ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/04/2021

ಗೋಗಿ ಪೊಲೀಸ್ ಠಾಣೆ :- 33/2021 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 09/04/2021 ರಂದು 08.30 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 09/04/2021 ರಂದು ಹೋಸ್ಕೇರಾ ಗ್ರಾಮದ ಮಲ್ಲೇಶಪ್ಪನ ಮಠದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಗುರುಸ್ವಾಮಿ ತಂದೆ ಸಂಗಯ್ಯ ಗುತ್ತೇದಾರ ವಯಾ:28 ಜಾ: ಈಳಗೇರ ಉ: ಡ್ರೈವರ ಸಾ: ಹೊಸ್ಕೇರಾ ತಾ: ಶಹಾಪೂರ ಜಿ: ಯಾದಗೀರಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 07.00 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 860/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 33/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಭೀಗುಡಿ ಪೊಲೀಸ್ ಠಾಣೆ:- 33/2021 ಕಲಂ 279, 338 ಐ.ಪಿ.ಸಿ : ಇಂದು ದಿನಾಂಕ:09/04/2021 ರಂದು 1.15 ಪಿ.ಎಮ್. ಸುಮಾರಿಗೆ ಶಹಾಪುರ-ಭೀ.ಗುಡಿ ಮುಖ್ಯ ರಸ್ತೆಯ ಮೇಲೆ ಅಕ್ಬರ್ ಚೌದ್ರಿ ಇವರ ಮನೆಯ ಹತ್ತಿರ ಆರೋಪಿ ಹಣಮಯ್ಯ ಈತನು ತನ್ನ ಮೋಟರ್ ಸೈಕಲ ನಂ:ಕೆಎ-3, ಆರ್-8028 ನೇದ್ದನ್ನು ಅತಿವೇಗ ಮತ್ತ ಅಲಕ್ಷತನದಿಂದ ಓಡಿಸಿಕೊಂಡು ಹೋಗಿ ಹಿಂದೆ ಭೀಮರಡ್ಡಿ ಈತನು ಮೋಟರ್ ಸೈಕಲ್ ನಡೆಸಿಕೊಂಡು ಬರುತ್ತಿರುವದನ್ನು ಲೆಕ್ಕಿಸದೇ ಒಮ್ಮೆಲೆ ಬಲಕ್ಕೆ ಕಟ್ ಹೊಡೆದು ಮೋಟರ್ ಸೈಕಲ್ ತಿರುಗಿಸುತ್ತಿರುವಾಗ ಅವನ ಹಿಂದಿನಿಂದ ಆರೋಪಿ ಭೀಮರಡ್ಡಿ ಈತನು ಸಹ ತನ್ನ ಮೋಟರ್ ಸೈಕಲ ನಂ:ಕೆಎ-3, ಇಎ-3824 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ನಿಯಂತ್ರಣ ತಪ್ಪಿ ಭೀಮರಡ್ಡಿ ಈತನು ಹಣಮಯ್ಯ ಈತನ ಮೋಟರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಸದರಿ ಅಪಘಾತದಲ್ಲಿ ಇಬ್ಬರಿಗೂ ಭಾರಿ ಮತ್ತು ಸಾದಾ ಗಾಯಗಳಾಗಿರುತ್ತವೆ. ಕಾರಣ ಸದರಿ ಅಪಘಾತಕ್ಕೆ ಇಬ್ಬರೂ ಚಾಲಕರ ಅತಿವೇಗ ಮತ್ತು ಅಲಕ್ಷತನ ಕಾರಣವಿದ್ದು ಇಬ್ಬರೂ ಚಾಲಕರ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ದೂರು.


ಗುರಮಿಠಕಲ್ ಪೊಲೀಸ್ ಠಾಣೆ :- 54/2021 ಕಲಂ: 32, 34 ಕೆಇ ಆಕ್ಟ್ : ಇಂದು ದಿನಾಂಕ 09.04.2021 ರಂದು ಸಂಜೆ 6:00 ಗಂಟೆಗೆ ಆರೋಪಿತನು ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲಿಗಳನ್ನು ಮತ್ತು ಪೌಚ್ಗಳನ್ನು ಬೆಟ್ಟದಳ್ಳಿ ಗ್ರಾಮದ ಶಂಕರ ರಾಠೋರ ಮನೆಯ ಸಮೀಪ ನೀರಿ ಟ್ಯಾಂಕಿನ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ತನ್ನ ವಶದಲ್ಲಿದ್ದ ವಿವಿಧ ನಮೂನೆಯ ಒಟ್ಟು 29364=00 ರೂ ಬೆಲೆಯ ಮುದ್ದೆ ಮಾಲನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಪಿ.ಎಸ್.ಐ ರವರು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಕೈಕೊಂಡು ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ಧ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಆ ಬಗ್ಗೆ ಠಾಣಾ ಗುನ್ನೆ ನಂ: 54/2021 ಕಲಂ: 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 10-04-2021 10:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ