ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-04-2022
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 46/2022, ಕಲಂ: 143, 147, 148, 324, 333, 353, 504, 506, ಸಂಗಡ 149 ಐಪಿಸಿ : ದಿನಾಂಕ: 09/04/2022 ರಂದು ಮುಂಜಾನೆ 11:00 ಗಂಟೆಗೆ ಫಿಯರ್ಾದಿದಾರರು ತೆಲಗು ಭಾಷಯಲ್ಲಿ ಲಿಖತವಾಗಿ ಪೊಲೀಸ್ ಠಾಣೆಗೆ ಬಂದು ಹಾಜರುಪಡಿಸಿದ್ದು ಸದರಿ ಹೇಳಿಕೆಯ ಸಾರಂಶವೆನಂದರೆ, ನಾನು ಅಂದರೆ ಎ.ರಾಮಲು .ಎ.ಎಸ್.ಐ ಕೊಡಂಗಲ ಪೊಲೀಸ್ ಠಾಣೆದಲ್ಲಿ ಸುಮಾರು 10 ತಿಂಗಳನಿಂದ ಕರ್ತವ್ಯ ಮಾಡುತ್ತಿದ್ದೇನೆ. ದಿನಾಂಕ :08/04/2022 ರಂದು ಗುನ್ನೆ ನಂ 199/2021 ಮತ್ತು ಗುನ್ನೆ ನಂ 12/2022 ಕಲಂ 379 ಐಪಿಸಿ ನೇದ್ದರಲ್ಲಿ ಕೇಸನಲ್ಲಿ ವಿಕಾರಬಾದ ಜಿಲ್ಲಾ ಎಸ್.ಪಿ ಸರ್ ಮಾನ್ಯರವರ ಆದೇಶದ ಪ್ರಕಾರ ಹೊರ ರಾಜ್ಯ ಪಾಸ್ ಪೋರ್ಟ ಫಾರಂ 105 ಪ್ರಕಾರ ಕನರ್ಾಟಕ ರಾಜ್ಯ ಯಾದಗಿರಿ ಜಿಲ್ಲಾ ಕುರಕುಂಬಳ ತಾಂಡಾದಲ್ಲಿದ್ದ 1] ಡ್ಯಾನಿ@ರಾಜು ತಂದೆ ತೇಜಾ ಚವ್ಹಾಣ 2] ಮಾರುತಿ ಸಾ; ಜೀನಕೇರ 3] ಚಿನ್ಯಾ ತಂದೆ ಸಕ್ರ್ಯ ಸದರಿ ಆರೋಪಿತರನ್ನು ಹಿಡಿಯಲು ಹೋದಾಗ ನಾನು ಮತ್ತು ಪಿಸಿ-981, ಪ್ರತಾಪಸಿಂಗ ಪಿಸಿ-5381 ಅಂಜಪ್ಪ ಸೇರಿ ಕೂಡಿಕೊಂಡು ತಾಂಡಕ್ಕೆ ಹೋದೆವು ಇಂದು ದಿನಾಂಕ 09/04/2022 ರಂದು ಮುಂಜಾನೆ 06:00 ಗಂಟೆಗೆ ಸುಮಾರಿಗೆ ಡ್ಯಾನಿ@ರಾಜುನನ್ನು ನಮ್ಮ ವಶಕ್ಕೆ ಪಡೆದೆವು ಆಗ ಅಲ್ಲಿಯೆ ಇದ್ದ ಅವರ ಕುಂಟುಬದ ಸದ್ಯಸರಾದ 1] ರವಿತೇಜ ತಂದೆ ತೇಜು ಚವ್ಹಾಣ 2] ಅಶೋಕ ತಂದೆ ಮಲ್ಯ 3] ದಶರಥ ತಂದೆ ಚಿನ್ಯಾ ಚವ್ಹಾಣ 4] ಖೇಮು ತಂದೆ ಚಿನ್ಯಾ 5] ರೇಣುಕಾ ಗಂಡ ದಶರಥ 6] ಸಂಜಯ ತಂದೆ ಸಕ್ರ್ಯಾ ಚವ್ಹಾಣ ಮತ್ತು ಇನ್ನು ತಾಂಡಾದ ಇತರರು ಸೇರಿ ಅಕ್ರಮ ಕೂಟ ರಚಿಸಿಕೊಂಡು ನಮ್ಮ ಮೇಲೆ ದಾಳಿ ಮಾಡಿದಾಗ ನನಗೆ ಬಟ್ಟೆ ಹಿಡಿದು ಎಳೆದಾಡಿದರು ಮತ್ತು ನಮ್ಮ ಸಿಬ್ಬಂದಿ ಪಿಸಿ-5381 ಅಂಜಪನಿಗೆ ಕಟ್ಟಿಗೆ ಮತ್ತು ಕಲ್ಲುಗಳಿಂದ ಹೊಡೆದು ತಲೆಗೆ ಮತ್ತು ಬೆನ್ನಿಗೆ ತೀವ್ರ ರಕ್ತಗಾಯವಾಗಿದ್ದು. ಮತ್ತು ಪಿಸಿ-981 ಪ್ರತಾಪಸಿಂಗ ಇವರಿಗೆ ತಳಾಡಿರುತ್ತಾರೆ. ನನಗೆ ಮತ್ತು ಪ್ರತಾಪಗೆ ಗಾಯಗಳಾಗಿರುವುದಿಲ್ಲ. ನಾವು ಜೀವದ ಭಯದಿಂದ ಅಲ್ಲಿಂದ ಓಡಿ ಬಂದು ನಾನು ಮತ್ತು ನಮ್ಮ ಸಿಬ್ಬಂದಿ ಪ್ರತಾಪಸಿಂಗ ಇಬ್ಬರು ಸೇರಿ ಅಂಜಪ್ಪ ಪಿಸಿ-5381 ರವರಿಗೆ ಒಂದು ಖಾಸಗಿ ವಾಹನದಲ್ಲಿ ತಂದು ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿರುತ್ತೆವೆ. ಅಕ್ರಮ ಕೂಟ ರಚಿಸಿಕೊಂಡು ಬಂದು ನಮ್ಮ ಕರ್ತವ್ಯ ನಿರ್ವಹಿಸದಂತೆ ಬೆದರಿಸಿ ತೀವ್ರ ಗಾಯವನ್ನುಂಟು ಮಾಡಿ ಜೀವ ಭಯ ಹಾಕಿದ್ದು ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ತೆಗದುಕೊಳ್ಳುಬೇಕು ಅಂತ ನಾನು ತೆಲಗು ಭಾಷೆಯಲ್ಲಿ ಬರೆದಿರುವುದನ್ನು ಕನ್ನಡಕ್ಕೆ ಅನುವಾದಸಿದವರು ಸಯ್ಯದ ಅಲಿ ಹೆಚ್.ಸಿ -191 ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಇವರು ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿದ ಹೇಳಿಕ ಅಜರ್ಿಯನ್ನು ಪುನಃ ತೆಲಗು ಭಾಷೆಯಲ್ಲಿ ಓದಿ ಹೇಳಿದ್ದು ನಿಜವಿರುತ್ತದೆ. ಸದರಿ ಹೇಳಿಕೆಯ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ 46/2022 ಕಲಂ 143, 147, 148, 324, 333, 353, 504, 506, ಸಂಗಡ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 47/2022.ಕಲಂ. ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 : ಇಂದು ದಿನಾಂಕ 09/04/2022 ರಂದು ಮದ್ಯಾಹ್ನ 4:00 ಗಂಟೆಯ ಸುಮಾರಿಗೆ ಗುನ್ನೆ ನಂ 46/2022 ಕಲಂ 143, 147, 148, 324, 333, 353, 504, 506, ಸಂಗಡ 149 ಐಪಿಸಿ ನೇದ್ದರಲ್ಲಿ ತನಿಖೆ ಕುರಿತು ಯರಗೋಳ ಕಡೆ ಭೇಟಿ ನೀಡಿದಾಗ ಆ ಸಮಯದಲ್ಲಿ ಒಂದು ಬಾತ್ಮಿ ಬಂದಿದ್ದೆನೆಂದರೆ ಯರಗೋಳ ಗ್ರಾಮದಲ್ಲಿರುವ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದು ಕೂಡಲೇ ನಾನು ಮತ್ತು ಉಕ್ಕಡ ಠಾಣೆಯ ಶ್ರೀ ಶಿವಪುತ್ರ ಎ.ಎಸ.ಐ ಮತ್ತು ಶರಣಗೌಡ ಪಿ.ಸಿ-125 & ಸಹಸಿಬ್ಬಂದಿಯವರೊಂದಿಗೆ ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರಾದ 1) ಶ್ರೀ ನೂರುಹೈಮ್ ತಂದೆ ನಿಸಾರಪಾಷಾ ಮುಸ್ತಜೀರ ವಯ:43, ಜಾತಿ:-ಮುಸ್ಲಿಂ ಉ:ಒಕ್ಕಲುತನ ಸಾ:ಯರಗೋಳ ತಾ||ಜಿ||ಯಾದಗಿರಿ ಮೊ.ನಂ,9113011772. 2)ಶ್ರೀ ಮಾತರ್ಾಂಡಪ್ಪ ತಂದೆ ಮಲ್ಲಪ್ಪ ಮಾನೇಗಾರ, ವಯ:30, ಜಾ: ಕಬ್ಬಲಿಗ ಸಾ: ಯರಗೋಳ ತಾ||ಜಿ||ಯಾದಗಿರಿ ಮೊ,ನಂ,9611295446. ಇವರಿಗೆ ಉಕ್ಕಡ ಠಾಣೆಗೆ ಕರೆಯಿಸಿ ಪಂಚರಾಗಲು ಕೇಳಿಕೊಂಡ ಮೇರೆಗೆ ಅವರು ಒಪ್ಪಿಕೊಂಡು ದಾಳಿಯ ಬಗ್ಗೆ ಮಾಹಿತಿ ತಿಳಿಸಿ ಎಲ್ಲರು ಸೇರಿಕೊಂಡು ಯರಗೋಳ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆಲ್ಲಿರಿ ಅಂತಾ ಕೂಗುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಕರೆಯುತ್ತಿದ್ದನು ಮತ್ತು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನು ಆಗ ನಾವೆಲ್ಲರೂ ಕೂಡಿ ಒಮ್ಮೆಲೆ ದಾಳಿ ಮಾಡಿ ಮದ್ಯಾಹ್ನ 4:30 ಗಂಟೆಗೆ ಅವನನ್ನು ನಮ್ಮ ವಶಕ್ಕೆ ಪಡೆದು ಅವನು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಸಿದ್ದನಗೌಡ ತಂದೆ ಶಾಂತಗೌಡ ಚಟ್ನಳ್ಳಿ ವ:-46,ಜಾ;ಲಿಂಗಾಯತ ಉ: ಒಕ್ಕಲುತನ ಸಾ: ಯರಗೋಳ ಅಂತಾ ತಿಳಿಸಿದನು. ಅವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) ನಗದು ಹಣ 750/ ರೂ 2)ಒಂದು ಮಟಕಾ ನಂಬರ ಬರೆದ ಚೀಟಿ ಮತ್ತು 3) ಒಂದು ಬಾಲಪೆನ್.ಅ.ಕಿ=.00 ಒಟ್ಟು 750/-ರೂ ಗಳ ಸಿಕ್ಕಿದ್ದು. ಸದರಿಯವುಗಳನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ಪಡೆದುಕೊಂಡೆನು, ಮಟಕಾ ನಂಬರ ಯಾರಿಗೆ ಕೊಡುತ್ತಿ ಎಂದು ವಿಚಾರಿಸಿದಾಗ ನಾನೇ ಇಟ್ಟುಕೊಳ್ಳುತ್ತೆನೆ ಎಂದು ಹೇಳಿದನು .ಈ ಸವಿಸ್ತಾರವಾದ ಪಂಚನಾಮೆಯನ್ನು ಮದ್ಯಾಹ್ನ 4:40 ಗಂಟೆಯಿಂದ 5:40 ಗಂಟೆಯವರೆಗೆ ಮಾಡಿಕೊಂಡು ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಸಾಯಂಕಾಲ 6:30 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿಯವನ ವಿರುಧ ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 ರ ಪ್ರಕಾರ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಒಂದು ವರದಿ ಸಾರಂಶದ ಪ್ರಕಾರ ಠಾಣೆ ಗುನ್ನೆ.ನಂ.47/2022.ಕಲಂ. ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ ಕಾಯ್ದೆ 2021 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 47/2022 ಕಲಂ: 78(3) ಕೆ.ಪಿ.ಆಕ್ಟ್ 1963 : ಇಂದು ದಿನಾಂಕ:9/04/2022 ರಂದು 3-30 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೆಮಾಲು ಮತ್ತು ಒಬ್ಬ ಆರೋಪಿತನಿಗೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:09/04/2022 ರಂದು ಸಮಯ ಮುಂಜಾನೆ 11-00 ಗಂಟೆ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರಾದ ತಾಯಪ್ಪ ಹೆಚ್.ಸಿ 79, ರಾಜಕುಮಾರ ಹೆಚ್.ಸಿ 179 ಗೋವಿಂದ ಪಿಸಿ 16, ಸಾಬರಡ್ಡಿ ಪಿಸಿ 290 ಎಲ್ಲರೂ ವಡಗೇರಾ ಠಾಣೆಯಲ್ಲಿದ್ದಾಗ ಗೋನಾಲ ಗ್ರಾಮದ ಹನುಮಾನ ದೇವರ ಗುಡಿ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ನನಗೆ ಖಚಿತ ಮಾಹಿತಿ ಬಂದಿದ್ದರಿಂದ 12-15 ಪಿಎಮ್ಕ್ಕೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಕರೆದುಕೊಂಡು ಹೊರಟು ಸಮಯ 12-45 ಪಿಎಮ್ ಸುಮಾರಿಗೆ ಗೋನಾಲ ಗ್ರಾಮದ ಅಗಸಿ ಹತ್ತಿರ ಹೋಗಿ ಜೀಪ ನಿಲ್ಲಿಸಿ, ಸದರಿ ಅಗಸಿ ಗೋಡೆಯ ಮರೆಯಾಗಿ ನಿಂತು ನೋಡಲಾಗಿ ಹನುಮಾನ ದೇವರ ಕಟ್ಟೆ ಮೇಲೆ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದು ಮಟಕಾ ನಂಬಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 1-20 ಪಿಎಮ್ಕ್ಕೆ ನಾವು ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು, ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಖಾಸಿಂಸಾಬ ತಂದೆ ಕಬೂಲ್ ಸಾಬ್ ಮುಲ್ಲಾ, ವ:33, ಜಾ:ಮುಸ್ಲಿಂ, ಉ:ಕೂಲಿ ಸಾ:ಗೋನಾಲ ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನು ತನ್ನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ ಇದ್ದ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2)ನಗದು ಹಣ 2650/- ರೂ., 3)ಒಂದು ಬಾಲ ಪೆನ್ನ ಅ.ಕಿ.00=00 ಇವುಗಳನ್ನು ಹಾಜರಪಡಿಸಿದ್ದು, ಸದರಿ ಮುದ್ದೆಮಾಲನ್ನು ವಶಕ್ಕೆ ಪಡೆದುಕೊಂಡು ಜಪ್ತಿ ಪಂಚನಾಮೆ ಜರುಗಿಸಿ, ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜರುಪಡಿಸಿದ್ದು ಇರುತ್ತದೆ. ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 47/2022 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 48/2022 ಕಲಂ: 379 ಐಪಿಸಿ : ದಿನಾಂಕ:09/04/2022 ರಂದು 5-30 ಪಿಎಮ್ಕ್ಕೆ ಶ್ರೀ ಮಹಾದೇವರಡ್ಡಿ ತಂದೆ ತಿಪ್ಪಾರಡ್ಡಿ ಹವಲ್ದಾರ ಸಾ:ಖಾನಾಪೂರು, ತಾ:ಶಹಾಪೂರು ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿ ಸಲ್ಲಿಸಿದ್ದರ ದೂರು ಅಜರ್ಿಯೇನೆಂದರೆ ನಾನು ಮನಗನಾಳ ಗ್ರಾಮದಲ್ಲಿರುವ ಜಯಲಕ್ಷ್ಮೀ ಕಾಟನ್ ಮಿಲ್ನಲ್ಲಿ ಅಕೌಂಟೆಂಟ್ ಕೆಲಸ ಮಾಡಿಕೊಂಡು ಇರುತ್ತೇನೆ. ಜಯಲಕ್ಮ್ಷಿಕಾಟನ ಮಿಲ್ನ ಮಾಲಿಕರಾದ ಶ್ರೀಮತಿ ಸುಧಾ ರಾಟಿ ಇವರ ಹೆಸರಿನಲ್ಲಿ ಮೋಟರ ಸೈಕಲ್ ನಂಬರ: ಕೆಎ.33 ಕ್ಯೂ 3711 ಮೋಟರ ಸೈಕಲ್ ನೋಂದಣಿ ಇರುತ್ತದೆ. ಸದರಿ ಮೋಟರ ಸೈಕಲ್ ಕಾಟನ್ಮಿಲ್ನ ಕೆಲಸ ಕಾರ್ಯಗಳಿಗಾಗಿ ನಾನು ಓಡಾಡಿಸಿಕೊಂಡು ಇರುತ್ತೇನೆ. ನಮ್ಮ ಮಿಲ್ನಲ್ಲಿ ಕೆಲಸ ಮಾಡುವ ಸಿಬ್ಬಂದಿಯಾದ ಬಾಬು ತಂದೆ ಜಲಾಲಸಾಬ ಅಜರ್ುಣಗಿ ಸಾ:ನಾಯ್ಕಲ್ ಇವರ ಮನೆಯಲ್ಲಿ ಕಾರ್ಯಕ್ರಮ ಇದ್ದ ಪ್ರಯುಕ್ತ ದಿನಾಂಕ: 20/03/2022 ರಂದು ಸಂಜೆ 7 ಗಂಟೆ ಸುಮಾರಿಗೆ ನಮ್ಮ ಕಾಟನ ಮಿಲ್ನಿಂದ ನಾನು ಮತ್ತು ನಮ್ಮ ಮಿಲಿನಲ್ಲಿ ಕೆಲಸ ಮಾಡುವ ಶರಣಪ್ಪ ತಂದೆ ಮಲ್ಲಪ್ಪ ಬಲಕಲ್ ಇಬ್ಬರು ಕೂಡಿ ಮೋಟರ ಸೈಕಲ್ ನಂಬರ: ಕೆಎ 33 ಕ್ಯೂ 3711 ನೇದ್ದರಲ್ಲಿ ನಾಯ್ಕಲ್ ಗ್ರಾಮಕ್ಕೆ ಬಂದು ರಾತ್ರಿ 8 ಗಂಟೆ ಸುಮಾರಿಗೆ ಸಕರ್ಾರಿ ಫ್ರೌಢ ಶಾಲೆಯ ಹತ್ತಿರ ಮೋಟರ್ ಸೈಕಲ್ ನಿಲ್ಲಿಸಿ ಬಾಬುರವರ ಕಾರ್ಯಕ್ರವನ್ನು ಮುಗಿಸಿ, ರಾತ್ರಿ 10-30 ಗಂಟೆ ಸುಮಾರಿಗೆ ನಾನು ಮತ್ತು ಶರಣಪ್ಪ ಇಬ್ಬರೂ ಊಟ ಮಾಡಿಕೊಂಡು ಮರಳಿ ಬಂದು ನಾವು ನಿಲ್ಲಿಸಿದ ಮೋಟರ ಸೈಕಲ್ನ್ನು ನೋಡಿ ಮತ್ತೆ ಹೋಗಿ ಬಾಬು ಮನೆಯಲ್ಲಿ ಮಲಗಿಕೊಂಡೇವು. ನಂತರ ದಿನಾಂಕ: 21/03/2022 ರಂದು ಮುಂಜಾನೆ 6-30 ಗಂಟೆ ಸುಮಾರಿಗೆ ನಾನು ಮತ್ತು ಶರಣಪ್ಪ ಇಬ್ಬರು ಕೂಡಿ ಮರಳಿ ಮನಗನಾಳಕ್ಕೆ ಹೋಗೋಣ ಅಂತಾ ಹೋಗಿ ನೋಡಲಾಗಿ ನಾವು ರಾತ್ರಿ ನಿಲ್ಲಿಸಿದ ಮೋಟರ ಸೈಕಲ್ ಕಾಣಿಸಲಿಲ್ಲ. ಗಾಭರಿಯಾದ ನಾನು ಮತ್ತು ಶರಣಪ್ಪ ಇಬ್ಬರು ಕೂಡಿ ಅಲ್ಲಿಯೇ ಸುತ್ತಮುತ್ತ ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ ನಂತರ ಬಾಬು ಈತನಿಗೆ ಕರೆದು ನಾವು ಮೂರು ಜನ ಸೇರಿ ನಾಯ್ಕಲ್, ಗುರುಸಣಗಿ, ಕುರಕುಂದಾ, ಚಟ್ನಳ್ಳಿ, ಖಾನಪೂರ ಮುಂತಾದ ಕಡೆ ಹುಡಿಕಾಡಿದ್ದರೂ ಸಿಗಲಿಲ್ಲ ಕಾರಣ ಯಾರೋ ಕಳ್ಳರು ದಿನಾಂಕ:20/03/2022 ರಂದು 10-30 ಪಿಎಮ್ ನಿಂದ ದಿನಾಂಕ:21/03/2022 ರಂದು 6-30 ಎಎಮ್ ಮಧ್ಯದ ಅವಧಿಯಲ್ಲಿ ನನ್ನ ಹಿರೋ ಸ್ಪ್ಲೇಂಡರ ಮೋಟರ್ ಸೈಕಲ್ ನಂ. ಕೆಎ 33 ಕ್ಯೂ 3711 ಅ:ಕಿ: 25,000/- ನೇದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳುವಾದ ನನ್ನ ಸ್ಪ್ಲೇಂಡರ ಮೋಟರ್ ಸೈಕಲ್ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಕಳುವಾದ ನನ್ನ ಸ್ಪ್ಲೇಂಡರ ಮೋಟರ್ ಸೈಕಲ್ ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 48/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 59/2022 ಕಲಂ: 143, 147, 148, 323, 324, 354, 504, 506 ಸಂ 149 ಐಪಿಸಿ : ಇಂದು ದಿನಾಂಕ 09/04/2022 ರಂದು 2.00 ಪಿ.ಎಮ್ ಕ್ಕೆ ಸಕರ್ಾರಿ ಆಸ್ಪತ್ರೆ ಕೆಂಭಾವಿಯಿಂದ ದೂರವಾಣಿ ಮೂಲಕ ಎಂ.ಎಲ್.ಸಿ ವಸೂಲಾದ ಮೇರೆಗೆ ಸಕರ್ಾರಿ ಆಸ್ಪತ್ರೆ ಕೆಂಭಾವಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುದಾರರಾದ ಯಲ್ಲಮ್ಮ ಗಂಡ ಬಸಪ್ಪ ಚಲುವಾದಿ ವ|| 45ವರ್ಷ ಜಾ|| ಹಿಂದೂ ಹೊಲೆಯ ಉ|| ಕೂಲಿ ಸಾ|| ರಾಂಪೂರ ತಾ|| ಸುರಪೂರ ಇವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 2.30 ಪಿಎಂ ಕ್ಕೆ ಬಂದಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, ನಾವು ನಮ್ಮ ಜಾಗದಲ್ಲಿ ಮನೆ ಕಟ್ಟುತ್ತಿದ್ದು ಮನೆಯ ಮುಂದೆ ಆರ್ಸಿಸಿ ಹಾಕುವ ಸಲುವಾಗಿ ರಸ್ತೆಗೆ ಹೊಂದಿಕೊಂಡು ಒಂದು ಬಲೀಸು ಹಾಕಿದ್ದು ರಸ್ತೆಯ ಮೇಲೆ ಬಲೀಸು ಯಾಕೆ ಹಾಕಿದ್ದೀರಿ ಅಂತಾ ನಮ್ಮೂರ ನಮ್ಮ ಜಾತಿಯವರಾದ 1) ಶರಣಪ್ಪ ತಂದೆ ಗುರಪ್ಪ ಬಡಿಗೇರ, 2) ದೊಡಪ್ಪ ತಂದೆ ಗುರಪ್ಪ ಬಡಿಗೇರ 3) ಮಾನಪ್ಪ ತಂದೆ ಗುರಪ್ಪ ಬಡಿಗೇರ 4) ಕುಶಾಲ ತಂದೆ ಜುಮ್ಮಪ್ಪ ಬಡಿಗೇರ 5) ಶರಣವ್ವ ಗಂಡ ಮಾನಪ್ಪ ಬಡಿಗೇರ 6) ನೀಲಮ್ಮ ಗಂಡ ದೊಡಪ್ಪ ಬಡಿಗೇರ 7) ಶಿವಮ್ಮ ಗಂಡ ಗುರಪ್ಪ ಬಡಿಗೇರ 8) ಸೀತಮ್ಮ ಗಂಡ ಕುಶಾಲ ಬಡಿಗೇರ 9) ಲಕ್ಷ್ಮಣ ತಂದೆ ಪೀರಪ್ಪ ಬಡಿಗೇರ 10) ಮಹಾಂತೇಶ ತಂದೆ ಪೀರಪ್ಪ ಬಡಿಗೇರ 11) ಸಾಬವ್ವ ಗಂಡ ಮಲ್ಲಪ್ಪ ಬಡಿಗೇರ ಮತ್ತು 12) ಮಲ್ಲಪ್ಪ ತಂದೆ ಭೀಮಪ್ಪ ಬಡಿಗೇರ ಇವರೆಲ್ಲರೂ ಕೂಡಿ 2-3 ದಿನಗಳಿಂದ ಕಿರಿಕಿರಿ ಮಾಡುತ್ತಾ ಬಂದಿದ್ದು ನಿನ್ನೆ ದಿನಾಂಕ 08/04/2022 ರಂದು ಸಂಜೆ 7.30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡನಾದ ಬಸಪ್ಪ ತಂದೆ ಮಲ್ಲಯ್ಯ ಚಲುವಾದಿ ಇಬ್ಬರೂ ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಿದ್ದೆವು. ಅದೇ ಸಮಯಕ್ಕೆ ಮೇಲ್ಕಾಣಿಸಿದ 12 ಜನರು ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ಬಂದು ಏನಲೇ ಯಲ್ಲವ್ವ ನಿನ್ನ ಸೊಕ್ಕು ಜಾಸ್ತಿಯಾಗಿದೇನಲೇ ಸೂಳಿ 2-3 ದಿನಗಳಿಂದ ರಸ್ತೆಯ ಮೇಲೆ ಇದ್ದ ಬಲೀಸು ತೆಗೀರಿ ಅಂತಾ ಹೇಳಿದರೂ ತೆಗಿಯುತ್ತಿಲ್ಲ ಅಂದ್ರೆ ನಿಮಗೆ ಸೊಕ್ಕು ಬಹಳ ಆಗಿದೆ ಒಂದು ಕೈ ನೋಡಿಯೇ ಬಿಡುತ್ತೇವೆ ಅಂತಾ ಬೈಯುತ್ತಿದ್ದಾಗ ನಾನು ಅವರಿಗೆ ಇನ್ನೂ ಎರಡು ದಿನ ಬಿಟ್ಟು ತೆಗೆಯುತ್ತೇನೆ ಅವಸರ ಮಾಡಬ್ಯಾಡರೀ ಅಂತಾ ಹೇಳಿದಾಗ ಅವರು ನಮಗೆ ತಿರುಗಿ ಮಾತನಾಡುತ್ತೀದಿನಲೇ ಸೂಳಿ ಅಂತಾ ಬೈಯುತ್ತಾ ದೊಡಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದನು. ಆಗ ಬಿಡಿಸಲು ಬಂದ ನನ್ನ ಗಂಡನಿಗೆ ಶರಣಪ್ಪನು ಕೈಯಿಂದ ದಬ್ಬಿಸಿಕೊಟ್ಟನು. ಆಗ ನಾನು ಮತ್ತು ನನ್ನ ಗಂಡ ಇಬ್ಬರೂ ಸತ್ತೆವೆಪ್ಪೋ ಅಂತಾ ಚೀರುತ್ತಾ ನಮ್ಮ ಮಾವನಾದ ಲಕ್ಷ್ಮಣ ಇವರ ಮನೆಯ ಕಡೆಗೆ ಓಡುತ್ತಾ ಅವರ ಮನೆಯ ಮುಂದೆ ಹೋದಾಗ ಮಾನಪ್ಪ ಮತ್ತು ಕುಶಾಲ ಇಬ್ಬರೂ ನನಗೆ ಬೆನ್ನತ್ತಿ ನನ್ನ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಆಗ ಶರಣವ್ವ ಮತ್ತು ಮಲ್ಲಪ್ಪ ಇವರು ನನಗೆ ನೆಲಕ್ಕೆ ಕೆಡವಿ ಒದ್ದು ಸೊಂಟಕ್ಕೆ ಮತ್ತು ಎಡಗಾಲಿಗೆ ಗುಪ್ತಗಾಯ ಮಾಡಿದ್ದು ಲಕ್ಷ್ಮಣ ಮತ್ತು ಮಹಾಂತೇಶ ಇಬ್ಬರೂ ಕೂಡಿ ನನ್ನ ಗಂಡನಿಗೆ ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದಿದ್ದು ಶಿವಮ್ಮ, ಸೀತಮ್ಮ ಮತ್ತು ನೀಲಮ್ಮ ಇವರು ನನ್ನ ಕೂದಲು ಹಿಡಿದು ಎಳೆದಾಡಿ ಹೊಡೆಯುತ್ತಿದ್ದಾಗ ನಮ್ಮ ಮಾವನಾದ ಲಕ್ಷ್ಮಣ ಹೊಸಮನಿ ಮತ್ತು ಅಕ್ಕಳಾದ ಮರಿಲಿಂಗಮ್ಮ ಹೊಸಮನಿ ಇವರು ಬಂದು ಜಗಳ ಬಿಡಿಸಿಕೊಂಡರು. ಆಗ ಎಲ್ಲರೂ ನಮಗೆ ಹೊಡೆಯುವುದನ್ನು ಬಿಟ್ಟು ಇದೊಂದು ಸಲ ಉಳಿದೀರಿ ಇನ್ನೊಮ್ಮೆ ನಮ್ಮ ಮಾತು ಕೇಳದಿದ್ದರೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನನಗೆ ಗಾಯಗಳಾಗಿ ಬಿದ್ದಿದ್ದರಿಂದ ನನ್ನ ಗಂಡ ಹಾಗೂ ಮಾವನಾದ ಲಕ್ಷ್ಮಣ ಇಬ್ಬರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ತಂದೆ ಸೇರಿಕೆ ಮಾಡಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಆದ್ದರಿಂದ ನಮಗೆ ರಸ್ತೆಯ ಜಾಗದ ವಿಷಯದಲ್ಲಿ ಜಗಳ ಮಾಡಿ ಅವಾಚ್ಯವಾಗಿ ಬೈದು ಕೈಯಿಂದ ಕಲ್ಲಿನಿಂದ ಹಾಗೂ ಬಡಿಗೆಯಿಂದ ಹೊಡೆದು ಗಾಯಗೊಳಿಸಿ ಸೀರೆ ಎಳೆದು ಮಾನಭಂಗ ಮಾಡಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 12 ಜನರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆಯ ಗುನ್ನೆ ನಂ 62/2022 ಕಲಂ 143, 147, 148, 323, 324, 354, 504, 506 ಸಂ. 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 63/2022 ಕಲಂ: 143, 147, 148, 323, 324, 354, 504, 506 ಸಂ 149 ಐಪಿಸಿ : ಇಂದು ದಿನಾಂಕ 09.04.2022 ರಂದು 9 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಹೈಯಾಳಪ್ಪ ತಂದೆ ಸುಭಾಶ್ಚಂದ್ರ ಹೊಸ್ಮನಿ ವ|| 26ವರ್ಷ ಜಾ|| ಹಿಂದೂ ಹೊಲೆಯ ಉ|| ಕೂಲಿ ಸಾ|| ಮಳ್ಳಿ ತಾ|| ಯಡ್ರಾಮಿ ಜಿ|| ಕಲಬುಗರ್ಿ ಇವರು ಠಾಣೆಗೆ ಹಾಜರಾಗಿ ಕಜೊಟ್ಟ ಅಜರ್ಿ ಏನಂದರೆ ನಮ್ಮ ಅಕ್ಕಳಾದ ಶರಣಮ್ಮ ಇವಳಿಗೆ ಸುರಪೂರ ತಾಲೂಕಿನ ರಾಂಪೂರ ಗ್ರಾಮದ ಮಾನಪ್ಪ ತಂದೆ ಗುರಪ್ಪ ಬಡಿಗೇರ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನಮ್ಮ ಅಕ್ಕನ ಮನೆಯ ಪಕ್ಕದಲ್ಲಿ ಬಸಪ್ಪ ತಾಯಿ ಲಕ್ಷವ್ವ ಚಲುವಾದಿ ಇವರ ಮನೆಯಿದ್ದು ಸದರಿಯವರು ಸದ್ಯ ಮನೆ ಕಟ್ಟುತ್ತಿದ್ದು ಮನೆ ಕಟ್ಟಬೇಕಾದರೆ ದಾರಿಗೆ ಬಲೀಸ್ ಬಿಟ್ಟಿದ್ದು ಹೋಗಿ ಬರಲು ತೊಂದರೆ ಆಗುತ್ತಿದ್ದರಿಂದ ಅದನ್ನು ತಗೆಯಿರಿ ಅಂತ ಅಂದಿದ್ದಕ್ಕೆ ನಮ್ಮ ಮಾವ ಮಾನಪ್ಪ ಹಾಗು ಬಸಪ್ಪ ಚಲುವಾದಿ ಇವರ ಮದ್ಯ ತಕರಾರು ಆದ ಬಗ್ಗೆ ನಮ್ಮ ಅಕ್ಕ ಶರಣಮ್ಮ ಇವರು ನನಗೆ ಪೋನ ಮಾಡಿ ಹೇಳಿದ್ದಳು. ಹೀಗಿದ್ದು ನಿನ್ನೆ ದಿನಾಂಕ 08.04.2022 ರಂದು ನಾನು ನಮ್ಮೂರಾದ ಮಳ್ಳಿ ಗ್ರಾಮದಿಂದ ನಮ್ಮ ಅಕ್ಕನ ಊರಾದ ರಾಂಪೂರ ಗ್ರಾಮಕ್ಕೆ ಬಂದಿದ್ದು ಅಂದು ರಾತ್ರಿ ಅವರ ಮನೆಯಲ್ಲಿಯೇ ವಾಸವಾಗಿದ್ದೆನು. ಹೀಗಿರುತ್ತಾ ದಿನಾಂಕ 08.04.2022 ರಂದು ರಾತ್ರಿ 07.30 ಗಂಟೆಯ ಸುಮಾರಿಗೆ ನಾನು ನಮ್ಮ ಅಕ್ಕಳಾದ ಶರಣಮ್ಮ ಗಂಡ ಮಾನಪ್ಪ ಹೊಸಮನಿ ಹಾಗು ಮಾವನವರಾದ ಮಾನಪ್ಪ ಎಲ್ಲರೂ ನಮ್ಮ ಮಾವನವರ ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ನಮ್ಮೂರ ನಮ್ಮ ಜನಾಂಗದ 1) ಬಸಪ್ಪ ತಾಯಿ ಲಕ್ಷವ್ವ ಚಲುವಾದಿ 2) ಯಲ್ಲವ್ವ ಗಂಡ ಬಸಪ್ಪ ಚಲುವಾದಿ 3) ಬಸಪ್ಪ ತಂದೆ ಚಂದ್ರಪ್ಪ ನಾವದಗಿ 4) ಪರಸಪ್ಪ ತಂದೆ ಚಂದ್ರಪ್ಪ ನಾವದಗಿ 5) ಸಿದ್ದಪ್ಪ ತಂದೆ ಮಲ್ಲಪ್ಪ ರಾಂಪೂರ 6] ರೇಣುಕಾ ಗಂಡ ಸಿದ್ದಪ್ಪ ರಾಂಪೂರ 7] ಲಕ್ಷ್ಮೀ ಗಂಡ ಬಸಪ್ಪ ನಾವದಗಿ ಇವರೆಲ್ಲರೂ ಕೂಡಿ ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ಬಂದವರೆ ನಮ್ಮ ಮಾವ ಮಾನಪ್ಪ ಈತನಿಗೆ ಏನಲೇ ಮಗನೇ ಮಾನ್ಯಾ ನಾವು ಮನೆ ಕಟ್ಟುವದರಿಂದ ನಿನಗೆ ಹೊಟ್ಟೆ ಕಿಚ್ಚು ಅಗುತ್ತಿದೆಯಾ ಅಂತ ಅಂದಾಗ ನನ್ನ ಮಾವನು ನಾನೇಕೇ ಹೊಟ್ಟೆಕಿಚ್ಚು ಪಡಲಿ ದಾರಿಗೆ ಬಲೀಸ್ ಬಂದಿದ್ದು ಸ್ವಲ್ಪ ಒಳಗೆ ಹಾಕಿಕೊಳ್ಳು ಅಂತ ಅಂದರೆ ತಪ್ಪಾ ಅಂತ ಅಂದಾಗ ಎಲ್ಲರೂ ಕೂಡಿ ನಮ್ಮ ಮಾವನಿಗೆ ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಬೈಯುತ್ತಾ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಾ ಕೈಯಿಂದ ಹೊಡೆಯುತ್ತಿದ್ದಾಗ ನಮ್ಮ ಮಾವನವರು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಮ್ಮ ಅಕ್ಕ ಶರಣಮ್ಮ ಇವಳು ಬಿಡಿಸಿಕೊಳ್ಳಲು ಹೋದಾಗ ಅವಳಿಗೂ ಸಹ ಎಲ್ಲರೂ ಕೈಯಿಂದ ಹೊಡೆಯಲಿಕ್ಕೆ ಹತ್ತಿದಾಗ ಅವರಲ್ಲಿಯ ಯಲ್ಲವ್ವ ಚಲುವಾದಿ ಇವಳು ಅಲ್ಲಿಯೇ ಬಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನಮ್ಮ ಅಕ್ಕನ ಬೆನ್ನಿಗೆ ಹೊಡೆದು ಗುಪ್ತಗಾಯ ಹಾಗು ಎಡಗೈ ಮೊಳಕೈಗೆ ಹೊಡೆದು ರಕ್ತಗಾಯ ಪಡಿಸಿದಳು. ಹಾಗು ಅವರಲ್ಲಿಯ ಪರಸಪ್ಪ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನಮ್ಮ ಅಕ್ಕಳ ಹೊಟ್ಟೆಗೆ ಹೊಡೆದು ಗುಪ್ತಗಾಯ ಪಡಿಸಿದನು ನಂತರ ಅವರಲ್ಲಿಯ ಬಸಪ್ಪ ತಾಯಿ ಲಕ್ಷವ್ವ ಚಲುವಾದಿ ಹಾಗು ಸಿದ್ದಪ್ಪ ತಂದೆ ಮಲ್ಲಪ್ಪ ರಾಂಪೂರ ಇವರು ನಮ್ಮ ಅಕ್ಕಳಿಗೆ ಈ ಸೂಳೆಯದು ಬಹಾಳ ಆಗಿದೆ ಅಂತ ಕೈಯಿಂದ ಹೊಡೆಯುತ್ತಾ ಮಾನಭಂಗ ಮಾಡುವ ಉದ್ದೇಶದಿಂದ ಅವಳ ಸೀರೆ ಹಾಗು ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ. ಆಗ ನಮ್ಮ ಅಕ್ಕ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಾನು ಹಾಗು ಶರಣಪ್ಪ ತಂದೆ ಮಲ್ಲಪ್ಪ ಹೊಸಮನಿ ಮತ್ತು ನಿಂಗಪ್ಪ ತಂದೆ ಭೀಮಪ್ಪ ಇವರು ಬಂದಿದ್ದು ಎಲ್ಲರೂ ಕೂಡಿ ಜಗಳ ಬಿಡಿಸಿಕೊಂಡೆವು. ನಂತರ ಎಲ್ಲರೂ ಹೊಡೆಯುವುದನ್ನು ಬಿಟ್ಟು ಅವಾಚ್ಯವಾಗಿ ಬೈಯುತ್ತಾ ಎಲೇ ಸೂಳೇ ಮಕ್ಕಳೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಂತರ ನನ್ನ ಅಕ್ಕಳಾದ ಶರಣಮ್ಮ ಇವಳಿಗೆ ಗಾಯಗಳಾಗಿದ್ದರಿಂದ ಹಾಗು ಬಹಾಳ ತ್ರಾಸ ಅಗುತ್ತಿದ್ದರಿಂದ ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಹೋಗಿ ತೋರಿಸಿದ್ದು, ಅವಳಿಗೆ ಬಹಾಳ ತ್ರಾಸ ಆಗುತ್ತಿದ್ದರಿಂದ ಖಾಸಗಿ ಆಸ್ಪತ್ರೆಗೆ ತೋರಿಸಿ ಮಳ್ಳಿ ನಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯಲು ಬಿಟ್ಟು ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ನಮ್ಮ ಅಕ್ಕಳಾದ ಶರಣಮ್ಮ ಇವಳಿಗೆ ಕೈಯಿಂದ, ಬಡಿಗೆಯಿಂದ, ಕಲ್ಲಿನಿಂದ ಹೊಡೆದು ಗಾಯಗೊಳಿಸಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಹಾಗು ಮಾನಭಂಗ ಮಾಡಲು ಪ್ರಯತ್ನಿಸಿದ ಮೇಲ್ಕಾಣಿಸಿದ 07 ಜನರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 63/2022 ಕಲಂ 143,147,148,323,324,354,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.