ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-02-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ. 28/2022 ಕಲಂ 498(ಎ), 323, 504, 506 ಐಪಿಸಿ : ಫಿರ್ಯಾದಿದಾರಳೀಗೆ ಸುಮಾರು 5-6 ವರ್ಷಗಳ ಕೆಳಗೆ ಆರೊಪಿತನೊಂದಿಗೆ ಮದುವೆಯಾಗಿದ್ದು ಅವರ ದಾಂಪತ್ಯ ಫಿರ್ಯಾದಿಗೆ ಮದುವೆಯಾದ ಒಂದು ವರ್ಷದ ವರೆಗೆ ಆಕೆಯೊಂದಿಗೆ ಚನ್ನಾಗಿದ್ದ ಪಿರ್ಯಾಧಿಯ ಅತ್ತೆ-ಮಾವ ತೀರಿಕೊಂಡ ನಂತರ ಆರೋಪಿತನು ಫಿರ್ಯಾದಿದಾರಳಿಗೆ ಮಾನಸೀಕ ಮತ್ತು ದೈಹಿಕ ಹಿಂಸೆಯನ್ನ ನೀಡುತ್ತಾ ಬಂದಿದ್ದು ಮಾನಸೀಕ ಮತ್ತು ದೈಹಿಕ ಹಿಂಸೆಯನ್ನು ನೀಡುವುದು ಮುಂದುವರೆಸಿಕೊಂಡು ಬಂದಿದ್ದು ಅಲ್ಲದೇ ದಿನಾಂಕ 06.10.2021 ರಂದು ಬೆಳಿಗ್ಗೆ 8:00 ಗಂಟೆಯ ಸುಮಾರಿಗೆ ಆರೋಪಿತನು ತನ್ನ ಮನೆಯಲ್ಲಿ ಪಿರ್ಯಾಧಿಗೆ ಕೈಯಿಂದ ಹೊಡೆ-ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫಿರ್ಯಾದಿದಾರಳು ತನ್ನ ತಾಯಿ-ತಾಯಿಗಳೊಂದಿಗೆ ವಿಚಾರ ಮಾಡಿದ ನಂತರ ತಡವಾಗಿ ಇಂದು ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ಗುನ್ನೆ ನಂ. 28/2022 ಕಲಂ 498(ಎ), 323, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 29/2022 ಕಲಂ 505 (2), 504, 506 ಸಂಗಡ 34 ಐ.ಪಿ.ಸಿ. : ದಿನಾಂಕ: 07.02.2022 ರಂದು ಫಿಯರ್ಾದಿ ಠಾಣೆಗೆ ಬಂದು ಫಿಯರ್ಾದಿ ನೀಡಿದ ಸಾರಾಂಶವೇನೆಂದರೆ, ಕಂದಕೂರ ಗ್ರಾಮದ ಶರಣಪ್ಪ ತಂದೆ ಮಲ್ಲಪ್ಪ(ಮಾಸ್ಟರ) ಬೇಗಾರ ಈತನು ಒಬ್ಬ ಶಸ್ತ್ರಾಸ್ರ್ತಗಳನ್ನೊಳಗೊಂಡ ಭಯೋತ್ಪಾದಕ ಕೃತ್ಯಯುಳ್ಳ ವ್ಯಕಿ ಇತತನ್ನು ಗಡಿಪಾರು ಮಾಡಬೇಕು. ಅಲ್ಲದೇ ಈತನು ನಮ್ಮ ಗುರುಮಠಕಲ್ ಮತಕ್ಷೇತ್ರದ ಜನಪ್ರೀಯ ಶಾಸಕರಾದ ಶ್ರೀ ನಾಗನಗೌಡ ಕಂದಕೂರ ಹಾಗೂ ಅವರ ಕುಟುಂಬದ ಸದಸ್ಯರನ್ನು ಅವಾಚ್ಚ ಶಬ್ದಗಳಾದ ರಂಡಿಮಗನೆ, ಬೊಸಡಿಮಗನೆ, ಲುಚ್ಚಾಸೂಳೆ ಮಗನೆ, ನಿಮ್ಮ ಮನೆ ಹೊಕ್ಕೊಂಡು ಹೊಡೆತಿನಿ ಹಾಗೂ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನು ಹೊಡೆದು ಖಲಾಸ ಮಾಡುತ್ತೇನೆ. ಈ ರೀತಿಯಾಗಿ ಇನ್ನೂ ಅನೇಕ ಕೆಟ್ಟ ಶಬ್ದಗಳಿಂದ ನಿಂದಿಸಿ ಜೀವ ಸಮೇತವಾಗಿ ಕೊಲ್ಲುವುದಾಗಿ ಸಾಮಾಜಿಕ ಸ್ವಾಸ್ತ್ಯೆ ಹಾಳು ಮಾಡಲು ಶ್ರೀನಿವಾಸ ಗಾಳಾ ಸಾ: ಕೇಶ್ವಾರ ಇವರು ಅಹಿಂದ ಗುರುಮಠಕಲ್ ಕ್ಷೇತ್ರ ವಾಟ್ಸಪ ಗ್ರೂಪಿನಲ್ಲಿ ಬಿಟ್ಟಿರುತ್ತಾರೆ. ಈ ಬಗ್ಗೆ ದಿನಾಂಕ: 06.02.2021 ರಂದು ಮುಂಜಾನೆ 08.00 ಗಂಟೆ ಸುಮಾರಿಗೆ ನಾನು ಗುರುಮಠಕಲ್ ಪಟ್ಟಣದ ಐ.ಬಿ ಗೇಟ ಮುಂದೆ ನಿಂತಿರುವಾಗ ಯದ್ಲಾಪೂರ ಗ್ರಾಮದ ಅನಂತಪ್ಪ ಬೋಯಿನ ಇವರು ಈ ಬಗ್ಗೆ ಅಹಿಂದ ಗುರುಮಠಕಲ್ ಕ್ಷೇತ್ರ ವಾಟ್ಸಪ ಗ್ರೂಪಿನಲ್ಲಿ ಬಂದಿರುತ್ತದೆ ನಾನು ಅಹಿಂದ ಗುರುಮಠಕಲ್ ಕ್ಷೇತ್ರ ವಾಟ್ಸಪ ಗ್ರೂಪಿನಲ್ಲಿ ಸದಸ್ಯನಿರುತ್ತೇನೆ ಅಂತಾ ಹೇಳಿ ನನಗೆ ತೋರಿಸಿದನು. ನಾನು ನೋಡಿದೆನು. ನಂತರ ಕೇಳಲಾಗಿ ಈ ಮೇಲೆ ನಮೂದಿಸಿದಂತೆ ಶರಣಪ್ಪ ತಂದೆ ಮಲ್ಲಪ್ಪ(ಮಾಸ್ಟರ) ಬೇಗಾರ ಸಾ: ಕಂದಕೂರ ಗ್ರಾಮ ಈತನು ಬೈದಿರುತ್ತಾನೆ. ಶ್ರೀನಿವಾಸ ಗಾಳ ಈತನು ಅಹಿಂದ ಗುರುಮಠಕಲ್ ಕ್ಷೇತ್ರ ವಾಟ್ಸಪ ಗ್ರೂಪಿನಲ್ಲಿ ಬಿಟ್ಟಿರುತ್ತಾನೆ. ಒಬ್ಬ ಶಾಸಕರನ್ನೇ ಕೇವಲವಾಗಿ ಮಾತನಾಡುವುದಲ್ಲದೇ ಜೀವಂತ ಸಮೇತ ಕೊಲ್ಲುವ ಬಗ್ಗೆ ಹಗುರವಾಗಿ ಮಾತನಾಡಿರುವ ಶರಣಪ್ಪ ತಂದೆ ಮಲ್ಲಪ್ಪ(ಮಾಸ್ಟರ) ಬೇಗಾರ ಸಾ: ಕಂದಕೂರ ಗ್ರಾಮ ಈತನನ್ನು ಮತ್ತು ವಾಟ್ಸಪ ಗ್ರೂಪಿನಲ್ಲಿ ಬಿಟ್ಟಿರುವ ಶ್ರೀನಿವಾಸ ಗಾಳ ಸಾ: ಕೇಶ್ವಾರ ಇವರನ್ನು ಬಂದಿಸಿ ಸೂಕ್ತ ಕಾನೂನು ಕ್ರಮ ಕೈಕೊಂಡು ಗುರುಮಠಕಲ್ ಮತ್ಕೇತ್ರದ ಶಾಸಕರಾದ ಶ್ರೀ ನಾಗಣಗೌಡ ಕಂದಕೂರ ಹಾಗೂ ಅವರ ಕುಟುಂಬಕ್ಕೆ ಭದ್ರತೆೆ ಒದಗಿಸಿ ಕ್ಷೇತ್ರದಾದ್ಯಂತ ಶಾಂತಿ ಒದಗಿಸಿ ಅವರ ವಿರುದ್ದ ಸೂಕ್ತವಾದ ಕಾನೂನು ಕ್ರಮ.

 

ಗೋಗಿ ಪೊಲೀಸ್ ಠಾಣೆ :-
ಗುನ್ನೆ ನಂ: 13/2022 ಕಲಂ: 279, 338, 304(ಎ) ಐಪಿಸಿ:ಕೇಸಿನ ಸಂಕ್ಷೀಪ್ತ ಸಾರಾಂಶ :
ಇಂದು ದಿನಾಂಕ: 08/02/2022 ರಂದು 7-50 ಎಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ಭಾಗಮ್ಮ ಗಂಡ ಮಲ್ಲಪ್ಪ ಮರ್ಕಲ ಸಾ|| ದೊಡ್ಡ ಸಗರ ತಾ|| ಶಹಾಪೂರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ತಂದು ಹಾಜರ್ ಪಡಿಸಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ನಿನ್ನೆ ದಿನಾಂಕ:07/02/2022 ರಂದು 07.00 ಪಿಎಂ ಸುಮಾರಿಗೆ ನನ್ನ ಮಗನಾದ ಭಾಗಪ್ಪ ತಂದೆ ಮಲ್ಲಪ್ಪ ಮರ್ಕಲ ವಯಾ:20 ವರ್ಷ ಜಾ: ಮಾದರ ಸಾ: ದೊಡ್ಡ ಸಗರ ಮತ್ತು ನಮ್ಮ ಓಣಿಯ ಭೀಮರಾಯ ತಂದೆ ಅಂಬ್ಲಪ್ಪ ಸುರಪೂರ ವಯಾ:19 ವರ್ಷ ಜಾ: ಮಾದರ ಮತ್ತು ಮಲ್ಲಿಕಾಜರ್ುನ ತಂದೆ ಲಕ್ಕಪ್ಪ ಲಕಣಾಪೂರ ವಯಾ:19 ವರ್ಷ ಜಾ: ಮಾದರ ಎಲ್ಲರೂ ಕೂಡಿ ಮಲ್ಲಿಕಾಜರ್ುನ ಲಕಣಾಪೂರ ಈತನ ಅಟೋ ಟಂ.ಟಂ ನಂ: ಕೆಎ-33-ಎ-4504 ನೇದ್ದರಲ್ಲಿ ಸಗರ ಯಲ್ಲಮ್ಮ ದೇವರ ಗುಡ್ಡಕ್ಕೆ ದೇವರ ಕಾರ್ಯಕ್ರಮಕ್ಕೆ ಹೋಗಿದ್ದರು.
ಹೀಗಿರುವಾಗ ಇಂದು ದಿನಾಂಕ:08/02/2022 ರಂದು 04.45 ಎಎಂ ಸುಮಾರಿಗೆ ನಮ್ಮ ಊರಿನ ಹೊನ್ನಪ್ಪ ತಂದೆ ಬಸ್ಸಪ್ಪ ಪಣೆ ಇವರು ನನ್ನ ಹಿರಿಯ ಮಗನಾದ ಮಲ್ಲಪ್ಪ ತಂದೆ ಮಲ್ಲಪ್ಪ ಇವನಿಗೆ ಪೋನ ಮಾಡಿ ವಿಷಯ ತಿಳಿಸಿದ್ದೇನದರೆ, ನಾನು ಮತ್ತು ರಾಮಣ್ಣ ತಂದೆ ಭಾಗಪ್ಪ ಪಣೆ ಇವರುಗಳು ಯಲ್ಲಮ್ಮನ ಗುಡ್ಡದಿಂದ ಮರಳಿ ನಮ್ಮೂರಾದ ಸಗರ ಗ್ರಾಮಕ್ಕೆ ಬರುತ್ತಿರುವಾಗ ಅಂದಾಜು ಬೆಳಗಿನ 4-30 ಗಂಟೆ ಸುಮಾರಿಗೆ ದರಿಯಾಪೂರ ಗ್ರಾಮದ ಹತ್ತಿರ ಇರುವ ಯಲ್ಲಮ್ಮನ ಗುಡ್ಡದ ಕಮಾನ ದಿಂದ ಪೂರ್ವಕ್ಕೆ ಅಂದಾಜು 200 ಮೀಟರ ಅಂತರದಲ್ಲಿ ನಮ್ಮ ಮುಂದೆ ಹೋಗುತ್ತಿದ್ದ ಒಂದು ಟಂಟಂ ಅಟೋ ನೇದ್ದಕ್ಕೆ ಎದುರಿನಿಂದ ಬಂದ ಒಂದು ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರ್ ಅನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಮಗಿಂತಲು ಸ್ವಲ್ಪ ಮುಂದೆ ಹೋಗುತ್ತಿದ್ದ ಟಂಟಂ ಅಟೋಕ್ಕೆ ಎದುರಿನಿಂದ ಬಲವಾಗಿ ಡಿಕ್ಕಿ ಪಡೆಸಿದ ಪರಿಣಾಮವಾಗಿ ಟಂಟಂ ಅಟೋದಲ್ಲಿ ಕುಳಿತ ನಿಮ್ಮ ತಮ್ಮನಾದ ಭಾಗಪ್ಪ ತಂದೆ ಮಲ್ಲಪ್ಪ ಬಲಭಾಗದ ಕುತ್ತಿಗೆ ಸಂಪೂರ್ಣ ಕತ್ತಿರಿಸಿದ ಭಾರಿಗಾಯವಾಗಿದ್ದು, ಅಲ್ಲಲ್ಲಿ ತರಚಿದ ಗಾಯಗಳಾಗಿ, ಬಲ ಮೆಲಕಿನ ಹತ್ತಿರ ಹುಬ್ಬಿಗೆ ರಕ್ತಗಾಯವಾಗಿ ಕಿವಿಯಿಂದ ಮೂಗಿನಿಂದ ಮತ್ತು ಬಾಯಿಂದ ರಕ್ತ ಸ್ರಾವ ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಟಂಟಂ ನಂಬರ ಕೆಎ-33-ಎ-4504 ಅಂತಾ ಇದ್ದು ಅದರ ಚಾಲಕನಾದ ಮಲ್ಲಿಕಾಜರ್ುನ ತಂದೆ ಲಕ್ಕಪ್ಪ ಲಕಣಾಪೂರ ಈತನಿಗೆ ತೆಲೆಗೆ ಹಿಂಭಗದಲ್ಲಿ ಭಾರಿ ರಕ್ತಗಾಯವಾಗಿದ್ದು ಮಾತನಾಡುತ್ತಿಲ್ಲ, ಟಂಟಂ ದಲ್ಲಿ ಇದ್ದ ಭೀಮರಾಯ ತಂದೆ ಅಂಬಲ್ಲಪ್ಪ ಈತನಿಗೆ ಕೂಡ ಮೂಖಕ್ಕೆ ಬಲಗೈಗೆ ಎಡಗಡೆ ಮೆಲಕಿಗೆ ಭಾರಿ ರಕ್ತ ಗಾಯಗಳಾಗಿರುತ್ತವೆ. ಅಪಘಾತ ಮಾಡಿದ ಟ್ರ್ಯಾಕ್ಟರ ನಂಬರ ನೋಡಲಾಗಿ ನಂ:ಕೆಎ-33-ಟಿಬಿ-2656 ಅಂತಾ ಇದ್ದು ಮತ್ತು ಹಸಿರು ಬಣ್ಣದ ಟ್ರ್ಯಾಲಿ ಇದ್ದು ಪಲ್ಟಿಯಾಗಿ ಬಿದ್ದಿರುತ್ತದೆ. ಟ್ರ್ಯಾಕ್ಟರ್ ಚಾಲಕನಿಗೆ ನೋಡಿ ವಿಚಾರಿಸಿದಾಗ ತನ್ನ ಹೆಸರು ಭಾಗಣ್ಣ ತಂದೆ ಬಸ್ಸಪ್ಪ ಹೆರುಂಡಿ ವಯಾ:35 ಜಾ: ಗಾಣಿಗ ಸಾ: ದೊಡ್ಡ ಸಗರ ಅಂತಾ ತಿಳಿಸಿ ತಾನು ಸಗರದಲ್ಲಿಂದ ಯಲ್ಲಮ್ಮನ ಗುಡ್ಡದ ಹತ್ತಿರ ಇರುವ ತಮ್ಮ ಹೊಲದಲ್ಲಿಯ ಮನೆಗೆ ಹೋಗುತ್ತಿರುವದಾಗಿ ತಿಳಿಸಿದ್ದು, ನೀವು ಕೂಡಲೆ ಸ್ಥಳಕ್ಕೆ ಬರ್ರಿ ಅಂತಾ ತಿಳಿಸಿದನು. ಆಗ ನಾನು ಮತ್ತು ನನ್ನ ಹಿರಿಯ ಮಗನಾದ ಮಲ್ಲಪ್ಪ ತಂದೆ ಮಲ್ಲಪ್ಪ ಇಬ್ಬರೂ ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಿಗೆ ಬಲಗಡೆಯ ಕುತ್ತಗಿಯು ಸಂಪೂರ್ಣ ಕತ್ತರಿಸಿ ಭಾರಿ ಗಾಯವಾಗಿತ್ತು. ಅಲ್ಲಲ್ಲಿ ತರಚಿದ ಗಾಯಗಳಾಗಿ, ಬಲ ಮೆಲಕಿನ ಹತ್ತಿರ ಹುಬ್ಬಿಗೆ ರಕ್ತಗಾಯವಾಗಿ ಕಿವಿಯಿಂದ ಮೂಗಿನಿಂದ ಮತ್ತು ಬಾಯಿಂದ ರಕ್ತ ಸ್ರಾವ ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನನ್ನ ಮಗನು ಕುಳಿತು ಹೊಗಿದ್ದ ಟಂಟಂ ನಂ ಕೆಎ-33-ಎ-4504 ನೇದ್ದರ ಚಾಲಕನಾದ ಮಲ್ಲಿಕಾಜರ್ುನ ತಂದೆ ಲಕ್ಕಪ್ಪ ಲಕಣಾಪೂರ ಈತನಿಗೆ ತೆಲೆಗೆ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು ಮಾತನಾಡುತ್ತಿರಲಿಲ್ಲ, ಟಂಟಂ ದಲ್ಲಿ ಇದ್ದ ಭೀಮರಾಯ ತಂದೆ ಅಂಬ್ಲಪ್ಪ ಈತನಿಗೆ ಕೂಡ ಮೂಖಕ್ಕೆ ಬಲಗೈಗೆ ಎಡಗಡೆ ಮೆಲಕಿಗೆ ಭಾರಿ ರಕ್ತ ಗಾಯಗಳಾಗಿದ್ದವು. ಇಬ್ಬರು ಗಾಯಾಳುಗಳನ್ನು ಖಾಸಗಿ ವಾಹನದಲ್ಲಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ಅವರನ್ನು ಹೆಚ್ಚಿನ ಉಪಚಾರಕ್ಕೆ ಕಲಬುರಗಿಗೆ ಕರೆದುಕೊಂಡು ಹೋಗಿರುತ್ತಾರೆ. ನಾವು ನಮ್ಮ ಮಗನ ಶವವನ್ನು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಶವಗಾರದ ಕೋಣೆಯಲ್ಲಿ ಇರಿಸಿ ಇಂದು ದಿನಾಂಕ: 08/02/2022 ರಂದು ಬೆಳಿಗ್ಗೆ 07.50 ಎಎಂ ಕ್ಕೆ ಠಾಣೆಗೆ ಬಂದು ಈ ಅಜರ್ಿ ನೀಡಿದ್ದು ಇರುತ್ತದೆ. ನನ್ನ ಮಗನು ಕುಳಿತು ಬರುತ್ತಿದ್ದ ಟಂಟಂ ನಂ: ಕೆಎ-33-ಎ-4504 ನೇದ್ದಕ್ಕೆ ಎದುರಿನಿಂದ ಟ್ರ್ಯಾಕ್ಟರ ನಂ: ಕೆಎ-33-ಟಿಬಿ-2656, ಹಸಿರು ಬಣ್ಣದ ಟ್ರ್ಯಾಲಿ ಸಮೇತ ಇರುವ ಟ್ರ್ಯಾಕ್ಟರ ಅನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡೆಸಿದ ಟ್ರ್ಯಾಕ್ಟರ ಚಾಲಕನಾದ ಭಾಗಣ್ಣ ತಂದೆ ಬಸ್ಸಪ್ಪ ಹೆರುಂಡಿ ವಯಾ:35 ಜಾ: ಗಾಣಿಗ ಸಾ: ದೊಡ್ಡ ಸಗರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 13/2022 ಕಲಂ: 279, 338, 304 (ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೇ ಕೈಕೊಂಡಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 07/2022 ಕಲಂ. 323, 324, 326, 504, 506 ಐಪಿಸಿ : ದಿನಾಂಕ:07/02/2022 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಫಿರ್ಯಾದಿಯ ಮನೆಯ ಪಕ್ಕದ ಸಿದ್ದಪ್ಪ ತಂದೆ ಅಮಾತೆಪ್ಪ ದೇವತ್ಕಲ್ ಸಾ:ವಜ್ಜಲ ಈತನು ಒದರಾಡಹತ್ತಿದ್ದು, ಫಿರ್ಯಾದಿಯ ತಂದೆಯು ಮನೆಯಿಂದ ಹೊರಗಡೆ ಬಂದು ಆರೋಪಿತನಿಗೆ ಏನಪಾ ರಾತ್ರಿ ಸಮಯದಲ್ಲಿ ಹೀಗೆಲ್ಲ ಒದರಾಡುವದು ಅರಿ ಅಲ್ಲಾ ಅಂತಾ ಅಂದಿದ್ದಕ್ಕೆ ಆರೋಪಿತನು ಅಲ್ಲಿಯ್ಯೇ ಇದ್ದು ಒಂದು ಒಣ ಕಟ್ಟಿಗೆಯನ್ನು ತೆಗೆದುಕೊಂಡು ಫಿರ್ಯಾದಿಯ ತಂದೆಗೆ ತಲೆಯ ಎಡಗಡೆ ಹೊಡೆದಿದ್ದರಿಂದ ಗಾಯಾಳುವಿಗೆ ತಲೆಯ ಎಡಗಡೆ & ಎಡಗಣ್ಣಿಗೆ ಭಾರಿ ರಕ್ತಗಾಯವಾಗಿ ಚೀರಾಡಿದಾಗ, ಫೀರ್ಯಾದಿ & ಫಿರ್ಯಾದಿಯ ತಮ್ಮ ಕೂಡಿ ಹೊರಗಡೆ ಬಂದು ನೋಡಿ ಆರೋಪಿತನಿಗೆ ಏನಪಾ ವಯಸ್ಸಾದ ನಮ್ಮ ತಂದೆಗೆ ಹೋಗೆಲ್ಲ ಹೊಡೆಯುವದು ಸರಿ ಅಲ್ಲಾ ಅಂತಾ ಅಂದಿದ್ದಕ್ಕೆ ಅವರಿಗೂ ಸಹ ಅವಾಚ್ಯ ಶಬ್ದಗಳಿಂದ ಹೊಡೆಯಲು ಬಂದಾಗ ಆರೋಪಿನ ಕೈಯಲ್ಲಿಯ ಕಟ್ಟಿಗೆಯನ್ನು ಕಸಿದು ಬೀಸಾಕಿದ್ದು, ಆಗ ಆರೋಪಿತನು ಮಕ್ಕಳೆ ಇನ್ನೊಂದು ಸಲ ನನ್ನ ತಂಟೆಗೆ ಬಂದರೆ ನಿಮಗೆ ಜೀವಂತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೋದ ಬಗ್ಗೆ ಅಪರಾಧ.

 


ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 13/2022 ಕಲಂ: 279, 337, 338, ಐಪಿಸಿ : ದಿನಾಂಕ:08/02/2022 ರಂದು ಮಧ್ಯಾಹ್ನ 1:00 ಪಿ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಫಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ದಿ:06/02/2022 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ಸಾಯಂಕಾಲ 7:00 ಗಂಟೆ ಸುಮಾರಿಗೆ ನಮಗೆ ಪರಿಚಯದ ನಮ್ಮೂರ ಚಂದ್ರಪ್ಪ ತಂದೆ ಬಸಣ್ಣ ಚಿಂಚೋಡಿ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮಪ್ಪ ಬಂದಗೀಸಾಬ ರವರು ನಿಮ್ಮ ಆಡುಗಳನ್ನು ಮೇಯಿಸಿಕೊಂಡು ಈಗ ಸ್ವಲ್ಪ ಹೊತ್ತಿನ ಹಿಂದೆ 6:45 ಪಿ.ಎಮ್ ಸುಮಾರಿಗೆ ಬಲಶೇಟ್ಟಿಹಾಳ ಕಡೆಯಿಂದ ನಮ್ಮ ಯರಿಬಂಡಿ ಕ್ಯಾಂಪಿನ ಹತ್ತಿರ ರಾಜಮಾ ಮಕಾಂದಾರ ರವರ ಹೊಲದ ಹತ್ತಿರ ಬಲಶೇಟ್ಟಿಹಾಳ-ಶಾಂತಪೂರ ಕ್ರಾಸ್ ರಸ್ತೆಯ ಮೇಲೆ ಹೋಗುತ್ತಿರುವಾಗ ಎದುರುಗಡೆ ಕಕ್ಕೇರಾ ಕಡೆಯಿಂದ ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲ್ ಮೇಲೆ ಇಬ್ಬರನ್ನು ಕೂಡಿಸಿಕೊಂಡು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಸೈಕಲ್ ಮೋಟರ್ನ್ನು ನಡೆಯಿಸಿಕೊಂಡು ಬಂದವನೇ ರಸ್ತೆಯ ಎಡಮಗ್ಗುಲಾಗಿ ಹೋಗುತ್ತಿದ್ದ ನಿಮ್ಮ ತಂದೆಗೆ ಹಾಗೂ ಎರಡು ಆಡುಗಳಿಗೆ ಮತ್ತು ಒಂದು ಹೋತಕ್ಕೆ ಡಿಕ್ಕಿ ಪಡಿಸಿದ್ದರಿಂದ ರಸ್ತೆಯ ಮೇಲೆ ಬಿದ್ದಿದ್ದು ಹಾಗೂ ನಿಮ್ಮ ಒಂದು ಆಡಿಗೆ ಗಾಯಗಳಾಗಿ ಸ್ಥಳದಲ್ಲಿಯೇ ಸತ್ತಿದ್ದು, ಇನ್ನೊಂದು ಆಡು ಮತ್ತು ಹೋತಕ್ಕೆ ಗಾಯಗಳಾಗಿ ಕಾಲು ಮುರಿದಿದ್ದು, ಮೋಟರ್ ಸೈಕಲ್ ಸವಾರನು ಸ್ವಲ್ಪ ಮುಂದೆ ಹೋಗಿ ಅವನು ಕೂಡಾ ಮೋಟರ್ ಸೈಕಲ್ ಮೇಲೆ ನಿಯಂತ್ರಣ ಕಳೆದುಕೊಂಡು ಹಿಂದೆ ಕುಳಿತಿದ್ದವನ ಸಮೇತ ನೆಲಕ್ಕೆ ಬಿದ್ದಿದ್ದು, ನಾನು ಮತ್ತು ನನ್ನ ಜೋತೆಗೆ ಇದ್ದ ಹಣಮಂತ್ರಾಯ ತಂದೆ ಫಕೀರಪ್ಪ ಹಾಗೂ ಹುಲಗಪ್ಪ ತಂದೆ ಗ್ವಾಲಪ್ಪ ರವರು ಹೋಗಿ ನೋಡಲಾಗಿ ನಿಮ್ಮ ತಂದೆಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಪ್ರಜ್ಞಾ ಹೀನ ಸ್ಥಿತಿಗೆ ಹೋಗಿದ್ದು, ನೋಡಲಾಗಿ ಮೋಟರ್ ಸೈಕಲ್ ಸವಾರ ಸೋಮಣ್ಣ ತಂದೆ ನಂದಪ್ಪ ಬನದೊಡ್ಡೇರ ಇತನಿಗೂ ಭಾರಿ ರಕ್ತಗಾಯವಾಗಿದ್ದು ಅವನೂ ಕೂಡ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಹಿಂದೆ ಕುಳಿತಿದ್ದ ಬಸವರಾಜ ತಂದೆ ನಾಗಪ್ಪ ಕುರೇರ ಸಾ||ಅಂಬಾನಗರ ಕುರೇರದೊಡ್ಡಿ ಇತನಿಗೆ ಕೈ ಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ನಿಮ್ಮ ತಂದೆಗೆ ಅಪಘಾತಪಡಿಸಿದ ಮೋಟರ್ ಸೈಕಲ್ ನಂಬರ ಕೆಎ-33 ಯು-9129 ಇದ್ದು, ನಾನು ಮತ್ತು ಹಣಮಂತ್ರಾಯ ತಂದೆ ಫಕೀರಪ್ಪ ಹಾಗೂ ಹುಲಗಪ್ಪ ತಂದೆ ಗ್ವಾಲಪ್ಪ ರವರು ಕೂಡಿ ನಿಮ್ಮ ತಂದೆ ಹಾಗೂ ಗಾಯಗಳಾದ ಮೋಟರ್ ಸೈಕಲ್ ಸವಾರ ಸೋಮಣ್ಣ ಮತ್ತು ಹಿಂದೆ ಕುಳಿತಿದ್ದ ಬಸವರಾಜ ರವರಿಗೆ ಉಪಚಾರಕ್ಕಾಗಿ ಕಕ್ಕೇರಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ನೀವು ಕೂಡಲೇ ಬರಬೇಕು ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ತಮ್ಮ ಅಕ್ಬರಬಾಷಾ, ತಾಯಿ ಲಾಲಬೀ ರವರು ಕೂಡಿ ಕಕ್ಕೇರಾ ಸರಕಾರಿ ಆಸ್ಪತ್ರೆಗೆ 7:30 ಪಿ.ಎಮ್ ಕ್ಕೆ ಹೋಗಿ ಹೆಚ್ಚಿನ ಉಪಚಾರ ಕುರಿತು ವೈಧ್ಯರ ಸೂಚನೆಯಂತೆ ಲಿಂಗಸ್ಗೂರು & ಬಾಗಲಕೋಟದ ಕಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ತಂದೆಯು ಇನ್ನೂ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ಇನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಈ ಅಪಘಾತದಲ್ಲಿ ನಮ್ಮ ಒಂದು ಆಡು ಸತ್ತಿದ್ದು ಅದರ ಅ.ಕಿ.10,000/-ರೂ. ಮತ್ತು ಕಾಲು ಮುರಿದ ಆಡಿನ ಅ.ಕಿ.5,000/-ರೂ. ಕಾಲು ಮುರಿದ ಹೋತಿನ ಅ.ಕಿ.15,000/-ರೂ ಆಗುತ್ತಿದ್ದು, ಅಪಘಾತದಲ್ಲಿ ಗಾಯವಾಗಿ ಸ್ಥಳದಲ್ಲಿಯೇ ಸತ್ತ ಆಡನ್ನು ನಮಗೆ ತಿಳಿಯದೇ ಇದ್ದುದ್ದರಿಂದ ಅದನ್ನು ತೆಗೆದುಕೊಂಡು ಹೋಗಿ ಕಂಟಿಯಲ್ಲಿ ಬಿಸಾಕಿದ್ದು ಇರುತ್ತದೆ. ಈ ಅಪಘಾತವು ಮೋಟರ್ ಸೈಕಲ್ ನಂ:ಕೆಎ-33 ಯು-9129 ನೇದ್ದರ ಸವಾರ ಸೋಮಣ್ಣ ತಂದೆ ನಂದಪ್ಪ ಬನದೊಡ್ಡೇರ ಇತನ ನಿರ್ಲಕ್ಷ್ಯತನದಿಂದಲೇ ಸಂಭವಿಸಿದ್ದು, ನಾನು ನನ್ನ ತಂದೆಗೆ ಉಪಚಾರ ಪಡಿಸಲು ಆಸ್ಪತ್ರೆಯಲ್ಲಿ ಇದ್ದುದ್ದರಿಂದ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು, ಮೋಟರ್ ಸೈಕಲ್ ಸವಾರ ಸೋಮಣ್ಣ ತಂದೆ ನಂದಪ್ಪ ಬನದೊಡ್ಡೇರ ಇತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:13/2022 ಕಲಂ: 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ:35/2022 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 08/02/2022 ರಂದು 12:50 ಪಿ.ಎಮ್ ಕ್ಕೆ ನಾನು ಠಾಣೆಯ ಎಸ್.ಹೆಚ್.ಡಿ. ಕರ್ತತ್ಯದಲ್ಲಿದ್ದಾಗ ಶ್ರೀ ಚಿತ್ರಶೇಖರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ: 08/02/2022 ರಂದು 10:30 ಎ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಪೇಠ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಹೊನ್ನಪ್ಪ ಸಿಪಿಸಿ-427, 2) ಸಿದ್ರಾಮರೆಡ್ಡಿ ಸಿಪಿಸಿ-423 ಇವರಿಗೆ ವಿಷಯ ತಿಳಿಸಿ, ಹೊನ್ನಪ್ಪ ಸಿಪಿಸಿ-427 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೊನ್ನಪ್ಪ ಪಿಸಿ-427 ರವರು ಇಬ್ಬರು ಪಂಚರಾದ 1) ಸುಭಾಸ ತಂದೆ ಭಿಮರಾಯ ಕಟ್ಟಿಮನಿ ವ|| 39 ವರ್ಷ ಜಾ|| ಮೇದಾರ ಉ|| ಕೂಲಿ ಕೆಲಸ ಸಾ|| ಮೇದಾರಗಲ್ಲಿ ಸುರಪುರ 2) ಶ್ರೀ ಪರಶುರಾಮ ತಂದೆ ಭೀಮಣ್ಣ ಗುಡ್ಡಕಾಯಿ ವ|| 26 ವರ್ಷ ಜಾ|| ಬೇಡರ ಉ|| ಡ್ರೈವರ್ ಸಾ|| ಕುಂಬಾರಪೇಠ, ಸುರಪೂರ ಇವರನ್ನು 10.50 ಎ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 11:00 ಎ.ಎಮ್ ಕ್ಕೆ ಠಾಣೆಯ ಜೀಪ್ ನಂ. ಕೆಎ-33. ಜಿ-0094 ನೇದ್ದರಲ್ಲಿ ಹೊರಟು 11:15 ಎ.ಎಮ್ ಕ್ಕೆ ಕುಂಬಾರಪೇಠ ಕ್ರಾಸ್ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಕುಂಬಾರಪೇಠ ಕ್ರಾಸ್ ಹತ್ತಿರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 11:20 ಎ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಹುಸೇನಬಾಷಾ ತಂದೆ ಮೌಲಾದ್ದೀನ ಪಠಾಣ ವ|| 39 ವರ್ಷ ಜಾ|| ಮುಸ್ಲಿಂ ಉ|| ಹೊಟೇಲ್ ವ್ಯಾಪಾರ ಸಾ|| ಆಸಾರಖಾನ, ಕುಂಬಾರಪೇಠ ಸುರಪುರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 820=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು, ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 11:20 ಎ.ಎಮ್ ದಿಂದ 12:20 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ 12:50 ಪಿ.ಎಮ್ಕ್ಕೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಕೊಟ್ಟ ವರದಿ

ಇತ್ತೀಚಿನ ನವೀಕರಣ​ : 09-02-2022 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080