ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-09-2022


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 139/2022 ಕಲಂ : 302 ಐಪಿಸಿ: ಕಳೆದ 8 ವರ್ಷಗಳ ಹಿಂದೆ ಲಕ್ಷ್ಮಿ ಮತ್ತು ವೆಂಕಟಪ್ಪ ಇವರ ವಿವಾಹವಾಗಿದ್ದು ಅವರಿಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ. ವೆಂಕಟಪ್ಪನ್ನು ಸುಮಾರು ವರ್ಷಗಳಿಂದ ಕುಡಿದು ಮನೆಗೆ ಬಂದು ನೀಡಿ ನೋಡಲು ಚೋಲೊ ಇಲ್ಲಾ ನಿನಗೆ ಖಲಾಸ ಮಾಡಿ ಇನ್ನೊಂದು ಮದುವೆಯಾಗುತ್ತೆನೆಂದು ತನ್ನ ಹೆಂಡತಿಯಾದ ಲಕ್ಷ್ಮಿಗೆ ಹೇಳುತ್ತ ಬಂದಿದ್ದು ಆ ವಿಚಾರವನ್ನು ಲಕ್ಷ್ಮಿ ತವರು ಮನೆಗೆ ಹೋದಾಗಲೆಲ್ಲಾ ತನ್ನ ತವರು ಮನೆಯವರಿಗೆಲ್ಲಾರಿಗೂ ಹೇಳಿರುತ್ತಾಳೆ. ಆ ನಂತರ ಅವರು ಆಕೆಗೆ ತಾಳಿಕೊಂಡು ಇರುವಂತೆ ಸಮಧಾನ ಹೇಳಿದ್ದರಿಂದ ಆಕೆ ತನ್ನ ಗಂಡನ ಮನಗೆ ಬಂದು ಸಂಸಾರ ಮಾಡುತ್ತಿರುತ್ತಾಳೆ. ಹೀಗಿದ್ದು ನಿನ್ನೆ ದಿನಾಂಕ 07.09.2022 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ವೆಂಕಟಪ್ಪನು ಕುಡಿದು ಮನೆಗೆ ಬಂದು ತನ್ನ ಹೆಂಡತಿಯೊಂದಿಗೆ ಜಗಳಮಾಡಿ ಆಕೆಗೆ ಹೊಡೆ-ಬಡೆ ಮಾಡಿ ಕೊಲೆ ಮಾಡಿದ ನಂತರ ಮನೆಯಿಂದ ಓಡಿ ಹೋಗಿದ್ದು ಅದನ್ನು ಕಂಡ ಅಕ-ಪಕ್ಕದಲ್ಲಿದ್ದ ಮೃತ ಲಕ್ಷ್ಮಿಯ ತವರೂರಿಗೆ ಫೋನ್ ಮಾಡಿ ವಿಷಯ ತಿಳಿಸಿದ ನಂತರ ಅವರು ಕೊಂಕಲ್ ಗ್ರಾಮದಿಂದ ಮೃತಳ ಗಂಡ ಮನೆಗೆ ಬಂದು ನಂತರ ಶವಗಾರಕ್ಕೆ ಹೋಗಿ ತನ್ನ ಮಗಳ ಮೃತ ದೇಹವನ್ನು ನೋಡಿದ ನಂತರ ಫಿರ್ಯಾದಿಯು ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ತನ್ನ ಅಳಿಯನಾದ ವೆಂಕಟಪ್ಪನ ಮೇಲೆ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 139/2022 ಕಲಂ: 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: ಇಂದುದಿನಾಂಕ: 08/09/2022 ರಂದು ಮುಂಜಾನೆ ಫಿಯರ್ಾದಿಯತಾಯಿ ಮೃತ ಗಂಗಾಬಾಯಿ ಇವಳಿಗೆ ತೋರಿಸಿಕೊಂಡು ಬರಲುಅಂತಾ ಸೋಮನಾಥಈತನುತನ್ನ ಮೋಟರ್ ಸೈಕಲ್ ನಂ:ಎಮ್.ಹೆಚ್-01, ಹೆಚ್.ಪಿ-2629 ನೇದ್ದರ ಮೇಲೆ ತನ್ನಅತ್ತೆ ಗಂಗಾಬಾಯಿ ಮತ್ತುತನ್ನ ಮಗ ಗುರುನಾಥಇವರಿಗೆ ಕೂಡಿಸಿಕೊಂಡು 10 ಎ.ಎಮ್. ಸುಮಾರಿಗೆಜೇವಗರ್ಿಕಡೆಗೆ ಮುಡಬೂಳ ಸೀಮಾಂತರದ ಶಹಾಪೂರ-ಕಲಬುರಗಿ ಮುಖ್ಯರಸ್ತೆಯ ಮೇಲೆ ಅಡಿವೆಪ್ಪ ಸಾಹುಕಾರಇವರ ಹೊಲದ ಹತ್ತಿರ ಹೊರಟಾಗಅವರ ಹಿಂದಿನಿಂದಆರೋಪಿತನುತನ್ನಕ್ಯಾಂಟರ್ ನಂ:ಕೆಎ-06, ಎಎ-6381 ನೇದ್ದನ್ನುರೋಡಿನ ಮೇಲಿರುವತಗ್ಗು ಗುಂಡಿಗಳನ್ನು ಲೆಕ್ಕಿಸದೇಅತಿವೇಗ ಮತ್ತುಅಲಕ್ಷನತದಿಂದ ಓಡಿಸಿಕೊಂಡು ಬಂದಿದ್ದರಿಂದಕ್ಯಾಂಟರ್ ಚಾಲಕನ ನಿಯಂತ್ರಣತಪ್ಪಿ ಮೋಟರ್ ಸೈಕಲ್ ಹಿಂಭಾಗಕ್ಕೆಡಿಕ್ಕಿ ಹೊಡೆದು ಅಪಘಾತಪಡಿಸಿ ತನ್ನಕ್ಯಾಂಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿಅಪಘಾತದಲ್ಲಿಗಂಗಾಬಾಯಿ ಮೋಟರ್ ಸೈಕಲದಿಂದರೋಡಿನ ಮೇಲೆ ಬಿದ್ದಿದ್ದರಿಂದ ಅವಳ ತಲೆಯ ಹಿಂಭಾಗಕ್ಕೆ ಭಾರಿರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಸೋಮನಾಥಈತನತಲೆಗೆ ಭಾರಿರಕ್ತಗಾಯವಾಗಿದ್ದು, ಗುರುನಾಥಈತನಿಗೆತಲೆಗೆ ಭಾರಿರಕ್ತಗಾಯವಾಗಿದ್ದು, ಬಲಗೈಗೆ ಮತ್ತುಎಡಗಾಲ ಮುಂಗಾಲ ಹತ್ತಿರ ಭಾರಿರಕ್ತಗಾಯವಾಗಿರುತ್ತದೆ. ಸದರಿಆರೋಪಿತನ ವಿರುಧ್ಧ ಕಾನೂನು ಕ್ರಮಜರುಗಿಸುವಂತೆದೂರುಇರುತ್ತದೆ.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 107/2022 ಕಲಂ: ಹೆಣ್ಣುಮಗಳು ಕಾಣೆಯಾದ ಬಗ್ಗೆ: ಇಂದು ದಿನಾಂಕ: 08/09/2022 ರಂದು 6-00 ಪಿಎಮ್ಕ್ಕೆ ಶ್ರೀ ಮಾರೆಪ್ಪ ತಂದೆ ಸಣ್ಣಸಾಬಣ್ಣ ಸಕ್ರಿ, ವ:60, ಜಾ:ಮಾದಿಗ, ಉ:ಒಕ್ಕಲುತನ ಸಾ:ಕುಮನೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ಕೊಟ್ಟಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಹೆಂಡತಿ ಹೊಲಮನೆ ಕೆಲಸ ಮಾಡಿಕೊಂಡಿರುತ್ತಾಳೆ. ನಮಗೆ 4 ಜನ ಗಂಡು ಮತ್ತು 6 ಜನ ಹೆಣ್ಣು ಮಕ್ಕಳಿರುತ್ತಾರೆ. ಅವರಲ್ಲಿ 5 ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿರುತ್ತೇನೆ. ಅವರೆಲ್ಲರೂ ತಮ್ಮ ಗಂಡಂದಿರ ಮನೆಯಲ್ಲಿರುತ್ತಾರೆ. ನನ್ನ 8 ನೇ ಮಗಳಾದ ಶರಣಮ್ಮ ಇವಳು ಬಾಣೆಂತನಕ್ಕೆ ಬಂದು ಸುಮಾರು 15 ದಿವಸಗಳಿಂದ ನಮ್ಮ ಮನೆಯಲ್ಲಿರುತ್ತಾಳೆ. ನನ್ನ ಕೊನೆಯ ಹೆಣ್ಣು ಮಗಳಾದ ರೇಣುಕಮ್ಮ ವ:21 ವರ್ಷ ಇವಳು. ನಮ್ಮ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದಳು. ಅವಳಿಗೆ ಇನ್ನು ಮದುವೆ ಮಾಡಿರುವುದಿಲ್ಲ. ಹೀಗಿದ್ದು ದಿನಾಂಕ:17/08/2022 ರಂದು ನಾನು ಹೊಲಕ್ಕೆ ಹೋಗಿ ಮರಳಿ ಮಧ್ಯಾಹ್ನ 3 ಗಂಟೆಗೆ ಮನೆಗೆ ಬಂದಾಗ ಬಾಣೆಂತನಕ್ಕೆ ಬಂದಿದ್ದ ನನ್ನ ಮಗಳು ಶರಣಮ್ಮ ಹೇಳಿದ್ದೇನೆಂದರೆ ಮಧ್ಯಾಹ್ನ 1- 30 ಗಂಟೆ ಸುಮಾರಿಗೆ ರೇಣುಕಮ್ಮ ಇವಳು ಸಂಡಾಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದಳು. ಬಹಳ ಹೊತ್ತಾದರು ಮನೆಗೆ ಬಂದಿಲ್ಲ ಅಂತಾ ಹೇಳಿದ್ದಳು. ನಂತರ ನಾನು ಮತ್ತು ನನ್ನ ಹೆಂಡತಿ ಸಿದ್ದಮ್ಮ ಮಗನಾದ ಕುಮಲಪ್ಪ ಮೂವರು ಕೂಡಿ ನಮ್ಮೂರ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದೇವು. ನನ್ನ ಮಗಳು ಸಿಗಲಿಲ್ಲ. ನಂತರ ನಾನು ಮತ್ತು ನನ್ನ ಮಕ್ಕಳಾದ ಸಾಬಣ್ಣ, ಕುಮಲಪ್ಪ ಇವರು ನಮ್ಮ ಬೀಗರ ಗ್ರಾಮಗಳಾದ ಗೋಡಿಹಾಳ, ನಾಯ್ಕಲ್, ಯಾದಗಿರಿ, ವಡಗೇರಾ, ಕೌಳೂರು, ರಾಮಸಮುದ್ರ, ಮುಂತಾದ ಕಡೆ ಹುಡುಕಾಡಿದರು. ನಂತರ ಬೆಂಗಳೂರಿನಲ್ಲಿರುವ ನಮ್ಮ ಸಂಬಂಧಿಕರಿಗೆ ಫೋನ ಮಾಡಿ ಅಲ್ಲಿ ಏನಾದರೂ ರೇಣುಕಮ್ಮ ಬಂದಿದ್ದಾಳೆ ಎಂದು ವಿಚಾರಿಸಿದರೆ ಅವರು ಬಂದಿಲ್ಲ ಎಂದು ಹೇಳಿದರು. ನನ್ನ ಮಗಳು ಮನೆಯಿಂದ ಹೋಗುವಾಗ ಮೈಮೇಲೆ ಕೆಂಪು ಬಣ್ಣದ ಚೂಡಿದಾರ ಪೈಜಾಮ್ ಧರಿಸಿರುತ್ತಾಳೆ. ಚಹರೆಪಟ್ಟಿ ಎತ್ತರ 5'-2'' ಫಿಟ್, ಸಾದಾರಣ ಮೈಕಟ್ಟು, ಸಾದಾಗಪ್ಪು ಬಣ್ಣ, ಉದ್ದನೆ ಮೂಗು ಇರುತ್ತದೆ. ನನ್ನ ಮಗಳು ಕನ್ನಡ ಬಾಷೆ ಮಾತನಾಡುತ್ತಾಳೆ. ನನ್ನ ಮಗಳಾದ ರೇಣುಕಾ ಇವಳು ದಿನಾಂಕ:17/08/2022 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಸಂಡಾಸಕ್ಕೆ ಎಂದು ಮನೆಯಿಂದ ಹೊರಗಡೆ ಹೊದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ. ನನ್ನ ಮಗಳಿಗೆ ನಾನು ಮತ್ತು ನನ್ನ ಮಕ್ಕಳು ನಮ್ಮ ಬೀಗರ ಗ್ರಾಮಗಳಾದ ಗೋಡಿಹಾಳ, ನಾಯ್ಕಲ್, ಕೌಳೂರು, ಯಾದಗಿರಿ, ರಾಮಸಮುದ್ರ ಮುಂತಾದ ಕಡೆ ಹೋಗಿ ಹುಡುಕಾಡಿ ಬಂದಿರುತ್ತೇವೆ. ನನ್ನ ಮಗಳಿಗೆ ನಾವು ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಕಾಣೆಯಾದ ನನ್ನ ಮಗಳು ರೇಣುಕಮ್ಮ ಇವಳನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರು ಅಜರ್ಿ ನಿಜವಿರುತ್ತದೆ ಅಂತಾ ಕೊಟ್ಟ ಫಿಯರ್ಾಧಿ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ ಠಾಣೆ ಗುನ್ನೆ ನಂ. 107/2022 ಕಲಂ: ಹೆಣ್ಣು ಮಗಳು ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 09-09-2022 11:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080