ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-08-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 178/2021 ಕಲಂ ,323, 354, 504,506 ಸಂಗಡ 34 ಐ.ಪಿ.ಸಿ. : ಸಾರಾಂಶಃ- ಇಂದು ದಿನಾಂಕ: 07-08-2021 ರಂದು 5:00 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀಮತಿ ಶಿಲಾರ ಬಿ ಗಂಡ ದಿ.ಹಸನಪಟೇಲ ನಾಡಗೌಡ ವಯ: 40 ವರ್ಷ ಜಾ: ಮುಸ್ಲೀಂ ಉ: ಮನೆಗೆಲಸ ಸಾ: ದೋರನಳ್ಳಿ ತಾ: ಶಹಾಪುರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ, ನಾನು ನಮ್ಮೂರಿನ ಅಬ್ದುಲ್ಸಾಬ ತಂದೆ ಮೌಲಾನ್ಸಾಬ ಕೆಂಭಾವಿ ಇವರ ಹೊಲ ಸವರ್ೆ ನಂ. 613/2 ರಲ್ಲಿ ಕೆಲವು ನಿವೇಶನಗಳನ್ನು ಮಾಡಿದ್ದು ನನಗೆ 200000/- ರೂಪಾಯಿಗಳಿಗೆ ಎರಡು ನಿವೇಶನಗಳನ್ನು ಮಾರಾಟ ಮಾಡಿದ್ದು ಅದರ ಬಗ್ಗೆ ದಿನಾಂಕ:18-09-2019 ರಂದು ಸ್ಟಾಂಪ ಮೇಲೆ ಬರೆಯಿಸಿ ನೊಟರಿ ಮಾಡಿಸಿ ಕೊಟ್ಟಿದ್ದು ನಂತರ ಅದನ್ನು ಪಂಚಾಯ್ತಿಯಲ್ಲಿ ನನ್ನ ಹೆಸರಿಗೆ ಮೊಟೇಷನ್ ಮಾಡಿಸಿಕೊಂಡಿರುತ್ತೇನೆ. ಸದರಿ ನಿವೇಶನಗಳ ಬಗ್ಗೆ ನಮ್ಮ ಅಣ್ಣನದ ಅಲಿಸಾಬ ಮತ್ತು ಮೌಲಾಲಿ ಕೆಂಭಾವಿ ಇವರ ಮದ್ಯ ತಕರಾರು ನಡೆದಿದ್ದು ಇದೆ. ನಾನು ದಿನಾಂಕ: 30-07-2021 ರಂದು ಮುಂಜಾನೆ 9:30 ಎ.ಎಮ್.ಕ್ಕೆ ನಮ್ಮ ಅಣ್ಣನಾದ 1) ಅಲಿಸಾಬ ತಂದೆ ಚಂದಾಸಾಬ ಗೋಗಿ ಮತ್ತು ತಮ್ಮನಾದ 2) ಅಬ್ದುಲ್ ಗಫೂರ ತಂದೆ ಚಂದಾಸಾಬ ಗೋಗಿ ಮೂರು ಜನರು ಹೋಗಿ ನಮಗೆ ಕೊಟ್ಟ ನಿವೇಶನದಲ್ಲಿ ಮನೆ ಕಟ್ಟ ಬೇಕೆಂದು ಸ್ಥಳವನ್ನು ಸ್ವಚ್ಚ ಮಾಡಿ ಬರಬೇಕೆಂದು ಹೋಗಿದ್ದೆವು. ಅಲ್ಲಿ 1) ಅಬ್ದುಲಸಾಬ ತಂದೆ ಮೌಲಾನ್ ಸಾಬ ಕೆಂಭಾವಿ, ಆತನ ಹೆಂಡತಿ 2) ಶೈಜಾದ ಬಿ ಗಂಡ ಅಬ್ದುಲ್ ಸಾಬ ಕೆಂಭಾವಿ , ಆತನ ಮಕ್ಕಳಾದ 3) ಮೂಲಾಲಿ ತಂದೆ ಅಬ್ದುಲ್ ಸಾಬ ಮತ್ತು 4) ದಾವಲಸಾಬ ತಂದೆ ಅದ್ಬುಲ್ ಸಾಬ ಕೆಂಭಾವಿ ನಾಲ್ಕು ಜನರು ಅವರ ತೊಗರಿ ಹೊಲದಲ್ಲಿ ಇದ್ದು ನಮಗೆ ಏ ಸೂಳಿ ಮಕ್ಕಳೆ ಇಲ್ಲಿ ಏನು ಮಾಡುತ್ತೀರಿ ಎಂದು ಬೆದರಿಸಿದರು. ನಾವು ಅದಕ್ಕೆ ನಮ್ಮ ಜಾಗ ಸಾಪ ಮಾಡಲು ಬಂದಿದ್ದೇವೆ ಎಂದು ಹೇಳಿದೆವು ಅದಕ್ಕೆ ಆವರು ನಿಮ್ಮ ನಿವೇಶನ ಮಾರಾಟ ಮಾಡಿಲ್ಲ ಎಂದು ಜಗಳ ತೆಗದು ಅವಾಚ್ಯ ಶಬ್ದಗಳಿಂದ ಬೈಯ ತೊಡಗಿದರು. ನಾನು ಯಾಕೆ ಈ ರೀತಿ ಮಾಡುತ್ತೀರಿ ಎಂದು ಕೇಳಿದ್ದಕ್ಕೆ ಅವರು ನನಗೆ ಸೂಳಿ ನೀನು ಮನೆ ಕಟ್ಟಲು ಬರಬೇಡಾ ಎಂದು ಅವರಲ್ಲಿಯ ಮೌಲಾಲಿ ತಂದೆ ಅಬ್ದುಲಸಾಬ ಈತನು ನನಗೆ ಕೂದಲು ಹಿಡುದು ಎಳೆದು ಕೈಯಿಂದ ಹೊಡೆದನು. ದಾವಲ್ ಸಾಬ ಈತನು ನಮ್ಮ ಅಣ್ಣನಾದ ಅಲಿಸಾಬ ಈತನುಗೆ ಕಾಲಿನಿಂದ ಒದ್ದಿದ್ದಾನೆ. ಅಬ್ದುಲಸಾಬ್ ಕೆಂಭಾವಿ ಈತನು ನಮ್ಮ ತಮ್ಮನಾದ ಅಬ್ದುಲ್ ಗಫೂರ ಈತನಿಗೆ ಕೈಯಿಂದ ಹೊಡೆದಿದ್ದಾನೆ ಮತ್ತು ಶೈಜಾದ ಇವಳು ನಮಗೆ ಅವಾಚ್ಯ ಶಬ್ದಗಳಿಂದ ಬೈದಿ ಕಾಲಿನಿಂದ ಒದ್ದಿದ್ದಾರೆ ಆಗ ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ನಮ್ಮೂರ ಹೊನ್ನಪ್ಪ ತಂದೆ ದ್ಯಾವಪ್ಪ ಗುಂಟನೂರ ಮತ್ತು ನಿಂಗಯ್ಯ ತಂದೆ ಹುಸನಯ್ಯ ಈಳಿಗೇರ ಇಬ್ಬರು ಬಂದು ನಮಗೆ ಹೊಡೆಯುವುದನ್ನು ಬಿಡಿಸಿಕೊಂಡಿದ್ದಾರೆ. ಆಗ ಅವರಲ್ಲಿಯ ಮೌಲಾಲಿ ಈತನು ಮಕ್ಕಳೆ ಇನ್ನೊಮ್ಮ ಪ್ಲಾಟ ಗೀಟ ಅಂತಾ ಈಕಡೆ ಬಂದರೆ ನಿಮ್ಮ ಜೀವ ತೆಗೆಯುತ್ತೇವೆ ಎಂದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ನಾನು ಮತ್ತು ನಮ್ಮ ಸಹೋದರರು ಇಲ್ಲಿಯ ವರೆಗೆ ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ: 07-08-2021 ರಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡುತ್ತಿದ್ದೇನೆ. ಆದ್ದರಿಂದ ನನಗೆ ಕೂದಲು ಹಿಡಿದು ಎಳದಾಡಿ ಅವಮಾನ ಮಾಡಿದ್ದು ಮತ್ತು ನನ್ನ ಸಹೋದರರಿಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 178/2021 ಕಲಂ. 323, 354, 504, 506 ಸಂಗಡ 34 ಐ.ಪಿ.ಸಿ. ಅಡಿಯಲ್ಲಿ ಪರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 179/2021.ಕಲಂ 447 341 323 504 506 ಸಂ 34 ಐ.ಪಿ.ಸಿ. : ಇಂದು ದಿನಾಂಕ 07/08/2021 ರಂದು 17-00 ಗಂಟೆಗೆ ಪಿಯರ್ಾದಿ ಶ್ರೀ ಬಸವಂತ್ರಾಯಗೌಡ ತಂದೆ ಸಿದ್ಲಿಂಗಪ್ಪಗೌಡ ಬಿರಾದಾರ ಪಾಟೀಲ ವ|| 62 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಚಟ್ನಳ್ಳಿ ತಾ|| ಶಹಾಪುರ ಜಿ|| ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಚಟ್ನಳ್ಳಿ ಗ್ರಾಮದಲ್ಲಿ ನನ್ನ ಹೆಸರಿನಲ್ಲಿ ಸ.ನಂ 436/2 ರಲ್ಲಿ ಕ್ಷೇತ್ರ 0-20 ಗುಂಟೆ ಜಮೀನು ನನ್ನ ಹೆಸರಿನಲ್ಲಿ ಇದ್ದು ನಾನೇ ಅನುಭವದಲ್ಲಿ ಇರುತ್ತೇನೆ. ಹಿಗಿರುವಾಗ ಈ ದಿನ ದಿನಾಂಕ 07/08/2021 ರಂದು ಬೆಳಿಗ್ಗೆ 8-00 ಗಂಟೆಗೆ ಸಮಯದಲ್ಲಿ ನಾನು ಈ ಮೇಲ್ಕಂಡ ಜಮೀನಿನ ಹತ್ತಿರ ಹೊದಾಗ ನಮ್ಮ ಪಕ್ಕದ ಜಮೀನಿನವರಾದ 1) ಮಲ್ಲಣ್ಣ ತಂದೆ ಬಸವಂತ್ರಾಯಗೌಡ 2.) ವಿಶ್ವನಾಥರೆಡ್ಡಿ ತಂದೆ ಬಸವಂತ್ರಾಯಗೌಡ 3) ಶಿವು ತಂದೆ ಬಸರಾಜಪ್ಪಗೌಡ ಎಲ್ಲರೂ ಸೇರಿ ನನ್ನ ಜಮೀನಿಗೆ ಹೊಗುತ್ತಿದ್ದಾಗ ನನ್ನನ್ನು ಅಡ್ಡಗಟ್ಟಿ ನಿಲ್ಲಿಸಿ ಈ ಜಮೀನು ನಮಗೆ ಸೇರುತ್ತದೆ ಲೇ ಸುಳೆ ಮಗನೇ, ಬೋಸುಡಿ ಮಗನೇ ಎಂದು ನನಗೆ ಅವಾಚ್ಯಶಬ್ದಗಳಿಂದ ಬೈಯುತ್ತಾ ನಾನು ಉಳುಮೆ ಮಾಡುತ್ತೇನೆ ನೀನು ಏನು ಮಾಡುತ್ತಿಯೋ ಮಾಡಿಕೋ ಎಂದು ಬೈದು 3 ಜನರು ಸೇರಿ ನನಗೆ ಕೈಗಳಿಂದ ನನ್ನ ಎದೆಗೆ ಹಾಗೂ ಬೆನ್ನಿಗೆ ಹೊಡೆದು ನೆಲಕ್ಕೆ ಬೀಳಸಿ ಎಳೆದಾಡಿದರು ಇನ್ನೊಂದು ಸಾರಿ ಈ ಜಮೀನು ನಮ್ಮದು ಅಂತ ಬಂದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದರು. ನಂತರ ನನ್ನ ಮಗ ಸಿದ್ರಾಮರೆಡ್ಡಿ ಹಾಗೂ ನಮ್ಮ ಜಮೀನಿನಲ್ಲಿ ಉಳುಮೆ ಮಾಡಿತ್ತಿರುವ ಕೂಲಿ ಕೆಲಸದವನಾದ ಶ್ರೀ ಸಾಬಣ್ಣ ತಂದೆ ಶರಣಪ ಇವರು ಬಂದು ಜಗಳಬಿಡಿಸಿ ಕಳುಹಿಸಿದರು. ನಾನು ಶಹಾಪುರದ ಸರಕಾರಿ ಆಸ್ಪತ್ರೆಗೆ ಹೊಗಿ ಚಿಕಿತ್ಸೆ ಪಡೆದು ಈಗ ಠಾಣೆಗೆ ಬಂದು ದೂರು ನಿಡುತ್ತಿದ್ದು ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ನನ್ನನ್ನು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ 1) ಮಲ್ಲಣ್ಣ ತಂದೆ ಬಸವಂತ್ರಾಯಗೌಡ 2.) ವಿಶ್ವನಾಥರೆಡ್ಡಿ ತಂದೆ ಬಸವಂತ್ರಾಯಗೌಡ 3) ಶಿವು ತಂದೆ ಬಸರಾಜಪ್ಪಗೌಡ ರವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕೆಂದು ದೂರು ಸಲ್ಲಿಸಿದ್ದು. ಸದರಿ ಅಜರ್ಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 179/2021 ಕಲಂ 447,341,323,504,506, ಸಂ 34 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 54/2021 ಕಲಂ 279, 304(ಎ) ಐ.ಪಿ.ಸಿ : ದಿನಾಂಕ:06/08/2021 ರಂದು 8.30 ಪಿ.ಎಮ್ ಸುಮಾರಿಗೆ ಫಿಯರ್ಾದಿಯಗಂಡನಾದ ಮೃತಆರೋಪಿತನುತನ್ನ ಮೋಟರ್ ಸೈಕಲ್ ನಂ:ಕೆಎ-33, ಎಲ್-9845 ನೇದ್ದನ್ನು ಚಲಾಯಿಸಿಕೊಂಡು ಶಹಾಪುರಕಡೆಗೆ ಹೊರಟಾಗ ಶಿರವಾಳ-ಶಹಾಪುರರೋಡಿನ ಮೇಲೆ ವೆಂಕಟೇಶ ಪೂಜಾರಿಇವರ ಹೊಲದ ಹತ್ತಿರಆರೋಪಿತನುತನ್ನ ಮೊರ್ ಸೈಕಲನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಮೋಟರ್ ಸೈಕಲ್ ನಿಯಂತ್ರಣತಪ್ಪಿರಸ್ತೆ ಬದಿಯ ಮಣ್ಣಿನ ದಿಬ್ಬಿಗೆಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಸದರಿಅಪಘಾತದಲ್ಲಿ ಮೃತನತಲೆಗೆ, ಹಣೆಗೆ ಭಾರಿ ರಕ್ತಗಾಯಗಳಾಗಿ ಮೃತನಿಗೆ ಕಲಬುರಗಿಯಯುನೈಟೆಡ್ಆಸ್ಪತ್ರೆಗೆ ಸೇರಿಕೆ ಮಾಡಿದ್ದುಉಪಚಾರ ಫಲಕಾರಿಯಾಗದೇಇಂದು ದಿನಾಂಕ:07/08/2021 ರಂದು 04.00 ಎ.ಎಮ್. ಸುಮಾರಿಗೆ ಮೃತಪಟ್ಟಿದ್ದುಇರುತ್ತದೆ. ಸದರಿಘಟನೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಜರುಗಿಸುವಂತೆದೂರು ನೀಡಿದ್ದುಅದೆ.

 


ಭೀಗುಡಿ ಪೊಲೀಸ್ ಠಾಣೆ
55/2021 ಕಲಂ 204, 381, 409, 420 ಸಂಗಡ 34 ಐಪಿಸಿ : 2015 ರಿಂದ 2019 ನೇ ಸಾಲಿನಲ್ಲಿ ಆಗಾಗ ಶೈಲಾ ನೃತ್ಯ ಶಿಕ್ಷಕಿ ಇವರುಅನಧಿಕೃತವಾಗಿಗೈರು ಹಾಜರಾದಅವಧಿಯಲ್ಲಿಆರೋಪಿತರು ಸದರಿಗೈರು ಹಾಜರಅವಧಿಯ ವೇತನವನ್ನು ಹೆಚ್.ಆರ್.ಎಮ್.ಎಸ್. ನಲ್ಲಿತಯಾರು ಮಾಡಿ ಬಿಲ್ ಮಂಜೂರು ಮಾಡಲುಟ್ರಜರಿ ಕಳಿಸಿ ಬಿಲ್ ಮಂಜೂರು ಮಾಡಿಕೊಂಡುಒಟ್ಟು 9.19 ಲಕ್ಷರೂ ಹಣದಲ್ಲಿ 2.12 ಲಕ್ಷ ಹಣದದಾಖಲೆ ನೀಡಿದ್ದು, 5 ತಿಂಗಳ ವೇತನದ ಹಣ 94,548=00 ರೂಗಳನ್ನು ವಿಜಯ ವಿಷ್ಣುತೀರ್ಥ ಮುಖ್ಯ ಶಿಕ್ಷಕರು ತಮ್ಮ ಸ್ವಂತಖಾತೆಗೆಜಮಾ ಮಾಡಿಕೊಂಡು ಉಳಿದ ಆರೋಪಿತರನ್ನು ಶಾಮೀಲು ಮಾಡಿಕೊಂಡು ಇನ್ನುಳಿದ ಹಣದ, 2015 ರಿಂದ 2019 ರವರೆಗಿನ ದಾಖಲಾತಿಗಳನ್ನು ಸಿಗದಂತೆ ಮಾಡಿ ದಾಖಲಾತಿಗಳನ್ನು ನಾಶಪಡಿಸಿ ಸರಕಾರದ ಹಣವನ್ನುತಮ್ಮ ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ಸರಕಾರಕ್ಕೆ ಮೋಸ ಮಾಡಿದ ಬಗ್ಗೆ ದೂರು.

 


ಗೋಗಿ ಪೊಲೀಸ್ ಠಾಣೆ
78/2021 ಕಲಂ, 15(ಎ) 32(3) ಕೆ.ಇ ಯಾಕ್ಟ್ : ಇಂದು ದಿನಾಂಕ: 07/08/2021 ರಂದು 08.45 ಪಿಎಮ್ ಕ್ಕೆ ಶ್ರೀ. ಅಯ್ಯಪ್ಪ ಪಿಎಸ್.ಐ (ಕಾ.ಸು) ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ, ಗೋಗಿ ಪೇಠ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 07.10 ಪಿಎಂ ಕ್ಕೆ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಅಕ್ರಮವಾಗಿ ಯಾವುದೆ ಪರವಾನಿಗೆ ಇಲ್ಲದಯೇ, ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಅನೂಕೂಲ ಮಾಡಿಕೊಟ್ಟಿದ್ದು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರೋಂದಿಗೆ ದಾಳಿ ಮಾಡಿದ್ದು ದಾಳಿಯಲ್ಲಿ ಆರೋಪಿ ರಾಜೇಶಗೌಡ ತಂದೆ ಯಲ್ಲನಗೌಡ ಕಲಾಲ ವ:40 ಉ: ವ್ಯಾಪಾರ ಸಾ: ಗೋಗಿ ಪೇಠ ಈತನನ್ನು ವಶಕ್ಕೆ ಪಡೆದುಕೊಂಡಿದ್ದು ಸ್ಥಲದಲ್ಲಿ ದೊರೆತ ಮುದ್ದೆಮಾಲನ್ನು ಜಪ್ತಿ ಪಡಿಸಿಕೊಂಡಿದ್ದು, ಜಪ್ತಿಪಡಿಕೊಂಡ ಮುದ್ದೇಮಾಲು, ಜಪ್ತಿ ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಕುರಿತು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 78/2021 ಕಲಂ, 15(ಎ) 32(3) ಕೆ.ಇ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 114/2021 ಕಲಂ: 143,147,341,323,504,506, ಸಂಗಡ 149 ಐಪಿಸಿ : ದಿನಾಂಕ:07.08.2021 ರಂದು ಪಿರ್ಯಾದಿದಾರರಾದ ಶ್ರೀಮತಿ ಸೀಮಾ ಗಂಡ ಶಂಕರ ರಾಠೋಡ ವಯಾ|| 30 ಸಾ|| ಯಾಳಗಿ ತಾಂಡಾ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅರ್ಜಿ ಏನಂದರೆ, ನನಗೂ ಹಾಗೂ ನನ್ನ ಗಂಡ ಶಂಕರ ತಂದೆ ಕಿಶನ್ ರಾಠೋಡ ಇವರ ಮದ್ಯ ವೈವಾಹಿಕ ಜೀವನದಲ್ಲಿ ಕಲಹ ಉಂಟಾಗಿ ನಾವು ಒಬ್ಬರಿಗೊಬ್ಬರು ಬೇರ್ಪಟ್ಟು ಬೇರೆಬೇರೆಯಾಗಿರುತ್ತೇವೆ. ನನಗೆ ಎರಡು ಜನ ಹೆಣ್ಣು ಮಕ್ಕಳು ಹಾಗು ಒಬ್ಬ ಗಂಡು ಮಗನಿರುತ್ತಾನೆ ಮೂರು ಜನ ಮಕ್ಕಳು ನನ್ನ ಹತ್ತಿರವೇ ಇರುತ್ತಾರೆ. ಈ ಹಿಂದೆ ನನ್ನ ಗಂಡನಾದ ಶಂಕರ ಇವರು ನನ್ನ ಮೇಲೆ ಒಂದು ಕೇಸ್ ಮಾಡಿಸಿದ್ದು ಅಂದಿನಿಂದ ಸದರಿಯವನು ನನ್ನ ಮೇಲೆ ಹಗೆತನ ಸಾದಿಸುತ್ತಿದ್ದನು. ಹೀಗಿದ್ದು ದಿನಾಂಕ: 29/07/2021 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ದೊಡ್ಡಮ್ಮಳಾದ ಹೂನಿಬಾಯಿ ಹಾಗು ನಮ್ಮ ತಾಯಿಯಾದ ತಿಪ್ಪಿಬಾಯಿ ನಾವೂ ಮೂರು ಜನರು ಕೂಡಿ ಏವೂರ ತಾಂಡಾದಲ್ಲಿರುವ ನನ್ನ ಗಂಡನ ಹತ್ತಿರ ಹೋಗಿ ಮಕ್ಕಳ ಆದಾರ ಕಾರ್ಡ ತೆಗೆದುಕೊಂಡು ಬಂದರಾಯಿತು ಅಂತ ಏವೂರ ತಾಂಡಾದ ನನ್ನ ಗಂಡ ಶಂಕರ ಇವರು ವಾಸಿಸುವ ಮನೆಯ ಮುಂದೆ ಹಾದು ಹೋಗುತ್ತಿದ್ದಾಗ ನಮ್ಮ ಜನಾಂಗದ 1] ತಿರುಪತಿ ತಂದೆ ಬದ್ದು ಕಾರಬಾರಿ ಹಾಗೂ ಇತರರು ಗುಂಪು ಕಟ್ಟಿಕೊಂಡು ಬಂದವರೇ ನನ್ನನ್ನು ತಡೆದು ನಿಲ್ಲಿಸಿ ಏನಲೇ ಸೂಳೆ ಮಕ್ಕಳೆ ಎಲ್ಲಿಗೆ ಹೋಗುತ್ತಿದ್ದೀರಿ ಅಂತ ಎಲ್ಲರೂ ನನಗೆ ಕೈಯಿಂದ ಹೊಡೆಯುತ್ತಾ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನನ್ನ ಗಂಡ ಶಂಕರ ಈತನಿಗೆ ನನ್ನ ಮಕ್ಕಳ ಆಧಾರ ಕಾರ್ಡ ಕೊಡು ಅಂತ ಅಂದಾಗ ಮತ್ತೆ ನನ್ನ ಗಂಡ ಶಂಕರ ಈತನು ಈ ಸೂಳಿಯ ಸೊಕ್ಕು ಬಹಾಳ ಆಗಿದೆ ಅಂತ ಬೈಯುತ್ತಾ ಕಾಲಿನಿಂದ ಹೊಟ್ಟೆಗೆ ಹಾಗು ಬೆನ್ನಿಗೆ ಒದ್ದು ಗುಪ್ತಗಾಯ ಪಡಿಸಿದನು. ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಪಕ್ಕದಲ್ಲಿದ್ದ ನಮ್ಮ ತಾಯಿ ತಿಪ್ಪಿಬಾಯಿ ಹಾಗು ದೊಡ್ಡಮ್ಮ ಹೂನಿಬಾಯಿ ಇವರಿಬ್ಬರೂ ಬಂದು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಸೂಳೇ ಇನ್ನೊಮ್ಮೆ ನಮ್ಮ ತಾಂಡಾದ ಕಡೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನನಗೆ ಅಷ್ಟೇನು ಗಾಯಗಳು ಆಗಿಲ್ಲವಾದ್ದರಿಂದ ನಾನು ಆಸ್ಪತ್ರೆಗೆ ಹೋಗಿರುವದಿಲ್ಲ ಅಂತ ಪಿರ್ಯಾದಿ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂಬರ 114/2021 ಕಲಂ: 143,147,341,323,,504,506, ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಸೈದಾಪೂರ ಪೊಲೀಸ ಠಾಣೆ
122/2021 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 07-08-2021 ರಂದು ಸಾಯಂಕಾಲ 06-30 ಗಂಟೆಗೆ ಶ್ರೀ ವಿಜಯಕುಮಾರ ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ಸೈದಾಪೂರ ಗ್ರಾಮದ ರೇಣುಕಾ ವೈನ್ ಶಾಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನನ್ನು ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವರಿನಿಂದ ನಗದು ಹಣ 2560=00 ರೂಪಾಯಿಗಳು, ಒಂದು ಮಟಕಾ ಬರೆದ ಚೀಟಿ, ಒಂದು ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.122/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 11-08-2021 10:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080