ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-08-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 126/2021 ಕಲಂ: 00 ಒಕ : ದಿನಾಂಕ: 01.08.2021 ರಂದು ರಾತ್ರಿ 10.30 ಗಂಟೆಯ ಮದ್ಯದ ಅವದಿಯಲ್ಲಿ ಸಾ: ಲಕ್ಷ್ಮೀ ನಗರ ಗುರುಮಠಕಲ್ ಈಕೆಯು ಮನೆಯಿಂದ ಹೋಗಿದ್ದು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲ. ಆದ್ದರಿಂದ ಫಿಯರ್ಾದಿ ಕಾಣೆಯಾದ ನನ್ನ ಮಗಳನ್ನು ಹುಡಿಕಿಕೊಡಬೇಕು ಅಂತಾ ಠಾಣೆಗೆ ಬಂದು ದೂರು ನೀಡಿಡುತ್ತಾರೆ.


ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ 110/2021 ಕಲಂ 323 324 504 506 355 ಸಂಗಡ 34 ಐಪಿಸಿ . : ಇಂದು ದಿನಾಂಕ 08/08/20221 ರಂದು 12-15 ಪಿ.ಎಂಕ್ಕೆ ಪಿಯರ್ಾದಿ ಶ್ರೀಮತಿ ಯಮುನಮ್ಮ ಗಂಡ ತಾಯಪ್ಪ ಯಲೇರಿ ವಯಸ್ಸು : 60 ಉದ್ಯೋಗ : ಮನೆಕೆಲಸ , ಜಾತಿ: ಕಬ್ಬಲಿಗ, ಸಾ- ಮೈಲಾಪೂರ ತಾ: ಜಿ: ಯಾದಗಿರಿ ನಿನ್ನೆ ದಿ: 06/08/2021 ರಂದು ಸಂಜೆ ನಮ್ಮೂರಿನ ಕಲ್ಯಾಣ ಮಂಟಪದಿಂದ ನಮ್ಮ ಮನೆಯ ಕಡೆ ಬರುತ್ತಿರುವಾಗ ನಮ್ಮೂರಿನ ನಮ್ಮ ಜಾತಿವರಾದ ಮಹೇಶ ತಂದೆ ಖಂಡಪ್ಪ ಕಡಿಪಾವಂಟಗಿ & ಈತನ ಹೆಂಡತಿಆದ ಶ್ರೀಮತಿ ಮಲ್ಲಮ್ಮ ಇಬ್ಬರು ನನ್ನನ್ನು ಜೀವ ತೆಗೆಯಲು ಉದ್ದೇಶದಿಂದ ನನ್ನ ಕುತ್ತಿಗೆ ಹಿಸುಗುತ್ತಿರವಾಗ ಬಾಜು ಮಳಿಗೆ ನಿಮರ್ಿಸುತ್ತಿರುವ ಕಟ್ಟಡದ ರಾಡನ್ನು ತಲೆಗೆ ಚುಚ್ಚಿ ಗಾಯವಾಗಿದ್ದು & ಕುತ್ತಿಗೆ ಹಿಚುಕಿ ಗಂಡ ಹೆಂಡತಿ ಇಬ್ಬರು ನನ್ನನ್ನು ಹೊಡೆಯುತ್ತಿರುವಾಗ ಕಲ್ಯಾಣ ಮಂಟಪದಲ್ಲಿರುವ ನನ್ನ ಚಿಕ್ಕ ಮಗನಾದ ಸದಾಶಿವರಡ್ಡಿ ಬಂದು ಬಿಡಿಸಿರುತ್ತಾನೆ. ಸದ್ಯ ಯಾದಗಿರಿ ಸಕರ್ಾರಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಮಗ ಬಂದು ಬಿಡಿಸಿಕೊಳ್ಳದಿದ್ದರೆ ನನ್ನ ಜೀವ ತೆಗೆಯುತ್ತಿದ್ದರು ಇವರು ಸುಮಾರು 3 ವರ್ಷದಿಂದ ಡಿ.ಎಸ್.ಎಸ್. (ಕ್ರಾಂತಿಯವರ) ಸಂಘಟನೆಯಲ್ಲಿ ನನ್ನ ಮಗನಾದ ಸಾಬರಡ್ಡಿ ಕೆಲಸ ಮಾಡಿ ನಮ್ಮೂರಿನ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದರಿಂದ ಇವರಿಗೆ ತಿನ್ನುವುದಕ್ಕೆ ತೊಂದರೆಯಾಗಿದ್ದರಿಂದ ಸುಮಾರು 4-5 ಸಲ ನಿನ್ನ ಮಗ ಸಾಬೆನಿಗೆ ಹೇಳು , ಹೊಲೆ ಮಾದಿಗರ ಸಂಘದಲ್ಲಿ ಹೋಗುವುದುಬೇಡವೆಂದು ನನಗೆ ಹಲವಾರು ಸಲ ಹೇಳಿರುತ್ತಾನೆ. ಆದರೆ ನನ್ನ ಮಗ ಏನು ನಿಮಗೆ ಕೆಟ್ಟದ್ದು ಮಾಡುತ್ತಿದ್ದಾನೆ. ತನ್ನ ಕೈಲಾದಷ್ಟು ಸಮಾಜದ ಕೆಲಸ ಮಾಡುತಿದ್ದಾನೆಂದು ಹೇಳಿರುತ್ತೇನೆ.ಆದರೆ ಇದೆ ಕಾರಣಾಂತರದಿಂದ ನಾನು ಕಲ್ಯಾಣ ಮಂಟಪದಿಂದ ಮನೆ ಕಡೆಗೆ ಹೋಗುವಾಗ ಸಂಜೆ 6 ರಿಂದ 6-30 ಗೊಳಗೆ ಗಂಡ ಹೆಂಡತಿ ಬಂದು ನನ್ನ ಜೀವ ಹೊಡೆಯುವ ಪ್ರಯತ್ನ ಮಾಡಿರುತ್ತಾರೆ. ಆದುದ್ದರಿಂದ ದಯಾಳುಗಳಾದ ತಾವುಗಳು ಇಬ್ಬರ ಮೇಲೆ ಕಾನೂನು ಕ್ರಮ ತಗೆದುಕೊಳ್ಳಬೇಕೆಂದು ನಮಗೆ ನ್ಯಾಯ & ರಕ್ಷಣೆ ಕೊಡಬೇಕೆಂದು ತಮ್ಮಲ್ಲಿ ದೂರು ಸಲ್ಲಿಸುತ್ತಿದ್ದೇನೆ. ಸದರಿ ದೂರು ಅಜರ್ಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 110 ಕಲಂ 323 324 355 504 506 ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 180/2021 ಕಲಂ 279, 338 ಐ.ಪಿ.ಸಿ : ಇಂದು ದಿನಾಂಕ 08/08/2021 ರಂದು, ರಾತ್ರಿ 20-30 ಗಂಟೆಗ ಫಿಯರ್ಾದಿ ಶ್ರೀ, ಮಲ್ಲಿಕಾಜರ್ುನ ರಡ್ಡಿ ತಂದೆ ಸಿದ್ರಾಮರಡ್ಡಿ ದೇವಣಗಾಂವ, ವಯಸ್ಸು 30 ವರ್ಷ, ಜಾತಿ ಲಿಂಗಾಯತರಡ್ಡಿ, ಉಃ ಒಕ್ಕಲುತನ ಸಾಃ ಗೋಗಿ(ಕೆ) ಹಾಲಿವಸತಿ ಬಾಪುಗೌಡ ನಗರ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ತಂದೆ ಶ್ರೀ ಸಿದ್ರಾಮರಡ್ಡಿ ತಂದೆ ಗುರುನಾಥರಡ್ಡಿ ದೇವಣಗಾಂವ ವಯಸ್ಸು, 58 ವರ್ಷ, ಉಃ ಎಸ್.ಎಲ್.ಎನ್ ಇಂಜಿನಿಯರಿಂಗ್ ಕಾಲೇಜ್ ರಾಯಚೂರದದಲ್ಲಿ ಕ್ಲಕರ್್ ಕೆಲಸ ಮಾಡಿಕೊಂಡಿದ್ದರು, ಹೀಗಿರುವಾಗ ನಿನ್ನೆ ದಿನಾಂಕ 07/08/2021 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ ನನ್ನ ತಂದೆ ಸಿದ್ರಾಮರಡ್ಡಿ ಇವರು ಗೋಗಿಯಲ್ಲಿ ಕೆಲಸವಿದೆ ಹೋಗಿ ಬರುತ್ತೇನೆ ಅಂತಾ ಹೇಳಿ ತಮ್ಮ ಟಿವಿಎಸ್ ಜ್ಯೂಪಿಟರ್ ಸ್ಕೂಟಿ ನಂ. ಕೆಎ-36-ಇಎಫ್-7077 ನೇದ್ದನ್ನು ಚಲಾಯಿಸಿಕೊಂಡು ಮನೆಯಿಂದ ಹೋದರು.
ಸ್ವಲ್ಪ ಸಮಯದ ನಂತರ ಸಾಯಂಕಾಲ 7-10 ಗಂಟೆಯ ಸುಮಾರಿಗೆ ಗೋಗಿ(ಕೆ) ಗ್ರಾಮದ ಶ್ರೀ ವಿಶ್ವನಾಥರಡ್ಡಿ ತಂದೆ ಕಲ್ಲಪ್ಪಗೌಡ ಶಿರಡ್ಡಿ ಇವರು ನನಗೆ ಫೋನ್ ಮಾಡಿ ನಾನು ಮತ್ತು ಗ್ರಾಮದ ಮಲ್ಲಿಕಾಜರ್ುನಯ್ಯ ತಂದೆ ಅಣ್ಣವೀರಯ್ಯ ಹಿರೇಮಠ್ ಇಬ್ಬರೂ ನಮ್ಮ ಕೆಲಸದ ನಿಮಿತ್ಯ ಮೋಟರ್ ಸೈಕಲ್ ಮೇಲೆ ಶಹಾಪೂರಕ್ಕೆ ಬಂದು ಮರಳಿ ಊರಿಗೆ ಹೋಗುತಿದ್ದೇವು. ನಿಮ್ಮ ತಂದೆ ಶ್ರೀ ಸಿದ್ರಾಮರಡ್ಡಿ ಇವರು ಶಹಾಪೂರದ ಕೆ.ಇ.ಬಿ ಹತ್ತಿರ ನಮಗೆ ಭೇಟಿಯಾಗಿದ್ದು, ಗೋಗಿಯಲ್ಲಿ(ಕೆ)ಯಲ್ಲಿ ಕೆಲಸವಿದೆ ಊರಿಗೆ ಹೊರಟಿದ್ದೇನೆ ಅಂತಾ ಹೇಳಿ ಹೋದರು, ನಾವು ಅವರ ಹಿಂದಿನಿಂದ ಮೋಟರ್ ಸೈಕಲ್ ಮೇಲೆ ಹೋಗುತಿದ್ದೇವು. ಶಹಾಪೂರ- ಭೀ-ಗುಡಿ ರೋಡಿನ ಮೇಲೆ ಶಹಾಪೂರ ಪಟ್ಟಣದ ಕನಿಷ್ಕಾ ಬಾರ್ & ರೆಸ್ಟೋರೆಂಟ್ ಹತ್ತಿರ ಸಾಯಂಕಾಲ 7-00 ಗಂಟೆಗೆ ಹೋಗುತಿದ್ದಾಗ, ಎದರುಗಡೆಯಿಂದ ಅಂದರೆ ಭೀ-ಗುಡಿ ಕಡೆಯಿಂದ ಒಬ್ಬ ಕಾರ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ನಿಮ್ಮ ತಂದೆಯವರು ಚಲಾಯಿಸಿಕೊಂಡು ಹೊರಟಿದ್ದ ಸ್ಕೂಟಿಗೆ ಜೋರಾಗಿ ಡಿಕ್ಕಿ ಮಾಡಿದರಿಂದ ನಿಮ್ಮ ತಂದೆಯವರು ಹಾರಿ ಕಾರಿನ ಮುಂಭಾಗದ ಗ್ಲಾಸ್ಗೆ ಬಡಿದು ರೋಡಿನ ಬದಿಗೆ ಬಿದ್ದರು, ಅಂದಾಜು 15-20 ಫೀಟ್ ವರೆಗೆ ಸ್ಕೂಟಿ ಎಳೆದುಕೊಂಡು ಹಿಂದಕ್ಕೆ ಬಂದು ನಿಂತಿತ್ತು, ಆಗ ನಾನು ಮತ್ತು ಮಲ್ಲಿಕಾಜರ್ುನಯ್ಯ ಇಬ್ಬರೂ ಸ್ಥಳಕ್ಕೆ ಹೋಗಿ ನೋಡಲಾಗಿ ನಿಮ್ಮ ತಂದೆಯವರಿಗೆ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ, ಎಡಗಣ್ಣಿನ ಹತ್ತಿರ ರಕ್ತಗಾಯ ಮತ್ತು ಮೈ ಕೈಗೆ ತರಚಿದ ಗಾಯಗಳಾಗಿರುತ್ತವೆ ಮಾತನಾಡಿಸಿದರು ಮಾತನಾಡಿರುವುದಿಲ್ಲ. ಅಪಘಾತ ಪಡಿಸಿದ ಕಾರ್ ನಂ. ಕೆಎ-26-ಎಮ್-5029 ಇರುತ್ತದೆ. ಕಾರ್ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಆತನ ಹೆಸರು ವಿಳಾಸ ವಿಚಾರಿಸಿದ್ದು, ವಿಶ್ವರಾಧ್ಯ ತಂದೆ ಶರಣಪ್ಪ ವಯುಸ್ಸು 31 ವರ್ಷ ಸಾಃ ಹಳಿಸಗರ ಶಹಾಪೂರ ಅಂತಾ ಹೇಳಿರುತ್ತಾನೆ. ಅಪಘಾತದಲ್ಲಿ ನಿಮ್ಮ ತಂದೆಯವರು ಚಲಾಯಿಸುತಿದ್ದ ಸ್ಕೂಟಿ ನಂಬರ ಕೆಎ-36-ಇಫ್-7077 ಗೆ ಡಿಕ್ಕಿ ಮಾಡಿ ಎಳೆದುಕೊಂಡು ಹೋಗಿದ್ದರಿಂದ ಜಖಂಗೊಂಡು ಹಾನಿಯಾಗಿರುತ್ತದೆ, ಕಾರಿನ ಮುಂಭಾಗವು ಜಖಂಗೊಂಡು ಹಾನಿಯಾಗಿರುತ್ತದೆ. ನಾನು 108 ಗೆ ಫೋನ್ ಮಾಡಿರುತ್ತೇನೆ ನೀನು ಕನಿಷ್ಕಾ ಬಾರ್ & ರೆಸ್ಟೋರೆಂಟ್ ಹತ್ತಿರ ಬಾ ಅಂತ ತಿಳಿಸಿದ ಮೇರೆಗೆ, ನಾನು ಇನ್ನೊಂದು ಮೋಟರ್ ಸೈಕಲ್ ಮೇಲೆ ಸಾಯಂಕಾಲ 7-20 ಗಂಟೆಯ ಸುಮಾರಿಗೆ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ, ನಮ್ಮ ತಂದೆಯವರಿಗೆ ಮೇಲೆ ಹೇಳಿದಂತೆ ಗಾಯಗಳಾಗಿದ್ದವು, ಮಾತನಾಡಿಸಿದ್ದು ಮಾತನಾಡಿರುವುದಿಲ್ಲ. ಅಪಘಾತ ಪಡಿಸಿದ ಕಾರ್ ನಂ. ನೋಡಿದ್ದು ಕೆಎ-26-ಎಮ್-5029 ಇರುತ್ತದೆ ಮತ್ತು ಅದರ ಚಾಲಕನನ್ನು ನೋಡಿ ಅವನ ಹೆಸರು ವಿಳಾಸ ವಿಚಾರಿಸಿದ್ದು, ವಿಶ್ವರಾಧ್ಯ ತಂದೆ ಶರಣಪ್ಪ ಸಾಃ ಹಳಿಸಗರ ಅಂತಾ ಹೇಳಿದನು. ಅಪಘಾತದಲ್ಲಿ ಕಾರ್ ಮತ್ತು ನಮ್ಮ ಸ್ಕೂಟಿ ಜಖಂಗೊಂಡು ಹಾನಿಯಾಗಿದ್ದವು. ಅಷ್ಟರಲ್ಲಿಯೇ ಸ್ಥಳಕ್ಕೆ 108 ವಾಹನ ಬಂದಿದ್ದು ನಾವೆಲ್ಲರೂ ಕೂಡಿ ನಮ್ಮ ತಂದೆಯವರನ್ನು 108 ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ವೈದ್ಯಾಧಿಕಾರಿಗಳು ಉಪಚಾರ ಮಾಡಿದ ನಂತರ ಹೆಚ್ಚಿನ ಉಪಚಾರ ಮುಂದೆ ಹೋಗಲು ತಿಳಿಸಿದ ಮೇರೆಗೆ, ನಮ್ಮ ತಂದೆಯವರಿಗೆ ಉಪಚಾರದ ಅವಶ್ಯಕತೆ ಇದ್ದುದ್ದರಿಂದ ಶಹಾಪೂರದಿಂದ ನಮ್ಮ ತಂದೆಯವರನ್ನು ಅಂಬುಲೆನ್ಸ ವಾಹನದಲ್ಲಿ ಕರೆದುಕೊಂಡು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಿ, ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ನಮ್ಮ ತಂದೆಯವರ ಜೊತೆಯಲ್ಲಿಯೇ ಇದ್ದೇನು, ಈ ದಿನ ನಮ್ಮ ಕುಟುಂಬದವರು ಆಸ್ಪತ್ರೆಗೆ ಬಂದಿದ್ದರಿಂದ ತಡವಾಗಿ ಇಂದು ಠಾಣೆಗೆ ಹಾಜರಾಗಿ ದೂರು ಸಲ್ಲಿಸಲು ಬಂದಿರುತ್ತೇನೆ.
ಕಾರಣ ಈ ಅಪಘಾತಕ್ಕೆ ಕಾರಣಿಭೂತನಾದ ಹುಂಡೈ ಐ-20 ಕಾರ್ ನಂ. ಕೆಎ-26-ಎಮ್-5029 ರ ಚಾಲಕ ವಿಶ್ವರಾಧ್ಯ ತಂದೆ ಶರಣಪ್ಪ ಸಾಃ ಹಳಿಸಗರ ಶಹಾಪೂರ ಈತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 180/2021 ಕಲಂ 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 123/2021, ಕಲಂ. 143, 147, 323, 354, 504, 506. ಸಂ.149 ಐ ಪಿ ಸಿ : 08-08-2021 ರಂದು ಸಾಯಂಕಾಲ 5-30 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 07-08-2021 ರಂದು ರಾತ್ರಿ 8.00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯವರು ನಮ್ಮ ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರು ಕೂಡಿಕೊಂಡು ಬಂದು ಲೇ ಸುಳೆ ಮಗನೆ ನಿನ್ನ ಮನೆಯ ಮುಂದೆ ಇರುವ ನಳದ ವಿಷಯದಲ್ಲಿ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಹೆಣ್ಣುಮಗಳಿಗೆ ಕೈ ಹಿಡಿದು ಎಳದಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ .

ಇತ್ತೀಚಿನ ನವೀಕರಣ​ : 11-08-2021 10:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080