Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-12-2021

ಯಾದಗಿರಿ ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 64/2021 ಕಲಂ 279, 337, 338 ಐ.ಪಿ.ಸಿ : ಇಂದು ದಿನಾಂಕ:08/12/2021 ರಂದು 3:40 ಪಿ.ಎಮ್.ಕ್ಕೆ ಜಿ.ಜಿ.ಹೆಚ್. ಯಾದಗಿರಿಯಿಂದ ದೂರವಾಣಿ ಮೂಲಕ ಆರ್.ಟಿ.ಎ. ಎಮ್.ಎಲ್.ಸಿ. ಸ್ವೀಕೃತವಾಗಿದ್ದು, ನಮ್ಮ ಠಾಣೆಯ ಸಿದ್ದಪ್ಪ ಹೆಚ್.ಸಿ-75 ರವರು ಜಿ.ಜಿ.ಹೆಚ್.ಯಾದಗಿರಿಗೆ ಭೇಟಿನೀಡಿ ಎಮ್.ಎಲ್.ಸಿ. ಸ್ವೀಕೃತಮಾಡಿಕೊಂಡು ಆಸ್ಪತ್ರೆಯಲ್ಲಿದ್ದ ಗಾಯಾಳು ವೀರೇಶ ತಂದೆ ಬಸಯ್ಯಸ್ವಾಮಿ ಹಿರೇಮಠ ಇವರ ಹೇಳಿಕೆ ಫಿಯರ್ಾದಿಯನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದು 5:40 ಪಿ.ಎಮ್. ಕ್ಕೆ ಹಾಜರಪಡಿಸಿದ್ದು, ಸದರಿ ಹೇಳಿಕೆ ಫಿಯರ್ಾದಿಯ ಸಾರಾಂಶವೇನೆಂದರೆ, ಇಂದು ದಿನಾಂಕ:08/12/2021 ನಾನು ಮತ್ತು ವೀರೇಶ ತಂದೆ ಬಸಯ್ಯಸ್ವಾಮಿ ಹಿರೇಮಠ ಇಬ್ಬರು ಕೆಲಸದ ನಿಮಿತ್ಯ ಮೋಟರ್ ಸೈಕಲ್ ನಂ:ಎಪಿ-10 ಎಬಿ-4336 ರ ಮೇಲೆ ಯಾದಗಿರಿ ನಗರದ ಗಾಂಧಿ ಚೌಕ್ಗೆ ಹೋಗುತ್ತಿದ್ದೆವು. ವೀರೇಶನು ಮೋಟರ್ ಸೈಕಲ್ ನಡೆಸುತ್ತಿದ್ದನು. ನಾವು ನಗರಸಭೆ ದಾಟಿಕೊಂಡು ವೀರಶೈವ ಕಲ್ಯಾಣ ಮಂಟಪ ಮಾರ್ಗವಾಗಿ ಹೋಗುತ್ತಿದ್ದಾಗ 3:00 ಪಿ.ಎಮ್.ಕ್ಕೆ ವೀರಶೈವ ಕಲ್ಯಾಣ ಮಂಟಪದ ಹತ್ತಿರ ಎದುರಗಡೆ ಗಾಂಧಿಚೌಕ್ ಕಡೆಯಿಂದ ಒಂದು ರಾಯಲ್ ಎನ್ಫೀಲ್ಡ್ ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ತನ್ನ ಮಾರ್ಗವನ್ನು ಬಿಟ್ಟು ನಮ್ಮ ಮೋಟರ್ ಸೈಕಲ್ಗೆ ನೇರವಾಗಿ ಎದುರುಗಡೆಯಿಂದ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಅಪಘಾತದಲ್ಲಿ ನಾವು ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು, ನನಗೆ ಬಲಕಾಲು ತೊಡೆಗೆ ಭಾರಿ ಗುಪ್ತಗಾಯವಾಗಿದ್ದು, ಮೊಳಕಾಲು ಹತ್ತಿರ ಮುರಿದಂತೆ ಆಗಿರುತ್ತದೆ, ಬಲಕಾಲು ಪಾದಕ್ಕೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ. ವೀರೇಶನಿಗೆ ಬಲಕಾಲು ಪಾದದ ಹತ್ತಿರ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿರುತ್ತದೆ. ಅಪಘಾತಪಡಿಸಿದ ಮೋಟರ್ ಸೈಕಲ್ ನೋಡಲಾಗಿ ಅದರ ನಂಬರ್ ಕೆಎ-32 ಇ.ಎಸ್-9782 ಇದ್ದು, ಅದರ ಸವಾರನ ಹೆಸರು ಮಹೇಶ ತಂದೆ ಸಣ್ಣಮಲ್ಲಪ್ಪ ಸಾ||ಹಿರೇಅಗಸಿ ಅಂತಾ ಗೊತ್ತಾಗಿದ್ದು, ಅಪಘಾತದಲ್ಲಿ ಆತನಿಗೆ ತಲೆಗೆ ರಕ್ತಗಾಯವಾಗಿದ್ದು, ಎಡಕಿವಿಯಿಂದ ರಕ್ತಬಂದಂತೆ ಆಗಿದ್ದು, ಬಲಕಾಲು ಹೆಬ್ಬೆರಳಿಗೆ ರಕ್ತಗಾಯವಾಗಿರುತ್ತದೆ. ಅಪಘಾತವನ್ನು ನೋಡಿದ ಶಿವಶರಣಪ್ಪ ತಂದೆ ಗುರುಲಿಂಗಪ್ಪ ಮೋಟ್ನಳ್ಳಿ ಮತ್ತು ವಿಜಯ ತಂದೆ ಭೀಮರಾಯಗೌಡ ಪಾಟೀಲ್ ಇವರು ಅಪಘಾತದಲ್ಲಿ ಗಾಯಗೊಂಡ ನಮ್ಮನ್ನು ಖಾಸಗಿ ವಾಹನದಲ್ಲಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತಾರೆ. ಕಾರಣ ನಮಗೆ ಅಪಘಾತಪಡಿಸಿದ ಮೋಟರ್ ಸೈಕಲ್ ನಂ: ಕೆಎ-32 ಇ.ಎಸ್-9782 ರ ಚಾಲಕ ಮಹೇಶ ತಂದೆ ಸಣ್ಣಮಲ್ಲಪ್ಪ ಸಾ||ಹಿರೇಅಗಸಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಹೇಳಿಕೆ ಫಿಯರ್ಾದಿ ಸಾರಾಂಶದ ಮೇಲಿಂದ ಯಾದಗಿರಿ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ:64/2021 ಕಲಂ:279, 337, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 187/2021 ಕಲಂ 454, 457, 380 ಐ.ಪಿ.ಸಿ. : ದಿನಾಂಕ:06.12.2021 ರಂದು ಸಾಯಂಕಾಲ 5.30 ಗಂಟೆಯಿಂದ 07.12.2021 ರಂದು ಬೆಳಿಗ್ಗೆ 9.30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಇವರ ಕೊಂಕಲ್ ಗ್ರಾಮದ ನಾಡ ಕಛೇರಿಯ ಬಾಗಿಲಿಗೆ ಹಾಕಿದ ಕೀಲಿ ಮುರಿದು ನಾಡ ಕಛೇರಿಯಲ್ಲಿಟ್ಟಿದ್ದ ಹೆಚ್ಪಿ ಕಂಪನಿಯ ಲ್ಯಾಪ್ಟಾಪ್ ಅ||ಕಿ|| 10,000/- ಬೆಲೆಯುಳ್ಳ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾಧಿ ವಗೈರೆ ಇರುತ್ತದೆ.

 

ಸೈದಾಪೂರ ಪೊಲೀಸ ಠಾಣೆ
ಗುನ್ನೆ ನಂ: 174/2021 ಕಲಂ 279, 338 ಐಪಿಸಿ : ಇಂದು ದಿನಾಂಕ 08.12.2021 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮಗ ಅಶೋಕ ಈತನು ತಿಳಿಸಿದ್ದೇನೆಂದರೆ ನನ್ನ ತಮ್ಮ ತಾಯಪ್ಪ ಮೋಟಾರ ಸೈಕಲ್ ಮೇಲೆ ಗುಡಿಕಡೆಯಿಂದ ನಮ್ಮೂರ ಕಡೆಗೆ ಬರುವಾಗ ಯಾದಗಿರಿ ಕಡೆಗೆ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿರುವ ಬಸ್ಸ ಚಾಲಕ ತಿರುವು ರಸ್ತೆಯಲ್ಲಿ ಬಸ್ಸ ವಾಹನ ವೇಗವಾಗಿ ನಡೆಸಿಕೊಂಡು ಹೋಗಿ ಮದ್ವಾರ-ಕಾಳಬೆಳಗುಂದಿ ಗುಡಿ ಮಧ್ಯ ರಸ್ತೆಯ ಸೋಮಪ್ಪ ಹತ್ತಿಕುಣಿ ಇವರ ಹೊಲದ ಹತ್ತಿರ ತಾಯಪ್ಪನ ಮೋಟಾರ ಸೈಕಲಗೆ ಬೆಳಗ್ಗೆ 08.45 ಗಂಟೆ ಸುಮಾರಿಗೆ ಡಿಕ್ಕಿ ಪಡಿಸಿದ್ದರಿಂದ ತಾಯಪ್ಪನಿಗೆ ಬಹಳ ಪೆಟ್ಟುಗಳಾಗ್ಯವಂತಾ ತನ್ನ ಸ್ನೇಹಿತ ಇಡ್ಲೂರ ಗ್ರಾಮದ ಶಿವು ಫೋನ್ ಮಾಡಿ ತಿಳಿಸಿದನೆಂದು ಹೇಳಿದ. ವಿಷಯ ತಿಳಿದ ನಾನು ಮತ್ತು ನಮ್ಮ ಮನೆಯವರು ಕೂಡಲೇ ಅಪಘಾತವಾದ ಸ್ಥಳಕ್ಕೆ ಹೋದೆವು. ರೋಡಿನ ಮೇಲೆ ಬಿದ್ದ ನನ್ನ ತಮ್ಮ ತಾಯಪ್ಪನಿಗೆ ಮುಖಕ್ಕೆ ಮತ್ತು ಬಲಗಾಲಿಗೆ ಭಾರಿ ಪೆಟ್ಟುಗಳಾಗಿ ಕಿವಿ, ಮೂಗು, ಬಾಯಿಯಿಂದ ರಕ್ತಸ್ರಾವ ಆಗಿರುತ್ತದೆ. ಘಟನಾ ಸ್ಥಳದಲ್ಲಿ ಅಪಘಾತಕ್ಕಿಡಾದ ನಮ್ಮ ಮೋಟಾರ ಸೈಕಲ್ ಸಂಖ್ಯೆ ಕೆಎ-04-ವೈ-3307 ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಕೆ.ಎ-33-ಎಫ್-0251 ವಾಹನಗಳು ಜಖಂ ಗೊಂಡಿದ್ದವುನಂತರ ನಾವು ಒಂದು ಆಟೋ ವಾಹನದಲ್ಲಿ ಗಾಯಾಳು ನನ್ನ ತಮ್ಮನಾದ ತಾಯಪ್ಪ ತಂದೆ ಭೀಮಣ್ಣ ಚಿಂತಲಯ್ಯ, ವಯಾ|| 21 ವರ್ಷ, ಜಾ|| ಕಬ್ಬಲಿಗ, ಉ|| ಕೂಲಿಕೆಲಸ, ಸಾ|| ಗುಡ್ಲಗುಂಟಾ ಗ್ರಾಮ ಇತನಿಗೆ ಸೈದಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವ ಕಾಲಕ್ಕೆ ಮಾರ್ಗಮಧ್ಯ ಮದ್ವಾರ ಸಮೀಪ 108 ಅಂಬುಲೆನ್ಸ್ ವಾಹನ ಬಂದಿದ್ದರಿಂದ ಸದರಿ ವಾಹನದಲ್ಲಿ ನನ್ನ ತಮ್ಮನಿಗೆ ಹಾಕಿಕೊಂಡು ಇಲ್ಲಿಗೆ ಅಂದರೆ ಸೈದಾಪೂರ ಸರಕಾರಿ ಆಸ್ಪತ್ರೆಗೆ ಕರೆತಂದು ಉಪಚಾರ ಕುರಿತು ಸೇರಿಕೆ ಮಾಡಲಾಗಿದೆ. ರಸ್ತೆ ಅಪಘಾತ ನಡೆದು ಹೋಗಲು ಕಾರಣಿಭೂತನಾದ ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಕೆ.ಎ-33-ಎಫ್-0251 ವಾಹನದ ಚಾಲಕನಾದ ಮಂಜುನಾಥ ತಂದೆ ಮಲ್ಲಣ್ಣ ಹೂಗಾರ ವಯಾ|| 36 ವರ್ಷ, ಜಾ|| ಹೂಗಾರ, ಉ|| ಬಸ್ ಚಾಲಕ, ಸಾ|| ಹುಣಸಿಗಿ ಗ್ರಾಮ ಹಾ|| ವ|| ಯಾದಗಿರಿ ಬಸ್ ಘಟಕ ಇತನ ವಿರುದ್ದ ಕಾನೂನು ರಿತ್ಯಾ ಕ್ರಮ ಜರುಗಿಸಲು ಕೊರಿದೆ.

 


ಸೈದಾಪೂರ ಪೊಲೀಸ ಠಾಣೆ
ಗುನ್ನೆ ನಂ : 175/2021 ಕಲಂ 32, 34 ಕನರ್ಾಟಕ ಅಬಕಾರಿ ಕಾಯ್ದೆ ಮತ್ತು ಕಲಂ 284 ಐಪಿಸಿ : ವಂಕಸಂಬ್ರ ಗ್ರಾಮ ಹೊರವಲಯದ ಸಾರ್ವಜನಿಕ ಸ್ಥಳದಲ್ಲಿ ನಿಂಗಪ್ಪ ತಂದೆ ಭೀಮರಾಯ ಕಲಾಲ್ ಎಂಬುವವ ಸಾರ್ವಜನಿಕರಿಗೆ ಲೀಟರಗೆ 20 ರೂಪಾಯಿಯಂತೆ ಕಲಬೆರಕೆ ಸಿಂಧಿ ಮಾರಾಟ ಮಾಡುವ ಕಾಲಕ್ಕೆ ಇಂದು ದಿನಾಂಕ 08.12.2021 ರಂದು ಸಾಯಂಕಾಲ ನಿಂಗಪ್ಪನಿಗೆ ವಶಕ್ಕೆ ಪಡೆದು ಆತನಿಂದ ಸುಮಾರು 20 ಲೀಟರ್ ಸಿಂಧಿ ಮತ್ತು 80 ರೂಪಾಯಿ ನಗದು ಹಣ ಜಪ್ತಿ ಪಡಿಸಿಕೊಂಡಿದ್ದು ಕನರ್ಾಟಕ ರಾಜ್ಯದಲ್ಲಿ ಸಿಂಧಿ ಮಾರಾಟ ನಿಷೇಧ ಇದ್ದರೂ ಸಹ ಆಪಾದಿತ ಕಲಬೆರಕೆ ಸಿಂಧಿ ಮಾರಾಟ ಮಾಡಿದ ಬಗ್ಗೆ ಆಪಾದನೆ.

 


ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂಬರ 246/20201 ಕಲಂ 32, 34 ಕೆ.ಇ ಆಕ್ಟ್ : ಇಂದು ದಿನಾಂಕ 08/12/2021 ರಂದು ಮಧ್ಯಾಹ್ನ 13-00 ಗಂಟೆಗೆ ಶ್ರೀ ಚಂದ್ರಕಾಂತ ಪಿ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಮತ್ತು ಒಬ್ಬ ಆರೋಪಿತನನ್ನು ಹಾಜರ ಪಡಿಸಿಸಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 08/12/2021 ರಂದು, ನಾನು ಮುಂಜಾನೆ 10-45 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ, ಶಹಾಪೂರ ನಗರದ ಬಸವೇಶ್ವರ ವೃತ್ತದಲ್ಲಿರುವ ರೋನಕ್ ಬಟ್ಟೆ ಅಂಗಡಿ ಹಿಂದುಗಡೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಹಣ ಗಳಿಸುವ ಉದ್ದೇಶದಿಂದ ತನ್ನ ಸ್ವಂತ ಲಾಭಕ್ಕಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ದೃಢಪಡಿಸಿಕೊಂಡು ಪೊಲೀಸ್ ಠಾಣೆಯಲ್ಲಿ ಹಾಜರಿದ್ದ ಶ್ರೀ ಭೀಮನಗೌಡ ಪಿ.ಸಿ 402, ಧರ್ಮರಾಜ ಪಿ.ಸಿ 45, ಮುತ್ತಣ್ಣ ಪಿ.ಸಿ 118 ರವರಿಗೆ ವಿಷಯ ತಿಳಿಸಿ ಶ್ರೀ ಭೀಮನಗೌಡ ಪಿ.ಸಿ 402 ರವರಿಗೆ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಮುಂಜಾನೆ 10-55 ಗಂಟೆಗೆ ಕಳುಹಿಸಿದ ಮೇರೆಗೆ, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1) ಶ್ರೀ ಚಂದ್ರಶೇಖರ ತಂದೆ ಬಸಪ್ಪ ಹೊಸಮನಿ, ವಯಸ್ಸು 42 ವರ್ಷ, ಜಾತಿ ಪ.ಜಾತಿ (ಹೊಲೆಯ) ಉಃ ಗುತ್ತೆದಾರ ಕೆಲಸ ಸಾಃ ಬೆವಿನಹಳ್ಳಿ ತಾಃ ಶಹಾಪೂರ 2) ಶ್ರೀ ಮಾನಯ್ಯ ತಂದೆ ಮಲ್ಲಪ್ಪ ಬಡಿಗೇರ್ ವಯಸ್ಸು 50 ವರ್ಷ ಜಾತಿ ಪ.ಜಾತಿ (ಹೊಲೆಯ) ಉಃ ಖಾಸಗಿ ಕೆಲಸ ಸಾಃ ದೋರನಹಳ್ಳಿ ತಾಃ ಶಹಾಪೂರ ರವರನ್ನು ಕರೆದುಕೊಂಡು ಮುಂಜಾನೆ 11-15 ಗಂಟೆಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ನನ್ನ ಮುಂದೆ ಹಾಜರ ಪಡಿಸಿದ್ದು, ಮೇಲ್ಕಂಡ ಇಬ್ಬರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದ ಬಗ್ಗೆ ಬಾತ್ಮಿ ಬಂದ ವಿಷಯ ತಿಳಿಸಿ ನಮ್ಮ ಜೊತೆಯಲ್ಲಿ ಬಂದು ಜಪ್ತಿ ಪಂಚನಾಮೆಯ ಪಂಚರಾಗಿ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ಸದರಿ ಇಬ್ಬರೂ ವ್ಯಕ್ತಿಗಳು ಒಪ್ಪಿಕೊಂಡರು.ನಾನು ಮತ್ತು ಮೇಲ್ಕಂಡ ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಕುರಿತು ಒಂದು ಖಾಸಗಿ ಜೀಪ್ನಲ್ಲಿ ಹೊರಟೆವು, ಠಾಣೆಯ ಸರಕಾರಿ ಜೀಪ್ ನಂ ಕೆಎ-32-ಜಿ-0618 ನೇದ್ದರಲ್ಲಿ ಠಾಣೆಯಿಂದ ಮುಂಜಾನೆ 11-20 ಗಂಟೆಗೆ ಹೊರಟೆವು. ಸದರಿ ವಾಹನವು ಖಾಸಗಿ ವ್ಯಕ್ತಿಯಾದ ಶ್ರೀ ಶರಣಪ್ಪ ನಾಟೇಕಾರ ಇವರು ಚಲಾಯಿಸಿಕೊಂಡು ನೇರವಾಗಿ ಶಹಾಪೂರದ ಬಸವೇಶ್ವರ ವೃತ್ತದಲ್ಲಿ ಸುರಪೂರ ಕಡೆಗೆ ಜೀಪ್ ನಿಲ್ಲಿಸಿ ಅಲ್ಲಿಂದ ಇಳಿದುಕೊಂಡು ಎಲ್ಲರೂ ರೋನಕ್ ಬಟ್ಟೆ ಅಂಗಡಿ ಹಿಂದುಗಡೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರೋನಕ್ ಬಟ್ಟೆ ಅಂಗಡಿಯ ಹಿಂದುಗಡೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಒಂದು ಚೀಲದಲ್ಲಿ ಮಧ್ಯವನ್ನು ಇಟ್ಟುಕೊಂಟು ಸಾರ್ವಜನಿಕರಲ್ಲಿ ಮದ್ಯ ಮಾರಾಟ ಮಾಡುತಿದ್ದನು, ಸದರಿಯವನು ಮದ್ಯ ಮಾರಾಟ ಮಾಡುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು ಮುಂಜಾನೆ 11-30 ಗಂಟೆಗೆ ದಾಳಿ ಮಾಡಿದಾಗ, ಮದ್ಯ ಮಾರಾಟ ಮಾಡುತಿದ್ದ ವ್ಯಕ್ತಿ ಸಿಕ್ಕಿದ್ದು, ಸದರಿಯವನ ಹೆಸರು ವಿಳಾಸ ವಿಚಾರಿಸಲು ಮೌನೇಶ ತಂದೆ ರಾಮಣ್ಣ ಮುಂಡಾಸ, ವಯಸ್ಸು 34 ವರ್ಷ, ಜಾತಿ ಪ.ಜಾತಿ (ಹೊಲೆಯ), ಉಃ ಆಟೋ ಚಾಲಕ, ಸಾಃ ಅಂಬೇಡ್ಕರ ಚೌಕ ಹಳಿಸಗರ ಶಹಾಪೂರ ಅಂತಾ ಹೇಳಿದನು. ಸದರಿ ಚೀಲದಲ್ಲಿ ಏನು ಇದೆ ಅಂತಾ ವಿಚಾರಿಸಿದಾಗ ಮದ್ಯದ ಪಾಕೇಟ್ಗಳು ಇವೆ ಅಂತಾ ಹೇಳಿ ಚೀಲದಲ್ಲಿನ ಮದ್ಯದ ಪಾಕೇಟ್ಗಳನ್ನು ಕೆಳಗಡೆ ಹಾಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿ ನೋಡಲಾಗಿ 180 ಎಮ್.ಎಲ್ ಸಾಮಥ್ರ್ಯದ ಮದ್ಯ ತುಂಬಿದ 20 ಔಖಉಓಂಐ ಅಊಔಅಇ ಆಇಐಗಘಿಇ ಘಊಖಏಙ ಟೆಟ್ರಾಪಾಕೇಟ್ಗಳು ಇದ್ದವು. ಒಂದು 180 ಎಮ್.ಎಲ್ ನ ಮದ್ಯ ತುಂಬಿದ ಪಾಕೇಟಿನ ಕಿಮ್ಮತ್ತು 70 ರೂಪಾಯಿ 26 ಪೈಸೆ ಇರುತ್ತದೆ. ಒಟ್ಟು 20 ಮದ್ಯ ತುಂಬಿದ ಪಾಕೇಟಿನ ಕಿಮ್ಮತ್ತ 1405=00 ರೂಪಾಯಿ 20 ಪೈಸೆ ಆಗುತ್ತದೆ. ಖಾಲಿ ಚೀಲದ ಅಂ.ಕಿ 00=00 ಆಗುತ್ತದೆ. ಸದರಿ ವ್ಯಕ್ತಿಗೆ ಮದ್ಯ ಮಾರಾಟ ಮಾಡುತಿದ್ದರ ಬಗ್ಗೆ ದಾಖಲಾತಿ ವಿಚಾರಿಸಲಾಗಿ ಸದರಿಯವನು ಯಾವುದೇ ದಾಖಲಾತಿ ಹಾಜರ ಪಡಿಸಿರುವುದಿಲ್ಲ. ಸದರಿ ವ್ಯಕ್ತಿ ಮಧ್ಯ ಮಾರಾಟ ಪರವಾನಿಗೆ ಪತ್ರ ಹೊಂದದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದ ಬಗ್ಗೆ ದೃಡಪಟ್ಟಿರುತ್ತದೆ. 180 ಎಮ್.ಎಲ್ ಸಾಮಥ್ರ್ಯದ ಮದ್ಯ ತುಂಬಿದ 20 ಔಖಉಓಂಐ ಅಊಔಅಇ ಆಇಐಗಘಿಇ ಘಊಖಏಙ ಟೆಟ್ರಾಪಾಕೇಟ್ಗಳಲ್ಲಿ 180 ಎಮ್.ಎಲ್ ಸಾಮಥ್ರ್ಯದ ಮದ್ಯ ತುಂಬಿದ 14 ಔಖಉಓಂಐ ಅಊಔಅಇ ಆಇಐಗಘಿಇ ಘಊಖಏಙ ಟೆಟ್ರಾಪಾಕೇಟ್ಗಳನ್ನು ರಸಾಯನಿಕ ಪರೀಕ್ಷೆ ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಹೊಲೆದು ಅದರ ಮೇಲೆ ಠಾಣೆಯ ಇಂಗ್ಲೀಷ ಅಕ್ಷರದ ಖಊಕ ಮಾದರಿ ಶಿಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಅದನ್ನು ಮತ್ತು ಉಳಿದ ಮುದ್ದೆ ಮಾಲನ್ನು ಮುಂಜಾನೆ 11-30 ಗಂಟೆಯಿಂದ 12-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿರುತ್ತದೆ.
ಸದರಿ ಆರೋಪಿತನ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಇತ್ಯಾದಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 246/2021 ಕಲಂ 32, 34 ಕೆ.ಇ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 88/2021 ಕಲಂ. 338 ಐಪಿಸಿ : ಫಿರ್ಯಾದಿಯು ಹುಣಸಗಿ ಪಟ್ಟಣದ ಹುಣಸಗಿ-ಸುರಪುರ ರಸ್ತೆಯ ಆಶ್ರಯ ಕಾಲೋನಿಯಲ್ಲಿ ಮನೆ ಕಟ್ಟಿಕೊಂಡಿದ್ದು, ಮನೆಯ ಮೇಲೆ ಕರೆಂಟ್ ವಾಯರ್ ಇದ್ದು, ಸದರಿ ವಆಯರಗಳು ಜೋತುಬಿದ್ದು ಕೆಳಗಡೆ ಮನೆಯ ಮೇಲೆ 2 ಅಡಿಗೆ ಬಂದಿರುತ್ತವೆ. ಈ ಬಗ್ಗೆ ಫಿರ್ಯಾದಿದಾರರು ಜೆಸ್ಕಾಂ ಅಧಿಕಾರಿಗಳು ಹುಣಸಗಿ ರವರಿಗೆ 2-3 ಸಲ ಪತ್ರ ವ್ಯವಹಾರ ಮಾಡಿದ್ದು, ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷತನ ತೋರಿ ಕರೆಂಟ್ ವಾಯರ್ ತೆಗೆದಿರುವದಿಲ್ಲ. ಗಾಯಾಳು ಕು.ಕಾವೇರಿ ಇವಳು ಮಾನಸಿಕ ಅಶ್ವಸ್ಥಳಿದ್ದು, ದಿನಾಂಕ:16/09/2021 ರಂದು ಸಾಯಂಕಾಲ 4.30 ಗಂಟೆಯ ಸುಮಾರಿಗೆ ಆಟ ಆಡುತ್ತಾ ಮನೆಯ ಮಾಳಿಗೆಯ ಮೇಲೆ ಹೋದಾಗ ಕಾವೆರಿ ಇವಳ ಎಡಗೈ ಕರೆಂಟ್ ವಾಯರಗೆ ತಾಗಿ ವಿದ್ಯುತ್ ಹತ್ತಿದ್ದರಿಂದ ಕಾವೇರಿ ಇವಳಿಗೆ ಎಡಗೈ ಹಸ್ತ ಪೂರ್ಣ ಸುಟ್ಟಿದ್ದು, ಹಸ್ತದವರೆಗೆ ಕೈ ಕಟ್ಟ ಮಾಡಿದ್ದು, ಅಲ್ಲದೆ ಬಲಗೈ, ಎರಡೂ ಕಾಲುಗಳಿಗೆ & ಹೊಟ್ಟೆಗೆ ಗಾಯಗಳಾಗಿರುತ್ತವೆ. ಕಾರಣ ಸದರಿ ಹುಣಸಗಿಯ ಜೆಸ್ಕಾಂ ಶಾಖಾಧಿಕಾರಿಗಳ ವಿರುದ್ದ ಕ್ರಮ ಕೈಕೊಳ್ಳಬೇಕಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಕ್ರಮ ಕೈಕೊಂಡಿದ್ದು ಇರುತ್ತದೆ.

 

ಭಿಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 89/2021 ಕಲಂ 279, 338 ಐಪಿಸಿ & ಸಂ 187 ಐಎಮ್ವಿ ಯಾಕ್ಟ : ದಿನಾಂಕ:07/12/2021 ರಂದು ಸಾಯಂಕಾಲ 6.30 ಗಂಟೆ ಸುಮಾರಿಗೆ ಶೀಲಾಬಾಯಿ ಇವಳು ಕುರಿ ಮೇಯಿಸಿಕೊಂಡು ಮದ್ರಕಿ-ಖಾದ್ಯಾಪೂರರೋಡಿನ ಮೇಲೆ ಹಾದಿಬಸವಣ್ಣಗುಡಿ ಹತ್ತಿರ ನಡೆದುಕೊಂಡುಊರಕಡೆಗೆ ಹೊರಟಾಗ ಹಿಂದಿನಿಂದಅಂದರೆ ಮದ್ರಕಿಕಡೆಯಿಂದಆರೋಪಿತ ಪರಶುರಾಮತಂದೆದ್ಯಾವಪ್ಪ ಬಾಣತಿಹಾಳ ಈತನುತನ್ನ ಮೋಟರ್ ಸೈಕಲ್ ನಂ:ಕೆಎ-33, ಯು-9361 ನೇದ್ದನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಮೋಟರ್ ಸೈಕಲ್ ಚಾಲಕನ ನಿಯಂತ್ರಣತಪ್ಪಿ ಶೀಲಾಬಾಯಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಮೋಟರ್ ಸೈಕಲದೊಂದಿಗೆ ಓಡಿ ಹೋಗಿದ್ದು, ಸದರಿಅಪಘಾತದಲ್ಲಿತಲೆಗೆ, ಸೊಂಟಕ್ಕೆ ಭಾರಿ ಒಳಪೆಟ್ಟಾಗಿದ್ದು ಬಲಗೈ ಮೊಳಕೈಗೆ, ಎಡಗಾಲ ತೊಡೆಗೆ, ಮೊಳಕಾಲಿನ ಕೆಳಗೆ ತರಚಿದ ರಕ್ತಗಾಯಗಳಾದ ಬಗ್ಗೆ ದೂರು.

Last Updated: 09-12-2021 11:04 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080