ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/02/2021

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 26/2021 ಕಲಂ 78 (3) ಕೆ.ಪಿ ಆಕ್ಟ್ : ಕೇಸಿನ ಸಂಕ್ಷೀಪ್ತ ಸಾರಾಂಶ: ಇಂದು ದಿನಾಂಕ 08/02/2021 ರಂದು, ಸಾಯಂಕಾಲ 18-30 -ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚಂದ್ರಕಾಂತ ಪಿ.ಎಸ್.ಐ (ಕಾಸು) ಶಹಾಪೂರ ಪೊಲೀಸ್ ಠಾಣೆ ರವರು, ಕನ್ನಡದಲ್ಲಿ ಟೈಪ್ ಮಾಡಿದಿ ವರದಿ ಸಲ್ಲಿಸಿದ್ದೇನೆಂದರೆ, ನಾನು ಇಂದು ದಿನಾಂಕ: 08/02/2021 ರಂದು, ಸಾಯಂಕಾಲ 17-45 ಗಂಟೆಯ ಸುಮಾರಿಗೆ ಪೊಲೀಸ್ ಠಾಣೆಯಲ್ಲಿದ್ದಾಗ, ಶಹಾಪೂರ ಪಟ್ಟಣದ ಆಸರ ಮೊಹಲ್ಲಾದ ಭಾಗಪ್ಪನ ಹೊಟೇಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದಾನೆ ಮಾಹಿತಿ ಬಂದಿದ್ದು, ಸದರಿ ಮಾಹಿತಿಯು ಖಚಿತ ಪಡಿಸಿಕೊಂಡು, ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು ಇಂದು ಸಾಯಂಕಾಲ 18-15 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಮಟಕಾ ನಂಬರ ಬರೆದುಕೊಳ್ಳುವ ಅಪರಿಚಿತ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಬೇಕು ಅಂತ ಇತ್ಯಾದಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 26/2021 ಕಲಂ 78(3) ಕೆ.ಪಿಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 27/2020 ಕಲಂಃ ಕಲಂ 279,338 ಐಪಿಸಿ : ಇಂದು ದಿನಾಂಕ: 08-02-2021 ರಂದು 7:30 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಶರಣಪ್ಪ ತಂದೆ ಲಕ್ಷ್ಮಣ ಸಗರ ವಯ: 27 ವರ್ಷ ಜಾ: ಬೇಡರ ಉ: ಒಕ್ಕಲುತನ ಸಾ: ಶಾರದಹಳ್ಳಿ ತಾ: ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರುಪಡಿಸಿದ್ದು ಏನಂದರೆ ನಾನು ಒಂದು ಟಂಟಂ ಆಟೋ ನಂ. ಕೆ.ಎ.33-ಬಿ-1783 ನೇದ್ದನ್ನು ಹೊಂದಿದ್ದು ಅದಕ್ಕೆ ನಮ್ಮೂರಿನ ಬಸವರಾಜ ತಂದೆ ಬೀಮರಾಯ ಸೂಗೂರ ಎಂಬುವವನಿಗೆ ಚಾಲಕ ಅಂತಾ ನೇಮಿಸಿಕೊಂಡಿದ್ದು ಇದೆ. ನಮ್ಮ ಆಟೋ ಶಹಾಪುರದಲ್ಲಿ ಪ್ಯಾಸೆಂಜರ ಸಾಗಿಸುತ್ತಾನೆ ಸಾಯಂಕಾಲ ನಮ್ಮೂರಿಗೆ ಬರುತ್ತದೆ. ಹೀಗಿದ್ದು ಇಂದು ದಿನಾಂಕ: 08-02-2021 ರಂದು ಮುಂಜಾನೆ ನಾನು ಮತ್ತು ನಮ್ಮ ಚಾಲಕ ಬಸವರಾಜ ಇಬ್ಬರೂ ನಮ್ಮೂರಿನಿಂದ ನಮ್ಮ ಆಟೋದಲ್ಲಿ ಶಹಾಪುರಕ್ಕೆ ಹೊರಟಿದ್ದೆವು. ನಮ್ಮ ಆಟೋದಲ್ಲಿ ನಮ್ಮೂರಿನ ಭೀಮಣ್ಣ ತಂದೆ ಅಂಬ್ಲಯ್ಯ ಸುರಪುರ ಇವರು ಶಹಾಪುರಕ್ಕೆ ಬರುವ ಸಲುವಾಗಿ ನಮ್ಮ ಆಟೋದಲ್ಲೇ ಕುಳಿತು ಬಂದರು. ಹೀಗೆ ನಮ್ಮ ಆಟೋದಲ್ಲಿ ನಾವು ಹೊರಟಾಗ 9:45 ಎ.ಎಮ್. ಸುಮಾರಿಗೆ ವಿಭೂತಿಹಳ್ಳಿ ದಾಟಿದ ನಂತರ ತಿಪ್ಪನಳ್ಳಿ ಕ್ರಾಸ ಹತ್ತಿರ ಹೊರಟಾಗ ನಮ್ಮ ಆಟೋದ ಹಿಂದಿನಿಂದ ಒಂದು ಕೆ.ಎಸ್. ಆರ್.ಟಿ.ಸಿ. ಬಸ್ ನಂಬರ ಕೆ.ಎ.33- ಎಫ್.0264 ನೇದ್ದನ್ನು ಅದರ ಚಾಲಕು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಆಟೋಕ್ಕೆ ಹಿಂದಿನಿಂದ ಡಿಕ್ಕಿಪಡಿಸಿದನು. ಅದರಿಂದ ನಮ್ಮ ಆಟೋ ಮುಂದೆ ಹೋಗಿ ಕೆನಾಲ ಗೋಡೆಗೆ ಡಿಕ್ಕಿಯಾಗಿ ಆಟೋದಲ್ಲಿ ಕುಳಿತಿದ್ದ ಭಿಮಣ್ಣನಿಗೆ ಎಡಗಾಲ ತೊಡೆಗೆ ಭಾರೀ ಗಾಯವಾಗಿವಾಗಿದ್ದು ನಡೆಯಲು ಬರುತ್ತಿಲ್ಲ ಆಗ 108 ದ ಸಹಾದಿಂದ ಬೀಮಣ್ಣನಿಗೆ ಉಪಚಾರಕ್ಕೆ ಶಹಾಪುರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಬೀಮಣ್ಣನಿಗೆ ಮರಾಷ್ಟ್ರದ ಮಿರಜಕ್ಕೆ ಕಳುಹಿಸಿದ್ದು ಇರುತ್ತದೆ. ನನಗೆ ಮತ್ತು ನಮ್ಮ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಬಸ್ ಚಾಲಕನ ಹೆಸರು ಬುರಾನಪಟೇಲ್ ಬಿರಾದಾರ ಅಂತಾ ಗೊತ್ತಾಗಿದೆ. ಅಫಘಾತಕ್ಕೀಡಾದ ಎರಡೂ ವಾಹನಗಳು ಸ್ಥಳದಲ್ಲೆ ಇವೆ. ಗಾಯಾಳು ಬೀಮಣ್ಣನಿಗೆ ಹೆಚ್ಚಿನ ಉಪಚಾರಕ್ಕೆ ಕಳುಹಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಇರುತ್ತದೆ ಕಾರಣ ಇಂದು ದಿನಾಂಕ: 08-02-2021 ರಂದು ಮುಂಜಾನೆ 9:45 ಎ.ಎಮ್.ಕ್ಕೆ ತಿಪ್ಪನಳ್ಳಿ ಕ್ರಾಸ ಹತ್ತಿರ ನಮ್ಮ ಆಟೋಕ್ಕೆ ಹಿಂದಿನಿಂದ ಡಿಕ್ಕಿಪಟಿಸಿ ಭಿಮಣ್ಣನಿಗೆ ಭಾರೀ ಗಾಯ ಮಾಡಿದ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ ಕೆ.ಎ. 33- ಎಫ್. 0263 ನೇದ್ದರ ಚಾಲಕ ಬುರಾನಪಟೇಲ್ ರವರ ಮೇಲೆ ಕಾನೂನು ಕ್ರಮ ಜರುಗಿಸಲ ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 27/2021 ಕಲಂ 279 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ :- 20/2021 ಕಲಂ 78(3) ಕೆ.ಪಿ. ಆ್ಯಕ್ಟ : ದಿನಾಂಕ 08/02/2020 ರಂದು ಮಧ್ಯಾಹ್ನ 3-30 ಪಿ.ಎಮ್ ಕ್ಕೆ ಆರೋಪಿತನು ಬಂದಳ್ಳಿ ಗ್ರಾಮದಲ್ಲಿ ಇರುವ ಸೋಲಾಪೂರದೊರ ಇವರ ಕಿರಾಣಿ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಪ್ರೇರೇಪಣೆ ಮಾಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಂಚರು ಮತ್ತು ಸಿಬ್ಬಂಧಿಯವರ ಜೋತೆಗೆ ದಾಳಿ ಮಾಡಿ ಹಿಡಿದು ಆರೋಪಿತನಿಂದ ನಗದು ಹಣ 540/ರೂ, ಒಂದು ಬಾಲಪೆನ್ನ, ಒಂದು ಮಟಕಾ ಚೀಟಿ ಜಪ್ತಿ ಮಾಡಿಕೊಂಡು ಕ್ರಮ ಕೈಕೊಂಡಿದ್ದು ಇರುತ್ತದೆ

ಯಾದಗಿರ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ :- 09/2021 ಕಲಂ 279, 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 08/02/2021 ರಂದು 9 ಎ.ಎಂ.ಕ್ಕೆ ಯಾದಗಿರಿ ಜಿಜಿಎಚ್ನಿಂದ ಪೋನ್ ಮೂಲಕ ಆರ್.ಟಿ.ಎ ಡೆತ್/ಎಮ್.ಎಲ್.ಸಿ ಮಾಹಿತಿ ನೀಡಿದ ಮೇರೆಗೆ ಜಿಜಿಎಚ್ ಯಾದಗಿರಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಪಘಾತದಲ್ಲಿ ಮೃತನಾದ ಇಂದರಸಿಂಗ್ ಇವರ ಮಗನಾದ ಪಿಯರ್ಾದಿ ಶ್ರೀ ರತನಸಿಂಗ್ ತಂದೆ ಇಂದರಸಿಂಗ್ ಠಾಕೂರ ವಯ;34 ವರ್ಷ, ಜಾ;ರಜಪೂತ, ಉ; ಆರ್.ಟಿ.ಪಿ.ಎಸ್. ಶಕ್ತಿನಗರದಲ್ಲಿ ಲೇಬರ್ ಕೆಲಸ, ಸಾ;ಕೃಷ್ಣಾ, ತಾ;ಮಕ್ತಲ್, ಜಿ;ನಾರಾಯಣಪೇಠ (ಟಿ.ಎಸ್.) ಇವರು ಘಟನೆಯ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಇಂದು ದಿನಾಂಕ 08/02/2021 ರಂದು ಸಮಯ 9-30 ಎ.ಎಂ.ದಿಂದ 10-30 ಎ.ಎಂ.ದ ವೆರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಆರ್.ಟಿ.ಪಿ.ಎಸ್. ಶಕ್ತಿನಗರದಲ್ಲಿ ಕಾಂಟಾಕ್ಟ್ ಬೇಸ್ ಮೇಲೆ ಕೂಲಿ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನಮ್ಮ ತಂದೆ-ತಾಯಿಗೆ ನಾಲ್ಕು ಜನ ಮಕ್ಕಳು ಅವರಲ್ಲಿ ಮೂವರು ಗಂಡು, ಒಬ್ಬರು ಹೆಣ್ಣು ಮಕ್ಕಳು ಇರುತ್ತೇವೆ. ನನ್ನ ಅಣ್ಣ ಯಾದಗಿರಿಯ ಜೆಸ್ಕಾಂನಲ್ಲಿ ಜೆಇ ಅಂತಾ ಕೆಲಸ ಮಾಡುತ್ತಿದ್ದು ನನ್ನ ತಮ್ಮ ರಾಕೇಶ ಈತನು ನಮ್ಮೂರಲ್ಲಿ ಇರುತ್ತಾನೆ. ನಮ್ಮ ತಂದೆಯವರು ರೇಲ್ವೇ ಇಲಾಖೆಯಲ್ಲಿ ಡಿಸೇಲ್ ಅಸಿಸ್ಟೆಂಟ್ ಅಂತಾ ಕೆಲಸ ಮಾಡಿ 8 ವರ್ಷದ ಹಿಂದೆ ನಿವೃತ್ತರಾಗಿರುತ್ತಾರೆ. ನಿನ್ನೆ ದಿನಾಂಕ 07/02/2021 ರಂದು ಬೆಳಿಗ್ಗೆ ಸುಮಾರಿಗೆ ನನ್ನ ತಂದೆಯವರು ನನ್ನ ಅಣ್ಣ ರಂಜಿತಸಿಂಗ್ ಇವರ ಮಗನಿಗೆ ಜೇವಗರ್ಿಯಲ್ಲಿ ನಮ್ಮ ಸಂಬಂಧಿಕರ ಮನೆಗೆ ಬಿಟ್ಟು ಬರಲು ಹೋಗಿದ್ದು ಇರುತ್ತದೆ. ನಿನ್ನೆ ಸಾಯಂಕಾಲ 8 ಗಂಟೆ ಸುಮಾರಿಗೆ ನನ್ನ ತಂದೆಯವರು ನಮಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ ನಾನು ಜೇವಗರ್ಿಗೆ ಹೋಗಿ ನನ್ನ ಮೊಮ್ಮಗನಿಗೆ ಬಿಟ್ಟು ಶಹಾಪುರ ಮಾರ್ಗವಾಗಿ ಯಾದಗಿರಿಗೆ ಬಂದು ಸದ್ಯ ರೇಲ್ವೇ ಸ್ಟೇಷನ್ ಯಾದಗಿರಿಯಲ್ಲಿದ್ದು ಇಷ್ಟರಲ್ಲಿಯೇ ಉದ್ಯಾನ ಟ್ರೈನ್ ಬರಬಹುದು ಆಗ ಆ ಟ್ರೈನಿಗೆ ಕೃಷ್ಣಾಗೆ ಬರುತ್ತೇನೆಂದು ಹೇಳಿರುತ್ತಾರೆ. ರಾತ್ರಿಯಾದರೂ ನಮ್ಮ ತಂದೆ ನಮ್ಮ ಮನೆಗೆ ಬರದೇ ಇದ್ದಾಗ ಆತನ ಮೊಬೈಲ್ ನಂಬರಿಗೆ ಪೋನ್ ಮಾಡಿ ವಿಚಾರಿಸಲು ಪೋನ್ ಸ್ವಿಚ್ ಆಫ್ ಆಗಿದ್ದು ಇರುತ್ತದೆ. ಆಗ ನಾವುಗಳು ನಮ್ಮ ತಂದೆ ಯಾದಗಿರಿಯಲ್ಲಿ ತನ್ನ ರೇಲ್ವೇ ಸಿಬ್ಬಂದಿ ಸ್ನೇಹಿತರ ಜೊತೆಯಲ್ಲಿದ್ದು ಬೆಳಿಗ್ಗೆ ಮನೆಗೆ ಇರಬಹುದು ಅಂತಾ ಸುಮ್ಮನಿದ್ದೆವು. ಹೀಗಿದ್ದು ಇಂದು ದಿನಾಂಕ 08/02/2021 ರಂದು ಬೆಳಿಗ್ಗೆ 6 ಗಂಟೆಗೆ ನಮಗೆ ಯಾದಗಿರಿಯ ರೇಲ್ವೇ ಪೊಲೀಸರಿಂದ ಮತ್ತು ನಮ್ಮ ಸಂಬಂಧಿಕರಿಂದ ಪೋನ್ ಮೂಲಕ ಮಾಹಿತಿ ನನಗೆ ಗೊತ್ತಾಗಿದೇನೆಂದರೆ ನಿನ್ನೆ ದಿನಾಂಕ 07/02/2021 ರಂದು ರಾತ್ರಿ 8-30 ಪಿ.ಎಂ.ದ ಸುಮಾರಿಗೆ ನಮ್ಮ ತಂದೆ ಯಾದಗಿರಿಯ ರೇಲ್ವೇ ಸ್ಟೇಷನ್ ಹತ್ತಿರ ಕಾರ್ ಪಾಕರ್ಿಂಗ್ ಪಕ್ಕದ ಮುಖ್ಯ ರಸ್ತೆಯ ಬದಿಗೆ ನಿಂತಿದ್ದಾಗ ಕಾರ್ ನಂಬರ ಕೆಎ-33, ಎಮ್-3024 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಕಾರನ್ನು ಹಿಂದಕ್ಕೆ (ರಿವರ್ಸ) ತೆಗೆದುಕೊಳ್ಳುವಾಗ ನಿಂತಿದ್ದ ನನ್ನ ತಂದೆಗೆ ಕಾರಿನ ಹಿಂಭಾಗದಿಂದ ಡಿಕ್ಕಿಕೊಟ್ಟು ಅಪಘಾತ ಮಾಡಿ ಘಟನಾ ಸ್ಥಳದಿಂದ ಓಡಿ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ನಿನ್ನ ತಂದೆಗೆ ಎರಡು ಮೊಣಕಾಲುಗಳಿಗೆ ಭಾರೀ ರಕ್ತಗಾಯ, ತಲೆಯ ಹಿಂಭಾಗಕ್ಕೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ಕಾರ್ ಚಾಲಕನಿಗೆ ಅಲ್ಲಿದ್ದ ಜನರು ಮತ್ತು ಎ.ಟಿ.ಎಮ್. ಸೆಕ್ಯೂರಿಟಿ ಗಾರ್ಡ ಅಂಬರೀಶ ಇವರು ಮತ್ತೆ ನೋಡಿದರೆ ಗುತರ್ಿಸುತ್ತಾರೆ. ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಕರೆಯಿಸಿ ಚಿಕಿತ್ಸೆ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕಳಿಸಿದ್ದು ಇರುತ್ತದೆ ಅಂತಾ ತಿಳಿಸಿರುತ್ತಾರೆ. ಆಗ ನಾನು ಮತ್ತು ನನ್ನ ಅಣ್ಣನಾದ ರಂಜಿತಸಿಂಗ್ ಹಾಗೂ ನನ್ನ ಸ್ನೇಹಿತನಾದ ಅಜಯ್ ತಂದೆ ಬಾಬು ಕುಣಸಿ ಸಾ;ಕೃಷ್ಣ ಈತನಿಗೆ ಘಟನೆ ಬಗ್ಗೆ ತಿಳಿಸಿ ಸಂಗಡ ಕರೆದುಕೊಂಡು ಹೊರಟು ಯಾದಗಿರಿಯ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನಮ್ಮ ತಂದೆಯವರು ಈಗಷ್ಟೇ ಸಮಯ 9 ಎ.ಎಮ.ಕ್ಕೆ ಅಪಘಾತದಲ್ಲಾದ ಗಾಯಗಳ ಭಾದೆಯಿಂದ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ ಅಂತಾ ಯಾದಗಿರಿಯ ಸಕರ್ಾರಿ ಆಸ್ಪತ್ರೆಯ ವೈದ್ಯರು ನಮಗೆ ತಿಳಿಸಿದರು. ನಮ್ಮ ತಂದೆಯ ಮೃತದೇಹವನ್ನು ನಾನು ಮತ್ತು ನನ್ನ ಅಣ್ಣ ರಂಜಿತ್ಸಿಂಗ್ ಗುತರ್ಿಸಿರುತ್ತೇವೆ. ನಾವುಗಳು ಯಾದಗಿರಿಯ ರೇಲ್ವೇ ಸ್ಠಷನ್ ಹತ್ತಿರ ಹೋಗಿ ನಿನ್ನೆ ನಡೆದ ಘಟನೆ ಬಗ್ಗೆ ರೇಲ್ವೇ ಪೊಲೀಸರಿಗೆ ಹಾಗೂ ರೇಲ್ವೆ ಸ್ಟೆಷನ್ನಲ್ಲಿ ಇರುವ ಎಟಿಎಮ್ ಸೆಕ್ಯೂರಿಟಿ ಗಾರ್ಡ ಅಂಬರೀಶ ಇವರಿಗೆ ವಿಚಾರಿಸಿದಾಗ ನಮಗೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 07/02/2021 ರಂದು ರಾತ್ರಿ 8-30 ಪಿ.ಎಂ ದ ಸುಮಾರಿಗೆ ಯಾದಗಿರಿಯ ರೇಲ್ವೇ ಸ್ಟೇಷನ್ ಹತ್ತಿರ ಕಾರ್ ಪಾಕರ್ಿಂಗ್ ಪಕ್ಕದ ಮುಖ್ಯ ರಸ್ತೆ ಹತ್ತಿರ ಕಾರ್ ನಂಬರ ಕೆಎ-33, ಎಮ್-3024 ನೇದ್ದರ ಚಾಲಕನ ಅತೀವೇಗ ಮತ್ತು ಅಲಕ್ಷ್ಯತನದಿಂದ ಕಾರನ್ನು ಹಿಂದಕ್ಕೆ (ರಿವರ್ಸ) ತೆಗೆದುಕೊಳ್ಳುವಾಗ ನಮ್ಮ ತಂದೆಗೆ ಕಾರಿನ ಹಿಂಭಾಗದಿಂದ ಡಿಕ್ಕಿಕೊಟ್ಟು ಅಪಘಾತ ಮಾಡಿ ಘಟನಾ ಸ್ಥಳದಿಂದ ಓಡಿ ಹೋಗಿದ್ದು ಸದರಿ ಅಪಘಾತದಲ್ಲಿ ನನ್ನ ತಂದೆಗೆ ಎರಡು ಮೊಣಕಾಲುಗಳಿಗೆ ಭಾರೀ ರಕ್ತಗಾಯ, ತಲೆಯ ಹಿಂಭಾಗಕ್ಕೆ ಭಾರೀ ಗುಪ್ತಗಾಯವಾಗಿ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಚಿಕಿತ್ಸೆಗೆ ಸ್ಪಂದಿಸದೇ ಅಪಘಾತದಲ್ಲಾದ ಗಾಯಗಳ ಭಾದೆಯಿಂದ ಇಂದು ಬೆಳಿಗ್ಗೆ 9 ಎ.ಎಂ.ಕ್ಕೆ ಮೃತಪಟ್ಟಿದ್ದು ಅಪಘಾತಪಡಿಸಿ ಓಡಿ ಹೋದ ಕಾರ ನಂಬರ ಕೆಎ-33, ಎಮ್-3024 ನೇದ್ದರ ಚಾಲಕನ ಮೇಲೆ ಕಾನೂನಿನ ಮುಂದಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಡೆದುಕೊಂಡು, ಮರಳಿ ಠಾಣೆಗೆ 10-45 ಎ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 09/2021 ಕಲಂ 279, 304(ಎ) ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 37/2021 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 08/02/2021 ರಂದು 4:50 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ವೆಂಕಟೇಶ ಡಿ.ಎಸ್.ಪಿ. ಸಾಹೇಬರು ಸುರಪುರ ಉಪ-ವಿಭಾಗ ಸುರಪುರರವರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:08/02/2021 ರಂದು ಪಿ.ಎಮ್ ಸುಮಾರಿಗೆ ನಾನು ಉಪವಿಭಾಗದ ಕಛೇರಿಯಲ್ಲಿರುವಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಮನೂರ ಗ್ರಾಮದ ಅಂಬೇಡ್ಕರ್ ಕಟ್ಟೆಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಉಪ-ವಿಭಾಗ ಕಛೇರಿಯಲ್ಲಿದ್ದ ಸಿಬ್ಬಂದಿಯವರಾದ 1) ಶ್ರೀ ಸುಭಾಶ್ ಸಿಪಿಸಿ-174 ಸುರಪೂರ ಪೊಲೀಸ್ ಠಾಣೆ, 2) ಶ್ರೀ ಮಂಜುನಾಥ ಸಿಪಿಸಿ-73 ಶಹಾಪೂರ ಪೊಲೀಸ್ ಠಾಣೆ, 3) ಶ್ರೀ ಶಾಂತಪ್ಪ ಸಿಪಿಸಿ-91 ಕೊಡೆಕಲ್ ಪೊಲೀಸ್ ಠಾಣೆ ಹಾಗೂ 4) ಜೀಪ್ ಚಾಲಕ ಶ್ರೀ ಚಂದಪ್ಪಗೌಡ ಎಪಿಸಿ-143 ಇವರಿಗೆ ವಿಷಯ ತಿಳಿಸಿ ಸುಭಾಸ್ ಸಿಪಿಸಿ-174 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಸುಭಾಶ್ ಸಿಪಿಸಿ ರವರು ಇಬ್ಬರು ಪಂಚರಾದ 1) ಶ್ರೀ ಸೋಪಿಸಾಬ ತಂದೆ ಬಾಸಿಮಿಯ್ಯ ನಾಯ್ಕೋಡಿ ವ|| 28 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಹೆಮನೂರ ತಾ:ಸುರಪೂರ 2) ಶ್ರೀ ಈಶಪ್ಪ ತಂದೆ ಮರಲಿಂಪ್ಪ ಗೋರವಾರ ವ|| 28 ವರ್ಷ ಜಾ|| ಗೋರವಾರ ಉ|| ಕೂಲಿ ಸಾ|| ತಾ:ಸುರಪೂರ ಇವರನ್ನು 2:30 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು, ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 2:45 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0253 ನೇದ್ದರಲ್ಲಿ ಹೊರಟು 3:15 ಪಿ.ಎಮ್ ಕ್ಕೆ ಹೆಮನೂರ ಗ್ರಾಮದ ಅಂಬೇಡ್ಕರ್ ಕಟ್ಟೆಯಿಂದ ಸ್ವಲ್ಪ ಅಂತರದಲ್ಲ್ಲಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಅಂಬೇಡ್ಕರ್ ಕಟ್ಟೆಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 3:20 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶರಣಪ್ಪ ತಂದೆ ಮಲ್ಲಪ್ಪ ಪೂಜಾರಿ ವ|| 53 ವರ್ಷ ಜಾ|| ಗೋರವಾರ ಉ|| ಕೂಲಿ ಸಾ|| ಹೆಮನೂರ ತಾ:ಸುರಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 1890=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 3:20 ಪಿ.ಎಮ್ ದಿಂದ 4:20 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 16/2021 ಕಲಂ ಮಹಿಳೆ ಕಾಣೆ : ಇಂದು ದಿ: 08.02.2021 ರಂದು 5.30 ಪಿಎಮ್ಕ್ಕೆ ಶ್ರೀಮತಿ ಮಲ್ಲಮ್ಮ ಗಂಡ ಚಂದ್ರಾಮಪ್ಪ ನಾಗರಾಳ ವಯಸ್ಸು; 60 ಜಾತಿ: ಗಾಣಿಗ ಉ: ಮನೆಗೆಲಸ ಸಾ: ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನಗೆ ಮೂರು ಜನ ಹೆಣ್ಣು ಮಕ್ಕಳು, 2 ಜನ ಗಂಡುಮಕ್ಕಳಿರುತ್ತಾರೆ. ನನ್ನ ಮಗಳಾದ ಸುನಂದಾ ತಂದೆ ಚಂದ್ರಾಮಪ್ಪ ನಾಗರಾಳ ಇವಳು ಹುಟ್ಟುತ್ತಲೇ ಮಾನಸಿಕ ಅಸ್ವಸ್ಥಳಾಗಿದ್ದು, ಆ ಕಡೆ ಈ ಕಡೆ ತಿರುಗಾಡುವದು, ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋಗುವದು ಮಾಡುತ್ತಿದ್ದಳು. ಸದರಿಯವಳಿಗೆ ಸುಮಾರು ಸಲ ಆಸ್ಪತ್ರೆಗೆ ತೋರಿಸಿದರೂ ಯಾವುದೇ ಪ್ರಯೋಜನೆ ಆಗಿರಲಿಲ್ಲ. ಹೀಗಿದ್ದು ಸುಮಾರು 5 ವರ್ಷಗಳ ಹಿಂದೆ ಅಂದರೆ ದಿನಾಂಕ 20.01.2016 ರಂದು ಸಾಯಂಕಾಲ 5 ಗಂಟೆಗೆ ನನ್ನ ಮಗಳಾದ ಸುನಂದಾ ಇವಳು ಮನೆಯಿಂದ ಹೋಗಿದ್ದು, ಸದರಿಯವಳಿಗೆ ಆ ಸಮಯದಲ್ಲಿ ಅಂದಾಜು 30 ವರ್ಷ ವಯಸ್ಸಿತ್ತು. ಆದರೆ ಮನೆಯಿಂದ ಹೋದವಳು ಮರಳಿ ಮನೆಗೆ ಬರಲಿಲ್ಲ. ಸುಮಾರು ಕಡೆ ಹಾಗೂ ನಮ್ಮ ಸಂಬಂಧಿಕರಲ್ಲಿ ಹೋಗಿ ಹುಡುಕಾಡಲಾಗಿ ಮಗಳು ಸುನಂದಾ ಇವಳು ಎಲ್ಲಿಯೂ ಸಿಗಲಿಲ್ಲ ಸದರಿಯವಳು ಮಾನಸಿಕ ಅಸ್ವಸ್ಥಳಾಗಿದ್ದರಿಂದ ಮರಳಿ ಬರಬಹುದು ಅಂತ ಸುಮ್ಮನಿದ್ದೆವು. ಸುಮಾರು 5 ವರ್ಷಗಳಾದರೂ ನನ್ನ ಮಗಳು ಎಲ್ಲಿದ್ದಾಳೆ ಅನ್ನುವ ಬಗ್ಗೆ ಯಾವುದೇ ಪತ್ತೆ ಸಿಗಲಿಲ್ಲವಾದ್ದರಿಂದ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ಠಾಣೆಗೆ ಹಾಜರಾಗಿ ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಹೀಗೆ ಸುಮಾರು ಕಡೆಗಳಲ್ಲಿಯೂ ನನ್ನ ಮಗಳಿಗೆ ಹುಡುಕಾಡಿದರೂ ನನ್ನ ಮಗಳು ಎಲ್ಲಿಯೂ ಸಿಕ್ಕಿರುವದಿಲ್ಲ. ಸದರಿ ನನ್ನ ಮಗಳ ಚಹರೆ ಪಟ್ಟಿ ಈ ರೀತಿ ಇರುತ್ತದೆ- ದುಂಡು ಮುಖ, ಸಾದಗಪ್ಪು ಬಣ್ಣ, ಉದ್ದನೆಯ ಮೂಗು, ಸಾದಾರಣ ಮೈಕಟ್ಟು, ಎತ್ತರ 5 ಪೀಟ 1 ಇಂಚ, ತಲೆಯ ಕೂದಲು ಕತ್ತರಿಸಿದ್ದು, ಕನ್ನಡದಲ್ಲಿ ತೊದಲು ಮಾತನಾಡುತ್ತಿದ್ದಳು, ಸದರಿಯವಳು ಮನೆಯಿಂದ ಹೋಗುವಾಗ ಒಂದು ಕಂದುಬಣ್ಣದ ಜಂಪರ್ ಹಾಗೂ ಕೆಂಪು ನೀಲಿ ಮಿಶ್ರಿತ ಹೂಗಳುಳ್ಳ ಲಂಗ ಉಟ್ಟುಕೊಂಡು ಹೋಗಿದ್ದು ಇರುತ್ತದೆ ಕಾರಣ ಸದರಿಯವಳನ್ನು ಹುಡುಕಿಕೊಡಲು ವಿನಂತಿ ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 16/2021 ಕಲಂ: ಹೆಣ್ಣುಮಗಳು ಕಾಣೆ ಅಡಿಯಲ್ಲಿ ಪ್ರಕರಣ ದಾಖಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 17/2021 ಕಲಂ: 78(3) ಕೆಪಿ ಯಾಕ್ಟ : 08.02.2021 ರಂದು 3.25 ಪಿಎಮ್ಕ್ಕೆ ಆರೋಪಿತರು ಕೆಂಭಾವಿ ಪಟ್ಟಣದ ಕೆಇಬಿ ಕಛೇರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಎರಡು ಜನರು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿರ್ಯಾದಿದಾರರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ನಗದು ಹಣ 1930/- ರೂಪಾಯಿ, ಎರಡು ಮಟಕಾ ನಂಬರ ಬರೆದ ಚೀಟಿ, ಎರಡು ಬಾಲ ಪೆನ್ನುಗಳನ್ನು ಜಪ್ತಿಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 10/2020 366, 380 ಐಪಿಸಿ : ಇಂದು ದಿನಾಂಕ: 08/02/2021 ರಂದು 08.30 ಪಿಎಂ ಕ್ಕೆ ಅಜರ್ಿದಾರ ಶ್ರೀ. ಭೀಮರಾಯ ತಂದೆ ಬಸ್ಸಪ್ಪ ವಡಗೇರಾ ವಯಾ: 50 ಸಾ: ಕಕ್ಕಸಗೇರಾ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿ ನೀಡಿದ್ದು, ನಾನು ಅಂದರೆ ಭೀಮರಾಯ ತಂದೆ ಬಸ್ಸಪ್ಪ ವಡಗೇರಾ ಸಾ: ಕಕ್ಕಸಗೇರಾ ಇವರ ಮಗಳಾದ ಚಂದಮ್ಮ ತಂದೆ ಭೀಮರಾಯ ವಡಗೇರ ವಯಾ: 20 ವರ್ಷ ಸಾ: ಕಕ್ಕಸಗೇರಾ ಇವಳು ದಿನಾಂಕ:05/02/2021 ರಂದು ಸಮಯ 05.30 ಗಂಟೆಗೆ ರವಿ ತಂದೆ ಮಲ್ಲಪ್ಪ ಹಳಗೇರಾ ವಯಸ್ಸು 22 ಸಾ: ಬೋನ್ಹಾಳ ಮತ್ತು ಹಣಮಂತ ತಂದೆ ಮಲ್ಲಪ್ಪ ಹಳಗೇರಾ ಸಾ: ಬೋನ್ಹಾಳ ಹಾಗೂ ಮಲ್ಲಪ್ಪ ತಂದೆ ಮಲ್ಲಪ್ಪ ಹಳಗೇರಾ ಸಾ: ಬೋನ್ಹಾಳ ಮತ್ತು ಶಿವಮ್ಮ ಗಂಡ ಮಲ್ಲಪ್ಪ ಹಳಗೇರಾ ಸಾ: ಬೋನ್ಹಾಳ ಇವರು ಕಕ್ಕಸಗೇರಾ ಗ್ರಾಮದ ಚಂದಮ್ಮ ತಂದೆ ಭೀಮರಾಯ ವಡಗೇರಾ ಸಾ: ಕಕ್ಕಸಗೇರಾ ಇವಳನ್ನು ಅಪಹರಣ ಮಾಡಲಾಗಿದೆ ಮತ್ತು ಮನೆಯಲ್ಲಿ 02 ತೋಲೆ ಬಂಗಾರ ಮತ್ತು 20,000=00 ರೂ (ಇಪ್ಪತ್ತು ಸಾವಿರ) ರೂಪಾಯಿಗಳನ್ನು ತಗೆದುಕೊಂಡು ಮಗಳು, ಅವಳನ್ನು ಅಪಹರಿಸಿದ್ದರೆ. ಅಪರಾಧಿಗಳನ್ನು ಬೇಗನೆ ಬಂದಿಸಿ ಕಠಿಣ ಶಿಕ್ಷೆಯನ್ನು ನೀಡಬೇಕಾಗಿ ತಮ್ಮಲ್ಲಿ ವಿನಂತಿ. ಅಂತಾ ಪಿಯರ್ಾದಿ ಅಜರ್ಿ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 10/2021 ಕಲಂ: 366, 380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 09-02-2021 10:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080