ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-12-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 132/2022 ಕಲಂ 279, 337,338 ಐಪಿಸಿ: ಇಂದು ದಿನಾಂಕ 07.12.2022 ರಂದು ಮಧ್ಯಾಹ್ನ 2-30 ಗಂಟೆಗೆ ಶ್ರೀಗಿರಿ ಮಠಪತಿ ತಂದೆ ಗುರುಶಾಂತಯ್ಯ ಮಠಪತಿ ವಯ|| 25 ವರ್ಷ, ಜಾ|| ಜಂಗಮ ಆಳಂದ ರೋಡ, ಮಾಣಿಕೇಶ್ವರಿ ಕಾಲೋನಿ, ಮಾಣಿಕೇಶ್ವರಿ ಟೆಂಪಲ ಹತ್ತಿರ ಕಲಬುರಗಿ ಇವನು ಠಾಣೆಗೆ ಬಂದು ಹಾಜರಪಡಿಸಿದ ದೂರು ಸಾರಾಂಶವೇನೆಂದರೆ, ನನ್ನ ಅಣ್ಣ ಶ್ರೀಶೈಲ ಮಠಪತಿ ಇವರು ಈಗ ಎರಡು ದಿನದ ಹಿಂದೆ ತನಗೆ ಪರಿಚಿತರಾದ ನಜಮುನ್ನೀಸಾ ಬೇಗಂ ಗಂಡ ಮಹ್ಮದ ಮಕ್ಸೂದ, ಸನಾಸುಲ್ತಾನಾ ತಂದೆ ಮಹ್ಮದ ಮಕ್ಸೂದ ಅಹ್ಮದ, ಯುನುಸ ಅಲಿ ತಂದೆ ಯುಸೂಫ ಅಲಿ, ಪ್ರಮೋದ ರಾಠೋಡ ತಂದೆ ತುಳಜಾ ರಾಮ ರಾಠೋಡರವರ ಸಂಗಡ ಸನಾ ಸುಲ್ತಾನಾ ಇವರ ಕೆಇಎ ಮೆಡಿಕಲ್ ದಾಖಲಾತಿ ಪರಿಶೀಲನೆಗಾಗಿ ಬೆಂಗಳೂರಿಗೆ ಹೋಗಿ ಬರುವದಾಗಿ ಮನೆಯಲ್ಲಿ ಹೇಳಿ ಹೋಗಿದ್ದು, ದಿನಾಂಕ 06.12.2022 ರಂದು ಬೆಳಿಗ್ಗೆ ನಮ್ಮ ಅಣ್ಣ ಮನೆಗೆ ಫೋನ್ ಮಾಡಿ ತಾನು ಕುಳಿತು ಹೊರಟಿದ್ದ ಕಾರು ಅಪಘಾತವಾಗಿದೆ 108 ಅಂಬುಲೆನ್ಸದಲ್ಲಿ ಯಾದಗಿರಿ ಸರಕಾರಿ ಆಸ್ಪತ್ರೆಯಿಂದ ಕಲಬುರಗಿ ಮಣ್ಣೂರ ಆಸ್ಪತ್ರೆಗೆ ಬರುತ್ತಿದ್ದೇವೆ ಅಂತ ತಿಳಿಸಿದ್ದು, ನಾನು ಮನೆಯವರಿಗೆ ವಿಷಯ ತಿಳಿಸಿ ಕಲಬುಗರ್ಿಯಲ್ಲಿನ ಮಣೂರ್ ಆಸ್ಪತ್ರೆಗೆ ಹೋಗಿ ಅಲ್ಲಿಗೆ ಬಂದ ನನ್ನ ಅಣ್ಣ ಶ್ರೀಶೈಲ ಮಠಪತಿ ಇವರಿಗೆ ನೋಡಲಾಗಿ ಬೆನ್ನಿಗೆ ಭಾರಿ ಒಳಪೆಟ್ಟಾಗಿದ್ದು, ಎದೆಗೆ, ಹೊಟ್ಟೆಗೆ, ಬಾಯಿಯ ದವಡೆಗೆ ಪೆಟ್ಟಾಗಿದ್ದು ಕಂಡುಬಂದಿದ್ದು, ಆತನ ಸಂಗಡ ಕಾರಿನಲ್ಲಿ ಹೊರಟಿದ್ದ ನಜಮುನ್ನಿಸಾ ಬೇಗಂ ಇವರಿಗೆ ಎಡಗಾಲು ತೊಡೆಮೂಳೆ ಮುರಿದು ತಲೆಗೆ ಮತ್ತು ಎದೆಗೆ ರಕ್ತಗಾಯವಾಗಿದ್ದು ಕಂಡುಬಂದಿತು. ಸನಾ ಸುಲ್ತಾನ ಇವಳಿಗೆ ತಲೆಗೆ ಬೆನ್ನಿಗೆ ರಕ್ತಗಾಯವಾಗಿದ್ದು, ಯೂಸೂಫ್ ಅಲಿ ಇವರಿಗೆ ಬಾಯಿಗೆ ಭಾರೀ ರಕ್ತಗಾಯವಾಗಿ ಬಲಗಾಲು ಮೊಳಕಾಲು ಮತ್ತು ಎದೆಗೆ ಒಳಪೆಟ್ಟಾದ್ದು ಕಂಡುಬಂದಿದೆ. ಕಾರು ಚಾಲಕ ಪ್ರಮೋದ ರಾಠೋಡ ಇವನಿಗೆ ಎದೆಗೆ ಪಟ್ಟಾಗಿದ್ದು ಕಂಡು ಬಂದಿತು. ಸದರಿ ಘಟನೆ ಹೇಗಾಯಿತು ಅಂತಾ ನನ್ನ ಅಣ್ಣನಿಗೆ ವಿಚಾರಿಸಲಾಗಿ, ತಿಳಿಸಿದ್ದೇನೆಂದರೆ, ಸನಾ ಸುಲ್ತಾನಾ ಇವರ ಕೆಇಎ ಮೆಡಿಕಲ್ ದಾಖಲಾತಿ ಪರಿಶೀಲನೆಗೆ ಬೆಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ರಾಯಚೂರು ಮುಖಾಂತರ ಸ್ವಿಫ್ಟ್ಕಾರ್ ಸಂಖ್ಯೆ ಕೆಎ-53-ಬಿ-4218 ನೇದ್ದರಲ್ಲಿ ಕಲಬುಗರ್ಿ ಕಡೆಗೆ ಹೊರಟಾಗ ದಿನಾಂಕ 06.12.2022 ರಂದು ಬೆಳಿಗ್ಗೆ 6.30 ಗಂಟೆ ಸುಮಾರಿಗೆ ಬಳಿಚಕ್ರ ಗ್ರಾಮದ ಹತ್ತಿರ ಎನ್ ಹೆಚ್-150 ಮುಖ್ಯ ರಸ್ತೆ ಮೇಲೆ ಕಾರು ಚಾಲಕ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಕಾರು ಚಲಾಯಿಸಿದ್ದರಿಂದ ಎದುರಗಡೆ ಹಂದಿ ಅಡ್ಡ ಬಂದಿದ್ದು ಡಿಕ್ಕಿ ಹೊಡೆಯುವದನ್ನು ತಪ್ಪಿಸಲು ಹೋದಾಗ ನಿಯಂತ್ರಣ ತಪ್ಪಿ ಕಾರ ರಸ್ತೆಯ ಬಲಗಡೆ ತೆಗ್ಗಿನಲ್ಲಿ ಕಾರು ಬಿದ್ದು ಅಪಘಾತ ಸಂಭವಿಸಿರುತ್ತದೆ. ಅಪಘಾತದಲ್ಲಿ ನಮಗೆಲ್ಲರಿಗೆ ಗಂಭೀರ ಗಾಯವಾಗಿದ್ದು ಉಪಚಾರ ಕುರಿತು 108 ಅಂಬುಲೆನ್ಸದಲ್ಲಿ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಮಣೂರು ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇವೆ ಅಂತಾ ತಿಳಿಸಿದನು. ಕಾರಣ ಕಾರ ನಂಬರ್-ಕೆಎ-53-ಬಿ-4218 ನೇದ್ದರ ಚಾಲಕ ಪ್ರಮೋದ ರಾಠೋಡ್ ತಂದೆ ತುಳಜಾರಾಮ ರಾಠೋಡ್ ಸಾ|| ಚಿತ್ತಾಪೂರ ಇವನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ಅಪಘಾತಪಡಿಸಿ ಸದರಿ ಘಟನೆ ಸಂಭವಿಸಲು ಕಾರಣನಾದ ಕಾರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನೆ ನಂಬರ 132/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.
 
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 135/2022 ಕಲಂ: 279, 337 ಐಪಿಸಿ: ಇಂದು ದಿನಾಂಕ:07/12/2022 ರಂದು 06:00 ಎಎಮ್ ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು 09:00 ಎಎಮ್ ಕ್ಕೆ ಆಸ್ಪತ್ರೆಗೆ ಭೇಟಿ ನೀಡಿ, ಎಮ್.ಎಲ್.ಸಿ ಯನ್ನು ಸ್ವಿಕೃತ ಮಾಡಿಕೊಂಡು ಗಾಯಾಳು ಶ್ರೀ ಮರೆಪ್ಪ ತಂದೆ ಸಾಬಣ್ಣ ರಾಮಜಗಲಿ, ವ:23, ಜಾ:ಮಾದಿಗ, ಉ:ಗೌಂಡಿ ಕೆಲಸ ಸಾ:ಕುರುಕುಂದಾ ತಾ:ವಡಗೇರಾ ಈತನಿಗೆ ವಿಚಾರಿಸಿದಾಗ ಅವನು ತಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡುತ್ತೇನೆ ಎಂದು ಹೇಳಿ 4-30 ಪಿಎಮ್ ಸುಮಾರಿಗೆ ಸದರಿ ಫಿರ್ಯಾಧಿದಾರನು ಒಂದು ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಗೌಂಡಿ ಕೆಲಸ ಮಾಡಿಕೊಂಡು ತಂದೆ-ತಾಯಿಯೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನಾನು ಗೌಂಡಿ ಕೆಲಸ ಮಾಡಿಕೊಂಡಿದ್ದು, ಕೆಲಸ ಇದ್ದಾಗ ಯಾದಗಿರಿಗೆ ನನ್ನ ಮೋಟರ್ ಸೈಕಲ್ ನಂ. ಕೆಎ 33 ಡಬ್ಲ್ಯೂ 2835 ನೇದನ್ನು ಚಲಾಯಿಸಿಕೊಂಡು ಯಾದಗಿರಿಗೆ ಹೋಗಿ ಬರುತ್ತೇನೆ. ಅದರಂತೆ ನಿನ್ನೆ ದಿನಾಂಕ:06/12/2022 ರಂದು ಬೆಳಗ್ಗೆ ನಾನು ಗೌಂಡಿ ಕೆಲಸಕ್ಕಾಗಿ ಯಾದಗಿರಿಗೆ ಹೋಗಿ ನನ್ನ ಕೆಲಸ ಮುಗಿಸಿಕೊಂಡು ಸಾಯಂಕಾಲ ಮರಳಿ ಸದರಿ ನನ್ನ ಮೋಟರ ಸೈಕಲ್ ಮೇಲೆ ಕುರುಕುಂದಿ ಹೊರಟೆನು. ನಾನು ಯಾದಗಿರಿ ಹಳೆ ಬಸ್ ಸ್ಟ್ಯಾಂಡ ಹತ್ತಿರ ಹೋಗುತ್ತಿದ್ದಾಗ ನಮ್ಮ ಅಣ್ಣತಮ್ಮಕೀಯವರಾದ ತಿಪ್ಪಣ್ಣ ತಂದೆ ಶರಣಪ್ಪ ರಾಮಜಗಲಿ ಮತ್ತು ಮರೆಪ್ಪ ತಂದೆ ಖಂಡಪ್ಪ ರಾಮಜಗಲಿ ಇಬ್ಬರೂ ತಿಪ್ಪಣ್ಣನ ಮೋಟರ್ ಸೈಕಲ್ ಮೇಲೆ ಊರಿಗೆ ಹೋಗುತ್ತಿದ್ದವರು ನನಗೆ ಭೇಟಿ ಆದರು. ಆಗ ನಾನು ನನ್ನ ಮೋಟರ್ ಸೈಕಲ್ ಮೇಲೆ ಹೊರಟೆ. ಅವರು ತಿಪ್ಪಣ್ಣನ ಮೋಟರ್ ಸೈಕಲ್ ಮೇಲೆ ಹೊರಟರು. ನಾನು ಅವರಿಗಿಂತ ಸ್ವಲ್ಪ ಮುಂದೆ ಹೋಗುತ್ತಿದ್ದೇನು. ಯಾದಗಿರಿ-ಶಹಾಪೂರ ಮೇನ ರೋಡ ನಾಯ್ಕಲ್ ಪೆಟ್ರೋಲ್ ಪಂಪ್ ಇನ್ನು ಸ್ವಲ್ಪ ದೂರ ರೋಡಿನ ಮೇಲೆ ನನ್ನ ಪಾಡಿಗೆ ನಾನು ಮೋಟರ್ ಸೈಕಲ್ ಮೇಲೆ ನಿಧಾನವಾಗಿ ಹೋಗುತ್ತಿದ್ದಾಗ ಸಾಯಂಕಾಲ 6-30 ಗಂಟೆ ಸುಮಾರಿಗೆ ಎದುರುಗಡೆಯಿಂದ ಕಾರ ನಂ. ಕೆಎ 51 ಎಬಿ 2593 ನೇದನ್ನು ಅದರ ಚಾಲಕನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನಗೆ ಬಲ ಸೈಡಿನಿಂದ ಡಿಕ್ಕಿಪಡಿಸಿದನು. ಅಪಘಾತದಲ್ಲಿ ನನ್ನ ಬಲಗೈಗೆ ರಕ್ತಗಾಯ, ಬಲಗಾಲ ಹಿಮ್ಮಡಿಗೆ ಒಳಪೆಟ್ಟು ಮತ್ತು ಎಡ ಮುಡ್ಡಿಗೆ ಕೂಡಾ ಒಳಪೆಟ್ಟಾಗಿತ್ತು. ಸದರಿ ಅಪಘಾತವನ್ನು ನನ್ನ ಹಿಂದೆ ಬರುತ್ತಿದ್ದ ನಮ್ಮ ಅಣ್ಣತಮ್ಮಕಿಯವರಾದ ತಿಪ್ಪಣ್ಣ ಮತ್ತು ಮರೆಪ್ಪ ಇಬ್ಬರೂ ಹಾಗೂ ಯಾದಗಿರಿ ಕಡೆ ಹೋಗುತ್ತಿದ್ದ ನಮ್ಮ ಪರಿಚಯದ ಬಸವರಾಜ ಮೇತ್ರಿ ಸಾ:ನಾಯ್ಕಲ್ ಇವರು ನೋಡಿರುತ್ತಾರೆ. ನನಗೆ ಅಪಘಾತಪಡಿಸಿದ ಕಾರಿನ ಚಾಲಕನಿಗೆ ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ರಾಜಶೇಖರ ತಂದೆ ನಾಗಯ್ಯ ಗುತ್ತೆದಾರ ಸಾ:ಭಂಕೂರು ತಾ:ಶಹಾಬಾದ ಎಂದು ಹೇಳಿದನು. ನಮ್ಮ ಅಣ್ಣತಮ್ಮಂದಿರು ನನಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ರಾತ್ರಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ನಿನ್ನೆ ರಾತ್ರಿಯಾಗಿದ್ದರಿಂದ ಇಂದು ಬೆಳಗ್ಗೆ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡಲು ತಡವಾಗಿರುತ್ತದೆ. ಕಾರಣ ಕಾರಿನ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನಗೆ ಅಪಘಾತಪಡಿಸಿದ್ದು, ಸದರಿ ಕಾರಿನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿಯನ್ನು ಸ್ವಿಕೃತ ಮಾಡಿಕೊಂಡು 7-15 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 135/2022 ಕಲಂ:279, 337 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
 
ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 80/2022  ಕಲಂ: 457, 380 ಐಪಿಸಿ: : ಇಂದು ದಿನಾಂಕ 07.12.2022 ರಂದು 6:00 ಪಿಎಮಕ್ಕೆ ಪಿರ್ಯಾದಿ ಶ್ರೀ ಶಿವರಾಜ ತಂದೆ ಬಸಣ್ಣ ಕರಡಿ ವ:27 ವರ್ಷ ಉ:ಒಕ್ಕಲುತನ ಜಾ:ಹಿಂದೂ ಕುರುಬರ ಸಾ:ಹಿರೇಹಳ್ಳ ತಾ:ಸುರಪೂರ  ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶವೆನೆಂದರೆ ದಿನಾಂಕ 04.12.2022 ರಂದು ರಾತ್ರಿ 9:30 ಗಂಟೆಯ ನಾನು ಮತ್ತು ನನ್ನ ತಾಯಿ, ನನ್ನ ಹೆಂಡತಿ ಹಾಗೂ ಮಕ್ಕಳು ಎಂದಿನಂತೆ ಊಟ ಮಾಡಿ ನಮ್ಮ ಟಗರು ಮರಿಗಳನ್ನು ಪತ್ರಾಸ್ ಶೆಡ್ನ ಒಳಗೆ ಕಟ್ಟಿ ಬಾಗಿಲು ಮುಚ್ಚಿ ಬೀಗ ಹಾಕಿ ನಮ್ಮ ಮನೆಯಲ್ಲಿ ಮಲಗಿಕೊಂಡಾಗ ದಿನಾಂಕ 05.12.2022 ರ ರಾತ್ರಿ ಸುಮಾರು 2:00 ಎಎಮ್ ಗಂಟೆಯ ಸುಮಾರಿಗೆ ನಮ್ಮ ಅಂಗಳದಲ್ಲಿನ ಟಗರಿನ ಶೆಡ್ನ ಹತ್ತಿರ ಒಮ್ಮೆಲೇ ಸಪ್ಪಳ ಕೇಳಿ ಬಂದಿದ್ದು ಮತ್ತು ಟಗರುಗಳು ಚೀರಾಡುವ ಶಬ್ದ ಕೇಳಿ ನಾನು ಮತ್ತು ನನ್ನ ಹೆಂಡತಿ ಶಶಿಕಲಾ ರವರು ಎದ್ದು ನಮ್ಮ ಮನೆಯ ಹೊರಗೆ ಎದ್ದು ಬಂದು ನೋಡಿದಾಗ ಯಾರೋ ಕಳ್ಳರು ನಮ್ಮ ಮನೆಯ ಮುಂದಿನ ಅಂಗಳದಲ್ಲಿನ ಪತ್ರಾಸ್ ಶೆಡ್ನ ಬಾಗಿಲಿಗೆ ಹಾಕಿದ ಬೀಗ ಮುರಿದು ಒಳಗೆ ಕಟ್ಟಿದ ನಮ್ಮ 6 ಟಗರು ಮರಿಗಳನ್ನು ಹೊತ್ತುಕೊಂಡು ಕಳುವು ಮಾಡಿಕೊಂಡು ಹೋಗುತ್ತಿದ್ದುದು ಕಂಡು ಬಂದಿದ್ದು ಆಗ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ಅವರನ್ನು ಹಿಡಿಯಲು ಬೆನ್ನು ಹತ್ತಿದಾಗ ಅವರು ಓಡುತ್ತಾ ಹೋಗಿ ಮುಖ್ಯ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಒಂದು ಬಿಳಿಯ ಬಣ್ಣದ ಕಾರಿನಲ್ಲಿ ನಮ್ಮ 3 ಟಗರುಗಳನ್ನು ಹಾಕಿಕೊಂಡು ಕಾರನ್ನು ಚಾಲು ಮಾಡಿಕೊಂಡು ಶಾಂತಪೂರ ಕಡೆಗೆ ಹೋಗಿದ್ದು ಕಳ್ಳರು ಕಳುವು ಮಾಡಿಕೊಂಡು ಹೋದ ನನ್ನ ಟಗರು ಮರಿಗಳನ್ನು ಒಂದೊಂದರ ಅಂದಾಜು ಕಿಮ್ಮತ್ತು 10,000/- ರೂ ಒಟ್ಟು 60,000/- ರೂ ಆಗುತ್ತಿದ್ದು ಕಳುವು ಆದ ನನ್ನ ಟಗರು ಮರಿಗಳನ್ನು ನಾನು ನೋಡಿದರೆ ಗುತರ್ಿಸುತ್ತೇನೆ ಮತ್ತು ಕಳುವು ಮಾಡಿಕೊಂಡು ಹೋದ  ಕಳ್ಳರನ್ನು ಸಹ ಗುತರ್ಿಸುತ್ತೇನೆ ನನ್ನ ಟಗರುಗಳನ್ನು ಕಳ್ಳರು ಹಾಕಿಕೊಂಡ ಹೋದ ಕಾರಿನ ನಂಬರ ನೋಡಿರುವದಿಲ್ಲ ನೋಡಿದಲ್ಲಿ ಕಾರನ್ನು ಗುತರ್ಿಸುತ್ತೇನೆ. ನಾನು ಇಂದಿನವರೆಗೆ ಕುರಿ ಸಂತೆ ನಡೆಯುವ ಊರುಗಳಾದ ಹುಣಸಗಿ ಹಾಗೂ ಇತರೆ ಗ್ರಾಮಗಳಿಗೆ ಹೋಗಿ ಮತ್ತು ಕುರಿಹಟ್ಟಿಗಳಿಗೆ ಹೋಗಿ ಹುಡುಕಾಡಿದ್ದು ನನ್ನ ಟಗರು ಮರಿಗಳು ಸಿಕ್ಕಿರುವದಿಲ್ಲ ಕಾರಣ ಅಲ್ಲಲ್ಲಿ ಹುಡುಕಾಡಿ ಈ ದಿವಸ ತಡವಾಗಿ ತಮ್ಮ ಠಾಣೆಗೆ ಬಂದು ದೂರು ಕೊಡುತ್ತಿದ್ದು ನನ್ನ ಕಳುವಾದ ಆರು ಟಗರು ಮರಿಗಳನ್ನು ಪತ್ತೆ ಮಾಡಿ ಕಳುವು ಮಾಡಿದ ಕಳ್ಳರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 80/2022 ಕಲಂ: 457, 380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡೆನು.
 

ಇತ್ತೀಚಿನ ನವೀಕರಣ​ : 09-12-2022 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080