ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-04-2022
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 61/2022 ಕಲಂ: 279, 338, 304(ಎ) ಐ.ಪಿ.ಸಿ ಮತ್ತು 187 ಐಎಂವಿ ಯಾಕ್ಟ್ : ಇಂದು ದಿನಾಂಕ 08/04/2022 ರಂದು 3.00 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಸಂಗಯ್ಯ ತಂದೆ ಗವಿಸಿದ್ದಯ್ಯ ದೊರಿ ವಯಾ|| 35 ಜಾತಿ|| ಬೇಡರ ಉ|| ಕೂಲಿಕೆಲಸ ಸಾ|| ಚಿಗರಿಹಾಳ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ತಮ್ಮ ಪಿರ್ಯಾದಿ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾವು ಒಟ್ಟು ಐದು ಜನ ಮಕ್ಕಳಿದ್ದು ಅವರಲ್ಲಿ ನಾಲ್ಕು ಜನ ಗಂಡು ಮಕ್ಕಳು ಹಾಗು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ನಾವು ಎಲ್ಲರೂ ಕೂಡಿಯೇ ಸಂಸಾರ ಮಾಡಿಕೊಂಡು ಇರುತ್ತೇವೆ. ನಮ್ಮ ತಂದೆಯಾದ ಗವಿಸಿದ್ದಯ್ಯ ಹಾಗು ಹಿರಿಯ ಅಣ್ಣನಾದ ಅಖಂಡಯ್ಯ ಇಬ್ಬರೂ ತೀರಿಹೋಗಿರುತ್ತಾರೆ. ಉಳಿದ ನಮ್ಮೆಲ್ಲರದು ಮದುವೆಯಾಗಿದ್ದು ನಮ್ಮ ತಾಯಿ ಹಾಗು ಇತರೆ ತಮ್ಮಂದಿರು ಎಲ್ಲರೂ ಕೂಡಿಯೇ ಸಂಸಾರ ಮಾಡಿಕೊಂಡು ಇರುತ್ತೇವೆ. ಇಂದು ದಿನಾಂಕ 08.04.2022 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ನಮ್ಮ ತಾಯಿಯಾದ ಅಕ್ಕನಾಗಮ್ಮ ಗಂಡ ಗವಿಸಿದ್ದಯ್ಯ ದೊರಿ ಇವಳು ನಮ್ಮ ಸಂಬಂದಿಕರ ಊರಾದ ವನದುಗರ್ಾಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿದಾಗ ನಾನು ನಮ್ಮ ಕಿರಿಯ ತಮ್ಮನಾದ ಪಂಚಯ್ಯ ಈತನಿಗೆ ನಮ್ಮ ಮೋಟಾರ ಸೈಕಲ ನಂಬರ ಕೆಎ- 33 ಕೆ- 5447 ತೆಗೆದುಕೊಂಡು ನಮ್ಮೂರಿನಿಂದ ಸುರಪೂರ ಕೆಂಭಾವಿ ಮುಖ್ಯ ರಸ್ತೆಗೆ ಕೂಡುವ ಕೆನಾಲ ರಸ್ತೆಯ ಮೂಲಕ ಹೋಗು ಅಂತ ಹೇಳಿ ಅಲ್ಲದೇ ಸಾವಕಾಶವಾಗಿ ಹೋಗು ಅಂತ ತಿಳಿಸಿ ಹೇಳಿ ಕಳುಹಿಸಿದೆನು. ಆಗ ನಮ್ಮ ತಮ್ಮ ಪಂಚಯ್ಯ ತಂದೆ ಗವಿಸಿದ್ದಯ್ಯ ದೊರಿ ಈತನು ನಮ್ಮ ಮೋಟರ ಸೈಕಲನ್ನು ತೆಗೆದುಕೊಂಡು ಮನೆಯಿಂದ 1 ಗಂಟೆಗೆ ನಮ್ಮ ತಾಯಿಯನ್ನು ಮೋಟರ ಸೈಕಲ ನಂಬರ ಕೆಎ-33 ಕೆ-5447 ನೇದ್ದರ ಹಿಂದೆ ಕೂಡಿಸಿಕೊಂಡು ಶಹಾಪೂರ ತಾಲೂಕಿನ ವನದುಗರ್ಾ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದನು. ನಂತರ ಮದ್ಯಾಹ್ನ 1.45 ಪಿ ಎಮ್ ಕ್ಕೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರ ಹಣಮಂತ್ರಾಯ ತಂದೆ ದೇವೀಂದ್ರಪ್ಪ ಯಾದವ ಈತನು ನನಗೆ ಪೋನ ಮಾಡಿ ನಮ್ಮ ತಾಯಿ ಹಾಗು ನಮ್ಮ ತಮ್ಮ ಪಂಚಯ್ಯ ಇಬ್ಬರೂ ಕೂಡಿ ಮೋಟರ ಸೈಕಲ ಮೇಲೆ ವನದುಗರ್ಾಕ್ಕೆ ಹೋಗುವ ಕುರಿತು 1.30 ಗಂಟೆಗೆ ಕೆನಾಲ ರಸ್ತೆ ಮೂಲಕ ಹೋಗಿ ತಿಪನಟಗಿ ಗ್ರಾಮದ ಹತ್ತಿರ ಸುರಪೂರ - ಕೆಂಭಾವಿ ಮುಖ್ಯ ರಸ್ತೆ ದಾಟುತ್ತಿದ್ದಾಗ ಸುರಪೂರ ಕಡೆಯಿಂದ ಬರುತ್ತಿದ್ದ ಒಂದು ಕ್ರೂಷರ್ ಜೀಪ ನಂಬರ ಕೆಎ-25 ಡಿ- 0782 ರ ಚಾಲಕನು ತನ್ನ ಕ್ರೂಷರ್ ಜೀಪನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ರೋಡ ದಾಟುತ್ತಿದ್ದ ನಿಮ್ಮ ತಮ್ಮನ ಮೋಟರ ಸೈಕಲಗೆ ಬಲವಾಗಿ ಡಿಕ್ಕಿಪಡಿಸಿದ್ದು ಕಾರಣ ಮೋಟರ ಸೈಕಲ ಮೇಲೆ ಇದ್ದ ನಿಮ್ಮ ತಾಯಿ ಹಾಗು ಮೋಟರ ಸೈಕಲ ನಡೆಸುವ ನಿಮ್ಮ ತಮ್ಮ ಪಂಚಯ್ಯ ಇಬ್ಬರೂ ಬಲವಾಗಿ ರೋಡಿನಲ್ಲಿ ಬಿದ್ದು ನಿಮ್ಮ ತಾಯಿಗೆ ತಲೆಯ ಹಿಂದೆ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಲ್ಲದೇ ಮೋಟರ್ ಸೈಕಲ ನಡೆಸುವ ನಿಮ್ಮ ತಮ್ಮನಿಗೂ ಸಹ ಭಾರೀ ರಕ್ತಗಾಯಗಳಾಗಿರುತ್ತವೆ ಮತ್ತು ಅಪಘಾತಪಡಿಸಿದ ಜೀಪ ಚಾಲಕನು ಜೀಪನ್ನು ಬಿಟ್ಟು ಓಡಿ ಹೋಗಿರುತ್ತಾನೆ ಅಂತ ತಿಳಿಸಿದಾಗ ಕೂಡಲೇ ನಾನು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ತಾಯಿ ರೋಡಿನಲ್ಲಿ ಬಿದ್ದಿದ್ದು ಅವಳಿಗೆ ತಲೆಯ ಹಿಂಬಾಗಕ್ಕೆ ಭಾರೀ ರಕ್ತಗಾಯವಾಗಿದ್ದು ಅಲ್ಲದೇ ಬಲಗೈ ಮೊಳಕೈ ಹತ್ತಿರ ಮತ್ತು ಬಲಗಾಲ ಮೊಳಕಾಲ ಹತ್ತಿರ ಕೈ ಹಾಗು ಕಾಲು ಮುರಿದು ಭಾರೀ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ನಂತರ ಅಲ್ಲಿಯೇ ರೋಡಿನ ಪಕ್ಕದಲ್ಲಿ ಬಿದ್ದ ನಮ್ಮ ತಮ್ಮನಾದ ಪಂಚಯ್ಯ ಈತನಿಗೆ ನೋಡಲಾಗಿ ಆತನಿಗೂ ಸಹ ತಲೆಯ ಹಿಂಬಾಗ ಭಾರೀ ರಕ್ತಗಾಯವಾಗಿ ಬಲಗಾಲ ಮೊಳಕಾಲಕೆಳಗೆ ಕಾಲು ಮುರಿದಂತಾಗಿ ಭಾರೀ ರಕ್ತಗಾಯವಾಗಿದ್ದು ಅಲ್ಲದೇ ಬಲಪಕ್ಕಡಿಗೂ ಸಹ ತರಚಿದ ರಕ್ತಗಾಯವಾಗಿದ್ದು ಇರುತ್ತದೆ. ನನ್ನ ತಮ್ಮನ ತಲೆಯಿಂದ ಭಾರೀ ರಕ್ತಸ್ರಾವವಾಗುತ್ತಿದ್ದರಿಂದ ಕೂಡಲೇ ಅವನನ್ನು ಉಪಚಾರ ಕುರಿತು ಕಲಬುಗರ್ಿಗೆ ಕಳುಹಿಸಿದ್ದು ಇರುತ್ತದೆ. ನಂತರ ನಮ್ಮ ತಮ್ಮನಿಗೆ ಹಾಗು ತಾಯಿ ಅಕ್ಕನಾಗಮ್ಮ ಇವಳಿಗೆ ಅಪಘಾತ ಪಡಿಸಿದ ಕ್ರೂಷರ ಜೀಪ ಸ್ವಲ್ಪ ದೂರದಲ್ಲಿ ರೋಡಿನ ಪಕ್ಕದಲ್ಲಿ ನಿಂತಿದ್ದು ಅದರ ನಂಬರ ನೋಡಲಾಗಿ ಕೆಎ-25 ಡಿ- 0782 ಅಂತ ಇದ್ದು ಅದರ ಚಾಲಕನ ಬಗ್ಗೆ ಕೇಳಿ ತಿಳಿಯಲಾಗಿ ಹಣಮಂತ್ರಾಯ ತಂದೆ ನಿಜಪ್ಪ ಸಾ|| ದೇವರಗೋನಾಲ ಅಂತ ಗೊತ್ತಾಗಿರುತ್ತದೆ. ಈ ಅಪಘಾತಕ್ಕೆ ಕ್ರೂಷರ್ ಜೀಪ ನಂಬರ ಕೆಎ-25 ಡಿ 0782 ನೇದ್ದರ ಚಾಲಕ ಹಣಮಂತ್ರಾಯ ತಂದೆ ನಿಜಪ್ಪ ಈತನ ಅತೀವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಕೊಟ್ಟು ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 61/2022 ಕಲಂ 279, 338, 304[ಎ] ಐಪಿಸಿ ಮತ್ತು 187 ಐಎಂವಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 45/2022, 45/2022, ಕಲಂ, 341, 323,324, 504.506. ಸಂ.34 ಐ ಪಿ ಸಿ : ದಿನಾಂಕ: 08-04-2022 ರಂದು ಬೆಳಿಗ್ಗೆ 09-40 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಎಮ್ ಎಲ್ ಸಿ ಇದೆ ಅಂತಾ ಪೊನ್ ಮೂಲಕ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಗಾಯಾಳುವನ್ನು ವಿಚಾರಿಸಿದ್ದು ಅವನು ಹೇಳಿಕೆ ಪಿಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 07-04-2022 ರಂದು ಸಾಯಂಕಾಲ ನನ್ನ ಮೋಟರ ಸೈಕಲನ್ನು ಮರೆಮ್ಮ ಗುಡಿಯಲ್ಲಿ ಬಿಟ್ಟು ನಮ್ಮ ತಂಗಿಗೆ ದೇವರ ಕಾರ್ಯಕ್ರಮಕ್ಕೆ ಹಳಲು ಹೋಗಿದ್ದು ವಾಪದ ಬರುವಾಗ ನನ್ನ ಮೋಟರ ಸೈಕಲನ್ನು ಸಾಬಣ್ಣ ಈತನು ಪ್ಲಗ್ ಕಿತ್ತಿ ಮುಳ್ಳು ಕಂಟಿಯಲ್ಲಿ ಇಟ್ಟಿದ್ದು ಅದಕ್ಕೆ ನಾನು ಕೇಳಿದ್ದಕ್ಕೆ ನನಗೆ ಜಗಳ ಮಾಡಿದ್ದು ಇರುತ್ತದೆ.
ಇಂದು ದಿನಾಂಕ: 08-04-2022 ರಂದು ಬೆಳಿಗ್ಗೆ 07-00 ಗಂಟೆಗೆ ನಾನು ಯಲ್ಲಮ್ಮ ಗುಡಿಯ ಹತ್ತಿರ ಮನೆಯ ಕಡೆಗೆ ಬರುತ್ತಿರುವಾಗ ಆರೋಪಿತರಲ್ಲರು ಕೂಡಿ ನನಗೆ ಕಟ್ಟಿಗೆಯಿಂದ ಮತ್ತು ಕೈಯಿಂದ ಹೊಡೆ ಬಡೆ ಮಾಡಿ ಅಡ್ಡ ಗಟ್ಟಿ ನಿಲ್ಲಿಸಿ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನ ನಂ: 53/2022 ಕಲಂ: 323, 324, 504, 506 ಸಂ. 34 ಐಪಿಸಿ : ಇಂದು ದಿನಾಂಕಃ 08/04/2022 ರಂದು 09:30 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಶ್ರೀ ದೇವರಾಜ ತಂದೆ ಪರಮಣ್ಣ ಬದಾಮಿ ವ|| 36 ವರ್ಷ ಜಾ|| ಕುರುಬ ಉ|| ಹೈನುಗಾರಿಕೆ ಸಾ|| ಹಸನಾಪುರ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳು ಒಟ್ಟು 4 ಜನ ಮಕ್ಕಳಿರುತ್ತಾರೆ. ನಮ್ಮ ಮನೆ ಹಾಗೂ ನಮ್ಮ ಸಂಬಂದಿ ಭೀಮಪ್ಪ ತಂದೆ ಮಲ್ಲಪ್ಪ ತೇಕರಾಳ ಇವರ ಮನೆ ಆಜು ಬಾಜು ಇರುತ್ತವೆ. ನಾನು ಹೈನುಗಾರಿಕೆ ಸಲುವಾಗಿ 20 ಎಮ್ಮೆಗಳು ಹಾಗೂ 04 ಆಕಳುಗಳನ್ನು ಸಾಕಿರುತ್ತೇನೆ. ಸದರಿ ದನಗಳ ಉಚ್ಚೆಯು ಭೀಮಪ್ಪ ತೇಕರಾಳ ಇವರ ಮನೆಯ ಹಿಂದೆ ಹರಿದು ಹೋಗುತ್ತಿದ್ದರಿಂದ, ಭಿಮಪ್ಪ ತೇಕರಾಳ ಮತ್ತು ಆತನ ಮನೆಯವರು ಆಗಾಗ ಬಂದು ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿದ್ದರು. ನಮ್ಮ ದನಗಳ ಉಚ್ಚೆಯನ್ನು ಅವರ ಮನೆಯ ಕಡೆ ಹರಿದುಹೋಗದಂತೆ ಮಾಡಿಕೊಳ್ಳುತ್ತೇವೆ ಅಂತ ಹೇಳಿ ನಾವು ಸುಮ್ಮನಿದ್ದೆವು. ಹೀಗಿದ್ದು ಇಂದು ದಿನಾಂಕ: 08/04/2022 ರಂದು ಮದ್ಯಾಹ್ನ 1:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮೀ ಇಬ್ಬರು ಕೂಡಿ ನಮ್ಮ ದನಗಳನ್ನು ಮೇಯಿಸಲು ಹಸನಾಪುರ ಸೀಮಾಂತರದ ಮರೆಪ್ಪ ಪೂಜಾರಿ ಇವರ ಹೊಲದಲ್ಲಿರುವ ಹೈಯಾಳಲಿಂಗಯ್ಯನ ಗುಡಿ ಹತ್ತಿರ ಇದ್ದಾಗ, ನಮ್ಮ ಜನಾಂಗದವಾದ 1) ಭೀಮಣ್ಣ ತಂದೆ ಮಲ್ಲಪ್ಪ ತೇಕರಾಳ 2) ನಿಂಗಪ್ಪ ತಂದೆ ಭಾಗಪ್ಪ ಬದಾಮಿ 3) ಸಣ್ಣಭಿಮಪ್ಪ ತಂದೆ ಭಾಗಪ್ಪ ಬದಾಮಿ ಎಲ್ಲರು ಸಾ|| ಹಸನಾಪುರ ಇವರೆಲ್ಲರು ಕೂಡಿ ಏಕಾಏಕಿ ಬಂದವರೇ ಏನಲೆ ದೇವ್ಯಾ ಸೂಳೆಮಗನೆ ನಮ್ಮ ಹೊಲದಲ್ಲಿ ನಿನ್ನ ದನಗಳು ಬಂದಾವ ನೀ ಇಲ್ಲೇನ ಮಾಡತಿ ಲೇ ಮಗನೆ ಅಂತ ಬೈಯುತ್ತಿದ್ದಾಗ, ನಾನು ನಮ್ಮ ದನಗಳು ಇಲ್ಲೇ ಇವೆ, ನಿಮ್ಮ ಹೊಲದಲ್ಲಿ ಹೋಗಿರುವದಿಲ್ಲ ಬೇರೆ ಯಾರೋ ದನಗಳು ಬಂದಿರಬಹುದು ಸುಮ್ಮನೆ ಯಾಕೆ ಬೈಯುತ್ತೀರಿ ಅಂತ ಅನ್ನುತ್ತಿದ್ದಾಗ, ಅವರಲ್ಲಿಯ ಭೀಮಣ್ಣ ಈತನು ಅಲ್ಲೇ ಬಿದ್ದ ಒಂದು ಬಡಿಗೆಯಿಂದ ನನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಮಾಡಿದನು. ನಿಂಗಪ್ಪ ಈತನು ಅಲ್ಲೇ ಬಿದ್ದ ಒಂದು ಕಲ್ಲಿನಿಂದ ನನ್ನ ಬೆನ್ನಿನ ಬಲಗಡೆ ಹೊಡೆದು ಗುಪ್ತಗಾಯ ಮಾಡಿದನು. ಸಣ್ಣಭೀಮಪ್ಪ ಈತನು ಅಲ್ಲಿಯೇ ಬಿದ್ದ ಬಡಿಗೆಯಿಂದ ನನ್ನ ಎಡಗಾಲ ಮೊಳಕಾಲಿಗೆ ಹೊಡೆದು ತರಚಿದ ಗಾಯ ಹಾಗೂ ಗುಪ್ತಗಾಯಪಡಿಸಿದನು ಆಗ ನನ್ನ ಜೊತೆಯಲ್ಲಿದ್ದ ನನ್ನ ಹೆಂಡತಿ ಲಕ್ಷ್ಮೀ ಮತ್ತು ಅಲ್ಲಿಯೇ ಹೊರಟಿದ್ದ ಹಣಮಂತ ತಂದೆ ಮಲ್ಲಪ್ಪ ಚಲವಾದಿ ಇವರು ಬಂದು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಅವರು ನನಗೆ ಹೊಡೆಯುವದನ್ನು ಬಿಟ್ಟು, ಇವತ್ತು ನಮ್ಮ ಕೈಯಲ್ಲಿ ಉಳಿದೀ ಸೂಳೆಮಗನೆ ಇನ್ನೊಮ್ಮೆ ನಮ್ಮ ಹೊಲದಲ್ಲಿ ದನಗಳನ್ನು ಬಿಟ್ಟರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೋದರು. ನಂತರ ನನಗೆ ನನ್ನ ಹೆಂಡತಿ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬಂದು ಸೇರಿಕೆ ಮಾಡಿದ್ದು, ನಾನು ಉಪಚಾರ ಪಡೆದುಕೊಂಡು ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 53/2022 ಕಲಂ: 323, 324, 504, 506, ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ. 30/2022 ಕಲಂ: 323, 324, 504, 506 ಸಂ 34 ಐಪಿಸಿ : ಇಂದು ದಿನಾಂಕ 08.04.2022 ರಂದು 5:30 ಪಿಎಮ್ ಕ್ಕೆ ಪಿರ್ಯಾದಿ ಶ್ರೀ ಪರಸಪ್ಪ ತಂದೆ ಭೀಮಪ್ಪ ಸೊನ್ನಾಪೂರ ವ-40 ವರ್ಷ ಉ-ಒಕ್ಕಲುತನ, ಜಾತಿ-ಪರಿಶಿಷ್ಟ ಜಾತಿ(ಹಿಂದೂ ಮಾದರ, ಸಾ||ಗೆದ್ದಲಮರಿ, ಸಾ||ಹುಣಸಗಿ, ಜಿ||ಯಾದಗಿರ ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಕನ್ನಡದಲ್ಲಿ ಒಂದು ಟೈಪ್ ಮಾಡಿಸಿಕೊಂಡು ತಂದ ತನ್ನ ಪಿರ್ಯಾದಿ ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಅಜರ್ಿಯ ಸಾರಾಂಶವೆನೇಂದರೆ, ನಾನು ಹೆಂಡತಿ ಮಕ್ಕಳೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಮ್ಮೂರ ನಮ್ಮ ಸಮಾಜದ ಭೀಮಪ್ಪ@ಜೋಕಪ್ಪ ತಂದೆ ಸಂಗಪ್ಪ ಮೂಲಿಮನಿ ಹಾಗೂ ರಾಮಪ್ಪ@ಮಾಳಪ್ಪ ತಾಯಿ ಬಸಮ್ಮ ಹಂದ್ರಾಳ ಮತ್ತು ಬಸಪ್ಪ ತಾಯಿ ಆರ್ಯವ್ವ ಶೇಳ್ಳಗಿ ಇವರುಗಳು ನಮ್ಮೂರಲ್ಲಿ ಕೆಂಚಮ್ಮ ದೇವಿ ಗುಡಿ ಹತ್ತಿರ ಹೊಸದಾಗಿ ಕಟ್ಟುತ್ತಿರುವ ಶ್ರೀ ಬಾಬು ಜಗಜೀವನರಾಮ ರವರ ಭವನವನ್ನು ಕಟ್ಟಲು ಗುತ್ತಿಗೆ ಹಿಡಿದಿದ್ದು ಸಧ್ಯ ಕೆಲಸ ಪ್ರಾರಂಭಿಸಿದ್ದು, ಸದರಿಯವರು ಒಳ್ಳೆಯ ಗುಣಮಟ್ಟದ ಕೆಲಸ ಮಾಡದೇ ಇದ್ದುದ್ದರಿಂದ ನಾನು ಅವರಿಗೆ ಇದು ಸಮಾಜಕ್ಕಾಗಿ ನಿಮರ್ಿಸುವ ಕಟ್ಟಡವಿದ್ದು, ಒಳ್ಳೆಯ ಗುಣಮಟ್ಟದಿಂದ ಕಟ್ಟಡ ಕಟ್ಟಿಸಿರಿ ಅಂತಾ ಅಂದಿದ್ದಕ್ಕೆ ನನ್ನ ಮೇಲೆ ಸಿಟ್ಟಾಗಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ:07/04/2022 ರಂದು ಮಧ್ಯಾಹ್ನ 3:00 ಗಂಟೆ ಸುಮಾರಿಗೆ ನಾನು ನನ್ನ ವಯ್ಕತಿಕ ಕೆಲಸದ ಸಲುವಾಗಿ ನಮ್ಮೂರ ಗ್ರಾಮ ಪಂಚಾಯತ ಕಾಯರ್ಾಲಯಕ್ಕೆ ಹೋಗಿ ಪಿ.ಡಿ.ಓ ರವರಾದ ಮೋಹನ ರವರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದಂತೆ ನಮ್ಮೂರ ನಮ್ಮ ಸಮಾಜದ ಭೀಮಪ್ಪ@ಜೋಕಪ್ಪ ತಂದೆ ಸಂಗಪ್ಪ ಮೂಲಿಮನಿ ಹಾಗೂ ರಾಮಪ್ಪ@ಮಾಳಪ್ಪ ತಾಯಿ ಬಸಮ್ಮ ಹಂದ್ರಾಳ ಮತ್ತು ಬಸಪ್ಪ ತಾಯಿ ಆರ್ಯವ್ವ ಶೇಳ್ಳಗಿ ಇವರುಗಳು ಪಂಚಾಯತ ಕಾಯರ್ಾಲಯದೊಳಗೆ ಬಂದವರೇ ನನ್ನನ್ನು ನೋಡಿ ಅವರೆಲ್ಲರೂ ಸೂಳೆ ಮಗನೇ ಪರಶ್ಯಾ ನಾವು ಬಾಬು ಜಗಜೀವನರಾಮ ರವರ ಭವನವನ್ನು ಕಟ್ಟುವದಕ್ಕೆ ಹಾಗೆ ಕಟ್ಟಿ ಹೀಗೆ ಕಟ್ಟಿ ಅಂತಾ ಅನ್ನುತ್ತಿ ಏನಲೇ ಅಂತಾ ಅಂದು ಅವರಲ್ಲಿಯ ಭೀಮಪ್ಪ@ಜೋಕಪ್ಪ ತಂದೆ ಸಂಗಪ್ಪ ಮೂಲಿಮನಿ ಈತನು ತನ್ನ ಅಂಗಿಯ ತೋಳನ್ನು ಏರಿಸುತ್ತಾ ನನಗೆ ಏ ನಿನ್ನ ಅವ್ವನತುಲ್ಲ ಪರಶ್ಯಾ ಹಾದರಕ್ಕೆ ಹುಟ್ಟಿದ ರಂಡಿ ಮಗನೆ ಎನ್ನುತ್ತಾ ನನಗೆ ಬೈಯುತ್ತಾ ನನ್ನ ಹತ್ತಿರ ಬಂದವನೇ ನನ್ನ ಎದೆಯ ಮೇಲಿನ ಅಂಗಿಯನ್ನು ಹಿಡಿದು ನೆಲಕ್ಕೆ ಕೆಡವಿ ಕಾಲಿನಿಂದ ನನ್ನ ಎದೆಯ ಮೇಲೆ ಒದ್ದು ಗುಪ್ತಗಾಯ ಪಡಿಸಿದ್ದು, ರಾಮಪ್ಪ@ಮಾಳಪ್ಪ ತಾಯಿ ಬಸಮ್ಮ ಹಂದ್ರಾಳ ಮತ್ತು ಬಸಪ್ಪ ತಾಯಿ ಆರ್ಯವ್ವ ಶೇಳ್ಳಗಿ ಇವರಿಬ್ಬರು ನನಗೆ ಪಂಚಾಯತ ಕಾಯರ್ಾಲಯದಿಂದ ಹೊರಗೆ ಎಳೆದುಕೊಂಡು ಬಂದು ಅವರಲ್ಲಿಯ ಬಸಪ್ಪ ತಾಯಿ ಆರ್ಯವ್ವ ಶೇಳ್ಳಗಿ ಇತನು ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಟೊಂಕದ ಮೇಲೆ ಹೊಡೆದಿದ್ದು ಇದರಿಂದ ನನ್ನ ಟೊಂಕದ ಮೇಲೆ ಕಂದುಗಟ್ಟಿದ ಗಾಯವಾಗಿ ಒಳಪೆಟ್ಟಾಗಿದ್ದು, ರಾಮಪ್ಪ@ಮಾಳಪ್ಪ ತಾಯಿ ಬಸಮ್ಮ ಹಂದ್ರಾಳ ಇತನು ನನ್ನನ್ನು ನೆಲಕ್ಕೆ ಕೆಡವಿ ಹೊಟ್ಟೆಯ ಮೇಲೆ, ಬೆನ್ನಿನ ಮೇಲೆ ಒದ್ದು ತುಳಿದು ಗುಪ್ತಗಾಯ ಪಡಿಸಿ ಕೈಯಿಂದ ಎಡ ಕಪಾಳದ ಮೇಲೆ ಹೊಡೆದಿದ್ದು, ಆಗ ನಾನು ಇದನ್ನು ನನ್ನ ಫೋನಿನಲ್ಲಿ ಸೆರೆಹಿಡಿಯುವಾಗ ಮೂವರು ನನಗೆ ಸೂಳೆ ಮಗನೇ ಏನ ಸೆಂಟಾ ನಿನ್ನ ಫೋನಿನಲ್ಲಿ ಸೆರೆಹಿಡಿತತಿ ಅಂತಾ ಬೈದಿದ್ದು ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತಾ ಚೀರಾಡುತ್ತಿರುವಾಗ ಅಲ್ಲಿಯೇ ಇದ್ದ ನಮ್ಮೂರ ಬಸವರಾಜ ತಂದೆ ಗದ್ದೆಪ್ಪಗೌಡ ಕಕ್ಕೇರಿ, ಭೀಮಣ್ಣ ತಂದೆ ಬಸಣ್ಣ ಬಿರಾದಾರ, ಮಲ್ಲಣ್ಣ ತಂದೆ ಬಲವಪ್ಪಗೌಡ ಬಿರಾದಾರ, ಮಲ್ಲಪ್ಪ ತಂದೆ ಗದ್ದೆಪ್ಪ ಡೊಂಕ ರವರು ಮತ್ತು ಪಂಚಾಯತಿಯ ಪಿ.ಡಿ.ಓ ರವರಾದ ಮೋಹನ ಹಾಗೂ ಬಿಲ್ ಕಲೆಕ್ಟರವರಾದ ಶಿವರಾಜ ಅಂಗಡಿ, ಬಿ.ಹೆಚ್.ದೇಶಪಾಂಡೆ ರವರುಗಳು ಬಂದು ನೋಡಿ ನನಗೆ ಹೊಡೆಯುವದನ್ನು ಬಿಡಿಸಿದ್ದು, ಹೋಗುವಾಗ ಮೇಲೆ ನಮೂದಿಸಿದ ಮೂರು ಜನರು ಪರಶ್ಯಾ ನಿನ್ನವನತುಲ್ಲಾ ಇವತ್ತು ನಿನಗೆ ಬಿಟ್ಟಿದ್ದೇವೆ ನೀನು ಒಬ್ಬನೆ ಇನ್ನೊಮ್ಮೆ ಸಿಕ್ಕಾಗ ನಿನ್ನನ್ನು ಜೀವಂತ ಬಿಡುವುದಿಲ್ಲಾ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು, ನಂತರ ನಿನ್ನೆ ದಿನ ನಾನು ನಮ್ಮ ಮನೆಗೆ ಹೋಗಿ ಈ ದಿವಸ ನಮ್ಮ ಸಮಾಜದ ಹಿರಿಯರೊಂದಿಗೆ ವಿಚಾರ ಮಾಡಿ ಠಾಣೆಗೆ ಬಂದು ದೂರು ಕೊಡುತ್ತಿದ್ದು, ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ ಮೂರು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಪಿಯರ್ಾದಿಯ ಗಣಕೀಕೃತ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.30/2022 ಕಲಂ: 323, 324, 504, 506 ಸಂ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡಿದ್ದ್ದು ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 46/2022 ಕಲಂ: 379 ಐಪಿಸಿ : ದಿನಾಂಕ:08/04/2022 ರಂದು 2-30 ಪಿಎಮ್ಕ್ಕೆ ಶ್ರೀ ಗೋವಿಂದರಾಯ ತಂದೆ ಬಸವಂತ್ರಾಯ ವರಕೇರಿ, ವ:41, ಜಾ:ಕುರುಬರ, ಉ:ಒಕ್ಕಲುತನ ಸಾ:ಗೊಂದೆನೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ್ ಮಾಡಿ ಸಲ್ಲಿಸಿದ್ದರ ದೂರು ಅಜರ್ಿಯೇನೆಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮಗೆ ಹೊಲ ಮನೆಗೆ ತಿರುಗಾಡಲು ಅಂತಾ ಒಂದು ಹೀರೊ ಸ್ಪೇಲಂಡರ್ ಮೋಟರ ಸೈಕಲ್ ನಂಬರ: ಕೆಎ 33 ಇಬಿ 1678 ನೇದನ್ನು ಖರೀದಿ ಮಾಡಿದ್ದು, ನನ್ನ ಹೆಸರಿನಲ್ಲಿ ನೋಂದಣಿ ಇರುತ್ತದೆ. ಹೀಗಿದ್ದು ದಿನಾಂಕ: 08/02/2022 ರಂದು ರಾತ್ರಿ 9 ಗಂಟೆ ಸುಮಾರಿಗೆ ನಮ್ಮ ಮೇಲ್ಕಂಡ ಮೋಟರ್ ಸೈಕಲನ್ನು ನಮ್ಮ ಮನೆ ಮುಂದೆ ನಿಲ್ಲಿಸಿ, ನಾವು ಊಟ ಮಾಡಿ ಮಲಗಿಕೊಂಡೆವು. ನಂತರ ಮರು ದಿವಸ ದಿನಾಂಕ:09/02/2022 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಾನು ಎದ್ದು ಮನೆ ಹೊರಗಡೆ ಬಂದಾಗ ನಮ್ಮ ಮನೆ ಮುಂದೆ ನಿಲ್ಲಿಸಿದ ಮೋಟರ್ ಸೈಕಲ್ ಕಾಣಲಿಲ್ಲ. ಆಗ ನಾನು ಯಾರಾದರೂ ನಮ್ಮ ಹುಡುಗರು ಮೋಟರ್ ಸೈಕಲ್ ಎಲ್ಲಾದರೂ ತೆಗೆದುಕೊಂಡು ಊರಿಗೆ ಹೋಗಿದ್ದಾರೆನು ಅಂತಾ ನನ್ನ ಮಗ ದೇವರಾಜನಿಗೆ ಕೇಳಲಾಗಿ ಅವನು ಇಲ್ಲ ಯಾರೂ ಮೋಟರ್ ಸೈಕಲ್ ಒಯ್ದಿಲ್ಲ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದೇವು ಎಂದು ಹೇಳಿದನು. ಆಗ ಗಾಬರಿಯಾದ ನಾನು ಮತ್ತು ನನ್ನ ಮಗ ದೇವರಾಜ ಹಾಗೂ ನಮ್ಮ ಅಕ್ಕಪಕ್ಕದವರಾದ ಗಫಾರಸಾಬ ತಂದೆ ಉಸ್ಮಾನಸಾಬ ಮತ್ತು ಯಲ್ಲಪ್ಪ ತಂದೆ ಮಲ್ಲಪ್ಪ ಜಡಿ ಎಲ್ಲರೂ ಸೇರಿ ಮೋಟರ್ ಸೈಕಲನ್ನು ಅಲ್ಲಿಯೇ ಸುತ್ತ ಮುತ್ತ ಎಲ್ಲಾ ಕಡೆ ಹುಡಿಕಿದೆವು. ನಂತರ ಕೊಂಕಲ್, ವಡಗೇರಾ, ತುಮಕೂರು ಮುಂತಾದ ಕಡೆ ಹೋಗಿ ಹುಡುಕಾಡಿದರೂ ನಮ್ಮ ಮೋಟರ್ ಸೈಕಲ್ ಸಿಗಲಿಲ್ಲ. ಕಾರಣ ಯಾರೋ ಕಳ್ಳರು ದಿನಾಂಕ: 08/02/2022 ರಂದು 9 ಪಿಎಮ್ ದಿಂದ ದಿನಾಂಕ:09/02/2022 ರಂದು 6 ಎಎಮ್ ಮಧ್ಯದ ಅವಧಿಯಲ್ಲಿ ನನ್ನ ಹಿರೋ ಸ್ಪ್ಲೇಂಡರ ಮೋಟರ್ ಸೈಕಲ್ ನಂ. ಕೆಎ 33 ಇಬಿ 1678 ಅ:ಕಿ: 50,000/-ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳುವಾದ ನನ್ನ ಸ್ಪ್ಲೇಂಡರ ಮೋಟರ್ ಸೈಕಲ್ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನನ್ನ ಕಳುವಾದ ಸ್ಪ್ಲೇಂಡರ ಮೋಟರ್ ಸೈಕಲ್ ಅನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 46/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಸ್ಶೆದಾಪೂರ ಪೊಲೀಸ್ ಠಾಣೆ:-
ಗುನ್ನ ನಂ: 46/2022 ಕಲಂ 323, 324, 354, 448, 504, 506 ಸಂಗಡ 34 ಐಪಿಸಿ : ಇಂದು 08.04.2022 ಸಾಯಂಕಾಲ 7.40 ಗಂಟೆಗೆ ಸೈದಾಪೂರ ಸರಕಾರಿ ಆಸ್ಪತ್ರೆಯ ವೈಧ್ಯಾದಿಕಾರಿಗಳು ಕರೆಮಾಡಿ ಎಂ.ಎಲ್.ಸಿ ಮಾಹಿತಿ ನೀಡಿದ್ದರಿಂದ ನಾನು ಆಸ್ಪತ್ರೆ ಭೇಟಿನೀಡಿ ಗಾಯಳುಗಳ ಪೈಕಿ ಶೀಮತಿ ಲಲಿತಾ ಗಂಡ ಚಂದರ್ ರಾಠೋಡ ವ|| 35 ವರ್ಷ ಜಾ|| ಲಮಾಣಿ, ಉ|| ಕೂಲಿಕೆಲಸ, ಸಾ|| ಲಕ್ಷ್ಮೀನಗರ ಸೈದಾಪೂರ ತಾ||ಜಿ|| ಯಾದಗಿರಿ ಇವರ ಹೇಳಿಕೆ ಪಡೆದುಕೊಂಡೆನು. ಹೇಳಿಕೆ ಸಾರಾಂಶವೆನೆಂದರೆ ಕಳೆದ ಸೂಮಾರು 2 ವರ್ಷಗಳ ಕೆಳಗೆ ಪ್ರಕಾಶ ಮತ್ತು ಸೋನಿಬಾಯಿ ಮಗ ಸುಶೀಲ್ ಹಾಗೂ ಇನ್ನಿತರರು ಕೂಡಿ ಕಾರ ವಹಾನದಲ್ಲಿ ಕೆಲಸದ ನಿಮೀತ್ಯೆ ಸುರಪೂರಕ್ಕೆ ಹೋದಾಗ ಕಾರ್ ಎಕ್ಸಿಡೆಂಟ್ನಲ್ಲಿ ಸೋನಿಬಾಯಿ ಮಗ ಸುಶೀಲ್ ಗಾಯಗೊಂಡು ಸತ್ತುಹೊಗಿದ್ದ. ಕಾರ್ ನಡೆಸಿದ ಪ್ರಕಾಶ ತನ್ನ ಮಗನ ಜೀವ ತೆಗೆದನಂತ ಸಿಟ್ಟಿನಲ್ಲಿ ನಮೋಟ್ಟಿಗೆ ಮತ್ತು ಪ್ರಕಾಶನ ಸಂಗಡ ಈ ಮೊದಲು ಕಿರಿಕಿರಿ ಮಾಡಿದ್ದರಿಂದ ಅವನು ಅಂಜಿ ಯಾದಗಿರದಲ್ಲಿ ಇದ್ದು ಹೋಟೆಲ್ನಲ್ಲಿ ಕೆಲಸಮಾಡುತ್ತಿದ್ದಾನೆ, ನಮ್ಮನ್ನು ಮಾತನಾಡಿಸಲು ಇಂದು ಬಂದಿದ್ದ. ಹಳೆಯ ವೈಶ್ಯೆಮೆದಿಂದ 1. ಸೋನಿಬಾಯಿ ಗಂಡ ಚಂದರ್ ಚವ್ಹಾಣ, 2 ಚಂದರ್ ತಂದೆ ನರಸಿಂಗ್ 3. ರೋಷಿನಿ ಗಂಡ ಸುನಿಲ್ 4. ಎಕನಾಥ್ ತಂದೆ ನರಸಿಂಗ್ ಇವರು ಪ್ರಕಾಶನಿಗೆ ಹೊಡೆಯಬೆಕೆಂಬ ಉದ್ದೇಶದಿಂದ ನಮ್ಮ ಮನೆಗೆ ಬಂದು ಪ್ರಕಾಶಗೆ ಹೊಡೆಬಡೆ ಮಾಡಿರುತ್ತಾರೆ. ಅಲ್ಲದೆ ತಡೆಯಲು ಹೊದ ನನಗೆ ಮತ್ತು ನನ್ನ ಗಂಡನಾದ ಚಂದರ್ ತಂದೆ ಸೋಮ್ಲ ರಾಠೋಡ ನನ್ನ ಗಂಡನ ಮೋದಲನೆ ಹೆಂಡತಿಯ ಮಗಳಾದ ರೇಖಾ ತಂದೆ ಚಂದರ್ ರಾಠೋಡ ಹೊಡೆಬಡೆ ಮಾಡಿ ದುಖ:ಪತ ಗೊಳಿಸಿರುತ್ತಾರೆ. ್ತ ನಾನು ಮತ್ತು ರೇಖಾ ಹೆಣ್ಣುಮಕ್ಕಳಂತಾ ಗೋತ್ತಿದ್ದರು ಸಹ ಚಂದರ್, ಅವನ ಅಣ್ಣ ಏಕನಾಥ ನಮ್ಮ ಮಾನಭಂಗ ಮಾಡು ಉದ್ದೇಶದಿಂದ ನಮಗೆ ಹೊಡೆದಿದ್ದಲ್ಲದೇ ಮೈಮೇಲಿನ ಉಡುಪುಗಳನ್ನು ಹಿಡಿದಿಕೊಂಡು ಎಳದಾಡಿ ಮಾನಭಂಗ ಮಾಡಿರುತ್ತಾರೆ. ಕಾರಣ ಸದರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮಕೈಕೊಳ್ಳಲು ಕೋರಿದೆ ಅಂತಾ ಆಪಾದನೆ.