ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-10-2022


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 118/2022 ಕಲಂ: 279, 337, 338 ಐಪಿಸಿ: :ದಿನಾಂಕ:07/10/2022 ರಂದು 10-30 ಪಿಎಮ್ ಕ್ಕೆ ಯಾದಗಿರಿ ಶರಣಬಸವ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದರಿಂದ ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು ನಮ್ಮ ಠಾಣೆಯ ಶ್ರೀ ಹುಲಗಪ್ಪ ಹೆಚ್.ಸಿ 03 ರವರಿಗೆ ನೇಮಕ ಮಾಡಿ ಕಳುಹಿಸಿದ್ದು, ಸದರಿಯವರು ಇಂದು ದಿನಾಂಕ:08/10/2022 ರಂದು ಬೆಳಗ್ಗೆ ಯಾದಗಿರಿಯ ಶರಣಬಸವ ಆಸ್ಪತ್ರೆಗೆ ಭೇಟಿ ನೀಡಿ ಆರ್.ಟಿ.ಎ ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಆಸ್ಪತ್ರೆಯಲ್ಲಿದ್ದ ಗಾಯಾಳುಗಳಿಗೆ ವಿಚಾರಿಸಿದಾಗ ಗಾಯಾಳು ಶ್ರೀ ಶರಣಬಸವ ತಂದೆ ಸಿದ್ದಪ್ಪ ಕುರುಕುಂದಿ, ವ:19, ಜಾ:ಕುರುಬರ, ಉ:ಒಕ್ಕಲುತನ ಸಾ:ಹೊರಟೂರು ತಾ:ವಡಗೇರಾ ಇವರು ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದನ್ನು ಸ್ವಿಕೃತ ಮಾಡಿಕೊಂಡು ಮರಳಿ 5-30 ಪಿಎಮ್ ಕ್ಕೆ ಠಾಣೆಗೆ ಬಂದು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ತಂದೆ-ತಾಯಿಯೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ:07/10/2022 ರಂದು ಸಾಯಂಕಾಲ ನಮ್ಮ ಸಂಬಂಧಿಕರಲ್ಲಿ ಒಬ್ಬರದು ಹುಟ್ಟಿದ ಹಬ್ಬ (ಬರ್ತಡೆ) ಇದ್ದುದ್ದರಿಂದ ಯಾದಗಿರಿಗೆ ಹೋಗಿ ಕೇಕ ತೆಗೆದುಕೊಂಡು ಬರೋಣ ಎಂದು ನಾನು ಮತ್ತು ನಮ್ಮ ಸಂಬಂಧಿಕ ಶರಣಪ್ಪ ತಂದೆ ಮಲ್ಲಪ್ಪ ಪೂಜಾರಿ ಸಾ:ಹೊರಟೂರು ಇಬ್ಬರೂ ಮೋಟರ್ ಸೈಕಲ್ ನಂ. ಕೆಎ 33 ಇಬಿ 6996 ನೇದರ ಮೇಲೆ ಹೊರಟೇವು. ಶರಣಪ್ಪನು ಮೋಟರ್ ಸೈಕಲ್ ಚಲಾಯಿಸುತ್ತಿದ್ದು, ನಾನು ಹಿಂದುಗಡೆ ಕುಳಿತುಕೊಂಡಿದ್ದೇನು. ಯಾದಗಿರಿ-ವಡಗೇರಾ ಮೇನ ರೋಡ ಆನಂದ್ರ ಮಿಲ್ಟ್ರಿ ಇವರ ಹೊಲದ ಸಮೀಪ 6-30 ಪಿಎಮ್ ಸುಮಾರಿಗೆ ಹೋಗುತ್ತಿದ್ದಾಗ ಶರಣಪ್ಪನು ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಾನು ನಿಧಾನವಾಗಿ ಹೋಗು ಎಂದು ಹೇಳಿದರು. ಅವನು ಕೇಳದೆ ಅದೇ ವೇಗದಲ್ಲಿ ಮುಂದುವರೆದನು. ಅಷ್ಟರಲ್ಲಿ ಎದುರುಗಡೆ ಯಾದಗಿರಿ ಕಡೆಯಿಂದ ಮೋಟರ್ ಸೈಕಲ್ ನಂ. ಕೆಎ 33 ಡಬ್ಲ್ಯೂ 0216 ನೇದನ್ನು ಅದರ ಸವಾರ ರವಿಕುಮಾರ ತಂದೆ ನಾಗೇಂದ್ರ ಅಗಸರ ಸಾ:ಉಳ್ಳೆಸೂಗೂರು ಈತನು ತನ್ನ ಮೋಟರ್ ಸೈಕಲ್ ಅನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಅದೇ ವೇಗದಲ್ಲಿ ಬರುತ್ತಿದ್ದು, ಇಬ್ಬರೂ ಮೋಟರ್ ಸೈಕಲ್ ಸವಾರರು ತಮ್ಮ ತಮ್ಮ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟರ್ ಸೈಕಲಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿಪಡಿಸಿದರು. ಈ ಅಪಘಾತದಲ್ಲಿ ನನಗೆ ತಲೆಗೆ ಒಳಪೆಟ್ಟು, ಮೂಗಿಗೆ ಒಳಪೆಟ್ಟು, ಎರಡು ಮೊಣಕೈಗಳಿಗೆ ಒಳಪೆಟ್ಟು ಆಗಿ ಬಲಗಾಲಿನ ಗೆಜ್ಜೆ ಒಳಗಡೆ ಒಳಪೆಟ್ಟಾಗಿತ್ತು. ನಾವು ಹೊರಟ ಮೋಟರ್ ಸೈಕಲ್ ಚಲಾಯಿಸುತ್ತಿದ್ದ ಶರಣಪ್ಪನಿಗೆ ತಲೆಯ ಮುಂಭಾಗಕ್ಕೆ ಭಾರಿ ರಕ್ತಗಾಯ, ಬಲಗಡೆ ಗದ್ದಕ್ಕೆ ಒಳಪೆಟ್ಟು ಮತ್ತು ಬಲಗೈಗೆ ಬಲವಾದ ಒಳಪೆಟ್ಟಾಗಿತ್ತು. ಎದುರುಗಡೆಯಿಂದ ಬಂದ ಮೋಟರ್ ಸೈಕಲ್ ಸವಾರ ರವಿಕುಮಾರನಿಗೆ ಕೂಡಾ ಅಪಘಾತದಲ್ಲಿ ಎಡಗಣ್ಣಿಗೆ ಭಾರಿ ರಕ್ತಗಾಯ, ಎಡಗಾಲ ಪಾದಕ್ಕೆ ಭಾರಿ ರಕ್ತಗಾಯ ಮತ್ತು ಅಲ್ಲಲ್ಲಿ ಭಾರಿ ಮತ್ತು ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದವು. ಆಗ ಅಲ್ಲಿಯೇ ರಸ್ತೆ ಮೇಲೆ ಹೋಗುತ್ತಿದ್ದ ಸಾಬಣ್ಣ ತಂದೆ ರಾಮಪ್ಪ ದೊಡ್ಡಮನಿ ಸಾ:ಹುಲಕಲ್ (ಜೆ) ಮತ್ತು ಇತರರು ಬಂದು ನೋಡಿ ನಮಗೆ ಮೂರು ಜನರಿಗೆ ಉಪಚಾರ ಕುರಿತು ಖಾಸಗಿ ವಾಹನಗಳಲ್ಲಿ ಹಾಕಿ ಯಾದಗಿರಿಕ್ಕೆ ಕಳುಹಿಸಿದರು. ನನಗೆ ಮತ್ತು ಶರಣಪ್ಪನಿಗೆ ಯಾದಗಿರಿಯ ಶರಣಬಸವ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ರವಿಕುಮಾರನಿಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಎಂದು ಕೇಳಿ ಗೊತ್ತಾಗಿರುತ್ತದೆ. ಕಾರಣ ಇಬ್ಬರೂ ಮೋಟರ್ ಸೈಕಲ್ ಸವಾರರು ತಮ್ಮ ತಮ್ಮ ಮೋಟರ್ ಸೈಕಲಗಳನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿಪಡಿಸಿದ್ದರಿಂದ ಈ ಅಪಘಾತ ಸಂಭವಿಸಿರುತ್ತದೆ. ಸದರಿಯವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 118/2022 ಕಲಂ: 279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 112/2022 ಕಲಂ ಯುವತಿ ಕಾಣೆಯಾದ ಬಗ್ಗೆ: ಇಂದು ದಿನಾಂಕ 08.10.2022 ರಂದು ಸಾಯಂಕಾಲ 6.00 ಗಂಟೆಗೆ ಫಿಯರ್ಾದಿ ಠಾಣೆಗೆ ಹಾಜರಾಗಿ ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ನನ್ನ ಮಗಳು ಜ್ಯೋತಿ ಇವಳು ದಿನಾಂಕ 05.10.2022 ರಂದು ರಾತ್ರಿ 11 ಗಂಟೆಗೆ ಮನೆಯಿಂದ ಬಯಲು ಶೌಚಕ್ಕೆ ಹೋಗಿ ಬರುತ್ತೇನೆ ಅಂತಾ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ. ರಾತ್ರಿ 12 ಗಂಟೆಗೆ ಮನೆಯವರೆಲ್ಲರೂ ಎದ್ದು ಚೆಕ ಮಾಡಿದ್ದು ಎಲ್ಲಿಯೂ ಕಂಡಿರುವದಿಲ್ಲ. ನಂತರ ದುಪ್ಪಲ್ಲಿ ಕಡೆಗೆ ಹೋಗುವ ರಸ್ತೆ ಮತ್ತು ಎನ್.ಹೆಚ್.-150 ಕಡೆಗೆ ಹೋಗುವ ರಸ್ತೆ ಕಡೆಗೆ ಹೋಗಿ ಹುಡುಕಾಡಿದರು ಸಿಕ್ಕಿರುವದಿಲ್ಲ. ನಂತರ ನಮ್ಮ ಸಂಬಂಧಿಕರ ಗ್ರಾಮಗಳಾದ ಮಕ್ತಲ್, ಲಿಂಗಂಪಲ್ಲಿ, ಮಕರ್ೆಲಗಳಲ್ಲಿ ವಿಚಾರಿಸಿದ್ದು ನನ್ನ ಮಗಳು ಎಲ್ಲಿಯೂ ಪತ್ತೆಯಾಗಿರುವದಿಲ್ಲ. ಕಾಣೆಯಾದ ನನ್ನ ಮಗಳ ಚಹರೆ ಸಾದಾರಣ ಮೈಕಟ್ಟು, ಸಾದಾಗಪ್ಪು ಮೈಬಣ್ಣ, ದುಂಡು ಮೂಗು ಹೊಂದಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಪಂಜಾಬಿ ಡ್ರೆಸ ಧರಿಸಿದ್ದು, ನನ್ನ ಮಗಳು ಕನ್ನಡ, ತೆಲಗು, ಹಿಂದಿ ಭಾಷೆಯನ್ನು ಮಾತನಾಡುತ್ತಾಳೆ. ಕಾಣೆಯಾದ ನನ್ನ ಮಗಳನ್ನು ಎಲ್ಲಾ ಕಡೆಗೆ ಹುಡುಕಾಡಿ ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಎಲ್ಲಿಯಾದರು ಇರುವ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪತ್ತೆ ಮಾಡಿಕೊಡಬೇಕು ಅಂತ ದೂರು ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 112.2022 ಕಲಂ. ಯುವತಿ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 170/2022 ಕಲಂ 87 ಕೆ.ಪಿ ಆಕ್ಟ: ಇಂದು ದಿನಾಂಕ 08.10.2022 ರಂದು 15.00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ರಾಹುಲ್ ಪವಾಡೆ ಪಿ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ಇವರು 5 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ದಿನಾಂಕ : 08.10.2022 ರಂದು 17.40 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಮರೆಮ್ಮ ದೇವಿಯ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರೂ ಇಸ್ಪೇಟ್ ಎಲೆಗಳ ಸಹಾಯದಿಂದ ಅದರ-ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಕುರಿತು ಫಿರ್ಯಾದಿಯವರು ಠಾಣೆಯ ಶ್ರೀ ಶಿವಲಿಂಗಪ್ಪ ಹೆಚ್ಸಿ-185, ಶ್ರೀ ಬಾಬು ಹೆಚ್ ಸಿ 162, ಶ್ರೀ ಧರ್ಮರಾಜ ಪಿ.ಸಿ.45 ಹಾಗು ಶ್ರೀ ಬಾಗಣ್ಣ ಪಿಸಿ 194, ಭೀಮಣಗೌಡ ಪಿಸಿ 402 ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ಕೆಎ-33 ಜಿ-0316 ನೇದ್ದರಲ್ಲಿ 16.10 ಗಂಟೆಗೆ ದಾಳಿ ಮಾಡಿ 5 ಜನ ಆರೋಪಿತರನ್ನು ಹಿಡಿದು ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 20,050=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು 16-10 ಗಂಟೆ ಇಂದ 17-10 ಗಂಟೆಯ ವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 170/2022 ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 136/2022 ಕಲಂ: 379 ಐಪಿಸಿ : ಇಂದು ದಿನಾಂಕ:08/10/2022 ರಂದು ಮದ್ಯಾಹ್ನ 4:15 ಗಂಟೆಗೆ ಪಿಯರ್ಾದಿ ಶ್ರೀ ರಾಮ್ ತಂದೆ ದೇವಿಂದ್ರಪ್ಪಗೌಡ ಮಾಲಿ ಪಾಟೀಲ ವ|| 24 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ದೇವರಗೊನಾಲ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಮ್ಮದೊಂದು ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂಬರ ಏಂ-33-ಘ-9971(ಅಊಇಖಖ ಓಔ ಒಃಐಊಂಖ077ಎ4ಅ08875 ಇಓಉಓಇ ಓಔ. ಊಂ10ಂಉಎ4ಅ14926) ನೇದ್ದು ನಮ್ಮ ಅಣ್ಣ ಕಾಮಣಗೌಡ ತಂದೆ ದೇವಿಂದ್ರಪ್ಪಗೌಡ ಮಾಲಿ ಪಾಟೀಲ ಈತನ ಹೆಸರಿನಲ್ಲಿ ಇರುತ್ತದೆ. ಹಿಗಿದ್ದು ದಿನಾಂಕ 27/09/2022 ರಂದು ಸುರಪುರ ಪಟ್ಟಣದ ಶ್ರೀ ಪ್ರಭು ಕಾಲೇಜ ಮೈದಾನದಲ್ಲಿ ತಾಲೂಕಾ ಮಟ್ಟದ ವಾಷರ್ಿಕ ಕ್ರೀಡಾಕೂಟ ಇದ್ದುದರಿಂದ ನೋಡಲು ನಾನು ಮತ್ತು ನಮ್ಮೂರ ಮಾನಯ್ಯ ತಂದೆ ನಿಂಗಪ್ಪ ತೆಳಗಿನಮನಿ ಇಬ್ಬರು ಕೂಡಿಕೊಂಡು ಮೇಲ್ಕಂಡ ಮೋಟರ ಸೈಕಲ್ ಮೇಲೆ ನಮ್ಮೂರು ದೆವರಗೊನಾಲದಿಂದ ಮದ್ಯಾಹ್ನ 12 ಗಂಟೆ ಸುಮಾರಿಗೆ ಶ್ರೀ ಪ್ರಭು ಕಾಲೇಜಿನ ಮೈದಾನಕ್ಕೆ ಬಂದು ಕಾಲೇಜಿನ ಮಹಾದೇವಪ್ಪ ರಾಂಪೂರೆ ರವರ ಪುತ್ಥಳಿ ಹತ್ತಿರ ಮೋಟರ ಸೈಕಲ್ ನಿಲ್ಲಿಸಿ ಆಟಗಳನ್ನು ನೋಡಲು ಹೋದೆವು. ನಂತರ ಮದ್ಯಾಹ್ನ 2 ಗಂಟೆ ಸುಮಾರಿಗೆ ಊಟಕ್ಕೆ ಹೋದರಾಯಿತು ಅಂತ ನಾನು ಮತ್ತು ಮಾನಯ್ಯ ಇಬ್ಬರು ಕೂಡಿಕೊಂಡು ಮೋಟರ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ಮೋಟರ ಸೈಕಲ್ ಕಾಣಿಸಲಿಲ್ಲ. ನಂತರ ಸುತ್ತಮುತ್ತ ಹುಡುಕಾಡಲು ಎಲ್ಲಿಯೂ ಕಾಣಿಸದ ಕಾರಣ ನಮ್ಮ ಅಣ್ಣ ಕಾಮಣಗೌಡ ಈತನಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ನಮ್ಮ ಅಣ್ಣ ಮತ್ತು ನಮ್ಮೂರಿನ ದೇವರಾಜ ತಂದೆ ಮಾನಯ್ಯ ಜಾಲಹಳ್ಳಿ ಕೂಡಿಕೊಂಡು ಸುರಪುರಕ್ಕೆ ಬಂದಾಗ ಎಲ್ಲರು ಕೂಡಿಕೊಂಡು ಸುರಪುರ ಪಟ್ಟಣದ ಎಲ್ಲಾ ಕಡೆ ಹುಡುಕಾಡಲಾಗಿ ನಮ್ಮ ಮೋಟರ ಸೈಕಲ್ ಸಿಕ್ಕಿರುವದಿಲ್ಲ. ಕಾರಣ ದಿನಾಂಕ 27/09/2022 ರಂದು ಮದ್ಯಾಹ್ನ 12 ಗಂಟೆಯಿಂದ ಮದ್ಯಾಹ್ನ 2:00 ಗಂಟೆಗೆ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ್ ಮೋಟರ ಸೈಕಲ್ ನಂಬರ ಏಂ-33-ಘ-9971 ಅ.ಕಿ 35,000=00 ನೇದ್ದು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಮತ್ತು ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ನಮ್ಮ ಮೋಟರ ಸೈಕಲ್ ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ಕಳುವಾದ ನನ್ನ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 136/2022 ಕಲಂ: 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 38/2021 ಕಲಂ: 78 (3) ಕೆ.ಪಿ ಯಾಕ್ಟ್: ದಿನಾಂಕ: 08/10/2022 ರಂದು 3:15 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ದೇವೆಂದ್ರರೆಡ್ಡಿ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ, ತಾವು ಠಾಣೆಯಲ್ಲಿ ಇದ್ದಾಗ 1:20 ಪಿ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪೂರ ಗ್ರಾಮದ ವಾಲ್ಮಿಕಿ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 38/2022 ಕಲಂ: 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಯಾದಗಿರಿ ಸಿ.ಇ.ಎನ್ ಪೊಲೀಸ್ ಠಾಣೆ:-
ಗುನ್ನೆ ನಂ: 09/2022 ಕಲಂ. 15(ಎ), 32(3) ಕೆ.ಇ ಆಕ್ಟ್: ಇಂದು ದಿನಾಂಕ: 08-10-2022 ರಂದು 5-15 ಪಿ.ಎಮ್.ಕ್ಕೆ ಆರೋಪಿತನು ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮದ ತನ್ನ ತಟ್ಟಸಿ ಹೊಟೇಲನ ಸಾರ್ವಜನಿಕ ಸ್ಥಳದಲ್ಲಿ ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಐ ರವರು ಸಂಗಡ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿ ಸ್ಥಳದಲ್ಲಿ ಸಿಕ್ಕ ಅಂದಾಜು 1545.72/- ರೂ ಕಿಮ್ಮತ್ತಿನ 3,960 ಎಮ್.ಎಲ್ ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 113/2022 ಕಲಂ 279, 337 ಐಪಿಸಿ:ದಿನಾಂಕ 08.10.2022 ರಂದು ಮಧ್ಯಾಹ್ನ 4-40 ಗಂಟೆ ಸುಮಾರಿಗೆ ದೂರುದಾರ ಮತ್ತು ಅವರ ಕಾರ ನಂಬರ ಮಾರುತಿ ಸುಜುಕಿ ಬ್ರೀಜಾ ಕಾರ ನಂಬರ ಕೆ.ಎ-27, ಎನ್-3414 ನೇದ್ದರ ಚಾಲಕ ಇಬ್ಬರು ಕೂಡಿಕೊಂಡು ತಮ್ಮ ಕಾರನಲ್ಲಿ ಯಾದಗಿರಿಯಿಂದ ರಾಯಚೂರು ಕಡೆಗೆ ಹೊರಟಾಗ ಸಮಯ 4.40 ಗಂಟೆಗೆ ರಾಯಚೂರ ಕಡೆಯಿಂದ ಎದುರುಗಡೆಗೆ ಬಂದ ಲಾರಿ ನಂಬರ ಎಮ್.ಹೆಚ್-12, ಕೆ.ಪಿ-6073 ನೇದ್ದರ ಮೇಲೆ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರಗೆ ಡಿಕ್ಕಿಪಡಿಸಿದ್ದರಿಂದ ಅಪಘಾತದಲ್ಲಿ ಫಿಯರ್ಾದಿಗೆ ತಲೆಯ ಮೇಲೆ ರಕ್ತಗಾಯವಾಗಿದ್ದು, ಎಡಕಾಲಿಗೆ ಒಳಪೆಟ್ಟಾಗಿರುತ್ತದೆ. ಕಾರ ಚಾಲಕನಿಗೆ ಮೂಗಿಗೆ, ಬಾಯಿಗೆ, ಬಲಗಾಲಿಗೆ ಮತ್ತು ಬೆನ್ನು ಮೂಳೆಗೆ ಒಳಪೆಟ್ಟಾಗಿರುತ್ತದೆ ಅಂತ ದೂರು ಸಾರಾಂಶ ಇರುತ್ತದೆ.

ಇತ್ತೀಚಿನ ನವೀಕರಣ​ : 09-10-2022 11:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080