ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-03-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನ: 30/2022, ಕಲಂ, 341, 323, 504.506. ಸಂ.149 ಐ ಪಿ ಸಿ : 09-03-2022 ರಂದು ಮದ್ಯಾಹ್ನ 12-30 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 09-03-2022 ರಂದು ಬೆಳಿಗ್ಗೆ 08-00 ಗಂಟೆ ನಮ್ಮ ಹೊಲಕ್ಕೆ ಹೋಗಿ ಜೋಳದ ರಾಸಿ ಮಾಡಿಕೊಂಡು ಸೊಪ್ಪಿ ಎರಿಕೊಂಡು ಬರಲು ಹೋದಾಗ ಆ ಸಮಯದಲ್ಲಿ ನಮ್ಮ ಅಣ್ಣತಮ್ಮರು ಹೊಲದಲಿದ್ದು ನಾವು ಹೊಲಕ್ಕೆ ಹೋದದನ್ನು ನೋಡಿ ಹೊಲದಲಿದ್ದವರಾದ 1) ಇಸ್ಮಾಯಿಲಸಾಬ ತಂದೆ ಚಂದಾಸಾಬ ಮುಲ್ಲನೋರ 2) ಆರ್ಶದ ತಂದೆ ಇಸ್ಮಾಯಿಲಸಾಬ 3) ಅತಿಯಾ ಗಂಡ ಇಸ್ಮಾಯಿಲಸಾಬ 4) ಚಾಂದಪಾಷ ತಂದೆ ಇಮಾಮಸಾಬ ಯಡ್ಡಳ್ಳಿ 5) ಅಲ್ಲಾವುದ್ದೀನ್ ತಂದೆ ಖಾಜಾಸಾಬ 6) ಚಂದಸಾಬ ತಂದೆ ಖಾಜಾಸಾಬ ಎಲ್ಲರು ಸಾ|| ಹೊನಗೇರಾ ಇವರೆಲ್ಲರು ಕೂಡಿಕೊಂಡು ಬಂದು ನಮಗೆ ಲೇ ಸುಳೆ ಮಕ್ಕಳೆ ಇಲ್ಲಿ ನಿಮ್ಮದು ಎನಾದಂತ ಬಂದಿರಿ ಸೂಳೆ ಮಕ್ಕಳೆ ನಿಮ್ಮದು ಹೊಲ ಇಲ್ಲ ಎನಿಲ್ಲ ಯಾಕೆ ಪದೆ ಪದೆ ಹೊಲಕ್ಕೆ ಬರುತ್ತಿರಿ ಸುಳೆ ಮಕ್ಕಳೆ ಈ ಹೊಲದಲ್ಲಿ ನಾವು ಜೋಳ ಬಿತ್ತಿವಿ ನಾವು ರಾಶಿ ಮಾಡುತ್ತಿವಿ ನಿವ್ಯಾಕೆ ಬರುತ್ತಿರಿ ಅಂತಾ ಬೈದಾಗ ಆಗ ನಾನು ಇದರಲ್ಲಿ ನನ್ನದು ಕೂಡ ಒಂದು ಎಕರೆ ಹೊಲ ಇದೆಯಲ್ಲಾ ಅದಕ್ಕೆ ಬಂದಿದ್ದಿನಿ ಅಂತಾ ಹೇಳಿದಾಗ ಅವರೆಲ್ಲರು ಕೂಡಿ ನಮಗೆ ಹೊಲದಲ್ಲಿ ಹೊಗದಂತೆ ಅಡ್ಡಗಟ್ಟಿ ನಿಲ್ಲಿಸಿ ಅರ್ಶದ ಇವನು ನನಗೆ ಕೈಯಿಂದ ಹೊಡೆದು ಲೇ ಸೂಳೆ ಮಗನೆ ನಮ್ಮ ಹೊಲದಲ್ಲಿ ಏನಾದರು ಕಾಲು ಇಟ್ಟರೆ ನಿನ್ನ ಕಾಲು ಕಡೆಯುತ್ತೇನೆ ಮಗನೆ ಅಂತಾ ಬೇದರಿಕೆ ಹಾಕಿದನು ಉಳಿದವರು ಲೇ ಸುಳೆ ಮಕ್ಕಳೆ ಇನ್ನೊಂದು ಸಲ ಈ ಹೊಲದ ತಂಟೆಗೇನಾದರು ಬಂದರೆ ನಿಮಗೆ ಜೀವ ಸಹಿತ ಉಳಿಸುವದಿಲ್ಲ ಮಕ್ಕಳೆ ಅಂತಾ ಜೀವದ ಬೇದರಿಕೆ ಹಾಕಿದರು.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 31/2022 ಕಲಂ. ಮನುಷ್ಯ ಕಾಣೆ : ದಿನಾಂಕ: 09-03-2022 ರಂದು ಸಾಯಂಕಾಲ 4.30 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 26-01-2022 ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ಈರು ನನ್ನ ಮಗ ಅಕ್ಷಯ ಮತ್ತು ನನ್ನ ತಾಯಿ ಭೀಮಿಬಾಯಿ ಎಲ್ಲರು ಸೇರಿ ನನಗೆ ಆರಾಮ ಇಲ್ಲದ ಕಾರಣ ತೋರಿಸಲು ಟ್ರೈನ್ ಗೆ ಸೊಲ್ಲಾಪೂರ ಕ್ಕೆ ಹೋಗಿ ಅಲ್ಲಿ ಹೈಯರ ಆಸ್ಪತ್ರೆಗೆ ಹೋಗಿ ತಾನು ತೋರಿಸಿಕೊಂಡಿದ್ದು ಸಾಯಂಕಾಲ 05-00 ಗಂಟೆ ಸುಮಾರಿಗೆ ನನ್ನ ಗಂಡ ನಮಗೆ ಹೇಳಿದ್ದೆನೆಂದರೆ ಸ್ವಲ್ಪ ಕೆಲಸ ಇದೆ ಮಾಕರ್ೆಟ ಕಡೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದನು ಮತ್ತೆ ಬರಲಿಲ್ಲ ಆಗ ನಾವು ಆತನಿಗೆ ಪೊನ್ ಮಾಡಬೇಕೆಂದರೆ ಆತನಲ್ಲಿ ಪೊನ್ ಇರಲಿಲ್ಲ ಆಗ ನಾವು ನನ್ನ ಗಂಡ ಕೆಲಸ ಮಾಡುವಲ್ಲಿಗೆ ಹೋಗಿ ಅಲ್ಲಿ ಕೆಲಸ ಮಾಡುವವರಿಗೆ ಕೇಳಲಾಗಿ ನನ್ನ ಗಂಡ ಬಂದಿಲ್ಲ ಅಂತಾ ತಿಳಿಸಿದರು ಆಗ ನಾವು ಆತ ಬರಬಹುದು ಅಂತಾ ನಾವು ಊರಿಗೆ ಬಂದಿರುತ್ತೇವೆ ಬಹಳ ದಿನಗಳಾದರು ಕೂಡ ಬರಲಿಲ್ಲ ಆಗ ನಾವು ನಮ್ಮ ಬೀಗರ ನೆಂಟರ ಊರಿಗಳಿಗೆ ಹೋಗಿ ಕೆಳಲಾಗಿ ನನ್ನ ಗಂಡ ಬಂದಿರುವದಿಲ್ಲ ಅಂತಾ ತಿಳಿಸದರು ನಾವು ಕೂಡಲ ಅಲಲ್ಲಿ ಹೋಗಿ ತಿರುಗಾಡಿ ನನ್ನ ಗಂಡನಿಗೆ ಹುಡುಕಾಡಲಾಗಿ ನನ್ನ ಗಂಡ ಈರು ತಂದೆ ದೇವು ರಾಠೋಡ್ ವ|| 37 ವರ್ಷ ಜಾ|| ಲಮಾಣಿ ಉ|| ಕೂಲಿಕೆಲಸ ಸಾ|| ಸಿದ್ದಾರ್ಥ ನಗರ ತಾ|| ಜಿ|| ಯಾದಗಿರಿ ಈತನು ಕಾಣೆಯಾಗಿರುತ್ತಾನೆ.

 

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 16/2022 ಕಲಂ.15(ಎ), 32 (3) ಕನರ್ಾಟಕ ಅಭಕಾರಿ ಕಾಯ್ದೆ : ದಿನಾಂಕ:09/03/2022 ರಂದು ಸಾಯಂಕಾಲ 16.30 ಗಂಟೆಯ ಸುಮಾರಿಗೆ ಆರೋಪಿತನು ಅಭಕಾರಿ ಇಲಾಖೆಯಿಂದಾ ಅಧೀಕೃತವಾಗಿ ಯಾವುದೇ ಪರವಾನಿಗೆಯನ್ನು ಪಡೆಯದೇ ಇರುವ ಸ್ಥಳದಲ್ಲಿ ಮದ್ಯ ಸೇವನೆಯನ್ನು ಮಾಡಲು ಅನುವು ಮಾಡಿಕೊಟ್ಟಿದ್ದು, ಕಂಡ ಪಿಯರ್ಾದಿ ಹಾಗೂ ಪಂಚರು ಮತ್ತು ಸಿಬ್ಬಂದಿಯಾದ ಹೆಚ್.ಸಿ-178, 184, 124 ಪಿಸಿ-264, 216, 404 ರವರೊಂದಿಗೆ ದಾಳಿ ಮಾಡಿ ಆರೋಪಿತನ ಹತ್ತಿರ ಇದ್ದ ಕಾಲಂ ನಂ.10 ರಲ್ಲಿ ನಮೂದ ಮಾಡಿದ ಒಟ್ಟು 222-00/-ರೂ ಕಿಮ್ಮತ್ತಿನ ಮದ್ಯವನ್ನು ಜಪ್ತಿ ಮಾಡಿದ್ದು ಅಂತಾ ಜಪ್ತಿ ಪಂಚನಾಮೆಯ & ಪಿಎಸ್ಐ ರವರು ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 49/2022 ಕಲಂ: 323, 324, 326, 504, 506 ಐಪಿಸಿ : ಇಂದು ದಿನಾಂಕ 09.03.2022 ರಂದು 03.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಬಸವರಾಜ ತಂದೆ ನಿಂಗಪ್ಪ ತೆಳಗಿನಮನಿ ವ|| 60 ವರ್ಷ ಜಾ|| ಹಿಂದೂ ಗಾಣಿಗ ಉ|| ಒಕ್ಕಲುತನ ಸಾ|| ಕಾಚಾಪೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನನಗೆ ಮೂರು ಜನ ಗಂಡು ಮಕ್ಕಳು ಹಾಗು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಹೆಣ್ಣು ಮಗಳಿಗೆ ಮದುವೆ ಮಾಡಿಕೊಟ್ಟಿದ್ದು ಹಾಗು ಹಿರಿಯ ಮಗನಾದ ಶಂಕರಲಿಂಗ ಈತನು ಸುಮಾರು 2 ವರ್ಷಗಳ ಹಿಂದೆ ಮೃತಪಟ್ಟಿದ್ದು ಇರುತ್ತದೆ. ಸದ್ಯ ಉಳಿದ ಎರಡು ಜನ ಗಂಡು ಮಕ್ಕಳಲ್ಲಿ ಸಣ್ಣ ಮಗನಾದ ನಿಂಗಣ್ಣ ಈತನು ವಿದ್ಯಾಭ್ಯಾಸ ಮಾಡಿಕೊಂಡು ಬಿಜಾಪೂರದಲ್ಲಿ ಇರುತ್ತಾನೆ. ಆದರೆ ನನ್ನ ಇನ್ನೊಬ್ಬ ಮಗನಾದ ಶಿವರಾಜ ತಂದೆ ಬಸವರಾಜ ತೆಳಗಿನಮನಿ ವ|| 25 ಈತನು ಒಕ್ಕಲುತನ ಮಾಡಿಕೊಂಡು ಇರುತ್ತಾನೆ. ಸದ್ಯ ನಮ್ಮೂರ ಶರಣಪ್ಪ ತಂದೆ ಬಸವಣಪ್ಪ ಪೂಜಾರಿ ಹಾಗು ನನ್ನ ಮಗ ಶಿವರಾಜ ಇಬ್ಬರೂ ಕೂಡಿಕೊಂಡು ನಮ್ಮೂರ ನಮ್ಮ ಸಂಬಂದಿಕರಾದ ಮುದಕಣ್ಣ ತೆಳಗಿನಮನಿ ಇವರ ಹೊಲ ಲೀಜ ಮಾಡಿದ್ದು ಇರುತ್ತದೆ. ಹೊಲದ ಲೀಜಿನ 70,000/- ರೂ ಹಣ ನನ್ನ ಮಗನಿಗೆ ಬರಬೇಕಾಗಿದ್ದು ಆ ಹಣ ದಿನಾಲು ನನ್ನ ಮಗ ಕೊಡು ಅಂತ ಕೇಳಿದರೆ ನಾನು ಆಮೇಲೆ ಕೊಡುತ್ತೇನೆ ಅಂತ ಶರಣಪ್ಪ ಪೂಜಾರಿ ಈತನು ಮುಂದೂಡುತ್ತಾ ಬಂದಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ 08.03.2022 ರಂದು ಸಾಯಂಕಾಲ 05.30 ಗಂಟೆಯ ಸುಮಾರಿಗೆ ಮಗನಾದ ಶಿವರಾಜ ಈತನು ನಮ್ಮ ಮನೆಯಲ್ಲಿದ್ದಾಗ ಆತನೊಂದಿಗೆ ಹೊಲ ಲೀಜಿಗೆ ಮಾಡಿದ ಶರಣಪ್ಪ ಪೂಜಾರಿ ಈತನು ನಿನ್ನ ಹಣ ಕೊಡುತ್ತೇನೆ ನಮ್ಮ ಹೊಲಕ್ಕೆ ಬಾ ಅಂತ ಅಂದಾಗ ಮಗನಾದ ಶಿವರಾಜ ಈತನು ಶರಣಪ್ಪ ಈತನ ಹೊಲಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದನು. ನಂತರ ನಾನು ಮನೆಯಲ್ಲಿದ್ದಾಗ ನನ್ನ ಮಗನಾದ ಶಿವರಾಜ ಈತನು 6 ಪಿ ಎಮ್ ಕ್ಕೆ ನನಗೆ ಪೋನ ಮಾಡಿ ತಾನು ಶರಣಪ್ಪ ಈತನ ಹೊಲಕ್ಕೆ ಹೋಗಿ ನನ್ನ ಲೀಜ ಹಣ ಕೇಳಿದ್ದಕ್ಕೆ ಶರಣಪ್ಪ ಪೂಜಾರಿ ಈತನು ನನಗೆ ಏನಲೇ ಸೂಳೇ ಮಗನೇ ನನಗೆ ಹಣ ಕೇಳಲು ಹೊಲಕ್ಕೆ ಬಂದಿರುವೆಯಾ ಮಗನೇ ಅಂತ ಬಲವಾಗಿ ಹೊಡೆದಿರುತ್ತಾನೆ ಅಂತ ತಿಳಿಸಿದಾಗ ನಾನು ಕೂಡಲೇ ಶರಣಪ್ಪ ಪೂಜಾರಿ ಇವರ ಹೊಲಕ್ಕೆ ಹೋಗಿ ನೋಡಲು ಮಗ ಶಿವರಾಜ ಈತನು ತಲೆಗೆ ರಕ್ತಗಾಯ ಹೊಂದಿ ಬಿದ್ದಿದ್ದು ಆಗ ನಾನು ಮಗನಾದ ಶಿವರಾಜ ಈತನಿಗೆ ವಿಚಾರಿಸಲಾಗಿ, ಹಣ ಕೇಳಿದ್ದಕ್ಕಾಗಿ ಶರಣಪ್ಪ ಪೂಜಾರಿ ಈತನು ನನಗೆ ಕಲ್ಲಿನಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದಲ್ಲದೇ ಅದೇ ಕಲ್ಲಿನಿಂದ ನನ್ನ ಎಡಗೈ ರಟ್ಟಿಗೆ ಬಲವಾಗಿ ಹೊಡೆದು ಭಾರೀ ಗುಪ್ತಗಾಯ ಪಡಿಸಿದ್ದರಿಂದ ಕೈ ಮುರಿದಂತಾಗಿರುತ್ತದೆ, ಅಲ್ಲದೇ ಶರಣಪ್ಪ ಪೂಜಾರಿ ಈತನು ನನ್ನ ಮಗನ ಎಡಕಿವಿಗೆ ಭಲವಾಗಿ ಹೊಡೆದಿದ್ದರಿಂದ ಕಿವಿಯಿಂದ ರಕ್ತ ಬರುತ್ತಿದ್ದು ಅಲ್ಲದೇ ಮಗನೇ ಲೀಜ ಹಣ ಕೇಳಲು ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದ್ದು ಇರುತ್ತದೆ. ಅಂತ ತಿಳಿಸಿದಾಗ ಕೂಡಲೇ ನನ್ನ ಮಗನಿಗೆ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದು ಉಪಚಾರ ಪಡಿಸಿದ್ದು ಆದರೆ ನನ್ನ ಮಗನ ಎಡಕಿವಿಯಿಂದ ರಕ್ತಸ್ರಾವವಾಗುವದು ನಿಲ್ಲದೇ ಇರುವದರಿಂದ ವೈದ್ಯರು ಹೆಚ್ಚಿನ ಉಪಚಾರ ಕುರಿತು ಬೇರೆ ಕಡೆ ಹೋಗಲು ತಿಳಿಸಿದ ಮೇರೆಗೆ ನಾನು ನನ್ನ ಮಗನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಯ ಮನ್ನೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ ಶರಣಪ್ಪ ತಂದೆ ಬಸವಣ್ಣಪ್ಪ ಪೂಜಾರಿ ಸಾ|| ಕಾಚಾಪೂರ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 49/2022 ಕಲಂ 323,324,326,504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 10-03-2022 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080