ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-11-2022

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ:158/2022 ಕಲಂ. 279, 337, 338 ಐಪಿಸಿ & 177 ಐ.ಎಮ್ ವಿ ಕಾಯ್ದೆ : ದಿನಾಂಕ 08-11-2022 ರಂದು ಸಾಯಂಕಾಲ 06-00 ಗಂಟೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರ ಕಾರ್ಯಲಯದಿಂದ ಒಂದು ಜ್ಞಾಪನ ಪತ್ರ ಸಂಖ್ಯೆ 1096/ಪ್ರ.ಕ/ವಗರ್ಾವಣೆ/ವೈ.ಎಸ್.ಡಿ/2022 ದಿನಾಂಕ: 27-10-2022 ರ ಪ್ರಕಾರ ಗುರಮಿಠಕಲ್ ಪೊಲಿಸ್ ಠಾಣೆಯಿಂದ ಗುನ್ನೆ ವಗರ್ಾವಣೆಯಾಗಿದ್ದು ಅದರ ಸಾರಂಶವೆನೆಂದರೆ 14.10.2022 ರಂದು ಸಂಜೆ 7:30 ಗಂಟೆಯ ಸುಮಾರಿಗೆ ಆರೋಪಿತನಾದ ಮಂಜೂನಾಥನು ತನ್ನ ಮೋಟಾರು ಸೈಕಲ್ ನಂಬರ ಕೆಎ-33-ಇ.ಎ-0807 ನೇದ್ದರ ಮೇಲೆ ತನ್ನ ಮಾವನಾದ ಮಲ್ಲಪ್ಪನಿಗೆ, ತನ್ನ ತಾಯಿಯಾದ ಯಂಕಮ್ಮಳಿಗೆ ಕೂಡಿಸಿಕೊಂಡು ಕೊಡ್ಲಾ ದಿಂದ ಹೊನಗೇರಾ ಗ್ರಾಮಕ್ಕೆ ಬರುತ್ತಿದ್ದಾಗ ಭೀಮನಳ್ಳಿ ಗೇಟ್-ಬಾಚವಾರ ಗೇಟ್ಗಳ ನಡುವೆ ರೋಡಿನ ಮೇಲೆ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಿಸಲು ಸಾಧ್ಯವಾಗದೇ ಸ್ಕೀಡಾಗಿ ಬಿದ್ದಿದ್ದು ಅದರಲ್ಲಿ ಗಾಯಾಳುದಾರರಿಗೆ ಭಾರಿ ಹಾಗೂ ಸಾಧಾ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಳಾಗಿದ್ದು ಆ ಬಗ್ಗೆ ಫಿರ್ಯಾದಿ ಇದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 54/2022 ಕಲಂ 279, 338 ಐಪಿಸಿ: ಇಂದು ದಿನಾಂಕ 08/11/2022 ರಂದು ಬೆಳಿಗ್ಗೆ 12-15 ಪಿ.ಎಂ.ಕ್ಕೆ ರಾಯಚೂರಿನ ಮಾಕರ್ೆಟ್ ಯಾರ್ಡ ಪೊಲೀಸ್ ಸ್ಟೇಷನ್ ನಿಂದ ರಾಯಚೂರಿನ ಆರಾಧನಾ ಆಸ್ಪತ್ರೆಯಲ್ಲಿ ಪೋನ್ ಮೂಲಕ ಆರ್.ಟಿ.ಎ ಎಮ್.ಎಲ್.ಸಿ ಇರುತ್ತದೆ ಅಂತಾ ತಿಳಿಸಿದ್ದರಿಂದ ಎಮ್.ಎಲ್.ಸಿ ವಿಚಾರಣೆಗೆ ಶ್ರೀ ಮಾನಪ್ಪ ಎಚ್.ಸಿ-117 ರವರಿಗೆ ನೇಮಿಸಿ ಕಳಿಸಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ವಿಚಾರಣೆ ನಂತರ, ಗಾಯಾಳುವಿನ ತಂದೆಯಾದ ಪಿಯರ್ಾದಿ ಶ್ರೀ ಇಸ್ಮಾಯಿಲ್ ಪಾಶಾ ತಂದೆ ಜಿಲಾನಿಸಾಬ ಮುಲ್ಲಾನವರ್ ವಯ;28 ವರ್ಷ, ಜಾ;ಮುಸ್ಲಿಂ, ಉ;ಕೂಲಿ ಕೆಲಸ, ಸಾ;ಹೊನಗೇರಾ, ತಾ;ಜಿ;ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 7-15 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆಯ ಅಸಲು ಪ್ರತಿಯನ್ನು ಹಾಜರುಪಡಿಸಿದ್ದು, ಪಿಯರ್ಾದಿ ಹೇಳಿಕೆ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಿನ್ನೆ ದಿನಾಂಕ 07/11/2022 ರಂದು ಬೆಳಿಗ್ಗೆ ಸುಮಾರಿಗೆ ನಾನು ಹಾಗೂ ನನ್ನ ಹೆಂಡತಿಯಾದ ಆಸ್ಮಾಬೇಗಂ, ಹಾಗೂ ನನ್ನ ಮಗಳಾದ ಸುಮಯ್ಯಬೇಗಂ ವಯ;05 ವರ್ಷ ಮೂವರು ಸೇರಿಕೊಂಡು ನಮ್ಮುರಿನಿಂದ ಒಂದು ಖಾಸಗಿ ಆಟೋದಲ್ಲಿ ಯಾದಗಿರಿಗೆ ಬಂದು, ನಂತರ ಯಾದಗಿರಿನಿಂದ ಮತ್ತೊಂದು ಆಟೋದಲ್ಲಿ ಮುಂಡರಗಿ ಹತ್ತಿರದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮಹೀಬೂಬ ಸುಬಾನಿ ದಗರ್ಾದ ಜಾತ್ರೆಗೆ ಬಂದಿದ್ದೆವು. ಹೀಗಿದ್ದು ಮಹೀಬೂಬ ಸುಬಾನಿ ದಗರ್ಾ ದೇವರಿಗೆ ಕಾಯಿ ಕೊಟ್ಟು ನಿನ್ನೆ ದಿನಾಂಕ 07/11/2022 ರಂದು ಮದ್ಯಾಹ್ನ ಅಂದಾಜು ಸಮಯ 01-30 ಪಿ.ಎಂ.ಕ್ಕೆ ನಮ್ಮುರಿಗೆ ಹೋಗಲು ನಾವು ಮೂರು ಜನರು ದಗರ್ಾದಿಂದ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಗೆ ಬಂದು ಯಾದಗಿರಿಗೆ ಹೋಗಲು ಯಾವುದಾದರೂ ಆಟೋ ಅಥವಾ ಬಸ್ಸಿಗಾಗಿ ಕಾಯುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದಾಗ, ಅದೇ ಸಮಯಕ್ಕೆ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಮುಂಡರಗಿ ರಸ್ತೆ ಕಡೆಯಿಂದ ಯಾದಗಿರಿ ರಸ್ತೆ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಾವು ನಿಂತಲ್ಲಿಗೆ ರಸ್ತೆ ಬದಿಗೆ ಬಂದು ನಮ್ಮಲ್ಲಿ ನನ್ನ ಮಗಳು ಸುಮಯ್ಯಬೇಗಂ ಇವಳಿಗೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದನು ಆಗ ನನ್ನ ಮಗಳು ಅಪಘಾತದ ರಭಸಕ್ಕೆ ಹಿಮ್ಮುಖವಾಗಿ ಬಿದ್ದಾಗ ಆಕೆಯ ತಲೆಯ ಹಿಂಭಾಗಕ್ಕೆ ಭಾರೀ ಗುಪ್ತಗಾಯವಾಗಿ ತಲೆಯ ಹಿಂಭಾಗ ಊದಿಕೊಂಡಿರುತ್ತದೆ ಹಾಗೂ ಎಡಗೈನ ಬೆರಳುಗಳಿಗೆ ಮತ್ತು ಬಲಗಾಲಿನ ಹಿಮ್ಮಡಿ ಹತ್ತಿರ ಅಲ್ಲಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತವೆ. ಈ ಜಾತ್ರೆಗೆ ಬಂದು ಮರಳಿ ಊರಿಗೆ ಹೋಗಲು ನಮ್ಮಂತೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ನಮ್ಮುರಿನ ಶ್ರೀ ಜಲಾಲ್ ತಂದೆ ಇಸ್ಮಾಯಿಲ್ ಕಂಬಾರ ಹಾಗೂ ಶ್ರೀ ಮಲ್ಲಪ್ಪ ತಂದೆ ಕಾಡಪ್ಪ ಉಪ್ಪಾರ ಇವರುಗಳು ಘಟನೆಯನ್ನು ಕಂಡು ಬಂದು ನಮಗೆ ವಿಚಾರಿಸಿದ್ದು ಇರುತ್ತದೆ. ನನ್ನ ಮಗಳಿಗೆ ಅಪಘಾತಪಡಿಸಿದ ಮೋಟಾರು ಸೈಕಲ್ ಹೀರೋ ಸ್ಪ್ಲೆಂಡರ್ ಘಟನಾ ಸ್ಥಳದಲ್ಲಿದ್ದು, ಅದರ ನೊಂದಣಿ ನಂಬರ್ ನೋಡಲಾಗಿ ಕೆಎ-32, ಇಕೆ-2027 ನೇದ್ದು ಇರುತ್ತದೆ, ಅದರ ಸವಾರನು ಘಟನಾ ಸ್ಥಳದಲ್ಲಿ ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಚಾಂದಪಟೇಲ್ ತಂದೆ ಉಸ್ಮಾನಪಟೇಲ್ ಸಾ;ಹುಲಕಲ್(ಜೆ), ತಾ;ವಡಗೇರಾ ಅಂತಾ ತಿಳಿಸಿರುತ್ತಾನೆ. ನಂತರ ಒಂದು ಖಾಸಗಿ ವಾಹನದಲ್ಲಿ ನನ್ನ ಮಗಳಿಗೆ ಉಪಚಾರ ಕುರಿತು ಯಾದಗಿರಿಯ ಚಾಮಾ ಲೇಔಟ್ ನಲ್ಲಿ ಇರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು, ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಇದು ರಸ್ತೆ ಅಪಘಾತದ ಕೇಸು ಇದ್ದು, ನೀವು ಸಕರ್ಾರಿ ಆಸ್ಪತ್ರೆಗೆ ಹೋಗಿರಿ ಅಂತಾ ರೆಫರ್ ಮಾಡಿದಾಗ ಆಗ ನಮಗೆ ಏನು ತೋಚದೇ ಇದ್ದಾಗ, ಆಗ ನಮ್ಮ ಸಂಬಂಧಿಕರು ನಿನ್ನ ಮಗಳಿಗೆ ಮೊದಲು ರಾಯಚೂರಿನ ಆರಾಧನಾ ಆಸ್ಪತ್ರೆಗೆ ಕರೆದುಕೊಂಡು ಹೋಗು ಅಲ್ಲಿ ಹೋದ ಬಳಿಕ ಎಮ್.ಎಲ್.ಸಿ ಮಾಡು ಪೊಲಿಸರು ಅಲ್ಲಿಗೆ ಬರುತ್ತಾರೆ ಅಂತಾ ಹೇಳಿ ನಮಗೆ ಒಂದು ಕಾರಿನಲ್ಲಿ ಕರೆದುಕೊಂಡು ಈ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ನನ್ನ ಮಗಳಿಗೆ ಇಲ್ಲಿ ಸೇರಿಕೆ ಮಾಡಿರುತ್ತೇವೆ. ಹೀಗಿದ್ದು ನಿನ್ನೆ ದಿನಾಂಕ 07/11/2022 ರಂದು ಮದ್ಯಾಹ್ನ 01-30 ಪಿ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮೇಲೆ ಬರುವ ಮುಂಡರಗಿ ಗ್ರಾಮದ ಮಹೀಬೂಬ ಸುಬಾನಿ ದಗರ್ಾ ಹತ್ತಿರ ರಸ್ತೆ ಬದಿಯಲ್ಲಿ ನಿಂತಿದ್ದ ನನ್ನ ಮಗಳು ಸಮುಯ್ಯಬೇಗಂ ಈಕೆಗೆ ಮೋಟಾರು ಸೈಕಲ್ ನಂಬರ ಕೆಎ-32, ಇಕೆ-2027 ನೇದ್ದರ ಸವಾರ ಚಾಂದಪಟೇಲ್ ಈತನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 54/2022 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 74/2022 ಕಲಂ ಮಹಿಳೆ ಕಾಣೆಯಾದ ಬಗ್ಗೆ : 15. ಕೇಸಿನ ಸಂಕ್ಷಿಪ್ತ ಸಾರಾಂಶ :- ಇಂದು ದಿನಾಂಕ: 08.11.2022 ರಂದು ಮಧ್ಯಾಹ್ನ 1:00 ಗಂಟೆಗೆ ಪಿರ್ಯಾಧಿ ಶ್ರೀ ಅಬ್ದುಲ್ಸಾಬ ತಂದೆ ದರೆಸಅಹ್ಮದ ಹವಾಲ್ದಾರ ವ:45 ವರ್ಷ ಉ:ಕೂಲಿಕೆಲಸ ಜಾ:ಮುಸ್ಲಿಂ ಸಾ:ರಾಜನಕೊಳೂರ ತಾ:ಹುಣಸಗಿ ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ, ನನಗೆ ತಾಸೀನತಾಜ, ದವಲತ್ಪಾಶಾ ಮತ್ತು ರಿಜ್ವನತಾಜ ಅಂತ ಮೂರು ಜನ ಮಕ್ಕಳಿದ್ದು ಮೂವರದೂ ಇನ್ನೂ ಮದುವೆಯಾಗಿರುವದಿಲ್ಲ. ನಾನು ಈ ಸುಮಾರು 30 ವರ್ಷಗಳಿಂದ ನನ್ನ ಹೆಂಡತಿ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ಕೋಳಿಫಾರಂನಲ್ಲಿ ಕೂಲಿಕೆಲಸ ಮಾಡಿಕೊಂಡು ಇದ್ದು ಈಗ ಮಕ್ಕಳ ಮದುವೆ ಮಾಡುವ ಸಲುವಾಗಿ ದಿನಾಂಕ 01.11.2022 ರಂದು ಬೆಳಿಗ್ಗೆ 08:00 ಗಂಟೆಗೆ ಬೆಂಗಳೂರಿನಿಂದ ನಮ್ಮೂರಾದ ರಾಜನಕೊಳೂರಿಗೆ ಬಂದಿದ್ದು ಇರುತ್ತದೆ. ನಾನು ಮತ್ತು ನನ್ನ ಅಣ್ಣ ಮೈನುದ್ದೀನ್ ರವರು ಕೂಡಿಯೇ ಇರುತ್ತೇವೆ.
ಹೀಗಿದ್ದು, ದಿನಾಂಕ:05.11.2022 ಶನಿವಾರದಂದು ರಾತ್ರಿ 10:30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ರಿಜ್ವನತಾಜ್, ದವಲತ್ಪಾಶಾ, ನನ್ನ ಹೆಂಡತಿ ರಮಜಾನಬೀ, ತಾಯಿ ಚಾಂದಬೀ, ಅಣ್ಣನಾದ ಮೈನುದ್ದೀನ್ ಮತ್ತು ನನ್ನ ಅಣ್ಣನ ಹೆಂಡತಿಯಾದ ಮಹ್ಮದಬೀ ರವರು ನಮ್ಮ ಮನೆಯಲ್ಲಿ ಇದ್ದಾಗ ನನ್ನ ಮಗಳಾದ ರಿಜ್ವನ್ತಾಜ ರವರು ನಮಗೆ ನಾನು ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿದ್ದು ಇರುತ್ತದೆ. ರಾತ್ರಿ 11:00 ಗಂಟೆಯಾದರೂ ನನ್ನ ಮಗಳು ಮನೆಗೆ ಮರಳಿ ಬರದಿದ್ದಾಗ ನಾವು ಗಾಬರಿಗೊಂಡು ಆ ದಿನ ರಾಜನಕೊಳೂರ ಗ್ರಾಮದಲ್ಲಿಯ ನಮ್ಮೆಲ್ಲ ಸಂಬಂಧಿಕರ ಮನೆಗಳಿಗೆ ಹೋಗಿ ವಿಚಾರಿಸಿದ್ದು ನನ್ನ ಮಗಳು ಬಂದಿರುವದಿಲ್ಲ ಅಂತ ತಿಳಿಸಿದ್ದು ನಂತರ ಮತ್ತು ನಮ್ಮ ಸಂಬಂಧಿಕರಿಗೆ ಫೋನ್ ಮಾಡಿ ವಿಚಾರಿಸಲಾಗಿ ನನ್ನ ಮಗಳು ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು, ದಿನಾಂಕ:05.11.2022 ರಿಂದ ಇಂದಿನವರೆಗೆ ನಾನು ಮತ್ತು ನನ್ನ ಅಣ್ಣ, ನನ್ನ ಮಗ ಹಾಗೂ ಬಲಶೆಟ್ಟಿಹಾಳ ಗ್ರಾಮದ ನನಗೆ ಅಳಿಯನಾಗಬೇಕಾದ ಅಲ್ಲಿಸಾಬ ರವರು ಕೂಡಿಕೊಂಡು ನನ್ನ ಮಗಳು ರಿಜ್ವನ್ತಾಜ ರವರಿಗೆ ನಮ್ಮ ಸಂಬಂಧಿಕರ ಊರುಗಳಾದ ಲಿಂಗಸೂರು, ಕಡಕಲ್ಲ, ಮಸ್ಕಿ, ಗುಡಿಹಾಳ, ಚಿನ್ನೂರ, ಸಿಂಧನೂರ ಮತ್ತು ಬೆಂಗಳೂರು ಇತರೆ ಊರುಗಳಿಗೆ ಹೋಗಿ ಹುಡುಕಾಡಿದ್ದು ಮತ್ತು ನಮ್ಮ ಸಂಬಂಧಿಕರುಗಳಿಗೆ ಫೋನ್ ಮಾಡಿ ವಿಚಾರಿಸಿದ್ದು ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು, ನನ್ನ ಮಗಳು ಇಂದಿನವರೆಗೂ ಸಿಕ್ಕಿರುವುದಿಲ್ಲಾ. ನನ್ನ ಮಗಳು ರಿಜ್ವನ್ತಾಜ ತಂದೆ ಅಬ್ದುಲ್ಸಾಬ ಹವಾಲ್ದಾರ ವ:18 ವರ್ಷ ಉ:ವಿದ್ಯಾಥರ್ಿ ಇವರು ದಿನಾಂಕ:05.11.2022 ರಂದು ರಾತ್ರಿ 10:30 ಗಂಟೆ ಸುಮಾರಿಗೆ ಮನೆಯಿಂದ ಸಂಡಾಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲಾ ಕಾಣೆಯಾಗಿದ್ದು, ನನ್ನ ಮಗಳನ್ನು ಪತ್ತೆ ಮಾಡಿ ಕೊಡಬೇಕು ನನ್ನ ಮಗಳು ತೆಳನೆಯ ಮೈಕಟ್ಟು, ಗೋಧಿ ಬಣ್ಣ, ಉದ್ದನೆಯ ಮೂಗು, ದುಂಡ ಮುಖ ಹೊಂದಿದ್ದು, ತಲೆಯ ಮೇಲೆ ಕಪ್ಪು ಬಣ್ಣದ ಕೂದಲು ಇದ್ದು, ಸುಮಾರು 4 ಫೀಟ್ 6 ಇಂಚ್ ಎತ್ತರ ಇದ್ದು, ಕಪ್ಪು ಬಣ್ಣದ ಲೆಗ್ಗಿನ್ಸ್ ಪ್ಯಾಂಟ್, ಕಪ್ಪು ಮತ್ತು ಕೆಂಪು ಮಿಶ್ರಿತ ಟಾಪ್ ಹಾಗೂ ಬಂಗಾರ ಬಣ್ಣದ ಓಡನಿ ಧರಿಸಿದ್ದು. ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಿದ್ದು, ಕನ್ನಡ, ಹಿಂದಿ, ಇಂಗ್ಲಿಷ ಭಾಷೆ ಬರೆಯಲು ಒದಲು ಬರುತ್ತಿದ್ದು ನನ್ನ ಮಗಳು 12 ನೇ ತರಗತಿ ಕಾಮರ್ಸ ಓದುತ್ತಿದ್ದು, ನಾವು ಇಲ್ಲಿಯವರೆಗೂ ಹುಡುಕಾಡಿದರೂ ನನ್ನ ಮಗಳು ರಿಜ್ವನ್ತಾಜ ತಂದೆ ಅಬ್ದುಲ್ಸಾಬ ಹವಾಲ್ದಾರ ವ:18 ವರ್ಷ ಉ:ವಿದ್ಯಾಥರ್ಿ ಇವಳು ಸಿಕ್ಕಿರುವುದಿಲ್ಲ. ನನ್ನ ಮಗಳು ಕಾಣೆಯಾಗಿದ್ದು ಅವಳಿಗೆೆ ಪತ್ತೆ ಮಾಡಿಕೊಡಬೇಕು ಅಂತಾ ಪಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:74/2022 ಕಲಂ: ಮಹಿಳೆ ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ..

 

ಇತ್ತೀಚಿನ ನವೀಕರಣ​ : 10-11-2022 11:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080