ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-11-2021

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 150/2021 ಕಲಂ. 323,324,326,504,506.ಐ.ಪಿ.ಸಿ ಕಾಯ್ದೆ : ದಿನಾಂಕ 08/11/2021 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಈಸ್ರಾ ತಂದೆ ಲೋಕ್ಯಾ ರಾಠೋಡ ವಯಾಃ 55 ವರ್ಷ ಜಾಃ ಲಮಾಣಿ ಉಃ ಒಕ್ಕಲುತನ ಸಾಃ ಲಿಂಗ್ಸನಳ್ಳಿ ತಾಂಡಾ ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನನ್ನ ತಂದೆಗೆ ನಾವು ಮೂರು ಜನ ಗಂಡು ಮಕ್ಕಳಿದ್ದು ನನ್ನ ದೊಡ್ಡಣ್ಣನು ಸುಮಾರು ವರ್ಷಗಳ ಹಿಂದೆ ಮೃತ ಪಟ್ಟಿರುತ್ತಾನೆ.ಸದ್ಯ ನಮ್ಮ ತಮ್ಮನಾದ ಥಾವರು ರಾಠೊಡ ಇಬ್ಬರಿರುತ್ತವೆ.ನಮ್ಮಿಬ್ಬರ ನಡುವೆ 2 1/2 ಎಕರೆ ಕೃಷಿ ಜಮೀನು ಇದ್ದು ಅದರಲ್ಲಿ 2 ಬೋರವೆಲ್ ಹಾಕಿರುತ್ತೆವೆ ಅದರಲ್ಲಿ ಒಂದು ಬೊರವೆಲ್ ಸುಟ್ಟು ಹೋಗಿರುತ್ತದೆ.ಆದರೆ ಸದರಿ 2 ಳಿ ಎಕರೆ ಜಮೀನು ನನ್ನ ತಮ್ಮ ಥಾವರು ಇತನೆ ನೋಡಿಕೊಂಡು ಹೋಗುತ್ತಾನೆ ನಾನು ಬೇರೆ ಹೊಲ ಪಾಲಿಗೆ ಮಾಡಿಕೊಂಡು ಹೋಗುತ್ತಿರುತ್ತೆನೆ. ನನ್ನ ತಮ್ಮ ಥಾವರು ಇತನಿಗೆ ನಾನು 2500/- ರೂ ಕೊಡಬೇಕಾಗಿತ್ತು ಆದರೆ ನನ್ನ ಹತ್ತಿರ ಹಣ ಇಲ್ಲಾ ಹತ್ತಿ ಮಾರಿಕೊಂಡು ಬಂದು ಕೋಡುತ್ತೆನೆ ಅಂತಾ ಹೇಳಿದ್ದೆನು. ಹೀಗಿರುವಾಗ ಇಂದು ದಿನಾಂಕ 08/11/2021 ರಂದು ಮುಂಜಾನೆ 6-30 ಗಂಟೆಯ ಸುಮಾರಿಗೆ ನಾನು, ನನ್ನ ಮನೆಯಲ್ಲಿರುವಾಗ ಆಗ ಥಾವರು ರಾಠೋಡ ಬಂದು ನನಗೆ 2500/-ರೂ ಕೊಡು ನಾನು ಬೊರವೇಲ್ ರೀಪೆರಿ ಮಾಡಿಸುತ್ತೆನೆ ಅಂತಾ ಕೇಳಿದಾಗ ನಾನು ಸ್ವಲ್ಪ ತಡೆ ನಾನು ಇವತ್ತು ನಿನ್ನ ಹಣವನ್ನು ಕೋಡುತ್ತೆನೆ ಅಂತಾ ಹೇಳಿದರು ಥಾವರು ರಾಠೋಡ ಇತನು ಇಲ್ಲಾ ನನಗೆ ಹಣ ಕೊಡಲೇಬೇಕು ಸೂಳೇ ಮಗನೆ ದುಡ್ಡು ಕೊಡಲು ಆಗೂದಿಲ್ಲ ನಿನಗೆ ರಂಡಿ ಮಗನೆ ಎಷ್ಟು ಅಂತಾ ಹೇಳೊದು ನಿನಗೆ ಅಂತಾ ಅವಾಚ್ಯಾ ಶಬ್ದಗಳಿಂದ ಬೈದು ತನ್ನ ಕೈಯಲ್ಲಿದ್ದ ಕೊಡಲಿ ಕಾವಿನಿಂದ ನನ್ನ ತೆಲೆಯ ಹಿಂದಿನ ಭಾಗಕ್ಕೆ ಹೋಡೆದಿದ್ದು ಭಾರಿ ರಕ್ತ ಗಾಯವಾಗಿರುತ್ತದೆ ಮತ್ತು ಬಲಗೈ ಮೋಳಕೈಯಿಗೆ, ಅಂಗೈಗೆ, ಮತ್ತು ಕಾಲಿಗೆ ಹೊಡೆದು ಗುಪ್ತಗಾಯಗಳಾಗಿರುತ್ತವೆ ಈ ಜಗಳವನ್ನು ಬಿಡಿಸಲು ನನ್ನ ಹೆಂಡತಿ ತಾರಿಬಾಯಿ ಬಂದಾಗ ಆಕೆಗೂ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹೊಡೆದು ಎಡಮೊಳಕೈಗೆ ಗಾಯಗೋಳಿಸಿದ್ದು ಉದಿಕೊಂಡಿರುತ್ತದೆ ದಬ್ಬಿ ಕೊಟ್ಟಿದ್ದರಿಂದ ತೋಡೆಯ ಹಿಂದೆ ಬಾರಿ ಗುಪ್ತ ಗಾಯಪಡಿಸಿದ್ದು. ಆಗ ನಾವು ಚಿರಾಡುತ್ತಿರುವಾಗ ಇದನ್ನು ನೋಡಿದ ನಮ್ಮ ತಾಂಡದವರೆಯಾದ ರಾಜು ತಂದೆ ಸುಭಾಷ ರಾಠೋಡ ಮತ್ತು ಮನೋಹರ ತಂದೆ ಕ್ಯೂಬ್ಯಾ ರಾಠೋಡ ಇವರುಗಳು ಕೂಡಿಕೊಂಡು ಜಗಳ ನೋಡಿ ಬಿಡಿಸಿರುತ್ತಾರೆ, ಜಗಳ ಬಿಟ್ಟು ಹೋಗುವಾಗ ಇವತ್ತು ಉಳಿದಿರಿ ಸೂಳೇ ಮಕ್ಕಳೇ ಇನ್ನೊಂದು ಸಲ ನನ್ನ ಕೈಗೆ ಸಿಕ್ಕರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಹೋಗಿರುತ್ತಾರೆ, ಕಾರಣ ಅವನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ, ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 150/2021 ಕಲಂ 323, 324, 326, 504, 506. ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 118/2021 ಕಲಂ: 406, 420 ಐಪಿಸಿ : ಇಂದು ದಿನಾಂಕ; 08/11/2021 ರಂದು 6-30 ಪಿಎಮ್ ಕ್ಕೆ ಪಿರ್ಯಾಧಿದಾರರಾ ಶ್ರೀ ಶ್ರೀ ಭಕ್ಕಪ್ಪ ತಂದೆ ಸಂಭಣ್ಣ ಹೊಸಮನಿ ವ;55 ಜಾ; ಹೊಲೆಯ ಉ; ಪ್ರಭಾರ ನಗರಸಭೆ ಆಯುಕ್ತರರು ಯಾದಗಿರಿ ಸಾ; ಕುಂಬಾರವಾಡ ಬ್ಯಾಂಕ ಕಾಲೋನಿ ಬೀದರ ಹಾ.ವ; ಪಿ.ಡಬ್ಲೂ.ಡಿ ಕ್ವಾಟ್ರಸ ಡಿ.ಸಿ ಆಫೀಸ ಹಿಂದುಗಡೆ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲ್ಲಿಸಿದ್ದರ ಸಾರಾಂಶವೆನೆಂದರೆ, ಶ್ರೀ ಲಿಂಗಪ್ಪ ಪಂಪ ಆಪರೇಟರ್ (ಸಮಾನ ಕೆಲಸಕ್ಕೆ ಸಮಾನ ವೇತನ ನೌಕರ) ನೀರಿನ ಕರ ವಸೂಲಿ ಸಹಾಯಕ, ನಗರಸಭೆ ಯಾದಗಿರಿ ಪ್ರಸ್ತೂತ ಸೇವೆಯಿಂದ ತಾತ್ಕಾಲಿಕವಾಗಿ ಅಮಾನತ್ತುಗೊಂಡಿರುವ ಸಿಬ್ಬಂದಿ ವಿರುದ್ದ ಶ್ರೀಮತಿ ಗೀತಾ ದೊಡ್ಡಮನಿ ಗಂಡ ಪ್ರಕಾಶ ಕುಮಾರ ದೊಡ್ಡಮನಿ ಚಲನ್ ಸಂ. ಸಂ.51018ಙಆಉಔಅ09092021 ನಗರ ಸಭೇಯ ನೀರಿನ ತೆರಿಗೆ ಖಾತೆಯಲ್ಲಿ ಜಮಾ ಆಗದಿರುವ ಬಗ್ಗೆ ದೂರು ನೀಡಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ಜಿಲ್ಲೆ ಯಾದಗಿರಿ ಇವರು ದಿನಾಂಕ; 29/10/2021 ರಂದು ಸದರಿ ಸಿಬ್ಬಂದಿಗೆ ಸೇವೆಯಿಂದ ತಾತ್ಕಾಲಿಕವಾಗಿ ವಜಾಗೊಳಿಸಿದರೂ ಸಹಾ ಸದರಿಯವರು ನಿರ್ವಹಿಸುತ್ತಿರುವ ಫ್ರಭಾರ ಹಾಗೂ ನೀರಿನ ಶಾಖೆಗೆ ಸಂಭಂದಿಸಿದ ದಾಖಲೆಗಳು ಮತ್ತು ಇತರೆ ಯಾವುದೇ ದಾಖಲೆಗಳನ್ನು ಕಛೇರಿಗೆ ವಹಿಸಿರುವುದಿಲ್ಲ. ಹಾಗೂ ಸದರಿ ಸಿಬ್ಬಂದಿಯವರಿಗೆ ದೂರವಾಣಿ ಮೂಲಕ ಕರೆ ಮಾಡಿ ಅಲಮಾರಿ ಬೀಗ(ಕೀ)ವನ್ನು ಮತ್ತು ಪ್ರಭಾರವನ್ನು ಕೊಡಲು ಸೂಚಿಸಿದರು ಸಹಾ ಇನ್ನೂವರೆಗೆ ನೀಡಿರುವುದಿಲ್ಲ. ಶ್ರೀಮತಿ ರಶೀದಾ ಗಂಡ ಸೈಯದ ಅನ್ವರ ಹುಸ್ಸೇನ್ ಇವರು ಶ್ರೀ ಸಲೀಮ ಅಹ್ಮದ ತಂದೆ ಫಜ್ಲೂರ್ ರೆಹಮಾನ್ ಇವರ ಮನೆಯಲ್ಲಿ ಬಾಡಿಗೆ ಇದ್ದು ಸದರಿಯವರ ನೀರಿನ ತೆರಿಗೆ ರೂ.7480/-ಗಳನ್ನು ನೀಡಿದ್ದು, ರೂ.3480/-ಚಲನ್ ಸಂ.51557ಙಆಉಔಅ13092021 ನೀಡಿರುತ್ತಾರೆ ಸದರಿ ಚಾಲನ ಜಮಾ ಆಗಿರುವ ಅಥವಾ ಆಗದಿರುವ ಬಗ್ಗೆ ದೂರು ನೀಡಿರುತ್ತಾರೆ. ಪ್ರಯುಕ್ತ ಸದರಿ ಸಿಬ್ಬಂದಿಯು ಸಕರ್ಾರದ ನಿಧಿಯನ್ನು ದುರ್ಬಳಕೆ ಮಾಡಿರುವುದು ಕಂಡು ಬಂದಿರುತ್ತದೆ ಹಾಗೂ ಸಾರ್ವಜನಿಕರಿಂದ ದೂರು ಬಂದಿದ್ದು, ಸದರಿ ನೌಕರರ ವಿರುದ್ದ ದಾವೆ ಹೂಡಿ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಈ ಮೂಲಕ ಕೋರಲಾಗಿದೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.118/2021 ಕಲಂ.406, 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

 

ಯಾದಗಿರ ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 56/2021 ಕಲಂ 279, 338 ಐಪಿಸಿ : ಇಂದು ದಿನಾಂಕ 08/11/2021 ರಂದು 12-30 ಪಿ.ಎಂ.ದ ಸುಮಾರಿಗೆ ಯಾದಗಿರಿ-ಸೇಡಂ ಮುಖ್ಯ ರಸ್ತೆಯ ಯಾದಗಿರಿ ಸಮೀಪ ಚಾಮನಳ್ಳಿ ಕ್ರಾಸ್ ಹತ್ತಿರ ಎಸ್ಸಾರ್ ಪೆಟ್ರೋಲ್ ಬಂಕ್ ಮುಂದಿನ ಮುಖ್ಯ ರಸ್ತೆಯ ಮೇಲೆ ಈ ಕೇಸಿನ ಗಾಯಾಳು ಪಿಯರ್ಾದಿ ತಮ್ಮ ಮೋಟಾರು ಸೈಕಲ್ ಸ್ಕ್ಯೂಟಿ ನಂಬರ ಕೆಎ-51, ಎಚ್.ಎಫ್.-3588 ನೇದ್ದರ ಮೇಲೆ ಹೋಗುತ್ತಿದ್ದಾಗ ಈ ಕೇಸಿನ ಆರೋಪಿತ ತನ್ನ ಬುಲೆರೋ ಪಿಕಪ್ ಗೂಡ್ಸ್ ವಾಹನ ನಂಬರ ಕೆಎ-33, ಬಿ-0663 ನೇದ್ದನ್ನು ಬಂದಳ್ಳಿ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಪಿಯರ್ಾದಿಯವರ ಮೋಟಾರು ಸೈಕಲ್ ನೇದ್ದಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಪಿಯರ್ಾದಿಗೆ ಬಲಗಾಲಿನ ಪಾದದ ಮೇಲೆ ಭಾರೀ ರಕ್ತಗಾಯವಾಗಿದ್ದು ಇರುತ್ತವೆ. ಈ ಘಟನೆಗೆ ಕಾರಣನಾದ ಬುಲೆರೋ ಪಿಕಪ್ ಗೂಡ್ಸ್ ಚಾಲಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಬಗ್ಗೆ ತಡವಾಗಿ ನಿಡಿದ ಪಿಯರ್ಾದಿ ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

ಇತ್ತೀಚಿನ ನವೀಕರಣ​ : 09-11-2021 11:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080