ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-01-2022

ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ. 05/2022 ಕಲಂ. 269, ಐಪಿಸಿ ಸಂಗಡ ಕಲಂ 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 : ದಿನಾಂಕ. 08/01/2022 ರಂದು 2-15 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ ಇಂದು ದಿನಾಂಕ.08/01/2022 ರಂದು ಯಾದಗಿರಿ ನಗರದಲ್ಲಿ ಕೋರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದ್ದು ಈ ಬಗ್ಗೆ ಕನರ್ಾಟಕ ಸಕರ್ಾರದ ಆಧೇಶ ಸಂಖ್ಯೆ: ಖಆ/158/ಖಿಓಖ/2020 ದಿನಾಂಕ.26/12/2021 ರ ಪ್ರಕಾರ ಒಟ್ಟಾರೆಯಾಗಿ ಕೋವಿಡ್-19 ಕಣ್ಗಾವಲು ಮತ್ತು ನಿಯಂತ್ರಣ ಮತ್ತು ಜಾಗ್ರತೆ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಕುರಿತು ಕಡ್ಡಾಯವಾಗಿ ಯಾವುದೇ ರೋಗ ಹರಡದಂತೆ ಮತ್ತು ತೊಂದರೆಯಾಗದಂತೆ ಜಿಲ್ಲೆಯಲ್ಲಿ ರೆಸ್ಟೋರೆಂಟಗಳು, ಹೋಟಲ್ಗಳಲ್ಲಿ, ಕೋವಿಡ್ ಸೂಕ್ತ ನಡುವಳಿಕೆಗಳನ್ನು ಪಾಲಿಸುವುದು ಮತ್ತು ಅವುಗಳ ಆಸನ ಸಾಮಥ್ರ್ಯದ 50% ಪ್ರತಿಶತ ಮಾತ್ರ ಕಾರ್ಯ ನಿರ್ವಹಿಸುವುದು ಮತ್ತು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯವರು ಕಡ್ಡಾಯವಾಗಿ ಕೋವಿಡ್-19 ನೆಗೆಟಿವ್ ಖಖಿಕಅಖ ಈ ರೀಪೋರ್ಟ ಮತ್ತು 2 ಡೋಸ್ ಕೋವಿಡ್-19 ವ್ಯಾಕ್ಸಿನ್ ಹಾಕಿಸಿಕೊಂಡಿರಬೇಕು ಅಂತಾ ಸಕರ್ಾರ ಆದೇಶ ಹೊರಡಿಸಿದ್ದು ಇರುತ್ತದೆ. ಹಿಗೀದ್ದು ಇಂದು ದಿನಾಂಕ; 08.01.2022 ರಂದು ಮದ್ಯಾಹ್ನ 1.15 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಜೀಪ ಚಾಲಕ ಜಗನ್ನಾಥರೆಡ್ಡಿ ಹೆಚ್.ಸಿ.10, ಅಬ್ದುಲಬಾಷಾ ಪಿಸಿ-237 ರವರು ಕೂಡಿಕೊಂಡು ಕರೋನಾ ಕೋವಿಡ್-19 ಪ್ರಯುಕ್ತ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಡಿಗ್ರಿ ಕಾಲೇಜ ಮುಖಾಂತರ ಹಳೆ ಬಸ್ ನಿಲ್ದಾಣದ ಕಡೆಗೆ 1-30 ಪಿಎಂಕ್ಕೆ ಹೋದಾಗ ಹಳೆ ಬಸ್ ನಿಲ್ದಾಣದ ಎದುರಿಗೆ ಇರುವ ಅನ್ಸಾರ ರೆಸ್ಟೋರೆಂಟ ವೆಜ್ & ನಾನ್ ವೆಜ್ ಹೋಟಲದಲ್ಲಿ ಕೆಲಸ ಮಾಡುವ ಸಿಬ್ಬಂದಿಯವರಿಗೆ ಕರೋನಾ ಕೊವಿಡ್-19 ಲಸಿಕೆ ಹಾಕಿಕೊಂಡ ಬಗ್ಗೆ ಹೋಗಿ ವಿಚಾರಿಸಲು ಅಲ್ಲಿ ಕೆಲಸ ಮಾಡುತ್ತಿದ್ದ ಅಜರ್ುನ ತಂದೆ ಬಂಕಟಲಾಲ ಚವ್ಹಾಣ ಸಾಃಅಲ್ಲಿಪೂರ ತಾಂಡಾ ತಾಃಜಿಃ ಯಾದಗಿರಿ ಈತನು ಮೊದಲನೇ ಲಸಿಕೆ ಮಾತ್ರ ಹಾಕಿಸಿಕೊಂಡ ಬಗ್ಗೆ ತಿಳಿಸಿದ್ದು ಎರಡನೇ ಲಸಿಕೆ ಹಾಕಿಸಿಕೊಂಡಿರುವುದಿಲ್ಲಾ ಅಂತಾ ತಿಳಿಸಿದನು. ನಂತರ ಅಲ್ಲಿದ್ದ ಇನ್ನೋಬ್ಬ ಸಲೀಂ ತಂದೆ ರಹೀಮ ಮುಜಾವರ ಸಾಃಮುಸ್ಲಿಂಪೂರ ಯಾದಗಿರಿ ರವರು ಯಾವುದೆ ಕೋವಿಡ್-19 ಲಸಿಕೆ ಹಾಕಿಕೊಂಡಿರುವುದಿಲ್ಲಾ ಅಂತಾ ತಿಳಿಸಿದ್ದು ಸದರಿಯವರ ಹತ್ತಿರ ನೆಗೆಟಿವ್ ರೀಪೋರ್ಟ ಇರುವುದಿಲ್ಲಾ. ನಂತರ ಅನ್ಸರ ಹೋಟಲ್ ಮಾಲಿಕರಾದ ಅನ್ಸರೊದ್ದಿನ್ ತಂದೆ ಅಲಾವುದ್ದಿನ್ ಹಳೆ ಬಸ್ ನಿಲ್ದಾಣ ಹತ್ತಿರ ಯಾದಗಿರಿ ಈತನು ತಮ್ಮ ಹೋಟಲ್ನ ಕೆಲಸಗಾರರಿಗೆ ಕೆಲಸಕ್ಕೆ ತೆಗೆದುಕೊಳ್ಳುವ ಸಮಯದಲ್ಲಿ ಕೋವಿಡ್-19 ಲಸಿಕೆ ಹಾಕಿಕೊಂಡಿರುವ ಬಗ್ಗೆ ಎನು ಕೇಳದೆ ಕೆಲಸಕ್ಕೆ ಇಟ್ಟುಕೊಂಡಿದ್ದು ಯಾರೇ ಆಗಲಿ ಎರಡು ಕೊವಿಡ್ ಲಸಿಕೆ ಹಾಕಿಸಿಕೊಂಡಿರಬೇಕು ಅಂತಾ ಸಕರ್ಾರದ ಆಧೇಶವಿದ್ದರೂ ಕೂಡಾ ಲಸಿಕೆ ಹಾಕಿಕೊಳ್ಳದೆ ಇರುವವರನ್ನು ಕೆಲಸಕ್ಕಿಟ್ಟುಕೊಂಡಿದ್ದು ಇದರಿಂದ ಸಾರ್ವಜನಿಕರಿಗೆ ಒಬ್ಬರಿಂದ ಒಬ್ಬರಿಗೆ ರೋಗ ಹರಡುವ ಸಾಧ್ಯತೆಗಳಿದ್ದು ಸಕರ್ಾರದ ಆದೇಶದ ಪ್ರಕಾರ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಹಾಗೂ ಕಡ್ಡಾಯವಾಗಿ 2 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಅಂತಾ ಆದೇಶ ಹೊರಡಿಸಿದ್ದು ಸದರಿ ಅನ್ಸರ ಹೊಟೇಲ ಮಾಲಿಕನು ಇತರರಿಗೆ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದಿದ್ದು ಹಾಗೂ ತಮ್ಮ ಹೋಟೆಲದಲ್ಲಿಯ ಕೆಲಸಗಾರರು ಕೋವಿಡ್ ಲಸಿಕೆ ಹಾಕಿಸಿಕೊಳ್ಳದೆ ಇರುವುದು ಹಾಗೂ ಕೋವಿಡ್-19 ನೆಗೆಟಿವ್ ಖಖಿಕಅಖ ಈ ರೀಪೋರ್ಟ ಇಲ್ಲದಿರುವುದು ಗೋತ್ತಿದ್ದರೂ ನಿರ್ಲಕ್ಷತನ ವಹಿಸಿ ಸಕರ್ಾರದ ಆದೇಶ ಉಲ್ಲಂಘನೆ ಮಾಡಿದ್ದು ಇರುತ್ತದೆ ಸದರಿ ಆರೊಫಿತನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ನಿಮಗೆ ಪಿರ್ಯಾದಿ ನೀಡಿದ್ದು ಠಾಣೆ ಗುನ್ನೆ ನಂ 05/2022 ಕಲಂ. 269 ಐಪಿಸಿ ಮತ್ತು ಕಲಂ. 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 04/2022 ಕಲಂ: 269, 188 ಐಪಿಸಿ : ಇಂದು ದಿನಾಂಕ:08/01/2022 ರಂದು 12:30 ಪಿ.ಎಂ.ಕ್ಕೆ ಠಾಣೆಯಎಸ್ಹೆಚ್ಡಿಕರ್ತವ್ಯದಲ್ಲಿದ್ದಾಗ ಪಿಯರ್ಾದಿದಾರರಾದಶ್ರೀ ಗುರುಸ್ವಾಮಿತಂದೆ ಮಹಾಂತಯ್ಯ ಹಿರೇಮಠ ವ|| 32 ವರ್ಷ ಉ|| ಕಿರಿಯಆರೋಗ್ಯ ನಿರೀಕ್ಷಕರು ನಗರ ಸಭೆ ಸುರಪುರರವರುಇಬ್ಬರುವ್ಯಕ್ತಿಳೊಂದಿಗೆ ಠಾಣೆಗೆ ಬಂದುದೂರುಅಜರ್ಿ ನಿಡಿದ್ದು, ಸಾರಾಂಶವೆನೆಂದರೆಕೊವಿಡ್-19 ರೋಗಾಣಿವಿನ 3 ನೇ ಅಲೇ ಓಮಿಕ್ರಾನ್ ವೈರಾಣುವಿನ ಹರಡುವಿಕೆಯನ್ನುತಡೆಗಟ್ಟುವ ನಿಟ್ಟಿನಲ್ಲಿ ಹೊಟೆಲ್, ಅಂಗಡಿ ಮುಗ್ಗಟ್ಟುಗಳಲ್ಲಿ ಕೆಲಸ ಮಾಡುತ್ತಿರುವವರುಕೋವಿಡ್ನ 1 & 2 ನೇ ಲಸಿಕೆ ಹಾಕಿಸಿಕೊಳ್ಳದಿರುವವರ ಮೇಲೆ ಸೂಕ್ತ ಕಾನೂನು ಕ್ರಮಜರುಗಿಸಲು ಸರಕಾರದಆದೇಶವಿದ್ದು ಹಾಗೂ ಮಾನ್ಯ ಪೌರಾಯುಕ್ತರು ಸುರಪುರ ನಗರ ಸಭೆರವರಆದೇಶದ ಮೇರೆಗೆ, ನಾನು ಇಂದು ದಿನಾಂಕ:08-01-2022 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನನ್ನಜೊತೆಯಲ್ಲಿ ಸುರಪುರ ಪೊಲೀಸ್ಠಾಣೆಯ ಸಿಬ್ಬಂಧಿಯವರಾದ ಶ್ರಿ ಹೊನ್ನಪ್ಪ ಸಿಹೆಚ್ಸಿ-101, ಶ್ರೀ ದುರ್ಗಪ್ಪ ಸಿಪಿಸಿ-190 ಇವರೊಂದಿಗೆ ಸುರಪುರ ನಗರದಲ್ಲಿ ಹೋಗುತ್ತಿರುವಾಗ ಬೆಳಿಗ್ಗೆ 11:30 ಗಂಟೆ ಸುಮಾರಿಗೆ ಸುರಪೂರ ನಗರದ ಬಸ್ ನಿಲ್ದಾಣದ ಹತ್ತಿರಇರುವ ಪ್ರಸಾದಉಡುಪಿ ಹೊಟೆಲದಲ್ಲಿ ಕೆಲಸ ಮಾಡುತ್ತಿದ್ದ 1) ಶಿವರಾಜ ತಂದೆ ಸೋಮನಾಥಉಲಾಲ್ ವ|| 25 ವರ್ಷಜಾ|| ಲಿಂಗಾಯತ ಉ|| ಸಪ್ಲಯರ್ ಕೆಲಸ ಸಾ|| ಮಿನಗುಂದತಾ|| ಆಳಂದ ಜಿ|| ಕಲಬುರಗಿ ಮತ್ತು 2) ಮಹೇಶ ತಂದೆ ಮೋಹನ್ ವ|| 30 ವರ್ಷಜಾ|| ಶೆಟ್ಟಿ ಉ|| ಸಪ್ಲಯರ್ ಕೆಲಸ ಸಾ|| ಬನ್ನಂಜಿತಾ||ಜಿ|| ಉಡುಪಿ ಇವರಿಗೆಕೋವಿಡ್ ಲಸಿಕೆ (ವ್ಯಾಕ್ಸಿನ್) ಹಾಕಿಸಿಕೊಂಡ ಬಗ್ಗೆ ಕೇಳಲಾಗಿ ಸದರಿಯವರುಒಂದನೇ ಲಸಿಕೆ ಹಾಕಿಸಿಕೊಂಡಿದ್ದು 2 ನೇ ಲಸಿಕೆ (ವ್ಯಾಕ್ಸಿನ್) ಹಾಕಿಸಿಕೊಂಡಿರುವದಿಲ್ಲ ಅಂತಾ ತಿಳಿಸಿರುತ್ತಾರೆ. ಕಾರಣ ಸದರಿಯವರು 2 ನೇ ಲಸಿಕೆಯನ್ನು ಹಾಕಿಸಿಕೊಳ್ಳದೇ, ಕೋವಿಡ್ನ ನಿಯಮಗಳನ್ನು ಪಾಲಿಸಿದೆ, ಸರಕಾರದಆದೇಶವನ್ನು ಉಲ್ಲಂಘಿಸಿದ್ದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮಜರುಗಿಸಲು ವಿನಂತಿಅಂತಾಅಜರ್ಿನಿಡಿದ್ದರ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

 


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 05/2022 ಕಲಂ: 448, 323, 354, 504, 506, 109 ಸಂಗಡ.34 ಐಪಿಸಿ : ಇಂದು ದಿನಾಂಕಃ 08/01/2022 ರಂದು 2.30 ಪಿ.ಎಂ ಕ್ಕೆ ಶ್ರೀಮತಿ ಚಂದ್ರಕಲಾ ಗಂಡ ದೇವಿಂದ್ರಪ್ಪ ಭಂಟನೂರ ವಯಾ|| 35 ಉ:ಮನೆಕೆಲಸ ಜಾ:ಹಿಂದು ರೆಡ್ಡಿ ಸಾ: ಬಾಚಿಮಟ್ಟಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳು ಒಟ್ಟು 4 ಜನ ಮಕ್ಕಳಿರುತ್ತೇವೆ. ನಾಲ್ಕೂ ಜನರದು ಮದುವೆಯಾಗಿದ್ದು ಇರುತ್ತದೆ. ನನ್ನ ಅಣ್ಣನಾದ ಪ್ರಭುಗೌಡ ಈತನು 2011 ರಲ್ಲಿ ನಗನೂರ ಗ್ರಾಮದ ಶಿವಲೀಲಾ ಇವಳೊಂದಿಗೆ ಮದುವೆಯಾಗಿದ್ದು ಇರುತ್ತದೆ. ನನ್ನ ಅಣ್ಣನ ಹೆಂಡತಿಯಾದ ಶಿವಲೀಲಾ ಇವಳು ಸುಮಾರು 2 ವರ್ಷಗಳ ಹಿಂದೆ ಬೋನಾಳ ಗ್ರಾಮದ ಸಾಹೇಬಗೌಡ ತಂದೆ ರುದ್ರಗೌಡ ಪೊಲೀಸ್ ಪಾಟೀಲ ಈತನೊಂದಿಗೆ ಅನೈತಿಕ ಸಂಬಂದ ಹೊಂದಿದ್ದ ಬಗ್ಗೆ ತಿಳಿದು ಮನೆಯಲ್ಲಿ ಎಲ್ಲರೂ ಸಾಕಷ್ಟು ಬಾರಿ ತಿಳಿ ಹೇಳಿ ಈ ರೀತಿ ಮಾಡುವದು ಸರಿ ಅಲ್ಲ, 2 ಮಕ್ಕಳಿವೆ, ನಮ್ಮದು ಮರ್ಯಾದಸ್ತ ಕುಟುಂಬ ಇರುತ್ತದೆ ಅಂತ ಬುದ್ದಿವಾದ ಹೇಳಿದ್ದು ಇರುತ್ತದೆ. ಆದರೂ ಕೂಡ ಶಿವಲೀಲಾ ಇವಳು ಅನೈತಿಕ ಸಂಬಂದ ಮುಂಧುವರೆಸಿದ್ದರಿಂದ ನಮ್ಮ ಅಣ್ಣನಾದ ಪ್ರಭುಗೌಡ ಈತನು ತನ್ನ ಸಂಸಾರ ಹಾಳಾಗಬಾರದೆಂದು ಸಹಿಸಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದನು. ನಾನು, ನಮ್ಮ ತಾಯಿಯಾದ ಚನ್ನಮ್ಮ ಇವಳಿಗೆ ಆರಾಮವಿಲ್ಲದ ಕಾರಣ ಮಾತನಾಡಿಸಲು ದಿನಾಂಕ: 26/12/2021 ರಂದು ಬಾಚಿಮಟ್ಟಿ ಗ್ರಾಮದಿಂದ ನನ್ನ ತವರು ಮನೆಯಾದ ಬೋನಾಳ ಗ್ರಾಮಕ್ಕೆ ಬಂದಿದ್ದೆನು. ಹೀಗಿದ್ದು ದಿನಾಂಕ: 27/12/2021 ರಂದು ರಾತ್ರಿ 10:30 ಗಂಟೆ ಸುಮಾರಿಗೆ ಮನೆಯಲ್ಲಿ ನಾನು, ನಮ್ಮ ತಾಯಿ ಚನ್ನಮ್ಮ, ನಮ್ಮ ಅಣ್ಣನಾದ ಪ್ರಭುಗೌಡ, ತಮ್ಮನಾದ ಬಸನಗೌಡ, ಅತ್ತಿಗೆಯಾದ ಶಿವಲೀಲಾ ಎಲ್ಲರು ಮನೆಯಲ್ಲಿ ಇದ್ದಾಗ ಏಕಾಏಕಿ ಸಾಹೇಬಗೌಡ ತಂದೆ ರುದ್ರಗೌಡ ಪೊಲೀಸ್ ಪಾಟೀಲ ಈತನು ಮನೆಯಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿ ಬಂದವನೇ ನಮ್ಮ ಅಣ್ಣನ ಹೆಂಡತಿಯಾದ ಶಿವಲೀಲಾ ಇವಳನ್ನು ಕರೆದು ನಡೆ ಹೋಗೋಣ ಅಂತ ಅಂದು ಅತ್ತಿಗೆಯಾದ ಶಿವಲೀಲಾ ಇವಳೊಂದಿಗೆ ಹೊರಹೋಗುತ್ತಿದ್ದಾಗ, ಅಣ್ಣನಾದ ಪ್ರಭುಗೌಡ ಈತನು ಏಕೆ ಈ ರೀತಿ ಮಾಡುತ್ತಿದ್ದಿಯಾ ಅಂತ ಅಂದಿದ್ದಕ್ಕೆ ಏನಲೆ ಪ್ರಬ್ಯಾ ಸೂಳೆ ಮಗನೆ ನಿನ್ನ ಹೆಂಡತಿಗೆ ನಾನು ಕರೆದುಕೊಂಡು ಹೋಗುತ್ತಿದ್ದೇನೆ ಅವಳು ನನ್ನೊಂದಿಗೆ ಬರುತ್ತಾಳೆ ಅದೇನು ನೀನು ಕೇಳುತ್ತಿ ಅಂತ ಅವಾಚ್ಯವಾಗಿ ಬೈಯುತ್ತಾ ತನ್ನ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆದು ದಬ್ಬಿಸಿಕೊಟ್ಟನು, ಆಗ ನಾನು ಬಿಡಿಸಿಕೊಳ್ಳಲು ಹೋದಾಗ ಸಾಹೇಬಗೌಡ ಈತನು ನನ್ನ ಸೀರೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ನನ್ನ ಅತ್ತಿಗೆಯಾದ ಶಿವಲೀಲಾ ಇವಳು ನನ್ನ ತಲೆಯ ಕೂದಲು ಹಿಡಿದು ಜಗ್ಗಾಡಿ ತನ್ನ ಕೈಯಿಂದ ನನ್ನ ಬೆನ್ನಿಗೆ ಹೊಡೆದಳು ಇಬ್ಬರು ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಗೆ ಬೆನ್ನಿಗೆ ಒದೆಯುತ್ತಿದ್ದಾಗ, ನಾನು ಸತ್ತೆನೆಪ್ಪೋ ಅಂತ ಜೋರಾಗಿ ಚೀರಿದಾಗ ಅಲ್ಲಿಯೇ ಇದ್ದ ನನ್ನ ತಮ್ಮನಾದ ಬಸನಗೌಡ, ತಾಯಿಯಾದ ಚನ್ನಮ್ಮ ಮತ್ತು ನಾವು ಚೀರಾಡುವ ಶಬ್ದ ಕೇಳಿ ಬಂದ ನಮ್ಮ ಮನೆಯ ಬಾಜುಮನೆಯ ಅಣತಮಕಿಯ ಬಾಪುಗೌಡ ತಂದೆ ಪರಮಣ್ಣ ಕಮತಗಿ, ಮಲ್ಲಿಕಾಜರ್ುನ ತಂದೆ ಶಿವಪುತ್ರಪ್ಪ ಕಮತಗಿ ಇವರು ಬಂದು ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ಸಾಹೇಬಗೌಡನು ನನ್ನ ಅತ್ತಿಗೆ ಶಿವಲೀಲಾ ಇವಳನ್ನು ಕರೆದುಕೊಂಡು ಹೊರ ಹೋಗುತ್ತಾ, ನಿಮಗೆ ಇವರೆಲ್ಲರು ಬಂದು ಬಿಡಿಸಿದ್ದಾರೆ ಅಂತ ಬಿಟ್ಟಿದ್ದೇವೆ ಇಲ್ಲಾಂದ್ರೆ ನಿಮ್ಮ ಜೀವಸಹಿತ ಬಿಡುತ್ತಿರಲಿಲ್ಲ ಸೂಳೆಮಕ್ಕಳೆ ಅಂತ ಜೀವದ ಬೆದರಿಕೆ ಹಾಕಿ ಮನೆಯಿಂದ ಹೊರಹೋದರು. ಈ ಘಟನೆಗೆ ಸಾಹೇಬಗೌಡ ಈತನ ಕಾಕನಾದ ಷಣ್ಮುಖಪ್ಪಗೌಡ ತಂದೆ ನಾಗಣ್ಣಗೌಡ (ದೇಸಾಯಿ) ಪೊಲೀಸ್ ಪಾಟೀಲ ಮತ್ತು ಬಸನಗೌಡ ತಂದೆ ನಾಗಣ್ಣಗೌಡ ಪೊಲೀಸ್ ಪಾಟೀಲ ಇವರ ಕುಮ್ಮಕ್ಕು ಇರುತ್ತದೆ. ನನಗೆ ಮತ್ತು ನನ್ನ ಅಣ್ಣನಿಗೆ ಅಷ್ಟೇನು ಗಾಯಗಳು ಆಗಿರದ ಕಾರಣ ನಾವು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ಈ ಬಗ್ಗೆ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯವಾಗಿ ಬೈದು, ಕೈಯಿಂದ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿ, ನನಗೆ ಮಾನಭಂಗ ಮಾಡಲು ಪ್ರಯತ್ನಿಸಿದವರ ಮತ್ತು ಇದಕ್ಕೆ ಕುಮ್ಮಕ್ಕು ನೀಡದವರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 05/2022 ಕಲಂ: 448, 323, 354, 504, 506, 109 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 03/2022 ಕಲಂ279, 337, 338, ಐಪಿಸಿ ಸಂ. 187 ಐ.ಎಮ್.ವ್ಹಿ ಕಾಯ್ದೆ : ದಿನಾಂಕ:21/12/2021 ರಂದು ಸಾಯಂಕಾಲ 6.45 ಗಂಟೆಗೆ ಫಿರ್ಯಾದಿಯು ತನ್ನ ಗೂಡ್ಸ್ ಗಾಡಿಯಲ್ಲಿ ಲೇಬರಿಗೆ ಕರೆದುಕೊಂಡು ಬರಲು ಹುಣಸಗಿ ಸೀಮಾಂತರದ ಕೆಂಭಾವಿ ರಸ್ತೆಯ ಮೇಲೆ ಹೋಗಿ ಸಿದ್ದಣ್ಣ ಸಾಹುಕಾರ ಇವರ ಹೊಲದ ಹತ್ತಿರ ತನ್ನ ಗೂಡ್ಸ ಗಾಡಿ ನಿಲ್ಲಿಸಿ ರಸ್ತೆ ಪಕ್ಕದಲ್ಲಿ ನಿಂತಾಗ ಆರೋಪಿತನು ತನ್ನ ಮೋಟಾರ ಸೈಕಲ್ ನಂ:ಕೆಎ-33 ಎಲ್-8619 ನೇದ್ದನ್ನು ಹುಣಸಗಿ ಕಡೆಯಿಂದ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಪಕ್ಕದಲ್ಲಿ ನಿಂತ ಫಿರ್ಯಾದಿಗೆ ಜೋರಾಗಿ ಡಿಕ್ಕಿ ಕೊಟ್ಟು ಮುಂದೆ ಹೋಗಿ ಮೋಟಾರ ಸೈಕಲ್ ನಿಲ್ಲಿಸಿ ಆರೋಪಿತನು ಓಡಿ ಹೋಗಿದ್ದು, ಫಿರ್ಯಾದಿಗೆ ಎಡಗಾಲು & ಎಡಗೈಗೆ ಭಾರಿ ಒಳಪೆಟ್ಟಾಗಿ ಎಡಕೈ ಮುರಿದಿದ್ದು ಎಡಗಾಲ ಹಿಂಬಡಕ್ಕೆ ಭಾರಿ ಒಳಪೆಟ್ಟಾಗಿದ್ದು ಅಲ್ಲದೆ ಎಡಗಾಲ ಮೊಳಕಾಲಿಗೆ ಭಾರಿ ಒಳಪೆಟ್ಟಾಗಿ ಎಲುಬು ಮುರಿದ ಬಗ್ಗೆ ಅಪರಾಧ.

ಇತ್ತೀಚಿನ ನವೀಕರಣ​ : 09-01-2022 10:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080