ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-11-2022

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 125/2022 ಕಲಂ: 379 ಐಪಿಸಿ : ಇಂದು ದಿನಾಂಕ:07/11/2022 ರಂದು 9 ಎಎಮ್ ಕ್ಕೆ ಶ್ರೀ ಮೋನಪ್ಪ ತಂದೆ ನಾಗಪ್ಪ ಹೆಗ್ಗಣಗೇರಾ, ವ:24, ಜಾ:ಮಾದಿಗ, ಉ:ಒಕ್ಕಲುತನ ಸಾ:ಕದರಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿ ಸಲ್ಲಿಸಿದ್ದರ ದೂರು ಅಜರ್ಿಯೇನೆಂದರೆ ನಮ್ಮ ಸಂಬಂಧಿಕ ಮಾವನಾದ ನಿಂಗಪ್ಪ ತಂದೆ ಕೊಟೆಯಪ್ಪ ಕೊಟೆನೋರ ಸಾ:ರೋಟ್ನಡಗಿ ಈತನು ಹಿರೋ ಸ್ಪೆಲಂಡರ್ ಪ್ಲಸ್ ಮೋಟರ್ ಸೈಕಲ್ ನಂ. ಕೆಎ 04 ಜೆಕ್ಯೂ 5592 ನೇದನ್ನು 2018 ನೇ ಸಾಲಿನಲ್ಲಿ ಖರೀದಿ ಮಾಡಿರುತ್ತಾನೆ. ಅದರ ಚೆಸ್ಸಿ ನಂ. ಒಃಐಊಂಖ077ಎಊಆ06474 ಇಂಜನ್ ನಂ. ಊಂ10ಂಉಎಊಆ09118 ಇರುತ್ತದೆ. ಇತ್ತಿಚ್ಚೆಗೆ ಸುಮಾರು ಒಂದು ವರೆ ತಿಂಗಳ ಹಿಂದೆ ನಮ್ಮ ಮಾವನಾದ ನಿಂಗಪ್ಪನು ನನಗೆ ಸಂಸಾರಕ್ಕೆ ಅಡಚಣೆಯಾಗಿದ್ದರಿಂದ ನಾನು ಬೆಂಗಳೂರಿಗೆ ಹೊಟ್ಟೆಪಾಡಿಗೆ ದುಡಿಯಲು ಹೋಗುತ್ತಿದ್ದೇನೆ. ನನ್ನ ಮೋಟರ್ ಸೈಕಲ್ ನೀನು ಖರೀದಿ ತೆಗೆದುಕೊ ನಾನು ಮರಳಿ ಬಂದ ಮೇಲೆ ನಿನ್ನ ಹೆಸರಿನಲ್ಲಿ ಮಾಡಿಸುತ್ತೇನೆ ಎಂದು ಹೇಳಿದ್ದರಿಂದ ಅವನ ಮೋಟರ್ ಸೈಕಲ್ ನಂ. ಕೆಎ 04 ಜೆಕ್ಯೂ 5592 ನೇದನ್ನು 50,000/- ರೂ. ಗೆ ಖರೀದಿ ಮಾಡಿರುತ್ತೇನೆ. ಅಂದಿನಿಂದ ಸದರಿ ಮೋಟರ್ ಸೈಕಲನ್ನು ನಾನು ಚಲಾಯಿಸಿಕೊಂಡಿರುತ್ತೇನೆ. ನಾನು ಹೊಲಮನೆ ಎಲ್ಲಿಯಾದರೂ ಹೊರಗಡೆ ಹೋಗಿ ಬಂದ ನಂತರ ನನ್ನ ಮೋಟರ್ ಸೈಕಲ್ ಅನ್ನು ನಮ್ಮ ಮನೆ ಸಮೀಪ ಇರುವ ನಮ್ಮೂರ ರಂಗಪ್ಪ ತಂದೆ ಬೆಳ್ಳೆಪ್ಪ ಚಿಕ್ಕಬೂದುರು ಈತನ ಮನೆ ಮುಂದೆ ನಿಲ್ಲಿಸಿ ಮನೆಗೆ ಹೋಗುತ್ತೇನೆ. ಎಂದಿನಂತೆ ದಿನಾಂಕ:07/10/2022 ರಂದು ನಾನು ನಮ್ಮ ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ 9 ಗಂಟೆ ಸುಮಾರಿಗೆ ಮರಳಿ ಮನೆಗೆ ಬಂದು ನಮ್ಮ ಮೋಟರ್ ಸೈಕಲನ್ನು ರಂಗಪ್ಪನ ಮನೆ ಮುಂದೆ ನಿಲ್ಲಿಸಿ, ಮನೆಗೆ ಹೋಗಿ ಊಟ ಮಾಡಿ ಮಲಗಿಕೊಂಡೆನು. ಮರು ದಿವಸ ದಿನಾಂಕ:08/10/2022 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಾನು ಎದ್ದು ಸಂಡಾಸಕ್ಕೆ ಬಯಲು ಕಡೆ ಹೋಗುವಾಗ ರಾತ್ರಿ ನಿಲ್ಲಿಸಿದ ಜಾಗದಲ್ಲಿ ನನ್ನ ಮೋಟರ್ ಸೈಕಲ್ ಕಾಣಲಿಲ್ಲ ಆಗ ಗಾಭರಿಯಾದ ನಾನು ಅಲ್ಲಿಯೇ ಸುತ್ತಮುತ್ತ ಎಲ್ಲಾ ಕಡೆ ನೋಡಿದರು ನನ್ನ ಮೋಟರ್ ಸೈಕಲ್ ಎಲ್ಲಿಯೂ ಕಾಣಲಿಲ್ಲ. ಆಗ ನಾನು ನಮ್ಮೂರ ನಮ್ಮ ಮಾವ ರಂಗಪ್ಪ ತಂದೆ ಬೆಳ್ಳೆಪ್ಪ ಚಿಕ್ಕಬೂದುರು, ದೇವರಾಜ ತಂದೆ ಮರಿಯಪ್ಪ ಹೊಸಮನಿ, ಪ್ರಭು ತಂದೆ ಹಣಮಂತ ಕಟ್ಟಿಮನಿ ಮತ್ತು ಇನ್ನೊಬ್ಬ ಪ್ರಭು ತಂದೆ ಮಲ್ಲಪ್ಪ ಹೆಗ್ಗಣಗೇರಾ ಇವರಿಗೆ ನನ್ನ ಮೋಟರ್ ಸೈಕಲ್ ಕಳುವಾದ ವಿಷಯ ಹೇಳಿದಾಗ ಅವರು ಬಂದರು. ನಂತರ ನಾವೆಲ್ಲರೂ ಸೇರು ನಮ್ಮೂರು ಸುತ್ತಮುತ್ತ ಮತ್ತು ರೋಟ್ನಡಗಿ, ತುಮಕೂರು, ಕೊಂಕಲ್ ಮುಂತಾದ ಗ್ರಾಮಗಳಲ್ಲಿ ಹುಡುಕಾಡಿದರೂ ಎಲ್ಲಿಯೂ ನಮ್ಮ ಮೋಟರ್ ಸೈಕಲ್ ಸಿಗಲಿಲ್ಲ. ಕಾರಣ ಯಾರೋ ಕಳ್ಳರು ದಿನಾಂಕ: 07/10/2022 ರಂದು 9 ಪಿಎಮ್ ದಿಂದ ದಿನಾಂಕ:08/10/2022 ರಂದು ಬೆಳಗ್ಗೆ 6 ಎಎಮ್ ಮಧ್ಯದ ಅವಧಿಯಲ್ಲಿ ನನ್ನ ಮೊಟರ್ ಸೈಕಲ್ ನಂ. ಕೆಎ 04 ಜೆಕ್ಯೂ 5592 ನೇದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳುವಾದ ನನ್ನ ಮೋಟರ್ ಸೈಕಲ್ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಕಳುವಾದ ಮೋಟರ್ ಸೈಕಲ್ ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 125/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 82/2022 ಮನುಷ್ಯ ಕಾಣೆಯಾದ ಬಗ್ಗೆ : ದಿನಾಂಕ:07/11/2022 ರಂದು ಸಾಯಂಕಾಲ 17.20 ಗಂಟೆಗೆ ಫಿರ್ಯಾದಿ ಶ್ರೀಮತಿ. ಪಲ್ಲವಿ ಗಂಡ ಭೀಮಾಶಂಕರ ಹೊರಹಟ್ಟಿ ಸಾ:ವಜ್ಜಲ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದರ ಸಾರಾಂಶವೆನೆಂದರೇ, ಫಿರ್ಯಾದಿಯ ಗಂಡನಾದ ಭೀಮಾಶಂಕರ ತಂದೆ ನಿಂಗಪ್ಪ ಹೊರಹಟ್ಟಿ ಸಾ:ವಜ್ಜಲ ಈತನು ದಿನಾಂಕ:26/10/2022 ರಂದು ಮದ್ಯಾಹ್ನ 12.00 ಗಂಟೆಗೆ ಫೀರ್ಯಾದಿಗೆ ಮಾಳನೂರ ಗ್ರಾಮದಲ್ಲಿ ಬಿಟ್ಟು ವಜ್ಜಲ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ. ಫಿರ್ಯಾದಿ ತನ್ನ ಗಂಡನಿಗೆ ವಜ್ಜಲ ಮತ್ತು ಬೆಂಗಳೂರ ನಗರದಲ್ಲಿ ಹುಡುಕಾಡಿದರೂ ಇಲ್ಲಿಯವರೆಗೆ ಸಿಕ್ಕಿರುವದಿಲ್ಲ, ಸದರಿಯವನಿಗೆ ಹುಡುಕಿ ಕೊಡಬೇಕು ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 73/2022 ಕಲಂ:87 ಕೆ ಪಿ ಆಕ್ಟ : ಇಂದು ದಿನಾಂಕ: 07.11.2022 ರಂದು ಮಧ್ಯಾಹ್ನ 4:10 ಪಿಎಮ್ ಗಂಟೆಗೆೆ ಪಿಎಸ್ಐ ಸಾಹೇಬರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರವನ್ನು ನೀಡಿದ್ದು ಪಿಎಸ್ಐ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶವೆನೆಂದರೆ ಇಂದು ದಿನಾಂಕ:07.11.2022 ರಂದು ಮಧ್ಯಾಹ್ನ 3.30 ಗಂಟೆಗೆ ಠಾಣೆಯಲ್ಲಿದ್ದಾಗ ನನಗೆ ರಾಜನಕೊಳೂರ ಗ್ರಾಮದ ಯುಕೆಪಿ ಕ್ಯಾಂಪ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಅಂದರ್ ಬಾಹರ್ ಎಂಬುವ ಇಸ್ಪೇಟ್ ಜೂಜಾಟ ಆಡುತ್ತಿದ್ದು, ಅವರವರಲ್ಲಿ ಹಣವನ್ನು ಪಣಕ್ಕೆ ಕಟ್ಟಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ಹೆಚ್ಸಿ-120 ರವರಿಂದ ಮಾಹಿತಿ ಬಂದಿದ್ದು. ಸದರಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಧೀಶರು ಅಡಿಶನಲ್ ಜೆಎಮ್ಎಫ್ಸಿ ನ್ಯಾಯಾಲಯ ಸುರಪೂರ ರವರಿಗೆ ಯಾದಿ ಬರೆದು ಈ-ಮೇಲ್ ಮುಖಾಂತರ ಮಧ್ಯಾಹ್ನ 3:45 ಗಂಟೆಗೆ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಧೀಶರು ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು 4:00 ಪಿಎಮ್ ಗಂಟೆಗೆ ಅನುಮತಿ ನೀಡಿದ ಪ್ರತಿಯು ವಸೂಲಾಗಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:73/2022 ಕಲಂ:87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಮೇಲೆ ನಮೂದಿಸಿದ 4 ಜನರಿಗೆ ಹಿಡಿದು ಸದರಿಯವರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 3240/- ರೂ ಮತ್ತು 52 ಇಸ್ಫಿಟ್ ಎಲೆಗಳನ್ನು ಜಪ್ತಿಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಜಪ್ತಿಪಂಚನಾಮೆ ಕೈಕೊಂಡು ಆರೋಪಿತರು ಮತ್ತು ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಬಂದು ಕ್ರಮ ಜರುಗಿಸಿದ ಬಗ್ಗೆ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 193/2022 ಕಲಂ 323, 324, 504, 506 ಸಂಗಡ 34 ಐ.ಪಿ.ಸಿ : ಇಂದು ದಿನಾಂಕ 07/11/2022 ರಂದು, ಮಧ್ಯಾಹ್ನ 13-45 ಗಂಟೆಗೆ ಫಿಯರ್ಾದಿ ಶ್ರೀ ಸೋಮಶೇಖರ ತಂದೆ ಶರಣಪ್ಪ ದೇಸಾಯಿ, ಸಾಃ ಕನರ್ಾಳ ತಾಃ ಸುರಪೂರ ಹಾ.ವ ಬಸವೇಶ್ವರ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಮ್ಮ ತಂದೆ ಶರಣಪ್ಪ ಇವರು ಮೃತ ಪಟ್ಟಿರುತ್ತಾರೆ. ನಮ್ಮ ತಂದೆ-ತಾಯಿಯವರಿಗೆ 3 ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಕ್ಕಳಿದ್ದು 1) ನಾನು, 2) ಪ್ರಕಾಶ 3) ಬಸವರಾಜ ಅಕ್ಕ 4) ಮಹಾದೇವಿ ಈ ರೀತಿ ಇದ್ದು, ಇವಳಿಗೆ ದೇವದುರ್ಗ ತಾಲೂಕಿನ ಹೂವಿನಹಡಗಿ ಗ್ರಾಮದ ರಾಜಶೇಖರ ಪೊಲೀಸ್ ಪಾಟೀಲ್ ಈತನ ಜೊತೆ ಮದುವೆ ಮಾಡಿರುತ್ತದೆ. ನಮ್ಮ ತಾಯಿ ಶ್ರೀಮತಿ ದೇವಿಂದ್ರಮ್ಮ ಇವರ ಹೆಸರಿನಲ್ಲಿ ಕನರ್ಾಳ ಸೀಮಾಂತರದಲ್ಲಿ ಪಿತ್ರಾಜರ್ಿತ ಆಸ್ತಿ ಇದ್ದು, ಆಸ್ತಿಯ ಹಂಚಿಕೆಯ ಸಂಬಂಧ ನನ್ನ ತಾಯಿ ಜೊತೆ ತಮ್ಮಂದಿರರಾದ ಪ್ರಕಾಶ ಮತ್ತು ಬಸವರಾಜ ಇವರು ತಕರಾರು ಮಾಡಿಕೊಂಡು ಬಂದಿರುತ್ತಾರೆ. ಸದರಿ ಆಸ್ತಿ ಹಂಚಿಕೆಯಾಗದೆ ಎರಡು ವರ್ಷಗಳಿಂದ ತಕರಾರು ನಡೆದಿದ್ದರಿಂದ ಹೊಲ ಯಾರು ಸಾಗುವಳಿ ಮಾಡದೇ ಬಿಳ ಬಿದ್ದಿರುತ್ತದೆ. ನನ್ನ ತಮ್ಮಂದಿರರು ನಮ್ಮ ಜೊತೆ ತಕರಾರು ಮಾಡಿದ್ದರಿಂದ ಎರಡು ವರ್ಷಗಳಹಿಂದೆ ನಾನು, ನನ್ನ ಹೆಂಡತಿ ಸಂಗೀತಾ ಮತ್ತು ತಾಯಿ ದೇವಿಂದ್ರಮ್ಮ 3 ಜನರು ನಮ್ಮೂರಿನಿಂದ ಶಹಾಪೂರಕ್ಕೆ ಬಂದು, ಶಹಾಪೂರದ ಬಸವೇಶ್ವರ ನಗರದಲ್ಲಿರುವ ಚನ್ನಾರಡ್ಡಿ ಹದನೂರ ಇವರ ಮನೆಯಲ್ಲಿ ಬಾಡಿಗೆ ವಾಸವಾಗಿರುತ್ತೇವೆ. ಹೀಗಿರುವಾಗ ದಿನಾಂಕ 01/11/2022 ರಂದು ಮಧ್ಯಾಹ್ನದ 2-30 ಗಂಟೆಯ ಸುಮಾರಿಗೆ ನಾನು, ನನ್ನ ಹೆಂಡತಿ ಸಂಗೀತಾ ಮತ್ತು ತಾಯಿ ದೇವಿಂದ್ರಮ್ಮ ರವರೆಲ್ಲರೂ ಮನೆಯಲ್ಲಿದ್ದಾಗ, ನನ್ನ ಮತ್ತು ನನ್ನ ತಾಯಿಯ ಹೆಸರಿನಿಂದ ಯಾರೋ ಕೂಗಾಡಿದ ಶಬ್ದ ಕೇಳಿ ಬಂತು ಆಗ ನಾವು ಹೊರಗಡೆ ಬಂದು ನೋಡಿದಾಗ ನನ್ನ ಅಕ್ಕನ ಗಂಡನಾದ 1) ರಾಜಶೇಖರ ಪೊಲೀಸ್ ಪಾಟೀಲ್ ವಯಸ್ಸು 48 ವರ್ಷ ಸಾಃ ಹೂವಿನಹಡಗಿ ಮತ್ತು ನನ್ನ ತಮ್ಮಂದಿರರಾದ 2) ಪ್ರಕಾಶ 36 ವರ್ಷ 3) ಬಸವರಾಜ 33 ವರ್ಷ ರವರೆಲ್ಲರೂ ಇದ್ದರು. ಆಗ ರಾಜಶೇಖರನು ನನ್ನ ತಾಯಿಗೆ ಏ ದೇವಿ ನಿನ್ನ ಎರಡು ಮಕ್ಕಳಾದ ಪ್ರಕಾಶ ಮತ್ತು ಬಸವರಾಜ ನನ್ನ ಜೊತೆಯಲ್ಲಿ ಹೂವಿನಹಡಗಿಯಲ್ಲಿ ವಾಸವಾಗಿದ್ದಾರೆ ನಿವೇಕೆ ಇಲ್ಲಿ ವಾಸವಾಗಿದ್ದಿರಿ, ನೀವು ನಮ್ಮ ಜೊತೆ ಬಂದು ಹೂವಿನಹಡಗಿ ಗ್ರಾಮದಲ್ಲಿ ನಾನು ಹೇಳಿದಂಗ ಕೇಳಿಕೊಂಡು ಇರಬೇಕು ಅಂತಾ ಹೇಳಿದಾಗ, ನಾನು ಮತ್ತು ನನ್ನ ತಾಯಿ ಇಬ್ಬರೂ ನಾವೇಕೆ ಅಲ್ಲಿಗೆ ಬರಬೇಕು ಬರುವುದಿಲ್ಲ ಅಂತಾ ನಾವು ವಿರೋಧ ಮಾಡಿದಾಗ, ನನ್ನ ತಮ್ಮಂದಿರರಾದ ಪ್ರಕಾಶ ಮತ್ತು ಬಸವರಾಜ ಇಬ್ಬರೂ ಕೂಡಿ ನಮ್ಮ ತಾಯಿಗೆ ಹೂವಿನಹಡಗಿ ಗ್ರಾಮಕ್ಕೆ ಬರೋದಿಲ್ಲಾ ಅಂತಿಯಾ ಅಂತಾ ಹೇಳಿ ಪ್ರಕಾಶನು ನನ್ನ ತಾಯಿಯ ಬಲಗೈ ತಿರುವಿ ಕೈಯಿಂದ ಹೊಡೆದಿರುತ್ತಾನೆ ಮತ್ತು ಬಸವರಾಜನು ಬಡಿಗೆಯಿಂದ ಕುತ್ತಿಗೆಗೆ ಮತ್ತು ಬೆನ್ನಿಗೆ ಹೊಡೆಯುವಾಗ ನಾನು ಜಗಳ ಬಿಡಿಸಲು ಹೋಗಿದ್ದು, ಆಗ ರಾಜಶೇಖರನು ನನಗೆ ಕೈಯಿಂದ ಬೆನ್ನಿಗೆ ಹೊಡೆಯುತಿದ್ದಾಗ, ನನ್ನ ಹೆಂಡತಿ ಸಂಗೀತಾ ಇವಳು ಬಂದು ಜಗಳ ಬಿಡಿಸಿಕೊಂಡಳು. ಈ ಜಗಳವು ದಿನಾಂಕ 01/11/2022 ರಂದು ಮಧ್ಯಾಹ್ನ 2-30 ಗಂಟೆಯಿಂದ 2-45 ಗಂಟೆಯ ಮಧ್ಯದ ಅವಧಿಯಲ್ಲಿ ಜಗಳವಾಗಿರುತ್ತದೆ. ಸದ್ಯ ನನ್ನ ತಾಯಿ ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದು ಸ್ವಲ್ಪ ಗುಣಮುಖಳಾಗಿದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತಿದ್ದೇನೆ. ಕಾರಣ ಮೇಲ್ಕಂಡವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 193/2022 ಕಲಂ 323, 324, 504, 506 ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಇತ್ತೀಚಿನ ನವೀಕರಣ​ : 10-11-2022 10:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080