ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-02-2022
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 23/2022 ಕಲಂ 279, 337, 304(ಎ) ಐಪಿಸಿ : ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ 09.02.2022 ರಂದು ಬೆಳಗಿನಜಾವ 4.30 ಗಂಟೆಗೆ ಗುಡ್ಲಗುಂಟಾ ಗ್ರಾಮದ ಪಿಡ್ಡೆಪ್ಪ ತಂದೆ ಬಸವರಾಜ ಪೂಜಾರಿ, ವಯ|| 26 ವರ್ಷ, ಜಾ|| ಕುರುಬರ, ಉ|| ಒಕ್ಕಲುತನ, ಇವರು ಮತ್ತು ಇನ್ನಿತರ ಕೂಡಿ ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದರು. ದೂರಿನ ಸಾರಾಂಶವೇನೆಂದರೆ, ನಾನು ಮತ್ತು ನಮ್ಮ ಸಂಬಂಧಿಕರು 8-10 ಜನ ಕೂಡಿ ನಿನ್ನೆ ದಿನಾಂಕ 08.02.2022 ರಂದು ಮಧ್ಯಾಹ್ನ ವೇಳೆ ನಮ್ಮೂರಿನ ಸಿದ್ದಲಿಂಗಪ್ಪ ತಂದೆ ಸಾಬಣ್ಣ ದೊಡ್ಡ ಸಾಬಣ್ಣನೋರ, 35 ವರ್ಷ, ಕುರುಬರು ಈತನ ಬುಲೆರೋ ಗೂಡ್ಸ್ ವಾಹನ ಸಂಖ್ಯೆ ಕೆಎ-28-ಬಿ-1328 ವಾಹನದಲ್ಲಿ ಸಂಗ್ವಾರ ಗ್ರಾಮದ ಮರೆಮ್ಮದೇವಿ ಗುಡಿಗೆ ದರ್ಶನಕ್ಕೆ ಅಂತಾ ಹೋಗುತ್ತಿದ್ದೆವು. ಮಾರ್ಗಮಧ್ಯ ವಾಹನ ಚಾಲಕ ಸಿದ್ದಲಿಂಗಪ್ಪ ದೊಡ್ಡ ಸಾಬಣ್ಣನೋರ ಈತನು ತನ್ನ ವಾಹನ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಸೈದಾಪುರ-ಗೂಡೂರು ಮುಖ್ಯ ರಸ್ತೆಯ ಬೆಳಗುಂದಿ ಕ್ರಾಸ್ ಹತ್ತಿರ ತಿರುವು ರಸ್ತೆಯಲ್ಲಿ ನಿನ್ನೆ ದಿನಾಂಕ 08.02.2022 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ತನ್ನ ವಾಹನ ಅಪಘಾತಕ್ಕೀಡು ಮಾಡಿದ. ರಸ್ತೆ ಅಪಘಾತ ಕಾಲಕ್ಕೆ ವಾಹನ ರೋಡಿನಂಚಿನ ತೆಗ್ಗಿಗೆ ಹೋಗಿ ಬಿದ್ದ ಕಾರಣ ರಸ್ತೆ ಅಪಘಾತದಲ್ಲಿ ನನಗೆ ಕೈ, ಕಾಲುಗಳಿಗೆ ತರಚಿದ ಗಾಯಗಳಾದವು. ಉಳಿದ ಜನರ ಪೈಕಿ ತರುಣ ತಂದೆ ಭೀಮರಾಯ ದೊಡ್ಡ ಸಾಬಣ್ಣನೋರ 08 ತಿಂಗಳ ಪ್ರಾಯ ಹುಡುಗನಿಗೆ ಹಣೆಯ ಬಲಭಾಗಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟನು. ಮತ್ತು 1. ಅನೀಲ ತಂದೆ ಮಲ್ಲಪ್ಪ ಪೂಜಾರಿ, ವಯ|| 14 ವರ್ಷ, ಜಾ|| ಕುರುಬರು, ಸಾ|| ಗುಡ್ಲಗುಂಟಾ ಗ್ರಾಮ, 2. ರೇಣುಕಾ ತಂದೆ ಬನ್ನಪ್ಪ ಪೂಜಾರಿ, ವ|| 13 ವರ್ಷ, ಜಾ|| ಕುರುಬರು, ಸಾ|| ಗುಡ್ಲಗುಂಟಾ ಗ್ರಾಮ, 3. ಸಾಬಮ್ಮ ಗಂಡ ಹಣಮಂತ ಕಪ್ಪುಗಂಡ, ವ|| 26 ವರ್ಷ, ಜಾ|| ಕುರುಬರು, ಸಾ|| ಬದ್ದೆಪಲ್ಲಿ ಗ್ರಾಮ, 4. ಹಣಮಂತ ತಂದೆ ಯಂಕಪ್ಪ ಕಪ್ಪುಗಂಡ, ವ|| 32 ವರ್ಷ, ಜಾ|| ಕುರುಬರು, ಸಾ|| ಬದ್ದೆಪಲ್ಲಿ ಗ್ರಾಮ ಇವರಿಗೂ ಸಹ ಪೆಟ್ಟುಗಳಾಗಿರುತ್ತವೆ. ನಂತರ ಗಾಯಗೊಂಡ ನಮ್ಮನ್ನು ಒಂದು ಆಟೋದಲ್ಲಿ ಕೂಡಿಸಿಕೊಂಡು ಸೈದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ನಿನ್ನೆ ಸಾಯಂಕಾಲ ಸೈದಾಪುರ ಪೊಲೀಸರು ಸರಕಾರಿ ಆಸ್ಪತ್ರೆ ಸೈದಾಪುರಕ್ಕೆ ಬಂದು ನನಗೆ ಮತ್ತು ಗಾಯಗೊಂಡವರಿಗೆ ಹೇಳಿಕೆ ನೀಡುವಂತೆ ತಿಳಿಸಿದಾಗ ನಾವು ಸತ್ತ ಹುಡುಗನ ತಂದೆ-ತಾಯಿಯ ಹೇಳಿಕೆ ಪಡೆದು ಕೇಸ್ ಮಾಡ್ರಿ ಇಲ್ಲಂದ್ರೆ ನಾವು ಊರಿಗೆ ಹೋಗಿ ವಿಚಾರ ಮಾಡಿ ಬಂದು ದೂರು ನೀಡುತ್ತೇವೆ ಅಂತಾ ತಿಳಿಸಿದ್ದೆ. ನಾನು ಉಪಚಾರ ಮಾಡಿಸಿಕೊಂಡು ನಿನ್ನೆ ಸಾಯಂಕಾಲ ಊರಿಗೆ ಹೋಗಿದ್ದೆ. ಮೃತಪಟ್ಟಿರುವ ತರುಣ ತಂದೆ ಭೀಮರಾಯ ಎಂಬ ಹುಡುಗನಿಗೆ ಅವನ ಮನೆಯವರು ಯಾವುದೇ ಕೇಸ್ ಮಾಡದೆ ನೇರವಾಗಿ ಮೃತದೇಹ ಮನೆಗೆ ತಂದ ವಿಷಯ ಗೊತ್ತಾಗಿ ನಾನು ಅವರ ಮನೆಗೆ ಹೋಗಿದ್ದೆ.
ರಸ್ತೆ ಅಪಘಾತದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ನಮ್ಮೂರಿನವರು ನನಗೆ ಮತ್ತು ಮೃತನ ತಂದೆ-ತಾಯಿಗೆ ತಿಳುವಳಿಕೆ ಹೇಳಿದರು. ನನಗೆ ಮತ್ತು ಮೃತ ಹುಡುಗನ ತಂದೆ-ತಾಯಿಗೆ ಕಾನೂನಿನ ಸರಿಯಾದ ಪರಿಜ್ಞಾನ ಇಲ್ಲದೆ ನಿನ್ನೆ ದೂರು ನೀಡಿರುವದಿಲ್ಲ. ರಸ್ತೆ ಅಪಘಾತಕ್ಕೆ ಕಾರಣಿಭೂತನಾದ ನಮ್ಮೂರಿನ ಸಿದ್ದಲಿಂಗಪ್ಪ ತಂದೆ ಸಾಬಣ್ಣ ದೊಡ್ಡ ಸಾಬಣ್ಣನೋರ ಈತನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೋರಿದೆ. ನಾನು ನಮ್ಮೂರಿಗೆ ಹೋಗಿ ಮರಳಿ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.ಆಪಾದನೆ.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 24/2022 ಕಲಂ 323, 324, 504, ಸಂಗಡ 34 ಐಪಿಸಿ : ಇಂದು ದಿನಾಂಕ 09.02.2022 ರಂದು ಸಾಯಾಂಕಾಲ 7-30 ಗಂಟೆಗೆ ಶ್ರೀಮತಿ ದೇವಕಮ್ಮ ಗಂಡ ದಿ|| ನರಸಿಂಗಪ್ಪ, ಪಾಂಚಾರ ವಯಾ|| 46 ವರ್ಷ ಜಾ|| ವಿಶ್ವಕರ್ಮ ಉ|| ಮನೆಕೆಲಸ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ನನಗೆ ವೆಂಕಟೇಶ, ಮೋನಪ್ಪ ಅಂತಾ ಇಬ್ಬರೂ ಗಂಡು ಮಕ್ಕಳು ಇರುತ್ತಾರೆ ಸುಮಾರು 15 ವರ್ಷಗಳ ಹಿಂದೆಯೆ ನನ್ನಿಬ್ಬರೂ ಗಂಡು ಮಕ್ಕಳು ಬೇರೆ ಬೇರೆಯಾಗಿ ತಮ್ಮ ಕುಟುಂಬದೊಂದಿಗೆ ಪ್ರತ್ಯೇಕವಾಗಿ ವಾಸವಾಗಿರುತ್ತಾರೆ ನನ್ನ ಗಂಡ ಸನ್ 2000 ನೇ ಇಸ್ವಿಯಲ್ಲಿ ಮೃತಪಟ್ಟಿರುತ್ತಾನೆ ನಾನು ಇತ್ತೀಚಿನ 15 ವರ್ಷಗಳಿಂದ ನನ್ನ ಸಣ್ಣ ಮಗನಾದ ಮೋನಪ್ಪನ ಹತ್ತಿರ ಇದ್ದು ಜೀವನ ನಡೆಸುತ್ತಿದ್ದೇನೆ.
ಹೀಗಿದ್ದು ಕಳೆದ 3-4 ದಿನಗಳಿಂದೆ ನನ್ನ ಸಣ್ಣ ಮಗ ಮೋನಪ್ಪ ತನ್ನ ಸಂಸಾರದ ಅಡಚಣೆಯ ಸಂಬಂಧ ಆತನ ಪಾಲಿಗೆ ಬಂದ ಮನೆ ನಮ್ಮೂರಿನ ಉಪ್ಪಾರ ಸಮಾಜದವರಿಗೆ ಮಾರಾಟ ಮಾಡಿರುತ್ತಾನೆ. ನನ್ನನ್ನು ನನ್ನ ದೊಡ್ಡಮಗ ಹಾಗೂ ಆತನ ಹೆಂಡತಿ ಎಲ್ಲಿ ಸಲುಹುಬೇಕಾವುದೊ ಅಂತಾ ತಿಳಿದು ಇಂದು ದಿನಾಂಕ 09-02-2022 ರಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ನನ್ನ ಸಣ್ಣಮಗನ ಮನೆಯಲ್ಲಿ ನನಗೆ ಗಂಡ ಹೆಂಡತಿಯರು ಇಬ್ಬರೂ ಕೂಡಿ ಅವನು ಮನೆ ಮಾರಾಟ ಮಾಡಿದ್ದಾನೆ ನೀನೂ ಅವನ ಹಿಂದೆ ಹೋಗಿ ಸಾಯಿ ನಮ್ಮ ಮನೆಯಲ್ಲಿ ಕಾಲಿಡಬಾರದು ಅಂತಾ ಅಂದರು. ಅದಕ್ಕೆ ನಾನು ಸಣ್ಣಮಗ ಮನೆ ಮಾರ್ಯಾನ ನನಗೆ ಯಾರೂ ಕೂಳು ಹಾಕುತ್ತಾರೆ ನೀವೆ ಹಾಕಬೇಕಲ್ಲ ಅಂತಾ ಅಂದಾಗ ನನ್ನ ಸೊಸೆ ಈರಮ್ಮ ನಿನಗೆ ಯಾಕೆ ಕೂಳೂ ಹಾಕಬೇಕು ರಂಡಿ ಅಂತಾ ಚೀರಿ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದು ನನ್ನ ಕೈಗೆ ಹೊಡೆದಳು ನನ್ನ ಸೊಸೆಯ ಕೈಯಿಂದ ಕಟ್ಟಿಗೆ ಕಸೆದುಕೊಂಡು ನನ್ನ ಮಗನು ಸಹ ಕಟ್ಟಿಗೆಯಿಂದ ಹೊಡೆದನು. ಇದನ್ನು ನೋಡಿದ ನಮ್ಮೂರಿನ ಖಾಜಾಹುಸೇನಿ ಹಾಗೂ ನಾಗಮ್ಮ ಗಂಡ ಬುಗ್ಗಪ್ಪ ಇವರು ಬಂದು ಮುದುಕಿಗೆ ಯಾಕ್ ಹೊಡಿತ್ತೀರಿ ಅಂತಾ ಬಂದು ಬಿಡಿಸಿಕೊಂಡಿರುತ್ತಾರೆ. ಕಾರಣ ನನ್ನ ದೊಡ್ಡಮಗ ವೆಂಕಟೇಶ ತಂದೆ ನರಸಿಂಗಪ್ಪ ವ|| 48 ವರ್ಷ ಮತ್ತು ನನ್ನ ಸೊಸೆ ಈರಮ್ಮ ಗಂಡ ವೆಂಕಟೇಶ ವ|| 38 ವರ್ಷ ಇವರ ವಿರುದ್ದ ಪ್ರಕರಣ ದಾಖಲಿಸಿ ನನ್ನನ್ನು ಆಸ್ಪತ್ರೆಗೆ ಕಳುಹಿಸಿ ಉಪಚಾರ ಹೊಂದಲು ಅನುವು ಮಾಡಿಕೊಳ್ಳಲು ಕೋರುತ್ತೇನೆ. ಅಂತಾ ಆಪಾದನೆ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನ ನಂ: 08/2022 ಕಲಂ. 279, 304(ಎ) ಐಪಿಸಿ : ದಿನಾಂಕ:09/02/2022 ರಂದು ಮದ್ಯಾಹ್ನ 13.00 ಗಂಟೆಯ ಸುಮಾರಿ ಮೃತನು ಕಾಮನಟಗಿಯಿಂದ ಗ್ವಾಲಗೇರಿಗೆ ಕಬ್ಬು ಕಡಿಯುವ ಕೂಲಿ ಕೆಲಸಕ್ಕೆ ಮೋಟರ್ ಸೈಕಲ್ ನಂ.ಕೆಎ-28 ಇಎಕ್ಸ್-6231 ನೇದ್ದನು ತೆಗೆದುಕೊಂಡು ಹುಣಸಗಿಯಿಂದ ಕೆಂಭವಿ ಕಡೆಗೆ ಹೊರಟು ಇಸ್ಲಾಂಪೂರ ಕ್ರಾಸ್ ಹತ್ತಿರ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಮೋಟರ್ ಸೈಕಲ್ ನ್ನು ಚಲಾಯಿಸಿ ನಿಯಂತ್ರಣ ತಪ್ಪಿ ರೋಡಿನ ಮೇಲೆ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದು ತಲೆಯ ಹಿಂಭಾಗಕ್ಕೆ ಮತ್ತು ಎಡಭಾಗಕ್ಕೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರದ್ದರಿಂದ ಅರಕೇರಾ(ಜೆ) ಗ್ರಾಮದ ಮಲ್ಲಪ್ಪಗೌಡ ಪೋ.ಪಾಟೀಲ ಇತನು ನೋಡಿ 108 ವಾಹನಕ್ಕೆ ಪೋನ್ ಮಾಡಿ ವಾಹನ ಬಂದ ನಂತರ ಸದರಿ ವಾಹನದಲ್ಲಿ ಹಾಕಿಕೊಂಡು ಹುಣಸಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಮದ್ಯಾಹ್ನ 3.30 ಗಂಟಗೆ ಚಿಕಿತ್ಸೆ ಹೊಂದುವಾಗ ಹುಣಸಗಿ ಸರಕಾರಿ ಆಸ್ಪತ್ರೆಯಲ್ಲಿ ಮೃತನಿಗೆ ಆದ ಗಾಯಗಳಿಂದ ಗುಣಮುಖವಾಗದೆ ಮೃತಪಟ್ಟ ಬಗ್ಗೆ ಅಪರಾಧ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ :-
ಗುನ್ನೆ ನಂ: 17/2022 ಕಲಂ 379 ಐಪಿಸಿ : ಇಂದು ದಿನಾಂಕ: 09-02-2022 ರಂದು ಬೆಳಿಗ್ಗೆ 11-50 ಗಂಟೆಗೆ ಶ್ರಿ ಹಣಮಂತ ಪಿ.ಎಸ್.ಐ(ಕಾ.ಸು) ರವರು ಠಾಣೆಗೆ ಹಾಜರಾಗಿ ಠಾಣಾಗುಂದಿ ಹಳ್ಳದಲ್ಲಿ ಮರಳು ತುಂಬಿಕೊಂಡು ಬಂದ ಮ್ಯಾಶಿ ಪರಗುಶನ್ ಕಂಪನಿಯ ಟ್ರ್ಯಾಕ್ಟರ ನಂ. ಕೆಎ-33 ಟಿಎ-2550 ನೇದ್ದನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.17/2022 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 18/2022 ಕಲಂ. 279,338 ಐಪಿಸಿ & 187 ಐ.ಎಮ್.ವಿ ಕಾಯ್ದೆ : ದಿನಾಂಕ 09-02-2022 ರಂದು ರಾತ್ರಿ 07-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 08-02-2022 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನನ್ನ ಮಗ ದೇವರಾಜ ಮತ್ತು ನನ್ನ ಅತ್ತೆ ಭಾಗಮ್ಮ ಇವರು ಹೊಲಕ್ಕೆ ಹೋಗಿ ದ್ಯಾವಮ್ಮ ದೇವಿಗೆ ನೈವದ್ಯ ಕೊಟ್ಟು ವಾಪಸ ಹೊಲದ ಕಡೆಗೆ ಯಾದಗಿರಿ-ಕಲಬುರಗಿ ಮುಖ್ಯ ರಸ್ತೆಯ ಮೇಲೆ ಗುಲಗುಂಜಿ ತಾಂಡ ಕ್ರಾಸ ಹತ್ತಿರ ಹೋಗುತ್ತಿರುವಾಗ ಮೋಟರ ಸೈಕಲ್ ಚಾಲಕನು ತಾನು ನಡೆಸುವ ಮೋಟರ ಸೈಕಲ್ ನಂ. ಕೆಎ-32 ಎಸ್-5307 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ದೇವರಾಜ ಈತನಿಗೆ ಅಪಘಾತಪಡಿಸಿದ್ದು ಅಪಘಾತದಲ್ಲಿ ದೇವರಾಜನಿಗೆ ಎರಡು ಕಾಲುಗಳಿಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತವೆ. ಮೋಟರ ಸೈಕಲ್ ಚಾಲಕನ ಅಪಘಾತ ಪಡಿಸಿ ಮೋಟರ ಸೈಕಲ್ ನಿಲ್ಲಿಸದೆ ಓಡಿಹೋಗಿರುತ್ತಾನೆ ಅಂತಾ ಪಿಯರ್ಾಧಿ. ಸಾರಂಶ ಇರುತ್ತದೆ.
ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ. 14/2022 ಕಲಂ: 143, 147, 148, 341, 323, 324, 355, 504, 506 ಸಂ 149 ಐಪಿಸಿ : ಇಂದು ದಿನಾಂಕ 09.02.2022 ರಂದು 2:30 ಪಿಎಮ್ ಕ್ಕೆ ಪಿರ್ಯಾದಿ ಶ್ರೀ ಬಸನಗೌಡ ತಂದೆ ಅಂಬ್ರಪ್ಪಗೌಡ ಪೊಲೀಸ್ಪಾಟೀಲ ವ-46 ವರ್ಷ ಉ-ಒಕ್ಕಲುತನ ಜಾತಿ-ಹಿಂದೂ ಬೇಡರ ಸಾ-ಬೈಲಕುಂಟಿ ತಾ-ಹುಣಸಗಿ ಜಿ-ಯಾದಗಿರ ರವರು ಠಾಣೆಗೆ ಹಾಜರಾಗಿ ತನ್ನ ಪಿರ್ಯಾದಿ ಹೇಳಿಕೆಯನ್ನು ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು ಸದರಿ ಪಿರ್ಯಾದಿಯ ಹೇಳಿಕೆಯ ಸಾರಾಂಶವೆನೇಂದರೆ ನಾನು ಹೆಂಡತಿ ಮಕ್ಕಳೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನನ್ನ ತಂದೆಯವರು ಅಂಬ್ರಪ್ಪಗೌಡ, ಕೃಷ್ಣಪ್ಪಗೌಡ, ಬಾಲಗೌಡ ಅಂತ ಮೂರು ಜನ ಅಣ್ಣತಮ್ಮಂದಿರಿದ್ದು ಇವರು ಮೂರು ಜನರು ಈಗ ಬೇರೆ ಬೇರೆಯಾಗಿದ್ದು ಇವರೆಲ್ಲರೂ ಕೂಡಿ ಇರುವ ಕಾಲಕ್ಕೆ ಬೈಲಕುಂಟಿ ಸೀಮಾಂತರದ ಸವರ್ೆ ನಂ:36, 38 ರಲ್ಲಿಯ 7 ಎಕರೆ ಜಮೀನನ್ನು ನನ್ನ ಹೆಸರಿಗೆ ಮಾಡಿದ್ದು ಮೂರು ಜನರು ಬೇರೆಯಾದ ನಂತರವೂ ಈ ಜಮೀನು ನನ್ನ ಹೆಸರಿನಲ್ಲಿಯೇ ಇದ್ದು ನನ್ನ ಕಾಕ ಬಾಲಗೌಡನು ಈಗ ಬಹಳ ವರ್ಷಗಳ ಹಿಂದೆ ತೀರಿಕೊಂಡಿದ್ದು ನನ್ನ ಚಿಗವ್ವ ದ್ಯಾಮವ್ವ ಇವರು ಜೀವಂತ ಇದ್ದು ಇವರಿಗೆ ಬಸಮ್ಮ, ಲಂಕೆಮ್ಮ ಅಂತ ಇಬ್ಬರೂ ಹೆಣ್ಣು ಮಕ್ಕಳಿದ್ದು ಇವರಿಬ್ಬರದೂ ಮದುವೆಯಾಗಿದ್ದು ಅವರು ತಮ್ಮ ಗಂಡನ ಮನೆಯಲ್ಲಿ ಇರುತ್ತಾರೆ. ನನ್ನ ಕಾಕ ಕೃಷ್ಣಪ್ಪಗೌಡನು ಈಗ ಕೆಲ ದಿವಸಗಳ ಹಿಂದೆ ಕಾಕ ಬಾಲಗೌಡನು ಸತ್ತಿದ್ದರಿಂದ ಅವನಿಗೆ ಗಂಡು ಮಕ್ಕಳು ಇಲ್ಲದಿರುವದರಿಂದ ಬಾಲಗೌಡನ ಆಸ್ತಿಯಲ್ಲಿ ತನ್ನ ಮಕ್ಕಳಿಗೆ ಅರ್ಧ ಮತ್ತು ನಾನು ಮತ್ತು ನನ್ನ ತಮ್ಮ ಹಣಮಗೌಡನಿಗೆ ಅರ್ಧ ಪಾಲು ಮಾಡಿಕೊಳ್ಳೋಣ ಅಂತ ಅಂದಿದ್ದು ನಂತರದ ದಿನಗಳಲ್ಲಿ ನನ್ನ ಕಾಕ ಬಾಲಗೌಡನ ಮಕ್ಕಳಾದ ಬಸಮ್ಮ ಮತ್ತು ಲಂಕೆಮ್ಮ ರವರಿಗೆ ಈ ವಿಷಯ ಗೊತ್ತಾಗಿ ನಮ್ಮ ದೊಡ್ಡಪ್ಪ ಕೃಷ್ಣಪ್ಪಗೌಡನಿಗೆ ನಮ್ಮ ತಂದೆಗೆ ಗಂಡು ಮಕ್ಕಳು ಇಲ್ಲದಿದ್ದರೆ ಏನಾಯಿತು ನಾವು ಇಬ್ಬರೂ ಹೆಣ್ಣು ಮಕ್ಕಳಿದ್ದೇವೆ ಆ ಆಸ್ತಿ ನಮಗೆ ಸೇರಬೇಕು ನನ್ನ ತಂದೆಯ ಆಸ್ತಿಯನ್ನು ನಮಗೆ ಬಿಟ್ಟು ಕೊಡಬೇಕು ಅಂತ ಅಂದಿದ್ದು ಕಾಕ ಕೃಷ್ಣಪ್ಪಗೌಡನು ಇದಕ್ಕೆ ಒಪ್ಪದೇ ಆ ಆಸ್ತಿ ನಮಗೆ ಬೇಕು ಅಂತ ವಾದಿಸಿದ್ದು ಇದರಿಂದ ನನ್ನ ಕಾಕನ ಮಕ್ಕಳಾದ ಬಸಮ್ಮ ಮತ್ತು ಲಂಕೆಮ್ಮ ರವರು ಕೋರ್ಟಗೆ ಹೋಗಿ ತಮ್ಮ ಹೆಸರಿಗೆ ಡಿಕ್ರಿ ಮಾಡಿಸಿಕೊಂಡಿದ್ದು ಈ ಜಮೀನು ನನ್ನ ಹೆಸರಿನಲ್ಲಿ ಇದ್ದು ನಾನು ನನ್ನ ತಂಗಿಯರಿಗೆ ಯಾವುದೇ ಸಮಯದಲ್ಲಿ ಸಹಿ ಮಾಡು ಅಂದರೆ ಮಾಡುತ್ತೇನೆ ಅಂತ ಅಂದಿದ್ದರಿಂದ ನನ್ನ ಕಾಕ ಕೃಷ್ಣಪ್ಪಗೌಡನು ಅವರಿಗೆ ಯಾಕೆ ಸಹಿ ಮಾಡುತ್ತೀ ಆ ಜಮೀನಿನಲ್ಲಿ ನಿಮಗೆ ಅರ್ಧ, ನಮಗೆ ಅರ್ಧ ಬರುತ್ತದೆ ಅಂತ ಅಂದಿದ್ದು ಅಲ್ಲದೇ ನೀನು ಯಾವುದೇ ಕಾರಣಕ್ಕೆ ಸಹಿ ಮಾಡಬೇಡ ಅಂತ ಅನ್ನುತ್ತಾ ಬಂದಿದ್ದು ಕಾಕ ಕೃಷ್ಣಪ್ಪಗೌಡನು ಅನ್ನುವ ಮಾತಿಗೆ ನನ್ನ ತಮ್ಮ ಹಣಮಗೌಡನೂ ದ್ವನಿಗೂಡಿಸುತ್ತಿದ್ದನು.
ಹೀಗಿದ್ದು ಇಂದು ದಿನಾಂಕ 09.02.2022 ರಂದು ಬೆಳಿಗ್ಗೆ 06:00 ಗಂಟೆಯ ಸುಮಾರಿಗೆ ನಾನು ಊರ ಹತ್ತಿರದ ನಮ್ಮ ಹೊಲಕ್ಕೆ ನಮ್ಮ ಆಕಳಿನ ಹಾಲು ಹಿಂಡಿಕೊಂಡು ಬರಲು ಹೋಗಿ 07:00 ಗಂಟೆಯ ಸುಮಾರಿಗೆ ಹಾಲು ಹಿಂಡಿಕೊಂಡು ನಮ್ಮ ಮನೆಗೆ ಬರಲು ನಮ್ಮೂರ ಸೇದಿ ಬಾವಿ ದಾರಿಯಲ್ಲಿರುವ ನನಗೆ ಅಣ್ಣನಾಗಬೇಕಾದ ದೊಡ್ಡಬಸನಗೌಡ ತಂದೆ ಕೃಷ್ಣಪ್ಪಗೌಡ ಪೊಲೀಸ್ಪಾಟೀಲ ರವರ ಮನೆಯ ಮುಂದಿನ ದಾರಿಯ ಮೇಲಿಂದ ಹೋಗುತ್ತಿರುವಾಗ ಅಲ್ಲಿ ನನ್ನ ತಮ್ಮ ಹಣಮಗೌಡ ತಂದೆ ಅಂಬ್ರಪ್ಪಗೌಡ ಪೊಲೀಸ್ಪಾಟೀಲ ಹಾಗೂ ನನ್ನ ಕಾಕನಾದ ಕೃಷ್ಣಪ್ಪಗೌಡ ತಂದೆ ಶಿವಪ್ಪಗೌಡ ಪೊಲೀಸ್ಪಾಟೀಲ ಹಾಗೂ ನನ್ನ ಕಾಕನ ಮಕ್ಕಳಾದ ಬಾಲಗೌಡ ತಂದೆ ಕೃಷ್ಣಪ್ಪಗೌಡ ಪೊಲೀಸ್ಪಾಟೀಲ, ದೊಡ್ಡಬಸನಗೌಡ ತಂದೆ ಕೃಷ್ಣಪ್ಪಗೌಡ ಪೊಲೀಸ್ಪಾಟೀಲ, ನಾಗನಗೌಡ ತಂದೆ ಕೃಷ್ಣಪ್ಪಗೌಡ ಪೊಲೀಸ್ಪಾಟೀಲ, ಶಿವಪ್ಪಗೌಡ ತಂದೆ ಕೃಷ್ಣಪ್ಪಗೌಡ ಪೊಲೀಸ್ಪಾಟೀಲ ಇವರುಗಳು ನಾನು ಹೊಲಕ್ಕೆ ಹೋದ ವಿಷಯ ಗೊತ್ತಾಗಿ ಗುಂಪಾಗಿ ಕುಳಿತಿದ್ದು ಅವರೆಲ್ಲರೂ ನನ್ನ ಹತ್ತಿರ ಬಂದವರೇ ನನಗೆ ತಡೆದು ನಿಲ್ಲಿಸಿ ಬೋಸಡೀ ಮಗನೇ ನೀನು ನಮಗೆ ಮತ್ತು ನಿಮಗೆ ಬರಬೇಕಾದ ಹೊಲವನ್ನು ಬಸಮ್ಮ ಮತ್ತು ಲಂಕೆಮ್ಮ ರವರಿಗೆ ಮಾಡಲು ಹುನ್ನಾರ ನಡೆಸಿದಿ ಸೂಳೆ ಮಗನೇ ಇವತ್ತು ನಿನಗೆ ಬಿಡುವದಿಲ್ಲ ಒಂದು ಗತಿ ಕಾಣಿಸುತ್ತೇವೆ ಅಂತ ಅಂದವರೇ ಅವರಲ್ಲಿಯ ಬಾಲಗೌಡ ಇತನು ತನ್ನ ಕಾಲಲ್ಲಿಯ ಚಪ್ಪಲಿಯಿಂದ ನನ್ನ ಎಡಗಿವಿಯ ಮೇಲೆ ಜೋರಾಗಿ ಹೊಡೆದಿದ್ದು ನಾಗನಗೌಡ ತಂದೆ ಕೃಷ್ಣಪ್ಪಗೌಡ ಪೊಲೀಸ್ಪಾಟೀಲ ಇತನು ತನ್ನ ಕಾಲಲ್ಲಿಯ ಚಪ್ಪಲಿಯಿಂದ ನನ್ನ ಎಡ ಕಪಾಳದ ಮೇಲೆ ಮತ್ತು ತಲೆಯ ಮೇಲೆ ಜೋರಾಗಿ ಹೊಡೆದು ಒಳಪೆಟ್ಟು ಮಾಡಿದ್ದು ಶಿವಪ್ಪಗೌಡ ತಂದೆ ಕೃಷ್ಣಪ್ಪಗೌಡ ಪೊಲೀಸ್ಪಾಟೀಲ ಇತನು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಬಲಗಾಲ ಮೊಳಕಾಲಿನ ಕೆಳಭಾಗದಲ್ಲಿ ಹೊಡೆದು ತರಚಿದ ನಮೂನೆಯ ಗಾಯ ಮಾಡಿದ್ದು ದೊಡ್ಡಬಸನಗೌಡ ತಂದೆ ಕೃಷ್ಣಪ್ಪಗೌಡ ಪೊಲೀಸ್ಪಾಟೀಲ ಇತನು ನನಗೆ ನೆಲಕ್ಕೆ ಕೆಡವಿ ಹೊಟ್ಟೆಯ ಮೇಲೆ ಹಾಗೂ ಎದೆಯ ಮೇಲೆ ಕಾಲಿನಿಂದ ತುಳಿದು ಗುಪ್ತಗಾಯ ಮಾಡಿದ್ದು ನನ್ನ ತಮ್ಮ ಹಣಮಗೌಡ ಹಾಗೂ ಕಾಕ ಕೃಷ್ಣಪ್ಪಗೌಡ ಇವರುಗಳು ಈ ಬಸ್ಯಾ ಸೂಳೆ ಮಗನಿಗೆ ಸೊಕ್ಕು ಬಾಳ ಬಂದಿದೆ ಇನ್ನೂ ಹೊಡೆಯಿರೀ ಅಂತ ಅನ್ನುತ್ತಿದ್ದರು, ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತ ಚೀರಾಡುತ್ತಿರುವಾಗ ಅಲ್ಲಿಂದಲೇ ನೀರು ತರಲು ಹೋಗುತ್ತಿದ್ದ ನನ್ನ ಮಗ ದೇವೆಗೌಡ ತಂದೆ ಬಸನಗೌಡ ಪೊಲೀಸ್ಪಾಟೀಲ ಹಾಗೂ ಗುರಪ್ಪ ತಂದೆ ಹಣಮಂತ್ರಾಯ ಕೋಳಿಹಾಳ ಮತ್ತು ತರಕಾರಿ ತರಲು ಹೋಗುತ್ತಿದ್ದ ನಾನಾಗೌಡ ತಂದೆ ಹಣಮಂತ್ರಾಯ ಕೋಳಿಹಾಳ ಇವರುಗಳು ಬಂದು ನನಗೆ ಹೊಡೆಯುವದನ್ನು ಬಿಡಿಸಿದ್ದು ಹೋಗುವಾಗ ಮೇಲೆ ನಮೂದಿಸಿದ ಆರು ಜನರು ಬೋಸಡಿ ಮಗನೇ ಇವತ್ತು ನಮ್ಮ ಕೈಯಲ್ಲಿ ಉಳಿದುಕೊಂಡಿದೀ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವಂತ ಬಿಡುವದಿಲ್ಲ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು ನಾನು ವಿಚಾರ ಮಾಡಿ ಈಗ ತಡವಾಗಿ ಬಂದು ದೂರು ಕೊಡುತ್ತಿದ್ದು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿ ಟೈಪ್ ಮಾಡಿಸಿದ ಹೇಳಿಕೆ ನಿಜವಿರುತ್ತದೆ ಅಂತ ಪಿಯರ್ಾದಿಯ ಗಣಕೀಕೃತ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.14/2022 ಕಲಂ: 143, 147, 148, 341, 323, 324, 355, 504, 506 ಸಂ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡಿದ್ದ್ದು ಇರುತ್ತದೆ.
ಕೊಡೇಕಲ ಪೊಲೀಸ್ ಠಾಣೆ:-
ಗುನ್ನೆ ನಂ. 15/2022 ಕಲಂ: 323, 324, 504, 506 ಸಂ 34 ಐಪಿಸಿ : ಇಂದು ದಿನಾಂಕ 09.02.2022 ರಂದು 5:00 ಪಿಎಮ್ ಕ್ಕೆ ಪಿರ್ಯಾದಿ ಶ್ರೀಮತಿ ಸಿದ್ದಮ್ಮ ಗಂಡ ನಂದಪ್ಪ ಪೂಜಾರೆರ ವ-30 ವರ್ಷ ಉ-ಮನೆಗೆಲಸ ಜಾತಿ-ಹಿಂದೂ ಕುರುಬರ ಸಾ-ಪೂಜಾರೆರದೊಡ್ಡಿ ಮಂಜಲಾಪೂರ ಕಕ್ಕೇರಾ ತಾ-ಸುರಪೂರ ಜಿ-ಯಾದಗಿರ ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ತನ್ನ ಪಿರ್ಯಾದಿ ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಅಜರ್ಿಯ ಸಾರಾಂಶವೆನೇಂದರೆ ನಾನು ನಮ್ಮ ಮನೆಯಲ್ಲಿ ನನ್ನ ಗಂಡ ನಂದಪ್ಪ, ಅತ್ತೆ ಅಂಬವ್ವ ಹಾಗೂ ಮಕ್ಕಳೊಂದಿಗೆ ಮನೆಗೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು, ನಮ್ಮ ಮನೆಯು ಪೂಜಾರೆರದೊಡ್ಡಿ ಮಂಜಲಾಪೂರ ಕಕ್ಕೇರಾದ ನಮ್ಮ ಹೊಲದಲ್ಲಿ ಕಕ್ಕೇರಾ ದೇವತ್ಕಲ್ ರಸ್ತೆಗೆ ಹೊಂದಿ ಇರುತ್ತದೆ. ನಮ್ಮ ಮನೆಯ ಪಕ್ಕದಲ್ಲಿ ನನ್ನ ಗಂಡನ ಕಾಕನಾದ ರಾತ್ರೆಪ್ಪ ತಂದೆ ಪರಮಣ್ಣ ಪೂಜಾರೆರ ರವರ ಮನೆಯು ಇರುತ್ತದೆ. ನಮ್ಮ ಮನೆಯ ಮುಂದಿನ ಜಾಗೆಯಲ್ಲಿ ನಾವು ತೆಂಗಿನ ಗಿಡ, ಚಿಕ್ಕು ಹಣ್ಣಿನ ಹಾಗೂ ನಿಂಬೆ ಹಣ್ಣಿನ ಗಿಡಗಳನ್ನು ಹಚ್ಚಿದ್ದು ಈಗ 8-10 ತಿಂಗಳುಗಳ ಹಿಂದೆ ನನ್ನ ಗಂಡನ ಕಾಕನಾದ ರಾತ್ರೆಪ್ಪನು ನಮ್ಮ ನಿಂಬೆ ಗಿಡಗಳನ್ನು ಕಡಿದಿದ್ದು ಗಿಡಗಳು ತನ್ನ ಜಾಗೆಯಲ್ಲಿ ಇರುತ್ತವೆ ಅಂತ ತಕರಾರು ಮಾಡುವದು ಹಾಗೂ ತೆಂಗಿನ ಗಿಡಗಳಲ್ಲಿ ತೆಂಗಿನಕಾಯಿ ಆದಾಗ ಅವುಗಳನ್ನು ನಮಗೆ ಹೇಳದೆ ಕೇಳದೆ ಹರಿದುಕೊಳ್ಳುವದು ಮಾಡುತ್ತಾ ಬಂದಿದ್ದು ನಾವು ನಮ್ಮ ಜಾಗೆಯಲ್ಲಿ ಗಿಡಗಳು ಇರುತ್ತವೆ ಅಂತ ಅಂದರೂ ಕೂಡ ಮತ್ತೆ ಮತ್ತೆ ನಮ್ಮೊಂದಿಗೆ ತಕರಾರು ಮಾಡಿದ್ದು ಇರುತ್ತದೆ.
ಹೀಗಿರುವಾಗ ನಿನ್ನೆ ದಿನಾಂಕ 08.02.2022 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಕುಳಿತಿದ್ದಾಗ ನನ್ನ ಗಂಡನ ಕಾಕನಾದ ರಾತ್ರೆಪ್ಪ ತಂದೆ ಪರಮಣ್ಣ ಪೂಜಾರೆರ ಹಾಗೂ ಅವನ ಮಕ್ಕಳಾದ ಸೋಮನಿಂಗಪ್ಪ ತಂದೆ ರಾತ್ರೆಪ್ಪ ಪೂಜಾರೆರ, ನಂದಪ್ಪ ತಂದೆ ರಾತ್ರೆಪ್ಪ ಪೂಜಾರೆರ ಇವರೆಲ್ಲರೂ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಇರುವ ತೆಂಗಿನ ಗಿಡಗಳ ಹತ್ತಿರ ಬಂದು ತೆಂಗಿನ ಗಿಡ ಏರಿ ತೆಂಗಿನ ಕಾಯಿಗಳನ್ನು ಹರಿಯಲು ಹತ್ತಿದ್ದು ಆಗ ನನ್ನ ಗಂಡನು ಅವರಿಗೆ ಯಾಕೆ ನಮ್ಮ ತೆಂಗಿನ ಗಿಡದ ಕಾಯಿಗಳನ್ನು ಹರಿಯುತ್ತಿರೀ ಅಂತ ಅಂದಾಗ ಮೂರು ಜನರು ನನ್ನ ಗಂಡನಿಗೆ ಬೋಸಡಿ ಮಗನೇ ಈ ಗಿಡಗಳು ನನ್ನವು ಇರುತ್ತವೆ, ನಿಮಗೆ ನಾನು ಯಾಕೆ ಕೇಳಬೇಕು ಅಂತ ಬೈದವನೇ ನನ್ನ ಗಂಡ ನಂದಪ್ಪ ತಂದೆ ಮಲ್ಲಪ್ಪ ಪೂಜಾರಿ ಇತನಿಗೆ ರಾತ್ರೆಪ್ಪನು ತನ್ನ ಕೈಯಲ್ಲಿಯ ಬಿದಿರು ಬಡಿಗೆಯಿಂದ ನನ್ನ ಗಂಡನ ಬಲಗಾಲ ತೊಡೆಯ ಮೇಲೆ ಹೊಡೆದು ಕಂದುಗಟ್ಟಿದ ಗಾಯ ಪಡಿಸಿ ಒಳಪೆಟ್ಟು ಮಾಡಿದ್ದು, ಸೋಮನಿಂಗಪ್ಪ ತಂದೆ ರಾತ್ರೆಪ್ಪ ಇತನು ತನ್ನ ಕೈಯಲ್ಲಿಯ ಬಿದಿರು ಬಡಿಗೆಯಿಂದ ನನ್ನ ಗಂಡನ ಎರಡು ಕೈಗಳ ಮೊಳಕೈ ಕೆಳಗಿನ ಭಾಗದಲ್ಲಿ ಹೊಡೆದು ಒಳಪೆಟ್ಟು ಮಾಡಿದ್ದು, ನಂದಪ್ಪ ತಂದೆ ರಾತ್ರೆಪ್ಪ ಪೂಜಾರೆರ ಇತನು ಕೈಯಿಂದ ನನ್ನ ಗಂಡನ ಎದೆಯ ಮೇಲೆ ಗುದ್ದಿ ಗುಪ್ತಗಾಯ ಮಾಡಿದ್ದು ಆಗ ನಾನು ನನ್ನ ಗಂಡನನ್ನು ಉಳಿಸಿರಪ್ಪೋ ಅಂತ ಚೀರಾಡಹತ್ತಿದಾಗ ಅಲ್ಲಿಯೇ ತಮ್ಮ ಮನೆಯ ಮುಂದೆ ಇದ್ದ ನಮ್ಮ ಅಣ್ಣತಮ್ಮಕಿಯ ಸಂಬಂಧಿಕರಾದ ನಂದಪ್ಪ ತಂದೆ ಅಯ್ಯಪ್ಪ ಪೂಜಾರೆರ, ಶಿವಮ್ಮ ಗಂಡ ಸೋಮನಿಂಗಪ್ಪ ಪೂಜಾರೆರ ಹಾಗೂ ನಮ್ಮ ಮನೆಯ ಮುಂದಿನ ರಸ್ತೆಯ ಮೇಲಿಂದ ಹೋಗುತ್ತಿದ್ದ ಮಾಳಪ್ಪ ತಂದೆ ಸೋಮಣ್ಣ ದೇವತ್ಕಲ್ ಇವರುಗಳು ಬಂದು ನೋಡಿ ಬಿಡಿಸಿದ್ದು ಹೋಗುವಾಗ ರಾತ್ರೆಪ್ಪ ಮತ್ತು ಆತನ ಮಕ್ಕಳು ನನ್ನ ಗಂಡನಿಗೆ ಸೂಳೆ ಮಗನೇ ಪೊಲೀಸ್ ಕೇಸು-ಗೀಸು ಅಂತ ಮಾಡಿದರೆ ನಿನಗೆ ಜೀವಂತ ಬಿಡುವದಿಲ್ಲ ಜೀವದ ಬೆದರಿಕೆ ಹಾಕಿ ಹೋಗಿದ್ದು ನಿನ್ನೆಯ ದಿನ ರಾತ್ರಿಯಾಗಿದ್ದರಿಂದ ಈ ದಿವಸ ನಾನು ಮತ್ತು ನನ್ನ ಅತ್ತೆ ಅಂಬವ್ವ ಗಂಡ ಮಲ್ಲಪ್ಪ ಪೂಜಾರೆರ ಇಬ್ಬರೂ ಕೂಡಿ ನನ್ನ ಗಂಡನನ್ನು ಉಪಚಾರಕ್ಕಾಗಿ ಕಕ್ಕೇರಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಕಕ್ಕೇರಾ ಆಸ್ಪತ್ರೆಯ ವೈದ್ಯರು ನನ್ನ ಗಂಡನಿಗೆ ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಲಿಂಗಸ್ಗೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು ನಾನು ಮತ್ತು ನನ್ನ ಅತ್ತೆ ಇಬ್ಬರೂ ಕೂಡಿಕೊಂಡು ನನ್ನ ಗಂಡನಿಗೆ ಇಂದು ಮಧ್ಯಾಹ್ನ ಲಿಂಗಸ್ಗೂರು ಸರಕಾರಿ ಆಸ್ಪತ್ರೆಗೆ ಕರದುಕೊಂಡು ಹೋಗಿದ್ದು ನನ್ನ ಗಂಡನು ಇನ್ನೂ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ನನ್ನ ಗಂಡನ ಹತ್ತಿರ ನನ್ನ ಅತ್ತೆ ಆಸ್ಪತ್ರೆಯಲ್ಲಿ ಇದ್ದು ನಾನು ಕೇಸು ಮಾಡುವ ಸಲುವಾಗಿ ಬಂದಿದ್ದು ನನ್ನ ಗಂಡನಿಗೆ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ ಮೂರು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಪಿಯರ್ಾದಿಯ ಗಣಕೀಕೃತ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.15/2022 ಕಲಂ: 323, 324, 504, 506 ಸಂ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡಿದ್ದ್ದು ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 21/2022 ಕಲಂ: 78(3) ಕೆ.ಪಿ.ಆಕ್ಟ್ 1963 : ದಿನಾಂಕ:09/02/2022 ರಂದು 10-45 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೆಮಾಲು ಮತ್ತು ಒಬ್ಬ ಆರೋಪಿತನಿಗೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:09/02/2022 ರಂದು ಸಮಯ ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ತಾಯಪ್ಪ ಹೆಚ್.ಸಿ 102, ಮಹೇಂದ್ರ ಪಿಸಿ 254, ಮರಿಲಿಂಗ ಪಿಸಿ 355 ಮತ್ತು ಪ್ರಭುಗೌಡ ಪಿಸಿ 361 ಡಿ.ಎಸ್.ಪಿ ಕಾರ್ಯಲಯ ಯಾದಗಿರಿ ಎಲ್ಲರೂ ವಡಗೇರಾ ಠಾಣೆಯಲ್ಲಿದ್ದಾಗ ಮಾನ್ಯ ಡಿ.ಎಸ್.ಪಿ ಸಾಹೇರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ಗುಂಡಳ್ಳಿ ಗ್ರಾಮದ ಮುಲ್ಲಾಸಾಬ ದಗರ್ಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಮಾಹಿತಿ ತಿಳಿಸಿ, ಸರಕಾರಿ ಜೀಪ ನಂ. ಕೆಎ 33 ಜಿ 0138 ನೇದ್ದರಲ್ಲಿ ಕರೆದುಕೊಂಡು ಹೊರಟು ಸಮಯ 7-15 ಪಿಎಮ್ ಸುಮಾರಿಗೆ ಗುಂಡಳ್ಳಿ ಗ್ರಾಮದ ಮುಲ್ಲಾಸಾಬ ದಗರ್ಾದ ಹತ್ತಿರ ಹೋಗಿ ಜೀಪ ನಿಲ್ಲಿಸಿ, ಸದರಿ ದಗರ್ಾವನ್ನು ಮರೆಯಾಗಿ ನಿಂತು ನೋಡಲಾಗಿ ದಗರ್ಾದ ಸಮೀಪ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದು ಮಟಕಾ ನಂಬಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 7-30 ಪಿಎಮ್ಕ್ಕೆ ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು, ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಸಾಯಬಣ್ಣ ತಂದೆ ಹಣಮಂತ ವಡಗೇರಿ, ವ:52, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ಗುಂಡಳ್ಳಿ ತಾ:ಶಹಾಪೂರ ಅಂತಾ ತಿಳಿಸಿದ್ದು, ಸದರಿಯವನು ತನ್ನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ ಇದ್ದ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 750/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ಇವುಗಳನ್ನು ಹಾಜರಪಡಿಸಿದ್ದು, ಸದರಿ ಮುದ್ದೆಮಾಲನ್ನು ವಶಕ್ಕೆ ಪಡೆದುಕೊಂಡು ಜಪ್ತಿ ಪಂಚನಾಮೆ ಜರುಗಿಸಿ, ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜರುಪಡಿಸಿದ್ದು ಇರುತ್ತದೆ. ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 21/2022 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.