ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-06-2022


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 85/2021 ಕಲಂ: 379 ಐಪಿಸಿ : ದಿನಾಂಕ: 08/06/2022 ರಂದು 8-30 ಎಎಮ್ ಕ್ಕೆ ಶ್ರೀ ಬಾಷುಮೀಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ವಡಗೇರಾ ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ದಿನಾಂಕ: 08/06/2022 ರಂದು ನಾನು ಮತ್ತು ಜೀಪ್ ಚಾಲಕ ಮಹೇಂದ್ರ ಪಿಸಿ 254 ರವರೊಂದಿಗೆ ಯಾದಗಿರಿ ನಗರ ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯ ಮುಗಿಸಿಕೊಂಡು ಮರಳಿ ಮನೆಗೆ ಹೋಗುತ್ತಿರವಾಗ ಗೋಡಿಹಾಳ ಗ್ರಾಮದ ಭೀಮಾ ನದಿಯಿಂದ ಯಾರೋ ಟಿಪ್ಪರದಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ತುಂಬಿಕೊಂಡು ಹಾಲಗೇರಾ ಮುಖಾಂತರ ಯಾದಗಿರಿ ಕಡೇ ಸಾಗಿಸುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ನಾನು ಮತ್ತು ತಾಯಪ್ಪ ಹೆಚ್ಸಿ 79 ಮಹೇಂದ್ರ ಪಿಸಿ 254, ರವರೊಂದಿಗೆ ಮುಂಜಾನೆ 7-30 ಎಎಮ್ ಸುಮಾರಿಗೆ ಹಾಲಗೇರಾ ಕ್ರಾಸ ಹತ್ತಿರ ಹೋಗಿ ಮಹಿಪಾಲರೆಡ್ಡಿ ಈತನ ಹೊಟೆಲ್ ಮರೆಯಾಗಿ ನಿಂತು ನೋಡಿದಾಗ ಗೋಡಿಹಾಳ ಕಡೆಯಿಂದ ಒಂದು ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುವುದು ಖಚಿತಪಡಿಸಿಕೊಂಡು ಸದರಿ ಟಿಪ್ಪರ ನಿಲ್ಲಿಸಿದಾಗ ಟಿಪ್ಪರ ಚಾಲಕನು ಕ್ರಾಸಿನಲ್ಲಿ ಟಿಪ್ಪರ ಬಿಟ್ಟು ಓಡಿ ಹೋದನು. ಸದರಿಯವನಿಗೆ ಪುನಃ ನೋಡಿದಲ್ಲಿ ಗುರುತಿಸುತ್ತೇವೆ. ಸದರಿ ಟಿಪ್ಪರನಲ್ಲಿ ಮರಳು ತುಂಬಿದ್ದು. ಟಿಪ್ಪರ ನಂಬರ ನೋಡಲಾಗಿ ಕೆಎ: 33 ಬಿ 2511 ಇರುತ್ತದೆ. ಸದರಿ ಟಿಪ್ಪರ ಚಾಲಕನು ಸಕರ್ಾರಕ್ಕೆ ರಾಜಧನ ಪಾವತಿಸದೇ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ತುಂಬಿ ಸಾಗಿಸುತ್ತಿದ್ದಾಗ ನಾವು ದಾಳಿ ಮಾಡಿದ್ದನ್ನು ನೋಡಿ ಮರಳು ತುಂಬಿದ ಟಿಪ್ಪರ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಟಿಪ್ಪರನ್ನು ಬೇರೊಬ್ಬ ಚಾಲಕನ ಸಹಾಯದಿಂದ ಠಾಣೆಗೆ ತಂದು ಈ ದೂರು ನೀಡುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 85/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 31/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 08/06/2022 ರಂದು ಬೆಳಿಗ್ಗೆ ಸಮಯ 11-30 ಎ.ಎಂ.ಕ್ಕೆ ಪಿಯರ್ಾದಿ ಶ್ರೀ ತೇಜುರಾಜ ತಂದೆ ಬಾಬುನಾಯಕ ರಾಠೋಡ ವಯ;40 ವರ್ಷ, ಜಾ;ಲಂಬಾಣಿ, ಉ;ಸಮಾಜ ಸೇವೆ, ಸಾ;ಗಾಂಧಿನಗರ ತಾಂಡ, ಯಾದಗಿರಿ (ಮೊ.ನಂ.9845216666) ರವರು ಖುದ್ದಾಗಿ ಠಾಣೆಗೆ ಹಾಜರಾಗಿ ನಿನ್ನೆ ದಿನಾಂಕ 07/06/2022 ರಂದು ರಾತ್ರಿ 10-30 ಪಿ.ಎಂ.ಕ್ಕೆ ಜರುಗಿದ ರಸ್ತೆ ಅಪಘಾತದ ಘಟನೆ ಬಗ್ಗೆ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರು ಅಜರ್ಿ ನೀಡಿದ್ದನ್ನು ಪಡೆದುಕೊಂಡಿದ್ದು, ಪಿಯರ್ಾದಿಯ ಅಜರ್ಿಯ ದೂರಿನ ಸಾರಾಂಶವೇನೆಂದರೆ ನಾನು ತಮ್ಮಲ್ಲಿ ಈ ಮೂಲಕ ದೂರು ಅಜರ್ಿ ಸಲ್ಲಿಸುವುದೇನೆಂದರೆ ನಿನ್ನೆ ದಿನಾಂಕ 07/06/2022 ರಂದು ರಾತ್ರಿ 10-45 ಪಿ.ಎಂ.ಕ್ಕೆ ನಾನು ಬೆಂಗಳೂರಿನಿಂದ ಯಾದಗಿರಿಗೆ ಬರುತ್ತಿದ್ದಾಗ ನನ್ನ ಅಣ್ಣನ ಮಗನಾದ ಮಿಥುನ್ ತಂದೆ ರಾಜು ರಾಠೋಡ ಈತನು ನನಗೆ ಪೋನ್ ಮಾಡಿ ಮಾಹಿತಿ ತಿಳಿಸಿದ್ದೇನೆಂದರೆ, ಇಂದು ರಾತ್ರಿ ಅಂದಾಜು ಸಮಯ 10-30 ಪಿ.ಎಂ.ದ ಸುಮಾರಿಗೆ ನಾನು ಮತ್ತು ನಿಮ್ಮ ತಂದೆಯಾದ ಬಾಬುನಾಯಕ ಹಾಗು ನಮ್ಮ ಸಂಬಂಧಿ ಅಂಬ್ರೇಶ್ ತಂದೆ ವೆಂಕಟೇಶ ಚವ್ಹಾಣ ಮೂರು ಜನರು ಸೇರಿಕೊಂಡು ಯಾದಗಿರಿ ರೇಲ್ವೇ ಸ್ಟೇಷನ್ ರಸ್ತೆ ಕಡೆಯಿಂದ ಯಾದಗಿರಿ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದ ಹತ್ತಿರ ರಸ್ತೆ ಬದಿಯಲ್ಲಿ ನಡೆದುಕೊಂಡು ನಮ್ಮ ಗಾಂಧಿನಗರ ತಾಂಡಾ ಕಡೆಗೆ ಹೊರಟಿದ್ದಾಗ ನಾವುಗಳು ನೋಡು ನೋಡುತ್ತಿದ್ದಂತೆ ಒಬ್ಬ ಬೂದಿ ಲಾರಿ ಟ್ಯಾಂಕರ್ ನೇದ್ದರ ಚಾಲಕನು ಹೊಸ ಬಸ್ ನಿಲ್ದಾಣದ ಕಡೆಯಿಂದ ಸುಬಾಷ್ ವೃತ್ತದ ಕಡೆಗೆ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ನಮ್ಮಲ್ಲಿ ನಿಮ್ಮ ತಂದೆಯವರಿಗೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ. ಸದರಿ ಅಪಘಾತದಲ್ಲಿ ಲಾರಿಯ ಮುಂದಿನ ಟಯರು ನಿಮ್ಮ ತಂದೆ ಬಾಬುನಾಯಕ ಇವರಿಗೆ ಬಲಗಾಲಿನ ಪಾದದ ಮೇಲೆ ಹಾಯ್ದು ಹೋಗಿದ್ದರಿಂದ ಭಾರೀ ರಕ್ತಗಾಯವಾಗಿದ್ದು, ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ. ಅಪಘಾತ ಪಡಿಸಿದ ಬೂದಿ ಲಾರಿ ಟ್ಯಾಂಕರ್ ಚಾಲಕನು ತನ್ನ ವಾಹನವನ್ನು ಘಟನಾ ಸ್ಥಳದಿಂದ ಸ್ವಲ್ಪ ದೂರ ಹೋಗಿ ನಿಲ್ಲಿಸಿದ್ದು, ಲೈಟಿನ ಬೆಳಕಿನಲ್ಲಿ ಅಪಘಾತಪಡಿಸಿದ ಬೂದಿ ಲಾರಿ ಟ್ಯಾಂಕರ ನಂಬರ ನೋಡಲಾಗಿ ಕೆಎ-32, ಡಿ-6201 ನೇದ್ದು ಇರುತ್ತದೆ. ವಾಹನದ ಚಾಲಕನು ನಮ್ಮನ್ನು ನೋಡಿ ಗಡಿಬಿಡಿ ಮಾಡುತ್ತಾ ತನ್ನ ವಾಹನವನ್ನು ಮತ್ತೆ ಚಾಲು ಮಾಡಿಕೊಂಡು ಓಡಿ ಹೋಗಿರುತ್ತಾನೆ. ನಾವುಗಳು ವಾಹನ ಮತ್ತು ಅದರ ಚಾಲಕನನ್ನು ಮತ್ತೆ ನೋಡಿದರೆ ಗುತರ್ಿಸುತ್ತೇವೆ ಅಂತಾ ತಿಳಿಸಿದಾಗ ಆಗ ನಾನು ಮಿಥುನ್ ಈತನಿಗೆ ನನ್ನ ತಂದೆಗೆ ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗು ನಾನು ಬೆಂಗಳೂರಿನಿಂದ ಮರಳಿ ಯಾದಗಿರಿಗೆ ಬರುತ್ತಿದ್ದೇನೆ ಬಂದ ನಂತರ ಪೊಲೀಸ್ ಕೇಸು ಮಾಡೋಣ ಅಂತಾ ತಿಳಿಸಿರುತ್ತೇನೆ. ಅದರಂತೆ ಮಿಥುನ್ ಮತ್ತು ಅಂಬ್ರೇಶ್ ಇಬ್ಬರು ನನ್ನ ತಂದೆ ಬಾಬು ನಾಯಕ ಇವರಿಗೆ ಉಪಚಾರ ಕುರಿತು ಸೇರಿಕೊಂಡು ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ನಂತರ ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಉಪಚಾರ ನೀಡಿದ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ನನ್ನ ತಂದೆಗೆ ಕಲಬುರಗಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಎಮ್.ಎಲ್.ಸಿ ವಿಚಾರಣೆಗೆ ಬಂದಿದ್ದ ಪೊಲೀಸರಿಗೆ ಗಾಯಾಳುವಿಗೆ ಉಪಚಾರ ಕುರಿತು ಮೊದಲು ನಾವು ಕಲಬುರಗಿಗೆ ಕರೆದುಕೊಂಡು ಹೊರಟಿದ್ದು, ಈ ಘಟನೆಯ ಬಗ್ಗೆ ನಾಳೆ ಬೆಳಿಗ್ಗೆ ಠಾಣೆಗೆ ಬಂದು ದೂರು ನೀಡುವುದಾಗಿ ತಿಳಿಸಿದ್ದರ ಬಗ್ಗೆ ನನಗೆ ಮಿಥುನ್ ಈತನು ತಿಳಿಸಿರುತ್ತಾನೆ. ಹೀಗಿದ್ದು ನನ್ನ ತಂದೆ ಬಾಬು ನಾಯಕ ಇವರಿಗೆ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು, ಈ ಘಟನೆಯ ಬಗ್ಗೆ ಇಂದು ತಡವಾಗಿ ದಿನಾಂಕ 08/06/2022 ರಂದು ಬೆಳಿಗ್ಗೆ ಠಾಣೆಗೆ ಖುದ್ದಾಗಿ ಹಾಜರಾಗಿದ್ದು, ನಿನ್ನೆ ದಿನಾಂಕ 07/06/2022 ರಂದು ರಾತ್ರಿ 10-30 ಪಿ.ಎಂ.ಕ್ಕೆ ಯಾದಗಿರಿ ನಗರದ ಲಾಲ್ ಬಹೂದ್ದರ್ ಶಾಸ್ತ್ರಿ ವೃತ್ತದ ಹತ್ತಿರ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ನನ್ನ ತಂದೆ ಬಾಬು ನಾಯಕ ಇವರಿಗೆ ಬೂದಿ ಲಾರಿ ಟ್ಯಾಂಕರ್ ನಂಬರ ಕೆಎ-32, ಡಿ-6201 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಮಾಡಿ ನಂತರ ಘಟನಾ ಸ್ಥಳದಿಂದ ವಾಹನ ಸಮೇತ ಓಡಿ ಹೋಗಿದ್ದು, ಅಪಘಾತಪಡಿಸಿದ ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಅವರ ಮೇಲೆ ಈ ಕೂಡಲೇ ಕಾನೂನಿನ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಪಿಯರ್ಾದಿಯ ಅಜರ್ಿಯ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 31/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 68/2022 ಕಲಂ 279, 338, 304(ಎ) ಐಪಿಸಿ : ಇಂದು ದಿನಾಂಕ 08.06.2022 ರಂದು ಮಧ್ಯಾಹ್ನ 3 ಗಂಟೆಗೆ ತಾಯಪ್ಪ ತಂದೆ ಭೀಮರಾಯ ಗಿರೆಪ್ಪನೋರ, ವ|| 30 ವರ್ಷ, ಜಾ|| ಕುರುಬರು, ಉ|| ಒಕ್ಕಲುತನ, ಸಾ|| ತುರಕನದೊಡ್ಡಿ ಗ್ರಾಮ, ತಾ|| ಗುರುಮಠಕಲ್ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದರು. ದೂರಿನ ಸಾರಾಂಶವೇನೆಂದರೆ, ನನ್ನಅಜ್ಜಿ ಸಿದ್ದಮ್ಮ ಗಂಡ ಬೋಜಪ್ಪ ಗಿರೆಪ್ಪನೋರ ಮತ್ತು ನಮ್ಮ ಸಂಬಂಧಿ ಹಣಮಂತ್ರಾಯ ತಂದೆ ಆಶಣ್ಣ ಕೋತಿ ಇವರಿಬ್ಬರಿಗೆ ದಿನಾಂಕ 03.06.2022 ರಂದು ರಾಯಚೂರು ಒಪೆಕ್ ಆಸ್ಪತ್ರೆಯಲ್ಲಿ ಕಣ್ಣಿನ ಆಪರೇಷನ್ ಮಾಡಿಸಿದ್ದೆವು. ಇಂದು ಒಪೆಕ್ ಆಸ್ಪತ್ರೆಯ ಡಾಕ್ಟರ್ ರವರು ಚೆಕಪ್ ಸಂಬಂಧ ಬರಲು ತಿಳಿಸಿದ್ದರಿಂದ ನಮ್ಮೂರಿನ ಅಲ್ಲಿಸಾಬ ತಂದೆ ಖತಲಸಾಬ ಒಂಟ್ರಿ ಈತನ ಆಟೋ ವಾಹನ ನೊಂದಣೆ ಸಂಖ್ಯೆ ಎ.ಪಿ-28-ಟಿ.ಬಿ-7424 ವಾಹನದಲ್ಲಿ ನನ್ನಅಜ್ಜಿ ಸಿದ್ದಮ್ಮ ಗಂಡ ಬೋಜಪ್ಪ ಗಿರೆಪ್ಪನೋರ, ವ|| 75 ವರ್ಷ ಮತ್ತು ನನ್ನತಾಯಿ ಅನಂತಮ್ಮ ಗಂಡ ಭೀಮರಾಯ ವ|| 50 ವರ್ಷ, ನನ್ನ ಚಿಕ್ಕಪ್ಪ ಹಳ್ಳೆಪ್ಪ ತಂದೆ ಬೋಜಪ್ಪ ವ|| 49 ವರ್ಷ ಹಾಗೂ ನಮ್ಮ ಸಂಬಂಧಿ ಹಣಮಂತ್ರಾಯ ತಂದೆ ಆಶಣ್ಣ ಕೋತಿ, ವ|| 55 ವರ್ಷ 4 ಜನರು ಕೂಡಿ ಒಪೆಕ್ ಆಸ್ಪತ್ರೆಗೆ ಹೋಗುತ್ತೇವೆಂದು ಇಂದು ಬೆಳಿಗ್ಗೆ ಆಟೋದಲ್ಲಿ ಹೋಗಿದ್ದರು. ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನನ್ನ ಚಿಕ್ಕಪ್ಪ ಹಳ್ಳೆಪ್ಪ ನನಗೆ ಫೋನ್ಮಾಡಿ ತಿಳಿಸಿದ್ದೇನೆಂದರೆ, ವಂಕಸಂಬ್ರ-ಬದ್ದೇಪಲ್ಲಿ ಮಧ್ಯ ರಸ್ತೆಯ ಮೇಲೆ ಆಟೋಚಾಲಕ ವೇಗವಾಗಿ ಆಟೋವನ್ನು ಓಡಿಸಿಕೊಂಡು ಹೋಗಿ ಆಟೋ ನಿಯಂತ್ರಿಸದೆ ವಂಕಸಂಬ್ರ ಗ್ರಾಮ ಸೀಮಾಂತರದಲ್ಲಿ ಕೋಮ್ಟಿಗಾರ ಬಾವಿ ಹತ್ತಿರ ರಸ್ತೆಯ ಮೇಲೆ ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಆಟೋ ಪಲ್ಟಿಮಾಡಿದ್ದಾನೆ ನಮಗೆಲ್ಲರಿಗೆ ಪೆಟ್ಟುಗಳಾಗಿವೆ ಅಂತಾ ತಿಳಿಸಿದ್ದ. ಕೂಡಲೇ ನಾನು ಮತ್ತು ನನ್ನತಮ್ಮ ಹಾಗೂ ಇನ್ನಿತರು ಕೂಡಿ ಎಕ್ಸಿಡೆಂಟಾದ ಸ್ಥಳಕ್ಕೆ ಹೋಗಿದ್ದೆವು. ನನ್ನಅಜ್ಜಿ ಸಿದ್ದಮ್ಮಳಿಗೆ ತೆಲೆಗೆ ಮತ್ತು ನನ್ನತಾಯಿ ಅನಂತಮ್ಮಳಿಗೆ ತೆಲೆಗೆ ಮತ್ತು ಕೈ ಕಾಲುಗಳಿಗೆ, ನನ್ನ ಚಿಕ್ಕಪ್ಪ ಹಳ್ಳೆಪ್ಪನಿಗೆ ತೆಲೆಗೆ, ಕೈ ಕಾಲುಗಳಿಗೆ ಹಾಗೂ ನಮ್ಮ ಸಂಬಂಧಿ ಹಣಮಂತ್ರಾಯನಿಗೆ ಕೈಗಳಿಗೆ ಭಾರಿ ಪೆಟ್ಟುಗಳಾಗಿದ್ದವು. ನಾವು 108 ಅಂಬುಲೆನ್ಸ್ ವಾಹನಕ್ಕೆ ಫೋನ್ ಮಾಡಿದ್ದರಿಂದ ಕೆಲ ಸಮಯದ ನಂತರ ಸ್ಥಳಕ್ಕೆ 108 ಅಂಬುಲೆನ್ಸ್ ಬಂದ ನಂತರ ಗಾಯಗೊಂಡವರೆಲ್ಲರಿಗೆ ಅಂಬುಲೆನ್ಸ್ನಲ್ಲಿ ಹಾಕಿ ರಾಯಚೂರು ಆಸ್ಪತ್ರೆಗೆ ಕಳಿಸಿದ್ದೆವು. ನನ್ನಅಜ್ಜಿ ಸಿದ್ದಮ್ಮ ರಾಯಚೂರು ಶರಣಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತ ಇಂದು ದಿನಾಂಕ 08.06.2022 ರಂದು ಬೆಳಿಗ್ಗೆ 10.35 ಗಂಟೆ ಸುಮಾರಿಗೆ ಮೃತಪಟ್ಟಿರುವ ವಿಷಯ ನನ್ನತಮ್ಮ ಯಲ್ಲಪ್ಪ ನನಗೆ ಫೋನ್ಮಾಡಿ ತಿಳಿಸಿದ್ದಾನೆ. ನಮ್ಮೂರಿನ ಅಲ್ಲಿಸಾಬ ತಂದೆ ಖತಲಸಾಬ ಈತನು ತನ್ನ ಆಟೋ ವಾಹನ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ವಾಹನ ನಿಯಂತ್ರಿಸದೆ ಪಲ್ಟಿಮಾಡಿದ್ದರಿಂದ ಆಟೋದಲ್ಲಿದ್ದ ನಮ್ಮವರಿಗೆಲ್ಲ ಪೆಟ್ಟುಗಳಾಗಿದ್ದಲ್ಲದೆ ಗಾಯಗಳ ನೋವನುಭವಿಸಿ ನನ್ನಅಜ್ಜಿ ಸಿದ್ದಮ್ಮ ಮೃತಪಟ್ಟಿರುತ್ತಾಳೆ. ಕಾರಣ ಆಟೋ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ. ಅಂತಾ ಆಪಾದನೆ.

 

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 86/2022 ಕಲಂ: 3& 7 ಇಅ ಂಅಖಿ 1955 : ಇಂದು ದಿನಾಂಕ:08/06/2022 ರಂದು 6 ಪಿ.ಎಂ ಕ್ಕೆ ಶ್ರೀಮತಿ ಗುರುದೇವಿ ಗಂಡ ವಿಶ್ವನಾಥ ಹಿರೇಮಠ ವ|| 38 ವರ್ಷ ಜಾ|| ಜಂಗಮ ಉ|| ಹಿರಿಯ ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರಾಜನಕೋಳುರ ವಲಯ ಸಾ|| ಜೋಗುಂಡಬಾವಿ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆೆಂದರೆ, ದಿನಾಂಕ 08/06/2022 ರಂದು 1.30 ಪಿಎಮ್ ಸುಮಾರಿಗೆ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿಗಳಾದ ಶ್ರೀ ಲಾಲಸಾಬ ಪೀರಾಪುರ ರವರು ಫೋನ್ ಮಾಡಿ ನರಸಿಂಗಪೇಠದ ಹತ್ತಿರ ಜಯ ಕನರ್ಾಟಕ ಸಂಘಟನೆಯ ತಾಲೂಕಾ ಪ್ರಧಾನ ಕಾರ್ಯದಶರ್ಿಯಾದ ಯಲ್ಲಪ್ಪ ನಾಯಕ ಇವರು ನರಸಿಂಗಪೇಠದ ಹತ್ತಿರ ಅಶೋಕ ಲೇಲ್ಯಾಂಡ್ ಪಿಕಪ್ ಗೂಡ್ಸ್ ವಾಹನ ನಂ ಕೆಎ 33 ಬಿ 2674 ನೇದ್ದರಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸಪ್ಲೈ ಮಾಡುವ ಪುಷ್ಠಿ ನ್ಯೂಟ್ರಿಮಿಕ್ಸ್ ಪೌಡರನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಹೋಗುತ್ತಿದ್ದಾಗ ತಡೆದು ನಿಲ್ಲಿಸಿದ್ದು, ನೀವು ಸ್ಥಳಕ್ಕೆ ಹೋಗಿರಿ ಅಂತ ತಿಳಿಸಿದಾಗ ನಾನು, ನಮ್ಮ ಸಿಬ್ಬಂದಿಯವರಾದ ಶ್ರೀ ಮಹ್ಮದ ತಂದೆ ಅಬ್ದುಲ ಎಸ್ಡಿಎ ಇವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿದ್ದು, ಆಗ ಸಮಯ 2.30 ಪಿಎಮ್ ಆಗಿತ್ತು. ಅಲ್ಲಿ ಯಲ್ಲಪ್ಪ ನಾಯಕ ಹಾಗೂ ಮಲ್ಲು ನಾಯಕ ತಂದೆ ರಾಚಪ್ಪ ಸಾ|| ಕಬಾಡಗೇರಾ ಅವರು ಇದ್ದು ಹಾಗೂ ಅಶೋಕ ಲೇಲ್ಯಾಂಡ್ ಪಿಕಪ್ ಗೂಡ್ಸ್ ವಾಹನ ನಂ ಕೆಎ 33 ಬಿ 2674 ವಾಹನ ನಿಂತಿದ್ದು ಅದರಲ್ಲಿ ಪುಷ್ಠಿ ನ್ಯೂಟ್ರಿಮಿಕ್ಸ್ ಪಾಕೆಟ್ಗಳು ಇದ್ದವು. ಅವು ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡುವ ಪೌಡರ ಪಾಕೀಟಗಳು ಆಗಿರುತ್ತವೆ. ಆಗ ನಾವೆಲ್ಲರೂ ವಾಹನದ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಶಿವಕುಮಾರ ತಂದೆ ಬಸಲಿಂಗಯ್ಯ ಹಿರೇಮಠ ವಯಾ|| 35 ಜಾ|| ಜಂಗಮ ಉ||ಚಾಲಕ ಸಾ|| ಬನ್ನೆಟ್ಟಿ ತಾ|| ಹುಣಸಗಿ ಅಂತ ತಿಳಿಸಿದನು. ಸದರಿಯವನಿಗೆ ಪೌಡರ್ಗಳ ಬಗ್ಗೆ ವಿಚಾರಣೆ ಮಾಡಲಾಗಿ ಖುದ್ದುಸ್ ಖುರೇಷಿ ಸಾ|| ತಿಮ್ಮಾಪುರ ಇವರು ಹೇಳಿದಂತೆ ತಿಮ್ಮಾಪುರದ ಮಹಿಬೂಬ ನಗರದಲ್ಲಿರುವ ಒಂದು ರೂಮಿನಿಂದ ಸದರಿ ಪೌಡರ್ ಪಾಕೇಟ್ಗಳನ್ನು ನನ್ನ ವಾಹನದಲ್ಲಿ ಹಾಕಿಕೊಂಡು ಕನ್ನಳ್ಳಿಗೆ ಮಾರಾಟ ಮಾಡಲು ಹೊಗುತ್ತಿದ್ದೇನೆ ಅಂತ ಹೇಳಿದನು. ನಂತರ ನಾವು ಪೀಕಪ್ ವಾಹನದಲ್ಲಿದ್ದ ಪುಷ್ಠಿ ಪೌಡರ ಪಾಕೀಟಗಳನ್ನು ನೋಡಲಾಗಿ ಅವುಗಳ ಮೇಲೆ ಕನರ್ಾಟಕ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಯಾದಗಿರಿ ಜಿಲ್ಲಾ ಪುಷ್ಠಿ ಶಕ್ತಿಯುತ ಪೂರಕ ಪೌಷ್ಠಿಕ ಆಹಾರ ಬಹುಧಾನ್ಯ ನ್ಯೂಟ್ರಿ ಮಿಕ್ಸ್ ಅಂತ ಬರೆದಿರುತ್ತದೆ. ವಾಹನದಲ್ಲಿ ಪೌಡರ ಇರುವ ಪಾಕೀಟಗಳು ತುಂಬಿರುವ ಒಟ್ಟು 21 ಚೀಲಗಳು ಇದ್ದು, ಒಂದು ಚಿಲದಲ್ಲಿ 1 ಕೆ.ಜಿಯ 50 ಪಾಕೇಟ್ ಇರುತ್ತವೆ. ಪ್ರತಿ ಕೆ.ಜಿ ಪೌಡರ ಪಾಕೇಟ್ಗೆ ಅಂದಾಜು ಕಿಮ್ಮತ್ತು 48=00 ರೂ. ಒಟ್ಟು ಅ.ಕಿ 50,400=00 ರೂ.ಗಳು ಆಗುತ್ತದೆ. ನಂತರ ಪೌಡರ ಪ್ಯಾಕೇಟ್ ಚೀಲಗಳ ಸಮೇತ ವಾಹನವನ್ನು ಠಾಣೆಗೆ ತಂದಿರುತ್ತೇವೆ. ಕಾರಣ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಸಲುವಾಗಿ ವಿತರಣೆ ಮಾಡಬೇಕಾಗಿದ್ದ ಪುಷ್ಠಿ ಪೌಡರ ಪಾಕೀಟಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ವಾಹನದಲ್ಲಿ ಹಾಕಿಕೊಂಡು ಹೋಗುತ್ತಿರುವ ಚಾಲಕ ಶಿವಕುಮಾರ ತಂದೆ ಬಸಲಿಂಗಯ್ಯ ಹಿರೇಮಠ ಹಾಗೂ ಖುದ್ದುಸ್ ಖುರೇಷಿ ಸಾ|| ತಿಮ್ಮಾಪುರ ಇವರುಗಳ ಮೇಲೆ ಕಾನೂನು ಕ್ರಮ ಜರಗಿಸಲು ವಿನಂತಿ ಅಂತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 86/2022 ಕಲಂ: 3 & 7 ಇಅ ಂಅಖಿ 1955 ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 53/2022 ಕಲಂ 324, 504, 506 ಐ.ಪಿ.ಸಿ. : ದಿನಾಂಕ:08/06/2022 ರಂದು ಭೀ.ಗುಡಿಯ ಬಲಭೀಮೇಶ್ವರಕಲ್ಯಾಣ ಮಂಟಪದಲ್ಲಿ ಫಿಯರ್ಾದಿಯಅತ್ತೆ ಶಿವಲಿಂಗಮ್ಮ ಇವಳ ಹಿರಿ ಮಗನ ಮದುವೆಇದ್ದುದರಿಂದ ಫಿಯರ್ಾದಿ ಮತ್ತು ಅವನ ಅಳಿಯನಾದ ಪರಶುರಾಮಇಬ್ಬರೂಕೂಡಿ ಮದುವೆಗೆ ಬಂದಿದ್ದುಇಂದು ಮದ್ಯಾಹ್ನ 3.30 ಗಂಟೆ ಸುಮಾರಿಗೆ ಪರಶುರಾಮಈತನುತನ್ನಅತ್ತೆ ಶಿವಲಿಂಗಮ್ಮ ಇವರ ಬಳಿ ಹೋಗಿ ತನ್ನ ಹೆಂಡತಿಗೆಯಾವಾಗ ಕಳಿಸಿಕೊಡುತ್ತೀರಿ ಅಂತಾ ಕೇಳಲು ಹೋದಾಗ ಶಿವಲಿಂಗಮ್ಮ ಇವಳು ಪರಶುರಾಮಈತನೊಂದಿಗೆ ಬಾಯಿ ಮಾತಿನ ಜಗಳ ಮಾಡುತ್ತಿರುವಾಗ ಆಗ ಫಿಯರ್ಾದಿ ಅವರ ಬಳಿ ಹೋಗಿ ರೂಪಾ ಇವಳಿಗೆ ಗಂಡನ ಮನೆಗೆ ಕಳಿಸಿಕೊಡಬೇಕಿಲ್ಲ ಎಷ್ಟು ದಿನ ಅಂತಾ ನಿಮ್ಮ ಮನೆಯಲ್ಲೇ ಇಟ್ಟುಕೊಳ್ಳುತ್ತೀರಿ ಅಂತಾ ಕೇಳಿದ್ದಕ್ಕೆ, ಶಿವಲಿಂಗಮ್ಮ ಇವಳ ಮಗನಾದಆರೋಪಿ ರಾಮುಈತನು ಫಿಯರ್ಾದಿಗೆಅವಾಚ್ಯ ಶಬ್ದಗಳಿಂದ ಬೈದುಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.

 

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 21/2022 ಕಲಂ 323, 498(ಎ), 504 ಐಪಿಸಿ : ಇಂದು ದಿನಾಂಕ: 08/06/2022 ರಂದು 6:00 ಪಿ.ಎಂ ಕ್ಕೆ ಶ್ರೀಮತಿ ಶೀಲಾಬಾಯಿ ಗಂಡ ವೆಂಕಟೇಶ ಜಾದವ ವ:23 ವರ್ಷ ಉ:ಮನೆ ಕೆಲಸ ಜಾ:ಹಿಂದು ಲಮಾಣಿ ಸಾ:ಬ್ಯಾಲದಗಿಡದ ತಾಂಡಾ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪುಮಾಡಿಸಿಕೊಂಡು ಬಂದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ತವರು ಮನೆ ರಾಜವಾಳ ತಾಂಡಾ ಇದ್ದು ನನಗೆ ಈಗ ಸುಮಾರು 5 ವರ್ಷಗಳ ಹಿಂದೆ ಬ್ಯಾಲದಗಿಡ ತಾಂಡಾದ ವೆಂಕಟೇಶ ತಂದೆ ತಿರುಪತಿ ಜಾದವ ಈತನೊಂದಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ಗಂಡನು ಮದುವೆಯಾದ ನಂತರ 4 ವರ್ಷಗಳವರೆಗೆ ನನ್ನೊಂದಿಗೆ ಚೆನ್ನಾಗಿ ಇದ್ದನು. ನನಗೆ ಮದುವೆಯಾಗಿ 4 ವರ್ಷಗಳು ಕಳೆದರು ಇನ್ನು ಮಕ್ಕಳಾಗಿರುವದಿಲ್ಲ ಇದರಿಂದ ನನ್ನ ಗಂಡನು ಈಗ ಒಂದು ವರ್ಷಗಳಿಂದ ನನನ್ನು ಸೇರುತ್ತಿಲ್ಲ ನನಗೆ ಹೊಡೆಯುವದು ನೀನು ಗೊಡ್ಡಸೂಳಿ ನಿನಗೆ ಮಕ್ಕಳಾಗುವದಿಲ್ಲ ಅಂತಾ ನನಗೆ ಅವಾಚ್ಯವಾಗಿ ಬೈಯುತ್ತಿದ್ದನು ಆಗ ನಾನು ಈ ವಿಷಯವನ್ನು ನನ್ನ ತಂದೆ ಜೈರಾಮ ರಾಠೋಡ, ನನ್ನ ತಾಯಿ ತಾರಾಬಾಯಿ ರಾಠೊಡ ರವರ ಮುಂದೆ ಹೇಳಿದ್ದು ಅವರು ಇಲ್ಲಮ್ಮ ಅದನ್ನೆಲ್ಲ ನೀನು ಮನಸ್ಸಿಗೆ ಹಚ್ಚಿಕೊಬ್ಯಾಡ ಇಂದಲ್ಲ ನಾಳೆ ನಿನ್ನ ಗಂಡನಿಗೆ ಬುದ್ದಿ ಬರುತ್ತದೆ ನೀನು ಅವನೊಂದಿಗೆ ಹೊಂದಿಕೊಂಡು ಸಂಸಾರ ಮಾಡಿಕೊಂಡು ಹೋಗು ಅಂತಾ ಅಂದು ನನಗೆ ಬುದ್ದಿವಾದ ಹೇಳಿ ಕಳುಹಿಸಿದ್ದರು. ನಾನು ನನ್ನ ತಂದೆ ತಾಯಿ ಮಾತು ಕೇಳಿ ನನ್ನ ಗಂಡನ ಮನೆಗೆ ಹೋದೆನು ನನ್ನ ಗಂಡನು ಮತ್ತೆ ನನಗೆ ಗೊಡ್ಡಸೂಳಿ ಮತ್ತೆ ಯಾಕೆ ನೀನು ಬಂದಿರಿವೆ ನಿನ್ನ ತವರು ಮನೆಗೆ ಹೋಗಿದ್ದಿಯಲ್ಲ ಇಲ್ಲಿಗೆ ಯಾಕೆ ಬಂದಿರುವಿ ಅಂತಾ ನನಗೆ ಹೊಡೆಬಡೆಮಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ಮಾಡುತ್ತಿದ್ದನು, ಆಗ ನಾನು ಮತ್ತೆ ನನ್ನ ತವರು ಮನೆಗೆ ಹೊಗಿ ನನ್ನ ತಂದೆ ತಾಯಿಗೆ ಈವಿಷಯವನ್ನು ಹೇಳಿದೇನು, ಆಗ ನನ್ನ ತಂದೆ ನಮ್ಮ ತಾಂಡಾದ ಲಕ್ಷ್ಮಣ್ಣ ನಾಯಕ ರವರನ್ನು ಕರೆದುಕೊಂಡು ಬ್ಯಾಲದಗಿಡದ ತಾಂಡಾಕ್ಕೆ ಬಂದು ಬ್ಯಾಲದಗಿಡದ ತಾಂಡಾದ ಲಕ್ಷ್ಮಣ್ಣ ತಂದೆ ಗೋಪಿಲಾಲ ನಾಯಕ ಹಾಗೂ ಮಾರನಾಳ ತಾಂಡಾ ಶೇಖರ ಟಿಪಿ, ತಿರುಪತಿ ಹಾಗೂ ನಳಗುಂಡ ತಾಂಡಾದ ಗೋಪಿ ತಂದೆ ಹರಿಸಿಂಗ ರವರರನ್ನು ಕರೆದು ಎಲ್ಲರೂ ಕೂಡಿ ಬ್ಯಾಲದಗಿಡದ ತಾಂಡಾದಲ್ಲಿ ನ್ಯಾಯಪಂಚಾಯಿತಿ ಮಾಡಿದ್ದು ಆಗ ನನ್ನ ಗಂಡನು ನನ್ನೊಂದಿಗೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಅವರೆಲ್ಲರೆದರು ಒಪ್ಪಿಕೊಂಡು ನನ್ನನ್ನು ಮನೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ. ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ಸ್ವಲ್ದ ದಿನ ಚೆನ್ನಾಗಿ ನೋಡಿಕೊಂಡು ಮತ್ತೆ ನನಗೆ ನೀನು ಗೊಡ್ಡಸೂಳಿ ಅಂತಾ ಬೈಯುವದು ಮತ್ತು ಚುಚ್ಚು ಮಾತುಗಳಿಂದ ಮಾತನಾಡುವದು ಮಾಡುತ್ತಿದ್ದರಿಂದ ನಾನು ನನ್ನ ತವರು ಮನೆಗೆ ಹೋಗಿದ್ದೇನು. ನಿನ್ನೆ ದಿನಾಂಕ 07/06/2022 ರಂದು ನನ್ನ ಗಂಡನ ತಂದೆ ಮರಣ ಹೊಂದಿದ್ದು ಅದಕ್ಕೆ ನಾನು ಮತ್ತು ನಮ್ಮ ತಂದೆ ಹಾಗೂ ನಮ್ಮ ತಾಂಡದವರು ನಮ್ಮ ಮಾವನವರ ಅಂತ್ಯ ಸಂಸ್ಕಾರ ಕುರಿತು ಬಂದಿದ್ದು 5:30 ಪಿ.ಎಂ ಸುಮಾರಿಗೆ ಬ್ಯಾಲದ ಗಿಡದ ತಾಂಡಾದ ನನ್ನ ಗಂಡನ ಮನೆಯ ಮುಂದೆ ಬಂದಾಗ ನನ್ನ ಗಂಡ ವೆಂಕಟೇಶನು ನನ್ನ ಹತ್ತಿರ ಬಂದು ಬೋಸುಡಿ ಸೂಳಿ ಇಲ್ಲಿಗ್ಯಾಕ ಬಂದಿದಿ ನಮಗ ಮಕ್ಕಳಾಗಲಾರದೆ ಸಂಬಂದ ನಮ್ಮ ಅಪ್ಪ ಎದಿಹೊಡಕೊಂಡ ಸತ್ತಾನ ಮತ್ಯಾಕ ಇಲ್ಲಿಗಿ ಬಂದಿದಿ ಅಂತಾ ನನ್ನೊಂದಿಗೆ ಜಗಳ ತಗೆದು ನನಗೆ ಕೈಯಿಂದ ಕಪಾಳಕ್ಕೆ ಹಾಗೂ ಬೆನ್ನಿಗೆ ಹೊಡೆಯತೊಡಗಿದನು ಆಗ ನಾನು ಚೀರಾಡ ಹತ್ತಿದಾಗ ಅಲ್ಲಿಯೇ ಇದ್ದ ಬ್ಯಾಲದ ಗಿಡದ ತಾಂಡಾದ ಗೀತಾ ಜಾದವ, ಸುಮಿಬಾಯಿ ರಾಠೋಡ, ಹಾಗೂ ನೀಲಪ್ಪ ಜಾದವ ಹಾಗೂ ನಮ್ಮ ತಂದೆ ಜೈರಾಮ ಹಾಗೂ ನಮ್ಮ ತಾಯಿ ತಾರಾಬಾಯಿ ರವರು ಬಂದು ಜಗಳ ಬಿಡಿಸಿದ್ದು ಇರುತ್ತದೆ. ನಂತರ ನಾವು ನಿನ್ನೆ ದಿನ ನಮ್ಮ ಮಾವನವರ ಅಂತ್ಯ ಸಂಸ್ಕಾರ ಮಾಡಿ ಇಂದು ತಡವಾಗಿ ಬಂದು ಪಿಯರ್ಾಧಿಕೊಟ್ಟಿದ್ದು ಇರುತ್ತದೆ. ನನಗೆ ಈ ಜಗಳದಲ್ಲಿ ಅಷ್ಟೇನು ಪೆಟ್ಟಾಗಿರುವದಿಲ್ಲ ಆದ್ದರಿಂದ ನಾನು ದವಾಖಾನೆಗೆ ಹೋಗುವದಿಲ್ಲ. ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆಮಾಡಿ ಜೀವ ಬೆದರಿಕೆ ಹಾಕಿದ ನನ್ನ ಗಂಡ ವೆಂಕಟೇಶ ತಂದೆ ತಿರುಪತಿ ಜಾದವ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಪಿಯರ್ಾದಿ ಇರುತ್ತದೆ.ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 21/2022 ಕಲಂ 323, 498(ಎ), 504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 99/2022.ಕಲಂ, 143,147,341,323,504,506ಸಂ,149. ಐ.ಪಿ.ಸಿ. : ಇಂದು ದಿನಾಂಕ 08/06/2022 ರಂದು 20-30 ಗಂಟೆಗೆ ಪಿಯರ್ಾದಿ ಶ್ರೀ ರುಕ್ಮೀಣಿ ಬಾಯಿ ಗಂಡ ನೇಹರು ನಾಯಕ ಚಿನ್ನಾ ರಾಠೋಡ (ತಂದೆ ಹೊನ್ನಪ್ಪ ರಾಠೋಡ) ವ|| 45 ಜಾ|| ಲಂಬಾಣಿ ಉ|| ಒಕ್ಕಲುತನ ಸಾ|| ದಿಗ್ಗಿ ತಾಂಡಾ -9900872132 ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ೀ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ. ನನಗೆ ಸುಮಾರು 25 ವರ್ಷಗಳ ಹಿಂದೆ ದಿಗ್ಗಿ ತಾಂಡಾದ ನೇಹರು ನಾಯಕ ಈತನೊಂದಿಗೆ ಮದುವೆ ಮಾಡಿ ಕೊಟ್ಟಿದು ಇರುತ್ತದೆ. ನನ್ನ ತವರು ಮನೆ ದೋರನಹಳ್ಳಿ ತಾಂಡಾ ಇರುತ್ತದೆ. ನನ್ನ ತಂದೆಗೆ ಇಬ್ಬು ಹೆಂಡತಿಯರು ಇದ್ದು ಮೋದಲನೇಯವಳಾದ ಜನಕಿಬಾಯಿ ಈಕೆಗೆ ಮಕ್ಕಳು ಇರುವುದಿಲ್ಲಾ. ಎರಡನೆ ಹೆಂಡತಿ ವಾಲಿಬಾಯಿ ಈಕೆಗೆ ನಾನು ಒಬ್ಬಳೆ ಮಗಳಿರುತ್ತೇನೆ. ಜನಕಿಬಾಯಿ, ಮತ್ತು ವಾಲಿಬಾಯಿ ಇಬ್ಬರು ನನ್ನ ಹತ್ತಿರ ಇದ್ದು ನಾನೆ ಪಾಲನೆ ಪೋಷಣೆ ಮಾಡುತ್ತಿದ್ದು ಇರುತ್ತದೆ. ನನ್ನ ತಂದೆಗೆ ಹಿರಿಯರ ಆಸ್ತಿಯಲ್ಲಿ 4 ಎಕರೆ 02 ಗುಂಟೆ ಇರುತ್ತದೆ ಸದರಿ ಜಮೀನು ಈಗ ಜನಕಿಬಾಯಿ ಮತ್ತು ವಾಲಿಬಾಯಿ ಇವರ ಹೆಸರಿನಲ್ಲಿ ಇದ್ದು ಸದರಿ ಜಮೀನಿಗೆ ಸಂಬಂದಿಸಿದಂತೆ ಸಾಗುವಳಿ ಮಾಡುವ ಸಲುವಾಗಿ ನಮಗು ಮತ್ತು ನನ್ನ ತವರು ಮನೆಯಾದ ದೋರನಹಳ್ಳಿ ತಾಂಡಾದವರಾದ ದೇಸು ತಂದೆ ಚಂದ್ರಾಮಪ್ಪ ಈತನು ನಮ್ಮೊಂದಿಗೆ ತಕರಾರು ಮಾಡುತ್ತ ಸದರಿ ಜಮೀನು ನಮ್ಮದಿರುತ್ತದೆ ನಾವು ಸಾಗುವಳಿ ಮಾಡುತ್ತೇವೆ ಅಂತ ಆಗಾಗ ನಮ್ಮೊಂದಿಗೆ ತಕರಾರು ಮಾಡುತ್ತ ಬಂದಿದ್ದು ಇರುತ್ತದೆ. ನಾವು ಹೋಗಲಿ ಅಂತ ಸುಮ್ಮನಾಗಿದ್ದೆವು.
ಹೀಗಿದ್ದು ದಿನಾಂಕ 07/06/2022 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡನಾದ ನೆಹರು ನಾಯಕ ತಂದೆ ಸಕ್ರು ನಾಯಕ, ನನ್ನ ಸಂಬಂದಿಕನಾದ ಹಣಮಂತ ತಂದೆ ಪದ್ಮಾನಾಯಕ ರಾಠೋಡ ಸಾ|| ಸೈದಾಪೂರ ತಾಂಡಾ, ನನಗೆ ಪರಿಚಯದವನಾದ ಭೀಮರಾಯ ತಂದೆ ಹಣಮಂತ ನಾಯ್ಕೋಡಿ ಸಾ|| ಬನಶೇಂಕರಿ ಗುಡಿ ಹತ್ತಿರ ಗುತ್ತಿಪೇಠ ಶಹಾಪೂರ, ನನ್ನ ಟ್ರ್ಯಾಕ್ಟರ್ ಚಾಲಕನಾದ ಸುನೀಲ್ ತಂದೆ ಹಣಮಂತ ರಾಠೋಡ ಸಾ|| ಸೈದಾಪೂರ ತಾಂಡಾ ನಾವೆಲ್ಲರು ನನ್ನ ತವರು ಮನಿಯ ನನ್ನ ತಾಯಿಯ (ಹಿರಿಯರ) ಹೋಲಕ್ಕೆ ಹೋಗಿ ನಮ್ಮ ಟ್ರ್ಯಾಕ್ಟರದಲ್ಲಿ ನೇಗಿಲು ಹೋಡೆಯುತ್ತಿದಾಗ 10-30 ಗಂಟೆಯ ಸುಮಾರಿಗೆ ದೋರನಹಳ್ಳಿ ತಾಂಡದವರಾದ 1] ದೇಸು ತಂದೆ ಚಂದ್ರಾಮಪ್ಪ ಚವ್ಹಾಣ 2] ಮಾನಪ್ಪ ತಂದೆ ಚಂದಾಮಪ್ಪ ಚವ್ಹಣ 3] ರಾಮು ತಂದೆ ಗೇಮು ರಾಠೋಡ 4] ಉಮಾಕಾಂತ ತಂದೆ ಶಂಕರ ರಾಠೋಡ 5] ಮಹಾಂತೇಶ ತಂದೆ ಶಂಕರ ರಾಠೋಡ 6] ರೇವು ತಂದೆ ಡಾಕ್ಯಾ ಜಾದವ 7] ಅರುಣ ತಂದೆ ಕೀರು ಜಾದವ 8] ವಿಕಾಸ ತಂದೆ ಲಕ್ಷ್ಮಣ್ಣ ಜಾದವ 9] ಅನೀಲ್ ತಂದೆ ದೇಸು ಚವ್ಹಾಣ 10] ಕೀರು ತಂದೆ ಡಾಕ್ಯಾ ಜಾದವ 11] ಹೀರಾಸಿಂಗ ತಂದೆ ಪುನ್ಯಾ ಜಾದವ 12] ನೂರುಸಿಂಗ್ ತಂದೆ ದೇವುಲು ಜಾದವ 13] ಶಾಂತಿ ಗಂಡ ದೇಸು ಚವ್ಹಾಣ 14] ವಾಲಿಬಾಯಿ ಗಂಡ ಲಕ್ಷ್ಮಣ್ಣ ಜಾದವ 15] ಶಾಂತಿಬಾಯಿ ಗಂಡ ಕೀರು ಜಾದವ ಇವರೆಲ್ಲರು ಕೂಡಿಕೊಂಡು ನಮ್ಮ ಹೋಲಕ್ಕೆ ಬಂದವರೆ ಲೇ ನೆಹರು ಸೂಳಿ ಮಗನೆ ಇದು ನಮ್ಮ ಹೋಲ ಇರುತ್ತದೆ ನೀವು ಏಕೆ ಸಾಗುವಳಿ ಮಾಡುತ್ತಿರಿ ಅಂತ ಅಂದಾಗ. ನಾನು ಇದು ನಮ್ಮ ಹೋಲ ಇರುತ್ತದೆ. ನಿವು ಯಾರು ಕೆಳುವರು ಇದು ನಮ್ಮ ತಂದೆಯ ಹೋಲ ಇರುತ್ತದೆ. ಅಂದಾಗ ಇವರೆಲ್ಲರು ಇದು ನಮ್ಮ ಹೋಲ ಆದ ನಾವು ಸಾಗುವಳಿ ಮಾತ್ತ ಬಂದಿರುತ್ತೆವೆ ಸೂಳಿ ಅಂತ ಅವಾಚ್ಯ ಶಬ್ದಗಳಿಂದ ಬೈದರು ಆಗ ಶಾಂತಿ ಗಂಡ ದೇಸು ಚವ್ಹಾಣ, ವಾಲಿಬಾಯಿ ಗಂಡ ಲಕ್ಷ್ಮಣ್ಣ ಜಾದವ, ಶಾಂತಿಬಾಯಿ ಗಂಡ ಕೀರು ಜಾದವ ಇವರು ನನಗೆ ಒಡೆಯಲು ಬಂದಾಗ ಅಂಜಿ ಹೋಗುತ್ತಿವಾಗ ನನಗೆ ತಡೆದುನಿಲ್ಲಿಸಿ. ಕೂದಲು ಹಿಡಿದು ಜಗ್ಗಾಡಿದ್ದು ಇರುತ್ತದೆ. ಇವರೆಲ್ಲರು ನಮಗೆ ಹೋಡೆಯಲು ಬಂದಾಗ ಅಲ್ಲೆ ಇದ್ದ ನನ್ನ ಗಂಡನಾದ ನೆಹರು ತಂದೆ ಸಕ್ರು ನಾಯಕ, ಸಂಬಂದಿಕನಾದ ಹಣಮಂತ ತಂದೆ ಪದ್ಮಾನಾಯಕ ರಾಠೋಡ ನನಗೆ ಪರಿಚಯದವನಾದ ಭೀಮರಾಯ ತಂದೆ ಹಣಮಂತ ನಾಯ್ಕೋಡಿ, ಸುನೀಲ್ ತಂದೆ ಹಣಮಂತ ರಾಠೋಡ ಸಾ|| ಸೈದಾಪೂರ ತಾಂಡಾ ಇವರು ಸದರಿ ಜಗಳವನ್ನು ನೋಡಿ ಬಿಡಿಸಿಕೊಂಡರು ಆಗ ಈ ಮೇಲಿನ 15 ಜನರು ಇವತ್ತು ಉಳುದುಕೊಂಡಿರಿ ಮಕ್ಕಳೆ ಇಲ್ಲಾ ಅಂದರೆ ನಿಮ್ಮ ಜೀವ ಸಹಿತ ಬಿಡುತ್ತಿರಲಿಲ್ಲಾ ಅಂತ ಜೀವದ ಭಯಹಾಕಿದ್ದು ಇರುತ್ತದೆ. ಸದರಿ ಜಗಳವು ದೋರನಹಳ್ಳಿ ಸಿಮಾಂತರದ ನಮ್ಮ ಹೋಲದಲ್ಲಿ ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಜರುಗಿರುತ್ತದೆ. ನನಗೆ ಯಾವುದೆ ಗಾಯವಾಗದೆ ಇದ್ದುದ್ದರಿಂದ ಉಪಚಾರ ಮಾಡಿಸಿಕೊಂಡಿರುದಿಲ್ಲಾ ಉಪಚಾರದ ಅವಶ್ಯತೆ ಇರುವುದಿಲ್ಲಾ. ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ.
ಕಾರಣ ನನಗೆ ಮತ್ತು ನನ್ನ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈದು. ನನಗೆ ತಡೆದು ನಿಲ್ಲಿಸಿ ಕೂದಲು ಹಿಡಿದು ಜಗ್ಗಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ನಿಡಿದ್ದು ಇರುತ್ತದೆ, ಸದರಿ ದೂರಿನ ಸಾರಾಂಶದ ಮೆಲಿಂದ ಠಾಣೆಯ ಗುನ್ನೆ ನಂ 99/2022 ಕಲಂ 143,147,341,323,504,506,ಸಂ,149 ಐ,ಪಿ,ಸಿ, ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಗೆ ಕೈಕೊಂಡೆನು.

 


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 48/2022 ಕಲಂ:279, 283, 304(ಎ) ಐಪಿಸಿ : ದಿನಾಂಕ:08.06.2022 ರಂದು ರಾತ್ರಿ 9:15 ಗಂಟೆಗೆ ಆರೋಪಿ ನಂ:1 ನೇದ್ದವನು ತನ್ನ ಟ್ರ್ಯಾಕ್ಟರ ನಂ:ಕೆಎ-33 ಟಿ-7449 & ಟ್ರ್ಯಾಲಿ ಚಸ್ಸಿ ನಂ:626/14 ನೇದ್ದನ್ನು ಕಲ್ಲದೇವನಹಳ್ಳಿ ಗ್ರಾಮದ ಬಸ್ ನಿಲ್ದಾಣವನ್ನು ದಾಟಿ ಬುದ್ದ ನಗರ ಕಲ್ಲದೇವಹಳ್ಳಿ ಅಂತಾ ಬರೆದ ಬೋಡರ್ಿನ ಹತ್ತಿರ ಹುಣಸಗಿ-ದೇವಾಪೂರ ರಸ್ತೆಯ ಮೇಲೆ ಟ್ರ್ಯಾಲಿಯ ಎಡಗಡೆಯ ಗಾಲಿಯು ಪಂಕ್ಚರ ಆಗಿದ್ದರಿಂದ ಕತ್ತಲಲ್ಲಿ ನಿಲ್ಲಿಸಿ ಯಾವುದೇ ಮಿರರ್ ಲೈಟ್ ಹಾಕದೇ & ಸೂಚನಾ ಫಲಕ ಇಡದೇ ಹಾಗೂ ಮಾನವೀಯ ಜೀವಕ್ಕೆ ಅಪಾಯ ಸಂಭವಿಸುವ ಬಗ್ಗೆ ಗೊತ್ತಿದ್ದರೂ ಸಹ ತನ್ನ ಟ್ರ್ಯಾಕ್ಟರ್ & ಟ್ರ್ಯಾಲಿಯನ್ನು ಅದರ ಚಾಲಕನು ನಿಲ್ಲಿಸಿ ಟೈರ್ ಪಂಕ್ಚರ್ ತಿದ್ದಿಸಿಕೊಂಡು ಬರಲು ಹೋಗಿದ್ದರಿಂದ ಆರೋಪಿ ನಂ;2 ನೇದ್ದವನು ತನ್ನ ಮೋಟರ್ ಸೈಕಲ್ ನಂ:ಕೆಎ-33 ಇಬಿ-8098 ನೇದ್ದನ್ನು ಹುಣಸಗಿ ಕಡೆಯಿಂದ ಮೃತ ಮನೋಜ ಈತನಿಗೆ ಹಿಂದೆ ಕೂಡಿಸಿಕೊಂಡು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಮೋಟರ್ ಸೈಕಲನ್ನು ನಡೆಯಿಸಿಕೊಂಡು ಬಂದು ಕತ್ತಲಲ್ಲಿ ನಿಲ್ಲಿಸಿದ ಟ್ರ್ಯಾಕ್ಟರನ್ನು ನಿಲ್ಲಿಸಿದ್ದನ್ನು ನೋಡದೇ ಅದೇ ವೇಗದಲ್ಲಿ ಟ್ರ್ಯಾಕ್ಟರ ಟ್ರ್ಯಾಲಿಯ ಹಿಂಬಾಗಕ್ಕೆ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದ ಆರೋಪಿ ನಂ:2 ನೇದ್ದವನು ತಲೆಗೆ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದು, ಗಾಯಾಳು ಮನೋಜ ಈತನಿಗೆ ತಲೆಗೆ ಭಾರೀ ಒಳಪೆಟ್ಟಾಗಿ ಇಲಾಜು ಹೊಂದುತ್ತಾ ಹುಣಸಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ರಾತ್ರಿ 10:30 ಗಂಟೆಗೆ ಮೃತಪಟ್ಟ ಬಗ್ಗೆ ಅಪರಾಧ.

 

ಇತ್ತೀಚಿನ ನವೀಕರಣ​ : 09-06-2022 10:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080