Feedback / Suggestions

                                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09-05-2021
ಯಾದಗಿರ ನಗರ ಪೊಲೀಸ್ ಠಾಣೆ :- 54/2021 ಕಲಂ: 269,270 ಐಪಿಸಿ ಕಲಂ.05(1)ಕನರ್ಾಟಕ ಎಪಿಡೆಮಿಕ್ ಡಿಸೀಸೆಸ್ ಆಕ್ಟ  2020 : ಇಂದು ದಿನಾಂಕ: 08.05.2021 ರಂದು 2-15 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಒಂದು ಜ್ಞಾಪನ ಪತ್ರವನ್ನು ಮುಂದಿನ ಕ್ರಮಕ್ಕಾಗಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಮತ್ತು ಸಂಗಡ ಸಿಬ್ಬಂದಿಯವರಾದ ಜಗನ್ನಾಥರೆಡ್ಡಿ ಹೆಚ್.ಸಿ.10 ಜೀಪ್ ಚಾಲಕ ಇವರೊಂದಿಗೆ ಠಾಣೆಯ ಜೀಪ್ ನಂಬರ ಕೆಎ.33.ಜಿ.0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಮಾಡುತ್ತಾ ಗಂಜ ಕಡೆಗೆ ಹೋದಾಗಿ 1-30 ಪಿ.ಎಮ್ ಸೂಮಾರಿಗೆ ಗಂಜ ಕ್ರಾಸನಲ್ಲಿರುವ ಶಿವಾಜಿ ಎಂಬ ಹೊಟೇಲ ತೆಗೆದಿದ್ದು ನೋಡಲು ಹೊಟೇಲದಲ್ಲ್ಲಿ ಸುಮಾರು 4-5 ಜನರು ಯಾವುದೇ ದೈಹಿಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಬ್ಬರಿಗೊಬ್ಬರು ಅಂಟಿಸಿಕೊಂಡು ಕುಳಿತಿದ್ದು ಅಲ್ಲಿದ್ದ ಹೊಟೇಲ ಮಾಲಿಕನಿಗೆ ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ನಾಗಪ್ಪ ತಂದೆ ಶರಣಪ್ಪ ತಾಂಡೂರಕರ್ ವಯ: 29 ಉ; ಹೊಟೇಲ ಕೆಲಸ ಜಾ; ಭೋವಿ ಸಾ: ಮೈಲಾಪೂರ ಅಗಸಿ ಬಂಡಿಗೇರಾ ಯಾದಗಿರಿ ಅಂತ ತಿಳಿಸಿದ್ದು ಇರುತ್ತದೆ. ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ. ಸಂ/ಕಂ/ದಂಡ/53/2019-20 ದಿನಾಂಕ; 17/04/2021 ರ ಆದೇಶದ ಪ್ರಕಾರ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಆದೇಶ ಹೊರಡಿಸಿದರು ಕೂಡಾ ಸದರಿ ಹೊಟೇಲ ಮಾಲಿಕನು ಜನರು ಗುಂಪಾಗಿ ಸೇರುವದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು ಸಹ ಯಾವುದೇ ದೈಹಿಕ ಅಂತರ ಕಾಪಾಡಿಕೊಳ್ಳದೇ ಜನರನ್ನು ಹೊಟೇಲದಲ್ಲಿ ಗುಂಪಾಗಿ ಕುಡಿಸಿ ಕೋರೋನಾ ವೈರಸ್ (ಕೋವೀಡ್-19) ಬಗ್ಗೆ ನಿರ್ಲಕ್ಷತನ ವಹಿಸಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ್ದು ಇರುತ್ತದೆ. ಕಾರಣ ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಆರೋಪಿತನೊಂದಿಗೆ 2 ಪಿ.ಎಮ್.ಕ್ಕೆ ಠಾಣೆಗೆ ಬಂದು ನಾನು ಹೇಳಿದಂತೆ ಫಿರ್ಯಾದಿಯನ್ನು ಗಣಕಯಂತ್ರದಲ್ಲಿ ಟೈಪ ಮಾಡಿಸಿ ನಂತರ ಪ್ರಿಂಟ್ ತಗೆಯಿಸಿ ಸಹಿ ಮಾಡಿ 2-15 ಪಿ.ಎಮ್.ಕ್ಕೆ ಸೂಕ್ತ ಕಾನೂನು ಕ್ರಮಕ್ಕಾಗಿ ನಿಮಗೆ ಈ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಅಂತಾ ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.54/2021 ಕಲಂ.269,270 ಐಪಿಸಿ ಮತ್ತು ಕಲಂ.05(1) ಖಿಜ ಏಚಿಡಿಚಿಟಿಚಿಣಚಿಞಚಿ ಇಠಿಜಜಟಛಿ ಆಜಚಿಜ ಂಛಿಣ 2020 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ್ ಠಾಣೆ :- 57/2021 ಕಲಂ: 379, 511 ಐಪಿಸಿ : ಇಂದು ದಿನಾಂಕ: 08/05/2021 ರಂದು 7-45 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 08/05/2021 ರಂದು ಮದ್ಯಾಹ್ನ ಸಮಯದಲ್ಲಿ 2-30 ಗಂಟೆ ಸುಮಾರಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಯಾದಗಿರಿ ರವರ ನೇತೃತ್ವದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಸೈದಪ್ಪ ಹೆಚ್.ಸಿ 34, ಅಮರೇಶ ಎ.ಹೆಚ್.ಸಿ 47, ಮಹೇಂದ್ರ ಪಿಸಿ-254 ಮತ್ತು ಸೋಮಣ್ಣ ಪಿಸಿ 243 ರವರೊಂದಿಗೆ ಬೆಂಡೆಬೆಂಬಳ್ಳಿ, ಶಿವಪೂರ ಕಡೆ ಪೆಟ್ರೋಲಿಂಗ ಕರ್ತವ್ಯದಲ್ಲಿ ಇದ್ದೆವು. ಆಗ ಮಾನ್ಯ ಸಿ.ಪಿ.ಐ ಸಾಹೇಬರಿಗೆ ಬಾತ್ಮಿದಾರರಿಂದ ಭೀಮಾ-ಕೃಷ್ಣಾ ನದಿ ಸಂಗಮ ದೇವಸ್ಥಾನ ಹಿಂದುಗಡೆ ಕೃಷ್ಣಾ ನದಿ ದಡದಲ್ಲಿ ಯಾರೋ ಅಕ್ರಮವಾಗಿ ಮತ್ತು ಕಳ್ಳತನದಿಂದ ಟಿಪ್ಪರಗಳಲ್ಲಿ ಹಿಟಾಚಿಯಿಂದ ಮರಳು ತುಂಬಲು ಸಿದ್ದತೆ ನಡೆಸುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ ಸಿ.ಪಿ.ಐ ಸಾಹೇಬರ ನೇತೃತ್ವದಲ್ಲಿ ಮದ್ಯಾಹ್ನ 3 ಗಂಟೆ ಸುಮಾರಿಗೆ ಸಂಗಮ ಗುಡಿ ಹಿಂದುಗಡೆ ಕೃಷ್ಣಾನದಿ ದಡದಲ್ಲಿ ಹೋಗಿ ನೋಡಿದಾಗ ಮೂರು ಟಿಪ್ಪರಗಳು ಮತ್ತು ಒಂದು ಟಾಟಾ ಹಿಟಾಚಿ ನಿಂತಿದ್ದು, ಸದರಿ ಹಿಟಾಚಿಯಿಂದ ಮರಳನ್ನು ನದಿಯಿಂದ ತೆಗೆಯಲು ಪ್ರಯತ್ನಿಸುತ್ತಿದ್ದರು. ಸದರಿ 3 ಟಿಪ್ಪರಗಳನ್ನು ಮರಳು ತುಂಬಲು ಸಾಲಾಗಿ ನಿಲ್ಲಿಸಿದ್ದರು. ಇದೆಲ್ಲವನ್ನು ನಾವು ಮರೆಯಾಗಿ ನಿಂತು ನೋಡಿ ಖಚಿತಪಡಿಸಿಕೊಂಡು ಅವರ ಮೇಲೆ ದಾಳಿ ಮಾಡಿದಾಗ ಟಿಪ್ಪರ ಚಾಲಕರು ಮತ್ತು ಟಾಟಾ ಹಿಟಾಚಿ ಆಪರೇಟರ ತಮ್ಮ ವಾಹನಗಳನ್ನು ಬಿಟ್ಟು ಓಡಿ ಹೋದರು. ಸದರಿಯವರಿಗೆ ನೋಡಿದಲ್ಲಿ ಗುರುತಿಸುತ್ತೇವೆ. ಸದರಿ ಟಿಪ್ಪರಗಳು ಮತ್ತು ಹಿಟಾಚಿ ನಂಬರ್ ನೋಡಲಾಗಿ 1) ಟಿಪ್ಪರ ನಂ. ಕೆಎ 33 ಎ 6178, 2) ಟಿಪ್ಪರ ನಂ. ಕೆಎ 33 ಎ 6179, 3) ಟಿಪ್ಪರ ನಂ. ಕೆಎ 33 ಎ 8296 ಮತ್ತು 4) ಟಾಟಾ ಹಿಟಾಚಿ ನೋಂದಣಿ ನಂ. ಇಲ್ಲ. ಮಾಡಲ್ ನಂ. ಇಘಿ110ಖಗಕಇಖ ಮೆಕ್ಯಾನಿಕ್ ಸಿರಿಯಲ್ ನಂ. ಖ110-11658 ಇರುತ್ತದೆ. ಸದರಿ ಟಿಪ್ಪರಗಳು ಖಾಲಿ ಇರುತ್ತವೆ. ಕಾರಣ ಟಿಪ್ಪರ ಚಾಲಕರು ಮತ್ತು ಮಾಲಿಕರುಗಳು ಹಾಗೂ ಟಾಟಾ ಹಿಟಾಚಿ ಮಾಲಿಕ ಮತ್ತು ಆಪರೇಟರ ಕೂಡಿ ಸಂಗಮದ ಕೃಷ್ಣಾ ನದಿಯಿಂದ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ತುಂಬಲು ಪ್ರಯತ್ನಿಸುತ್ತಿದ್ದಾಗ ನಾವು ದಾಳಿ ಮಾಡಿದ್ದನ್ನು ನೋಡಿ ಮರಳು ತುಂಬುವುದು ಬಿಟ್ಟು ಓಡಿ ಹೋಗಿರುತ್ತಾರೆ. ಕಾರಣ ಸದರಿ ಟಿಪ್ಪರ ಚಾಲಕರು ಮತ್ತು ಮಾಲಿಕರುಗಳು ಹಾಗೂ ಟಾಟಾ ಹಿಟಾಚಿ ಮಾಲಿಕ ಮತ್ತು ಆಪರೇಟರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 57/2021 ಕಲಂ: 379, 511 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ :- 98/2021 ಕಲಂ ಮಹಿಳೆ ಕಾಣೆ : ಇಂದು ದಿನಾಂಕ 08/05/2021 ರಂದು 11.30 ಎ.ಎಮ್ ಕ್ಕೆ ಪಿಯರ್ಾದಿ ತಾರಬಾಯಿ ಗಂಡ ಶಂಕರ ರಾಠೋಡ ವ|| 42 ವರ್ಷ, ಜಾ|| ಲಂಬಾಣಿ, ಉ|| ಹೋಲ ಮನಿ ಕೆಲಸ, ಸಾ|| ಕನ್ಯಾಕೊಳ್ಳೂರು ಇದ್ದು, ನಮಗೆ ಮೂರು ಜನ ಮಕ್ಕಳಿದ್ದು, ಅದರಲ್ಲಿ ಒಬ್ಬಳು ಹೆಣ್ಣು ಮಗಳು 1] ಶ್ರೀ ದೇವಿ ವ|| 21 ವರ್ಷ, ಎರಡು ಜನ ಗಂಡು ಮಕ್ಕಳು 2] ಶ್ರೀನಿವಾಸ ವ|| 19 ವರ್ಷ, 3] ಆನಂದ ವ|| 17 ವರ್ಷ, ಇದ್ದು, ನನ್ನ ಹಿರಿಯ ಮಗಳಾದ ಶ್ರೀ ದೇವಿ ಇವರಿಗೆ ಕಕ್ಕಸಗೇರಾ ತಾಂಡ ರಾಜು ಇವರಿಗೆ ಒಂದು ವರ್ಷ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಸುಮಾರು 9 ತಿಂಗಳಿಂದೆ ನನ್ನ ಮಗಳು ಮರಳಿ ನಮ್ಮ ತಾಂಡಕ್ಕೆ ಬಂದು ನಮ್ಮ ಮನೆಯಲ್ಲಿ ವಾಸವಾಗಿದ್ದಳು, ಹೀಗಿದ್ದು ದಿನಾಂಕ 05/05/2021 ರಂದು 02:00 ಪಿ.ಎಂ ಮನೆಯಲ್ಲಿದ್ದಾಗ 02:30 ಪಿ.ಎಂ ಸುಮಾರಿಗೆ ನನ್ನ ಮಗಳು ಶ್ರೀದೇವಿ ಇವಳು ಹೋಲಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದು, ಸಾಯಂಕಾಲ 5:00 ಗಂಟೆಯಾದರು ಮರಳಿ ಮನೆಗೆ ಬಂದಿರುವದಿಲ್ಲಾ, ನಾವೂ ಗಾಬರಿಯಾಗಿ ನಾನು ಮತ್ತು ನನ್ನ ಗಂಡ ಶಂಕರ, ನಮ್ಮ ಮಕ್ಕಳಾದ ಶ್ರೀನಿವಾಸ ಮತ್ತು ಆನಂದ ಎಲ್ಲರೂ ಹುಡಕಾಡಿದೇವು ಎಲ್ಲೂ ಸಿಗಲಿಲ್ಲಾ, ನಂತರ ನಮ್ಮ ಸಂಬಂಕರಿಗೆ ಪೋನ ಮಾಡಿ ಕೇಳಲಾಗಿ ಅವರು ನಮ್ಮ ಕಡೆ ಬಂದಿರುವದಿಲ್ಲಾ ಅಂತಾ ತಿಳಿಸಿದ್ದು, ನಂತರ ನಾವೂ ನಮ್ಮ ಮೈದುನ ರಾಮು ತಂದೆ ಹೇಮ್ಲೂನಾಯ್ಕ, ನಮ್ಮ ಸಂಬಂದಿಕರಾದ ಧರ್ಮಣ್ಣ ಗಂಗರಾಮ, ತಿಪ್ಪಣ್ಣ ತಂದೆ ತುಕರಾಮ, ಎಲ್ಲರೂ ಕೂಡಿ ದೋರನಳ್ಳಿ, ಕನ್ಯಾಕೊಳ್ಳೂರು, ಟೋಕಾಪೂರ, ಅನವಾರ, ಶಹಾಪೂರ ಎಲ್ಲಾ ಕಡೆ ಹುಡಿಕಾಡಿದರು ಸಿಕ್ಕಿರುವದಿಲ್ಲಾ. ದೋರನಳ್ಳಿ ಗ್ರಾಮದ ರೀಯಾಜ ತಂದೆ ಮಾಬೂಸಾಬ ಇವರು ನಮ್ಮ ಮಗಳ ಸಂಗಡ ಸಲುಗೆಯಿಂದ ಇದ್ದನು ಹಾಗಾಗ ಪೋನಿನಲ್ಲಿ ಮಾತನಾಡುತ್ತಿದ್ದನು, ಅವನು ಕೂಡ ಸದರಿ ದಿನಾಂಕದಿಂದ ಊರಲ್ಲಿ ಇರುವದಿಲ್ಲಾ ಅಂತಾ ತಿಳಿದು ಬಂದಿರುತ್ತದೆ. ಕಾರಣ ನನ್ನ ಮಗಳಾದ ಶ್ರೀದೇವಿ ಗಂಡ ರಾಜು ಚವ್ಹಾಣ ವ|| 21 ವರ್ಷ ಉ|| ಕೂಲಿ ಕೆಲಸ, ಜಾ||ಲಂಬಾಣಿ,ಸಾ|| ಕಕ್ಕಸಗೇರಾ ತಾಂಡ, ಹಾ|| ವ|| ಕನ್ಯಾಕೋಳ್ಳೂರು ತಾಂಡ, ತಾ|| ಶಹಾಪೂರ ಇವಳು ಯಾರಿಗೆ ಹೇಳದೆ ಕೇಳದೆ ಮನೆ ಬಿಟ್ಟು ಹೋಗಿದ್ದು, ನನ್ನ ಮಗಳನ್ನು ಹುಡಕಿ ಕೊಡಬೆಕೆಂದು, ಎಲ್ಲಾ ಕಡೆ ಹುಡಕಾಡಿ ತಡವಾಗಿ ಬಂದು ಅಜರ್ಿ ನೀಡಿದ್ದು ಇರುತ್ತದೆ .ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 98/2021 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:- 99/2021 ಕಲಂ 279, 337, 338, 304(ಎ) ಐ.ಪಿ.ಸಿ ಸಂ 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ:08/05/2021 ರಂದು 12.00 ಪಿ.ಎಂ.ಕ್ಕೆ ಶ್ರೀ ಮಾನಪ್ಪ ತಂ/ ಹಣಮಂತ್ರಾಯ ವಿಶ್ವಕರ್ಮ ಸಾ|| ವಿಭೂತಿಹಳ್ಳಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಒಂದು ದೂರು ಅಜರ್ಿಯನ್ನು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶ ಏನೆಂದರೆ, ಇಂದು ದಿನಾಂಕ:08/05/2021 ರಂದು ಬೆಳಿಗ್ಗೆ 6.00 ಎ.ಎಂ. ಸುಮಾರಿಗೆ ನನ್ನ ಮಗ ಹಣಮಂತ್ರಾಯನು ಕೆಲಸಕ್ಕೆಂದು ಮನೆಯಿಂದ ಮೋಟರ ಸೈಕಲ್ ನಂಬರ ಕೆಎ-33 ವೈ-2337 ನೇದ್ದರಲ್ಲಿ ತನ್ನ ಅಂಗಡಿಗೆ ಹೋಗಿದ್ದನು. ಬೆಳಿಗ್ಗೆ 10.45 ಎ.ಎಂ. ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರ ಹಣಮಂತ್ರಾಯ ತಂ/ ಕಾಳಪ್ಪ ವಿಶ್ವಕರ್ಮ ಇವರು ಫೋನ್ ಮಾಡಿ ತಿಳಿಸಿದ್ದೇನೆಂದರೆ, ಇಂದು 10.30 ಎ.ಎಂ. ಸುಮಾರಿಗೆ ನಾನು ಮತ್ತು ನಮ್ಮೂರ ನಿಂಗಪ್ಪ ತಂ/ ಹಣಮಂತ್ರಾಯ ಟೆಪ್ಪೆದಾರ ಇಬ್ಬರೂ ಕೂಡಿಕೊಂಡು ಹಿಲ್ಟೌನ್ ದಾಬಾ ಕಡೆಗೆ ನಡೆದುಕೊಂಡು ಹೊರಟಿದ್ದಾಗ ಶಹಾಪುರ-ಹತ್ತಿಗುಡೂರ ಮುಖ್ಯ ರಸ್ತೆಯ ಪಕ್ಕದಲ್ಲಿರುವ ನಮ್ಮೂರ ಮಲ್ಲಪ್ಪ ತಂ/ ರಾಯಪ್ಪ ಪೊಲೀಸ್ ಪಾಟೀಲ್ ಇವರ ಬತ್ತದ ಗದ್ದೆಯ ಹತ್ತಿರ ರೋಡಿನಲ್ಲಿ ನಿಮ್ಮ ಮಗ ಹಣಮಂತ್ರಾಯನು ಹಿಲ್ಟೌನ ದಾಬಾ ಕಡೆಯಿಂದ ತನ್ನ ಮೋಟರ ಸೈಕಲ್ದ ಹಿಂದೆ ನಮ್ಮೂರ ಭಾಗಪ್ಪ ತಂ/ ಶಾಂತಗೌಡ ಪೊಲೀಸ್ ಪಾಟೀಲ್ ಮತ್ತು ಅಯ್ಯಪ್ಪ ತಂ/ ಶಿವಪ್ಪ ಶಾಣಾವರ ಇಬ್ಬರಿಗೆ ಕೂಡಿಸಿಕೊಂಡು ವಿಭೂತಿಹಳ್ಳಿ ಕಡೆಗೆ ಬರುತ್ತಿದ್ದನು, ಆಗ ಹಿಂದಿನಿಂದ ಅಂದರೆ ಹಿಲ್ ಟೌನ್ ದಾಬಾ ಕಡೆಯಿಂದ ಒಂದು ಅಶೋಕಾ ಲೈಲ್ಯಾಂಡ್ ಮಿನಿ ಟ್ರಕ್ನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಮ್ಮ ಮಗನ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿ ನಂತರ ರಸ್ತೆಯ ಪಕ್ಕದಲ್ಲಿದ್ದ ಮಲ್ಲಪ್ಪ ಪೊಲೀಸ್ ಪಾಟೀಲ್ ರವರ ಬತ್ತದ ಗದ್ದೆಯಲ್ಲಿ ತನ್ನ ವಾಹನವನ್ನು ನಿಲ್ಲಿಸಿ ಅಲ್ಲಿಂದ ಓಡಿ ಹೋದನು. ಆಗ ನಾವು ಅವನ ಮುಖ ನೋಡಿರುತ್ತೇವೆ ಅವನಿಗೆ ಇನ್ನೊಮ್ಮೆ ನೋಡಿದಲ್ಲಿ ಗುರುತಿಸುತ್ತೇವೆ. ನಂತರ ಹತ್ತಿರ ಹೋಗಿ ನೋಡಲಾಗಿ ನಿಮ್ಮ ಮಗನಿಗೆ ತಲೆಯ ಹಿಂದೆ ಭಾರೀ ರಕ್ತಗಾಯವಾಗಿ ಕಿವಿಯಿಂದ ರಕ್ತ ಸೋರುತಿತ್ತು ಮತ್ತು ಎಡ ಹಾಗೂ ಬಲ ಬುಜಕ್ಕೆ, ಎಡ ಕಪಾಳಕ್ಕೆ, ಬೆನ್ನಿಗೆ, ಎಡ ಮೊಳಕಾಲಿಗೆ ತರಚಿದಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಭಾಗಪ್ಪ ಪೊಲೀಸ್ ಪಾಟೀಲ್ ಇವನಿಗೆ ಎಡ ಬುಜಕ್ಕೆ ಭಾರೀ ಒಳಪೆಟ್ಟಾಗಿ ಮುರಿದಂತೆ ಕಂಡು ಬಂದಿರುತ್ತದೆ. ಮತ್ತು ಬೆನ್ನಿಗೆ ತರಚಿದ ಗಾಯಗಳಾಗಿರುತ್ತವೆ. ಮತ್ತು ಅಯ್ಯಪ್ಪನಿಗೆ ಅಲ್ಲಲ್ಲಿ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಅಂತಾ ಹೇಳಿದಾಗ ನಾನು ಮತ್ತು ನನ್ನ ಮಗ ಮಲ್ಲಿಕಾಜರ್ುನ ಇಬ್ಬರೂ ಕೂಡಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಮೇಲ್ಕಾಣಿಸಿದಂತೆ ಗಾಯಗಳಾಗಿ ನನ್ನ ಮಗ ಹಣಮಂತ್ರಾಯನು ಮೃತಪಟ್ಟಿದ್ದನು. ಅಲ್ಲಿಯೇ ಇದ್ದ ಅಶೋಕಾಲೈಲ್ಯಾಂಡ್ ಮಿನಿ ಟ್ರಕ್ನ ನಂಬರ ನೋಡಲಾಗಿ ಕೆಎ-32 ಡಿ-8991 ಅಂತಾ ಇರುತ್ತದೆ. ನಂತರ ಗಾಯಾಳು ಭಾಗಪ್ಪ ಪೊಲೀಸ್ ಪಾಟೀಲ್ ಇವನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಶಹಾಪುರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು, ತಪಾಸಣೆ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಭಾಗಪ್ಪನ ತಂದೆಯಾದ ಶಾಂತಗೌಡ ತಂ/ ಮಲ್ಲಪ್ಪಗೌಡ ಪೊಲೀಸ ಪಾಟೀಲ್ ಇವರು ಕಲಬುಗರ್ಿಗೆ ಕರೆದುಕೊಂಡು ಹೋಗಿರುತ್ತಾರೆ.ಈ ಅಪಘಾತಕ್ಕೆ ಕಾರಣನಾದ ಅಶೋಕಾ ಲೈಲ್ಯಾಂಡ್ ಮಿನಿ ಟ್ರಕ್ ನಂ. ಕೆಎ-32 ಡಿ-8991 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.99/2021 ಕಲಂ 279, 337, 338, 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ :- 100/2021. ಕಲಂ. 279.338.ಐ.ಪಿ.ಸಿ. : ಇಂದು ದಿನಾಂಕ: 08/05/2021 ರಂದು 18-30 ಗಂಟೆಗೆ ಪಿಯರ್ಾದಿ ಶ್ರೀ ಶಿವಪ್ಪ ತಂದೆ ಮಲ್ಲಣ್ಣ ಪೂಜಾರಿ ವ|| 38 ಜಾ|| ಕುರುಬರ ಉ|| ಖಾಸಗಿ ನೌಕರ ಸಾ|| ಬಸವೇಶ್ವರ ಗುಡಿ ಹತ್ತಿರ ಕೋಳಿವಾಡ ಯಾದಗಿರಿ ಹಾ||ವ|| ದೇವಿನಗರ ಶಹಾಪೂರ. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ನನ್ನ ಮಕ್ಕಳು ರಾಕಂಗೇರಾದ ನಮ್ಮ ಸಂಬಂದಿಕನಾದ ಮಾಳಪ್ಪ ತಂದೆ ಭೀಮರಾಯ ನಾಯ್ಕೋಡಿ ಇವರ ಮನೆಯಲ್ಲಿ ಇದ್ದುದ್ದರಿಂದ ಅವರ ಹತ್ತಿರ ಹೋಗಿ ಬರಲು ನನ್ನ ಅಳಿಯ ಶರಣಬಸವ ತಂದೆ ಮಲ್ಲಣ್ಣ ಈತನ ಮೋಟರ್ ಸೈಕಲ್ ನಂ ಕೆಎ-33 ಎಸ್-1080 ನೇದ್ದನ್ನು ತೆಗೆದುಕೊಂಡು ದಿನಾಂಕ 05/05/2021 ರಂದು ಬೆಳಿಗ್ಗೆ 6-30 ಗಂಟೆಗೆ ಹೋರಟು ಮಾಳಪ್ಪನ ಮನೆಗೆ ಹೋಗಿ ಹುಡುಗರಿಗೆ ಬೆಟಿಯಾಗಿ ನಂತರ ರಾಕಂಗೇರಾ ಕ್ರಾಸ್ ಹತ್ತಿರ ಇರುವ ಮಾಳಪ್ಪನ ಹೋಟಲ್ಕ್ಕೆ ಬಂದು ನಮ್ಮ ಹುಡುಗರಿಗೆ ಬ್ರೇಡ್ ತೆಗೆದುಕೊಂಡು ಬರಲು, ಚಾಂದ ಪಂಪ ಹತ್ತಿರದ ಬೇಕರಿಗೆ ನನ್ನ ಮೋಟರ್ ಸೈಕಲ್ ನಂ ಕೆಎ-33 ಎಸ್-1080 ಮೇಲೆ ಭೀ.ಗುಡಿ-ಸುರಪೂರ ಮುಖ್ಯ ರಸ್ತೆಯ ಮೇಲೆ ದಂಡಿನ ಟ್ರ್ಯಾಕ್ಟರ್ ಶೊ ರೂಂ ಮುಂದೆ 7-00 ಗಂಟೆಗೆ ಹೋಗುತ್ತಿರುವಾಗ ನನ್ನ ಹಿಂದಿನಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಭೀ,ಗುಡಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ್ ಸೈಕಲ್ಕ್ಕೆ ಹಿಂದೆ ಡಿಕ್ಕಿಪಡಿಸಿ ಅಪಘಾತಮಾಡಿದ್ದರಿಂದ ನಾನು ಮೋಟರ್ ಸೈಕಲ್ ಸಮೇತವಾಗಿ ರಸ್ತೆಯ ಮೇಲೆ ಬಿದ್ದೆನು. ಆಗ ಅಲ್ಲೆ ಹೋಟೆಲ್ ಮುಂದೆ ಇದ್ದ ಮಾಳಪ್ಪ ತಂದೆ ಭೀಮರಾಯ ನಾಯ್ಕೋಡಿ ಈತನು ಸದರಿ ಅಪಘಾತವನ್ನು ನೋಡಿ ಬಂದು ನನಗೆ ವಿಚಾರಿಸಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ನನಗೆ ತಲೆಯ ಮೇಲೆ, ಎಡಗಡೆ ತಲೆಗೆ, ಬಲಗಡೆ ತಲೆಗೆ, ರಕ್ತಗಾಯ, ಹಿಂದಿನ ಕುತ್ತಿಗೆಗೆ ಗುಪ್ತಗಾಯ, ಬಲ ಬುಜಕ್ಕೆ ಭಾರಿ ರಕ್ತಗಾಯ, ಹಿಂದಿನ ಸೋಂಟಕ್ಕೆ ಗುಪ್ತಗಾಯ, ಎರಡು ಮೋಳಕಾಲಿಗೆ ತರಚಿದ ಗಾಯವಾಗಿರುತ್ತದೆ. ನನಗೆ ಅಪಘಾತಮಾಡಿದ ಕಾರ ಚಾಲಕನಿಗೆ ನೋಡಲಾಗಿ ಕಾರಿನ ಪಕ್ಕದಲ್ಲಿ ನಿಂತಿದ್ದು ಹೆಸರು ವಿಚಾರಿಸಲಾಗಿ ತನ್ನ ಹೆಸರು ಗುರುರಾಜ ತಂದೆ ದುಂಡಪ್ಪ ಸಾವಳಗಿ ಸಾ|| ಕಲಬುರಗಿ ಅಂತ ತಿಳಿಸಿದನು. ಅಪಘಾತಮಾಡಿದ ಕಾರ ನೋಡಲಾಗಿ ಕಾರ ನಂ ಎಂಹೆಚ್-16 ಬಿಜಡ್-1198 ಇದ್ದು ಕಾರ ಮುಂದೆ ಜಕಂ ಗೊಂಡಿರುತ್ತದೆ. ನನ್ನ ಮೋಟರ್ ನಂ ಕೆಎ-33 ಎಸ್-1080 ನೇದ್ದು ಹಿಂದೆ ಜಕಂಗೊಂಡಿರುತ್ತದೆ. ಮಾಳಪ್ಪನು ನನಗೆ ಉಪಚಾರ ಕುರಿತು ಅಲ್ಲೆ ಹೋರಟಿದ್ದ ಒಂದು ಆಟೋದಲ್ಲಿ ಹಾಕಿಕೊಂಡು ಬಂದು ಸರಕಾರಿ ಆಸ್ಪತ್ರೆ ಶಹಾಪೂರದಲ್ಲಿ ಸೇರಿಕೆಮಾಡಿದ್ದು ಇರುತ್ತದೆ. ಮಾಳಪ್ಪನು ನನ್ನ ಅಳಿಯ ದೇವರಾಜ ತಂದೆ ಮಲ್ಲಣ್ಣ ಮಕ್ತಾಪೂರ ಈತನಿಗೆ ಪೋನ ಮಾಡಿ ಅಪಘಾತದ ವಿಷಯ ತಿಳಿಸಿದ್ದರಿಂದ, ದೇವರಾಜ ಮತ್ತು ನನ್ನ ಹೆಂಡತಿ ರೇಣುಕಾ @ ಶ್ರೇಯಾ ಗಂಡ ಶಿವಪ್ಪ ಪೂಜಾರಿ ಇವರು ಆಸ್ಪತ್ರೆಗೆ ಬಂದು ನನಗೆ ನೋಡಿ ವಿಚಾರಿಸಿದ್ದು ಇರುತ್ತದೆ. ನನಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ದೇವರಾಜ ಮತ್ತು ಶ್ರೇಯಾ ಇಬ್ಬರು ಕೂಡಿ ಒಂದು ಕಾರಿನಲ್ಲಿ ನನಗೆ ಕರೆದುಕೊಂಡು ರಾಯಚೂರಿನ ಶ್ರೀ ಸಿದ್ದಿವಿನಾಯಕ ಆಸ್ಪತ್ರೆಗೆ ಸೇರಿಮಾಡಿದ್ದರಿಂದ ಉಪಚಾರ ಪಡೆದಿದ್ದು ಇರುತ್ತದೆ. ನನಗೆ ಉಪಚಾರ ಮಾಡಿಸುವದು ಅವಶ್ಯವಾಗಿದ್ದರಿಂದ ಉಪಚಾರ ಮಾಡಿಸಿಕೊಂಡು ಬಂದು ಮತ್ತು ನಮ್ಮ ಹಿರಿಯರಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಅಂತ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 100/2021 ಕಲಂ: 279, 338, ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ :- 71/2021 ಕಲಂ: 269, 270 ಐಪಿಸಿ ಮತ್ತು ಕಲಂ 5(1) ಕನರ್ಾಟಕ ಎಪಿಡೆಮಿಕ್ ಡಿಸೀಸೆಸ್ ಆಕ್ಟ-2020 : ಇಂದು ದಿನಾಂಕ:08/05/2021 ರಂದು 12:15 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶಿಚಂದ್ರಶೇಖರ ಪಿ.ಎಸ್.ಐ ಸಾಹೇಬರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆಕೊವಿಡ್-19 ಸಾಂಕ್ರಾಮಿಕ ಕಾಯಿಲೆ ತಡೆಗಟ್ಟುವ ಸಂಬಂಧ ಸರಕಾರ ಆದೇಶದಂತೆ ಅವಶ್ಯಕ ಸೇವೆಗಳನ್ನು ಹೊರತು ಪಡಿಸಿ ಇತರೆ ಸೇವೆಗಳನ್ನು ನೀಡುವ ಕಛೇರಿ/ಅಂಗಡಿ/ಮುಂಗಟ್ಟುಗಳನ್ನು ಮುಚ್ಚಲು ಸರಕಾರಿ ಆದೇಶಿದ್ದು ಇರುತ್ತದೆ. ಈ ವಿಷಯ ಕುರಿತು ಈಗಾಗಲೆ ಪೊಲೀಸ್ ಇಲಾಖೆ ವತಿಯಿಂದ ಹಾಗೂ ನಗರಸಭೆ ವತಿಯಿಂದ ಪಟ್ಟಣ/ಹಳ್ಳಿಗಳ ಸಾರ್ವಜನಿಕರಿಗೆ ದ್ವನಿವರ್ದಕ ಹಾಗೂ ಡಂಗೂರ ಸಾರುವ ಮೂಲಕ ಮಾಹಿತಿ ನೀಡಿ ಜಾಗೃತಿ ಮೂಡಿಸಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ:08-05-2021 ರಂದು ಮುಂಜಾನೆ 09-30 ಗಂಟೆ ಸುಮಾರಿಗೆ ನಾನು ಜೊತೆಯಲ್ಲಿ ಠಾಣೆಯ ಸಿಬ್ಬಂಧಿಯವರಾದ ಶ್ರಿ ಬಸವರಾಜ ಸಿಪಿಸಿ-395, ಶ್ರೀ ಅಂಬರೇಶ ಸಿಪಿಸಿ-183 ಇವರೊಂದಿಗೆ ಠಾಣೆಯ ಸರಕಾರಿ ಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಠಾಣೆಯಿಂದ ಹೊರಟು ಕೋವಿಡ್-19 ಲಾಕಡೌನ್ ಸಂಬಂದವಾಗಿ ಸುರಪೂರ ಪಟ್ಟಣದಲ್ಲಿ ಅವಶ್ಯಕ ಸೇವೆಗಳನ್ನು ನೀಡುವ ಕಛೇರಿ/ಅಂಡಗಿ ಮುಂಗಟ್ಟುಗಳನ್ನು ಹೊರತು ಪಡಿಸಿ ಇತರೆ ಸೇವೆ ನೀಡುವ ಅಂಗಡಿ/ಮುಂಗಟ್ಟುಗಳ ಬಗ್ಗೆ ನಿಗಾ ಮಾಡುತ್ತಾ ನಗರದಲ್ಲಿ ಪೆಟ್ರೋಲಿಂಗ ಕರ್ತವ್ಯ ನಿರ್ವಹಿಸುತ್ತಿತ್ತಾ ಬೆಳಿಗ್ಗೆ 11:30 ಗಂಟೆ ಸುಮಾರಿಗೆ ಸುರಪೂರ ರಂಗಂಪೇಠ ಏರಿಯಾದ ಮಾಕರ್ೇಟದಲ್ಲಿ ಹೊರಟಿರುವಾಗ ಒಬ್ಬ ವ್ಯಕ್ತಿಯು ಮಾಕರ್ೇಟದಲ್ಲಿರುವ ತನ್ನ ಬಂಗಾರ ಅಂಗಡಿಯನ್ನು ತೆರೆದು ಸಾರ್ವಜನಿಕರಿಗೆ ವ್ಯಾಪಾರ ಮಾಡುತ್ತಿದ್ದನ್ನು ಗಮನಿಸಿ ಜೀಪ ನಿಲ್ಲಿಸಿ ಅಂಗಡಿ ಹತ್ತಿರ ಹೋಗಲು ವ್ಯಾಪಾರ ಮಾಡಲು ಬಂದ ಸಾರ್ವಜನಿಕರು ನಮ್ಮನ್ನು ನೋಡಿ ಅಲ್ಲಿಂದ ಓಡಿ ಹೋಗಿದ್ದು, ವ್ಯಾಪಾರ ಮಾಡುತ್ತಿದ್ದ ಅಂಗಡಿಯಲ್ಲಿದ್ದ ವ್ಯಕ್ತಿಗೆ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಸಿದ್ರಾಮ ತಂದೆ ಬೀಮಣ್ಣ ಪತ್ತಾರ ವಯಾ:28 ವರ್ಷ ಉ:ಬಂಗಾರ ಅಂಗಡಿ ವ್ಯಾಪಾರ ಜಾತಿ:ವಿಶ್ವಕರ್ಮ ಸಾ:ಮುಜುಮದಾರಗಲ್ಲಿ ಸುರಪೂರ ಅಂತಾ ತಿಳಿಸಿದನು. ಸದರಿ ವ್ಯಕ್ತಿಗೆ ಕೊವೀಡ್-19 ಸಾಂಕ್ರಾಮೀಕ ರೋಗ ಹರಡುವಿಕೆಯನ್ನು ತಡೆಗಟ್ಟುವ ಕುರಿತು ಅಂಗಡಿ ಮುಂಗಟ್ಟು ಚಾಲು ಮಾಡಬಾರದು ಅಂತಾ ಸರಕಾರ ಆದೇಶ ಹೊರಡಿಸಿದ್ದು ಗೊತ್ತಿದ್ದರು ನೀನು ವ್ಯಾಪಾರ ಮಾಡುತ್ತಿದ್ದಿಯಾ ಅಂತಾ ಕೇಳಿದ್ದು, ಅವನು ತನ್ನ ಸ್ವಂತ ಲಾಭಕ್ಕಾಗಿ ವ್ಯಾಪಾರ ಮಾಡುತ್ತಿರುವದಾಗಿ ಒಪ್ಪಿಕೊಂಡನು. ಸದರಿ ವ್ಯಕ್ತಿಯು ತನ್ನ ಲಾಭಕ್ಕಾಗಿ ಯಾವುದೆ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಮಾರಾಟ ಮಾಡುತ್ತಿದ್ದು ಇರುತ್ತದೆ. ಸರಕಾರಿ ಲಾಕ್ ಡೌನ ಮಾಡಿ ಆದೇಶ ಹೊರಡಿಸಿದ್ದರು. ಸದರಿ ವ್ಯಕ್ತಿಯು ಕೋವಿಡ್ -19 ಸಾಂಕ್ರಾಮೀಕ ರೋಗದ ಹರಡುವಿಕೆ ತಡೆಗಟ್ಟುವಲ್ಲಿ ಅಸಹಕಾರ ತೋರಿಸಿ ತಾನು ವ್ಯಾಪಾರ ಮಾಡುವದರಿಂದ ಕೋವಿಡ್-19 ಸಾಂಕ್ರಾಮೀಕ ಕಾಯಿಲೆ ಉಲ್ಬಣಿಸಿ ಸಾರ್ವಜನೀಕರ ಜೀವಕ್ಕೆ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವ ವಿರುತ್ತದೆ ಅಂತಾ ತಿಳಿದರು ಸಹೀತ ಸಿದ್ದರಾಮ ಈತನು ಯಾವುದೆ ಮುಂಜಾಗೃತ ಕ್ರಮ ವಹಿಸದೆ ನಿರ್ಲಕ್ಷಿತನದಿಂದ ಕೃತ್ಯ ಎಸಗಿರುವದು ಕಂಡು ಬಂದಿರುತ್ತದೆ. ಕಾರಣ ಸದರಿ ವ್ಯಕ್ತಿಯನ್ನು ಸ್ಥಳದಲ್ಲಿಯೆ ಬೆಳಿಗ್ಗೆ 11:45 ಗಂಟೆಗೆ ತಾಬಾಕ್ಕೆ ತಗೆದುಕೊಂಡು ಠಾಣೆಗೆ ಮಧ್ಯಾಹ್ನ 12:15 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಸರಕಾರಿ ತಪರ್ೆಯಿಂದ ಪಿಯರ್ಾದಿದಾರನಾಗಿ ವರದಿ ನೀಡಿದ್ದು ಸಿದ್ರಾಮ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ನಿಡಿದ ವರದಿ ನಿಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ :- 72/2021 ಕಲಂ: 269, 270 ಐಪಿಸಿ ಮತ್ತು ಕಲಂ 5(1) ಕನರ್ಾಟಕ ಎಪಿಡೆಮಿಕ್ ಡಿಸೀಸೆಸ್ ಆಕ್ಟ-2020 : ಇಂದು ದಿನಾಂಕ:08/05/2021 ರಂದು 02:15 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಬಾಗಣ್ಣ ಎ.ಎಸ್.ಐ ಸಾಹೇಬರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆಕೊವಿಡ್-19 ಸಾಂಕ್ರಾಮಿಕ ಕಾಯಿಲೆ ತಡೆಗಟ್ಟುವ ಸಂಬಂಧ ಸರಕಾರ ಆದೇಶದಂತೆ ಅವಶ್ಯಕ ಸೇವೆಗಳನ್ನು ಹೊರತು ಪಡಿಸಿ ಇತರೆ ಸೇವೆಗಳನ್ನು ನೀಡುವ ಕಛೇರಿ/ಅಂಗಡಿ/ಮುಂಗಟ್ಟುಗಳನ್ನು ಮುಚ್ಚಲು ಸರಕಾರಿ ಆದೇಶಿದ್ದು ಇರುತ್ತದೆ. ಈ ವಿಷಯ ಕುರಿತು ಈಗಾಗಲೆ ಪೊಲೀಸ್ ಇಲಾಖೆ ವತಿಯಿಂದ ಹಾಗೂ ನಗರಸಭೆ ವತಿಯಿಂದ ಪಟ್ಟಣ/ಹಳ್ಳಿಗಳ ಸಾರ್ವಜನಿಕರಿಗೆ ದ್ವನಿವರ್ದಕ ಹಾಗೂ ಡಂಗೂರ ಸಾರುವ ಮೂಲಕ ಮಾಹಿತಿ ನೀಡಿ ಜಾಗೃತಿ ಮೂಡಿಸಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ:08-05-2021 ರಂದು ಮದ್ಯಾಹ್ನ 01 ಗಂಟೆ ಸುಮಾರಿಗೆ ನಾನು ಜೊತೆಯಲ್ಲಿ ಠಾಣೆಯ ಶ್ರೀ ಅಮರಪ್ಪ ಸಿಪಿಸಿ-176 ಹಾಗೂ ಶ್ರೀ ಆದಪ್ಪ ಹೆಚ್ಜಿ-272 ಇವರೊಂದಿಗೆ ಠಾಣೆಯಿಂದ ಹೊರಟು ಕೋವಿಡ್-19 ಲಾಕಡೌನ್ ಸಂಬಂದವಾಗಿ ಸುರಪೂರ ಪಟ್ಟಣದಲ್ಲಿ ಅವಶ್ಯಕ ಸೇವೆಗಳನ್ನು ನೀಡುವ ಕಛೇರಿ/ಅಂಡಗಿ ಮುಂಗಟ್ಟುಗಳನ್ನು ಹೊರತು ಪಡಿಸಿ ಇತರೆ ಸೇವೆ ನೀಡುವ ಅಂಗಡಿ/ಮುಂಗಟ್ಟುಗಳ ಬಗ್ಗೆ ನಿಗಾ ಮಾಡುತ್ತಾ ನಗರದಲ್ಲಿ ಪೆಟ್ರೋಲಿಂಗ ಕರ್ತವ್ಯ ನಿರ್ವಹಿಸುತ್ತಿತ್ತಾ ಮಧ್ಯಾಹ್ನ 01:30 ಗಂಟೆ ಸುಮಾರಿಗೆ ಸುರಪೂರ ಮುಲ್ಲಾ ಮೊಹಲ್ಲಾ ಏರಿಯಾದಲ್ಲಿ ಹೊರಟಿರುವಾಗ ಒಬ್ಬ ವ್ಯಕ್ತಿಯು ತನ್ನ ಶ್ರೀ ಹುಲಗಿ ಕಿರಾಣಿ ಅಂಗಡಿಯನ್ನು ತೆರೆದು ಸಾರ್ವಜನಿಕರಿಗೆ ವ್ಯಾಪಾರ ಮಾಡುತ್ತಿದ್ದನ್ನು ಗಮನಿಸಿ ಅಂಗಡಿ ಹತ್ತಿರ ಹೋಗಲು ವ್ಯಾಪಾರ ಮಾಡಲು ಬಂದ ಸಾರ್ವಜನಿಕರು ನಮ್ಮನ್ನು ನೋಡಿ ಅಲ್ಲಿಂದ ಓಡಿ ಹೋಗಿದ್ದು, ವ್ಯಾಪಾರ ಮಾಡುತ್ತಿದ್ದ ಅಂಗಡಿಯಲ್ಲಿದ್ದ ವ್ಯಕ್ತಿಗೆ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ವೆಂಕಟೇಶ ತಂದೆ ಜೋಗಪ್ಪ ಹುದ್ದಾರ ವಯಾ:32 ವರ್ಷ ಉ:ಕಿರಾಣಿ ವ್ಯಾಪಾರ ಜಾತಿ:ಕುರುಬರ ಸಾ:ಹುದ್ದಾರ ಓಣಿ ಸುರಪೂರ ಸುರಪೂರ ಅಂತಾ ತಿಳಿಸಿದನು. ಸದರಿ ವ್ಯಕ್ತಿಗೆ ಕೊವೀಡ್-19 ಸಾಂಕ್ರಾಮೀಕ ರೋಗ ಹರಡುವಿಕೆಯನ್ನು ತಡೆಗಟ್ಟುವ ಕುರಿತು ಅಂಗಡಿ ಮುಂಗಟ್ಟು ಚಾಲು ಮಾಡಬಾರದು ಅಂತಾ ಸರಕಾರ ಆದೇಶ ಹೊರಡಿಸಿದ್ದು ಗೊತ್ತಿದ್ದರು ನೀನು ವ್ಯಾಪಾರ ಮಾಡುತ್ತಿದ್ದಿಯಾ ಅಂತಾ ಕೇಳಿದ್ದು, ಅವನು ತನ್ನ ಸ್ವಂತ ಲಾಭಕ್ಕಾಗಿ ವ್ಯಾಪಾರ ಮಾಡುತ್ತಿರುವದಾಗಿ ಒಪ್ಪಿಕೊಂಡನು. ಸದರಿ ವ್ಯಕ್ತಿಯು ಕೋವಿಡ್ -19 ಸಾಂಕ್ರಾಮೀಕ ರೋಗದ ಹರಡುವಿಕೆ ತಡೆಗಟ್ಟುವಲ್ಲಿ ಅಸಹಕಾರ ತೋರಿಸಿ ತಾನು ವ್ಯಾಪಾರ ಮಾಡುವದರಿಂದ ಕೋವಿಡ್-19 ಸಾಂಕ್ರಾಮೀಕ ಕಾಯಿಲೆ ಉಲ್ಬಣಿಸಿ ಸಾರ್ವಜನೀಕರ ಜೀವಕ್ಕೆ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವ ವಿರುತ್ತದೆ ಅಂತಾ ತಿಳಿದರು ಸಹೀತ ಸಿದ್ದರಾಮ ಈತನು ಯಾವುದೆ ಮುಂಜಾಗೃತ ಕ್ರಮ ವಹಿಸದೆ ನಿರ್ಲಕ್ಷಿತನದಿಂದ ಕೃತ್ಯ ಎಸಗಿರುವದು ಕಂಡು ಬಂದಿರುತ್ತದೆ. ಕಾರಣ ಸದರಿ ವ್ಯಕ್ತಿಯನ್ನು ಸ್ಥಳದಲ್ಲಿಯೆ ಮಧ್ಯಾಹ್ನ 01:45 ಗಂಟೆಗೆ ತಾಬಾಕ್ಕೆ ತಗೆದುಕೊಂಡು ಠಾಣೆಗೆ ಮಧ್ಯಾಹ್ನ 02:15 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಸರಕಾರಿ ತಪರ್ೆಯಿಂದ ಪಿಯರ್ಾದಿದಾರನಾಗಿ ವರದಿ ನೀಡಿದ್ದು ವೆಂಕಟೇಶ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 09-05-2021 12:56 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080