ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-09-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 133/2022 ಕಲಂ. 279, 337, 338, 304(ಎ) ಐಪಿಸಿ ಮತ್ತು 187 ಐ.ಎಮ್.ವಿ.ಆಕ್ಟ್ : ಇಂದು ದಿನಾಂಕ:07-09-2022 ರಂದು ಬೆಳಗ್ಗೆ 09:00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರಿನ ಮಲ್ಲಪ್ಪ ತಂದೆ ಸಾಬಣ್ಣ ದಂಡೊತಿ, ಬಸವರಾಜ ತಂದೆ ಮೋನಪ್ಪ ಬಡಿಗೇರ, ಮಲ್ಲಪ್ಪ ತಂದೆ ಅಯ್ಯಪ್ಪ ಕರದಳ್ಳಿ ಎಲ್ಲರು ಕೂಡಿಕೊಂಡು ನಮ್ಮೂರಿನ ಅಂಬ್ರಿಶ ತಂದೆ ದೇವಿಂದ್ರಪ್ಪ ಸುಣಗಾರ ಇತನ ಟಾಟಾ ಏಸ್ ನಂ.ಕೆ.ಎ-32 ಬಿ-4158 ನೆದ್ದರಲ್ಲಿ ನಾವು ಬೆಳೆದಂತ ಹೆಸರು ಮಾಲನ್ನು ಲೊಡ್ ಮಾಡಿಕೊಂಡು ಯಾದಗಿರಿ ಗಂಜ ಮಾಕರ್ೆಟ್ನಲ್ಲಿ ಮಾರಾಟ ಮಾಡಿಕೊಂಡು ಹೋಗಲು ಬಂದಿದ್ದೆವು. ನಾವು ತಂದಿದ್ದ ಹೆಸರು ಮಾಲನ್ನು ಮಾರಿ ಎಲ್ಲರು ಸೇರಿಕೊಂಡು ಸಾಯಂಕಾಲ 7:30 ಗಂಟೆಯ ಸುಮಾರಿಗೆ ಯಾದಗಿರಿಯಿಂದ ಕೊಡ್ಲಾಕ್ಕೆ ಸೇಡಂ ರಸ್ತೆಯ ಮುಖಾಂತರ ನಾವು ತೆಗೆದುಕೊಂಡು ಬಂದ ಟಾಟಾ ಏಸ್ನಲ್ಲಿ ಹೋರಟಿದ್ದೆವು, ನಾವು ಸೇಡಂ ರಸ್ತೆಯ ಮಾರ್ಗವಾಗಿ ಹೋಗುವಾಗ ಹತ್ತಿಕುಣಿ ಗ್ರಾಮ ದಾಟಿ ಮುಂದೆ ವಿದ್ಯಾಥರ್ಿ ಹಾಸ್ಟೆಲ್ ಹತ್ತಿರ ಹೋಗುತ್ತಿರುವಾಗ ರಾತ್ರಿ 8:00 ಗಂಟೆಗೆ ನಮ್ಮ ಎದುರಗಡೆಯಿಂದ ಒಂದು ಲಾರಿ ಚಾಲಕನು ತಾನು ಚಲಾಯಿಸಿಕೊಂಡು ಬರುವ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಹೋಗುತ್ತಿರುವ ಟಾಟಾ ಏಸ್ ವಾಹನಕ್ಕೆ ರಭಸವಾಗಿ ಡಿಕ್ಕಿ ಪಡಿಸಿ ಅಪಘಾತಗೊಳಿಸಿ ಪರಿಣಾಮವಾಗಿ ಟಾಟಾ ಏಸ್ನಲ್ಲಿ ಪ್ರಯಾಣಿಸುತ್ತಿರು ನಾವುಗಳು ಸದರಿ ಅಪಘಾತದಿಂದ ರಸ್ತೆ ಮೇಲೆ ಪುಟಿದು ಬಿದ್ದೆವು, ಅಪಘಾತದಲ್ಲಿ ನನಗೆ ತಲೆಯ ಬಲಬಾಗಕ್ಕೆ ಭಾರಿ ರಕ್ತಗಾಯ, ಟೊಂಕ ಮತ್ತು ಮುಂಡಿಗೆ ಬಾರಿ ಗುಪ್ತಗಾಯವಾಗಿರುತ್ತವೆ, ಬಸವರಾಜ ತಂದೆ ಮೋನಪ್ಪ ಬಡಿಗೇರ ಇತನಿಗೆ ಗದ್ದದ ಹತ್ತಿರ ರಕ್ತಗಾಯ ಮತ್ತು ಬುಜಕ್ಕೆ ಗುಪ್ತಗಾಯವಾಗಿದ್ದು, ನಾವಿಬ್ಬರು ಕೂಡಿಕೊಂಡು ಭಾರಿ ರಕ್ತ ಗಾಯವಾಗಿ ಬಿದ್ದಿದ್ದ ಮಲ್ಲಪ್ಪ ತಂದೆ ಸಾಬಣ್ಣ ದಂಡೊತಿ ಇತನಿಗೆ ನೋಡಲಾಗಿ ತಲೆಯ ಹಿಂಬಾಗದಲ್ಲಿ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಗೊತ್ತಾಯಿತು, ಟಾಟಾ ಏಸ್ ಚಾಲಕ ಅಂಬ್ರಿಶನಿಗೆ ನೋಡಲಾಗಿ ಬಲಗಾಲಿನ ಮೊಣಕಾಲು ಮುರಿದು ಟೊಂಕಕ್ಕೆ ಗುಪ್ತಗಾಯಗಳಾಗಿದ್ದವ, ಮೊಣಕಾಲಿಗೆ ಗುಪ್ತಗಾಯವಾಗಿದ್ದವು, ಹಾಗೂ ಮಲ್ಲಪ್ಪ ತಂದೆ ಅಯ್ಯಪ್ಪ ಕರದಳ್ಳಿ ನೋಡಲಾಗಿ ಬೆನ್ನಿಗೆ ಮತ್ತು ಟೊಂಕಕ್ಕೆ ಭಾರಿ ಗುಪ್ತಗಾಯವಾಗಿದ್ದು, ನಮಗೆ ಡಿಕ್ಕಿಪಡಿಸಿದ ವಾಹನದ ನಂಬರ ನೋಡಲಾಗಿ ನಂ.ಕೆಎ-32.ಡಿ-3222.ಲಾರಿ ಅಂತಾ ಗೊತ್ತಾಗಿದ್ದು ಅದರ ಚಾಲಕನು ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಗೊತ್ತಾಯಿತು. ನಾನು ಮತ್ತು ಬಸವರಾಜ ಸೇರಿಕೊಂಡು 108 ಅಂಬುಲೆನ್ಸಗೆ ಕರೆಮಾಡಿದಾಗ ಸ್ತಳಕೆ ಬಂದ ಅಂಬುಲೆನ್ಸ ವಾಹನದಲ್ಲಿ ನಾವೇಲ್ಲರು ಕೂಡಿಕೊಂಡು ಮೃತಪಟ್ಟಿದ್ದ ಮಲ್ಲಪ್ಪ ತಂದೆ ಸಾಬಣ್ಣ ದಂಡೋತಿ ಇತನಿಗೆ ಹಾಕಿಕೊಂಡು ಎಲ್ಲರು ಅದೇ ಅಂಬುಲೆನ್ಸ್ನಲ್ಲಿ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆವೆ. ಅಂತ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:133/2022 ಕಲಂ:279, 337,338, 304(ಎ) ಐ.ಪಿ.ಸಿ.& 187 ಐ.ಎಮ್.ವಿ.ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಅಂತಾ ವಿನಂತಿ.

ಇತ್ತೀಚಿನ ನವೀಕರಣ​ : 08-09-2022 11:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080