ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-05-2022
ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 67/2022 ಕಲಂ 279, 337, 338, 304(ಎ) ಐಪಿಸಿ : ದಿನಾಂಕ 06.05.2022 ರ ಸಂಜೆ 5:00 ಗಂಟೆಯ ಸುಮಾರಿಗೆ ಪುಟಪಾಕ್ ಚೆಕ್ ಪೊಸ್ಟ್ನ ಹತ್ತಿರ ನಾರಾಯಣಪೇಠ್-ಗುರುಮಠಕಲ್ ಮುಖ್ಯ ರಸ್ತೆಯ ಮೇಲೆ ಪುಟಪಾಕ್ ಚೆಕ್ ಪೊಸ್ಟ್ನಲ್ಲಿ ಮೃತ ಎ-1 ವೆಂಕಟೇಶ ತಗಡಘರ ಈತನು ತನ್ನ ಮೋಟಾರು ಸೈಕಲ್ ನಂಬರ ಟಿ.ಎಸ್-06-ಇ.ಹೆಚ್-0614 ಈತನು ಗುರುಮಠಕಲ್ ಕಡೆಯಿಂದ ನಾರಾಯಣಪೇಠ್ ಕಡೆಗೆ ಹಾಗೂ ಎ-2 ಮಹಿಪಾಲರಡ್ಡಿ ಲಿಂಗಂ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-32-ಇ.ಎ-2176 ನೇದ್ದರ ಮೇಲೆ ಗಾಯಾಳುದಾರರಾದ ಶಿವಮ್ಮ ಲಿಂಗಂ ಮತ್ತು ಶ್ರೀದೇವಿ ಬುರ್ಜ ಇವರನ್ನು ಕೂಡಿಕೊಂಡು ನಾರಾಯಣಪೇಠ್ ಕಡೆಯಿಂದ ಗುರುಮಠಕಲ್ ಕಡೆಗೆ ಬರುತ್ತಿದ್ದಾಗ ತಮ್ಮ-ತಮ್ಮ ವಾಹನಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಿಸಲು ಸಾಧ್ಯವಾಗದೇ ಪರಸ್ಪರ ಮುಖಾ-ಮುಖಿಯಾಗಿ ಡಿಕ್ಕಪಡಿಸಿದ್ದರಿಂದ ಇಬ್ಬರು ಆರೋಪಿತರಿಗೆ ಭಾರಿ ರಕ್ತಗಾಯವಾಗಿದ್ದು ಉಳಿದ ಇಬ್ಬರಿಗೆ ಸಾಧಾ ಸ್ವರೂಪದ ರಕ್ತಗಾಯ ಹಾಗೂ ಗುಪ್ತಗಾಯವಾಗಿದ್ದು ಅದರಲ್ಲಿ ಎ-1 ಈತನು ಚಿಕಿತ್ಸೆ ಫಲಕಾರಿಯಾದೇ ನಿನ್ನೆ ದಿನಾಂಕ 07.05.2022 ರಂದು ರಾತ್ರಿ 10:30 ಗಂಟೆಗೆ ಹೈದ್ರಾಬಾದನ ಉಸ್ಮಾನಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಆ ಬಗ್ಗೆ ಮೃತನ ಸಂಬಂಧಿ ಇಂದು ದಿನಾಂಕ 08.05.2022 ರಂದು ಬೆಳಿಗ್ಗೆ 9:00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಠಾಣೆ ಗುನ್ನೆ ನಂಬರ 67/2022 ಕಲಂ 279, 337, 338, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 62/2022 ಕಲಂ: 504, 341, 323, 324 ಸಂ 149 ಐಪಿಸಿ : ಇಂದು ದಿನಾಂಕ:08/05/2022 ರಂದು 5-30 ಪಿಎಮ್ ಕ್ಕೆ ಶ್ರೀ ಬನ್ನಾರೆಡ್ಡಿ ತಂದೆ ಮಲ್ಲಾರೆಡ್ಡಿ ಮಲ್ಲೆದ, ವ:28, ಜಾ:ಹಿಂದೂ ರೆಡ್ಡಿ, ಉ:ರಾಶಿ ಮಷಿನ ನಡೆಸುವುದು ಸಾ:ಸಗರ ತಾ:ಶಹಾಪೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೆಪ ಮಾಡಿದ ದೂರು ಹಾಜರಪಡಿಸಿದ್ದರ ಸಾರಾಂಶವೇನಂದರೆ ನನ್ನವು ಸ್ವಂತ ಎರಡು ರಾಶಿ ಮಷಿನಗಳು ಇದ್ದು, ನಾನು ಮತ್ತು ಇಬ್ಬರೂ ಆಪರೇಟರಗಳನ್ನು ಇಟ್ಟುಕೊಂಡು ರಾಶಿ ಮಷಿನ ನಿರ್ವಹಣೆ ಮಾಡಿಕೊಂಡಿರುತ್ತೇನೆ. ಹೀಗಿದ್ದು ಈಗ ಸುಮಾರು 10-12 ದಿವಸಗಳಿಂದ ನಾಯ್ಕಲ್ ಸೀಮಾಂತರದಲ್ಲಿ ನನ್ನ ಎರಡು ರಾಶಿ ಮಷಿನಗಳಿಂದ ಕವಳೆ ಕಟಾವು ಮಾಡುವುದು ನಡೆದಿರುತ್ತದೆ. ಹೀಗೆ ಕವಳೆ ಮಷಿನ ನಡೆಯುತ್ತಿದ್ದಾಗ ದಿನಾಂಕ:04/05/2022 ರಂದು ಒಂದು ರಾಷಿ ಮಷಿನನಲ್ಲಿ ಆಕಸ್ಮಿಕ ತಾಂತ್ರಿಕ ತೊಂದರೆಯಾಗಿ ಕೆಟ್ಟು ನಿಂತಿದ್ದರಿಂದ ರಾಯಚೂರಿನ ಟಾಟಾ ಸವರ್ಿಸ್ ಸೆಂಟರ್ ರವರಿಗೆ ಮಾಹಿತಿ ತಿಳಿಸಿದಾಗ ಅವರು ಸುರೇಶ ತಂದೆ ಎಸ್. ಬಾಬು ಎಂಬ ಮೆಕ್ಯಾನಿಕನಿಗೆ ಕಳುಹಿಸಿಕೊಟ್ಟರು. ಸದರಿ ಮೆಕ್ಯಾನಿಕರವರು ಬಂದು ರಾಶಿ ಮಷಿನ ನೋಡಿ ಇಂಜನನಲ್ಲಿ ತೊಂದರೆ ಇದ್ದು, ಇದನ್ನು ರಾಯಚೂರು ಸವರ್ಿಸ್ ಸೆಂಟರ್ ಗೆ ತೆಗೆದುಕೊಂಡು ಹೋಗಿ ಪೂತರ್ಿ ಬಿಚ್ಚಿ ರಿಪೇರಿ ಮಾಡಬೇಕಾಗುತ್ತದೆ ಎಂದು ಹೇಳಿದನು. ಆಗ ನಾನು ನನ್ನ ಸ್ನೇಹಿತ ಮರೆಪ್ಪ ತಂದೆ ಮಾನಪ್ಪ ಸಾ:ಚಟ್ನಳ್ಳಿ ಈತನಿಗೆ ನಡೆದ ಸಂಗತಿ ಹೇಳಿ ರಾಯಚೂರಿಗೆ ಹೋಗಿ ರಾಶಿ ಮಷಿನ ಇಂಜನ ಬಿಟ್ಟು ಬರೋಣ ನೀನು ಬಾ ಎಂದು ಹೇಳಿ ಕರೆಸಿದೆನು. ನನ್ನ ಸ್ನೇಹಿತ ಮರೆಪ್ಪ ಬಂದ ನಂತರ ರಾತ್ರಿ ನಮ್ಮ ಕೆಟ್ಟ ರಾಶಿ ಮಷಿನ ಇಂಜನನ್ನು ನಮ್ಮ ಲಾರಿಯಲ್ಲಿ ಲೋಡ ಮಾಡಿಕೊಂಡು ನಾನು ಮತ್ತು ನನ್ನ ಸ್ನೇಹಿತ ಮರೆಪ್ಪ ಹಾಗೂ ಮೆಕ್ಯಾನಿಕ ಸುರೇಶ ಮೂರು ಜನ ಅದರಲ್ಲಿ ಕುಳಿತು ರಾಯಚೂರಕ್ಕೆ ಹೊರಟೇವು. ಹೋಗುವಾಗ ದಾರಿಯಲ್ಲಿ ರಾತ್ರಿ 11:00 ಗಂಟೆ ಸಮಯ ಆಗುತ್ತಿದ್ದರಿಂದ ಮುಂದೆ ಎಲ್ಲಿ ಊಟ ಸಿಗಲ್ಲ ಇಲ್ಲಿಯೇ ಏನಾದರೂ ಊಟ ಮಾಡಿಕೊಂಡು ಹೋದರಾಯಿತು ಅಂತಾ ವಡಗೇರಾ ಕ್ರಾಸನಲ್ಲಿರುವ ಅಭಿರುಚಿ ಧಾಬಾದ ಮುಂದೆ ನಮ್ಮ ಲಾರಿಯನ್ನು ನಿಲ್ಲಿಸಿ, ನಾವು ಮೂರು ಜನ ದಾಭಾದ ಒಳಗಡೆ ಹೋಗಿ ಊಟ ಮಾಡಿಕೊಂಡು ಊಟದ ಬಿಲ್ ಕಟ್ಟಿ 11:30 ಪಿಎಮ್ ಸುಮಾರಿಗೆ ಹೊರಗಡೆ ಬಂದು ನಾನು ನಮ್ಮ ಲಾರಿಯಲ್ಲಿ ಹತ್ತಿ ಲಾರಿಯನ್ನು ಚಾಲು ಮಾಡುತ್ತಿದ್ದಾಗ ಅಲ್ಲಿಯೇ ದಾಭಾದಲ್ಲಿ ಊಟ ಮಾಡಿ ಹೊರಗಡೆ ಬಂದಿದ್ದ ಸುಮಾರು 8-10 ಜನ ಅಪರಿಚಿತರು ಇದ್ದು, ಅವರಲ್ಲಿ ಮೂರು ಜನ ಬಂದು ನನ್ನ ಲಾರಿಯ ಮುಂದೆ ನಿಂತರು. ಅವರಲ್ಲಿ ಒಬ್ಬನು ನನ್ನ ಹತ್ತಿರ ಬಂದು ಆರ್.ಎಮ್.ಡಿ ಗುಟ್ಕಾ ಇದೆಯಾ ಅಂತಾ ಕೇಳಿದನು. ಆಗ ನಾನು ನನ್ನ ಬಳಿಯಿದ್ದ ಒಂದು ಆರ್.ಎಮ್.ಡಿ ಗುಟ್ಕಾ ಕೊಟ್ಟೇನು. ಆಗ ಒಂದೇ ಗುಟ್ಕಾ ಕೊಡತಿಯೇನಲೇ ಭೊಸುಡಿ ಮಗನೆ ಅಂತಾ ಒಬ್ಬನು ಬೈದನು. ಆಗ ನಾನು ನನ್ನ ಹತ್ತಿರ ಒಂದು ಇದೆ ಅದನ್ನು ಕೊಟ್ಟಿನಿ ಎಂದು ಹೇಳಿದಾಗ ಇನ್ನಿಬ್ಬರು ಬಂದು ನನಗೆ ಲಾರಿಯಿಂದ ಕೆಳಗೆ ಇಳಿಸಿ, ಭೊಸುಡಿ ಮಗನೆ ನಮ್ಮ ಬಾಸ್ ನಿಗೆ ಎದುರು ಮಾತನಾಡುತ್ತಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಅವಾಚ್ಯ ಬೈದು ಕೈಯಿಂದ ಮುಖಕ್ಕೆ ಹೊಡೆದರು. ಅಷ್ಟರಲ್ಲಿ ಮತ್ತೊಬ್ಬನು ಅಲ್ಲಿಯೇ ಇದ್ದ ಕಟ್ಟಿಗೆ ತೆಗೆದುಕೊಂಡು ನನ್ನ ತಲೆ ಹಿಂಬಾಗ ಹೊಡೆದು ಒಳಪೆಟ್ಟು ಮಾಡಿದನು. ಅದೇ ಕಟ್ಟಿಗೆಯಿಂದ ಎಡಗಡೆ ಭುಜದ ಹಿಂದೆ, ಎಡಗಡೆ ಪಕ್ಕೆಗೆ ಹೊಡೆದಿದ್ದರಿಂದ ದರೆಗಳು ಬಿದ್ದಿರುತ್ತವೆ. ಇನ್ನೊಬ್ಬನು ಬಂದು ನನ್ನ ಎದೆಯ ಕೆಳಗಡೆ ಮತ್ತು ತರಡಿಗೆ ಕಾಲಿನಿಂದ ಒದ್ದು ಒಳಪೆಟ್ಟು ಮಾಡಿದನು. ಇನ್ನು ಇತರರು ಬಂದು ಕೈಯಿಂದ ಹೊಡೆದು ಎಳೆದಾಡಿರುತ್ತಾರೆ. ಬಿಡಿಸಲು ಬಂದ ನನ್ನ ಸ್ನೇಹಿತ ಮರೆಪ್ಪ ಮತ್ತು ಸುರೇಶನಿಗೆ ಕೂಡಾ ಹೊಡೆಯಲು ಹೋಗಿದ್ದರಿಂದ ಅವರಿಬ್ಬರು ಅಂಜಿ ಓಡಿ ಹೋಗಿರುತ್ತಾರೆ. ನಾನು ಅವರಿಂದ ಕೊಸರಿ ಬಿಡಿಸಿಕೊಂಡು ಹೊರಗೆ ಬಂದು ನನ್ನ ಲಾರಿ ಚಾಲು ಮಾಡಿಕೊಂಡು ನೇರವಾಗಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾದೆನು. ನಂತರ ಈ ಘಟನೆ ಬಗ್ಗೆ ನಮ್ಮ ತಂದೆಯವರಿಗೆ ತಿಳಿಸಿರುತ್ತೇನೆ. ಅವರು ನಂತರ ಆಸ್ಪತ್ರೆಗೆ ಬಂದಿರುತ್ತಾರೆ. ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾವು ಸದ್ಯ ಉಪಚಾರ ಮಾಡಿಕೊಂಡು ಮತ್ತು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡುವುದಿದ್ದರೆ ಪೊಲೀಸ್ ಠಾಣೆಗೆ ಬಂದು ಕೊಡುತ್ತೇವೆ ಎಂದು ಹೇಳಿರುತ್ತೇವೆ. ನನಗೆ ಏಕಾ ಏಕಿ ಗುಟ್ಕಾ ಕೇಳಿ ತಡೆದು ನಿಲ್ಲಿಸಿ, ಹೊಡೆಬಡೆ ಮಾಡಿದವರ ಬಗ್ಗೆ ಅಲ್ಲಿಯೇ ಸುತ್ತಮುತ್ತ ವಿಚಾರ ಮಾಡಿಕೊಂಡು ಹಾಗೆಯೇ ಆಸ್ಪತ್ರೆಗೆ ತೋರಿಸಿಕೊಂಡು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ನನಗೆ ತಡೆದು ನಿಲ್ಲಿಸಿ, ಅವಾಚ್ಯ ಬೈದು ಹಲ್ಲೆ ಮಾಡಿದವರಿಗೆ ನಾನು ನೋಡಿದಲ್ಲಿ ಗುರುತಿಸುತ್ತೇನೆ. ಕಾರಣ ಯಾರೋ ಅಪರಿಚಿತರು ವಿನಾಕಾರಣ ಗುಟ್ಕಾ ಕೊಡು ಅಂತಾ ಕೇಳಿ ಜಗಳ ಮಾಡಿ ನನಗೆ ತಡೆದು ನಿಲ್ಲಿಸಿ, ಹಲ್ಲೆ ಮಾಡಿದ ಮೇಲ್ಕಂಡ ಅಪರಿಚಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 62/2022 ಕಲಂ: 504, 341, 323, 324 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 76/2022 ಕಲಂ 87 ಕೆಪಿ ಆಕ್ಟ್: ಇಂದು ದಿನಾಂಕ: 08/05/2022 ರಂದು 7-30 ಪಿ.ಎಮ್ ಶ್ರೀನಿವಾಸ್.ವಿ. ಅಲ್ಲಾಪೂರ ಪಿ.ಐ ಶಹಾಪೂರ ಪೊಲೀಸ ಠಾಣೆ ರವರು ಠಾಣೆಗೆ ಬಂದು ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ: 08/05/2022 ರಂದು 3.00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಹಯ್ಯಾಳ(ಕೆ) ಸೀಮಾಂತರಲ್ಲಿನ ಬಸವರಾಜಪ್ಪ ಹೂಗಾರ ಇವರ ಹೋಲದ ಹತ್ತಿರ ಇರುವ ಹಳ್ಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು 9-10 ಜನರು ಕೂಡಿಕೊಂಡು ಹಣವನ್ನು ಪಣಕ್ಕೆ ಹಚ್ಚಿ ಕೋಳಿಗಳ ಸಹಾಯದಿಂದ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯವರಾದ ಶ್ರೀ ಬಾಬು ಹೆಚ್.ಸಿ-162, ಲಕ್ಕಪ್ಪ ಹೆಚ್.ಸಿ-102, ಶ್ರೀ ಭಾಗಣ್ಣ ಪಿಸಿ-194, ರಾಮಚಂದ್ರ ಪಿಸಿ-266, ಬಸವರಾಜ ಪಿಸಿ-346, ನಾಗರಾಜ ಪಿಸಿ-12, ಧರ್ಮರಾಜ ಪಿಸಿ-45, ಭೀಮನಗೌಡ ಪಿಸಿ-402 ಹಾಗೂ ಮಂಜುನಾಥ ಪಿಸಿ-73 ರವರನ್ನು ಕರೆದು ಸದರಿ ವಿಷಯವನ್ನು ತಿಳಿಸಿ, ಬಾಬು ಹೆಚ್.ಸಿ-162 ರವರಿಗೆ ದಾಳಿಗಾಗಿ ಇಬ್ಬರ ಪಂಚರನ್ನು ಕರೆಯಿಸಲು ತಿಳಿಸಿದ್ದರಿಂದ ಪಂಚರಾದ 1) ಶ್ರೀ ಭೀಮರಯ ತಂದೆ ಲಿಂಗನಗೌಡ ಬಿರಾದಾರ ವಯಾ: 34 ವರ್ಷ ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಹಯ್ಯಾಳ(ಕೆ) ತಾ: ಶಹಾಪೂರ 2) ಶ್ರೀ ಜಗದೀಶಗೌಡ ತಂದೆ ಪಂಪನಗೌಡ ಮಾಲಿಪಾಟೀಲ ವಯಾ: 40 ವರ್ಷ ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಹಯ್ಯಾಳ(ಕೆ) ತಾ: ಶಹಾಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಇವರಿಗೂ ಸದರಿ ವಿಷಯ ತಿಳಿಸಿದ್ದು, ನಂತರ ಸದರಿಯವರ ಮೇಲೆ ದಾಳಿ ಮಾಡಲು ನಾನು, ಪಂಚರು ಮತ್ತು ಸಿಬ್ಬಂದಿಯವರು ಕೂಡಿ ಒಂದು ಖಾಸಗಿ ಜೀಪಿನಲ್ಲಿ ಕುಳಿತುಕೊಂಡು, ಠಾಣೆಯಿಂದ 3.30 ಪಿ.ಎಂ ಕ್ಕೆ ಹೊರಟು ಹಯ್ಯಾಳ(ಕೆ) ಸೀಮಾಂತರದ ಬಸವರಾಜಪ್ಪ ಹೂಗಾರ ಇವರ ಹೊಲದ ಹತ್ತಿರ ಇರುವ ಹಳ್ಳದ ಸಮೀಪ 4.10 ಪಿ.ಎಂ.ಕ್ಕೆ ಹೋಗಿ ಜೀಪ ನಿಲ್ಲಿಸಿ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಹಳ್ಳದಲ್ಲಿನ ಖುಲ್ಲಾ ಜಾಗೆಯಲ್ಲಿ ಸ್ಥಳದಲ್ಲಿ ಕೋಳಿ ಪಂದ್ಯವಾಡುತ್ತಾ ಅವುಗಳ ಮೇಲೆ ಹಣವನ್ನು ಪಣಕ್ಕಿಟ್ಟು ಜೂಜಾಟವಾಡುತ್ತಿದ್ದದ್ದನ್ನು ನೋಡಿ ಖಚಿತ ಪಡಿಸಿಕೊಂಡು ನಾನು, ಪಂಚರು ಮತ್ತು ಸಿಬ್ಬಂದಿಯವರು ಸೇರಿ 4.15 ಪಿ.ಎಮ್ ಕ್ಕೆ ಒಮ್ಮೆಲೆ ದಾಳಿ ಮಾಡಿ ಹಿಡಿಯಲಾಗಿ, ದಾಳಿಯಲ್ಲಿ 09 ಜನರು ಸಿಕ್ಕಿದ್ದು ಸದರಿಯವರಿಗೆ ಹೆಸರು ಮತ್ತು ವಿಳಾಸ್ ವಿಚಾರಿಸಲಾಗಿ 1) ಮಹಾದೇವ ತಂದೆ ನಿಂಗಪ್ಪ ಹೊಸಮನಿ ವ|| 23 ವರ್ಷ ಜಾ|| ಪ.ಜಾತಿ(ಹೊಲೆಯ) ಉ|| ಕೂಲಿ ಸಾ|| ಹಾಲಬಾವಿ ತಾ: ಶಹಾಪೂರ ಇತನ ಅಂಗಶೋಧನ ಮಾಡಲಾಗಿ ಆತನ ಹತ್ತಿರ 900/-ರೂಗಳು ಸಿಕ್ಕಿದ್ದು, 2) ಶಿವುಕುಮಾರ ತಂದೆ ಭೀಮರಾಯ ಹಾದಿಮನಿ ವ|| 22 ವರ್ಷ ಜಾ|| ಕುರುಬ ಉ|| ವ್ಯಾಪಾರ ಸಾ|| ಹುಲಕಲ್ ತಾ: ಶಹಾಪೂರ ಇತನ ಅಂಗಶೋಧನ ಮಾಡಲಾಗಿ ಆತನ ಹತ್ತಿರ 700/-ರೂಗಳು ಸಿಕ್ಕಿದ್ದು, 3) ಹಣಮಯ್ಯ ತಂದೆ ಯಂಕಪ್ಪ ಈಳಗೇರ ವ|| 50 ವರ್ಷ ಜಾ|| ಗುತ್ತೇದಾರ ಉ|| ಕೂಲಿ ಸಾ|| ಹಯ್ಯಾಳ(ಕೆ) ತಾ: ಶಹಾಪೂರ ಇತನ ಅಂಗಶೋಧನ ಮಾಡಲಾಗಿ ಆತನ ಹತ್ತಿರ 1500/-ರೂಗಳು ಸಿಕ್ಕಿದ್ದು 4) ಭೀಮರಾಯ ತಂದೆ ಮಲ್ಲಪ್ಪ ಕರಿಗುಡ್ಡ ವ|| 25 ವರ್ಷ ಉ|| ಒಕ್ಕಲುತನ ಜಾತಿ: ಬೇಡರ ಸಾ|| ಹಯ್ಯಾಳ(ಕೆ) ತಾ: ಶಹಾಪೂರ ಇತನ ಅಂಗಶೋಧನ ಮಾಡಲಾಗಿ ಆತನ ಹತ್ತಿರ 3000/-ರೂಗಳು ಸಿಕ್ಕಿದ್ದು, 5) ಹೊನ್ನಪ್ಪ ತಂದೆ ಯಮನಪ್ಪ ಕವಲಿ ವಯಾ: 32 ಉ|| ಒಕ್ಕಲುತನ ಸಾ|| ಹಯ್ಯಾಳ(ಕೆ) ತಾ: ಶಹಾಪೂರ ಇತನ ಅಂಗಶೋದನೆ ಮಾಡಲಾಗಿ ಆತನ ಹತ್ತಿರ 4000/ ರೂಗಳು ಸಿಕ್ಕಿದ್ದು, 6) ಮಲ್ಲಪ್ಪ ತಂದೆ ದೇವಪ್ಪ ಹೊಸಮನಿ ವಯಾ: 52 ಜಾತಿ: ಬೇಡರ ಉ|| ಕೂಲಿ ಸಾ|| ಮರಕನಕೊಳ್ಳುರ ತಾ: ಶಹಾಪೂರ ಇತನಿಗೆ ಅಂಗಶೋದನೆ ಮಾಡಲಾಗಿ ಇತನ ಹತ್ತಿರ 3500/- ರೂಗಳು ಸಿಕ್ಕಿದ್ದು, 7) ದೇವಿಂದ್ರ ತಂದೆ ದೊಡ್ಡ ಮಹಾದೇವಪ್ಪ ಕಾಲೆಗಾರ ವಯಾ: 26 ಜಾತಿ: ಪ.ಜಾತಿ(ಮಾದಿಗ) ಉ|| ಕೂಲಿ ಸಾ|| ಬೊಮ್ಮನಳ್ಳಿ ತಾ: ಶಹಾಪೂರ ಇತನ ಅಂಗಶೋದನೆ ಮಾಡಲಾಗಿ ಈತನ ಹತ್ತಿರ 1500/-ರೂಗಳು ಸಿಕ್ಕಿದ್ದು, 8) ನಿಂಗಪ್ಪ ತಂದೆ ಸಿಂದೆ ವಯಾ: 51 ಜಾತಿ: ಪ.ಜಾತಿ(ಹೊಲೆಯ) ಉ: ಕೂಲಿಕೆಲಸ ಸಾ: ಹಾಲಬಾವಿ ತಾ: ಶಹಾಪೂರ ಇತನ ಅಂಗಶೋದನೆ ಮಾಡಲಾಗಿ ಆತನ ಹತ್ತಿರ 500/- ರೂಗಳು ಸಿಕ್ಕಿದ್ದು, 9) ಮೈಲಾರಿ ತಂದೆ ಮಲ್ಲಪ್ಪ ನಾಯಕ ವಯಾ: 33 ವರ್ಷ ಜಾತಿ: ಬೇಡರ ಉ: ಒಕ್ಕಲುತನ ಸಾ: ಬೊಮ್ಮನಳ್ಳಿ ತಾ: ಶಹಾಪೂರ ಇತನ ಅಂಗಶೋದನೆ ಮಾಡಲಾಗಿ ಆತನ ಹತ್ತಿರ 800/- ರೂಗಳು ಸಿಕ್ಕಿದ್ದು, ಮತ್ತು 10) ಪಕೀರಪ್ಪ ತಂದೆ ಭೀಮಪ್ಪ @ಸಾದು ಜಾತೀ; ಬೇಡರ ಸಾ: ಹಯ್ಯಾಳ(ಕೆ) ತಾ: ಶಹಾಪೂರ ಈತನು ಓಡಿ ಹೋಗಿರುತ್ತಾನೆ. ಎಲ್ಲರ ಮುಂದಿನ ಕಣದಲ್ಲಿ 2100-ರೂಗಳು, ಹೀಗೆ ಒಟ್ಟು 18500/- ರೂ. ನಗದು ಹಣ ಹಾಗೂ ಕಣದಲ್ಲಿ 2 ಹುಂಜ ಇದ್ದು, ಪ್ರತಿಯೊಂದರ ಅ.ಕಿ. 200/-ರೂ ಹೀಗೆ ಒಟ್ಟು 400/- ರೂಗಳು ಆಗುತ್ತದೆ. ಸದರಿಯವರೆಲ್ಲರ ಹತ್ತಿರ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 18500=00 ರೂಪಾಯಿ, ಮತ್ತು 2 ಹುಂಜ ಅ,ಕಿ 400=00 ರೂಪಾಯಿ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡು, ಮುದ್ದೆಮಾಲನ್ನು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಕೇಸಿನ ಮುಂದಿನ ಪುರಾವೆ ಕುರಿತು 4.15 ಪಿ.ಎಮ್ ದಿಂದ 5.45 ಪಿ.ಎಂ ವರೆಗೆ ಜಪ್ತಿ ಪಂಚನಾಮೆಯನ್ನು ಮಾಡಿ ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಒಬ್ಬ ಓಡಿ ಹೋಗಿದ್ದು, ಸಿಕ್ಕ 09 ಜನ ಆರೋಪಿತರೊಂದಿಗೆ ಮರಳಿ ಠಾಣೆಗೆ 6-30 ಪಿ.ಎಂ ಕ್ಕೆ ಬಂದು 9 ಜನ ಆರೋಪಿತರು, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರುಪಡಿಸಿ, ವರದಿ ತಯಾರಿಸಿ ಸದರಿ ಆರೋಪಿತರ ಮೇಲೆ ಮುಂದಿನ ಕ್ರಮ ಕೈಕೊಳ್ಳಲು 07-30 ಪಿ.ಎಂ.ಕ್ಕೆ ವರದಿ ನೀಡಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 76/2022 ಕಲಂ: 87 ಕೆ.ಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.