ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-10-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 159/2021 ಕಲಂ 323, 324, 504, 506 ಸಂ 34 ಐ.ಪಿ.ಸಿ : ರ್ಯಾಧಿಯು ತನ್ನ ಮೊಮ್ಮಕ್ಕಳಿಗೆ ತಮ್ಮ ಹೊಲದಲ್ಲಿಯ ಭತ್ತದ ರಾಶಿಗೆ ತಾಡಪತ್ರಿ ಹೊದ್ದಿಸಿ ಬರುಲು ಕಳಹಿಸಿದ್ದಾಗ ಆರೋಪಿತರು ಪಿರ್ಯಾಧಿ ಮೊಮ್ಮಕ್ಕಳಿಗೆ ಬೈದು ಕಳುಹಿಸಿದ್ದು ಅದನ್ನು ಕೇಳೆಂದು ದಿನಾಂಕ: 08.10.2021 ರಂದು ಬೆಳಿಗ್ಗೆ 9.45 ಗಂಟೆ ಸುಮಾರಿಗೆ ಪಿರ್ಯಾಧಿ ಮತ್ತು ಪಿರ್ಯಾಧಿ ಹೆಂಡತಿ ಪಿರ್ಯಾಧಿಯ ಮಗ ಮತ್ತು ಮೊಮ್ಮಗಳು ಹೋಗುತ್ತಿರುವಾಗ ತಮ್ಯಾ ಇವರ ಹೊಲದ ಕಾಲುದಾರಿಯಲ್ಲಿ ಪಿರ್ಯಾಧಿ ಮತ್ತು ಇತರಿಗೆ ಆರೋಪಿರು ಅವಾಚ್ಯ ಶಬ್ದಗಳಿಂದ ಬೈದು ಬಡಿಗೆ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ಜೇವಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ.

 

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 158/2021 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ. : ದಿನಾಂಕ 08.10.2021 ರಂದು ಬೆಳಿಗ್ಗೆ 09:30 ಗಂಟೆ ಸುಮಾರಿಗೆ ಫಿರ್ಯಾದಿದಾರನು ತಮ್ಮ ಮನೆ ಹೊಲದಲ್ಲಿ ತನ್ನ ಅಣ್ಣ ಮತ್ತು ಅತ್ತಿಗೆಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತರೆಲ್ಲಾರು ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು ಗಾಯಾಳುದಾರರಿಗೆ ಹೊಡೆಯುವ ಉದ್ದೇಶದಿಂದ ಫಿರ್ಯಾದಿಗೆ ಮತ್ತು ಆತನ ಅಣ್ಣನಿಗೆ ಹಾಗೂ ಅತ್ತಿಗೆಗೆ ಕೈಯಿಂದ ಮತ್ತು ಕಲ್ಲಿನಿಂದ ಹೊಡೆ-ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ನಂತರ ಗಾಯಗೊಂಡ ಫಿರ್ಯಾದಿ ಮತ್ತು ಆತನ ಅಣ್ಣ ಹಾಗೂ ಅತ್ತಿಗೆ ಚಿಕಿತ್ಸೆ ಕುರಿತು ಗುರುಮಠಕಲ್ ಸರಕಾರಿ ಆಸ್ಪತೆಗೆ ಸೇರಿಕೆಯಾಗಿ ಗಾಯಾಳುದಾರರಲ್ಲಿ ಕುಮಾರ ತಂದೆ ಜೈರಾಮ ರಾಠೋಡ ಈತನು ಹೇಳಿದ ಬಾಯಿ ಮಾತಿನ ಹೇಳಿಕೆದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 158/2021 ಕಲಂ: 143, 147, 148, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 230/2021. ಕಲಂ. 279,337,338, ಐ.ಪಿ.ಸಿ. : ಇಂದು ದಿನಾಂಕ: 08/10/2021 ರಂದು 11-00 ಗಂಟೆಗೆ ಪಿಯರ್ಾದಿ ಶ್ರೀ ಭೀಮಾಶಂಕರ ತಂದೆ ಬಸವರಾಜ ಸವಳಪಟ್ಟಿ ವ|| 32 ಜಾ|| ಕುರುಬರ ಉ|| ಒಕ್ಕಲುತನ ಸಾ|| ವಿಬೂತಿಹಳ್ಳಿ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 01/10/2021 ರಂದು ಬೆಳಿಗ್ಗೆ 10-40 ಗಂಟೆಗೆ ನನ್ನ ಅಳಿಯ ದೇವರಾಜ ತಂದೆ ಶಿವರಾಜ ಕೊಪ್ಪೂರ ಈತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ. ಶಹಾಪೂರದ ಬಸವೇಶ್ವರ ಚೌಕದಿಂದ ನಮ್ಮೂರಿಗೆ ನಮ್ಮ ಮೋಟರ್ ಸೈಕಲ್ ನಂ ಕೆಎ-33-ಇಬಿ-1790 ನೇದ್ದರ ಮೇಲೆ ನಾನು ಮತ್ತು ನನ್ನ ತಮ್ಮ ಆಕಾಶ ತಂದೆ ಭೀಮಾಶಂಕರ ಹೋಸಮನಿ, ಹಾಗೂ ರಸ್ತಾಪೂರದ ಮಹೇಶಕುಮಾರ ತಂದೆ ಮಾನಪ್ಪ ಕಮತಿಗಿ, ಎಲ್ಲರು ಮೋಟರ್ ಸೈಕಲ್ ಮೇಲೆ ನಮ್ಮೂರಿಗೆ ಶಹಾಪುರದ ಬಸವೇಶ್ವರ ಚೌಕದಿಂದ ಬರುತ್ತಿರುವಾಗ ಸದರಿ ಮೋಟರ್ ಸೈಕಲ್ನ್ನು ಮಹೇಶಕುಮಾರ ಈತನು ಚಲಾಯಿಸುತ್ತಿದ್ದನು ಮಹೇಶ ಕುಮಾರನ ಹಿಂದೆ ನಾನು ಕುಳಿತುಕೊಂಡಿದ್ದೆನು, ನನ್ನ ಹಿಂದೆ ನನ್ನ ತಮ್ಮ ಆಕಾಶ ತಂದೆ ಭೀಮಾಶಂಕರ್ ಹೋಸಮನಿ ಈತನು ಕುಳಿತುಕೊಂದ್ದನು, ಮಹೇಶ ಕುಮಾರನು ಮೋಟರ್ ಸೈಕಲ್ನ್ನು ತಮ್ಮ ಎಡಗಡೆ ಸೈಡಿಗೆ ನಿದಾನವಾಗಿ ಶಹಾಪೂರ-ಸುರಪೂರ ಮುಖ್ಯ ರಸ್ತೆಯ ಮೇಲೆ ಶಹಾಪೂರ ನಗರದ ಶಾಂತಿ ದಾಬಾದ ಮುಂದೆ 10-30 ಗಂಟೆಗೆ ಸುಮಾರಿಗೆ ಹೋಗುತ್ತಿರುವಾಗ ಶಾಂತಿ ದಾಬಾ ಪಕ್ಕದ ರಸ್ತೆಯ ಕಡೆಯಿಂದ ಒಮ್ಮಲೇ ಮುಖ್ಯರಸ್ತೆಯ ಮೇಲೆ ಒಂದು ಟ್ರ್ಯಾಕ್ಟರ್ ಚಾಲಕನಾದ ಹಣಮಂತ್ರಾಯ ತಂದೆ ನಿಂಗಪ್ಪ ಸೊಲ್ಲಾಪೂರ ಸಾ|| ವಿಬೂತಿಹಳ್ಳಿ ಈತನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚವಲಾಯಿಸಿಕೊಂಡು ಬಂದು ನಮಗೆ ಡಿಕ್ಕಿಪಡಿಸಿ ಅಪಘಾತ ಮಾಡಿರುತ್ತಾನೆ. ಸದರಿ ಅಪಘಾತದಲ್ಲಿ ನಮಗೆ ಗಾಯಗಳು ಆಗಿರುತ್ತವೆ ಅಂತ ತಿಳಿಸಿದ್ದರಿಂದ. ನಾನು ಮತ್ತು ನನ್ನ ಚಿಕ್ಕಪ್ಪ ಶರಬಣ್ಣಗೌಡ ತಂದೆ ಧರ್ಮಣ್ಣ ಸವಳಪಟ್ಟಿ ಇಬ್ಬರೂ ಕೂಡಿ ಸದರಿ ಸ್ಥಳಕ್ಕೆ ಬಂದು ನೋಡಿ ವಿಚಾರಿಸಲಾಗಿ ದೇವರಾಜನು ಈ ಮೆಲಿನಂತೆ ತಿಳಿಸಿದ್ದು ಸರಿ ಇದ್ದು. ಸದರಿ ಅಪಘಾತದಲ್ಲಿ ದೇವರಾಜನಿಗೆ ಎಡಗಾಲ ಮೋಳ ಕಾಲ ಚಿಪ್ಪಿಗೆ ಗುಪ್ತ ಗಾಯವಾಗಿದ್ದು. ಆಕಾಶನಿಗೆ ಎಡಗಾಲ ಮೋಳಕಾಲ ಕೇಳಗೆ ಭಾರಿ ರಕ್ತಗಾಯ, ಎಡಗಾಲ ಪಾದದ ಹಿಮ್ಮಡಿಗೆ, ಬೆರಳುಗಳಿಗೆ ತರಚಿದ ಗಾಯವಾಗಿದ್ದು, ಮಹೇಶಕುಮಾರನಿಗೆ ಸಣ್ಣ ಪುಟ್ಟ ಗುಪ್ತಗಾಯವಾಗಿದ್ದು ಇರುತ್ತದೆ. ಆಗ ಸದರಿ ಅಪಘಾತಮಾಡಿದ ಟ್ರ್ಯಾಕ್ಟರ್ ಚಾಲಕ ಹಣಂತ್ರಾಯ ತಂದೆ ನಿಂಗಪ್ಪ ಸೋಲ್ಲಾಪೂರ ಸಾ|| ವಿಬೂತಿಹಳ್ಳಿ ಈತನು ಅಲ್ಲೆ ಟ್ರ್ಯಾಕ್ಟರ್ ಪಕ್ಕದಲ್ಲಿ ನಿಂತಿದ್ದು. ಅಪಘಾತಮಾಡಿದ ಟ್ರ್ಯಾಕ್ಟರ್ ನಂ ಕೆಎ-32 ಟಿಬಿ-0070 ಮತ್ತು ಟ್ರ್ಯಾಲಿ ನಂ ಕೆಎ-32 ಟಿಬಿ-0071 ಅಂತ ಇರುತ್ತದೆ. ದೇವರಾಜನಿಗೆ ಮತ್ತು ಆಕಾಶನಿಗೆ ಉಪಚಾರ ಕುರಿತು ನಾನು ಮತ್ತು ನನ್ನ ಚಿಕ್ಕಪ್ಪ ಶರಬಣ್ಣಗೌಡ ಇಬ್ಬರು ಕೂಡಿ ಅಲ್ಲೆ ಹೋರಟ್ಟಿದ್ದ ಒಂದು ಕಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಆಕಾಶನಿಗೆ ಮತ್ತು ದೇವರಾಜನಿಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಆಕಾಶ ಮತ್ತು ದೇವರಾಜನಿಗೆ ಶರಬಣ್ಣಗೌಡನು ಅಂಬುಲೇನ್ಸದಲ್ಲಿ ಕರೆದುಕೊಂಡು ಮೀರಜ್ದ .ಡಾ|| ಜಿ,ಎಸ್, ಕುಲ್ಕಣರ್ಿ ಆಸ್ಪತ್ರೆಗೆ ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ಮಹೇಶ ಕುಮಾರನಿಗೆ ಸಣ್ಣ ಪುಟ್ಟ ಗುಪ್ತ ಗಾಯವಾಗಿದ್ದರಿಂದ ಉಪಚಾರ ಮಾಡಿಸಿಕೊಂಡಿರುವುದಿಲ್ಲಾ. ನಮ್ಮ ಹಿರಿಯರಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 230/2021 ಕಲಂ: 279, 337, 338, ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 75/2021 ಕಲಂ 505(1)(ಬಿ), 505(2), 504 ಐ.ಪಿ.ಸಿ : ದಿನಾಂಕ:07/10/2021 ರಂದು 7 ಪಿ.ಎಮ್. ದಿಂದ 8 ಪಿ.ಎಮ್. ಅವಧಿಯಲ್ಲಿಆರೋಪಿತನುತನ್ನ ಮೊಬೈಲನಲ್ಲಿ ವಾಟ್ಸ್ಅಪ್ ಸ್ಟೇಟಸ್ ಮೂಲಕ ಶ್ರೀರಾಮ ಸೇನೆ ಮತ್ತು ಭಜರಂಗ ದಳದ ಉತ್ತರಕನರ್ಾಟಕ ಭಾಗದ ಮಹಿಳಾ ಅಧ್ಯಕ್ಷರಾದ ಇವರ ಭಾಷಣವನ್ನುಎಡಿಟ್ ಮಾಡಿಕಾಮ್ಸೆ ಕಾಮಿನಿ ಅಂತಾಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿದ ವಿಡಿಯೋ ಸ್ಟೇಟಸ್ಇಟ್ಟುಧಾಮರ್ಿಕ ಭಾವನೆಗಳಿಗೆ ಧಕ್ಕೆಯಾಗುವಉದ್ದೇಶದಿಂದ ಬುದ್ದಿಪೂರ್ವಕವಾಗಿ ವಾಟ್ಸ್ಅಪ್ ಸ್ಟೇಟಸ್ ಮೂಲಕ ಸಾಮಾಜಿಕಜಾಲತಾಣದಲ್ಲಿ ಹರಿಬಿಟ್ಟ ಬಗ್ಗೆ ದೂರು.

 

 

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ : 99/2021 ಕಲಂ: 279, 337, 338, 304 (ಂ) ಐಪಿಸಿ : ಇಂದು ದಿನಾಂಕ: 08/10/2021 ರಂದು 04.15 ಪಿ.ಎಂಕ್ಕೆ ಪಿಯರ್ಾದಿ ಶ್ರೀ ವಿಶ್ವನಾಥ ತಂದೆ ಮಾನಪ್ಪ ಕಂಬಾರ ವಯ|| 39 ಜಾತಿ|| ವಿಶ್ವಕರ್ಮ ಉ|| ಪತ್ತಾರ ಕೆಲಸ ಸಾ|| ಏವೂರ ತಾ|| ಸುರಪೂರ ಹಾ.ವ|| ಕಲಬುಗರ್ಿ ಶಹಾಬಜಾರ ನಾಕಾ ಇವರು ಠಾಣೆಗೆ ಬಂದು ಒಂದು ದಸ್ತೂರ ಮೂಲಕ ಬರೆಯಿಸಿದ ಅಜರ್ಿ ಹಾಜರ ಪಡೆಸಿದ್ದು ಅದರ ಸಾರಂಶ ಏನಂದರೆ, ನಮ್ಮ ತಾಯಿಯಾದ ಕರುಣಾದೇವಿ ಗಂಡ ಮಾನಪ್ಪ ಕಂಬಾರ ವಯ|| 55 ಉ|| ಮನೆಗೆಲಸ ಜಾತಿ|| ವಿಶ್ವಕರ್ಮ ಸಾ|| ಏವೂರ ಇವರು ನಮ್ಮೂರಾದ ಏವೂರದಲ್ಲಿ ವಾಸವಾಗಿದ್ದರು ನಾನು ಕಲಬುಗರ್ಿಯಲ್ಲಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳ ಜೋತೆ ವಾಸವಾಗಿದ್ದೆನೆ ಹಿಗಿದ್ದು ಮೊನ್ನೆ ದಿನಾಂಕ: 06/10/2021 ರಂದು ನನ್ನ ತಾಯಿ ಕರುಣಾದೇವಿ ನಮ್ಮ ಚಿಕ್ಕಪ್ಪನ ಮಗ ಶರಣಬಸವ ತಂಗಿ ಇವರಿಗೆ ಹೆರಿಗೆಯಾಗಿದ್ದರಿಂದ ಶಹಾಪೂರಕ್ಕೆ ನಮ್ಮೂರಿನ ಗೌಡರ ಬೊಲರೊ ವಾಹನ ಸಂಖ್ಯೆ ಕೆ.ಎ-32 ಪಿ-7553 ನೇದ್ದನ್ನು ತೆಗೆದುಕೊಂಡು ಅವರ ಚಾಲಕನಾದ ನಿಂಗಣ್ಣ ತಂದೆ ಖಂಡಪ್ಪ ನಾಗಪ್ಪಗೊಳ ಸಾ|| ಏವೂರ ಇವನೊಂದಿಗೆ ಶಹಾಪೂರಕ್ಕೆ ಬಂದು ಮರಳಿ ಏವೂರ ಗ್ರಾಮಕ್ಕೆ ಹೋಗುವಾಗ ಅಂದಾಜು ಸಮಯ 9-00 ಪಿ.ಎಮ್ ಸುಮಾರಿಗೆ ಸದರಿ ಬೊಲೆರೊ ವಾಹನ ಚಾಲಕ ನಿಂಗಣ್ಣ ಈತನು ವಾಹನವನ್ನು ಅತಿವೇಗ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಹೋಗುತ್ತಾ ಶಹಾಪೂರ - ಸಿಂದಗಿ ಮೇನರೋಡ ದರ್ಶನಾಪೂರ ಕ್ರಾಸ ದಿಂದ ಅಂದಾಜು 1 ಕಿ.ಮೀ ಪಶ್ಚಿಮಕ್ಕೆ ರೋಡಿನಲ್ಲಿ ಅತಿವೇಗ ದಿಂದ ನಡೆಸುತ್ತಾ ವಾಹನ ನಿಯಂತ್ರಣ ತಪ್ಪಿ ರೋಡಿನ ಕೆಳಗೆ ಮರಕ್ಕೆ ಡಿಕ್ಕಿ ಹೊಡೆದ ಕಾರಣ ವಾಹನದಲ್ಲಿನ ನಮ್ಮ ತಾಯಿ ಕರುಣಾದೇವಿ ಹಣೆಗೆ ಮತ್ತು ತೆಲೆಯ ಹಿಂಬಾಗದಲ್ಲಿ ಭಾರಿ ರಕ್ತಗಾಯ ಪೆಟ್ಟುಗಳಾಗಿ ಬಲಗೈ ಮೊಳಕೈ ಹತ್ತಿರ ರಕ್ತಗಾಯದ ಪೆಟ್ಟಾಗಿದ್ದು ಎರಡು ಮೊಳಕಾಲುಗಳಿಗೆ ಭಾರಿ ಗುಪ್ತಾಗಾಯಗಳಾಗಿದ್ದು ನಮ್ಮ ಅಕ್ಕನವರಾದ ಬಸ್ಸಮ್ಮ ಬಡೆಗೇರ ಇವರಿಗೆ ಎದೆಗೆ ಗುಪ್ತ ಪೆಟ್ಟಾಗಿದ್ದು ಹಣೆಯ ಬಲಭಾಗದಲ್ಲಿ ರಕ್ತಗಾಯವಾಗಿದ್ದು ಶರಣಬಸವ ಈತನಿಗೆ ಮುಖಕ್ಕೆ ರಕ್ತಗಾಯವಾಗಿದ್ದು ಬೊಲೆರೋ ವಾಹನ ಚಾಲಕ ನಿಂಗಣ್ಣ ಈತನಿಗೆ ಕೈಗಳಿಗೆ ಎದೆಗೆ ಗುಪ್ತ ಪೆಟ್ಟುಗಳಾಗಿದ್ದು ಎಲ್ಲರಿಗೆ ಶಹಾಪೂರ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದೆವೆ ಎಂದು ಘಟನೆ ಸುದ್ದಿ ಕೇಳಿ ಸ್ಥಳಕ್ಕೆ ಬಂದು ನೋಡಿದ ನಮ್ಮೂರಿನ ಮೀರಾಜುದ್ದಿನ ತಂದೆ ಮೈಬೂಬ ಸಾಬ ಬಡಿಗೇರ , ಚನ್ನಪ್ಪಗೌಡ ಅನೌರ, ರಫಿಕಸಾಬ ಬಡಿಗೇರ, ಇವರುಗಳು ಎಲ್ಲಾಗಾಯಾಳುದಾರರನ್ನು ಶಹಾಪೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕಲಬುಗರ್ಿ ಯುನೈಟೆಡ ಆಸ್ಪತ್ರೆಗೆ ಸೇರಿಕೆಮಾಡಿದರು ನಾನು ಶಹಾಪೂರಕ್ಕೆ ಹೋಗಬೇಕೆಂದವನು ನಮ್ಮ ತಾಯಿಯವರಿಗೆ ಕಲಬುಗರ್ಿಗೆ ಕರೆದುಕೊಂಡು ಬರುತ್ತಿದ್ದರಿಂದ ಇಲ್ಲಿಯೇ ಉಳಿದು ಸದರಿ ಆಸ್ಪತ್ರೆಯಲ್ಲಿ ಹೋಗಿ ನೋಡಿದೆ ನಮ್ಮ ತಾಯಿಯವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಉಪಚಾರದಲ್ಲು ಗುಣಮುಖಹೊಂದದೆ ನಮ್ಮ ತಾಯಿ ಕರುಣಾದೇವಿಯವರು ದಿನಾಂಕ: 08/10/2021 ರಂದು ಬೆಳಿಗ್ಗೆ 10-50 ಎ.ಎಮ್ ಕ್ಕೆ ಯುನಟೈಡ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಬೊಲೆರೋ ವಾಹನ ನಂ: ಕೆ.ಎ-32 ಪಿ-7553 ಇದರ ಚಾಲಕ ನಿಂಗಣ್ಣ ತಂದೆ ಖಂಡಪ್ಪ ವಯ|| 38 ಸಾ|| ಏವೂರ ಈತನು ವಾಹನವನ್ನು ಅತಿವೇಗ ಮತ್ತು ಅಲಕ್ಷತನ ದಿಂದ ನಡೆಸಿ ಅಪಘಾತಮಾಡಿದ್ದು ಸದರಿಯವನ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕೆಂದು ಅಂತಾ ಅಜರ್ಿ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 99/2021 ಕಲಂ: 279, 337, 338, 304 (ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೇ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 09-10-2021 10:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080