ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-10-2022


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 42/2022 ಕಲಂ 279, 304(ಎ) ಐಪಿಸಿ ಸಂ. 187 ಐಎಂವಿ ಆ್ಯಕ್ಟ್: ಇಂದು ದಿನಾಂಕ: 07/10/2022 ರಂದು 02-30 ಪಿ.ಎಮ್.ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಸ್ವೀಕೃತವಾದ ಆರ್,ಟಿ.ಎ ಡೆತ್ ಎಮ್.ಎಲ್.ಸಿ. ಮಾಹಿತಿ ಮೇರೆಗೆ ನಾನು ಆಸ್ಪತ್ರೆಗೆ ಭೇಟಿಕೊಟ್ಟಿದ್ದು, ಅಪಘಾತದಲ್ಲಿ ಮೃತ ಬಾಲಕ ಕಾತರ್ಿಕ್ ಈತನ ಅಜ್ಜನವರಾದ ಪಿಯರ್ಾದಿ ಶ್ರೀ ಪತ್ತು ತಂದೆ ಸೋಮ್ಲಾ ಚವ್ಹಾಣ ವಯ;50 ವರ್ಷ, ಉ;ಒಕ್ಕುಲುತನ, ಜಾ;ಲಂಬಾಣಿ, ಸಾ;ವೆಂಕಟೇಶನಗರ ತಾಂಡ, ತಾ;ಜಿ;ಯಾದಗಿರಿ ಇವರು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಹಾಜರಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸದರಿಯವರ ಹೇಳಿಕೆ ಫಿಯರ್ಾದಿಯನ್ನು ಸಮಯ 02-45 ಪಿ.ಎಮ್. ದಿಂದ 03-45 ಪಿ.ಎಮ್. ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಒಕ್ಕುಲುತನ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನನ್ನ ಅಣ್ಣನ ಮಗನಾದ ಸಂತೋಷ ತಂದೆ ಸಿದ್ರಾಮ ಚವ್ಹಾಣ ಈತನು ತನ್ನ ಮಕ್ಕಳಾದ ಕಾತರ್ಿಕ್ ವಯ;14 ವರ್ಷ ಮತ್ತು ಶೀನ್ಯಾ ವಯ;10 ವರ್ಷ ಇವರಿಬ್ಬರನ್ನು ನನ್ನ ಹತ್ತಿರ ವಿದ್ಯಾಬ್ಯಾಸದ ಸಲುವಾಗಿ ಬಿಟ್ಟು ತಾನು ಮತ್ತು ತನ್ನ ಹೆಂಡತಿ ಕೂಲಿ ಕೆಲಸಕ್ಕಾಗಿ ಬಾಂಬೆಗೆ ಹೋಗಿರುತ್ತಾರೆ. ಕಾತರ್ೀಕ್ ಈತನು ಅಲ್ಲಿಪುರ ಸಕರ್ಾರಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡು ಬಂದಿರುತ್ತಾನೆ. ಹೀಗಿದ್ದು ಇಂದು ದಿನಾಂಕ 07/10/2022 ರಂದು 12-15 ಪಿ.ಎಂ.ಕ್ಕೆ ನನ್ನ ಮೊಮ್ಮಗನಾದ ಕಾತರ್ಿಕ್ ಈತನು ತನಗೆ ಶಾಲೆ ರಜೆ ಕೊಟ್ಟಿದ್ದರಿಂದ ನಮ್ಮ ಹೊಲಕ್ಕೆ ಹೋಗುತ್ತೇನೆ ಅಂತಾ ನನಗೆ ಕೇಳಿದ್ದರಿಂದ ಆಯಿತು ನೀನು ಹೋಗು ನಾನು ಕೂಡ ನಿನ್ನ ಹಿಂದೆ ಹೊಲಕ್ಕೆ ಬರುತ್ತೇನೆ ಎಂದಾಗ ನನ್ನ ಮೊಮ್ಮಗ ಕಾತರ್ಿಕ್ ಈತನು ಮನೆಯಿಂದ ಹೋಗಿರುತ್ತಾನೆ. ಸ್ವಲ್ಪ ಸಮಯದ ನಂತರ ಅಂದರೆ ಸಮಯ 12-45 ಪಿ.ಎಂ.ಕ್ಕೆ ನಾನು ಹೊಲಕ್ಕೆ ಹೊರಟಿದ್ದಾಗ ನಮ್ಮ ವೆಂಕಟೇಶ ನಗರದ ತಾಂಡಾದ ಗೇಟ್ ಹತ್ತಿರ ನಮ್ಮ ತಾಂಡಾದವರು ನಿನ್ನ ಮೊಮ್ಮಗನಿಗೆ ಶಾಂತಿಬಾಯಿ ಇವರ ಹೊಲದ ಹತ್ತಿರ ಮುಖ್ಯ ರಸ್ತೆ ಮೇಲೆ ಅಪಘಾತವಾಗಿದೆ ನೋಡು ಅಲ್ಲಿ ಜನ ಸೇರಿದ್ದಾರೆ ಅಂದಾಗ ನಾನು ಓಡೋಡಿ ಘಟನಾ ಸ್ಥಳಕ್ಕೆ ಬಂದು ನೋಡಲು ಘಟನೆಯ ಸ್ಥಳದಲ್ಲಿ ಹಾಜರಿದ್ದ ನಮ್ಮ ತಾಂಡಾದ ಸೀತಾರಾಮ ತಂದೆ ರೂಪ್ಲಾ ರಾಠೋಡ ಮತ್ತು ಕರಣಕುಮಾರ ತಂದೆ ಮನ್ನು ಚವ್ಹಾಣ ಇವರುಗಳು ನನ್ನ ಮಗನಿಗೆ ನೀರು ಕುಡಿಸುತ್ತಿದ್ದು ಅವರಿಗೆ ವಿಚಾರಿಸಲು ಅವರಲ್ಲಿ ಸೀತಾರಾಮ ಈತನು ನನಗೆ ತಿಳಿಸಿದ್ದೇನೆಂದರೆ ನಮ್ಮ ತಾಂಡಾದಿಂದ ಯಾದಗಿರಿ ಕಡೆ ಇರುವ ನಿಮ್ಮ ಹೊಲಕ್ಕೆ ನಿನ್ನ ಮೊಮ್ಮಗ ಕಾತರ್ಿಕ್ ಈತನು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಮಯ ಅಂದಾಜು 12-30 ಪಿ.ಎಂ.ಕ್ಕೆ ನಾವಿಬ್ಬರು ನಮ್ಮ ತಾಂಡಾದ ಗೇಟ್ ಹತ್ತಿರದ ಚಹಾ ಹೊಟೆಲನ ಹೊರಗೆ ನಿಂತಿದ್ದಾಗ ನಾವಿಬ್ಬರು ನೋಡು ನೋಡುತ್ತಿದ್ದಂತೆ ಒಬ್ಬ ಕಾರ್ ಚಾಲಕನು ವಾಡಿ ರಸ್ತೆ ಕಡೆಯಿಂದ ಯಾದಗಿರಿ ಕಡೆಗೆ ಹೊರಟಿದ್ದ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಿನ್ನ ಮೊಮ್ಮಗ ಕಾತರ್ಿಕ್ ಈತನಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದನು, ಡಿಕ್ಕಿ ಹೊಡೆದ ರಭಸಕ್ಕೆ ನಿನ್ನ ಮೊಮ್ಮಗನು ರಸ್ತೆ ಬದಿಯಲ್ಲಿ ಬೋರಲಾಗಿ ಬಿದ್ದಾಗ ನಾವಿಬ್ಬರು ಓಡೋಡಿ ಹತ್ತಿರ ಬಂದು ನಿನ್ನ ಮೊಮ್ಮಗನಿಗೆ ಎಬ್ಬಿಸಿ ಕೂಡಿಸಿ ನೋಡಲು ಆತನಿಗೆ ಸದರಿ ಅಪಘಾತದಲ್ಲಿ ಹಿಂಭಾಗದ ಸೊಂಟಕ್ಕೆ, ಕುಂಡಿಗೆ, ಬಲಗಾಲಿನ ತೊಡೆಗೆ, ಬಲ ಮೊಣಕೈಗೆ ಭಾರೀ ರಕ್ತಗಾಯ ಹಾಗೂ ಭಾರೀ ಗುಪ್ತಗಾಯಗಳಾಗಿದ್ದು ಮತ್ತು ಮೈಗೆ ಅಲ್ಲಲ್ಲಿ ತರಚಿದ ಗಾಯಗಳು ಆಗಿರುತ್ತವೆ. ಆಗ ಅಪಘಾತಪಡಿಸಿದ ಕಾರ್ ಚಾಲಕನು ತನ್ನ ಕಾರನ್ನು ಘಟನೆಯ ಸ್ಥಳದಿಂದ ಸ್ವಲ್ಪ ದೂರ ಹೋಗಿ ನಿಲ್ಲಿಸಿ ಹಾಗೆಯೇ ಕಾರಿನಿಂದಲೇ ನಾವು ಬರುವುದನ್ನು ನೋಡಿ ಹಾಗೆಯೇ ಮತ್ತೆ ಕಾರನ್ನು ಚಾಲು ಮಾಡಿಕೊಂಡು ಓಡಿ ಹೋಗಿರುತ್ತಾನೆ ಆತನಿಗೆ ಹಾಗೂ ಅಪಘಾತಪಡಿಸಿದ ಕಾರನ್ನು ನಾವು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇವೆ. ಈ ಘಟನೆಯನ್ನು ಕಂಡು ನಮ್ಮ ವೆಂಕಟೇಶ ನಗರದ ಗೇಟ್ ಹತ್ತಿರದ ಹೊಟೆಲನಲ್ಲಿದ್ದ ನಮ್ಮ ತಾಂಡಾದ ಇತರರು ಬಂದು ವಿಚಾರಿಸಿರುತ್ತಾರೆ ಈಗ ನೀವು ಬಂದಿರಿ ಅಂದಾಗ ನನ್ನ ಮೊಮ್ಮಗನು ತನಗೆ ಕಾರ್ ಜೋರಾಗಿ ಡಿಕ್ಕಿ ಹೊಡೆದ ಕಾರಣ ಭಾರೀ ಗಾಯಗಳಾಗಿವೆ ನಾನು ಉಳಿಯುವುದಿಲ್ಲ ಅಂತಾ ತಡಬಡಿಸುತ್ತಿದ್ದನು, ಆಗ ನಾವುಗಳು ಒಂದು ಖಾಸಗಿ ಆಟೋದಲ್ಲಿ ನನ್ನ ಮೊಮ್ಮಗನಿಗೆ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ಸೇರಿಕೆ ಮಾಡಿರುತ್ತೇವೆ. ಆತನಿಗೆ ವೈದ್ಯರು ಪರಿಶೀಲಿಸಿ ನಿಮ್ಮ ಮೊಮ್ಮಗ ಕಾತರ್ಿಕ್ ಈತನಿಗೆ ಅಪಘಾತದಲ್ಲಾದ ಭಾರೀ ಗಾಯಗಳ ಬಾಧೆಯಿಂದ ಮೃತಪಟ್ಟಿರುತ್ತಾನೆ ಅಂತಾ ಸಮಯ 2-15 ಪಿ.ಎಂ.ಕ್ಕೆ ತಿಳಿಸಿರುತ್ತಾರೆ. ನಾನು ಈ ವಿಷಯವನ್ನು ಕಾತರ್ಿಕ್ ತಂದೆಯಾದ ಸಂತೋಷ ಈತನಿಗೆ ಪೋನ್ ಮಾಡಿ ನಡೆದ ಘಟನೆಯ ಬಗ್ಗೆ ವಿವರವಾಗಿ ತಿಳಿಸಿದೆನು ಆಗ ಸಂತೋಷ ಈತನು ತಾನು ಮತ್ತು ತನ್ನ ಹೆಂಡತಿ ಮಾಲಿಬಾಯಿ ಇಬ್ಬರು ಯಾದಗಿರಿಗೆ ಬರುತ್ತಿದ್ದೇವೆ ಈ ಘಟನೆ ಬಗ್ಗೆ ನೀವು ಪೊಲಿಸ್ ಕೇಸು ಮಾಡಿರಿ ಅಂತಾ ತಿಳಿಸಿರುತ್ತಾನೆ. ನಾನು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಹಾಜರಿದ್ದು ಮೃತ ಕಾತರ್ಿಕ್ ಈತನ ಮೃತದೇಹವನ್ನು ಗುತರ್ಿಸಿರುತ್ತೇನೆ. ಹೀಗಿದ್ದು ಇಂದು ದಿನಾಂಕ 07/10/2022 ರಂದು ಸಮಯ 12-30 ಪಿ.ಎಂ.ಕ್ಕೆ ವಾಡಿ-ಯಾದಗಿರಿ ಮುಖ್ಯ ರಸ್ತೆಯ ವೆಂಕಟೇಶನಗರ ತಾಂಡ ಹತ್ತಿರ ಯಾವುದೋ ಒಬ್ಬ ಕಾರ್ ಚಾಲಕನು ತನ್ನ ಕಾರನ್ನು ವಾಡಿ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನನ್ನ ಮೊಮ್ಮಗ ಕಾತರ್ಿಕ್ ಈತನಿಗೆ ಡಿಕ್ಕಿ ಹೊಡೆದಾಗ ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಆತನಿಗೆ ಸೊಂಟಕ್ಕೆ, ಬಲಗಾಲಿನ ತೊಡೆಗೆ, ಭಾರೀ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ, ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ಸದರಿ ಅಪಘಾತದಲ್ಲಾದ ಗಾಯಗಳ ಬಾಧೆಯಿಂದ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತಂದಾಗ ಮೃತಪಟ್ಟಿದ್ದು, ಅಪಘಾತಪಡಿಸಿ ಓಡಿ ಹೋದ ಕಾರ್ ಚಾಲಕನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆ ಪಡೆದುಕೊಂಡು, ಮರಳಿ ಯಾದಗಿರಿ ಸಂಚಾರಿ ಪೊಲೀಸ್ ಠಾಣೆಗೆ 4 ಪಿ.ಎಮ್.ಕ್ಕೆ ಬಂದು ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 42/2022 ಕಲಂ: 279, 304(ಎ) ಐ.ಪಿ.ಸಿ ಸಂ.187 ಐಎಂವಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 149/2022 ಕಲಂ 379 ಐಪಿಸಿ: ದಿನಾಂಕ 07-10-2022 ರಂದು ಮಧ್ಯಾಹ್ನ 12-30 ಗಂಟೆಗೆ ಪಿಯಾದರ್ಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 25-09-2022 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಮೈಲಾಪೂರ ಮಲ್ಲಯ್ಯಗೆ ಹೋಗಬೇಕಂತ ನಾನು ಮತ್ತು ನನ್ನ ಹೆಂಡತಿ ಅನಿತಮ್ಮ ಇಬ್ಬರು ಕೂಡಿ ನನ್ನ ಮೋಟರ ಸೈಕಲ್ ಮೇಲೆ ಯಾದಗಿರಿಯಿಂದ ಮೈಲಾಪೂರಕ್ಕೆ ರಾತ್ರಿ 08-30 ಗಂಟೆ ಸುಮಾರಿಗೆ ಹೋಗಿ ಮೈಲಾಪೂರದಲ್ಲಿ ದೇವರ ದರ್ಶನ ಮಾಡಲು ನಾವು ನಮ್ಮ ಮೋಟರ ಸೈಕಲನ್ನು ದೇವರ ಮುಂದೆ ಮೆಟ್ಟಿಲುಗಳ ಪಕ್ಕದಲ್ಲಿ ಬಿಟ್ಟು ಅಂದು ರಾತ್ರಿ ಅಲ್ಲೆ ವಸತಿ ಮಾಡಲು ಗುಡ್ಡದ ಮೇಲೆ ಇರುವ ದೇವಸ್ತಾನಕ್ಕೆ ಹೋಗಿ ರಾತ್ರಿ ಅಲ್ಲೆ ಗುಡಿಯಲ್ಲಿ ವಸತಿ ಮಾಡಿ ನಂತರ ಬೆಳಿಗ್ಗೆ 06-00 ಗಂಟೆ ಸುಮಾರಿಗೆ ನಾವು ನಮ್ಮೂರಿಗೆ ಬರಬೇಕಂತ ನಾವು ಇಟ್ಟ ಮೋಟರ ಸೈಕಲ್ ಇಟ್ಟ ಜಾಗಕಕೆ ಬಂದು ನೋಡಲಾಗಿ ನಮ್ಮ ಮೋಟರ ಸೈಕಲ್ ಇರಲಿಲ್ಲ ಆಗ ನಾವು ಅಲ್ಲಿ ಸುತ್ತ ಮುತ್ತ ಇವರ ಜನರಿಗೆ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಗಲಿಲ್ಲಾ ಆಗ ನಾವು ಎಲ್ಲಾ ಕಡೆ ನಮ್ಮ ಮೋಟರ ಸೈಕಲಗಾಗಿ ಎಲ್ಲಾ ಕಡೆ ನೋಡಿದೆವು ಎಲ್ಲಿ ಸಿಗಲಿಲ್ಲ, ನಾವು ನಮ್ಮ ಮೋಟರ ಸೈಕಲಗಾಗಿ ಅಲಲ್ಲಿ ಹುಡಕಾಡಿದರು ನಮ್ಮ ಮೋಟರ ಸೈಕಲ್ ಎಲ್ಲಿ ಸಿಗಲಿಲ್ಲ ನಮ್ಮ ಮೋಟರ ಸೈಕಲನ್ನು ಯಾರೋ ಕಳ್ಳರು ದಿನಾಂಕ: 25-09-2022 ರಂದು ರಾತ್ರಿ 08-30 ಗಂಟೆಯಿಂದ ದಿನಾಂಕ: 26-09-2022 ರಂದು ಬೆಳಿಗ್ಗೆ 06-00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಮೋಟರ ಸೈಕಲನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಮೋಟರ ಸೈಕಲ್ ಅಂದಾಜು ಕಿಮ್ಮತ್ತು 30 ಸಾವಿರ ಇರುತ್ತದೆ ಅಂತಾ ಪಿಯರ್ಾಧಿ

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 147/2022 ಕಲಂ: 143,147,504,506 ಸಂ.149 ಐಪಿಸಿ: ಆಸ್ತಿಯ ವಿಷಯದಲ್ಲಿ ಈ ಪ್ರಕರಣದಲ್ಲಿ ಆಪಾದಿತರಾದ ಆಶಮ್ಮ ಗಂಡ ದಿವಂಗತ ಸಾಯಿರೆಡ್ಡಿ ಉಲಿಗುಂಡಂ ಹಾಗೂ ಸಂಗಡ ಇನ್ನೂ 08 ಜನರು ಕೂಡಿ ಒಂದು ಅಕ್ರಮಕೂಟವನ್ನ ಕಟ್ಟಿಕೊಂಡು ಬಂದು ದಿನಾಂಕಃ 05/10/2022 ರಂದು 2.30 ಪಿ.ಎಮ ಕ್ಕೆ ಫಿಯರ್ಾದಿಯೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುವ ಬಗ್ಗೆ ದೂರು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 43/2022 ಕಲಂ 279, 337, 338, ಐ.ಪಿ.ಸಿ: ಇಂದು ದಿನಾಂಕ:07/10/2022 ರಂದು 4 ಪಿ.ಎಮ್.ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಸ್ವೀಕೃತವಾದ ಆರ್,ಟಿ.ಎ ಎಮ್.ಎಲ್.ಸಿ. ಮಾಹಿತಿ ಮೇರೆಗೆ ನಾನು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಭೇಟಿಕೊಟ್ಟಿದ್ದು, ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳ ವಿಚಾರಣೆ ನಂತರ ಗಾಯಾಳು ಪಿಯರ್ಾದಿ ಶ್ರೀ ತಿಪ್ಪಣ್ಣ ತಂದೆ ಹಣಮಂತ ಪಾತಲಿ ವಯ;29 ವರ್ಷ, ಜಾ;ಯಾದವ್, ಉ;ಕೂಲಿ ಕೆಲಸ, ಸಾ;ತಳವರಗೇರಾ, ತಾ;ಸುರಪುರ ಜಿ;ಯಾದಗಿರಿ ಇವರು ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ಫಿಯರ್ಾದಿಯನ್ನು ಸಮಯ 4-45 ಪಿ.ಎಮ್. ದಿಂದ 5-45 ಪಿ.ಎಮ್. ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡಿರುತ್ತೇನೆ. ಇಂದು ದಿನಾಂಕ:07/10/2022 ರಂದು ನಾನು ಮತ್ತು ನನ್ನ ಹೆಂಡತಿ ರೇಣುಕಾ ವಯ;25 ವರ್ಷ, ನನ್ನ ಮಗ ಹರಿಶ್ ವಯ;ಒಂದುವರೆ ವರ್ಷ, ನನ್ನ ತಮ್ಮನಾದ ವೆಂಕಟೇಶ ವಯ;25 ವರ್ಷ, ಆತನ ಹೆಂಡತಿ ದೇವಮ್ಮ ವಯ;21 ವರ್ಷ, ನನ್ನ ತಾಯಿ ದ್ಯಾವಮ್ಮ ವಯ;55 ವರ್ಷ, ನಾವೆಲ್ಲರೂ ಸೇರಿಕೊಂಡು ನಮ್ಮೂರಿನಿಂದ ಆಂದ್ರದ ನಮ್ಮ ಮನೆ ದೇವರು ದರ್ಶನ ಮಾಡುವ ಕುರಿತು ಲೋಕಂಪಲ್ಲಿ ಗ್ರಾಮಕ್ಕೆ ನಮ್ಮ ಸಂಬಂಧಿಕರಾದ ಮಲ್ಲಪ್ಪ ತಂದೆ ತಿಮ್ಮಯ್ಯ ಪಾತಲಿ ಇವರು ನಡೆಸುವ ಬುಲೆರೋ ವಾಹನ ನಂಬರ ಕೆಎ-03, ಎಮ್.ಎಫ್-8128 ನೇದ್ದರಲ್ಲಿ ಹೋಗಿದ್ದೆವು. ಹೀಗಿದ್ದು ನಾವುಗಳು ಲೋಕಂಪಲ್ಲಿ ಗ್ರಾಮಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಮರಳಿ ಅದೇ ಬುಲೆರೋ ವಾಹನದಲ್ಲಿ ಯಾದಗಿರಿಗೆ ಬರುತ್ತಿದ್ದಾಗ ನಾನು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದು, ಮಲ್ಲಪ್ಪನು ವಾಹನವನ್ನು ನಡೆಸಿಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯೆ ಹೈದ್ರಾಬಾದ್ ಯಾದಗಿರಿ ಮುಖ್ಯ ರಸ್ತೆಯ ಮುಂಡರಗಿ ಗ್ರಾಮದ ಹತ್ತಿರದ ಬಾದಲ್ ಕಾಟನ್ ಮಿಲ್ ಹತ್ತಿರ ನಾನು ನೋಡು ನೋಡುತ್ತಿದ್ದಂತೆ ಸಮಯ ಮದ್ಯಾಹ್ನ 2 ಪಿ.ಎಂ.ದ ಗಂಟೆ ಸುಮಾರಿಗೆ ನಮ್ಮ ಎದುರುಗಡೆ ಯಾದಗಿರಿ ಕಡೆಯಿಂದ ರಾಮಸಮುದ್ರದ ಕಡೆಗೆ ಬರುತ್ತಿದ್ದ ಒಂದು ಕೆಕೆಎಸ್ಆರ್ಟಿಸಿ ಸರಕಾರಿ ಬಸ್ ಚಾಲಕನು ತನ್ನ ಬಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ತನ್ನ ಮುಂದೆ ಹೊರಟಿದ್ದ ಒಂದು ವಾಹನವನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಬೇಕೆನ್ನುವಾಗ ಆತನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದಾಗ ನಮ್ಮ ವಾಹನವು ರಸ್ತೆ ಮಗ್ಗುಲಕ್ಕೆ ಹೋಗಿ ಬಿದ್ದಾಗ ಸದರಿ ಅಪಘಾತದಲ್ಲಿ ನನಗೆ ಎಡಗಾಲಿನ ಮೊಣಕಾಲಿಗೆ ರಕ್ತಗಾಯ, ಎಡಭುಜಕ್ಕೆ ಭಾರೀ ಗುಪ್ತಗಾಯವಾಗಿರುತ್ತದೆ. ನಮ್ಮ ವಾಹನದ ಚಾಲಕ ಮಲ್ಲಪ್ಪನಿಗೆ ಕುತ್ತಿಗೆಗೆ ತರಚಿದ ರಕ್ತಗಾಯವಾಗಿರುತ್ತದೆ. ವಾಹನದಲ್ಲಿದ್ದ ನನ್ನ ಹೆಂಡತಿ ರೇಣುಕಾಗೆ ಹಣೆಗೆ ರಕ್ತಗಾಯ, ನನ್ನ ಮಗ ಹರೀಶ್ ಇವನಿಗೆ ಹಣೆಗೆ ರಕ್ತಗಾಯ, ನನ್ನ ತಮ್ಮನ ಹೆಂಡತಿ ದೇವಮ್ಮಳಿಗೆ ಎಡಗೈ ಉಂಗುರ ಬೆರಳಿಗೆ ರಕ್ತಗಾಯ, ಎಡತೊಡೆಗೆ ಗುಪ್ತಗಾಯ, ನನ್ನ ತಾಯಿ ದ್ಯಾವಮ್ಮಳಿಗೆ ಬಲಗೈ ಮುಂಗೈಗೆ ಗುಪ್ತಗಾಯ, ಎಡಗಾಲಿನ ತೊಡೆಗೆ ಗುಪ್ತಗಾಯ ಆಗಿರುತ್ತವೆ. ನನ್ನ ತಮ್ಮ ವೆಂಕಟೇಶನಿಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ನಮಗೆ ಅಪಘಾತಪಡಿಸಿದ ಸಕರ್ಾರಿ ಬಸ್ ನಂಬರ ನೊಡಲಾಗಿ ಕೆಎ-33, ಎಫ್-0148 ನೇದ್ದು ಇದ್ದು, ನಮಗೆ ಅಪಘಾತಪಡಿಸಿದ ಬಸ್ ಚಾಲಕನು ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಜಗದೀಶ ತಂದೆ ಶರಣಯ್ಯ ಹಿರೇಮಠ ಸಾ;ಹುಂಡೆಕಲ್ ಅಂತಾ ತಿಳಿಸಿರುತ್ತಾನೆ. ನಂತರ ನಾವುಗಳು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇವೆ. ಕಾರಣ ಇಂದು ದಿನಾಂಕ 07/10/2022 ರಂದು ಮದ್ಯಾಹ್ನ 2 ಪಿ.ಎಂ.ದ ಸುಮಾರಿಗೆ ಸದರಿ ಅಪಘಾತಕ್ಕೆ ಕಾರಣವಾದ ಕೆಕೆಎಸ್ಆರ್ಟಿಸಿ ಬಸ್ ನಂಬರ ಕೆಎ-33, ಎಫ್-0148 ನೆದ್ದರ ಚಾಲಕ ಜಗದೀಶ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ಯಾದಗಿರಿ ಸಂಚಾರ ಪೊಲೀಸ್ ಠಾಣೆಗೆ 6-15 ಪಿ.ಎಂ.ಕ್ಕೆ ಬಂದು ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 43/2022 ಕಲಂ: 279, 337, 338, ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 109/2022 ಕಲಂ. ಮಹಿಳೆಕಾಣೆ: ಇಂದು ದಿನಾಂಕ; 07/10/2022 ರಂದು 7-30 ಪಿಎಮ್ ಕ್ಕೆ ಪಿರ್ಯಾಧಿ ಶ್ರೀ ಶಾಂತಪ್ಪ ತಂದೆ ಭೀಮರಾಯ ಬೇವಿನಾಳ ವ; 34 ಜಾ; ಮಾದಿಗ ಉ; ಕೂಲಿಕೆಲಸ ಸಾ:ಖಾನಳ್ಳಿ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸದ್ದರ ಸಾರಾಂಶವೆನೆಂದರೆ, ನಾನು ಮತ್ತು ನನ್ನ ಹೆಂಡತಿಯಾದ ಸಂಗೀತಾ ಈ ಮೊದಲು ಶಹಾಪೂರ ತಾಲೂಕಿನ ಗೋಗಿ(ಪಿ) ಗ್ರಾಮದಲ್ಲಿ ವಾಸವಾಗಿದ್ದು ನನ್ನ ಹೆಂಡತಿ ಸಂಗೀತಾ ಇವಳು 4-5 ವರ್ಷಗಳಿಂದ ಮಹಿಳಾ ಸ್ವ ಸಹಾಯ ಸಂಘಗಳಲ್ಲಿ ಓಡಾಡಿಕೊಂಡು ಸಂಘಗಳ ಹಣದ ವ್ಯವಹಾರ ನೋಡಿಕೊಂಡಿದ್ದಳು. ಹಿಗೀದ್ದು ಕಳೆದ 6 ತಿಂಗಳಿಂದ ಗೋಗಿ(ಪೆ) ಗ್ರಾಮದಿಂದ ನಾನು, ನನ್ನ ಹೆಂಡತಿ ಸಂಗೀತಾ ಮತ್ತು ನಮ್ಮ ಮೂರು ಜನ ಮಕ್ಕಳೊಂದಿಗೆ ಯಾದಗಿರಿಗೆ ಬಂದು ಲಾಡೆಜಗಲ್ಲಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತೇವೆ. ನನ್ನ ಹೆಂಡತಿ ಸಂಗೀತಾ ಇವಳು ಯಾದಗಿರಿಯಿಂದ ಸಂಘಗಳ ಕೆಲಸಕ್ಕಾಗಿ ಗೋಗಿ(ಪೆ) ಗ್ರಾಮಕ್ಕೆ ಹೋಗಿ ಬರುತಿದ್ದಳು. ಹಿಗೀದ್ದು ದಿನಾಂಕ 26/09/2022 ರಂದು ಸೋಮವಾರ ಬೆಳಿಗ್ಗೆ 06.30 ಸಮಯಕ್ಕೆ ನಾನು ನನ್ನ ಹೆಂಡತಿ ಸಂಗೀತಾ ಇವಳಿಗೆ ಎಂದಿನಂತೆ ಗೋಗಿ(ಪೆ) ಗ್ರಾಮಕ್ಕೆ ಹೋಗಲು ಯಾದಗಿರಿ ಹಳೆ ಬಸಸ್ಟ್ಯಾಂಡ ಹತ್ತಿರ ಮೋಟಾರ ಸೈಕಲ ಮೇಲೆ ಕರೆದುಕೊಂಡು ಬಂದು ಬಿಟ್ಟು ನಾನು ಮನೆಗೆ ವಾಪಾಸ್ಸು ಹೋಗಿ ನನ್ನ ಹೆಂಡತಿಗೆ ಬಸ ಸಿಕ್ಕಿರುವ ಬಗ್ಗೆ ಅವಳ ಮೊಬೈಲ್ ನಂ.6364096977 ನೇದ್ದಕ್ಕೆ ಫೋನ ಮಾಡಿ ವಿಚಾರಿಸಬೇಕೆಂದು ಫೋನ ಮಾಡಲಾಗಿ ಅವಳ ಮೊಬೈಲ ಸ್ವೀಚ್ಛ ಆಫ್ ಆಗಿತ್ತು. ನಂತರ ಸಾಯಂಕಾಲ ಆದರು ಕೂಡಾ ಮನೆಗೆ ವಾಪಾಸ್ಸು ಬರಲಿಲ್ಲ. ಆಗ ನಾನು ನನ್ನ ಮಕ್ಕಳೊಂದಿಗೆ ಗೋಗಿ(ಪೆ) ಗ್ರಾಮಕ್ಕೆ ಹೋಗಿ ನಮ್ಮ ಅತ್ತೆ ಭೀಮವ್ವ, ಮಾವ ಕಾಳಪ್ಪ ಹಾಗೂ ನನ್ನ ಹೆಂಡತಿ ಅಕ್ಕ ಬಸ್ಸಮ್ಮ ಇವರಿಗೆ ನನ್ನ ಹೆಂಡತಿ ಬಗ್ಗೆ ವಿಚಾರಿಸಲು ಅವರು ಇಲ್ಲಿಗೆ ಬಂದಿರುವುದಿಲ್ಲ ಅಂತಾ ತಿಳಿಸಿದರು. ನಂತರ ಎಲ್ಲರೂ ಕೂಡಿಕೊಂಡು ನನ್ನ ಹೆಂಡತಿಗೆ ಹುಡುಕಾಡಲಾಗಿ ಅಲ್ಲಿ ಎಲ್ಲಿಯೂ ಕಾಣಿಸಲಿಲ್ಲ. ನಂತರ ಮತ್ತೆ ಅವಳ ಮೊಬೈಲಗೆ ಫೋನ ಮಾಡಲಾಗಿ ಮತ್ತೆ ಮತ್ತೆ ಸ್ವಿಚ್ ಆಫ್ ಬಂದಿರುತ್ತದೆ. ನಂತರ ಸುತ್ತಮುತ್ತಲಿನವರಿಗೆ ಮತ್ತು ಬಂಧು ಬಳಗದವರಲ್ಲಿ ನನ್ನ ಹೆಂಡತಿ ಬಗ್ಗೆ ಇಷ್ಟು ದಿವಸಗಳಿಂದ ವಿಚಾರಿಸಿಲಾಗಿ ನನ್ನ ಹೆಂಡತಿ ಸಂಗೀತಾ ಸಿಕ್ಕಿರದೇ ಕಾಣೆ ಯಾಗಿರುತ್ತಾಳೆ. ಕಾಣೆಯಾದ ನನ್ನ ಹೆಂಡತಿ ಚಹರೆ ಪಟ್ಟಿ :- ತೆಳುವಾದ ಮೈಕಟ್ಟು ಗೋದಿ ಕೆಂಪುಬಣ್ಣ ಎತ್ತರ 5 ಪೀಟ್ 4 ಇಂಚು ಎತ್ತರ, ಮೈಮೇಲೆ ಕೆಂಪುಬಣ್ಣದ ಸೀರೆ, ಗುಲಾಬಿ ಬಣ್ಣದ ಕುಪ್ಪಸ ಧರಿಸಿದ್ದು, ಕನ್ನಡ ಮತ್ತು ಹಿಂದಿ, ಅಲ್ಪಸ್ವಲ್ಪ ಇಂಗೀಷ ಭಾಷೆ ಬಲ್ಲವಳಾಗಿರುತ್ತಾಳೆ. ಕಾರಣ ಕಾಣೆಯಾದ ನನ್ನ ಹೆಂಡತಿ ಸಂಗೀತಾ ಗಂಡ ಶಾಂತಪ್ಪ ಬೆವಿನಾಳ ವ;33 ಜಾ; ಮಾದಿಗ ಉ; ಕೂಲಿಕೆಲಸ ಸಾ; ಖಾನಳ್ಳಿ ಹಾ.ವ; ಲಾಡೆಜಗಲ್ಲಿ ಯಾದಗಿರಿ ಇವಳಿಗೆ ಇಲ್ಲಿಯವರೆಗೆ ಹುಡುಕಾಡಲಾಗಿ ಪತ್ತೆಯಾಗಿರದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಾಣೆಯಾದ ನನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 109/2022 ಕಲಂ. ಮನುಷ್ಯಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 153/2022 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 07/10/2022 ರಂದು 8.00 ಪಿಎಂ ಕ್ಕೆ ಶ್ರೀ ಹಣಮಂತ ಪಿ.ಎಸ್.ಐ(ಕಾ.ಸು) ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ಹಣಮಂತ ಪಿ.ಎಸ್.ಐ(ಕಾ.ಸು) ಕೆಂಭಾವಿ ಪೊಲೀಸ್ ಠಾಣೆ ಇದ್ದು ವರದಿ ನೀಡುವುದೇನೆಂದರೆ, ನಾನು ಇಂದು ದಿನಾಂಕ 07/10/2022 ರಂದು 5.40 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಗುತ್ತಿಬಸವಣ್ಣ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು, ನಮ್ಮ ಠಾಣೆಯ ಆನಂದ ಪಿಸಿ 43 ಮತ್ತು ಸೈಯದ್ ಪಿಸಿ 106 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 5.45 ಪಿಎಂ ಕ್ಕೆ ಹೊರಟು ಗುತ್ತಿಬಸವಣ್ಣ ದೇವಸ್ಥಾನದ ಹತ್ತಿರ 6.15 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 6.20 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ಒಬ್ಬ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ 1) ವಾಸುದೇವ ತಂದೆ ಬಸಪ್ಪ ನಾಯ್ಕೊಡಿ ವ|| 32 ಜಾ|| ಕಬ್ಬಲಿಗ ಉ|| ಪೇಟಿಂಗ್ ಸಾ|| ಯಕ್ತಾಪೂರ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ ಒಂದು ಬಾಲ್ ಪೆನ್ನು ಮತ್ತು ನಗದು ಹಣ 1150/- ರೂಪಾಯಿ ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 6.30 ಪಿಎಂ ದಿಂದ 7.30 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 153/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 81/2022 ಕಲಂ 279, 338, 304(?) ಐ.ಪಿ.ಸಿ: ದಿನಾಂಕ:07/10/2022 ರಂದು 9.30 ಪಿ.ಎಮ್. ಸುಮಾರಿಗೆ ಶಖಾಪೂರ ಕ್ರಾಸ್ ಹತ್ತಿರ ಕಲಬುರಗಿ ಮುಖ್ಯ ರಸ್ತೆಯ ಮೇಲೆ ಮೃತ ದೇವಿಂದ್ರಪ್ಪನು ತನ್ನ ಮೋ ಸೈಕಲ್ ನಂ. ಕೆಎ-32 ಎಸ್-8542 ನೇದ್ದನ್ನು ಚಲಾಯಿಸಿಕೊಂಡು ಊರಕಡೆಗೆ ಹೊರಟಾಗ ಅವನ ಮುಂದೆ ಆರೋಪಿ ಉಸ್ಮಾನ್ ಸಾಬ್ ಈತನು ತನ್ನ ಟ್ರ್ಯಾಕ್ಟರ ನಂ.ಕೆ-36 ಟಿ.ಡಿ-4925 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಓಡಿಸಿ ಶಖಾಪೂರ ಕಡೆಗೆ ತಿರುಗಿಸಬೇಕು ಅಂತಾ ಯಾವುದೇ ಸಿಗ್ನಲ್ ಹಾಕದೆ, ಕೈ ಸನ್ನೆ ಮಾಡದೆ ಒಮ್ಮಲೆ ಬ್ರೇಕ್ ಒಡೆದು ನಿದಾನ ಮಾಡಿದಾಗ ಮೃತ ದೇವಿಂದ್ರಪ್ಪನು ಸಹಾ ತನ್ನ ಮೋ. ಸೈಕಲನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ಟ್ರ್ಯಾಕ್ಟರ ಹಿಂಬಾಗಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ದೇವಿಂದ್ರಪ್ಪ ಈತನ ತಲೆಗೆ ಬಾರಿ ಒಳಪೆಟ್ಟಾಗಿ ಪ್ರಗ್ನೆ ತಪ್ಪಿದ್ದು ಟ್ರ್ಯಾಲಿಯ ಹಿಂಬಾಗದಲ್ಲಿ ಪಾಟಾದ ಮೇಲೆ ಕುಳಿತ ಉಮಾದೇವಿ ಇವಳಿಗೆ ಮೋ ಸೈಕಲ್ ಡಿಕ್ಕಿ ಹೊಡೆದಿದ್ದರಿಂದ ಎಡಗಾಲ ಮುರಿದಿದ್ದು ಮೃತನಿಗೆ ಉಪಚಾರ ಕುರಿತು ಜಿಜಿಹೆಚ್ ಶಹಾಪುರ ಕ್ಕೆ ತೆಗೆದುಕೊಂಡು ಹೋದಾಗ 10. ಪಿ.ಎಮ್ ಸುಮಾರಿಗೆ ಮೃತ ಪಟ್ಟಿರುತ್ತಾನೆ ಕಾರಣ ಸರಿ ಘಟನೆಗೆ ಸಂಬಂದಿಸಿದಂತೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ದೂರು ಇರುತ್ತದೆ.

ಇತ್ತೀಚಿನ ನವೀಕರಣ​ : 08-10-2022 11:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080