈಯಿಂದ ಹೊಡೆಬಡೆ ಮಾಡಿದ ಮೇಲ್ಕಂಡರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 89/2021 ಕಲಂ:143, 147, 504, 341, 323 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 70/2021 ಕಲಂ: 160 ಐಪಿಸಿ : ಇಂದು ದಿನಾಂಕ;07/07/2021 ರಂದು 2-30 ಪಿಎಮ್ ಕ್ಕೆ ಶ್ರೀ ಪರಮಣ್ಣ ಪಿಸಿ-289 ಯಾದಗಿರಿ ನಗರ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ವರದಿ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ; 07/07/2021 ರಂದು ಮಧ್ಯಾಹ್ನ 12-30 ಗಂಟೆಗೆ ನಾನು ಬೆಳಗಿನ ಹಾಜರಿಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ನನಗೆ ನೇಮಿಸಿದ ಬೀಟ್ ನಂ. 44 ಸ್ವಾಮಿ ವಿವೇಕಾನಂದ ನಗರದಲ್ಲಿರುವ ಮಹಾತ್ಮ ಗಾಂಧಿ ಶಾಲೆ ಹತ್ತಿರ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಕೈಕೈಮಿಲಾಯಿಸಿ ಹೊಡೆದಾಡುತ್ತಿದ್ದಾರೆ ಅಂತಾ ಭಾತ್ಮೀ ಮೇಲಿಂದ ನಾನು ಮತ್ತು ಸಾಬರೆಡ್ಡಿ ಪಿಸಿ-379 ರವರೊಂದಿಗೆ ಅಲ್ಲಿಗೆ ಹೋಗಿ ನೋಡಲಾಗಿ ನಾಲ್ಕು ಜನರು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಳ್ಳುತ್ತಿದ್ದು ಕೂಡಲೆ ಜಗಳದಿಂದ ಬಿಡಿಸಿದ್ದು ಅವರಿಗೆ ವಿಚಾರಿಸಲು ತಮ್ಮ ಹೆಸರುಗಳು ತಿಳಿಸಿದ್ದೆನೆಂದರೆ, ಮೊದಲನೇ ಪಾಟರ್ಿಯ ಜನರಾದ 1) ಅಬುತಾಲೀಫ್ ತಂ. ಅಬೀಬ ತರಕಾಸ ವಃ18 ಜಾಃ ಮುಸ್ಲಿಂ ಸಾಃ ಮೇಟ್ರೋ ಅಜೀಜ ಕಾಲೋನಿ ಯಾದಗಿರಿ. 2) ಮಹ್ಮದ ಗುಲಾಮ ತಾಯರಪಾಶಾ ತಂ. ಫಕ್ರುದ್ದಿನ್ ವಃ 70 ಜಾಃಮುಸ್ಲಿಂ ಉಃಖಾಸಗಿ ಕೆಲಸ ಸಾಃ ಮೆಟ್ರೋ ಅಜೀಜ ಕಾಲೋನಿ ಯಾದಗಿರಿ 3) ಚಾಂದಪಾಶ ತಂದೆ ಮಹ್ಮದ ಖಾಲೀಫ್ ವ;19 ಜಾ; ಮುಸ್ಲಿಂ ಉ; ಕೂಲಿಕೆಲಸ ಸಾ; ಯಾದಗಿರಿ ಎರಡನೇ ಪಾಟರ್ಿ ಜನರಾದ 1) ಮಹ್ಮದ ಶಕೀರ ತಂ. ಗುಲಾಮ ಮಹ್ಮದ ತಾಹೀರ ಪಾಶಾ ವಃ40 ಜಾಃ ಮುಸ್ಲಿಂ ಉಃವ್ಯಾಪಾರ ಸಾಃ ಯಾದಗಿರಿ 2) ಮಹಮ್ಮದ ಉಬೇದ ತಂ. ಗುಲಾಮ ಮಹ್ಮದ ತಾಹೀರ ಪಾಶಾ ವಃ35 ಜಾಃ ಮಸ್ಲಿಂ ಸಾಃ ಯಾದಗಿರಿ 3) ಇಂತಿಹಾಜ ತಂದೆ ಗುಲಾಮ ಮಹ್ಮದ ತಾಹೀರ ಪಾಶಾ ವ;32 ಜಾ; ಮುಸ್ಲಿಂ ಉ; ಎಲೆಕ್ಟ್ರೇಷನ್ ಸಾ; ಅಜೀಜ ಕಾಲೋನಿ ಅಂತಾ ತಿಳಿಸಿದ್ದು, ಸದರಿಯವರು ಯಾವುದೋ ಕ್ಷುಲಕ್ಕ ವಿಷಯಕ್ಕೆ ಜಗಳ ಮಾಡಿಕೊಂಡಿದ್ದು ಕಾರಣ ಸದರಿ ಎರಡು ಪಾಟರ್ಿಯವರು ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಒಬ್ಬರಿಗೊಬ್ಬರು ಜಗಳವಾಡಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗವನ್ನುಂಟು ಮಾಡಿದ್ದು ಇರುತ್ತದೆ. ಸದರಿ ಎರಡು ಪಾಟರ್ಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ವರದಿ ನೀಡಿದ್ದು ಇರುತ್ತದೆ. ಅಂತಾ ಕೊಟ್ಟ ವರದಿಯ ಮೇಲಿಂದ ಠಾಣೆಯ ಗುನ್ನೆ ನಂ.70/2021 ಕಲಂ.160 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ಮಹಿಳಾ ಪೊಲೀಸ್ ಠಾಣೆ
ಗುನ್ನೆ ನಂ : 43/2021 ಕಲಂ: ಮಹಿಳೆ ಕಾಣೆಯಾದ ಬಗ್ಗೆ : ಇಂದು ದಿನಾಂಕ: 07.07.2021 ರಂದು ಸಂಜೆ 7.00 ಗಂಟೆಗೆ ಪಿರ್ಯಾಧಿ ಶ್ರೀನಾಥ ತಂದೆ ದಾಮೋದರ ಕಟ್ಟಿಮನಿ ವಯಾ-39 ಜಾತಿ-ದಾಸರ ಉ-ಪೆಂಟಿಂಗ್ ಕೆಲಸ ಸಾ-ಮ್ಯೆಲಾಪೂರ ಅಗಸಿ ಯಾದಗಿರಿ  ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರ ಸಾರಂಶವೇನೆಂದರೆ ನನಗೆ 16 ವರ್ಷಗಳ ಹಿಂದೆ ಅನ್ನಪೂರ್ಣ ಎಂಬುವಳೊಂದಿಗೆ ಮದುವೆ ಯಾಗಿದ್ದು, ನಮ್ಮ ದಾಂಪತ್ಯ ಜೀವನದಲ್ಲಿ ಒಂದು ಗಂಡು ಹಾಗು ಒಂದು ಹೆಣ್ಣು ಎರಡು ಜನ ಮಕ್ಕಳಿರುತ್ತಾರೆ. ನಾನು ಮತ್ತು ನನ್ನ ಹೆಂಡತಿ ಸಂಸಾರದಲ್ಲಿ ಅನೂನ್ಯವಾಗಿ ಜೀವನ ಮಾಡಿಕೊಂಡಿರುತ್ತೆವೆ. ದಿನಾಂಕ :10/06/2021 ರಂದು ಮದ್ಯಾಹ್ನ 3-30 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಅನ್ನಪೂರ್ಣ ಮನೆಯಲ್ಲಿ ಇದ್ದೇವು. ನಂತರ ನಾನು ಹೊರಗಡೆ ಹೋಗಿದ್ದೆ ಸ್ವಲ್ಪ ಸಮಯದ ಮೇಲೆ ನಾನು ಮರಳಿ ಸಾಯಂಕಾಲ 4-00 ಗಂಟೆಗೆ ಮನೆಗೆ ಬಂದಾಗ ನನ್ನ ಹೆಂಡತಿ ಹೆಂಡತಿ ಅನ್ನಪೂರ್ಣ ಇಕೆಯು ಮನೆಯಲ್ಲಿ ಇರಲಿಲ್ಲಾ. ನಾನು ಗಾಬರಿಯಾಗಿ ಎಲ್ಲಾ ಕಡೆ ಹುಡುಕಾಡಲಾಗಿ ಮತ್ತು ಯಾದಗಿರಿ ನಗರದ ರೈಲ್ವೇ ಸ್ಟೇಷನ್, ಬಸ್ ನಿಲ್ದಾಣ ಕಡೆಯಲ್ಲಿ ಹುಡುಕಾಡಲಾಗಿ ನನ್ನ ಹೆಂಡತಿ  ಸಿಕ್ಕಿರುವುದಿಲ್ಲಾ. ಈ ಮೊದಲು ನನ್ನ ಹೆಂಡತಿ ಅನ್ನಪೂರ್ಣ ಇವಳು ಕಡೆಚೂರು ಗ್ರಾಮಕ್ಕೆ ಹೋಗಿ 2-3 ತಿಂಗಳು ಅಲ್ಲಿಯೇ ಇದ್ದಳು. ಮರಳಿ ಮನೆಗೆ ಬರಬಹುದೆಂದು ತಿಳಿದು ನಾನು ಸುಮ್ಮನಾಗಿದ್ದೇನು. ನನ್ನ ಹೆಂಡತಿ ಅಲ್ಲಿಂದ ಇಲ್ಲಿಯವರಗೆ   ಮರಳಿ ಕಡೆಚೂರು ಗ್ರಾಮಕ್ಕೆ ಹಾಗು ಯಾದಗಿರಿಯ ನಮ್ಮ ಮನೆಗೆ ಬಂದಿರುವುದಿಲ್ಲ ಕಾಣೆಯಾಗಿದ್ದು. ನನ್ನ ಹೆಂಡತಿಯನ್ನು ನಾನು ಮತ್ತು ನಮ್ಮ ಮನೆಯವರು ಎಲ್ಲಾ ಕಡೆ ಹುಡುಕಾಡಲಾಗಿ ಸಿಗದೇ ಇದ್ದುದ್ದರಿಂದ ಈ ದಿನ ದೂರು ಕೊಡುತ್ತಿದ್ಧೇನೆ. ಅಂತ ಕೊಟ್ಟ ದೂರಿನ ಮೇಲಿಂದ ಯಾದಗಿರಿ ಮಹಿಳಾ ಠಾಣೆಯಲ್ಲಿ ಗುನ್ನೆ ನಂ:  43/2021 ಕಲಂ: ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.

 

ಯಾದಗಿರ ಮಹಿಳಾ ಪೊಲೀಸ ಠಾಣೆ
ಗುನ್ನೆ ನಂ : 44/2021 ಕಲಂ: 143, 147, 323,504,506,354 ಸಂ/149 ಐ.ಪಿ.ಸಿ : ಇಂದು ದಿನಾಂಕ: 07.07.2021 ರಂದು ರಾತ್ರಿ 8.30 ಪಿ.ಎಂಕ್ಕೆ ಪಿರ್ಯಾಧಿ ಕುಮಾರಿ ಮಹೇಶ್ವರಿ ತಂದೆ ಮಲ್ಲಣ್ಣಗೌಡ ಮಾಲಿಪಾಟೀಲ್ ವಯಾ-22 ವರ್ಷ ಜಾತಿ-ಲಿಂಗಾಯತ್ ಉ-ಮನೆಕೆಲಸ ಸಾ-ಗೋಡಿಹಾಳ್ ತಾ-ವಡಗೇರಾ ಜಿಲ್ಲೆ-ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದರ ಸಾರಂಶವೇನೆಂದರೆ ಇಂದು ದಿನಾಂಕ 07.07.2021 ರಂದು  ಬೆಳಿಗ್ಗೆ 10-00 ಗಂಟೆ ಸುಮಾರಿಗೆ  ನಮ್ಮ ಮನೆ ಕಟ್ಟುವ  ಪ್ಲಾಸ್ಟರ್ ಮಾಡುವ ವಿಷಯಕ್ಕೆ  ನಮ್ಮ ಮನೆಯ ಪಕ್ಕದ ಮನೆಯವರಿಗೂ ಹಾಗೂ ನಮ್ಮ ಹಿರಿಯರಿಗೂ ಬಾಯಿ ಮಾತಿನಲ್ಲಿ ಜಗಳವಾಯಿತು.  ಆಗ  ನಮ್ಮ ಅಣ್ಣ ಸಂತೋಷ ಪಾಟೀಲ್  ಈತನಿಗೆ  ನನ್ನ ಮತ್ತೊಬ್ಬ ಅಣ್ಣ   ದೇವರೆಡ್ಡಿ ಈತನು ಪೋನ್ ಮಾಡಿ ಜಗಳ  ನಡೆಯುತ್ತಿರುವ ಬಗ್ಗೆ ಪೋನ್ ಮಾಡಿ ತಿಳಿಸಿದನು.  ಆಗ ಸಂತೋಷ ಪಾಟೀಲ್ ಈತನು 112 ನೇದ್ದಕ್ಕೆ ಕರೆ ಮಾಡಿದ್ದು ಪೊಲೀಸ್ ಜೀಫ್ ಊರಿಗೆ ಬಂದು ಪೊಲೀಸನವರು  ಎರಡು ಪಾರ್ಟಿಗಳ   ಜಗಳ ಬಿಡಿಸಿ ಕಳುಹಿಸಿದರು. ನಂತರ ಪೊಲೀಸರು ಅಲ್ಲಿಂದ ಹೋದ ಮೇಲೆ  ನಂತರ ನಮ್ಮ ಮನೆಯ ಪಕ್ಕದವರಾದ 1) ದೇವಿಂದ್ರಪ್ಪ ತಂದೆ ಪರ್ವತರೆಡ್ಡಿ ಎಲ್ಹೇರಿ 2) ಸಕ್ರೇಪ್ಪ ತಂದೆ ಪರ್ವತರೆಡ್ಡಿ ಎಲ್ಲೇರಿ , 3) ಸಿದ್ದಣ್ಣ ತಂದೆ ದೇವಿಂದ್ರಪ್ಪ  4) ಭಾಗಮ್ಮ ಗಂಡ ಸಿದ್ದಣ್ಣ ಎಲ್ಹೇರಿ, 5) ಪಾರ್ವತಿ ಗಂಡ ಪರ್ವತರೆಡ್ಡಿ ಎಲ್ಹೇರಿ, 6) ಶರಣಮ್ಮ ಗಂಡ ಸಕ್ರೇಪ್ಪ  ಎಲ್ಹೇರಿ, ಇವರೇಲ್ಲರೂ ಸೇರಿ ಅಕ್ರಮಕೂಟ ರಚಿಸಿಕೊಂಡು  ನಮ್ಮ ಮನೆಯ  ಅಂಗಳಕ್ಕೆ ಬಂದು  ಮನೆ ಕಟ್ಟುವ ವಿಚಾರಕ್ಕೆ  ನೀವು ಪೊಲೀಸರಿಗೆ ಪೋನ್ ಮಾಡಿ ತಿಳಿಸುತ್ತೀರಾ  ರಂಡೇರಾ, ಚೀನಾಲಿ, ಸೂಳೇ ಮಕ್ಕಳೇ ಅಂತಾ ಅವ್ಯಾಚವಾಗಿ ಬೈದರು. ಅದಕ್ಕೆ ನಮ್ಮ  ಅಪ್ಪ ಮಲ್ಲಣ್ಣ ಗೌಡ  ತಂದೆ ಬಸವರಾಜ ಮಾಲಿಪಾಟೀಲ್ , ಅಣ್ಣ ದೇವರೆಡ್ಡಿ ತಂದೆ ಮಲ್ಲಣ್ಣ ಗೌಡ  ಮಾಲಿಪಾಟೀಲ್   ಹಾಗೂ ನಾನು ಮನೆಯಿಂದ ಹೊರಗೆ ಬಂದು ಬೈದಾಡುತ್ತಿದ್ದ  ಅವರಿಗೆ ಈ ರೀತಿ  ಬೈದಾಡಬಾರದು ಅಂತಾ ಹೇಳಿದ್ದಕ್ಕೆ ನೀನು ಸಣ್ಣ ಹುಡುಗಿ  ಇದ್ದು ಇಷ್ಟೇಲ್ಲ ಮಾತ್ತಡುತ್ತಿಯಾ  ಅಂದು ನಾನೊಬ್ಬ ಹೆಣ್ಣು ಅಂತಾ ಮಾರ್ಯಾದೆ ಕೊಡದೇ ಸಾರ್ವಜನಿಕ ಸ್ಥಳದಲ್ಲಿ  ನನಗೆ ಅಪಮಾನ ಮಾಡುವ ಉದ್ದೇಶದಿಂದ ದೇವಿಂದ್ರಪ್ಪ ತಂದೆ ಪರ್ವತರೆಡ್ಡಿ ಎಲ್ಹೇರಿ  ಈ ಸೂಳೇದು ಬಹಳ ಆಗಿದೆ  ಬಿಡಬೇಡಿ ಹೊಡಿರಿ  ಅಂತಾ ತನ್ನ ಕೈಯಿಂದ ಕಪ್ಪಾಳಕ್ಕೆ ಹೊಡೆದಿರುತ್ತಾನೆ.  ಶರಣಮ್ಮ ಗಂಡ ಸಕ್ರೇಪ್ಪ ಎಲ್ಹೇರಿ ಇವಳು ನನ್ನ ತಲೆ ಕೂದಲೂ  ಹಿಡಿದು ಎಳೆದಾಡಿದಳು , ಶಿವಲೀಲಾ ಈಕೆಯು ಕೈಯಿಂದ ಕಪಾಳಕ್ಕೆ ಹೊಡೆದಳು, ಭಾಗಮ್ಮ ತಂದೆ ಸಕ್ರೇಪ್ಪ ಎಲ್ಹೇರಿ ಈಕೆಯು ತನ್ನ ಕೈ ಮುಷ್ಟಿ  ಮಾಡಿ   ಬೆನ್ನಿಗೆ  ಗುದ್ದಿದಳು, ಭಾಗಮ್ಮ ಗಂಡ ಸಿದ್ದಣ್ಣ  ಎಲ್ಹೇರಿ ಈಕೆಯು ನನ್ನ ಎದೆಯ ಮೇಲಿನ ಟಿ  ಶರ್ಟ್ ಹಿಡಿದು  ಎಳೆದಾಡಿ ಕೈ ಯಿಂದ ಬೆನ್ನಿಗೆ ಹೊಡೆದಳು, ಪಾರ್ವತಿ ಗಂಡ ಪರ್ವತರೆಡ್ಡಿ ಎಲ್ಹೇರಿ, ಇವಳು ತನ್ನ ಕೈಗಳಿಂದ ನನಗೆ ಹೊಡೆಬಡೆ ಮಾಡಿರುತ್ತಾಳೆ.  ಆಗ ನನ್ನ ತಂದೆ ಮಲ್ಲಣ್ಣಗೌಡ  ಮಾಲಿಪಾಟೀಲ್ ಮತ್ತು ನನ್ನ ಅಣ್ಣ ದೇವರೆಡ್ಡಿ ತಂದೆ ಮಲ್ಲಣ್ಣಗೌಡ ಮಾಲಿಪಾಟೀಲ್ ಇಬ್ಬರೂ ಸೇರಿ ಅವರಿಂದ ನನ್ನನ್ನು ಬಿಡಿಸಿಕೊಂಡರು ಅವರು ಜಗಳ ಬಿಡಿಸದಿದ್ದರೇ ನನಗೆ ಇನ್ನೂ ಹೊಡೆಯುತ್ತಿದ್ದರು. ಅವರು ಹೋಗುವಾಗ  ಗಲಾಟೆ ಮಾಡಿರುವ ವಿಷಯು ಮತ್ತೇನಾದರೂ ನೀವು ಪೊಲೀಸರಿಗೆ ತಿಳಿಸದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ  ಹಾಕಿರುತ್ತಾರೆ. ಸದರಿ ಜಗಳದಲ್ಲಿ ನನಗೆ ಮೈಯಲ್ಲೇಲ್ಲ  ಗುಪ್ತಗಾಯಗಳಾಗಿದ್ದು ಉಪಚಾರ ಕುರಿತು ನನ್ನ ಅಪ್ಪ ಮತ್ತು ನನ್ನ ಅಣ್ಣ ಯಾದಗಿರಿಯ ಸರಕಾರಿ ಜಿಲ್ಲಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ  ಸಾರ್ವಜನಿಕ ಸ್ಥಳದಲ್ಲಿ ಅಪಮಾನ ಮಾಡುವ ಉದ್ದೇಶದಿಂದ  ನನ್ನ ತಲೆ ಕೂದಲೂ  ಹಿಡಿದು ಎಳೆದಾಡಿ , ಕೈಯಿಂದ  ಹೊಡೆದು, ನನ್ನ ಎದೆಯ ಮೇಲಿನ ಟಿ  ಶರ್ಟ್ ಹಿಡಿದು  ಎಳೆದಾಡಿ ಅವ್ಯಾಚವಾಗಿ ಬೈದು ಜೀವ ಬೆದರಿಕೆ ಹಾಕಿದ ಸದರಿ 1) ದೇವಿಂದ್ರಪ್ಪ ತಂದೆ ಪರ್ವತರೆಡ್ಡಿ ಎಲ್ಹೇರಿ 2) ಸಕ್ರೇಪ್ಪ ತಂದೆ ಪರ್ವತರೆಡ್ಡಿ ಎಲ್ಲೇರಿ , 3) ಸಿದ್ದಣ್ಣ ತಂದೆ ದೇವಿಂದ್ರಪ್ಪ  4) ಭಾಗಮ್ಮ ಗಂಡ ಸಿದ್ದಣ್ಣ ಎಲ್ಹೇರಿ, 5) ಪಾರ್ವತಿ ಗಂಡ ಪರ್ವತರೆಡ್ಡಿ ಎಲ್ಹೇರಿ, 6) ಶರಣಮ್ಮ ಗಂಡ ಸಕ್ರೇಪ್ಪ  ಎಲ್ಹೇರಿ ಇವರ ಮೇಲೆ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಸಾರಂಶದ ಮೇಲಿಂದ ಠಾಣೆಯಲ್ಲಿನ ಗುನ್ನೆ ನಂ: 44/2021 ಕಲಂ: 143, 147, 323,504,506,354 ಸಂ/ 149 ಐ.ಪಿ.ಸಿ ರೀತ್ಯಾ ಪ್ರಕರಣವನ್ನುದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು

ಇತ್ತೀಚಿನ ನವೀಕರಣ​ : 08-07-2021 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080