ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-10-2021

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 147/2021 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 07.10.2021 ರಂದು 17.00 ಗಂಟೆಗೆ ಮಾನ್ಯ ಗಜಾನಂದ ಪಿ ಎಸ್ ಐ (ಕಾ.ಸು) ಸಾಹೇಬರು ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನವೇನೆಂದರೆ, ಇಂದು ದಿನಾಂಕ 07.10.2021 ರಂದು 11.30 ಗಂಟೆಗೆ ಠಾಣೆಯಲ್ಲಿದ್ದಾಗ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಏವೂರ ಗ್ರಾಮದ ಬಸವಣ್ಣನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಭಾತ್ಮೀ ಬಂದಿದ್ದು, ಸದರಿ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿ ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರರವರಲ್ಲಿ ಅನುಮತಿ ಕೊಡುವ ಕುರಿತು ಪತ್ರ ಬರೆದು ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 17:00 ಗಂಟೆಗೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತ ಕೊಟ್ಟ ಜ್ಞಾಪನ ಪತ್ರದಂತೆ ಠಾಣಾ ಗುನ್ನೆ ನಂಬರ 147/2021 ಕಲಂ 78[3] ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 124/2021 ಕಲಂ: ಹೆಣ್ಣುಮಗಳು ಕಾಣೆಯಾದ ಬಗ್ಗೆ : ದಿನಾಂಕ: 07/10/2021 ರಂದು 12-45 ಪಿಎಮ್ ಕ್ಕೆ ಶ್ರೀ ಸಾಬಣ್ಣ ತಂದೆ ಮಲ್ಲಪ್ಪ ಹಿರೆನೂರು, ವ:50, ಜಾ:ಮಾದಿಗ, ಉ:ಒಕ್ಕಲುತನ ಸಾ:ತಡಿಬಿಡಿ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ಕೊಟ್ಟಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿದ್ದು, ನಮ್ಮ ತಂದೆ-ತಾಯಿಗೆ ನಾನು ಮತ್ತು ನಮ್ಮಣ್ಣ ಬಸಪ್ಪ ಮತ್ತು ತಮ್ಮಂದಿರಾದ ನಿಂಗಪ್ಪ, ಮರೆಪ್ಪ ಹೀಗೆ ಒಟ್ಟು ನಾಲ್ಕು ಜನ ಮಕ್ಕಳಿರುತ್ತೇವೆ. ನಾವು ಎಲ್ಲರೂ ಬೇರೆ ಬೇರೆಯಾಗಿರುತ್ತೇವೆ. ನಮ್ಮಣ್ಣ ಬಸಪ್ಪನು ತನ್ನ ಹೆಂಡತಿ ಮಗೆಮ್ಮ ಮತ್ತು ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ಸದರಿ ನಮ್ಮಣ್ಣ ಬಸಪ್ಪನಿಗೆ ಮೂರು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಪರಶುರಾಮ ಅಂತಾ ಇರುತ್ತಾನೆ. ಸದರಿ ಪರಶುರಾಮನು ಸುಮಾರು 7-8 ತಿಂಗಳ ಹಿಂದೆ ತನ್ನ ಹೆಂಡತಿ ಮಕ್ಕಳೊಂದಿಗೆ ಬೆಂಗಳೂರಿಗೆ ದುಡಿಯಲು ಹೋಗಿರುತ್ತಾನೆ. ನಮ್ಮಣ್ಣನು ಮೂರು ಜನ ಹೆಣ್ಣು ಮಕ್ಕಳಿಗೆ ಲಗ್ನ ಮಾಡಿಕೊಟ್ಟಿರುತ್ತಾನೆ. ಇತ್ತ ಮನೆಯಲ್ಲಿ ನಮ್ಮಣ್ಣ ಬಸಪ್ಪ ಮತ್ತು ಅವನ ಹೆಂಡತಿ ಮಗೆಮ್ಮ ಇಬ್ಬರೂ ವಾಸವಾಗಿರುತ್ತಾರೆ. ನಮ್ಮಣ್ಣ ಬಸಪ್ಪನ ಕಿರಿ ಮಗಳಾದ ಗೌರಮ್ಮ ಇವಳು ತಡಿಬಿಡಿ ಗ್ರಾಮದಲ್ಲಿ ತಿಮ್ಮಣ್ಣ ಎಂಬುವನಿಗೆ ಮದುವೆ ಮಾಡಿಕೊಂಡಿರುತ್ತಾಳೆ. ದಿನಾಂಕ:28/09/2021 ರಂದು ನಮ್ಮ ಅತ್ತಿಗೆ ಮಗ್ಗೆಮ್ಮ ಇವಳು ತನ್ನ ಮಗಳಾದ ಗೌರಮ್ಮ ಮತ್ತು ಅಳಿಯ ತಿಮ್ಮಣ್ಣ ಇವರ ಮಧ್ಯ ಮನಸ್ತಾಪ ಆಗಿದ್ದು, ಹಿರಿಯರ ಸಮಕ್ಷಮ ಮಾತುಕತೆ ಆಡುವುದಿದೆ ಯಾದಗಿರಿಗೆ ಬಾ ಎಂದು ಕರೆದಿರುತ್ತಾರೆ ಎಂದು ಬೆಳಗ್ಗೆ 11:00 ಗಂಟೆ ಸುಮಾರಿಗೆ ಮನೆಯಲ್ಲಿ ನಮಗೆ ಹೇಳಿ ಮಗೆಮ್ಮ ಯಾದಗಿರಿಗೆ ಹೋದಳು. ಸಾಯಂಕಾಲ ಆದರೂ ಮರಳಿ ಮನೆಗೆ ಬರಲಿಲ್ಲ. ಆಗ ನಾನು ಮತ್ತು ನಮ್ಮಣ್ಣ ಬಸಪ್ಪ ಇಬ್ಬರೂ ಊರಲ್ಲಿ ಎಲ್ಲಾ ಕಡೆ ತಿರುಗಾಡಿ ಹುಡುಕಾಡಿ, ನಂತರ ತಿಮ್ಮಣ್ಣನ ಮನೆಗೆ ಹೋಗಿ ನಮ್ಮ ಮಗಳು ಗೌರಮ್ಮ ಇವಳಿಗೆ ನಿಮ್ಮ ತಾಯಿ ಮಗೆಮ್ಮ ಯಾದಗಿರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಮರಳಿ ಮನೆಗೆ ಬಂದಿಲ್ಲ ಎಂದು ಕೇಳಿದೇವು. ಆಗ ಗೌರಮ್ಮ ನಮ್ಮ ತಾಯಿ ಯಾದಗಿರಿಗೆ ಬಂದು ಮದ್ಯಾಹ್ನದ ವರೆಗೆ ನಮ್ಮ ಗಂಡ-ಹೆಂಡತಿ ಮನಸ್ತಾಪದ ಮಾತುಕತೆ ಆದ ನಂತರ ಮರಳಿ ಊರಿಗೆ ಹೋಗುತ್ತೇನೆ ಅಂತಾ ಅಂದಾಗ ಎಲ್ಲರೂ ಕೂಡಿ ಹೋಗೊಣ ಎಂದು ಹೇಳಿದೇವು. ಆದರೂ ಅವಳು ಇಲ್ಲ ನೀವು ಬನ್ನಿ ನಾನು ಹೋಗುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗಿರುತ್ತಾಳೆ ಎಂದು ಹೇಳಿದಳು. ನಂತರ ನಾನು ಮತ್ತು ನಮ್ಮಣ್ಣ ಬಸಪ್ಪ ಇಬ್ಬರೂ ಸಾವೂರು, ಯಾದಗಿರಿ, ಶಾಂಪೂರಹಳ್ಳಿ, ಖಾನಾಪೂರ, ಹಾಲಗೇರಾ ಮುಂತಾದ ಕಡೆ ಹುಡುಕಾಡಿದೇವು. ಆದರೆ ಎಲ್ಲಿಯೂ ನಮ್ಮ ಅತ್ತಿಗೆ ಮಗೆಮ್ಮ ಸಿಕ್ಕಿರುವುದಿಲ್ಲ. ಮನೆಯಿಂದ ಹೋಗುವಾಗ ಮೈಮೇಲೆ ಹಸಿರು ಬಣ್ಣದ ಸೀರೆ ಮತ್ತು ನೀಲಿ ಬಣ್ಣದ ಕುಪ್ಪಸ ಧರಿಸಿರುತ್ತಾಳೆ. ಚಹರೆಪಟ್ಟಿ ಎತ್ತರ 4'-7''ಫಿಟ್, ಸಾದಾರಣ ಮೈಕಟ್ಟು, ಸಾದಾಗಪ್ಪು ಬಣ್ಣ, ದಪ್ಪನೆ ಮೂಗು ಇರುತ್ತದೆ. ನಮ್ಮ ಅತ್ತಿಗೆ ಮಗೆಮ್ಮ ಇವಳು ತಡಿಬಿಡಿ ಗ್ರಾಮದಿಂದ ಯಾದಗಿರಿಗೆ ಕೆಲಸದ ಪ್ರಯುಕ್ತ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ. ಕಾರಣ ಕಾಣೆಯಾದ ನಮ್ಮ ಅತ್ತಿಗೆ ಮಗೆಮ್ಮ ಇವಳನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರು ಅಜರ್ಿ ನಿಜವಿರುತ್ತದೆ. ನಮ್ಮಣ್ಣ ಬಸಪ್ಪನಿಗೆ ಆರೊಗ್ಯದಲ್ಲಿ ಏರುಪೇರಾಗಿದ್ದರಿಂದ ಶಹಾಪೂರ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳುತ್ತಿರುವುದರಿಂದ ನಾನು ಠಾಣೆಗೆ ಬಂದು ದೂರು ಕೊಡುತ್ತಿದ್ದೆನೆ. ನಮ್ಮ ಅತ್ತಿಗೆ ಮಗೆಮ್ಮ ಇವಳಿಗೆ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 124/2021 ಕಲಂ: ಹೆಣ್ಣು ಮಗಳು ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 155/2021 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 07-10-2021 ರಂದು ರಾತ್ರಿ 07-35 ಗಂಟೆಗೆ ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ಬೊಮ್ಮರಾಲದೊಡ್ಡಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 730=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.155/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 134/2021 ಕಲಂ 379 ಐ.ಪಿ.ಸಿ : ಇಂದು ದಿನಾಂಕ: 07/10/2021 ರಂದು 05.00 ಪಿ.ಎಮ್ ಕ್ಕೆ ಶ್ರೀ ಸುರೇಶಕುಮಾರ ಪಿ.ಎಸ್.ಐ(ಕಾಸು) ಯಾದಗಿರಿ ಗ್ರಾಮೀಣ ಠಾಣೆರವರು ಒಂದು ಉಸುಕು ತುಂಬಿದ ಟ್ರ್ಯಾಕ್ಟರನ್ನು ತಮ್ಮ ವರದಿಯೊಂದಿಗೆ ಜಪ್ತ ಪಂಚನಾಮೆಯನ್ನು ಜಪ್ತಿಪಂಚನಾಮೆ ಸಮೇತ ಠಾಣೆಗೆ ಬಂದು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ ಇಂದು ದಿನಾಂಕ: 07-10-2021 ರಂದು ಮದ್ಯಾಹ್ನ 02-30 ಗಂಟೆಗೆ ನಾನು ಠಾಣಾ ಸರಹದ್ದಿನಲ್ಲಿ ಬರುವ ಪಗಲಾಪೂರ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಹಮ್ಮಿಕೊಂಡು ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಠಾಣೆಗೆ ಬರುವಾಗ ನನಗೆ ಮಾಹಿತಿ ಬಂದಿದ್ದು ಏನಂದರೆ ಜಿನಕೆರಾ ಗ್ರಾಮದ ಕೆರೆಯ ಹತ್ತಿರ ಯಾರೋ ಒಂದು ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಜಿನಕೆರಾ ಕಡೆಯಿಂದ ಯಾದಗಿರಿ ಕಡೆಗೆ ಹೊರಟಿದ್ದಾರೆ ಅಂತಾ ಬಾತ್ಮೀ ಪಡೆದುಕೊಂಡು ನಾನು ಮತ್ತು ಸಂಗಡ ನಮ್ಮ ಠಾಣೆಯ ಶ್ರೀ ಭೀಮರಾಯ ಪಿಸಿ-33 ಮತ್ತು ಶ್ರೀ ಮೋನಪ್ಪ ಪಿಸಿ-263 ರವರನ್ನು ಕರೆದುಕೊಂಡು ಎಲ್ಲರೂ ಸೇರಿಕೊಂಡು ಸದರಿ ಸ್ಥಳಕ್ಕೆ ಸ್ವಲ್ಪ ದೂರದಲ್ಲಿ ಕಂಟಿಮರಿಯಲ್ಲಿ ನಿಂತು ನೋಡಲಾಗಿ ಯಾರೋ ಒಂದು ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಜಿನಕೆರಾ ಕಡೆಯಿಂದ ಯಾದಗಿರಿ ಕಡೆಗೆ ಹೊಗುತ್ತಿದ್ದನ್ನು ನೋಡಿ ನಾವು ಕೈ ಸನ್ನೆ ಮಾಡಿ ನಿಲ್ಲಿಸಿದೆವು. ನಂತರ ಅದರಲ್ಲಿದ್ದ ಚಾಲಕನಿಗೆ ಅವನ ಹೆಸರು ವಿಳಾಸ ವಿಚಾರಿಸಬೆಕ್ಕನ್ನುವಷ್ಟರಲ್ಲಿ ಚಾಲಕನು ಇಳಿದು ಓಡಿಹೊಗಿದ್ದು ಇರುತ್ತದೆ ನಂತರ ಪೊಲೀಸ ಬಾತ್ಮಿದಾರರಿಂದ ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಆತನ ಹೆಸರು ಭೀಮು@ಭೀಮರೆಡ್ಡಿ ತಂದೆ ಸೊಮಣ್ಣ ಉಪ್ಪಾರ ಸಾ:ಶೆಟ್ಟಿಗೇರಾ.ಅಂತಾ ತಿಳಿದು ಬಂದಿದ್ದು ಅದೆ. ಸದರಿ ವ್ಯಕ್ತಿಯು ಜಿನಕೆರಾ ಹಳ್ಳದಿಂದ ಮರಳನ್ನು ತುಂಬಿಕೊಂಡು ಯಾದಗಿರಿ ಕಡೆಗೆ ಹೋರಟಿರುವುದಾಗಿ ತಿಳೀದು ಬಂದಿದ್ದು ಇರುತ್ತದೆ. ಮತ್ತು ಮರಳು ತುಂಬಿದ್ದ ಬಗ್ಗೆ ಯಾವುದೇ ಪರವಾನಿಗೆ ರಾಯಲ್ಟಿ ಇರುವದಿಲ್ಲ ಈ ಮರಳು ಕಳ್ಳತನ ಮಾಡಿ ತುಂಬಿಕೊಂಡು ಹೋಗುತ್ತಿರುವುದು ಕಂಡು ಬಂದಿರುತ್ತದೆ. ಸದರಿಯವನು ಸಕರ್ಾರಕ್ಕೆ ರಾಯಲ್ಟಿ ಕಟ್ಟದೇ ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಸಾಗಿಸುತ್ತಿದ್ದ ಬಗ್ಗೆ ದೃಡಪಟ್ಟಿದ್ದರಿಂದ ಸ್ಥಳಕ್ಕೆ ಇಬ್ಬರು ಪಂಚರಾದ 1) ಶ್ರೀ ರೆಡ್ಡಿ ತಂದೆ ಬಲರಾಮ ರಾಠೊಡ ವಯಾ:32 ಸಾ: ಚಾಮನಳ್ಳಿ ತಾಂಡ ಮತ್ತು 2) ಶ್ರೀ ಶ್ರೀ ರವಿ ತಂದೆ ಚಂದ್ರಕಾಂತ ಮೆದಾ ವಯಾ:28 ಸಾ: ಮೈಲಾಪೂರ ಬೇಸ್ ಯಾದಗಿರಿ ರವರನ್ನು ಬರಮಾಡಿಕೊಂಡು ಅವರ ಸಮಕ್ಷಮ ಸದರಿ ಟ್ರ್ಯಾಕ್ಟರ್ ಪರಿಶೀಲಿಸಿ ನೋಡಲಾಗಿ ಅದರ ನಂಬರ ಕೆ.ಎ-33/ಟಿಎ-2040.ಟ್ರ್ಯಾಲಿ ನಂ.ಕೆ.ಎ.33/ಟಿ-2064. ಚೆಸ್ಸಿ.ನಂ.ಎಮ್.ಎಫ್241ಡಿಐ71874.ಎಂಜಿನ್ ನಂ.ಎಸ್.325ಐಡಿ8090.ಅಂತಾ ಇದ್ದು ಅದರಲ್ಲಿ ಮರಳು ತುಂಬಿದ್ದು ಟ್ರ್ಯಾಕ್ಟರನಲ್ಲಿ ಅಂದಾಜು ಒಂದು ಬ್ರಾಸ್ದಷ್ಟು ಮರಳು ಇದ್ದು ಇದರ ಅಂದಾಜು ಕಿಮ್ಮತ್ತು ಅ.ಕಿ.2,000 ರೂಪಾಯಿ ಆಗುತ್ತದೆ. ಸದರಿ ಟ್ರ್ಯಾಕ್ಟರ್ ಮರಳು ಸಮೇತ ಜಪ್ತಿ ಮಾಡಿಕೊಂಡಿದ್ದು ಸದರ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ: 07-10-2021 ರಂದು 3-30 ಪಿ.ಎಮ್ ದಿಂದ 4-30 ಪಿ.ಎಮ್ ದವರೆಗೆ ಮಾಡಿ ನಂತರ ಸದರಿ ಮರಳು ತುಂಬಿದ ಟ್ರ್ಯಾಕ್ಟರ್ನೊಂದಿಗೆ ಇಂದು ದಿನಾಂಕ: 07-10-2021 ರಂದು ಸಾಯಂಕಾಲ 5-00 ಪಿ.ಎಮ್ ಕ್ಕೆ ಯಾದಗಿರಿ ಗ್ರಾಮೀಣ ಠಾಣೆಗೆ ಬಂದು ವರದಿಯನ್ನು ಹಾಜರು ಪಡಿಸಿದ್ದು ಇರುತ್ತದೆ. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 134/2021 ಕಲಂ. 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 08-10-2021 09:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080