ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-08-2022
ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 139/2022 ಕಲಂ ಮನುಷ್ಯ ಕಾಣೆ : ಇಂದು ದಿನಾಂಕ 08/07/2022 ರಂದು 1.00 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀಮತಿ ವಿ ಸಿಂದು ಗಂ. ಶ್ರೀನಿವಾಸ ವಲ್ಲೂರಿ ವ|| 28 ವರ್ಷ ಜಾ|| ಹಿಂದು ಕಮ್ಮಾ ಸಾ|| ಕೊಂಗಂಡಿ ಎಸ್ ಆರ್ ಕ್ಯಾಂಪ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ಗಂಡ ಮತ್ತು ನನ್ನ ಮಾವ ಸುಮಾರು 20 ವರ್ಷಗಳಿಂದ ಕೊಂಗಡಿ ಎಸ್ ಆರ್ ಕ್ಯಾಂಪಿನಲ್ಲಿ ವಾಸ ವಾಗಿದ್ದು, ನಮಗೆ ಅನನ್ಯ ವ-11 ವರ್ಷ, ಮತ್ತು ತೇಜಶ್ವಿ -10 ವರ್ಷದ ಮಕ್ಕಳೊಂದಿಗೆ ನಾವು ಮತ್ತು ನನ್ನ ಮಾವನಾದ ಅಜರ್ುನರಾವ ಅತ್ತೆಯಾದ ಶ್ರೀಮತಿ ಕೃಷ್ಣಕುಮಾರಿ ಇವರಿಂದ ಬೇರೆಗೆಯಾಗಿ ಬೇರೆ ಮನೆಯಲ್ಲಿ ವಾಸವಾಗಿದ್ದು ಇರುತ್ತೇವೆ. ಹೀಗಿದ್ದು ನನ್ನ ಗಂಡ ಕೊಂಗಡಿ ಗ್ರಾಮದ ರೈತರ ಜಮೀನನ್ನು ಲೀಜಿಗೆ ಪಡೆದುಕೊಂಡು ವ್ಯವಸಾಯ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿದ್ದು ನನ್ನ ಗಂಡನು ದಿನಾಂಕ 05/08/2022 ರಂದು ಮದ್ಹಾನ 1.00 ಗಂಟೆ ಸುಮಾರಿಗೆ ತವಡು ತರುವುದು ಇದೆ ಅದಕ್ಕೆ ನಾನು ಸುರಪೂರಕ್ಕೆ ಹೋಗಿ ಬರುತ್ತೇನೆಂದು ನಮ್ಮ ಸೈಕಲ ಮೋಟರ ತೆಗೆದುಕೊಂಡು ಹೋದನು ಕತ್ತಲಾದರು ಬರಲಿಲ್ಲ ನಂತರ ನಮ್ಮ ಅತ್ತೆ ಮಾವ ಮತ್ತು ನಮ್ಮ ಕ್ಯಾಂಪಿನ ವಿಷ್ಣು ಮೂತರ್ಿ ಇವರಿಗೆ ನನ್ನ ಗಂಡ ಇನ್ನು ಬಂದಿಲ್ಲ ಮತ್ತು ಆತನ ಮೊಬೈಲ ಕೋಡಾ ಬಂದ ಆಗಿದೆ ಎಂದು ಹೇಳಿದಾಗ ಕತ್ತಲಾಗುತ್ತಾ ಬಂದಿದ್ದರಿಂದ ಮತ್ತು ಮಳೆ ಗಾಳಿಯ ಸಲುವಾಗಿ ಎಲ್ಲಿಯಾದರೂ ನಿಂತಿರಬಹುದು ಎಂದು ಹೇಳಿದರು ನಂತರ ಮೊಬೈಲ ಆನ್ ಆದ ಬಗ್ಗೆ ನನಗೆ ಮೆಸೆಜ ಬಂದ ಮೇಲೆ ರಾತ್ರಿ 11.15 ಗಂಟೆ ಸುಮಾರಿಗೆ ನಾನು ಕಾಲ ಮಾಡಿ ಎಲ್ಲಿದ್ದಿಯಾ ಇನ್ನು ಏಕೆ ಬಂದಿಲ್ಲ ಎಂದು ನಾನು ಕೇಳಿದಾಗ ಮತ್ತೆನು ನನಗೆ ಹೇಳದೆ ನಾನು ಬರುತ್ತಿದ್ದೇನೆ ನೀವು ಊಟ ಮಾಡಿ ಮಲಗಿ ಎಂದು ತನ್ನ ಮೊಬೈಲ ಬಂದ ಮಾಡಿದನು ನಂತರ ನಾವು ಬೆಳಗಾದರೂ ಬರದೇ ಇದ್ದಾಗ ನಾವು ಗಾಬರಿಗೊಂಡು ಸುರಪೂರ ಮತ್ತು ನಮ್ಮ ಸಂಬಂದಿಕರು ಇರುವ ಊರುಗಳಲ್ಲಿ ಹುಡುಕಾಡಲಾಗಿ ನನ್ನ ಗಂಡ ಇನ್ನು ಮನೆಗೆ ಬರದೇ ಕಾಣೆಯಾಗಿದ್ದು ಇರುತ್ತದೆ ಮತ್ತು ಈತನ ಮೊಬೈಲ ಸಹ ಸ್ವಿಚ್ ಆಪ್ ಆಗಿರುತ್ತದೆ. ಕಾರಣ ನನ್ನ ಗಂಡನಾದ ವಿ ಶ್ರೀನಿವಾಸ ತಂ. ವಿ ಅಜರ್ುನರಾವ ವಲ್ಲೂರಿ ವ|| 38 ವರ್ಷ ಜಾ|| ಹೀಂದು ಕಮ್ಮಾ ಉ|| ವ್ಯವಸಾಯ ಸಾ|| ಕೊಂಡಗಡಿ ಎಸ್ ಆರ್ ತಾ|| ಶಹಾಪೂರ ಈತನು ಕೊಂಗಂಡಿಯ ಮನೆಯಿಂದ ಹೋದವ ಇನ್ನು ಮನೆಗೆ ಬರದೆ ಕಾಣೆಯಾಗಿದ್ದು ಅವನು ನಮ್ಮ ಸಂಬಂದಿಕರು ಇರುವ ಊರುಗಳಲ್ಲಿ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ಪಿಯರ್ಾದಿ ನೀಡುತ್ತಿದ್ದು ಕಾಣೆಯಾದ ನನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿ.
ಕಾಣೆಯಾದ ನನ್ನ ಗಂಡನ ಚಹರೆ ಪಟ್ಟಿ ಈ ಕೇಳಗಿನಂತಿರುತ್ತವೆ.
ಹೆಸರು ಃ- ವಿ ಶ್ರೀನಿವಾಸ ತಂ. ವಿ ಅಜರ್ುನರಾವ ವಲ್ಲೂರಿ
ಬಣ್ಣ ಃ- ಸಾದಕಪ್ಪು ಬಣ್ಣ ಸದೃಡ ದೇಹ
ಎತ್ತರ ಃ- 6.1 ಫೀಟ್ ಇದ್ದು.
ಭಾಷೆ ಃ- ತೆಲಗು, ಕನ್ನಡ
ಧರಿಸಿದ ಬಟ್ಟೆ ಃ- ಕೆಂಪು ಬಣ್ಣದ ಅಂಗಿ, ನಿಳಿ ಬಣ್ಣದ ಲುಂಗಿ ಹಾಕಿದ್ದು ಅದೆ
ಸದರಿ ಕಾಣೆಯಾದ ನನ್ನ ಗಂಡನನ್ನು ಹುಡುಕಿಕೊಡಬೇಕೆಂದು ವಿನಂತಿ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 139/2022 ಕಲಂ ಮನುಶ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 129/2022 ಕಲಂ: 279, 338 ಐಪಿಸಿ: ಇಂದು ದಿನಾಂಕ 07/08/2022 ರಂದು 5.00 ಎಎಮ್ ಕ್ಕೆ ಠಾಣೆಯ ಪ್ರಕಾಶ ಹೆಚ್.ಸಿ 122 ರವರು ಠಾಣೆಗೆ ಬಂದು ವಿಜಯಪೂರದ ಬಸವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಳು ರಾಜಶೇಖರ ಈತನು ಮಾತನಾಡದ ಸ್ಥಿತಿಯಲ್ಲಿಲ್ಲದ ಕಾರಣ ಅವರ ತಂದೆಯಾದ ರಾಮನಗೌಡ ತಂದೆ ಸಂಗನಗೌಡ ಪಾಟೀಲ್ ವ|| 69ವರ್ಷ ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಯಾಳವಾರ ತಾ|| ದೇವರಹಿಪ್ಪರಗಿ ಇವರ ಹೇಳಿಕೆ ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, ನಮಗೆ 3 ಜನ ಗಂಡು ಮಕ್ಕಳಿದ್ದು ಕಿರಿಯ ಮಗನಾದ ರಾಜಶೇಖರ ತಂದೆ ರಾಮನಗೌಡ ಪಾಟೀಲ್ ವ|| 35 ಜಾ|| ರೆಡ್ಡಿ ಉ|| ನಾಗರಹಳ್ಳಿ ಸಕ್ಕರೆ ಕಾಖರ್ಾನೆಯಲ್ಲಿ ಕಾರಕೂನ ಕೆಲಸ ಸಾ|| ಯಾಳವಾರ ಹಾ|| ವ|| ಹದನೂರ ತಾ|| ಸುರಪೂರ ಈತನು ಸಕ್ಕರೆ ಕಾಖರ್ಾನೆಯಲ್ಲಿ ಕೆಲಸ ಮಾಡುತ್ತಾ ಹದನೂರ ಗ್ರಾಮದಲ್ಲಿ ವಾಸವಾಗಿರುತ್ತಾನೆ. ದಿನಾಲೂ ಹದನೂರ ಗ್ರಾಮದಿಂದ ನಾಗರಹಳ್ಳಿ ಗ್ರಾಮದ ಸಕ್ಕರೆ ಕಾಖರ್ಾನೆಗೆ ಹದನೂರ ಗ್ರಾಮದಿಂದ ಹೋಗುವುದು ಬರುವುದು ಮಾಡುತ್ತಾ ಇದ್ದನು. ಅದರಂತೆ ಇಂದು ದಿನಾಂಕ 06/08/2022 ರಂದು 8.20 ಎಎಂ ಕ್ಕೆ ನಮ್ಮ ಮಗನಾದ ರಾಜಶೇಖರ ಈತನು ಕಾಖರ್ಾನೆಯ ಕೆಲಸಕ್ಕೆಂದು ನಾಗರಹಳ್ಳಿಗೆ ಹದನೂರ ಗ್ರಾಮದ ಪ್ರಶಾಂತ ತಂದೆ ಸಿದ್ದನಗೌಡ ಗಬಸಾವಳಗಿ ಇವರ ಸೈಕಲ್ ಮೋಟಾರ ಮೇಲೆ ಹೋಗುತ್ತಿದ್ದ ಬಗ್ಗೆ ನನಗೆ ನನ್ನ ಮಗನು ಫೋನ್ ಮಾಡಿ ತಿಳಿಸಿದ್ದನು. ನಂತರ 8.30 ಎಎಂ ಕ್ಕೆ ಪ್ರಶಾಂತ ಗಬಸಾವಳಗಿ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನಿಮ್ಮ ಮಗನಾದ ರಾಜಶೇಖರ ತಂದೆ ರಾಮನಗೌಡ ಪಾಟೀಲ್ ಇಬ್ಬರೂ ಕೂಡಿ ನನ್ನ ಸೈಕಲ್ ಮೋಟಾರ ನಂ ಕೆಎ 33 ಇಬಿ 6297 ನೇದ್ದರ ಮೇಲೆ ಹದನೂರದಿಂದ ನಾಗರಹಳ್ಳಿ ಕಡೆಗೆ ಹೋಗುತ್ತಿದ್ದಾಗ ಹದನೂರ ದಾಟಿ 1 ಕಿಲೋ ಮೀಟರ ದೂರದಲ್ಲಿ ಹೋಗುತ್ತಿದ್ದಾಗ ನಾನು ಸೈಕಲ್ ಮೋಟಾರನ್ನು ವೇಗದಿಂದ ನಡೆಸುತ್ತಿದ್ದು ನನ್ನ ಸೈಕಲ್ ಮೋಟಾರ ಒಂದು ತಗ್ಗಿಗೆ ಬಿದ್ದು ಸ್ಕಿಡ್ ಆಗಿ ಬಿದ್ದಿದ್ದರಿಂದ ರಾಜಶೇಖರ ಈತನು ಕೆಳಗೆ ಬಿದ್ದಿದ್ದು ಅವನಿಗೆ ತಲೆಗೆ ಭಾರೀ ರಕ್ತಗಾಯ, ಎರಡೂ ಮೊಣಕಾಲಿಗೆ ರಕ್ತಗಾಯವಾಗಿ ರಕ್ತಸ್ರಾವ ಆಗುತ್ತಿದ್ದು ಅಪಘಾತದ ಸ್ಥಳಕ್ಕೆ ನಮ್ಮೂರ ರುದ್ರಗೌಡ ಹೊಸಮನಿ ಮತ್ತು ರಾಮನಗೌಡ ಸಾಸನೂರ ಇವರೂ ಕೂಡಾ ಬಂದಿದ್ದು ಎಲ್ಲರೂ ಕೂಡಿ ರಾಜಶೇಖರನಿಗೆ ಅಂಬುಲೆನ್ಸದಲ್ಲಿ ಹಾಕಿಕೊಂಡು ವಿಜಯಪೂರ ಆಸ್ಪತ್ರೆಗೆ ಬರುತ್ತೇವೆ ನೀವು ಅಲ್ಲಿಗೆ ಬರ್ರಿ ಅಂತಾ ತಿಳಿಸಿದ್ದರಿಂದ ನಾನು ಕೂಡಲೇ ಶ್ರೀ ಬಸವ ಬ್ರೇನ್ & ಸ್ಪೈನ್ ಸೆಂಟರ್ ವಿಜಯಪೂರ ಆಸ್ಪತ್ರೆಗೆ ಬಂದಿದ್ದು ಇಲ್ಲಿ ನೋಡಲಾಗಿ ಚಿಕಿತ್ಸೆ ಕುರಿತು ದಾಖಲಾಗಿದ್ದ ನನ್ನ ಮಗನಾದ ರಾಜಶೇಖರ ತಂದೆ ರಾಮನಗೌಡ ಪಾಟೀಲ್ ಈತನಿಗೆ ತಲೆಗೆ ಭಾರೀ ರಕ್ತಗಾಯವಾಗಿದ್ದು, ಎರಡೂ ಮೊಣಕಾಲಿಗೆ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ನಂತರ ನನ್ನ ಮಗನ ಜೊತೆಗೆ ಆಸ್ಪತ್ರೆಗೆ ಬಂದ ರುದ್ರಗೌಡ ಹೊಸಮನಿ ಇವರಿಗೆ ಕೇಳಿಲಾಗಿ ಪ್ರಶಾಂತ ಮತ್ತು ರಾಜಶೇಖರ ಇಬ್ಬರೂ ಕೂಡಿ ಪ್ರಶಾಂತನ ಸೈಕಲ್ ಮೋಟಾರ ನಂ ಕೆಎ 33 ಇಬಿ 6297 ನೇದ್ದರ ಮೇಲೆ ಹೋಗುತ್ತಿದ್ದಾಗ ನಾವು ಅವರ ಹಿಂದೆ ಹೋಗುತ್ತಿದ್ದು ಪ್ರಶಾಂತನು ತನ್ನ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಒಮ್ಮೆಲೇ ಒಂದು ತಗ್ಗಿಗೆ ಹಾಕಿ ಸ್ಕಿಡ್ ಮಾಡಿದ್ದರಿಂದ ಅಪಘಾತವಾಗಿ ಸೈಕಲ್ ಮೋಟಾರ ಹಿಂದೆ ಕುಳಿತಿದ್ದ ರಾಜಶೇಖರ ಈತನು ಕೆಳಗೆ ಬಿದ್ದು ಗಾಯಗಾಳಾಗಿದ್ದು ಪ್ರಶಾಂತನಿಗೆ ಯಾವುದೇ ಗಾಯಗಳಾಗಿರಲಿಲ್ಲ. ತಕ್ಷಣ ನಾನು, ಪ್ರಶಾಂತ ಮತ್ತು ರಾಮನಗೌಡ ಮೂರೂ ಜನರು ಕೂಡಿ ರಾಜಶೇಖರನಿಗೆಶ್ರೀ ಬಸವ ಬ್ರೇನ್ & ಸ್ಪೈನ್ ಸೆಂಟರ್ ವಿಜಯಪೂರ ಆಸ್ಪತ್ರೆಗೆ ತಂದೆ ಸೇರಿಕೆ ಮಾಡಿರುತ್ತೇವೆ ಅಂತಾ ತಿಳಿಸಿದ್ದು ಇರುತ್ತದೆ. ಕಾರಣ ನನ್ನ ಮಗನಾದ ರಾಜಶೇಖರ ತಂದೆ ರಾಮನಗೌಡ ಪಾಟೀಲ್ ವ|| 35 ಜಾ|| ರೆಡ್ಡಿ ಉ|| ನಾಗರಹಳ್ಳಿ ಸಕ್ಕರೆ ಕಾಖರ್ಾನೆಯಲ್ಲಿ ಕಾರಕೂನ ಕೆಲಸ ಸಾ|| ಯಾಳವಾರ ಹಾ|| ವ|| ಹದನೂರ ತಾ|| ಸುರಪೂರ ಈತನು ಪ್ರಶಾಂತ ಗಬಸಾವಳಗಿ ಸಾ|| ಹದನೂರ ಇವರ ಸೈಕಲ್ ಮೋಟಾರ ನಂ ಕೆಎ 33 ಇಬಿ 6297 ನೇದ್ದರ ಮೇಲೆ ಹೋಗುತ್ತಿದ್ದಾಗ ಪ್ರಶಾಂತನು ತನ್ನ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಸ್ಕಿಡ್ ಮಾಡಿ ಅಪಘಾತ ಮಾಡಿದ್ದರಿಂದ ರಾಜಶೇಖರನಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು ಅಪಘಾತ ಮಾಡಿದ ಸೈಕಲ್ ಮೋಟಾರ ನಂ ಕೆಎ 33 ಇಬಿ 6297 ನೇದ್ದರ ಚಾಲಕನಾದ ಪ್ರಶಾಂತ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 129/2022 ಕಲಂ 279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 124/2022 ಕಲಂ: 323, 324, 504, 506 ಸಂ. 34 ಐಪಿಸಿ: ಇಂದು ದಿನಾಂಕ:07/08/2022 ರಂದು 05:30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರರಾದ ಶ್ರೀಮತಿ ಹುಲಗೆಮ್ಮ ಗಂಡ ಹಣಮಂತ್ರಾಯ ಉದ್ದಾರ ವ|| 46 ವರ್ಷ ಜಾ|| ಕುರುಬರು ಉ|| ಕಿರಾಣಿ ವ್ಯಾಪಾರ ಸಾ|| ದೇವತ್ಕಲ್ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನ್ನ ಮತ್ತು ನನ್ನ ಗಂಡನಾದ ಹಣಮಂತ್ರಾಯ ಉದ್ದಾರ ನಮ್ಮ ಸಂಸಾರದಲ್ಲಿ ಅಡಚಡೆ ಉಂಟಾಗಿದ್ದರಿಂದ ನಾನು ನನ್ನ ಮಕ್ಕಳೊಂದಿಗೆ ಸುಮಾರು 4-5 ವರ್ಷಗಳಿಂದ ಬೇರೆ ಮನೆ ಮಾಡಿಕೊಂಡು ಒಂದು ಕಿರಾಣಿ ಅಂಗಡಿ ಇಟ್ಟುಕೊಂಡು ಉಪಜೀವನ ಸಾಗಿಸುತ್ತಿದ್ದೆನು. ಸಂಸಾರ ನಡೆಸಲು ಕಷ್ಟವಾಗುತ್ತಿದ್ದರಿಂದ ನಾನು ನನ್ನ ಗಂಡ ಹಣಮಂತ್ರಾಯ ಈತನಿಗೆ ಜೀವನಾಂಶಕ್ಕಾಗಿ ನನಗೆ ಆಸ್ತಿಯಲ್ಲಿ ಪಾಲು ಕೊಡುವಂತೆ ಕೇಳಿದ್ದೇನು. ಹಿಗಿದ್ದು ನಿನ್ನೆ ದಿನಾಂಕ:06/08/2022 ರಂದು ಬೆಳಿಗ್ಗೆ 8:30 ಗಂಟೆಗೆ ಸುಮಾರಿಗೆ ನಾನು ಮತ್ತು ನನ್ನ ಮಳಾದ ವಿಜಯಲಕ್ಷ್ಮೀ ಇಬ್ಬರೂ ಕೂಡಿ ನಮ್ಮ ಕಿರಾಣಿ ಅಂಗಡಿಯ ಸಾಮಾನುಗಳನ್ನು ತರಲು ಸುರಪೂರಕ್ಕೆ ಹೋಗುವ ಕುರಿತು ನಮ್ಮೂರ ಬಸ್ ನಿಲ್ದಾಣದ ಹತ್ತಿರ ನಿಂತುಕೊಂಡಿದ್ದೇವು. ಆಗ ಅದೇ ಸಮಯಕ್ಕೆ ಹೊಲಕ್ಕೆ ಹೋಗುವ ಕುರಿತು ನನ್ನ ಗಂಡನಾದ 1) ಹಣಮಂತ್ರಾಯ ತಂದೆ ಯಂಕಣ್ಣ ಉದ್ದಾರ ಹಾಗೂ ನನ್ನ ಮಗ 2) ಗೋವಿಂದರಾಜ ತಂದೆ ಹಣಮಂತ್ರಾಯ ಉದ್ದಾರ ನಿಂತಿದ್ದರು. ಅವರಲ್ಲಿಯ ನನ್ನ ಗಂಡ ಹಣಮಂತ್ರಾಯ ಈತನು ನಮ್ಮನ್ನು ನೋಡಿ ನನಗೆ ಏನಲೇ ಸೂಳಿ ಆಸ್ತಿಯಲ್ಲಿ ಪಾಲು ಕೇಳುತ್ತಿ ಏನಲೇ ರಂಡಿ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ, ನಾನು ಆಸ್ತಿಯಲ್ಲಿ ಪಾಲು ಕೇಳಿದರೆ ತಪ್ಪೇನು. ನನಗೂ ಆಸ್ತಿಯಲ್ಲಿ ಹಕ್ಕಿದ್ದೆ ಅಂತಾ ಅಂದಾಗ ನನ್ನ ಗಂಡ ಹಣಮಂತ್ರಾಯ ಈತನು ತನ್ನ ಕೈಯಲ್ಲಿರುವ ಕುಡುಗೋಲಿನಿಂದ ನನ್ನ ಎಡಗೈ ಹೆಬ್ಬರಳು ಮತ್ತು ತೋರು ಬೆರಳಿನ ಮದ್ಯದಲ್ಲಿ ಹೊಡೆದು ರಕ್ತಗಾಯ ಮಾಡಿ, ಬಲಗೈ ಮೊಳಕೈಗೆ, ಹಸ್ತಕ್ಕೆ ಹೊಡೆದು ಗುಪ್ತಗಾಯ ಮಾಡಿದನು. ನನ್ನ ಮಗ ಗೋವಿಂದರಾಜ ಈತನು ಅಲ್ಲೇ ಬಿದ್ದ ಒಂದು ಬಡಿಗೆಯಿಂದ ನನ್ನ ಬಲ ಸೊಂಟಕ್ಕೆ ಮತ್ತು ಎಡಗಾಲಿನ ತೊಡೆಗೆ ಹೊಡೆದು ಗುಪ್ತಪೆಟ್ಟುಪಡಿಸಿದನು. ಆಗ ಅಲ್ಲೇ ಇದ್ದ ನನ್ನ ಮಗಳು ವಿಜಯಲಕ್ಷ್ಮೀ ಮತ್ತು ಗ್ರಾಮದ ಮಲ್ಲಪ್ಪ ತಂದೆ ರಾಮಪ್ಪ ತಳವಾರ ಹಾಗೂ ಮಲ್ಲಿಕಾಜರ್ುನ್ ತಂದೆ ಭೀರಪ್ಪ ಕೊಡೆಸೂರ ಇವರು ಜಗಳವನ್ನು ನೋಡಿ ಬಿಡಿಸಿಕೊಂಡರು. ನಂತರ ಅವರು ಇವತ್ತು ಬಿಟ್ಟಿವಿ ಸೂಳೆ. ಇನ್ನೊಮ್ಮೆ ಸಿಕ್ಕರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ನಂತರ ಗಾಯಗೊಂಡ ನಾನು ಒಂದು ಖಾಸಗಿ ವಾಹನದಲ್ಲಿ ನನ್ನ ಮಗಳೊಂದಿಗೆ ಸುರಪುರ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಕುರಿತು ಸೇರಿಕೆಯಾಗಿ ಉಪಚಾರ ಪಡೆದುಕೊಂಡೆನು. ನಂತರ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೆನೆ. ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆ-ಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ ನನ್ನ ಗಂಡ ಮತ್ತ ಮಗನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಈ ವಿನಂತಿ ಅಂತ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 124/2022 ಕಲಂ: 323, 324, 504, 506 ಸಂ. 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 56/2022 ಕಲಂ: 323, 324, 354, 307, 504, 506 ಐಪಿಸಿ: ಇಂದು ದಿನಾಂಕ: 08/08/2022 ರಂದು 09.30 ಪಿ.ಎಮ್ ಕ್ಕೆ ಬೀಬಿ ಗಂಡ ನೌಷಾದ ಮಕಾಂದಾರ ವಯಾ:26 ಉ: ವ್ಯಾಪಾರ ಜಾ: ಮುಸ್ಲಿಂ ಸಾ: ಕಲಕೇರಿ ತಾ: ಸಿಂದಗಿ ಜಿ: ವಿಜಯಪೂರ. ಇವರು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ, ನನಗೆ 09 ವರ್ಷಗಳ ಹಿಂದೆ ಮದುವೆ ಆಗಿದ್ದು ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ನನಗೆ ಮದುವೆ ಆದ ನಂತರ ನನ್ನ ಗಂಡನಾದ ನೌಷಾದ ಈತನು ನನಗೆ ಸರಿಯಾಗಿ ನೋಡಿಕೊಳ್ಳದೆ ಸುಮಾರು 05 ವರ್ಷಗಳ ಹಿಂದೆ ನಮಗೆ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವನು ಮರಳಿ ಊರಿಗೆ ಬಂದಿರುವದಿಲ್ಲ. ನಾನು ಒಬ್ಬಳೆ ನನ್ನ ಎರಡು ಹೆಣ್ಣು ಮಕ್ಕಳ ಜೊತೆಗೆ ಕಲಕೇರಿಯಲ್ಲಿ ಲೇಡಿಜ ಕಾರ್ನರ್ ಅಂಗಡಿ ಇಟ್ಟುಕೊಂಡು, ವ್ಯಾಪಾರ ಮಾಡಿಕೊಂಡು ಇರುತ್ತೇನೆ. ಲಾಕ್ ಡೌನ್ ಸಮಯದಲ್ಲಿ ನಾನು ಗೋಗಿಗೆ ನಮ್ಮ ತಂದೆಯವರ ಮನೆಗೆ ಬಂದು ಇಲ್ಲಿಯೇ ಇದ್ದಾಗ ಗೋಗಿ ಪೇಠ ಗ್ರಾಮದ ಚಾಂದಾಪಾಷಾ ತಂದೆ ರೇಮತ್ ಉಲ್ಲಾ ಸಾಹು ಇವರ ಬೇಕರಿಯಲ್ಲಿ ಕೆಲಸಕ್ಕೆ ಹೊಗುತ್ತಿದ್ದೇನು. ಹೀಗಿದ್ದಾಗ ನನಗೆ ಹುಣಚಾಳದ ನಮ್ಮ ಸಂಬಂದಿಕರಲ್ಲಿ ಒಬ್ಬರು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿದ್ದರು. ಆ ಸಂಬಂಧವಾಗಿ ನಾನು ನಮ್ಮ ತಂದೆಯವರ ಜೊತೆ ಮಾತಾಡಲು ಅಂತಾ ನನಗೆ ಮದುವೆ ಆಗುವ ಹುಡುಗ ಲಾಲಸಾಬ ಮತ್ತು ನಮ್ಮ ಮನೆಯವರು ಕೂಡಿ ದಿನಾಂಕ: 02/08/2022 ರಂದು 01.00 ಪಿಎಮ್ ಸುಮಾರಿಗೆ ಗೋಗಿ ಪೇಠ ಗ್ರಾಮದ ಹೊರವಲಯದಲ್ಲಿ ಇರುವ ಹಾಜಿ ಫೀರ ದಗರ್ಾದ ಆವರಣದಲ್ಲಿ ಕುಳಿತು ಮಾತುಕತೆ ಮಾಡಿದ್ದರು, ನನ್ನ ಎರಡನೇಯ ಮದುವೆ ವಿಷಯದಲ್ಲಿ ಮಾತಾಡಲು ನಮ್ಮ ತಂದೆಯವರಾದ ಚಿರಾಕ್ ಅಲಿ ಶಾ ತಂದೆ ಮದರಶಾ ದವರ್ೇಶ ವಯಾ:55 ವರ್ಷ ಮತ್ತು ನಮ್ಮ ತಂದೆಯವರಿಗೆ ಬೇಕಾದವರಾದ ಚಾಂದಾಪಾಷಾ ತಂದೆ ರೇಮತ್ ಉಲ್ಲಾ ಸಾಹು ಮತ್ತು ನಮ್ಮ ಸಂಬಂಧಿಕಾರಾದ ಹುಸೇನ ಶಾ ಮಕಾಂದಾರ ಮತ್ತು ಮಹ್ಮದ ಮಕಾಂದಾರ ಇಬ್ಬರು ಕೆಂಭಾವಿಯಿಂದ ಬಂದಿದ್ದರು. ಎಲ್ಲರೂ ಕೂಡಿ ಮಾತಾಡಿದ್ದೇವು, ಲಾಲಸಾಬ ನಾಗಾವಿ ಸಾ: ಹುಣಚ್ಯಾಳ ತಾ: ಸಿಂದಗಿ ಇವರು ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಒಪ್ಪಿಕೊಂಡಿದ್ದರು. ಆಗ ನಮ್ಮ ಗೋಗಿ ಪೇಠ ಗ್ರಾಮದ ನವಾಬ ತಂದೆ ಮಕ್ಸೂದ ಹವಾಲ್ದಾರ ಸಾ: ಗೋಗಿ ಪೇಠ ಈತನು ಬಂದು ತಿರುಗಾಡಿ ನೋಡಿಕೊಂಡು ಹೊಗಿದ್ದನು. ಅವನಿಗೆ ನಾವು ಮಾತಾಡಿಸಿರಲಿಲ್ಲ. ನಂತರ ನಾವು ಮನೆಗೆ ಬಂದು ನಾನು ನಮ್ಮ ಊರಾದ ಕಲಕೇರಿಗೆ ಹೋಗಿದ್ದೇನು. ಇಲ್ಲಿ ಗೋಗಿ ಪೇಠ ಗ್ರಾಮದಲ್ಲಿ ನವಾಬ ತಂದೆ ಮಕ್ಸೂದ ಹವಾಲ್ದಾರ ಸಾ: ಗೋಗಿ ಪೇಠ ಈತನು, ನಾನು ಬೆಕರಿಯಲ್ಲಿ ಕೆಲಸ ಮಾಡಿದ್ದನ್ನು ನೋಡಿ ನನಗೂ ಹಾಗೂ ಚಾಂದಾಪಾಷಾ ತಂದೆ ರೇಮತ್ ಉಲ್ಲಾ ಸಾಹು ಇವರಿಗೂ ಅಕ್ರಮ ಸಂಬಂದ ಇರುತ್ತದೆ. ಚಾಂದಾಪಾಷಾ ಇವನಿಂದ ನನಗೆ ಗರ್ಭಪಾತ ಆಗಿರುತ್ತದೆ. ಅದಕ್ಕೆ ಚಾಂದಾಪಾಷಾ ಈತನು ಹತ್ತು ಲಕ್ಷ (10,00,000/) ರೂ ಕೊಟ್ಟು ಬಿಡುಗಡೆ ಮಾಡಿಕೊಂಡು, ನನಗೆ ಬೇರೆಯವರಿಗೆ ಮದುವೆ ಮಾಡಿಕೊಡುತ್ತಿದ್ದಾನೆ ಅಂತಾ ನನ್ನ ಮಾನ ಹಾನಿ ಮಾಡುವ ಉದ್ದೇಶದಿಂದ ಮತ್ತು ಚಾಂದಾಪಾಷಾ ತಂದೆ ರೇಮತ್ ಉಲ್ಲಾ ಸಾಹು ಇವರಿಗೆ ಮಾನ ಹಾನಿ ಮಾಡುವ ಉದ್ದೇಶದಿಂದ ಸುಳ್ಳು ಸುದ್ದಿ ಹರಡಿಸಿದ್ದಾನೆ. ಈ ವಿಷಯ ನಮ್ಮ ತಂದೆಯವರಾದ ಚಿರಾಕ್ ಅಲಿ ಇವರಿಗೆ ಗೊತ್ತಾಗಿ ನನಗೆ ಗೋಗಿಗೆ ಬರಲು ಹೇಳಿದ್ದರು, ಅದರಂತೆ ನಾನು ಇಂದು ದಿನಾಂಕ: 07/08/2022 ರಂದು ಬೆಳಿಗ್ಗೆ 10.00 ಎಎಮ್ ಸುಮಾರಿಗೆ ನಮ್ಮ ಗೋಗಿ ಪೇಠ ಗ್ರಾಮಕ್ಕೆ ಬಂದು ನಾನು ಮತ್ತು ನಮ್ಮ ತಂದೆಯವರಾದ ಚಿರಾಕ್ ಅಲಿ ಮಕಾಂದಾರ ಮತ್ತು ಚಾಂದಾಪಾಷಾ ತಂದೆ ರೇಮತ್ ಉಲ್ಲಾ ಸಾಹು ಎಲ್ಲರೂ ಕೂಡಿ ಗೋಗಿ ಪೇಠ ಗ್ರಾಮದ ಹಾಜಿ ಫೀರ ದಗರ್ಾಕ್ಕೆ ಹೋಗಿದ್ದೆವು, ನವಾಬ ಈತನಿಗೆ ಬರಲು ಹೇಳಿದಾಗ, ಅವನು 10.30 ಎಎಮ್ ಸುಮಾರಿಗೆ ಅಲ್ಲಿಗೆ ಬಂದ ನವಾಬ ತಂದೆ ಮಕ್ಸೂದ ಹವಾಲ್ದಾರ ಸಾ:ಗೋಗಿ ಪೇಠ ಮದುವೆ ಆಗುವ ಹೆಣ್ಣು ಮಗಳ ವಿಷಯದಲ್ಲಿ ಯಾಕೆ ಸುಳ್ಳು ಸುದ್ದಿ ಹಬ್ಬಸಿ ಸಂಸಾರ ಹಾಳು ಮಾಡುತ್ತಿದ್ದಿಯಾ? ಅಂತಾ ಕೇಳಿದಾಗ ನವಾಬ ತಂದೆ ಮಕ್ಸೂದ ಹವಾಲ್ದಾರ ಸಾ: ಗೋಗಿ ಪೇಠ ಈತನು ತಾನು ಏನು ಹೇಳಿಲ್ಲಾ ಅಂತಾ ಅಂದನು. ಆಗ ಇಲ್ಲಿಯೇ ಹಾಜಿ ಫೀರ ಮುತ್ಯಾರ ಮುಂದೆ ಹೇಳಿದಿ. ಊರಲ್ಲಿ ಸುದ್ದಿ ಮಾಡಿದಿ ಹಾಜಿ ಮತ್ಯಾ ರವರಿಗೆ ಕೇಳು ಅಂತಾ ಅಂದಾಗ ಹಾಜಿ ಫೀರ ಮುತ್ಯಾ ಅವರು ಕೂಡ ಇನ್ನೊಬ್ಬರು ಹೆಣ್ಣು ಮಕ್ಕಳ ಬಗ್ಗೆ ಯಾಕೆ ? ಹೀಗೆಲ್ಲಾ ಮಾತಾಡುವದು ಮಾನ ಹಾನಿಯಾಗುವಂತ ಕೆಲಸ ಮಾಡಬಾರದು ಅಂತಾ ಅಂದಾಗ, ನವಾಬ ಈತನು ನಾನು ಹೇಳಿನಿ ಅಂತಾ ನಿಮ್ಮ ಹತ್ತಿರ ಪ್ರೂಫ್ ಏನು ಅದ ರಂಡಿ ಮಕ್ಕಳ್ಯಾ ಅಂತಾ ಬೈಯತೊಡಗಿದನು. ಆಗ ನಾನು ಮಾಡುವದೆಲ್ಲಾ ಮಾಡಿ ಈಗ ನಾಟಕ ಮಾಡುತ್ತೇನಲೆ ಅಂದಾಗ ನವಾಬ ಈತನು ಎಲೇ ಬೊಸಡಿ ನೀನು ನನಗೆ ಎದರು ಮಾತಾಡುವಷ್ಟು ಬೆಳದಿ ಏನು? ನಾನು ಏನು ಅಂತಾ ಊರಲ್ಲಿ ಕೇಳು, ನನ್ನ ಹೆಸರು ಕೇಳಿದರೆ ಊರೇ ನಡುಗುತ್ತದೆ, ಸೂಳಿ ಅಂತಾ ಅವಾಚ್ಯವಾಗಿ ಬೈಯ್ದು, ನನ್ನ ಕೈಹಿಡಿದು ಎಳೆದು ಕೈಯಿಂದ ಬೆನ್ನಿಗೆ ಹೊಡೆದು ಕಾಲಿನಿಂದ ನನ್ನ ಹೊಟ್ಟಗೆ ಒದ್ದಿರುತ್ತಾನೆ. ಆಗ ನಮ್ಮ ತಂದೆಯವರು ಬಿಡಿಸಿಕೊಳ್ಳಲು ಬಂದಾಗ ಮಗನೆ ನನಗೆ ಪಂಚಾಯಿತಿ ಕರೀತಿ, ರಂಡಿ ಮಗನೆ, ನಿನಗೆ ಇವತ್ತು ಖಲಾಸ್ ಮಾಡುತ್ತೇನೆ ಅಂತಾ ಅನ್ನುತ್ತಲೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಹತ್ತಿರ ಇಟ್ಟುಕೊಂಡಿದ ಒಂದು ಚಾಕುವನ್ನು ಹೊರತೆಗೆದು ನನ್ನ ತಂದೆಯವರ ಕುತ್ತಗೆಗೆ ಹೊಡೆಯಲು ಹೋದಾಗ ನಮ್ಮ ತಂದೆಯವರು ತಪ್ಪಿಸಿಕೊಂಡಿದ್ದರಿಂದ ಚಾಕುವಿನ ಏಟು ನಮ್ಮ ತಂದೆಯವರ ತೆಲೆಯ ಎಡಭಾಗದಲ್ಲಿ ಬಿದ್ದಿರುತ್ತದೆ. ಆಗ ಮಗನೆ ನೀನು ಸಾಯಿಲೇಬೇಕು ಅಂತಾ ಚಾಕುವಿನಿಂದ ಬಲವಾಗಿ ಎದೆಗೆ ಹೊಡೆಯಲು ಹೊದಾಗ ನಮ್ಮ ತಂದೆಯವರು ನವಾಬನ ಕೈಗೆ ತನ್ನ ಕೈ ಅಡ್ಡ ತಂದಿದ್ದರಿಂದ ಚಾಕುವಿನ ಏಟು ನಮ್ಮ ತಂದೆಯವರ ಹೊಟ್ಟೆಗೆ ಬಿದ್ದು ರಕ್ತಗಾಯ ಆಗಿರುತ್ತದೆ. ಅಷ್ಟರಲ್ಲಿ ಬಿಡಿಸಿಕೊಳ್ಳುತ್ತಿದ್ದ ಚಾಂದಾಪಾಷಾ ಮತ್ತು ಹಾಜೀಪೀರ ಮುತ್ಯಾರಿಗೂ ಬೈಯ್ದು, ಮಕ್ಕಳೇ ಇನ್ನೊಮ್ಮೆ ಸಿಗರಿ ನಿಮಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಭಯ ಹಾಕಿ ಅಲ್ಲಿಂದ ಓಡಿ ಹೋಗಿರುತ್ತಾನೆ. ನನಗೆ ಬೇರೊಬ್ಬರ ಜೊತೆಯಲ್ಲಿ ಸಂಬಂಧ ಇರುತ್ತದೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿ, ನನ್ನ ಮಾನ ಹಾನಿ ಮಾಡುತ್ತಾ ಇದ್ದಾಗ ನಾನು ಮತ್ತು ನಮ್ಮ ತಂದೆಯವರು ಹಿಗೇಕೆ ಮಾಡುತಿದ್ದೀಯಾ ಅಂತಾ ಕೇಳಲು ಹೋದಾಗ, ನವಾಬ ತಂದೆ ಮಕ್ಸೂದ ಹವಾಲ್ದಾರ ಸಾ: ಗೋಗಿ ಪೇಠ ಈತನು ನನಗೆ ಕೈಹಿಡಿದು ಎಳೆದಾಡಿ, ಕೈಯಿಂದ ಹೊಡೆದು, ಕಾಲಿನಿಂದ ನನ್ನ ಹೊಟ್ಟೆಗೆ ಒದ್ದು, ಅವಾಚ್ಯವಾಗಿ ಬೈಯ್ದಿದ್ದು, ಬಿಡಿಸಿಕೊಳ್ಳಲು ಬಂದ ನಮ್ಮ ತಂದೆಯವರಿಗೆ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಡೆದು ಕೊಲೆಮಾಡಲು ಪ್ರಯತ್ನಿಸಿ, ಜೀವದ ಭಯ ಹಾಕಿದವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ನನಗೆ ಗುಪ್ತ ಪೆಟ್ಟಾಗಿದ್ದರಿಂದ ಮತ್ತು ನಮ್ಮ ತಂದೆಯವರಿಗೆ ತೆಲೆಗೆ ಮತ್ತು ಹೊಟೆಗೆ ರಕ್ತಗಾಯವಾಗಿದ್ದರಿಂದ ಮೊದಲು ಶಹಾಪೂರ ಸರಕಾರಿ ಆಸ್ಪತ್ರೆಗೆಯಲ್ಲಿ ಉಪಚಾರ ಪಡೆದು ತಡವಾಗಿ ಇಂದು ದಿನಾಂಕ:07/08/2022 ರಂದು 09.30 ಪಿಎಮ್ ಕ್ಕೆ ಠಾಣೆಗೆ ಬಂದು ಅಜರ್ಿ ನೀಡಿರುತ್ತೇನೆ. ನನ್ನ ತಂದೆಯವರು ಉಪಚಾರ ಪಡೆಯುತ್ತಿದ್ದಾರೆ ಕಾರಣ ನನ್ನ ಅಜರ್ಿಯನ್ನು ಸ್ವೀಕರಿಸಿ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಅಜರ್ಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 56/2022 ಕಲಂ: 323, 324, 354, 307, 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.