Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-05-2022


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 72/2022 ಕಲಂ: 279, 338 ಐಪಿಸಿ: ಇಂದು ದಿ: 09/05/2022 ರಂದು 12 ಪಿ.ಎಮ್ ಕ್ಕೆ ಶ್ರೀ ಲಕ್ಷ್ಮಣ ತಂದೆ ಪುರುಷೋತ್ತಮ ಮಂದಾ ವ|| 38 ವರ್ಷ ಸಾ|| ಪೂಠಾಣದೊಡ್ಡಿ ತಾ|| ಆಲಂಪೂರ ಜಿ|| ಜೋಗಲಾಂಬಾ, ತೆಲಂಗಾಣ ಹಾ.ವ|| ಹಸನಾಪೂರ ಸುರಪೂರು ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ: 07/05/2022 ರಂದು ಬೆಳಿಗ್ಗೆ 8-20 ಗಂಟೆಗೆ ಸುಮಾರಿಗೆ ನಾನು ಮತ್ತು ನಮ್ಮ ಬ್ರ್ಯಾಂಚ ಮ್ಯಾನೇಜರ್ ವೀರಭದ್ರಯ್ಯ ತಂದೆ ಮಹಾಂತಯ್ಯ ಗೌರಿಮಠ ವ|| 27 ವರ್ಷ ಜಾ|| ಜಂಗಮ ಸಾ|| ಅಬ್ಬಿಗೇರಾ ತಾ|| ರೋಣ ಜಿ|| ಗದಗ ಹಾ.ವ.|| ಹಸನಾಪೂರ ಸುರಪೂರ ಇಬ್ಬರು ಆಲ್ದಾಳ ಗ್ರಾಮಕ್ಕೆ ಮೈಕ್ರೋ ಫೈನಾನ್ಸಿನ ಫೀಲ್ಡ್ ವರ್ಕ ಮೇಲೆ ವೀರಭದ್ರಯ್ಯ ಈತನ ಮೋಟರ್ ಸೈಕಲ್ ನಂ. ಕೆಎ-37. ವಿ-1674 ನೇದ್ದರ ಮೇಲೆ ಸುರಪೂರ-ಲಿಂಗಸೂಗೂರು ಮುಖ್ಯ ರಸ್ತೆಯ ಕವಡಿಮಟ್ಟಿ ಗ್ರಾಮದ ಅಂಬಿಗರ ಚೌಡಯ್ಯ ವೃತ್ತದ ಹತ್ತಿರ ರಸ್ತೆಯ ಮೇಲೆ ನಮ್ಮ ಎಡ ಸೈಡಿಗೆ ಹೋರಟಿದ್ದೇವು. ಆಗ ಅದೇ ಸಮಯಕ್ಕೆ ಲಿಂಗಸೂಗೂರ ಕಡೆಯಿಂದ ಒಂದು ವಿ.ಆರ್.ಎಲ್. ಬಸ್ ಚಾಲಕನು ತನ್ನ ಬಸನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದಾಗ ನಮ್ಮ ಹಿಂದಿನಿಂದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ನಮ್ಮ ಮೋಟರ್ ಸೈಕಲ್ಗೆ ಸೈಡ್ ಹೊಡೆದುಕೊಂಡು ಹೋಗಿ ಎದುರಿಗೆ ಬರುತ್ತಿದ್ದ ವಿ.ಆರ್.ಎಲ್. ಬಸ್ಗೆ ಜೋರಾಗಿ ಡಿಕ್ಕಿ ಪಡಿಸಿದನು. ಆಗ ವಿ.ಆರ್.ಎಲ್. ಬಸ್ ಚಾಲಕನು ತನ್ನ ವಾಹನವನ್ನು ನಿಯಂತ್ರಣ ಮಾಡಲಾಗದೇ ಒಮ್ಮೇಲೆ ರೋಡಿನ ಎಡಕ್ಕೆ ತಿರುಗಿಸಿದ್ದರಿಂದ ಬಸ್ಸಿನ ಹಿಂಬದಿಯು ನಮ್ಮ ಮೋಟರ್ ಸೈಕಲಗೆ ತಾಗಿದ್ದರಿಂದ ನಾವು ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದೆವು. ಆಗ ನಾನು ಎದ್ದು ನೋಡಲಾಗಿ ನನಗೆ ಮೊಳಕೈಗೆ ತರಚಿದ ಗಾಯವಾಗಿರುತ್ತದೆ. ನಂತರ ನಾನು ವೀರಭದ್ರಯ್ಯ ಈತನಿಗೆ ಎಬ್ಬಿಸಿ ನೋಡಲಾಗಿ ಅವನಿಗೆ ಬಲಗಾಲ ಮೊಳಕಾಲ ಕೆಳಗೆ ಬಾರಿ ಪೆಟ್ಟಾಗಿ ಮುರಿದಿರುತ್ತದೆ. ಎಡಗೈ ಹಸ್ತಕ್ಕೆ, ಬಲಗೈ ಹೆಬ್ಬೆರಳು ಮತ್ತು ತೋರು ಬೆರಳಿಗೆ ತರಚಿದ ರಕ್ತತಗಾಯಗಳಾಗಿದ್ದವು. ಡಿಕ್ಕಿಪಡಿಸಿದ ಬಸ್ ಹಾಗೂ ಲಾರಿ ಎರಡು ಅಲ್ಲೇ ನಿಂತಿದ್ದು, ಬಸ್ ನಂ. ಕೆಎ-25. ಸಿ-5011 ನೇದ್ದು ಇದ್ದು ಅದರ ಚಾಲಕನ ಹೆಸರು, ವಿಳಾಸ ವಿಚಾರಿಸಲಾಗಿ ಸಂಗಮೇಶ ತಂದೆ ಮಾಣಿಕೆಪ್ಪ ಬೋರಾಳ ಸಾ|| ಗಡವಂತಿ ತಾ|| ಹುಮನಾಬಾದ ಹಾಗೂ ಲಾರಿ ನಂ. ಕೆಎ-16. ಸಿ-6995 ನೇದ್ದು ಇದ್ದು ಅದರ ಚಾಲಕನ ಹೆಸರು, ವಿಳಾಸ ವಿಚಾರಿಸಲಾಗಿ ಸಚಿನ್ ತಂದೆ ರಾಮನಗೌಡ ಬಿರೇದಾರ ಸಾ|| ಬೆಳ್ಳಿಹಾಳ ತಾ|| ಲಿಂಗಸೂಗೂರ ಅಂತಾ ಗೊತ್ತಾಯಿತು. ನಂತರ ನಾನು 108 ಅಂಬುಲೆನ್ಸ್ ವಾಹನಕ್ಕೆ ಪೋನ್ ಮಾಡಿ ಸ್ಥಳಕ್ಕೆ ಕರೆಹಿಸಿ ಗಾಯಗೊಂಡ ವೀರಭದ್ರಯ್ಯ ಈತನನ್ನು ಉಪಚಾರ ಕುರಿತು ಸುರಪೂರ ಸರಕಾರಿ ಆಸಪತ್ರೆಗೆ ತಂದು ಸೇರಿಕೆ ಮಾಡಿದೆನು. ನನಗೆ ಸಣ್ಣ ಪುಟ್ಟ ಗಾಯವಾಗಿದ್ದರಿಂದ ನಾನು ಉಪಚಾರ ಪಡೆದುಕೊಂಡಿರುವದಿಲ್ಲ. ನಂತರ ವೀರಭದ್ರಯ್ಯ ಈತನಿಗೆ ವೈದ್ಯರು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ಸೂಚಿಸಿದ್ದರಿಂದ ನಾನು ವೀರಭದ್ರಯ್ಯನನ್ನು ಕಲಬುರಗಿಯ ಯುನೈಟೈಡ್ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಅಪಘಾತ ಪಡಿಸಿದ ಬಸ್ ನಂ. ಕೆಎ-25. ಸಿ-5011 ಹಾಗೂ ಲಾರಿ ನಂ. ಕೆಎ-16. ಸಿ-6995 ನೇದ್ದವುಗಳ ಚಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.72/2022 ಕಲಂ:279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 73/2022 ಕಲಂ: 323, 324, 354, 504, 506 ಸಂ. 34 ಐಪಿಸಿ: ಇಂದು ದಿನಾಂಕ:09/05/2022 ರಂದು 7 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪಿಯರ್ಾದಿದಾರರಾದ ಶ್ರೀಮತಿ ಶಾಂತಮ್ಮ ಗಂಡ ವಿರೂಪಾಕ್ಷಿ ಗುಡ್ಡಕಾಯ ವ|| 39 ವರ್ಷ ಸಾ|| ವೆಂಕಟಾಪೂರ, ಸುರಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಂಶವೇನೆಂದರೆ, ನಿನ್ನೆ ದಿನಾಂಕ: 08/05/2022 ರಂದು ರಾತ್ರಿ 10 ಗಂಟೆಗೆ ಸುಮಾರಿಗೆ ನಾನು, ನನ್ನ ಮಕ್ಕಳಾದ ಅನ್ನಪೂರ್ಣ, ಶರಣಮ್ಮ ಹಾಗೂ ಮಡಿವಾಳಪ್ಪ ಎಲ್ಲರೂ ಊಟಮಾಡಿ ಮನೆಯ ಮುಂದಿನ ಅಂಗಳದಲ್ಲಿ ಮಾತನಾಡುತ್ತಾ ಕುಳಿತುಕೊಂಡಿದ್ದೆವು. ಆಗ ನಮ್ಮ ಅಣ್ಣತಮಕಿಯಾವರಾದ 1) ಅಮರಪ್ಪ ತಂದೆ ಸಾಯಬಣ್ಣ ದೊರನಹಳ್ಳಿ 2) ಮಲ್ಲಪ್ಪ ತಂದೆ ಸಾಯಬಣ್ಣ ದೊರನಹಳ್ಳಿ 3) ರತ್ನಮ್ಮ ಗಂಡ ಸಾಯಬಣ್ಣ ದೊರನಹಳ್ಳಿ 4) ಸಂತಮ್ಮ ಗಂಡ ಲಕ್ಷ್ಮಣ್ಣ ಎಲ್ಲರೂ ಎಲೇ ರಂಡಿ, ಸೂಳೆ ನಿಮ್ಮ ಸೊಕ್ಕು ಬಹಳ ಆಗಿದೆ. ನಮ್ಮ ಹೊಲದಲ್ಲಿ ಪಾಲು ಕೇಳುತ್ತಿ ಏನಲೇ ಸೂಳೆ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಸುಮ್ಮನೇ ಯಾಕೇ ಬೈಯುತ್ತಿರಿ ನಾವು ನಿಮಗೇನು ಮಾಡಿವಿ ಅಂತಾ ಕೇಳಿದಕ್ಕೆ ಅವರಲ್ಲಿಯ ಅಮರಪ್ಪ ಈತನು ನನ್ನ ಸೀರೆಯನ್ನು ಹಿಡಿದು ಎಳೆದಾಡಿ ಅವಮಾನ ಮಾಡಿದನು. ಮಲ್ಲಪ್ಪ ಈತನು ನನ್ನ ಕೂದಲು ಹಿಡಿದು ಎಳೆದಾಡಿದನು. ರತ್ನಮ್ಮ ಇವಳು ನನ್ನ ಬೆನ್ನಿಗೆ ಕಾಲಿನಿಂದ ಒದ್ದಳು. ಸಂತಮ್ಮ ಇಕೆಯು ಅಲ್ಲೇ ಬಿದ್ದ ಒಂದು ಬಡಿಯಿಂದ ನನ್ನ ಸೊಂಟಕ್ಕೆ, ತೆಲೆಗೆ ಹಾಗೂ ಎಡಗೈಗೆ ಹೊಡೆದು ಗುಪ್ತಪೆಟ್ಟು ಪಡಿಸಿದನು. ಆಗ ಬಿಡಿಸಲು ಬಂದ ನನ್ನ ಮಗ ಮಡಿವಾಳಪ್ಪ ಈತನಿಗೆ ಅಮರಪ್ಪ ಈತನು ದಬ್ಬಿಸಿಕೊಟ್ಟನು. ಆಗ ಅಲ್ಲೇ ಇದ್ದ ನನ್ನ ಮಕ್ಕಳಾದ ಅನ್ನಪೂರ್ಣ, ಶರಣಮ್ಮ ಹಾಗೂ ನಾವು ಚೀರಾಡುವ ಶಬ್ದ ಕೇಳಿ ಮಾನಪ್ಪ ತಂದೆ ಚಂದಪ್ಪ ಗುಡ್ಡಕಾಯಿ, ನಾಗಪ್ಪ ತಂದೆ ಶಿವಪ್ಪ ಗುಡ್ಡಕಾಯ ಇಬರು ಬಂದು ಜಗಳವನ್ನು ಬಿಡಿಸಿಕೊಂಡರು. ಆಗ ಅವರೆಲ್ಲರು ಇವರು ಬಂದು ಬಿಡಿಸಿಕೊಂಡಿದ್ದಕ್ಕೆ ನಮ್ಮ ಕೈಯಲ್ಲಿ ಉಳಿದುಕೊಂಡಿರಿ ಸೂಳೇ ಮಕ್ಕಳೆ. ಇಲ್ಲದಿದ್ದರೆ ಇವತ್ತು ನಿಮ್ಮ ಜೀವ ಬೀಡುತ್ತಿರಲಿಲ್ಲ. ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದರು. ನಂತರ ಗಾಯಗೊಂಡ ನನಗೆ ನನ್ನ ಮಗ ಮಡಿವಾಳಪ್ಪ ಈತನು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸುರಪುರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದನು. ಘಟನೆಯಲ್ಲಿ ನನ್ನ ಮಗನಿಗೆ ಯಾವುದೇ ಗಾಯಗಳಾಗಿರದ ಕಾರಣ ಅವನು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ಮನೆಯಲ್ಲಿ ನನ್ನ ಮಕ್ಕಳೊಂದಿಗೆ ವಿಚಾರ ಮಾಡಿ ಇಂದು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ.ಕಾರಣ ನನಗೆ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ ಗುಪ್ತಗಾಯಪಡಿಸಿ, ಮಾನಭಂಗ ಮಾಡಲು ಪ್ರಯತ್ನಿಸಿ, ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 04 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 73/2022 ಕಲಂ: 323, 324, 354, 504, 506 ಸಂ. 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 63/2022 ಕಲಂ: 420 ಐಪಿಸಿ: ಇಂದು ದಿನಾಂಕ:09/05/2022 ರಂದು 3-30 ಪಿಎಮ್ ಕ್ಕೆ ಶ್ರೀ ಖಾಜಾಹುಸೇನ ತಂದೆ ಹಸನ ಅಲಿ ಮ್ಯಾಳಗಿಮನಿ, ವ:25, ಜಾ:ಮುಸ್ಲಿಂ, ಉ:ವ್ಯಾಪಾರ ಸಾ:ಕೋನಹಳ್ಳಿ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮತ್ತು ನಮ್ಮ ಅತ್ತೆಯ ಮಗನಾದ ಮಹ್ಮದ ಹುಸೇನ ತಂದೆ ಖಾಜಾಹುಸೇನ ಸಾ:ಆನೂರು (ಕೆ) ತಾ:ಜಿ:ಯಾದಗಿರಿ ಇಬ್ಬರೂ ಸೇರಿ ನಮ್ಮೂರಿನಲ್ಲಿ ಹೊಸದಾಗಿ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಅಂಗಡಿಯನ್ನು ದಿನಾಂಕ:19/02/2022 ರಿಂದ ಪ್ರಾರಂಭ ಮಾಡಿರುತ್ತೇವೆ. ಅದರ ಹೆಸರು ಕೆ.ಬಿ.ಎನ್ ಅಗ್ರೋ ಏಜೆನ್ಸಿ ಎಂದು ಇರುತ್ತದೆ. ಸದರಿ ಅಂಗಡಿಗೆ ರಸಗೊಬ್ಬರ ಖರೀದಿ ಮಾಡಿ ತರಬೇಕೆಂದು ನಾನು ವಿಚಾರ ಮಾಡುತ್ತಿದ್ದಾಗ ಈಗ ಸುಮಾರು 8-10 ದಿವಸಗಳ ಹಿಂದೆ ವಡಗೇರಾದ ನಮ್ಮ ಪರಿಚಯಸ್ಥನಾದ ರಾಮಣ್ಣ ತಂದೆ ಮಲ್ಲಣ್ಣ ನೀಲಹಳ್ಳಿ ಸಾ:ವಡಗೇರಾ ಈತನು ನನ್ನ ಬಳಿ ಬಂದು ನಮ್ಮ ಅಳಿಯನಾದ ಸಾಬಣ್ಣ ತಂದೆ ಅಂಬ್ಲಪ್ಪ ದೇವದುರ್ಗ ಸಾ:ನಾಗನಟಗಿ ತಾ:ಶಹಾಪೂರ ಈತನು ರಸಗೊಬ್ಬರ ಪೂರೈಸುವ ಡಿಲರ್ ಕೆಲಸ ಮಾಡಿಕೊಂಡಿರುತ್ತಾನೆ. ಆತನಿಗೆ ಸಂಪಕರ್ಿಸಿದರೆ ನಿನಗೆ ರಸಗೊಬ್ಬರ ದೊರೆಯಬಹುದು ಎಂದು ಹೇಳಿ ಅವನ ಮೊಬೈಲ್ ನಂ. 8123206595 ನೇದ್ದನ್ನು ನನಗೆ ಕೊಟ್ಟನು. ನಂತರ ನಾನು ನಮ್ಮ ಪರಿಚಯದ ರಾಮಣ್ಣನು ಕೊಟ್ಟಿರುವ ಸಾಬಣ್ಣ ಇವರ ಮೊಬೈಲಿಗೆ ದಿನಾಂಕ:29/04/2022 ರಂದು ನನ್ನ ಮೊಬೈಲ್ ನಂ. 9632829735 ನೇದ್ದರಿಂದ ಸಾಬಣ್ಣನ ಮೊಬೈಲ್ ನಂ. 8123206595 ನೇದ್ದಕ್ಕೆ ಸಂಪಕರ್ಿಸಿ, ನಾವು ಈ ರೀತಿ ಹೊಸದಾಗಿ ರಸಗೊಬ್ಬರ ಅಂಗಡಿ ಪ್ರಾರಂಭ ಮಾಡುತ್ತಿದ್ದೇವೆ ನಮಗೆ ಮಾರಾಟ ಮಾಡಲು ಮಂಗಳ ಡಿಎಪಿ ರಸಗೊಬ್ಬರ ಬೇಕು ಅದು ಜಿ.ಎಸ್.ಟಿ ಬಿಲ್ ಜೊತೆಗೆ ಬೇಕು ಎಂದು ಹೇಳಿದೆನು. ಆಗ ಅವನು ನೀವು ನನ್ನ ಖಾತೆಗೆ ಹಣವನ್ನು ಜಮಾ ಮಾಡಿ ನಾನು ನಿಮಗೆ ಮಂಗಳ ಡಿ.ಎ.ಪಿ ರಸಗೊಬ್ಬರ ಮತ್ತು ಜಿ.ಎಸ್.ಟಿ ಬಿಲ್ ಕಳುಹಿಸುತ್ತೇನೆ ಎಂದು ಹೇಳಿದನು. ಆಗ ನಾನು ನಮಗೆ ಒಂದು ಲಾರಿ ಲೋಡ್ ಮಂಗಳ ಡಿ.ಎ.ಪಿ ಮತ್ತು ಒಂದು ಲಾರಿ ಲೋಡ ಮಂಗಳ ಯೂರಿಯಾ ಜಿ.ಎಸ್.ಟಿ ಬಿಲ್ ದೊಂದಿಗೆ ಬೇಕು ಎಂದು ಹೇಳಿದಾಗ ಅವನು ಈಗ ನನ್ನ ಬ್ಯಾಂಕ ಖಾತೆಗೆ ಹಣ ಜಮಾ ಮಾಡಿ ನಾನು ನಿಮಗೆ ಲಾರಿಯಲ್ಲಿ ಮಾಲು ಕಳಿಸಿದಾಗ ಇನ್ನುಳಿದ ಹಣ ಕೊಡಿ ಒಂದು ಲೋಡಿನಲ್ಲಿ 300 ಚೀಲ ಇರುತ್ತವೆ. ಅದಕ್ಕೆ ಹಣ 3,75,000/- ಆಗುತ್ತದೆ. ನಾನು ಜಿ.ಎಸ್.ಟಿ ಬಿಲ್ ಕೊಡುತ್ತೇನೆ ಎಂದು ಹೇಳಿದಾಗ ನಾನು ಈಗ 1,50,000/- ಹಾಕುತ್ತೇನೆ ಮಿಕ್ಕುಳಿದ ಹಣ ಲಾರಿಯಲ್ಲಿ ಮಾಲು ಬಂದು ಇಳಿಸಿದ ನಂತರ ಕೊಡುತ್ತೇನೆ ಎಂದು ಹೇಳಿದಾಗ ಅವನು ಸದ್ಯ 2,00,000/- ನನ್ನ ಬ್ಯಾಂಕ ಖಾತೆಗೆ ಜಮಾ ಮಾಡಿ ಉಳಿದ ಹಣ ಲಾರಿ ಬಂದು ಮಾಲು ಇಳಿಸಿದ ನಂತರ ಕೊಡಿ ಅಂತಾ ಹೇಳಿದನು. ಆಗ ನಾನು ದಿನಾಂಕ:30/04/2022 ರಂದು ವಡಗೇರಾ ಎಸ್.ಬಿ.ಐ ಬ್ಯಾಂಕ ಶಾಖೆಯಲ್ಲಿರುವ ನಮ್ಮ ಕೆ.ಬಿ.ಎನ್ ಅಗ್ರೋ ಏಜೆನ್ಸಿ ಖಾತೆ ಸಂ. 40932739250 ರಿಂದ ನಗದು ಹಣ ರೂ. 2,00,000/- (ಎರಡು ಲಕ್ಷ ರೂ. ಮಾತ್ರ) ಗಳನ್ನು ಸಾಬಣ್ಣನ ಬ್ಯಾಂಕ ಖಾತೆ ಸಂ. 921020009080782 ನೇದ್ದಕ್ಕೆ ನೇಫ್ಟ್ (ಆರ್.ಟಿ.ಜಿ.ಎಸ್) ಮುಖಾಂತರ ಜಮಾ ಮಾಡಿದೆನು. ಜಮಾ ಮಾಡಿದ ನಂತರ ಸಾಬಣ್ಣನಿಗೆ ಹಣ ಜಮಾ ಮಾಡಿದ್ದೇನೆ ಡಿಎಪಿ ರಸಗೊಬ್ಬರ ಯಾವಾಗ ಕಳುಹಿಸಿರುತ್ತಿರಿ ಎಂದು ಹೇಳಿದಾಗ ಅವರು ನಾಳೆ ಕಳುಹಿಸುತ್ತೇನೆ ಎಂದು ಹೇಳಿದರು. ಮರು ದಿವಸ ದಾರಿ ನೋಡಿದರೆ ರಸಗೊಬ್ಬರ ಕಳುಹಿಸಲಿಲ್ಲ. ನಂತರ ಕರೆ ಮಾಡಿದಾಗೊಮ್ಮೆ ಇವತ್ತು ನಾಳೆ ಕಳುಹಿಸುತ್ತೇನೆ ಎಂದು ಹೇಳುತ್ತಾ ಬಂದನು. ದಿನಾಂಕ:07/05/2022 ರಂದು ಸಾಯಂಕಾಲ ಸಾಬಣ್ಣನು ನನಗೆ ಕರೆ ಮಾಡಿ ಇವತ್ತು ಎರಡು ಪಿಕಪ್ ಗಾಡಿಗಳಲ್ಲಿ 130 ಚೀಲ ಮಂಗಳ ಡಿಎಪಿ ರಸಗೊಬ್ಬರ ಕಳುಹಿಸುತ್ತಿದ್ದನೆ. ಮಾಲು ಇಳಿಸಿಕೊಂಡ ನಂತರ ನನ್ನ ಉಳಿದ ಹಣ 1,75,000/- ರೂ. ಜಮಾ ಮಾಡು ಇನ್ನುಳಿದ 170 ಚೀಲ ರಸಗೊಬ್ಬರ ನಾಳೆ ಬೆಳಗ್ಗೆ ಕಳುಹಿಸುತ್ತೇನೆ ಎಂದು ಹೇಳಿದನು. ಆಗ ನಾನು ಮೊದಲು ಗಾಡಿಗಳು ಬರಲಿ ರಸಗೊಬ್ಬರ ನೋಡಿ ಇಳಿಸುತ್ತೇನೆ ಎಂದು ಹೇಳಿದೆನು. ನಂತರ ಸಾಯಂಕಾಲ 7-30 ಗಂಟೆ ಸುಮಾರಿಗೆ ಅಶೋಕ ಲಿಲ್ಯಾಂಡ ದೋಸ್ತ ಗಾಡಿ ನಂ. ಕೆಎ 33 ಬಿ 3263 ಮತ್ತು ಬೊಲೆರೋ ಪಿಕಪ್ ಗಾಡಿ ನಂ. ಕೆಎ 33 ಬಿ 3012 ನೇದ್ದವುಗಳನ್ನು ಅವುಗಳ ಚಾಲಕರಾದ ರಾಜು ರಾಠೋಡ ಮತ್ತು ಯೂಸೂಫ ಇಬ್ಬರೂ ತಮ್ಮ ತಮ್ಮ ವಾಹನಗಳಲ್ಲಿ ತಲಾ 65 ಚೀಲದಂತೆ ಒಟ್ಟು 130 ಚೀಲ ಮಂಗಳ ಡಿಎಪಿ ರಸಗೊಬ್ಬರ ಲೋಡ ಮಾಡಿಕೊಂಡು ಬಂದಿದ್ದರು. ನಾನು ರಸಗೊಬ್ಬರ ಇಳಿಸುವುದಕ್ಕಿಂತ ಮುಂಚೆ ಒಂದು ಚೀಲವನ್ನು ಬಿಚ್ಚಿ ಅದರಿಂದ ಸ್ವಲ್ಪ ಶ್ಯಾಂಪಲನ್ನು ತೆಗೆದು ನೋಡಲಾಗಿ ನನಗೆ ಮಂಗಳ ಡಿ.ಎ.ಪಿ ರಸಗೊಬ್ಬರ ಅಲ್ಲ ಅಂತಾ ಅನುಮಾನ ಬಂತು. ಆಗ ನಾನು ಸಾಬಣ್ಣನಿಗೆ ನನ್ನ ಮೊಬೈಲಿನಿಂದ ಕರೆ ಮಾಡಿ ನೀವು ಕಳುಹಿಸಿದ ರಸಗೊಬ್ಬರದ ಮೇಲೆ ನನಗೆ ಅನುಮಾನ ಬರುತ್ತಿದೆ ಮತ್ತು ನೀವು ಜಿ.ಎಸ್.ಟಿ ಬಿಲ್ ಕೊಟ್ಟಿಲ್ಲ ಎಂದು ಹೇಳಿದಾಗ ಅವನು ಇದು ಅಸಲಿ ಡಿಎಪಿ ಮಂಗಳ ಗೊಬ್ಬರ ಇದೆ ಜಿ.ಎಸ್.ಟಿ ಬಿಲ್ ನನ್ನ ಹತ್ತಿರ ಇದೆ ನಾನು ಬಂದು ಕೊಡುತ್ತೇನೆ ಎಂದು ಹೇಳಿದನು. ಆಗ ನಾನು ಸಾಬಣ್ಣನಿಗೆ ನೀನು ಬರುವವರೆಗೆ ನಾನು ರಸಗೊಬ್ಬರ ಅನಲೋಡ ಮಾಡಲ್ಲ ಬೇಗನೆ ಬನ್ನಿ ಎಂದು ಹೇಳಿದೆನು. ಆ ಮೊನ್ನೆ ದಿನ ಸಾಬಣ್ಣನು ಬರಲಿಲ್ಲ. ನಿನ್ನೆ ದಿನಾಂಕ:08/05/2022 ರಂದು ಇಡಿ ದಿನ ಕರೆ ಮಾಡಿದರೂ ಕೂಡಾ ಸಾಬಣ್ಣನು ಬರಲಿಲ್ಲ. ಇಂದು ದಿನಾಂಕ:09/05/2022 ರಂದು ಕೂಡಾ ಸಾಬಣ್ಣನಿಗೆ ನಾನು ಕರೆ ಮಾಡಿದರೆ ಅವನು ಬರಲಿಲ್ಲ ಮತ್ತು ಜಿ.ಎಸ್.ಟಿ ಬಿಲ್ ತರಲಿಲ್ಲ. ಹೀಗಾಗಿ ಸದರಿ ಸಾಬಣ್ಣ ತಂದೆ ಅಂಬ್ಲಪ್ಪ ದೇವದುರ್ಗ ಸಾ:ನಾಗನಟಗಿ ಈತನು ನಮಗೆ ಅಸಲಿ ಡಿ.ಎ.ಪಿ ಮಂಗಳ ರಸಗೊಬ್ಬರ ಅದು ಜಿ.ಎಸ್.ಟಿ ಬಿಲ್ ಜೊತೆ ಕೊಡುತ್ತೇನೆ ಎಂದು ಹೇಳಿ ನನ್ನಿಂದ 2,00,000/- (ಎರಡು ಲಕ್ಷ ರೂ. ಮಾತ್ರ) ಗಳನ್ನು ತನ್ನ ಬ್ಯಾಂಕ ಖಾತೆಗೆ ಜಮ ಮಾಡಿಸಿಕೊಂಡು ನಕಲಿ ಗೊಬ್ಬರವನ್ನು ಪಿಕಪ್ ಗಾಡಿಗಳಲ್ಲಿ ಹಾಕಿ ಕಳುಹಿಸಿ ನನಗೆ ಮೋಸ ಮಾಡಿರುತ್ತಾನೆ. ಕಾರಣ ಸದರಿ ಎರಡು ರಸಗೊಬ್ಬರ ತುಂಬಿದ ವಾಹನಗಳೊಂದಿಗೆ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದೇನೆ. ಸಾಬಣ್ಣನು ನಾನು ಬರುತ್ತೇನೆ ಮತ್ತು ನಾನು ಕಳುಹಿಸಿದ್ದು, ಅಸಲಿ ಗೊಬ್ಬರ ಇದೆ ಹಾಗೂ ಜಿ.ಎಸ್.ಟಿ ಬಿಲ್ ಕೂಡಾ ಕೊಡುತ್ತೇನೆ ಎಂದು ಹೇಳಿದ್ದರಿಂದ ಅವನು ಬರುವಗೊಸ್ಕರ ಕಾಯ್ದು ಈಗ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ಸದರಿ ಸಾಬಣ್ಣ ತಂದೆ ಅಂಬ್ಲಪ್ಪ ದೇವದುರ್ಗ ಸಾ:ನಾಗನಟಗಿ ಈತನು ನಮಗೆ ಅಸಲಿ ಡಿ.ಎ.ಪಿ ಮಂಗಳ ರಸಗೊಬ್ಬರ ಅದು ಜಿ.ಎಸ್.ಟಿ ಬಿಲ್ ಜೊತೆ ಕೊಡುತ್ತೇನೆ ಎಂದು ಹೇಳಿ ಈಗ ನಕಲಿ ಗೊಬ್ಬರ ಕಳುಹಿಸಿ ಮೋಸ ಮಾಡಿದ ಬಗ್ಗೆ ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 63/2022 ಕಲಂ: 420 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಪೊಲೀಸ್ ಠಾಣೆ:-
ಗುನ್ನೆ ನಂ: 51/2022 ಕಲಂ 379 ಐಪಿಸಿ:ಫಿಯರ್ಾದಿ ಸಾರಾಂಶವೇನೆಂದರೆ, ನನ್ನದೊಂದು ಹೊಂಡಾ ಶೈನ್ ಮೋಟರ್ ಸೈಕಲ್ ನಂ ಏಂ 01 ಊಏ 8001, ಅಂತಾ ಇದ್ದು, ಅದರ ಇಟಿರಟಿಜ ಓಠ-ಎಅ65ಇಖಿ0044234, ಅಊಂಖಖಖ ಓಔ-ಒಇ4ಎಅ652ಇಈಖಿ012840, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 30,000/-ರೂ|| ಗಳು. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು ಪ್ರತಿನಿತ್ಯದಂತೆ ನಾನು ದಿನಾಂಕ 28/04/2022 ರಂದು ಸಾಯಂಕಲ 07-00 ಗಂಟೆಯ ಸುಮಾರಿಗೆ ನನ್ನ ಮೋಟರ್ ನಂ ಏಂ 01 ಊಏ 8001 ನೇದ್ದನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಉಳಿದುಕೊಂಡಿದ್ದು, ನಂತರ ದಿನಾಂಕ 29/04/2022 ರಂದು ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ನಮ್ಮ ಮನೆಯ ಮುಂದೆ ಇರಲಿಲ್ಲ. ನಂತರ ನಾನು ನಮ್ಮ ಮನೆಯ ಸುತ್ತಾ-ಮತ್ತಾ ನೋಡಿದರು ಮೋಟರ್ ಸೈಕಲ್ ಕಾಣದೇ ಇದ್ದ ಕಾರಣ ನಮ್ಮ ಮನೆಯ ಪಕ್ಕದಲ್ಲಿ ಇದ್ದ 1] ಕಾಳಪ್ಪ ತಂದೆ ಹಣಮಂತ್ರಾಯ ಪಂಚಾಳ ಹಾಗೂ 2] ನಾಗಪ್ಪ ತಂದೆ ದೊಡ್ಡಪ್ಪ ಮಾಲಿ ಪಾಟೀಲ್ ಇವರಿಗೆ ತಿಳಿಸಿದೆನು. ಅವರು ಕೂಡ ಸ್ಥಳಕ್ಕೆ ಬಂದು ನೋಡಿದ್ದು, ಎಲ್ಲರು ಕೂಡಿ ನಮ್ಮ ಕಾಲೋನಿಯಲ್ಲಿ ಹಾಗೂ ಯಾದಗಿರಿ ನಗರದ ಇತರ ಕಡೆಗಳಲ್ಲಿ ತಿರುಗಾಡಿ ನೋಡಲಾಗಿ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 51/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಪೊಲೀಸ್ ಠಾಣೆ:-
ಗುನ್ನೆ ನಂ: 52/2022 ಕಲಂ 379 ಐಪಿಸಿ:ಫಿಯರ್ಾದಿ ಸಾರಾಂಶವೇನೆಂದರೆ, ನನ್ನದೊಂದು ಸ್ಪ್ಲೆಂಡರ್ ಮೋಟರ್ ಸೈಕಲ್ ನಂ ಏಂ 32 ಎ 7557 ಅಂತಾ ಇದ್ದು, ಅದರ ಇಟಿರಟಿಜ ಓಠ-99ಃ17ಇ-09411, ಅಊಂಖಖಖ ಓಔ-99ಅ-19ಈ-04541, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 20,000/-ರೂ|| ಗಳು. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು ಪ್ರತಿನಿತ್ಯದಂತೆ ನಾನು ದಿನಾಂಕ 18/02/2022 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ನನ್ನ ಮೋಟರ್ ನಂ ಏಂ 32 ಎ 7557 ನೇದ್ದನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಉಳಿದುಕೊಂಡಿದ್ದು, ನಂತರ ದಿನಾಂಕ 19/02/2022 ರಂದು ಬೆಳಿಗ್ಗೆ 5-00 ಗಂಟೆಯ ಸುಮಾರಿಗೆ ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ನಮ್ಮ ಮನೆಯ ಮುಂದೆ ಇರಲಿಲ್ಲ. ನಂತರ ನಾನು ನಮ್ಮ ಮನೆಯ ಸುತ್ತಾ-ಮತ್ತಾ ನೋಡಿದರು ಮೋಟರ್ ಸೈಕಲ್ ಕಾಣದೇ ಇದ್ದ ಕಾರಣ ನನ್ನ ಮಗನಾದ ಸಿದ್ದಾರ್ಥ ತಂದೆ ಮರಿಗೆಪ್ಪ ಬುಕ್ಕಲ್ ಇವರಿಗೆ ಹಾಗೂ ನಮ್ಮ ಸಂಬಂಧಿಯಾದ 1] ಶ್ರವಣಕುಮಾರ ತಂದೆ ಶಾಂತಪ್ಪ ನಿರ್ಮಲಕರ್ ಮತ್ತು 2] ಅಶ್ವಥ ತಂದೆ ಸಾಯಿಬಣ್ಣ ದುದನಿ ಇವರಿಗೆ ತಿಳಿಸಿದೆನು. ಅವರು ಕೂಡ ಸ್ಥಳಕ್ಕೆ ಬಂದು ನೋಡಿದ್ದು, ಎಲ್ಲರು ಕೂಡಿ ನಮ್ಮ ಕಾಲೋನಿಯಲ್ಲಿ ಹಾಗೂ ಯಾದಗಿರಿ ನಗರದ ಇತರ ಕಡೆಗಳಲ್ಲಿ ತಿರುಗಾಡಿ ನೋಡಲಾಗಿ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 52/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

Last Updated: 10-05-2022 11:46 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080