ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-03-2022

ಮಹಿಳಾ ಪೊಲೀಸ್ ಠಾಣೆ
ಗುನ್ನೆ ನಂ: 34/2022 ಕಲಂ. ಮಹಿಳಾಕಾಣೆ : ಇಂದು ದಿನಾಂಕ; 08/03/2022 ರಂದು 12-30 ಪಿಎಮ ಕ್ಕೆ ಪಿರ್ಯಾಧಿದಾರರಾದ ಶ್ರೀ ಬಸವರಾಜ ತಂದೆ ಕಲ್ಲಪ್ಪ ಕುಂಬಾರ ವ;37 ಜಾ; ಕುಂಬಾರ ಉ; ಕೂಲಿಕೆಲಸ ಸಾ; ಶಾಂತಿನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಗೆ ನಾನು ಮತ್ತು ಶಿವುಕುಮಾರ ಹಾಗೂ ಗಂಗಮ್ಮ ಅಂತಾ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಅಂತಾ ಒಟ್ಟು ಮೂರು ಜನ ಮಕ್ಕಳಿದ್ದು ನಮ್ಮ ತಂದೆ ತಾಯಿ ಇಬ್ಬರು ಮೃತಪಟ್ಟಿರುತ್ತಾರೆ. ಈಗ ಯಾದಗಿರಿಯ ಶಾಂತಿನಗರದ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಅನೀತಾ ಹಾಗೂ ನನ್ನ ಇಬ್ಬರು ಮಕ್ಕಳು ಮತ್ತು ತಮ್ಮ ಶಿವುಕುಮಾರ ಹಾಗೂ ತಂಗಿ ಗಂಗಮ್ಮ ವಾಸಮಾಡಿಕೊಂಡು ಇರುತ್ತೇವೆ. ನನ್ನ ತಂಗಿ ಗಂಗಮ್ಮ ತಂದೆ ಕಲ್ಲಪ್ಪ ಕುಂಬಾರ ವ; 26 ಜಾ; ಕುಂಬಾರ ಉ; ಮನೆಗೆಲಸ ಸಾ; ಶಾಂತಿನಗರ ಯಾದಗಿರಿ ಇವಳಿಗೆ ಥೈರಾಯ್ಡ್ ರೋಗದಿಂದ ಬಳಲುತ್ತಿದ್ದು ಇದಕ್ಕೆ ಉಪಚಾರ ಕೊಡಿಸಿದ್ದು ಪ್ರತಿದಿನ ಥೈರಾಯ್ಡ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಳು. ಹೀಗಿದ್ದು ನಾನು ದಿನಾಂಕ. 03/03/2022 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ನಾನು ಕೂಲಿ ಕೆಲಸಕ್ಕೆಂದು ಮನೆಯಿಂದ ಹೋದೆನು. ನಂತರ ಮದ್ಯಾಹ್ನ 1-00 ಗಂಟೆ ಸುಮಾರಿಗೆ ನನ್ನ ಹೆಂಡತಿ ಅನೀತಾ ಇವಳು ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ, ಬೆಳೆಗ್ಗೆ 10-30 ಗಂಟೆ ಸುಮಾರಿಗೆ ನಾನು ಸ್ನಾನ ಮಾಡಲು ಹೋದಾಗ ನಿನ್ನ ತಂಗಿ ಗಂಗಮ್ಮ ಇವಳು ಥೈರಾಯ್ಡ್ ಮಾತ್ರೆಗಳು ಖಾಲಿಯಾಗಿವೆ ತೆಗೆದುಕೊಂಡು ಬರುತ್ತೇನೆ ಅಂತಾ ನನ್ನ ಮಗಳು ಕಾವ್ಯ ಇವಳಿಗೆ ಹೇಳಿ ತನ್ನ ಪರ್ಸ ಮತ್ತು ಪ್ಲಾಸ್ಟಿಕ ಚೀಲವನ್ನು ತೆಗೆದುಕೊಂಡು ಹೋಗಿದ್ದು ಇಲ್ಲಿಯವರೆಗೆ ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ನೀವು ಬೇಗ ಮನೆಗೆ ಬನ್ನಿ ಅಂತಾ ತಿಳಿಸಿದಳು. ನಂತರ ನಾನು ಮನೆಗೆ ಬಂದೆನು ಆಗ ನಾನು ಮತ್ತು ನನ್ನ ತಮ್ಮ ಶಿವುಕುಮಾರ ಹಾಗೂ ಚಂದ್ರು ಮುಂಡರಗಿ, ಕಾಶೀನಾಥ ಕೊಟಿಮನಿ ರವರು ಕೂಡಿಕೊಂಡು ಯಾದಗಿರಿಯಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಮತ್ತು ನಮ್ಮ ಸಂಭಂದಿಕರಲ್ಲಿ ವಿಚಾರಿಸಲಾಗಿ ನಮ್ಮ ತಂಗಿ ಗಂಗಮ್ಮಳ ಸುಳಿವು ಸಿಕ್ಕಿರುವುದಿಲ್ಲಾ ನನ್ನ ತಂಗಿ ಗಂಗಮ್ಮಳನ್ನು ಇಲ್ಲಿಯವರೆಗೆ ಹುಡುಕಾಡಲಾಗಿ ಸಿಗದೆ ಕಾಣೆಯಾಗಿರುತ್ತಾಳೆ. ಕಾಣೆಯಾದ ನನ್ನ ತಂಗಿ ಚಹರೆ ಪಟ್ಟಿ,ಃ- ಸಾದಾ ಕಪ್ಪು ಮೈಬಣ್ಣ, ದುಂಡನೆಯ ಮುಖ, ಎತ್ತರ 4 ಪೀಟ್ 3 ಇಂಚು ಎತ್ತರ, ಸಾದಾರಣ ಮೈಕಟ್ಟು, ಧರಿಸಿದ ಬಟ್ಟೆ ಹಳದಿ ಬಣ್ಣದ ಚೂಡಿ ಮತ್ತು ಕೆಂಪು ಬಣ್ಣದ ಪ್ಯಾಂಟ ಧರಿಸಿದ್ದು ಕನ್ನಡ ಭಾಷೆ, ಮಾತನಾಡುತ್ತಾಳೆ ಕಾಣೆಯಾದ ನನ್ನ ತಂಗಿ ಗಂಗಮ್ಮ ಇವಳಿಗೆ ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.34/2022 ಕಲಂ. ಮಹಿಳಾಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 13/2022 ಕಲಂ 279, 337, 338 ಐಪಿಸಿ : ನಿನ್ನೆ ದಿನಾಂಕ 07/03/2022 ರಂದು ಸಮಯ 7-45 ಪಿ.ಎಂ.ಕ್ಕೆ ಕಲಬುರಗಿಯ ಎ.ಎಸ್.ಎಮ್. ಆಸ್ಪತ್ರೆಯಿಂದ ರಸ್ತೆ ಅಪಘಾತದ ಬಗ್ಗೆ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮೂಲಕ ತಿಳಿಸಿದ್ದು ಇಂದು ದಿನಾಂಕ 08/03/2022 ರಂದು ಎ.ಎಸ್.ಎಮ್. ಆಸ್ಪತ್ರೆಗೆ ಬೆಳಿಗ್ಗೆ ಭೇಟಿ ನೀಡಿ ಗಾಯಾಳುಗಳಿಗೆ ವಿಚಾರಿಸಿದ್ದು, ನಂತರ ಆಸ್ಪತ್ರೆಯಲ್ಲಿದ್ದ ಗಾಯಾಳು ಪಿಯರ್ಾದಿ ಶ್ರೀ ಹಣಮಂತ ತಂದೆ ದೊಡ್ಡ ಸಾಬಣ್ಣ ಪಸಪುಲ್ ವಯ;38 ವರ್ಷ, ಜಾ;ಕುರಬರ, ಉ;ಕೂಲಿ ಕೆಲಸ, ಸಾ;ವಡ್ನಳ್ಳಿ, ತಾ;ಜಿ;ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಈ ಮೇಲ್ಕಾಣಿಸಿದ ಹೆಸರು ಮತ್ತು ವಿಳಾಸದ ನಿವಾಸಿತನಿದ್ದು ಒಕ್ಕುಲುತನ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಿನ್ನೆ ದಿನಾಂಕ 07/03/2021 ರಂದು ಬೆಳಿಗ್ಗೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಮಹಾದೇವಿ ಇಬ್ಬರು ಕೂಡಿಕೊಂಡು ಯಾದಗಿರಿಗೆ ಹೋಗಿ ಸಂತೆ ಮಾಡಿಕೊಂಡು ಬಂದರಾಯಿತು ಅಂತಾ ತಯಾರಾಗಿ ನಮ್ಮೂರ ಆಟೋ ನಿಲ್ಲುವ ಜಾಗದಲ್ಲಿ ಬಂದು ನಿಂತಾಗ ಯಾದಗಿರಿಗೆ ಹೋಗಲು ನಮ್ಮೂರಿನ ದೇವಪ್ಪ ತಂದೆ ತಿಮ್ಮಯ್ಯ ಹಂಪಿನೋರ ಈತನ ಆಟೋ ನಂಬರ ಕೆಎ-33, ಎ-7373 ನೇದ್ದು ನಿಂತಿತ್ತು. ನಾವು ಅದರಲ್ಲಿ ಹೋಗಿ ಕುಳಿತುಕೊಂಡೆವು. ನಮ್ಮಂತೆಯೇ ಯಾದಗಿರಿಗೆ ಬರಲು ನಮ್ಮೂರಿನ ಸಾಬಮ್ಮ ಗಂಡ ಮಲ್ಲಯ್ಯ ಚಾಮನಳ್ಳಿ, ಚಂದಮ್ಮ ಗಂಡ ಹಣಮಂತ ಖಾನಳ್ಳಿ ಇವರು ಕೂಡ ಆಟೋದಲ್ಲಿ ಬಂದು ಕುಳಿತರು. ಆಟೋವನ್ನು ದೇವಪ್ಪ ಈತನು ಚಾಲು ಮಾಡಿಕೊಂಡು ನಮ್ಮೂರಿನಿಂದ ಯಾದಗಿರಿಗೆ ಹೊರಟೆನು. ಹೀಗಿದ್ದು ಮಾರ್ಗ ಮದ್ಯೆ ಅಲ್ಲಿಪುರ ಕ್ರಾಸ್ ಹತ್ತಿರ ಹೊರಟಿದ್ದಾಗ ಆಟೋ ಚಾಲಕ ದೇವಪ್ಪ ಈತನು ಆಟೋವನ್ನು ವೇಗವಾಗಿ ನಡೆಸಿಕೊಂಡು ಹೊರಟಿದ್ದಾಗ ಆಗ ಆಟೋದಲ್ಲಿದ್ದ ನಾವುಗಳು ಆಟೋ ಚಾಲಕ ದೇವಪ್ಪನಿಗೆ ನಿಧಾನವಾಗಿ ಹೋಗು ಅಂತಾ ಹೇಳಿದರೂ ಕೇಳದೇ ಅತೀವೇಗ ಮತ್ತು ಅಲಕ್ಷ್ಯತನದಿಂದ ಆಟೋವನ್ನು ನಡೆಸಿಕೊಂಡು ಹೋಗುತ್ತಿದ್ದಾಗ ಆಟೋ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಆಟೋವನ್ನು ಸ್ಕಿಡ್ ಮಾಡಿ ರಸ್ತೆ ಎಡಭಾಗಕ್ಕೆ ಪಲ್ಟಿ ಮಾಡಿದನು ಆಗ ಆಟೋವು ರಸ್ತೆಯ ಮಗ್ಗಲು ಹೊಲದಲ್ಲಿ ಹೋಗಿ ಬಿದ್ದಾಗ ಸದರಿ ಅಪಘಾತದಲ್ಲಿ ನನಗೆ ಸೊಂಟಕ್ಕೆ, ಬೆನ್ನಿಗೆ ಭಾರೀ ಗುಪ್ತಗಾಯವಾಗಿದ್ದು, ಬಲಗಾಲಿನ ಪಾದಕ್ಕೆ ಗುಪ್ತಗಾಯವಾಗಿರುತ್ತದೆ. ನನ್ನ ಹೆಂಡತಿಗೆ ಬಲಗಾಲಿನ ತೊಡೆಗೆ, ಬಲಗೈನ ರಟ್ಟೆಗೆ ಗುಪ್ತಗಾಯವಾಗಿರುತ್ತದೆ. ಸಾಬಮ್ಮ ಗಂಡ ಮಲ್ಲಯ್ಯ ಚಾಮನಳ್ಳಿ ಈಕೆಗೆ ಸೊಂಟಕ್ಕೆ ಭಾರೀ ಒಳಪೆಟ್ಟಾಗಿರುತ್ತದೆ. ಚಂದಮ್ಮಳಿಗೆ ಕೈಗೆ ಗುಪ್ತಗಾಯವಾಗಿ ಮುರಿದಂತೆ ಕಂಡು ಬಂದಿರುತ್ತದೆ. ಈ ಘಟನೆಯು ನಿನ್ನೆ ದಿನಾಂಕ 07/03/2022 ರಂದು ಬೆಳಿಗ್ಗೆ 10-30 ಎ.ಎಂ.ಕ್ಕೆ ಜರುಗಿರುತ್ತದೆ. ಘಟನಾ ಸ್ಥಳಕ್ಕೆ ಆಟೋದಲ್ಲಿದ್ದ ಸಾಬಮ್ಮನ ಗಂಡನಾದ ಮಲ್ಲಯ್ಯ ಮತ್ತು ಆಕೆಯ ಮಗನಾದ ತಿಮ್ಮಯ್ಯ ಇವರುಗಳು ಬಂದಿದ್ದು ಇರುತ್ತದೆ ಆಗ ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಬಂದಾಗ ಗಾಯಾಳುಗಳಿಗೆಲ್ಲಾ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಉಪಚಾರ ನೀಡಿದ ವೈದ್ಯರು ನನಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ಹೋಗಲು ತಿಳಿಸಿದ್ದು ಇರುತ್ತದೆ. ಆಟೋ ಚಾಲಕ ದೇವಪ್ಪನು ಗಾಯಾಳುಗಳಿಗೆಲ್ಲರಿಗೂ ಒಳ್ಳೆಯ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸುತ್ತೇನೆ ಈ ಘಟನೆ ಬಗ್ಗೆ ನನ್ನ ಮೇಲೆ ಕೇಸು ಕೊಡಬೇಡಿರಿ ಅಂತಾ ತಿಳಿಸಿದಾಗ ಆಗ ನಮ್ಮ ಹಿರಿಯರು ಕೂಡ ನಾವುಗಳು ಒಂದೇ ಊರಿನವರಿದ್ದು ಕೇಸು ಮಾಡುವುದು ಬೇಡ ಅಂತಾ ತಿಳಿಸಿರುತ್ತಾರೆ. ನಾನು ಹೆಚ್ಚಿನ ಉಪಚಾರಕ್ಕಾಗಿ ಯಾದಗಿರಿಯಿಂದ ಕಲಬುರಗಿಯ ಎ.ಎಸ್.ಎಮ್.ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ. ನನಗೆ ಕಲಬುರಗಿಗೆ ಬಂದು ಆಸ್ಪತ್ರೆಯ ಖಚರ್ು ಕೊಡಲು ಆಟೋ ಚಾಲಕ ದೇವಪ್ಪನು ನಿರಾಕರಿಸಿದ್ದು ನಮ್ಮ ಮನೆಯ ಹಿರಿಯರು ನಿನ್ನೆ ದಿನಾಂಕ 07/03/2022 ರಂದು ಸಾಯಂಕಾಲ ಎಮ್.ಎಲ್.ಸಿ ಮಾಡಿಸಿ ಕೇಸು ಮಾಡಲು ತಿಳಿಸಿರುತ್ತಾರೆ. ಉಳಿದ ಗಾಯಾಳುಗಳು ಕೂಡ ಯಾದಗಿರಿಯ ಸಕರ್ಾರಿ ಆಸ್ಪತ್ರೆಗೆ ಸೇರಿಕೆಯಾಗಿ ಎಮ್.ಎಲ್.ಸಿ ಮಾಡಿಸುವುದಾಗಿ ನಮಗೆ ತಿಳಿಸಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ 07/03/2022 ರಂದು 10-30 ಎ.ಎಂ.ದ ಸುಮಾರಿಗೆ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಅಲ್ಲಿಪುರ ಕ್ರಾಸ್ ಹತ್ತಿರ ನಾವು ಕುಳಿತುಕೊಂಡು ಬರುತ್ತಿದ್ದ ಆಟೋ ನಂಬರ ಕೆಎ-33, ಎ-7373 ನೇದ್ದರ ಚಾಲಕನು ತನ್ನ ಆಟೋವನ್ನು ಅಲ್ಲಿಪುರ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಮಾಡಿ ರಸ್ತೆ ಎಡಕ್ಕೆ ಪಲ್ಟಿ ಮಾಡಿದ್ದರಿಂದ ಅಪಘಾತವಾಗಿದ್ದು, ಇಂದು ಘಟನೆಯ ಬಗ್ಗೆ ತಡವಾಗಿ ದೂರು ಪಿಯರ್ಾದಿ ನೀಡುತ್ತಿದ್ದು ಆಟೋ ಚಾಲಕ ದೇವಪ್ಪನ ಮೇಲೆ ಮುಂದಿನ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 4 ಪಿ.ಎಂ.ಕ್ಕೆ ಬಂದು ಪಿಯರ್ಾದಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 13/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 47/2022 ಕಲಂ: 324, 504ಐಪಿಸಿ : ದಿನಾಂಕಃ 08/03/2022 ರಂದು 5-15 ಪಿ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆಆಸ್ಪತ್ರೆಗೆ ಭೇಟಿನೀಡಿ ಜಗಳದಲ್ಲಿ ಗಾಯಹೊಂದಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಶಂಕರತಂದೆ ಬಸವರಾಜ ಚಲವಾದಿ ಸಾಃ ಕುಂಬಾರಪೇಟ ಸುರಪೂರಇತನ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದುಕುಂಬಾರಪೇಟದಲ್ಲಿರುವ ನಮ್ಮಓಣಿಯಲ್ಲಿ ಸಾಬಮ್ಮ ಶಾಂತಪೂರ ಎಂಬ ಮುದಕಿತೀರಿಕೊಂಡಿದ್ದರಿಂದ ನಾನು ಅಂತ್ಯಕ್ರಿಯೆಗಾಗಿ ಹೋಗಿದ್ದೇನು. ಅಂತ್ಯಕ್ರಿಯೆ ಮುಗಿಸಿಕೊಂಡು ನಾನು ಮರಳಿ ಮನೆಗೆ ಹೋಗುತ್ತಿರುವಾಗ 4-30 ಪಿ.ಎಮ್ ಸುಮಾರಿಗೆಕುಂಬಾರಪೇಟಅಟೋರಿಕ್ಷಾ ನಿಲ್ದಾಣದ ಹತ್ತಿರರಸ್ತೆಯ ಪಕ್ಕದಲ್ಲಿ ನಿಂತಿದ್ದ ನಮ್ಮಓಣಿಯ ಬೇಡರಜನಾಂಗದ ಮರೆಪ್ಪತಂದೆ ಭೀಮಣ್ಣ @ ಗಿಡ್ಡೇಶಇತನಿಗೆ ನನ್ನ ಕೈ ತಾಕಿದ್ದು, ಆಗ ಆತನುಒಮ್ಮೆಲೆ ಸಿಟ್ಟಿಗೆ ಬಂದು ಏನಲೇ ಶಂಕ್ರ್ಯಾ ಮಗನೇ ಮಣ್ಣಿಗೆ ಹೋಗಿ ಬಂದು ಜಳಕ ಮಾಡದೇ ಮುಟ್ಟುತ್ತಿ ಬುದ್ದಿ ಇಲ್ಲೇನಲೇಅಂತ ಬೈದಾಗ ನಾನು ಆತನಿಗೆಎಲ್ಲರೂಒಂದು ದಿನ ಸಾಯುವವರೇ, ಜಳಕ ಮಾಡದೇ ಮುಟ್ಟಿದರೆ ಏನು ಆಗಲ್ಲಾಅಂತ ಹೇಳಿದ್ದಕ್ಕೆ ಆತನು ಸೂಳೆ ಮಗನೇ ಹೆಣಕ್ಕೆ ಹೋಗಿ ಬಂದು ಮುಟ್ಟಿದ್ದಲ್ಲದೇಎದರು ಮಾತನಾಡುತ್ತೀಯಾಅಂದವನೇಅಲ್ಲೆರಸ್ತೆ ಪಕ್ಕ ಬಿದ್ದಿದ್ದ ಬಡಿಗೆತಗೆದುಕೊಂಡು ನನ್ನ ಹಣೆಯ ಮೇಲೆ ಹೊಡೆದಿದ್ದರಿಂದ ನನಗೆ ರಕ್ತಗಾಯವಾಗಿದ್ದರಿಂದ ನಾನು ಸತ್ತೆನಪ್ಪೋಅಂತಾಚಿರಾಡಿದಾಗಅಲ್ಲೆ ನಿಂತಿದ್ದ ಹಳ್ಳೆಪ್ಪ ತಂದೆಯಂಕಣ್ಣ ಹರಪನಹಳ್ಳಿ, ಮಲ್ಲಿಕಾಜರ್ುನತಂದೆಈರಪ್ಪಕುಂಬಾರಇಬ್ಬರೂ ಬಿಡಿಸಿರುತ್ತಾರೆ. ಆಗ ನಾನು 108 ಅಂಬುಲೇನ್ಸ್ದವರಿಗೆ ಫೋನ್ ಮಾಡಿದಾಗ ಸ್ವಲ್ಪ ಹೊತ್ತಿನಲ್ಲಿಅಂಬ್ಯೂಲೇನ್ಸ್ ವಾಹನದವರು ಬಂದು ನನಗೆ ಚಿಕಿತ್ಸೆಗಾಗಿ ಸುರಪೂರ ಸಕರ್ಾರಿಆಸ್ಪತ್ರೆಗೆತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನ್ನೊಂದಿಗೆ ಜಗಳ ತಗೆದು ಬಡಿಗೆಯಿಂದ ಹೊಡೆದು ರಕ್ತಗಾಯಪಡಿಸಿರುವ ಮರೆಪ್ಪತಂದೆ ಭೀಮಣ್ಣ @ ಗಿಡ್ಡೇಶಜಾತಿಃ ಬೇಡರು ಸಾ: ಕುಂಬಾರಪೇಟಇತನ ವಿರುದ್ದ ಕಾನೂನು ಪ್ರಕಾರಕ್ರಮಜರುಗಿಸಬೇಕುಅಂತವಗೈರೆ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ 47/2022 ಕಲಂ. 324, 504ಐಪಿಸಿ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

 


ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ: 11/2022 ಕಲಂ: 78 (3) ಕೆ.ಪಿ ಯಾಕ್ಟ್ : ಇಂದು ದಿನಾಂಕ 08/03/2022 ರಂದು 7:50 ಪಿ. ಎಂ ಕ್ಕೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಂಕ್ಷಿಪ್ತ ಸಾರಾಂಶವೆನೆಂದರೆ ಇಂದು ದಿನಾಂಕ: 08/03/2022 ರಂದು 6:40 ಪಿ.ಎಂ ನಾರಾಯಣಪೂರ ಗ್ರಾಮದ ಶ್ರೀ ವಾಲ್ಮಿಕಿ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೆಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕರೆದು 1/- ರೂ 80/- ಕೊಡುತ್ತೆನೆೆ ಅಂತಾ ಹೇಳಿ ಮಟಕಾ ನಂಬರ ಬರೆದುಕೊಡುತ್ತಿದ್ದಾಗ ದಾಳಿಮಾಡಿ ಆರೋಪಿತನಿಂದ 1060/- (500ಥ1=500, 100ಥ5=500, 50ಥ1=50, 10ಥ1=10) ರೂ ನಗದು ಹಣ ಹಾಗೂ ಒಂದು ಬಾಲಪೆನ್ನು ಹಾಗೂ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿಯನ್ನು ಜಪ್ತುಪಡಿಸಿಕೊಂಡು ತಾವು ಪೂರೈಸಿದ ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಹಾಜರುಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 11/2022 ಕಲಂ 78(3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ಇತ್ತೀಚಿನ ನವೀಕರಣ​ : 09-03-2022 11:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080