ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-07-2022
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 91/2022 ಕಲಂ: 504, 324, 323, 506 ಸಂ 34 ಐಪಿಸಿ: ಇಂದು ದಿನಾಂಕ:08/07/2022 ರಂದು 5-45 ಪಿಎಮ್ ಕ್ಕೆ ಶ್ರೀ ರಾಮು ತಂದೆ ಬಾಲು @ ವೆಂಕೋಬ ಚವ್ಹಾಣ, ವ:30, ಜಾ:ಲಮ್ಮಾಣಿ, ಉ:ಕೂಲಿ ಕೆಲಸ ಸಾ:ನಾಯ್ಕಲ್ ತಾಂಡಾ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಹೆಂಡತಿ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನಮ್ಮ ಮನೆ ಬಾಜು ನಮ್ಮ ಕಾಕ ರೆಡ್ಡಿ @ ಲಕ್ಷ್ಮಣ ತಂದೆ ನೀಲಪ್ಪ ಚವ್ಹಾಣ ಈತನು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ಸದರಿ ನಮ್ಮ ಕಾಕ ರೆಡ್ಡಿ @ ಲಕ್ಷ್ಮಣ ಮತ್ತು ಅವನ ಹೆಂಡತಿ ಮಕ್ಕಳು ನಮ್ಮೊಂದಿಗೆ ವಿನಾಕಾರಣ ಸಣ್ಣಪುಟ್ಟ ವಿಷಯಕ್ಕೆ ತಂಟೆ ತಕರಾರು ಮಾಡುತ್ತಾ ಬರುತ್ತಾರೆ. ಹೀಗಿದ್ದು ದಿನಾಂಕ:05/07/2022 ರಂದು ಸಾಯಂಕಾಲವ ನಾನು ನಮ್ಮ ತಾಂಡಾದ ಮುಂದೆ ಇರುವ ಬಿಳು ಹೊಲದಲ್ಲಿ ನಮ್ಮ ದನಗಳನ್ನು ಮೇಯಿಸುತ್ತಿದ್ದಾಗ ನಮ್ಮ ಕಾಕ ರೆಡ್ಡಿ @ ಲಕ್ಷ್ಮಣ ಮತ್ತು ಅವನ ಹೆಂಡತಿ ಮಕ್ಕಳು ಬಂದು ನನ್ನಲ್ಲಿಗೆ ಬಂದು ಇಲ್ಲಿ ಯಾಕೆ ದನಗಳು ಮೇಯಿಸುತ್ತಿ ಎಂದು ನನ್ನೊಂದಿಗೆ ಬಾಯಿ ತಕರಾರು ಮಾಡಿದಾಗ ನಾನು ಅವರಿಗೆ ಅಂಜಿ ಅಲ್ಲಿಂದ ವಾಪಸ ಮನೆಗೆ ಬಂದೆನು. ಮನೆಗೆ ಬಂದ ನಂತರ ರಾತ್ರಿ ನಾನು ಮತ್ತು ನನ್ನ ಹೆಂಡತಿ ಸುಮಿತ್ರಾ ಇಬ್ಬರೂ ಊಟ ಮಾಡಿ ನಮ್ಮ ಮನೆ ಮುಂದೆ ಇದ್ದಾಗ ರಾತ್ರಿ 9 ಗಂಟೆ ಸುಮಾರಿಗೆ 1) ನೀಲೇಶ ತಂದೆ ರೆಡ್ಡಿ @ ಲಕ್ಷ್ಮಣ ಚವ್ಹಾಣ, 2) ರೆಡ್ಡಿ @ ಲಕ್ಷ್ಮಣ ತಂದೆ ನೀಲಪ್ಪ ಚವ್ಹಾಣ, 3) ವಿಶಾಲ ತಂದೆ ರೆಡ್ಡಿ @ ಲಕ್ಷ್ಮಣ ಚವ್ಹಾಣ ಮತ್ತು 4) ಕಾಂತಿಬಾಯಿ ಗಂಡ ರೆಡ್ಡಿ @ ಲಕ್ಷ್ಮಣ ಚವ್ಹಾಣ ಎಲ್ಲರೂ ಸಾ:ನಾಯ್ಕಲ್ ತಾಂಡಾ ಇವರೆಲ್ಲರೂ ಸೇರಿಕೊಂಡು ಬಂದವರೆ ನನಗೆ ಲೇ ಮಗನೆ ರಾಮ್ಯಾ ನೀನು ನಮ್ಮ ಹೊಲದ ಬಾಜು ಇರುವ ಬೀಳು ಹೊಲದಲ್ಲಿ ದನ ಮೇಯಿಸಬೇಡ ಎಂದರು ದನ ಮೇಯಿಸುತ್ತಿ ಮತ್ತು ನಮಗೆ ಎದುರು ಮಾತಾಡುತ್ತಿ ಎಂದು ಜಗಳ ತೆಗೆದವರೆ ನನಗೆ ರೆಡ್ಡಿ @ ಲಕ್ಷ್ಮಣ ಮತ್ತು ವಿಶಾಲ ಇಬ್ಬರೂ ಗಟ್ಟಿಯಾಗಿ ಹಿಡಿದುಕೊಂಡಾಗ ನೀಲೇಶ ಈತನು ಬಂದು ಅಲ್ಲಿಯೇ ಬಿದ್ದ ಚಿಪ್ಪಗಲ್ಲು ತೆಗೆದುಕೊಂಡು ನನ್ನ ಬಲ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ನಾನು ಸತ್ತೆನೆಪ್ಪೊ ಎಂದು ಕೆಳಗೆ ಬಿದ್ದಾಗ ನೀಲೇಶನು ಪುನ: ಅದೇ ಕಲ್ಲಿನಿಂದ ಹೊಡೆಯಲು ಬರುತ್ತಿದ್ದನು. ಇದನ್ನು ನೋಡಿದ ನನ್ನ ಹೆಂಡತಿ ಸುಮಿತ್ರಾ ಇವಳು ಬಿಡಿಸಲು ಬಂದಾಗ ನೀಲೇಶ ಈತನು ಕಲ್ಲಿನಿಂದ ನನಗೆ ಹೊಡೆಯಲು ಬಂದ ಏಟು ಅವಳ ಎಡಗಣ್ಣಿನ ಕೆಳಗೆ ಬಿದ್ದು, ಅವಳಿಗೆ ರಕ್ತಗಾಯವಾಗಿರುತ್ತದೆ. ವಿಶಾಲ ಈತನು ಬಂದು ನನಗೆ ಕಾಲಿನಿಂದ ಪಕ್ಕೆಗಳಿಗೆ ಒದ್ದಿರುತ್ತಾನೆ. ಕಾಂತಿಬಾಯಿ ಇವಳು ನನ್ನ ಹೆಂಡತಿಗೆ ಕೈಯಿಂದ ಕೂದಲು ಹಿಡಿದು ನೆಲಕ್ಕೆ ಬಗ್ಗಿಸಿ, ಬೆನ್ನಿಗೆ ಹೊಡೆದಿರುತ್ತಾಳೆ. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮ ತಾಂಡಾದ 1) ಶಿವಾ ತಂದೆ ರಾಮದಾಸ ಜಾಧವ, 2) ಪರಶುರಾಮ ತಂದೆ ಹೋಬು ಚವ್ಹಾಣ ಮತ್ತು 3) ರವಿ ತಂದೆ ಬದ್ದಪ್ಪ ರಾಠೋಡ ಇವರುಗಳು ಬಂದು ಜಗಳ ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಂದು ಸಲ ನಮ್ಮ ಹೊಲದ ಕಡೆ ದನಗಳು ಬಿಟ್ಟರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಆಗ ನಾವು ಅಲ್ಲಿಂದ ಯಾದಗಿರಿ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆಯಾಗಿದ್ದು, ಅಲ್ಲಿನ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾನು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಠಾಣೆಗೆ ಬಂದು ದೂರು ಕೊಡುತ್ತೇನೆ ಎಂದು ಹೇಳಿರುತ್ತೇನೆ. ನಂತರ ನಮ್ಮ ಹಿರಿಯರಿಗೆ ವಿಚಾರಿಸಿದಾಗ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡು ಎಂದು ಹೇಳಿದ್ದರಿಂದ ಈಗ ನಾನು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ವಿನಾಕಾರಣ ಜಗಳ ತೆಗೆದು ನನಗೆ ಮತ್ತು ನನ್ನ ಹೆಂಡತಿಗೆ ಹೊಡೆಬಡೆ ಮಾಡಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 91/2022 ಕಲಂ: 504, 324, 323, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀ.ಗುಡಿ ಪೊಲೀಸ ಠಾಣೆ :-
ಗುನ್ನೆ ನಂ: 59/2022 ಕಲಂ 279, 337, 338 ಐ.ಪಿ.ಸಿ: ದಿನಾಂಕ: 08/07/2022 ರಂದು11.00 ಎ.ಎಮ್. ಸುಮಾರಿಗೆ ಫಿಯರ್ಾದಿ ಹಾಗೂ ಗಾಯಾಳುಗಳು ಕೂಡಿ ನಾಗನಟಗಿಗ್ರಾಮದಿಂದಆರೋಪಿತನಅಟೋಟಂಟಂ ನಂ:ಕೆಎ-33, ಎ-7633 ನೇದ್ದರಲ್ಲಿ ಕುಳಿತು ಶಹಾಪೂರ ಸಂತೆಗೆ ಹೊರಟಾಗದಿಗ್ಗಿ ಗ್ರಾಮದ ಸಿದ್ದಾರೂಢ ಹೊಸಮನಿ ಇವರ ಮನೆಯ ಹತ್ತಿರ ದಿಗ್ಗಿ-ಭೀ.ಗುಡಿ ರೋಡಿನ ಮೇಲೆ ಆರೋಪಿತನುತನ್ನಅಟೋವನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿದ್ದರಿಂದ ಅಟೋ ಚಾಲಕನ ನಿಯಂತ್ರಣತಪ್ಪಿರಸ್ತೆಯ ಮೇಲೆ ಪಲ್ಟಿಯಾಗಿಅಪಘಾತವಾಗಿದ್ದರಿಂದ ಸದರಿಅಪಘಾತದಲ್ಲಿ ಫಿಯರ್ಾದಿ ಮತ್ತು ಗಾಯಾಳುಗಳಿಗೆ ಭಾರಿ ಮತ್ತು ಸಾದಾರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಕಾರಣ ಸದರಿಆರೋಪಿತನ ವಿರುಧ್ಧ ಕಾನೂನು ಕ್ರಮಜರುಗಿಸಲು ವಿನಂತಿಅಂತಾ ಫಿಯರ್ಾದಿ.
ಶೋರಾಪುರ ಪೊಲೀಸ ಠಾಣೆ :-
ಗುನ್ನೆ ನಂ: 111/2022 ಕಲಂ: 143, 147, 148, 341, 323, 324, 307, 504, 506 ಸಂಗಡ 149 ಐಪಿಸಿ: ಇಂದು ದಿ: 08/07/22 ರಂದು 2.00 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಮಾತರ್ಾಂಡಪ್ಪಗೌಡ ತಂದೆ ಬಾಗಣಗೌಡ ಪೊಲೀಸ್ ಪಾಟೀಲ ಸಾ|| ರತ್ತಾಳ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಮ್ಮೂರಿನಲ್ಲಿ ಶ್ರೀ ದೇವಿ ಜಾತ್ರೆಯು ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುತ್ತಿದ್ದು, ಜಾತ್ರೆ ಸಮಯದಲ್ಲಿ ನಮ್ಮ ಮನೆಯಿಂದ ಕುಂಭ ಮತ್ತು ಕಳಸ ಹೋಗುವ ಚಾಜ ಇರುತ್ತದೆ. ಆದರೆ ಕಳೆದ ಜಾತ್ರೆಯಲ್ಲಿ ಅಂದರೆ 2018 ನೇ ಸಾಲಿನಲ್ಲಿ ಜಾತ್ರೆ ನಡೆಯುವಾಗ ನಮ್ಮೂರಿನ ಯಂಕೋಬ ತಂದೆ ಚಂದ್ರಾಮಪ್ಪ ಗುಡ್ಡಕಾಯಿ ಈತನು ನಮ್ಮೊಂದಿಗೆ ಜಗಳ ತೆಗೆದು ಈ ಜಾತ್ರೆಯಲ್ಲಿ ನಾವು ಗುಡಿಯ ಪೂಜೆ ಮಾಡುವವರಿದ್ದು ಇ ಜಾತ್ರೆಗೆ ಯಾರೂ ಸಂಭಂದ ಇರುವದಿಲ್ಲ ಯಾವ ಚಾಜನು ಬೇಕಾಗಿಲ್ಲ ಅಂತ ತಕರಾರು ಮಾಡಿದ್ದನು. ಅಲ್ಲದೆ ಜಾತ್ರೆ ಸಮಯದಲ್ಲಿ ಸಂಗ್ರಹಿಸಿದ ದೇಣಿಗೆ ಹಣವು ಕೂಡ ಯಂಕೋಬನ ಹತ್ತಿರವೇ ಇದ್ದು, ಈ ಹಣದ ಲೆಕ್ಕ ಊರಿನ ಮುಖಂಡರಿಗೆ ತಿಳಿಸು ಅಂತ ನಾನು ಕೇಳಿದಾಗ ಎಲ್ಲಾ ಹಣ ಜಾತ್ರೆಗೆ ಖಚರ್ಾಗಿದೆ ನನ್ನ ಹತ್ತಿರ ಯಾವುದೇ ಹಣ ಇರುವದಿಲ್ಲ ಅಂತ ಹೇಳಿದ್ದನು. ಆವಾಗಿನಿಂದಲೂ ಯಂಕೋಬ ಈತನು ನಮ್ಮೊಂದಿಗೆ ಹಗೆತನ ಸಾದಿಸುತ್ತಾ ಬಂದಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ: 07/07/2022 ರಂದು ನನ್ನ ಮಗನಾದ ಭೀಮರೆಡ್ಡಿ ಈತನ ಮದುವೆಯು ನಮ್ಮ ಮನೆಯ ಮುಂದೆ ಮಾಡಿದ್ದು, ನಂತರ ಮೆರವಣಿಗೆ ಮೂಲಕ ಮರಿಗೆಮ್ಮ ದೇವಿ ಗುಡಿಗೆ ಹೋಗುವಾಗ ನಮ್ಮೂರ ಈರಪ್ಪ ಗಾಣದುಂಡಿ ಇವರ ಪಾನ್ ಶಾಪ್ ಹತ್ತಿರ ಸಾಯಂಕಾಲ 6.30 ಗಂಟೆ ಸುಮಾರಿಗೆ 1) ಯಂಕೋಬ ತಂದೆ ಚಂದ್ರಾಮಪ್ಪ ಗುಡ್ಡಕಾಯಿ ಮತ್ತು 2) ಯಲ್ಲಪ್ಪ ತಂದೆ ಚಂದ್ರಾಮಪ್ಪ ಗುಡ್ಡಕಾಯಿ ಇಬ್ಬರು ಕೂಡಿ ಯಂಕೋಬನ ಬುಲೆಟ್ ಮೋಟರ ಸೈಕಲ್ ಮೇಲೆ ಬಂದು, ನಾವು ಹೋಗುತ್ತಿದ್ದ ಮೆರವಣಿಗೆಗೆ ತನ್ನ ಮೋಟರ ಸೈಕಲ್ ಅಡ್ಡ ನಿಲ್ಲಿಸಿ ದೇವಿ ಗುಡಿಯ ಬಾಗಿಲು ಹಾಕಿದೆ ನೀವೇಕೆ ಅಲ್ಲಿಗೆ ಹೋಗುತ್ತೀರಿ ಸೂಳೆಮಕ್ಕಳೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ನನ್ನ ಮಗನ ಮದುವೆ ಇದ್ದುದರಿಂದ ದೇವಿ ದರ್ಶನ ಪಡೆದುಕೊಂಡು ಬರುತ್ತೇವೆ ಅಂತ ಅನ್ನುತ್ತಿದ್ದಾಗ ಯಂಕೋಬ ಈತನು ನಮ್ಮ ಮಂದಿಗೆ ಕರೆಸುತ್ತೇನೆ ಹೇಗೆ ನೀವು ಗುಡಿಗೆ ಹೋಗುತ್ತೀರಿ ನಾನು ನೋಡಿಯೇ ಬಿಡುತ್ತೇನೆ ಅಂತ ಅಂದು ಅವರ ಮಂದಿಯ ಜನರಾದ 3) ಪ್ರಕಾಶ ತಂದೆ ಚಂದ್ರಾಮಪ್ಪ ಗುಡ್ಡಕಾಯಿ 4) ಆನಂದ ತಂದೆ ಚಂದ್ರಾಮಪ್ಪ ಗುಡ್ಡಕಾಯಿ 5) ಮಲ್ಲಪ್ಪ ತಂದೆ ಭಾಗಪ್ಪ ಗುಡ್ಡಕಾಯಿ 6) ಅನೀಲ ತಂದೆ ಯಂಕೋಬ ಗುಡ್ಡಕಾಯಿ 7) ಸುನೀಲ ತಂದೆ ಯಂಕೋಬ ಗುಡ್ಡಕಾಯಿ 8) ಕುಪೇಂದ್ರ ತಂದೆ ಯಲ್ಲಪ್ಪ ಗುಡ್ಡಕಾಯಿ 9) ದೇವರಾಜ ತಂದೆ ಯಲ್ಲಪ್ಪ ಗುಡ್ಡಕಾಯಿ 10) ಯಲ್ಲಪ್ಪ ತಂದೆ ಭೀಮಣ್ಣ ಹುರಗಡ್ಡಿ 11) ರಮಾಬಾಯಿ ಗಂಡ ಯಂಕೋಬ ಗುಡ್ಡಕಾಯಿ 12) ಈರಮ್ಮ ಗಂಡ ಪ್ರಕಾಶ ಗುಡ್ಡಕಾಯಿ ಇವರನ್ನು ಕರೆದಿದ್ದು ಎಲ್ಲರು ಗುಂಪುಗೂಡಿ ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಬಂದವರೇ, ಲೇ ಸೂಳೆಮಕ್ಕಳೆ ಊರಾಗ ನಿಮ್ಮ ಸೊಕ್ಕು ಬಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಅವರಲ್ಲಿಯ ಯಂಕೋಬ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ತಮ್ಮನಾದ ಲಕ್ಷ್ಮಣ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ತೊರಡಿಗೆ ಜೋರಾಗಿ ಹೊಡೆಯಲು ಹೋದಾಗ ನನ್ನ ತಮ್ಮ ಲಕ್ಷ್ಮಣ ಈತನು ತಪ್ಪಿಸಿಕೊಂಡಾಗ, ಎಡಗಾಲ ಮೊಳಕಾಲ ಕೆಳಗೆ ಬಡಿದು ರಕ್ತಗಾಯವಾಗಿರುತ್ತದೆ. ಯಲ್ಲಪ್ಪ ಗುಡ್ಡಕಾಯಿ ಈತನು ಲಕ್ಷ್ಮಣನಿಗೆ ಬಡಿಗೆಯಿಂದ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದನು. ಆಗ ಬಿಡಿಸಲು ಹೋದ ಭೀಮಣ್ಣ ತಂದೆ ರಂಗಪ್ಪ ಪೂಜಾರಿ ಈತನಿಗೆ ಪ್ರಕಾಶ ಗುಡ್ಡಕಾಯಿ ಈತನು ಬಡಿಗೆಯಿಂದ ಬಲಗಡೆ ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು ಅಲ್ಲದೆ ಆನಂದ ಈತನು ಬಡಿಗೆಯಿಂದ ಬಲಗೈ ತೋರುಬೆರಳಿಗೆ, ಸೊಂಟಕ್ಕೆ ಹೊಡೆದು ಗುಪ್ತಗಾಯ ಮಾಡಿದನು. ಮಾಳಪ್ಪ ತಂದೆ ಹಣಮಂತ್ರಾಯ ಸಾ|| ಮಂಗಳೂರು ಈತನಿಗೆ ಮಲ್ಲಪ್ಪ ಗುಡ್ಡಕಾಯಿ ಈತನು ಬಡಿಗೆಯಿಂದ ಹೊಡೆೆದು ತಲೆಗೆ ರಕ್ತಗಾಯ, ಸೊಂಟಕ್ಕೆ, ಎಡಭುಜಕ್ಕೆ ಗುಪ್ತಗಾಯ ಮಾಡಿದನು. ಮಾಳಪ್ಪ ತಂದೆ ಗುರಪ್ಪ ಕುಂಬಾರ ಈತನಿಗೆ ಅನೀಲ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಎಡಗಣ್ಣಿನ ಹುಬ್ಬಿನ ಮೇಲೆ ಹೊಡೆದು ರಕ್ತಗಾಯ ಮಾಡಿದ್ದಲ್ಲದೆ, ಸುನೀಲ ಈತನು ಬಡಿಗೆಯಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಶರಣಪ್ಪ ತಂದೆ ಮರೆಪ್ಪಗೌಡ ಈತನಿಗೆ ಕುಪೇಂದ್ರ ಈತನು ಹೊಟ್ಟೆಗೆ, ಎದೆಗೆ, ಎಡಗಾಲಿಗೆ ಕಲ್ಲಿನಿಂದ ಗುದ್ದಿ ಒಳಪೆಟ್ಟು ಮಾಡಿದನು. ನಾಗಪ್ಪ ತಂದೆ ಹಣಮಂತ ಮೂಲಂಗಿ ಈತನಿಗೆ ದೇವರಾಜ ಈತನು ಕೈಯಿಂದ ಹೊಟ್ಟೆಗೆ, ಎದೆಗೆ ಗುದ್ದಿ ಒಳಪೆಟ್ಟು ಮಾಡಿದನು. ಶಂಕರ ತಂದೆ ಶರಣಗೌಡ ಈತನಿಗೆ ಯಲ್ಲಪ್ಪ, ರಮಾಬಾಯಿ, ಈರಮ್ಮ ಇವರು ನೆಲಕ್ಕೆ ಕೆಡವಿ ಕಾಲಿಗೆ ಕೈಗೆ ಒದ್ದು ಒಳಪೆಟ್ಟು ಮಾಡಿದರು. ಆಗ ಅಲ್ಲಿಯೇ ಇದ್ದ ನಾನು ಮತ್ತು ಭಾಗನಗೌಡ ತಂದೆ ಮಲ್ಲಪ್ಪಗೌಡ ಪೊಲೀಸ್ ಪಾಟೀಲ, ಶಿವಪ್ಪಗೌಡ ತಂದೆ ಬಸಲಿಂಗಪ್ಪಗೌಡ ಪೊಲೀಸ್ ಪಾಟೀಲ, ತಿಮ್ಮಣಗೌಡ ತಂದೆ ಬಲವಂತಪ್ಪಗೌಡ ಮಾಲಿ ಪಾಟೀಲ ಎಲ್ಲರು ಕೂಡಿ ಹೊಡೆಯುವದನ್ನು ನೋಡಿ ಬಿಡಿಸಿಕೊಂಡೆವು. ಆಗ ಅವರು ಹೊಡೆಯುವದನ್ನು ಬಿಟ್ಟು ಇವತ್ತು ಉಳದಿರಿ ಸೂಳೇ ಮಕ್ಕಳೆ ಇನ್ನೊಮ್ಮೊ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ತೆಗೆಯದೇ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಂತರ ಘಟನೆಯಲ್ಲಿ ಗಾಯಗೊಂಡ ಎಲ್ಲರಿಗೂ ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸುರಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ಉಪಚಾರ ಪಡಿಸಿದ್ದು, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಮಾಳಪ್ಪ ತಂದೆ ಹಣಮಂತ್ರಾಯ ಬಂಟನುರ ಸಾ|| ಮಂಗಳೂರು, ಮಾಳಪ್ಪ ತಂದೆ ಗುರಪ್ಪ ಕುಂಬಾರ, ಲಕ್ಷ್ಮಣ ತಂದೆ ಭಾಗಣಗೌಡ ಪೊಲೀಸ್ ಪಾಟೀಲ, ಶರಣಪ್ಪ ತಂದೆ ಮರೆಪ್ಪಗೌಡ ಪೊಲೀಸ್ ಪಾಟೀಲ ಇವರಿಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಸೇರಿಕೆ ಮಾಡಿ, ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ಕೊಲೆ ಮಾಡುವ ಉದ್ದೇಶದಿಂದ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 12 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 111/2022 ಕಲಂ: 143, 147, 148, 341, 323, 324, 307, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶೋರಾಪುರ ಪೊಲೀಸ ಠಾಣೆ :-
ಗುನ್ನೆ ನಂ: 112/2022 ಕಲಂ: 143, 147, 148, 323, 324, 354, 504, 506 ಸಂ. 149 ಐಪಿಸಿ: ಇಂದು ದಿನಾಂಕ:08/07/2022 ರಂದು 6:15 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರನಾದ ವೆಂಕೋಬ ತಂದೆ ಚಂದ್ರಾಮಪ್ಪ ಗುಡ್ಡಕಾಯ ವ|| 53 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ರತ್ತಾಲ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನಗೆ ಒಟ್ಟು ಮೂರು ಜನ ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಿರುತ್ತಾಳೆ. ನಿನ್ನೆ ದಿನಾಂಕ: 07/07/2022 ರಂದು ನಮ್ಮೂರ ಹಣಮಂತ ದಿವಳಗುಡ್ಡ ಈತನ ಮಗಳ ಮದುವೆ ತಮ್ಮ ಆತನ ಮನೆಯ ಮುಂದೆ ಜರುಗಿದ್ದು ಇರುತ್ತದೆ. ಸದರಿ ಮದುವೆ ಕಾರ್ಯಕ್ರಮಕ್ಕೆ ನಮ್ಮ ಅಣ್ಣತಮಕಿಯಾದ ಚಂದಪ್ಪ ತಂದೆ ಭೀಮಣ್ಣ ವಾಟರ್ ಮ್ಯಾನ್ ಈತನು ಹೋಗಿದ್ದನು. ಹೀಗಿದ್ದು ನಿನ್ನೆ ದಿನಾಂಕ: 07/07/2022 ರಂದು ರಾತ್ರಿ ಅಂದಾಜು 10 ಗಂಟೆ ಸುಮಾರಿಗೆ ಮದುವೆ ಮೆರವಣಿಗೆ ಮಾಡುತ್ತಾ ನ್ಮಮೂರ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಹೋಗುತ್ತಿದ್ದಾಗ ಸದರಿ ಮೆರವಣಿಗೆಯಲ್ಲಿ ಚಂದಪ್ಪ ತಂದೆ ಭೀಮಣ್ಣ ವಾಟರ ಮ್ಯಾನ್ ಈತನು ಡ್ಯಾನ್ಸ್ ಮಾಡುತ್ತಿದ್ದನು. ನಾನು ಚಂದಪ್ಪ ಈತನಿಗೆ ರಾತ್ರಿ ಬಹಳ ಆಗಿದೆ ಬಾ ಮನೆಗೆ ಹೋಗೋಣ ಅಂತಾ ಹೇಳಿ ಕರೆದುಕೊಂಡು ಮನೆಗೆ ಬಂದು ನಮೆಯಲ್ಲಿ ನಾನು ಮತ್ತು ಚಂದಪ್ಪ ವಾಟರ ಮ್ಯಾನ್, ನನ್ನ ಮಗ ಸುನೀಲ್ಕುಮಾರ, ಅಣ್ಣ ತಮ್ಮಕಿಯವರಾದ ಯಲ್ಲಪ್ಪ ಗುರುಗಡ್ಡಿ, ಕುಮಾರ ತಂದೆ ಯಲ್ಲಪ್ಪ ಗುರುಗಡ್ಡಿ, ಶ್ರೀಶೈಲ್ ತಂದೆ ದೇವಿಂದ್ರಪ್ಪ ಗುಡ್ಡಕಾಯಿ, ಪ್ರಕಾಶ ತಂದೆ ಚಂದ್ರಾಮಪ್ಪ ಗುಡ್ಡಕಾಯಿ, ಮರೆಪ್ಪ ತಂದೆ ಭೀಮಣ್ಣ ಗುಡ್ಡಕಾಯಿ ಎಲ್ಲರು ನಮ್ಮ ಮನೆಯ ಮುಂದೆ ಮಾತನಾಡುತ್ತಾ ನಿಂತಾಗ, ನಮ್ಮ ಗ್ರಾಮದ ಕುರುಬ ಜನಾಂಗದವರಾದ 1) ಶಿವಪ್ಪಗೌಡ ತಂದೆ ಬಸಲಿಂಗಪ್ಪ ಪೊಲೀಸ್ ಪಾಟೀಲ್ 2) ಭಾಗಪ್ಪಗೌಡ ತಂದೆ ಮಲ್ಲಪ್ಪಗೌಡ ಪೊಲೀಸ್ ಪಾಟೀಲ್ 3) ದೇವಪ್ಪ ತಂದೆ ಗಂಗಪ್ಪಗೌಡ ಪೊಲೀಸ್ ಪಾಟೀಲ್ 4) ಹಣಮಂತ ತಂದೆ ಭೀಮಣ್ಣ ಕುಂಬಾರ 5) ಪರಶುರಾಮ ತಂದೆ ಗುರಪ್ಪ ನಾಗನಟಗಿ 6) ಯಲ್ಲಪ್ಪ ತಂದೆ ಭೀಮಣ್ಣ ಬಡಕ 7) ಯಲ್ಲಪ್ಪ ತಂದೆ ಭಾಗಣಗೌಡ ಪೊಲೀಸ್ ಪಾಟೀಲ್ 8) ಭೀಮಣ್ಣ ತಂದೆ ಶಿವಲಿಂಗಪ್ಪಗೌಡ ಸಜ್ಜಿ 9) ಮಲ್ಲಪ್ಪ ತಂದೆ ಭೀಮಪ್ಪ ಬಡಕ 10) ಯಲ್ಲಪ್ಪ ತಂದೆ ಗಂಗಣಗೌಡ ಪೊಲೀಸ್ ಪಾಟೀಲ್ 11) ಮರೆಪ್ಪ ತಂದೆ ಹಣಮಂತ ಮೂಲಂಗಿ 12) ಶಂಕ್ರೆಪ್ಪ ತಂದೆ ಗಂಗಪ್ಪಗೌಡ ಪೊಲೀಸ್ ಪಾಟೀಲ್ ಎಲ್ಲರೂ ಕೈಯಲ್ಲಿ ಕಲ್ಲು, ಬಡಿಗೆ ಹಿಡಿದುಕೊಂಡು ಅಕ್ರಮ ಕೂಟ ರಚಿಸಿಕೊಂಡು ನಮ್ಮ ಮನೆಯ ಮುಂದೆ ಬಂದು ರಸ್ತೆಯ ಮೇಲೆ ನಿಂತುಕೊಂಡು ಎನಲೇ ಬೋಸಡಿ ಮಗನೆ ಯಂಕ್ಯಾ, ನಿಂದು ಬಹಳ ಆಗಿದೆ. ನೀನೇಕೆ ಮೆರವಣಿಗೆಯಲ್ಲಿ ಡಾನ್ಸ್ ಮಾಡುತ್ತಿದ್ದವನಿಗೆ ಕರೆದುಕೊಂಡು ಹೋಗಿ ಇಲ್ಲದ ಉಸಾಬರಿ ಮಾಡುತ್ತಿಲೇ ಅಂತಾ ಅವಾಚ್ಯಾವಾಗಿ ಬೈಯುತ್ತಿದ್ದಾಗ ಅಲ್ಲೆ ಇದ್ದ ನನ್ನ ಮಗನಾದ ಸುನೀಲ್ಕುಮಾರ ಈನತು ನೀವು ಯಾಕೆ ಈ ರೀತಿ ಬೈಯುತ್ತಿರಿ ಅಂತಾ ಕೇಳಿದಕ್ಕೆ ಅವರಲ್ಲಿಯ ಶಿವಪ್ಪಗೌಡ ಈತನು ತನ್ನ ಕೈಲ್ಲಿದ್ದ ಬಡಿಗೆಯಿಂದ ನನ್ನ ಮಗನ ಮೂಗಿಗೆ ಹೊಡೆದು ರಕ್ತಗಾಯ ಮಾಡಿದನು. ಭಾಗಪ್ಪ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಎಡಗಡೆ ಭುಜಕ್ಕೆ ಮತ್ತು ಬಲಗಾಲ ತೊಡೆಯ ಹತ್ತಿರ ಹೊಡೆದು ಗುಪ್ತಗಾಯ ಮಾಡಿದನು. ದೇವಪ್ಪ ತಂದೆ ಗಂಗಪ್ಪಗೌಡ ಪೊಲೀಸ್ ಪಾಟೀಲ್ ಈತನು ತನ್ನ ಕೈಯಲಲಿದ್ದ ಕಲ್ಲಿನಿಂದ ನನ್ನ ಬಲಗಾಲ ಹಿಮ್ಮಡಗೆ ಹೊಡೆದು ತರಚಿದ ಗಾಯಪಡಿಸಿದನು. ಹಣಮಂತ ತಂದೆ ಭೀಮಣ್ಣ ಕುಂಬಾರ ಇತನು ಬಡಿಗೆಯಿಂದ ಯಲ್ಲಪ್ಪ ಇತನಿಗೆ ಬಲಗಡೆ ತಲೆಗೆ ರಕ್ತಗಾಯ ಮಾಡಿದನು. ಅಲ್ಲೆ ಇದ್ದ ನಮ್ಮ ಅಣ್ಣತಮಕಿಯಾದ ಕುಮಾರ ಈತನಿಗೆ ಪರಶುರಾಮ ತಂದೆ ಗುರಪ್ಪ ನಾಗನಟಗಿ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಎಡಗೈ ಹೆಬ್ಬೆರಳಿನ ಮೇಲೆ ತರಚಿದಗಾಯ ಮಾಡಿದನು. ಶ್ರೀಶೈಲ್ ಇತನಿಗೆ ಯಲ್ಲಪ್ಪ ತಂದೆ ಭೀಮಣ್ಣ ಬಡಕ ಇತನು ಬಡಿಗೆಯಿಂದ ಎಡಗೈ ಮುಂಡಿಗೆ ಮತ್ತು ಬಲಗಡೆ ಬೆನ್ನಿಗೆ ತರಚಿದಗಾಯ ಮಾಡಿದನು. ಮರೆಪ್ಪ ಇತನಿಗೆ ಯಲ್ಲಪ್ಪ ತಂದೆ ಭಾಗಣಗೌಡ ಪೊಲೀಸ್ ಪಾಟೀಲ್ ಇತನು ಕಲ್ಲಿನಿಂದ ಬಲ ಗಲ್ಲಕ್ಕೆ ಹೊಡದು ತರಚಿದ ಗಾಯ ಮಾಡಿದನು. ಪ್ರಕಾಶ ಇತನಿಗೆ ಭೀಮಣ್ಣ ತಂದೆ ಶಿವಲಿಂಗಪ್ಪಗೌಡ ಸಜ್ಜಿ, ಇತನು ಕೈಯಿಂದ ಎಡ ಗಲ್ಲಕ್ಕೆ ಹೊಡೆದು ತರಚಿದ ಗಾಯ, ಮಲ್ಲಪ್ಪ ತಂದೆ ಭೀಮಪ್ಪ ಬಡಕ ಇತನು ಕೈಯಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಆಗ ಜಗಳ ಬಿಡಿಸಲು ಬಂದ ನನ್ನ ತಂಗಿ ಭಾಗ್ಯಶ್ರೀ ಗಂಡ ದೇವಿಂದ್ರಪ್ಪ ಬೇವಿನಳ್ಳಿ ಈಕೆಗೆ ಯಲ್ಲಪ್ಪ ತಂದೆ ಗಂಗಣಗೌಡ ಪೊಲೀಸ್ ಪಾಟೀಲ್ ಇವನು ಕೈಯಿಂದ ಹೊಟ್ಟೆಗೆ ಹೊಡೆದನು, ಮರೆಪ್ಪ ತಂದೆ ಹಣಮಂತ ಮೂಲಂಗಿ ಇತನು ಕಾಲಿನಿಂದ ಒದ್ದನು, ಶಂಕ್ರೆಪ್ಪ ತಂದೆ ಗಂಗಪ್ಪಗೌಡ ಪೊಲೀಸ್ ಪಾಟೀಲ್ ಇತನು ಆಕೆಯ ಎದೆಯ ಮೇಲಿನ ಸೀರೆ ಸೇರಗ ಹಿಡಿದು ಎಳೆದಾಡಿ ಅವಮಾನ ಮಾಡಿದನು. ಆಗ ಅಲ್ಲೆ ಇದ್ದ ಭೀಮಣ್ಣ ತಂದೆ ಬಾಲದಂಡಪ್ಪ ಗುಡ್ಡಕಾಯಿ, ಯಲ್ಲಪ್ಪ ತಂದೆ ದುರ್ಗಪ್ಪ ಬಡೆಗೇರ, ಇವರು ಜಗಳವನ್ನು ನೋಡಿ ಬಿಡಿಸಿಕೊಂಡರು. ಇವರು ಬಿಡಿಸಿಕೊಂಡಿದ್ದಾರೆ ಅಂತ ನಿಮ್ಮನ್ನು ಬಿಟ್ಟಿವಿ ಸೂಳೆ ಮಕ್ಕಳೆ ಇಲ್ಲಂದರೆ ನಿಮ್ಮ ಜೀವ ಸಹಿತ ಬಿಡುತ್ತಿರಲಿಲ್ಲ ಅಂತ ಜೀವದ ಬೇದರಿಕೆ ಹಾಕಿ ಹೊದರು. ನಾನು ಮತ್ತು ಗಾಯಾಳುದಾರರು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬಂದು ಉಪಚಾರ ಪಡಿಸಿಕೊಂಡು ಹೋಗಿ ಮನೆಯಲ್ಲಿ ಅಣ್ಣ ತಮ್ಮಂದಿಯವರ ಜೊತೆ ವಿಚಾರ ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೆನೆ. ಕಾರಣ ಅಕ್ರಮ ಕೂಟ ರಚಿಸಿಕೊಂಡು ಬಂದು ನಮಗೆ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿ, ಅವಮಾನ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರು ಅಜರ್ಿ ಸರಾಂಶದ ಮೇಲಿಂದ ಠಾಣೆ ಗುನ್ನೆ ನಂ. 112/2022 ಕಲಂ: 143, 147, 148, 323, 324, 354, 504, 506 ಸಂ. 149 ಐಪಿಸಿನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.