ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-12-2021

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂ 214/2021. ಕಲಂ. 279, 337, 338 ಐ.ಪಿ.ಸಿ. ಮತ್ತು 187 ಐ.ಎಂ.ವಿ ಯಾಕ್ಟ : ಮಾನ್ಯರೇ, ಇಂದು ದಿನಾಂಕ: 06/12/2021 ರಂದು ರಾತ್ರಿ 11-55 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ. ಎಂ.ಎಲ್.ಸಿ. ಇದೆ ಅಂತ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ದಿನಾಂಕ 7/12/2021 ರಂದು ಬೆಳ್ಳಿಗ್ಗಿನ ಜಾವ 00-10 ಗಂಟೆಗೆ ಹೋಗಿ ಗಾಯಾಳುದಾರನಾದ ಶ್ರೀ ನಾಗೇಶ ತಂದೆ ಕಾಶಪ್ಪ ಬಡಿಗೇರ ವ|| 40 ಜಾ|| ವಿಶ್ವಕರ್ಮ ಉ|| ಕೂಲಿ ಸಾ|| ದನ್ನೂರ ತಾ|| ಬಾಲ್ಕಿ ಜಿ|| ಬೀದರ ಇವರ ಹೇಳಿಕೆಯನ್ನು 00-10 ಗಂಟೆಯಿಂದ 1-45 ಗಂಟೆಯ ವರೆಗೆ ಪಡೆದುಕೊಂಡು ಮರಳಿ ಠಾಣೆಗೆ 2-00 ಗಂಟೆಗೆ ಬಂದು ಸದರಿ ಹೇಳಿಕೆಯ ಸಾರಾಂಶವೆನೆಂದರೆ. ಬೆಂಗಳೂರಿಗೆ ಕೂಲಿ ಕೆಲಸ ಮಾಡಲು ನಾನು ಮತ್ತು ನನ್ನ ತಮ್ಮಂದಿರಾದ ವಿಜಯಕುಮಾರ ತಂದೆ ಕಾಶಪ್ಪ ಬಡಿಗೇರ, ಸಂತೋಷ ತಂದೆ ಕಾಶಪ್ಪ ಬಡಿಗೇರ, ಎಲ್ಲರು ಕೂಡಿ ಬೆಂಗಳೂರಿಗೆ ಹೋಗುವುದಕ್ಕಾಗಿ ದಿನಾಂಕ 06/12/2021 ರಂದು ಸಂಜನಾ ಟ್ರಾವೇಲ್ಸ್ ಬಸ್ ನಂ ಕೆಎ-51 ಬಿ-5592 ನೇದ್ದರಲ್ಲಿ ಹೋರಟು ಬೀದರ-ಬೆಂಗಳೂರ ಮುಖ್ಯ ರಸ್ತೆಯ ಮೇಲೆ ಶಹಾಪೂರ ದಾಟಿ ವಿಬೂತಿಹಳ್ಳಿಯ ತಿಪನಳ್ಳಿ ಕ್ರಾಸ ಹತ್ತಿರ ರಾತ್ರಿ 11-00 ಗಂಟೆಯ ಸುಮಾರಿಗೆ ನಮ್ಮ ಸಂಜನಾ ಟ್ರಾವೇಲ್ಸ ಬಸ್ಸಿನ ಚಾಲಕನು ಬಸ್ಸಿನ ಹಿಂದಿನ ಗಾಲಿ ಸ್ವಲ್ಪ ಜಾಮ ಆಗಿದ್ದರಿಂದ ಬಸ್ಸಿನಚಾಲಕನು ತನ್ನ ಬಸ್ಸನ್ನು ತನ್ನ ಎಡಗಡೆ ಸೈಡಿಗೆ ಸಿಗನಲ್ಸ್ ಹಾಕಿ ನಿಲ್ಲಿಸಿದಾಗ ಬಸ್ಸಿನ ಚಾಲಕರು ಇಬ್ಬರು ಕೆಳಗಡೆ ಇಳಿದು ನೋಡುತ್ತಿರುವಾಗ ಶಹಾಪೂರ ಕಡೆಯಿಂದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಬಸ್ಸಿನ ಹಿಂದೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾದಲ್ಲಿ ನನಗೆ ಮುಂದಿನ ಹಣೆಗೆ ರಕ್ತಗಾಯವಾಗಿದ್ದು, ನನ್ನ ತಮ್ಮ ವಿಯಜಕುಮಾರ ತಂದೆ ಕಾಶಪ್ಪ ಇವರಿಗೆ ನೋಡಲಾಗಿ ಬಲಗೈ ನಡುಬೆರಳು ಮತ್ತು ಉಂಗುರ ಬರಳಿಗೆ ರಕ್ತಗಾಯವಾಗಿದ್ದು. ಸಂತೋಷ ತಂದೆ ಕಾಶಪ್ಪ ಇವರಿಗೆ ಯಾವುದೆ ಗಾಯವಾಗಿರುವುದಿಲ್ಲಾ. ಬಸ್ಸ ಚಲಾಯಿಸುತ್ತ ಬಂದಿದ್ದ ಚಾಲಕನಿಗೆ ಹೆಸರು ವಿಚಾರಿಸಲಾಗಿ ಜೀವನ ತಂದೆ ಕಂಟೇಪ್ಪ ಕಾಶಂಪೂರ ಸಾ|| ಬೀದರ ಈತನಿಗೆ ಯಾವುದೆ ಗಾಯವಾಗಿರುವುದಿಲ್ಲಾ, ಬಸ್ಸಿನ ಇನ್ನೊಬ್ಬ ಚಾಲಕನ ಹೆಸರು ಭೀಮಣ್ಣ ತಂದೆ ಲಿಂಗಪ್ಪ ಹೋಸಮನಿ ಸಾ|| ಯಡ್ರಾಮಿ ಇವರಿಗೆ ನೋಡಲಾಗಿ ಬಲಗಾಲು ಮೋಳಕಾಲು ಕೆಳಗೆ ಮುರಿದು ಭಾರಿ ರಕ್ತಗಾಯವಾಗಿದ್ದು ಇರುತ್ತದೆ, ಎಡಗೈ ಮೋಳಕೈಗೆ ತರಚಿದ ಗಾಯ, ಬಲಗಡೆ ಎದೆಗೆ ಗುಪ್ತಗಾಯ, ಬಸ್ಸಿನಲ್ಲಿದ್ದವರಿಗೆ ನೋಡಿ ಹೆಸರು ವಿಚಾರಿಸಲಾಗಿ ಲಕ್ಷ್ಮೀಪುತ್ರ ತಂದೆ ಸಿದ್ದಣ್ಣ ತಳವಾರ ಸಾ|| ಗಂಗಾನಗರ ಬ್ರಂಹ್ಮಪೂರ ಕಲಬುರಗಿ ಇವರಿಗೆ ಬಲಗಡೆ ಮುಂದಿನ ಹಣೆಗೆ ರಕ್ತಗಾಯ. ಎಡಗಡೆ ಪಕ್ಕಿಗೆ ಗುಪ್ತಗಾಯ, ಎಕ್ಬಾಲ್ ಹೈಮದ್ ತಂದೆ ಕಲಿಲ್ ಹೈಮದ್ ಕುರಾನ್ ಬುಡ್ಡಿ ಸಾ|| ಆಸರ ಮೋಹಲ್ಲಾ ಆದಿಲ್ಪೂರ ಶಹಾಪೂರ. ಇವರಿಗೆ ಹಿಂದಿನ ಟೊಂಕಕ್ಕೆ ಗುಪ್ತಗಾಯ, ಬಲಗಡೆ ಎದೆಗೆ ಗುಪ್ತಗಾಯ, ಎಡಗಹಾಲು ಮೋಳಕಾಲಿಗೆ ಗುಪ್ತಗಾಯ, ಹೇಮಾವತಿ ಗಂಡ ಶೀವಾನಂದ ಕಟ್ಟಿಮನಿ ಸಾ|| ಹುಣಚಿಗೇರಾ ಇವರಿಗೆ ಬೆನ್ನಿಗೆ ಗುಪ್ತಗಾಯ, ಎದೆಗೆ ಗುಪ್ತಗಾಯ, ಸುರೇಕಾಂತ ತಂದೆ ಪರಮೇಶ್ವರಪ್ಪ ಸಾ|| ಯಳವಂತಗಿ, ಇವರಿಗೆ ಬಲಗಡೆ ಹಣೆಗೆ ರಕ್ತಗಾಯ, ಎಡಗಾಲ ಮೋಳಕಾಲಿಗೆ ಗುಪ್ತಗಾಯ. ಅರ್ಚನಾ ಗಂಡ ಶಿವುಕುಮಾರ ಬೀರೆದಾರ ಸಾ|| ಪ್ರತಾಪನಗರ ಬೀದರ ಇವರಿಗೆ ಎಡಗೈ ಬುಜಕ್ಕೆ, ಎಡಗೈಯಿಗೆ ಗುಪ್ತಗಾಯ, ತಲೇಯ ಹಿಂದೆ ಗುಪ್ತಗಾಯ, ಭಾರತಿಬಾಯಿ ತಂದೆ ಮಾಣಿಕರಾವ ಬಿರೆದಾರ, ಸಾ|| ಬ್ಯಾಲಹಳ್ಳಿ. ಇವರಿಗೆ ಹಿಂದಿನ ಬೆನ್ನು, ಎಡಗಡೆ ಬುಜ, ಕುತ್ತಿಗೆಗೆ ಗುಪ್ತಗಾಯ ವಾಗಿದ್ದು ಇರುತ್ತದೆ. ಬಾಲಕಿ ಪ್ರಾರ್ತನಾ ತಂದೆ ಶಿವುಕುಮಾರ ಬಿರೆದಾರ ಸಾ|| ಸಾ|| ಪ್ರತಾಪನಗರ ಬೀದರ, ಶಿವಾನಂದ ತಂದೆ ಮಾಣಿಕರಾವ್ ಕಟ್ಟಿಮನಿ ಸಾ||| ಹುಣಚಿಗೇರಾ. ಲತಾ ಗಂಡ ಸಂಕೇತ ಮಾರ್ಪಳ್ಳಿ ಸಾ|| ಸಿಂದನಕೇರಾ, ಮಹಾದೇವ ತಂದೆ ಶರಣಪ್ಪ ಕಲ್ಯಾಣಿ ಸಾ|| ಯಳವಂತಗಿ ಇವರಿಗೆ ಯಾವದೆ ಗಾಯವಾಗಿರುವುದಿಲ್ಲಾ. ಸದರಿ ಅಪಘಾತಮಾಡಿದ ಲಾರಿ ಚಾಲಕನಿಗೆ ನೋಡಿ ಹೆಸರು ವಿಚಾರಿಸಲಾಗಿ ವೀರಾಂಜನೆಯಲು ತಂದೆ ನಾಗಯ್ಯ ಸಾ|| ಬೆತಮಚೆಲರ್ಾ ಆಂದ್ರಪ್ರದೇಶ ಅಂತ ಹೆಸರು ಹೇಳಿ ಹೊದನು. ಸದರಿ ಅಪಘಾತ ಮಾಡಿದ ಲಾರಿ ನಂಬರ ನೋಡಲಾಗಿ ಎಪಿ-39 ಟಿಜಡ್-3159 ನೇದ್ದು ಮುಂದೆ ಮತ್ತು ಸಂಜನಾ ಟ್ರಾವೇಲ್ಸ್ ಬಸ್ಸ್ ನಂ ಕೆಎ-51 ಬಿ-5592 ನೇದ್ದು ಹಿಂದೆ ಮತ್ತು ಮುಂದೆ ಜಖಂ ಗೊಂಡಿದ್ದು ಇರುತ್ತದೆ. ಸ್ಥಳಕ್ಕೆ ಬಂದ 108 ಮತ್ತು 112 ನೇದ್ದರಲ್ಲಿ ಮತ್ತು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ನಾವೆಲ್ಲರು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಕುರಿತು ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದೆವೆ. ಆದ್ದರಿಂದ ಲಾರಿ ನಂ ಎಪಿ-39 ಟಿಜಡ್-3159 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತುಕೊಂಡು ಹೋರಟ ಸಂಜನಾ ಟ್ರಾವೇಲ್ಸ್ನ ಬಸ್ಸಿಗೆ ಡಿಕ್ಕಿಪಡಿಸಿ ಅಪಘಾತಮಾಡಿ ಭಾರಿ ಮತ್ತು ಸಾದಾ ಗಾಯಗೊಳಿಸಿದವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 245/2021 ಕಲಂ: 279, 337, 338 ಐಪಿಸಿ ಮತ್ತು 187 ಐ.ಎಂವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 174/2021 ಕಲಂ: 143,147,323,324,504,506 ಸಂ 149 ಐಪಿಸಿ : ಇಂದು ದಿನಾಂಕ 07/12/2021 ರಂದು 1.00 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಗಂಗಾಬಾಯಿ ಗಂಡ ವಿಠಲ ಮಾಲಿಪಾಟೀಲ ವ|| 40 ಜಾ|| ಲಿಂಗಾಯತ ಉ|| ಹೊಲಮನೆಗೆಲಸ ಸಾ|| ಅಗ್ನಿ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ನನಗೆ ಮದುವೆಯಾಗಿ 20 ವರ್ಷ ಗತಿಸಿದ್ದು ನನಗೆ ಕೋಡಬೋಗಿ ಗ್ರಾಮದ ತಾ|| ಕೋಲ್ಹಾರ ಜಿ|| ವಿಜಯಪುರದ ವಿಠಲ ತಂದೆ ಬಸಪ್ಪ ಉದ್ದಾರ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದಾಗಿನಿಂದಲೂ ನನ್ನ ಗಂಡ ಹಾಗು ನಾನು ನಮ್ಮೂರ ಅಗ್ನಿ ಗ್ರಾಮದಲ್ಲಿಯೇ ವಾಸವಾಗಿದ್ದೆವು. ಮದುವೆಯಾಗಿ ಸುಮಾರು 15 ವರ್ಷಗಳವರೆಗೆ ಚೆನ್ನಾಗಿ ಸಂಸಾರ ಮಾಡಿದ್ದು ಇರುತ್ತದೆ. ಸದ್ಯ ನನಗೆ ಐದು ಜನ ಹೆಣ್ಣು ಮಕ್ಕಳಿರುತ್ತಾರೆ. ಸುಮಾರು ನಾಲ್ಕು ವರ್ಷಗಳಿಂದ ನನ್ನ ಗಂಡನು ನನ್ನ ಜೊತೆ ಜಗಳಾ ಮಾಡಿ ಬೇರೆಯಾಗಿ ಇರುತ್ತಾನೆ. ನಾನು ನನ್ನಷ್ಟಕ್ಕೆ ನನ್ನ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ 06.08.2021 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ನಾನು ನಮ್ಮ ಅಣ್ಣನ ಹೊಲದಲ್ಲಿ ಎಮ್ಮೆ ಮೇಯಿಸುತ್ತಿದ್ದಾಗ ನನ್ನ ಗಂಡನಾದ 1] ವಿಠಲ ತಂದೆ ಬಸಪ್ಪ ಉದ್ದಾರ ಹಾಗು ಆತನ ಸಂಬಂದಿಕರಾದ 2] ಚಂದ್ರಶೇಖರ ತಂದೆ ಭೀಮಣಗೌಡ ಮಾಲಿಪಾಟೀಲ 3] ಭೀಮಣಗೌಡ ತಂದೆ ಅಮರಪ್ಪಗೌಡ ಮಾಲಿ ಪಾಟೀಲ 4] ಸಿದ್ದಣಗೌಡ ತಂದೆ ಬಸವರಾಜ ಮಾಲಿ ಪಾಟೀಲ 5] ಬಸವರಾಜ ತಂದೆ ಸಂಗನಗೌಡ ಮಾಲಿ ಪಾಟೀಲ ಎಲ್ಲರೂ ಸಾ|| ಅಗ್ನಿ ಈ ಎಲ್ಲಾ ಜನರು ಕೂಡಿಕೊಂಡು ನನ್ನ ಹತ್ತಿರ ಬಂದವರೇ ಏನಲೇ ಸೂಳೀ ಇಲ್ಲಿ ಯಾಕೇ ಎಮ್ಮೆ ಮೇಯಿಸುತ್ತೀ ಅಂತ ಅಂದಾಗ ನಾನು, ಏಕೇ ಏನಾಯಿತು ನಮ್ಮ ಅಣ್ಣನ ಹೊಲದಲ್ಲಿ ಎಮ್ಮೆ ಮೇಯಿಸಿದರೇ ಏನಾಯಿತು ಅಂತ ಕೇಳಿದಾಗ ಸದರಿಯವರು ಈ ಸೂಳೆಯದು ಬಹಾಳ ಆಗಿದೆ ಅಂತ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ನನ್ನ ಗಂಡನಾದ ವಿಠಲ ಈತನು ಅಲ್ಲಿಯೇ ಬಿದ್ದ ಕಲ್ಲಿನಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿದನು. ನಂತರ ಎಲ್ಲರೂ ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಿಂಗರಡ್ಡಿ ಆಂದ್ರರಡ್ಡಿ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಸೂಳೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನನಗೆ ಅಷ್ಟೇನು ಗಾಯಗಳಾಗಿಲ್ಲವಾದ್ದರಿಂದ ಯಾವದೇ ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ಅಲ್ಲದೇ ನಾನು ಮನೆಯಲ್ಲಿ ಒಬ್ಬಳೆ ಇದ್ದು ನಂತರ ಸದರ ವಿಷಯವನ್ನು ಬೆಂಗಳೂರಿನಲ್ಲಿರುವ ನಮ್ಮ ಅಣ್ಣನಾದ ಗುರುಪಾದಪ್ಪ ತಂದೆ ಅಯ್ಯಪ್ಪಗೌಡ ಮಾಲಿ ಪಾಟೀಲ ಇವರಿಗೆ ತಿಳಿಸಿದ್ದು ಅವರು ಬಂದ ನಂತರ ವಿಚಾರಿಸಿ ನಾನು ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಮೇಲ್ಕಾಣಿಸಿದ 05 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 174/2021 ಕಲಂ 143,147,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ, 175/2021 ಕಲಂ: 457 380 ಐ.ಪಿ.ಸಿ : ಇಂದು ದಿನಾಂಕ 07.12.2021 ರಂದು 2.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಅಬ್ಬಾಸಲಿ ತಂದೆ ಮದಾರಶಾ ಮಕನದಾರ ವಯಾ|| 30 ವರ್ಷ ಜಾ|| ಮುಸ್ಲಿಂ ಉ|| ಅತಿಥಿ ಶಿಕ್ಷಕರು ಸಾ|| ಮಾಲಗತ್ತಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಾನು ಸುಮಾರು 3 ವರ್ಷಗಳಿಂದ ನಮ್ಮೂರ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡು ಇರುತ್ತೇನೆ. ನಾನು ಸುಮಾರು ಒಂದು ವರ್ಷದ ಹಿಂದೆ ಸುರಪೂರದಲ್ಲಿ ಒಂದು ಒಫೋ ಎ92020 ಕಂಪನಿಯ ಮೋಬೈಲನ್ನು 15,500/- ರೂಪಾಯಿ ಕೊಟ್ಟು ಖರೀದಿ ಮಾಡಿದ್ದು ಇರುತ್ತದೆ. ಅದರ ಐಎಮ್ಇಐ ನಂಬರ 863251040598612 ನೇದ್ದು ಇದ್ದು ಸದರಿ ಮೋಬೈಲನ್ನು ನಾನೇ ಉಪಯೋಗಿಸುತ್ತಿದ್ದೆನು. ಹೀಗಿದ್ದು ದಿನಾಂಕ 02.11.2021 ರಂದು ರಾತ್ರಿ 00.30 ಗಂಟೆಗೆಯವರೆಗೆ ಕ್ರಿಕೇಟ್ ಮ್ಯಾಚ್ ನೋಡಿ ನನ್ನ ಮೋಬೈಲನ್ನು ನಮ್ಮ ಮನೆಯಲ್ಲಿ ಚಾರ್ಜ ಹಚ್ಚಿ ಬಾಗಿಲು ಮುಚ್ಚಿ ಮಲಗಿಕೊಂಡೆನು. ನಂತರ ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ನಾನು ಎದ್ದು ಚಾರ್ಜಗೆ ಹಚ್ಚಿದ ನನ್ನ ಒಫೋ ಎ92020 ಮೋಬೈಲ್ ನೋಡಲಾಗಿ ಇರಲಿಲ,್ಲ ನಂತರ ನಾನು ಗಾಬರಿಯಾಗಿ ಮನೆಯಲ್ಲಿ ಎಲ್ಲರಿಗೂ ವಿಚಾರಿಸಲಾಗಿ ಮೋಬೈಲ್ ಯಾರೂ ತೆಗೆದುಕೊಂಡಿರುವದಿಲ್ಲ ಅಂತ ತಿಳಿಸಿದ್ದು, ನಂತರ ಇಲ್ಲಿಯವರೆಗೆ ಯಾರಾದರೂ ತೆಗೆದುಕೊಂಡಿರಬಹುದು ಸಿಗಬಹುದು ಅಂತ ಸುಮ್ಮನಿದ್ದೆನು. ಅಲ್ಲಿಂದ ಇಲ್ಲಿಯವರೆಗೆ ನನ್ನ ಮೋಬೈಲ್ ಸಿಗಲಿಲ್ಲವಾದ್ದರಿಂದ ತಡವಾಗಿ ಇಂದು ದಿನಾಂಕ: 07.12.2021 ರಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ನನ್ನ 15,500/- ರೂಪಾಯಿ ಬೆಲೆಬಾಳುವ ಒಫೋ ಎ92020 ಕಂಪನಿಯ ಮೋಬೈಲನ್ನು ಕಳವು ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿಯರ್ಾದಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:175/2021 ಕಲಂ: 457,380 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

 

ಯಾದಗಿರಿ ನಗರ ಪೊಲೀಸ ಠಾಣೆ
ಗುನ್ನೆ ನಂ: 125/2021 ಕಲಂ. ಮಹಿಳೆ ಕಾಣೆ : ಇಂದು ದಿನಾಂಕ.07/12/2021 ರಂದು 12-30 ಪಿಎಂಕ್ಕೆ ಪಿರ್ಯಾದಿ ಶ್ರೀ ವಿನೋದ ತಂದೆ ಯೋಹನ ರಾಠೋಡ ವಃ40 ಜಾಃ ಲಂಬಾಣಿ ಉಃ ಕೂಲಿಕೆಲಸ ಸಾಃ ಚಾಮನಾಳ ಮಡ್ಡಿ ತಾಂಡಾ ತಾಃ ಶಹಾಪೂರ ರವರು ಠಾಣೆಗೆ ಬಂದು ಒಂದು ದೂರು ಅಜರ್ಿ ಸಲ್ಲಿಸಿದ್ದು ಸಾರಾಂಶವೆನೆಂದರೆ ನನ್ನ ಮಗಳಾದ ಸ್ನೇಹಲ್ ತಂ. ವಿನೋದ ರಾಠೋಡ ಸಾಃ ಚಾಮನಾಳ ಮಡ್ಡಿತಾಂಡಾ ಇವಳು ಯಾದಗಿರಿಯ ನಿವೇದಿತಾ ಕಾಲೇಜದಲ್ಲಿ ಮೋದಲನೇ ವರ್ಷದಲ್ಲಿ ನಸರ್ಿಂಗ ಕೋರ್ಸ ಮಾಡಿದ್ದು ಸಮಾಜ ಕಲ್ಯಾಣ ಬಾಲಕಿಯರ ವಸತಿ ನಿಲಯ ಸ್ವಾಮಿವಿವೇಕಾನಂದ ನಗರದಲ್ಲಿ ಹಾಸ್ಟಲದಲ್ಲಿ ಇರುತ್ತಿದ್ದಳು. ದಿನಾಂಕ. 29/11/2021 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಸ್ನೇಹಲ್ ಇವಳಿಗೆ ಆಸ್ಪತ್ರೆಗೆ ತೋರಿಸಬೇಕೆಂದು ಯಾದಗಿರಿಯ ಸಮಾಜ ಕಲ್ಯಾಣ ಬಾಲಕಿಯರ ಹಾಸ್ಟಲ್ಗೆ ಬಂದು ಸ್ನೇಹಲ್ ಇವಳಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಎಲ್.ಐ.ಸಿ.ಆಫೀಸ್ ಹತ್ತಿರ ಮುಖ್ಯ ರಸ್ತೆಗೆ ಬಂದಾಗ ಸ್ನೇಹಲ್ ಇವಳು 2-3 ದಿವಸ ಅಜ್ಜ, ಅಜ್ಜಿಯ ಜೊತೆಯಲ್ಲಿ ಇರುತ್ತೇನೆ ಅಂತಾ ಹೇಳಿ ಬ್ಯಾಗ ತೆಗೆದುಕೊಂಡು ಬರುತ್ತೇನೆ ಅಂತಾ ಹೇಳಿ ಮರಳಿ ಹಾಸ್ಟಲ್ ಕಡೆಗೆ ಹೋಗಿದ್ದು ಎಷ್ಟೋತ್ತಾದರೂ ಬರದ ಕಾರಣ ನನ್ನ ತಂದೆ ಗೋಬ್ರ್ಯಾ ಚವ್ಹಾಣ ರವರು ಮರಳಿ ಹಾಸ್ಟಲ್ಗೆ ಹೋಗಿ ನೋಡಿದಾಗ ಸ್ನೇಹಲ್ ಇವಳು ಹಾಸ್ಟಲಗೆ ಬಂದು ಬ್ಯಾಗ ತೆಗೆದುಕೊಂಡು ಹೋಗಿರುತ್ತಾಳೆ ಅಂತಾ ತಿಳಿಸಿದರು. ಎಲ್.ಐ.ಸಿ ಆಫೀಸ್ ಹತ್ತಿರ ಬಂದು ನೋಡಲಾಗಿ ಎಲ್ಲಿಯೂ ಕಾಣಿಸಲಿಲ್ಲಾ ಅಂತಾ ತಿಳಿಸಿರುತ್ತಾರೆ ಆಗ ನಾನು ನಮ್ಮೂರಿನಿಂದ ಯಾದಗಿರಿಗೆ ಬಂದು ನೋಡಿದಾಗ ಹಾಸ್ಟಲ್ದಲ್ಲಿ ಸ್ನೇಹಲ್ ಕಾಣಿಸಲಿಲ್ಲಾ ಅಂತಾ ನನ್ನ ಹೆಂಡತಿ ನನಗೆ ಪೋನ ಮೂಲಕ ತಿಳಿಸಿದಳು ಆಗ ನಾನು ದಿನಾಂಕ.30/11/2021 ರಂದು ಯಾದಗಿರಿಗೆ ಹಾಸ್ಪಲ್ಗೆ ಬಂದು ವಿಚಾರಿಸಿದಾಗ ನಿನ್ನ ಮಗಳು ಸ್ನೇಹಲ್ ಇವಳು ಮೈಯಲ್ಲಿ ಆರಾಮವಿಲ್ಲ ಅಂತಾ ಹೇಳಿ ಬ್ಯಾಗ ತೆಗೆದುಕೊಂಡು ಹೋದವಳು ಇಲ್ಲಿಯವರೆಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದರು ಆಗ ನಾನು ಮತ್ತು ನಮ್ಮ ಮನೆಯವರು ಕೂಡಿಕೊಂಡು ಯಾದಗಿರಿಯಲ್ಲಿ ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಮತ್ತು ನಮ್ಮ ಸಂಭಂದಿಕರಲ್ಲಿ ಹಾಗೂ ಎಲ್ಲಾ ಕಡೆಗಳಲ್ಲೂ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ ಕಾರಣ ನನ್ನ ಮಗಳು ಇಲ್ಲಿಯವರೆಗೆ ಬರದೇ ಕಾಣೆಯಾಗಿದ್ದು ಹುಡುಕಾಡಿಕೊಡಬೇಕಾಗಿ ಮಾನ್ಯರವರಲ್ಲಿ ವಿನಂತಿ. ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.125/2021 ಕಲಂ. ಮಹಿಳೆ ಕಾಣೆಯಾದ ಬಗ್ಗೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 184/2021 ಕಲಂ: 87 ಕೆ.ಪಿ.ಕಾಯ್ದೆ : ಇಂದು ದಿನಾಂಕ: 07/12/2021 ರಂದು 12:15 ಪಿ.ಎಮ್. ಕ್ಕೆ ನಾನು ಠಾಣೆಯಲ್ಲಿದ್ದಾಗಶ್ರೀ ಚಿತ್ರಶೇಖರ್ ಪಿ.ಎಸ್.ಐ (ಕಾ&ಸು-1) ಸಾಹೇಬರು 6 ಜನಆರೋಪಿತರೊಂದಿಗೆಠಾಣೆಗೆ ಬಂದುಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ಸಾರಾಂಶವೆನಂದರೆ, ಇಂದು ದಿನಾಂಕ:07/12/2021 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಗರದಗಾಂದಿಚೌಕ್ದಲ್ಲಿ ಪೆಟ್ರೋಲಿಂಗ್ಕರ್ತವ್ಯದಲ್ಲಿದ್ದಾಗಖಚಿತ ಬಾತ್ಮಿ ಬಂದಿದ್ದೇನೆಂದರೆ, ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯವೆಂಕಟಾಪೂರದಗಂಜ್ಆವರಣದ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಮಾಹಿತಿ ಮೇರೆಗೆ, ಬೆಳಗಿನ ಕರ್ತವ್ಯದಲ್ಲಿದ್ದಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಹೀಬೂಬ ಅಲೀ ಸಿ.ಹೆಚ್.ಸಿ-83, 2) ಶ್ರೀ ಸಣಕೆಪ್ಪ ಸಿಹೆಚ್.ಸಿ-27, 3) ಶ್ರೀ ಹೊನ್ನಪ್ಪ ಸಿಪಿಸಿ-427, 4) ಶ್ರೀ ಸಿದ್ರಾಮರೆಡ್ಡಿ ಸಿಪಿಸಿ-423 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಮಲ್ಲಿಕಾಜರ್ುನ್ತಂದೆ ಭೀಮಣ್ಣಗುತ್ತೆದಾರ ವ|| 30 ವರ್ಷಜಾ|| ಲಿಂಗಾಯತ್ ಸಾ|| ಸಾ:ವೆಂಕಟಾಪೂರ ಸುರಪೂರ 2) ಶ್ರೀ ಮಲ್ಲುತಂದೆ ನಿಂಗಪ್ಪದುಪ್ಪಲ್ಲಿ ವ|| 22 ವರ್ಷಜಾ|| ಕುರುಬರ ಉ|| ಒಕ್ಕಲುತನ ಸಾ:ವೆಂಕಟಾಪೂರ ಸುರಪೂರಇವರನ್ನು 9-30 ಎ.ಎಂ ಕ್ಕೆ ಗಾಂಧಿ ಚೌಕ ಹತ್ತಿರ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 9:45 ಎ.ಎಂ ಕ್ಕೆ ನಮ್ಮ ಸರಕಾರಿ ವಾಹನ ನಂ. ಕೆಎ-33. ಜಿ-0094 ನೇದ್ದರಲ್ಲಿ ಹೊರಟು 10 ಎ.ಎಂ ಕ್ಕೆ ವೆಂಕಟಾಪೂರದಗಂಜ್ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲುಗಂಜ್ಆವರಣದ ಸಾರ್ವಜನಿಕಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೆಲೆಅವರ ಮೇಲೆ 10:05 ಎ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿಒಟ್ಟು 6 ಜನರು ಸಿಕ್ಕಿದ್ದು ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಗೋಪಾಲ ತಂದೆ ಮಾನಪ್ಪಗಂಟಿ ವಯಾ:25 ವರ್ಷಜಾ:ಬೇಡರ ಉ:ಹಮಾಲಿ ಸಾ:ವೆಂಕಾಟಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಯಲ್ಲಪ್ಪತಂದೆ ಮಾನಪ್ಪಗುಡ್ಡೆಕಾಯ ವಯಾ:26 ವರ್ಷಜಾ:ಕಬ್ಬಲಿಗ ಉ:ಹಮಾಲಿ ಸಾ:ವೆಂಕಟಾಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 300/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಬಲಭೀಮತಂದೆಕಾಮಣ್ಣ ಹೆಮ್ಮಡಗಿ ವಯಾ:46 ವರ್ಷಜಾ:ಕುರುಬರ ಉ:ಒಕ್ಕಲುತನ ಸಾ:ವೆಂಕಟಾಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 550/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಯಲ್ಲಪ್ಪತಂದೆ ಶೇಖಪ್ಪ ಪೂಜಾರಿ ವಯಾ:20 ವರ್ಷಜಾ: ಕುರುಬರ ಉ: ಹಮಾಲಿ ಸಾ:ವೆಂಕಟಾಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 250/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಅಂಬ್ರೇಶತಂದೆ ಭದ್ರಯ್ಯ ಹಿರೇಮಠ ವಯಾ:23 ವರ್ಷಜಾ:ಜಂಗಮ ಉ:ಕಂಪ್ಯೂಟರ್ ಆಪರೇಟರ್ ಸಾ:ವೆಂಕಟಾಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 200/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಶಿವರಾಜ ತಂದೆ ಹೈಯಾಳಪ್ಪ ಕೆಂಗುರಿ ವಯಾ:25 ವರ್ಷಜಾ:ಕುರುಬರ ಉ:ಕೂಲಿ ಕೆಲಸ ಸಾ:ವೆಂಕಟಾಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 250/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆಇಟ್ಟ ಹಣ 2200/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 4200/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 10:05 ಎ.ಎಮ್ ದಿಂದ 11:05 ಎ.ಎಮ್ ವರೆಗೆ ಬರೆದುಕೊಂಡಿದ್ದುಇರುತ್ತದೆ. ನಂತರ 6 ಜನಆರೋಪಿರೊಂದಿಗೆ ಮರಳಿ ಠಾಣೆಗೆ 11:30 ಗಂಟೆಗೆ ಬಂದು ಸದರಿಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ವಿನಂತಿಕೊಟ್ಟಾ ವರದಿ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ

ಇತ್ತೀಚಿನ ನವೀಕರಣ​ : 08-12-2021 10:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080