ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10-06-2021
ಶಹಾಪೂರ ಪೊಲೀಸ್ ಠಾಣೆ :- 123/2021 ಕಲಂ 279, 338 ಐ.ಪಿ.ಸಿ : ಇಂದು ದಿನಾಂಕ 09/06/2021 ರಂದು ಮುಂಜಾನೆ 11-00 ಗಂಟೆಗೆ ಫಿಯರ್ಾದಿ ಶ್ರೀ ಶ್ರೀ ಮಹ್ಮದ ನಿಹಾಲ್ ತಂದೆ ಎಮ್.ಡಿ ರಸೂಲ್ ವನದುರ್ಗವಾಲೆ ವಯಸ್ಸು 20 ವರ್ಷ ಜಾತಿ ಮುಸ್ಲಿಂ ಉಃ ಗ್ಯಾರೇಜ್ ಕೆಲಸ ಸಾಃ ಗುತ್ತಿಪೇಠ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 04/06/2021 ರಂದು ಶುಕ್ರವಾರ ದಿನದಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಎಮ್.ಡಿ ಮೊಹಸಿನ್ ತಂದೆ ಎಮ್.ಡಿ ರಸೂಲ್ ವನದುರ್ಗವಾಲೆ ವಯಸ್ಸು 18 ವರ್ಷ ಈತನು, ನಮ್ಮ ಮಾವನವರ ಮನೆಯ ಕಟ್ಟಡಕ್ಕೆ ನೀರು ಹೊಡೆಯಲು ಹೋಗಿದ್ದನು. ನಂತರ ಮದ್ಯಾಹ್ನ 12-15 ಗಂಟೆಯ ಸುಮಾರಿಗೆ ನಮ್ಮ ಮಾವನ ಹತ್ತಿರ ಕೂಲಿ ದಿನನಿತ್ಯ ಕೆಲಸಕ್ಕೆ ಹೋಗುತಿದ್ದ ಅಬ್ದುಲ್ ರಹೀಮ್ ತಂದೆ ಅಬ್ದುಲ್ ಗನಿ ಈತನು ನನಗೆ ಫೋನ್ ಮಾಡಿ ಹೇಳಿದ್ದೆನೆಂದರೆ, ಇಂದು ಮುಂಜಾನೆ ನಿಮ್ಮ ಮಾವನವರ ಮನೆಗೆ ಕೂಲಿ ಕೆಲಸಕ್ಕೆ ಬಂದಿದ್ದೇನು, ನಿನ್ನ ತಮ್ಮ ಎಮ್.ಡಿ ಮೊಹಸಿನ್ನು ಬಂದು ಮನೆಯ ಕಟ್ಟಡಕ್ಕೆ ನೀರು ಹೊಡೆಯುತಿದ್ದನು, ಮನೆಯ ಕಟ್ಟಡದ ಕೆಲವು ಸಾಮಾನುಗಳನ್ನು ತೆಗೆದುಕೊಂಡು ಬರುವ ಸಂಬಂಧ ನಾನು, ನಿಮ್ಮ ಮಾವನವರ ಮೋಟರ್ ಸೈಕಲ್ ನಂಬರ ಕೆಎ-33-ಜೆ-2213 ನೇದ್ದನ್ನು ತೆಗೆದುಕೊಂಡು ಜೊತೆಯಲ್ಲಿ ನಿಮ್ಮ ತಮ್ಮನನ್ನು ಕರೆದುಕೊಂಡು ಮೋಟರ್ ಸೈಕಲ್ ಮೇಲೆ ಹೋಗುತಿದ್ದಾಗ ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಶಹಾಪೂರ ಪಟ್ಟಣದ ಇಂಡಸ್ಟ್ರಿಯಲ್ ಏರಿಯಾದ ಎ.ಸಿ ಗೋಧಾಮ ಹತ್ತಿರ ಬರುತಿದ್ದಾಗ ಹಿಂದುಗಡೆಯಿಂದ ಅಂದರೆ ಇಂಡಸ್ಟ್ರಿಯಲ್ ಏರಿಯಾದ ಒಳಗಡೆ ರೋಡಿನಿಂದ ಒಂದು ಕಾರ್ ನಂಬರ ಕೆಎ-51-ಎಮ್.ಕೆ-8890 ನೇದ್ದರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ಮೋಟರ್ ಸೈಕಲ್ನ ಹಿಂದೆ ಬಲಭಾಗಕ್ಕೆ ಡಿಕ್ಕಿ ಮಾಡಿದ್ದರಿಂದ ಇಬ್ಬರೂ ರೋಡಿನ ಮೇಲೆ ಬಿದ್ದಾಗ, ನನಗೆ ಸಣ್ಣ-ಪುಟ್ಟಗಾಯಗಳಾಗಿದ್ದು, ನಿನ್ನ ತಮ್ಮ ಎಮ್.ಡಿ ಮೊಹಸಿನ್ ಈತನಿಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿರುತ್ತವೆ. ಅಪಘಾತ ಪಡಿಸಿದ ಕಾರ್ ಚಾಲಕನ ಹೆಸರು ವಿಳಾಸ ವಿಚಾರಿಸಿದ್ದು, ಯಾಸಿರ್ ಅರಾಪತ್ ತಂದೆ ಮಹ್ಮದ ಶರೀಫ್ ಬಗೋಡಿ, ವಯಸ್ಸು 28 ವರ್ಷ, ಜಾತಿ ಮುಸ್ಲಿಂ, ಸಾ ಜಾಲಗಾರ ಓಣಿ ಶಹಾಪೂರ ಅಂತ ಹೇಳಿರುತ್ತಾನೆ. ನಿನ್ನ ತಮ್ಮನನ್ನು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತೇನೆ ನೀನು ಆಸ್ಪತ್ರೆಗೆ ಬಾ ಅಂತ ತಿಳಿಸಿದ ಮೇರೆಗೆ, ನಾನು ಸದರಿ ವಿಷಯವನ್ನು ನನ್ನ ತಂದೆ-ತಾಯಿಯವರಿಗೆ ತಿಳಿಸಿ ಎಲ್ಲರೂ ಕೂಡಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ, ನನ್ನ ತಮ್ಮ ಎಮ್.ಡಿ ಮೊಹಸಿನ್ ಈತನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದನು, ಸದರಿಯವನಿಗೆ ಅಪಘಾತದಲ್ಲಿ ಬಲಭುಜಕ್ಕೆ ಬಲಗೈ ಮುಂಗೈಗೆ ಭಾರಿ ಒಳಪೆಟ್ಟಾಗಿರುತ್ತದೆ. ಬಲಗಾಲ ಮೊಳಕಾಲಿಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಬಲಗಾಲ ಹಿಮ್ಮಡಿಯ ಮೇಲೆ ಎಲಬು ಮುರಿದು ಭಾರಿ ಒಳಪೆಟ್ಟಾಗಿರುತ್ತದೆ. ಅಬ್ದುಲ್ ರಹೀಮ್ ಈತನು ತನಗೆ ಸಣ್ಣ-ಪುಟ್ಟಗಾಯಗಳಾಗಿರುತ್ತವೆ ತನಗೆ ಉಪಚಾರದ ಅವಶ್ಯಕತೆ ಇರುವುದಿಲ್ಲ ಅಂತ ಹೇಳಿ ಉಪಚಾರ ಮಾಡಿಸಿಕೊಂಡಿರುವುದಿಲ್ಲ. ನನ್ನ ತಮ್ಮನಿಗೆ ವೈದ್ಯಾಧಿಕಾರಿಗಳು ಉಪಚಾರ ಮಾಡಿದ ನಂತರ ಹೆಚ್ಚಿನ ಉಪಚಾರ ಕುರಿತು ಮುಂದೆ ಹೋಗಲು ತಿಳಿಸಿದ್ದರಿಂದ, ನಾನು ಮತ್ತು ನನ್ನ ತಂದೆ ತಾಯಿಯವರೆಲ್ಲರೂ ಕೂಡಿ ನನ್ನ ತಮ್ಮ ಎಮ್.ಡಿ ಮೊಹಸಿನ್ ಈತನಿಗೆ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಹೆಚ್ಚಿನ ಉಪಚಾರ ಕುರಿತು ಮಿರಜಕ್ಕೆ ಹೋಗಿ ಜಿ.ಎಸ್. ಕುಲಕಣರ್ಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ. ಸದ್ಯ ನನ್ನ ತಮ್ಮ ಎಮ್.ಡಿ ಮೊಹಸಿನ್ ಇವನು ಮಿರಜ್ ಜಿ.ಎಸ್. ಕುಲಕಣರ್ಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದಾನೆ. ನನ್ನ ತಮ್ಮನಿಗೆ ಉಪಚಾರದ ಅವಶ್ಯಕತೆ ಇದ್ದುದ್ದರಿಂದ ಅವನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಠಾಣೆಗೆ ಬರಲು ತಡವಾಗಿರುತ್ತದೆ. ಸದರಿ ಅಪಘಾತಕ್ಕೆ ಕಾರಣಿಭೂತನಾದ ಕಾರ್ ನಂಬರ ಕೆಎ-51-ಎಮ್.ಕೆ-8890 ನೇದ್ದರ ಚಾಲಕನಾದ ಯಾಸಿರ್ ಅರಾಪತ್ ತಂದೆ ಮಹ್ಮದ ಶರೀಫ್ ಬಗೋಡಿ ಸಾಃ ಜಾಲಗಾರ ಓಣಿ ಶಹಾಪೂರ ಈತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಕೊಳ್ಳಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 123/2021 ಕಲಂ 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ್ ಠಾಣೆ :- 124/2021. ಕಲಂ 341 323 354 504 506 ಸಂ 34 ಐ.ಪಿ.ಸಿ. : ಇಂದು ದಿನಾಂಕ 09/06/2021 ರಂದು 14-00 ಗಂಟೆಗೆ ಪಿಯರ್ಾದಿ ಶ್ರೀ ಮಾಳಪ್ಪ ತಂದೆ ಸಿದ್ದಪ್ಪ ಮನಗಾರ ವ|| 25 ಜಾ|| ಕುರುಬರ ಉ|| ಚಾಲಕ ಸಾ|| ನಾಲವಡಿಗಿ. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಮ್ಮ ಸಂಬಂದಿಕನಾದ ನಿಂಗಪ್ಪ ತಂದೆ ಮಲ್ಲಪ್ಪ ದೋರನಹಳ್ಳಿ ಈತನು ನಮ್ಮ ಮನೆಯ ಜಾಗದ ಸಂಬಂದವಾಗಿ ನಮ್ಮೊಂದಿಗೆ ಈ ಮೊದಲು ತಕರಾರು ಮಾಡುತ್ತ ಬಂದಿದ್ದು ನಮ್ಮ ಹಿರಿಯರು ಬುದ್ದಿ ಮಾತು ಹೇಳಿದ್ದರಿಂದ ನಾವು ಹೋಗಲಿ ಅಂತ ಸುಮ್ಮನಾಗಿದೆವು.
ಹೀಗಿದ್ದು ದಿನಾಂಕ 09/06/2021 ರಂದು ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ತಾಯಿ ನಿಂಗಮ್ಮ ಗಂಡ ಸಿದ್ದಪ್ಪ ಮನಗಾರ ಇಬ್ಬರು ನಮ್ಮೂರ ಮರೆಮ್ಮನ ಹೋಟೆಲ್ ಹತ್ತಿರ ಹೋಗುತ್ತಿರುವಾಗ ಅಲ್ಲೆ ನಿಂತಿದ್ದ ನಮ್ಮ ಸಂಬಂದಿಕನಾದ 1] ಮಲ್ಲಿಕಾಜರ್ುನ್ ತಂದೆ ಬೀರಪ್ಪ ದೋರನಹಳ್ಳಿ 2] ನಿಂಗಪ್ಪ ತಂದೆ ಮಲ್ಲಪ್ಪ ದೋರನಹಳ್ಳಿ, 3] ಸಣ್ಣ ಮಾಳಪ್ಪ ತಂದೆ ಮಲ್ಲಪ್ಪ ದೋರನಹಳ್ಳಿ, ಎಲ್ಲರು ನಮಗೆ ನೋಡಿ ನಮ್ಮ ಹತ್ತಿರ ಬಂದು ಲೇ ಮಾಳ್ಯಾ ನಮ್ಮ ಊರಲ್ಲಿ ನಿನ್ನದು ಬಹಳವಾಗಿದೆ, ನಿಮ್ಮ ಮನೆಯ ಮುಂದೆ ನಮಗೆ ಹೋಗಲು ಬರಲು ದಾರಿ ಕೊಡುತ್ತಿಲ್ಲ ಸೂಳಿ ಮಗನೆ ಅಂತ ಅವಾಶ್ಚ ಶಬ್ದಗಳಿಂದ ಬೈದರು. ಆಗ ನಾನು ನಿಮಗೆ ಯಾಕ ತಕರಾರು ಮಾಡಲಿ ನಿವೆ ನಮ್ಮೊಂದಿಗೆ ತಕರಾರು ಮಾಡುತ್ತಿರಿ ಅಂತ ಅಂದಾಗ. ಮಲ್ಲಿಕಾಜರ್ುನ ಈತನು ನನಗೆ ಮುಂದೆ ಹೊಗದಂತೆ ತಡೆದುನಿಲ್ಲಿಸಿ ತನ್ನ ಕೈಯಿಂದ ನನಗೆ ಎರಡು ಕಪಾಳಕ್ಕೆ ಹೋಡೆನು. ಎದೆಗೆ ಗುದ್ದಿ ಗುಪ್ತಗಾಯ ಮಾಡಿದನು. ನಿಂಗಪ್ಪ ಈತನು ತನ್ನ ಕೈಯಿಂದ ನನಗೆ ತಲೆಗೆ ಹೋಡೆದು ಗುಪ್ತಗಾಯ ಮಾಡಿದನು.. ಸಣ್ಣ ಮಾಳಪ್ಪನು ತನ್ನ ಕೈಯಿಂದ ನನ್ನ ತಾಯಿಗೆ ಎಡಗೈ ಹೆಬ್ಬೆರಳಿಗೆ ಹೋಡೆದನು ಮತ್ತು ಕೈಹಿಡಿದು ಜಗ್ಗಾಡಿದನು. ಆಗ ಅಲ್ಲೆ ಹೋಗುತ್ತಿದ್ದ ನಮ್ಮೂರ ಮರೆಪ್ಪ ತಂದೆ ಹಣಮಂತ ಬಂಡೆರ, ಮಹಾದೇವಪ್ಪ ತಂದೆ ಸಿದ್ದಪ್ಪ ಮಡಿವಾಳ, ಇವರು ಜಗಳ ನೋಡಿ ಬಂದು ಬಿಡಿಸಿಕೊಂಡರು. ಆಗ ಈ ಮೇಲ್ಕಂಡ ಮುರು ಜನರು ಇವತ್ತು ಉಳಿದುಕೊಂಡಿದ್ದಿರಿ ಇನ್ನೊಮ್ಮೊ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತ ಜೀವದ ಭಯ ಹಾಕಿ ಹೋದರು. ಅಂತ ಠಾಣೆಗೆ ಬಂದು ದೂರು ನಿಡಿದ್ದು ಅದೆ. ಸಲ್ಲಿಸಿದ್ದು. ಸದರಿ ಅಜರ್ಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 124/2021 ಕಲಂ 341.323.354.504.506. ಸಂ 34 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ :- 125/2021.ಕಲಂ 420, 427 ಐ.ಪಿ.ಸಿ. : ಇಂದು ದಿನಾಂಕ 09/06/2021 ರಂದು 5.00 ಪಿಎಂ ಕ್ಕೆ ಶ್ರೀ ನಾಗರೆಡ್ಡಿ ತಂದೆ ಬಸವರಾಜಪ್ಪ ಸಗರ ವ|| 51ವರ್ಷ ಜಾ|| ಲಿಂಗಾಯತ ರೆಡ್ಡಿ ಉ|| ಒಕ್ಕಲುತನ ಸಾ|| ಚಟ್ನಳ್ಳಿ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ ಮಾಡಿಸಿದ ಅಜರ್ಿಯನ್ನು ತಂದು ಹಾಜರುಪಡಿಸಿದ್ದು, ಅಜರ್ಿಯ ಸಾರಾಂಶವೇನೆಂದರೆ, ನಾನು ನಮ್ಮ ಹೊಲ ಚಟ್ನಳ್ಳಿ ಸೀಮಾಂತರದ ಸವರ್ೆ ನಂ 519/3 ನೇದ್ದರಲ್ಲಿ ಕಲ್ಲಂಗಡಿ ಹಣ್ಣು ಬೆಳೆಯುತ್ತಾ ಬಂದಿದ್ದು, ಬೆಳೆದ ಕಲ್ಲಂಗಡಿ ಹಣ್ಣನ್ನು ಬೇರೆ ಬೇರೆ ಕಡೆಗೆ ಖರೀದಿದಾರರಿಗೆ ಲಾರಿ ಟ್ರಾನ್ಸಪೋರ್ಟ ಮೂಲಕ ಸಾಗಿಸಿ ಖರೀದಿದಾರರು ಯಾರು ತಮಗೆ ಕಳಿಸಿಕೊಡಿ ಹಣ ಅಕೌಂಟ್ ಪೇ ಮೂಲಕ ಕಳಿಸುತ್ತೇವೆ ಅಂತಾ ಹೇಳಿ ಫೋನಿನಲ್ಲಿ ತಿಳಿಸಿ ತಮಗೆ ಬೇಕಾದ ಲಾರಿಯನ್ನು ಕಳಿಸುತ್ತಾರೋ ಅಂತವರಿಗೆ ಮೊದಲಿನಿಂದಲೂ ಹಣ್ಣು ಮಾರಾಟ ಮಾಡುತ್ತಾ ಬಂದಿದ್ದೇವೆ. ಅದರಂತೆ ಈ ವರ್ಷ ನಾವು ನಮ್ಮ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣನ್ನು ನಮಗೆ ಪರಿಚಯ ಇರುವ ಲಾರಿ ಟ್ರಾನ್ಸಪೋರ್ಟ ಮಾಲೀಕರಾದ ಶಿವಕಾಂತ ತಂದೆ ಚಂದ್ರಕಾಂತ ಕಾಂಬಳೆ ಸಾ|| ಅಯ್ಯರವಾಡಿ ಕಲಬುರಗಿ ಇವರಿಗೆ ಪೋನ ಮಾಡಿ ಯಾರಿಗೆ ಮಾರಾಟ ಮಾಡಬೇಕು ಅಂತಾ ಕೇಳಿದಾಗ ಅವರು ಬೆಂಗಳೂರಿನ ರಾಜು ಜೋಷಿ ಭುವನೇಶ್ವರ ಮಂಡಿ ಎಪಿಎಂಸಿ ಯಾರ್ಡ ಅಗ್ರಹಾರ ಬೆಂಗಳೂರು ಇವರ ಹತ್ತಿರ ಕಳುಹಿಸಿದರೆ ಸರಿಯಾದ ಬೆಲೆ ಕೊಟ್ಟು ಅದರ ಹಣ ಅಕೌಂಟಿಗೆ ಕಳುಹಿಸುತ್ತಾರೆ ಅಂತಾ ತಿಳಿಸಿ ರಾಜು ರವರ ಫೋನ ನಂಬರ ಕೊಟ್ಟಿದ್ದು, ನಾನು 9901369632 ಮತ್ತು 9108155338 ನೇದ್ದಕ್ಕೆ ಫೋನ ಮಾಡಿ ನಾನು ನಿಮಗೆ ಕಲ್ಲಂಗಡಿ ಹಣ್ಣು ಕಳುಹಿಸಿದರೆ ನೀವು ಹಣ ಕೊಡುತ್ತೀರಾ ಅಂತಾ ಕೇಳಿದಾಗ ರಾಜು ಜೋಷಿ ರವರು ಆಯ್ತು 5.50 ರೂಪಾಯಿಗೆ ಕೆಜಿ ಯಂತೆ ಖರೀದಿ ಮಾಡುತ್ತೇವೆ ನೀವು ಹಣ್ಣು ಕಳುಹಿಸಿಕೊಡಿ ನಾನು ಹಣ ಅಕೌಂಟಿಗೆ ಹಾಕುತ್ತೇನೆ ಅಂದಾಗ ಲಾರಿ ಕಳಿಸಿರಿ ಅಂತಾ ನಾನು ಹೇಳಿದ್ದರಿಂದ ರಾಜು ರವರ ಮೂಲಕ ಶಿವಕಾಂತ ರವರು ಕಳುಹಿಸಿದ ಲಾರಿ ನಂ ಎಂಹೆಚ್ 13 ಆರ್ 3711 ನೇದ್ದು ಕಳುಹಿಸಿದ್ದು ದಿನಾಂಕ 10/05/2021 ರಂದು ಕಲ್ಲಂಗಡಿ ಹಣ್ಣು ಲೋಡ ಮಾಡಿ ಮೈಲಾರಲಿಂಗೇಶ್ವರ ವೇ ಬ್ರಿಡ್ಜನಲ್ಲಿ ತೂಕ ಮಾಡಿಸಿ 9630 ಕೆಜಿ ಹಣ್ಣು ಕಳುಹಿಸಿದ್ದು, ಅದರಂತೆ ದಿನಾಂಕ 12/05/2021 ರಂದು ಲಾರಿ ನಂ ಎಂಹೆಚ್ 11 ಸಿಹೆಚ್ 4399 ನೇದ್ದರಲ್ಲಿ ಕಲ್ಲಂಗಡಿ ಹಣ್ಣು ಲೋಡ ಮಾಡಿ ದೋರನಳ್ಳಿಯ ಮೈಲಾರಲಿಂಗೇಶ್ವರ ವೇ ಬ್ರಿಡ್ಜನಲ್ಲಿ ತೂಕ ಮಾಡಿಸಿ 10155 ಕೆಜಿ ಹಣ್ಣು ಕಳುಹಿಸಿದ್ದು ಮತ್ತು ಅದೇ ದಿನ ಇನ್ನೊಂದು ಲಾರಿ ನಂ ಕೆಎ 32 ಡಿ 8751 ನೇದ್ದರಲ್ಲಿ ಕಲ್ಲಂಗಡಿ ಹಣ್ಣು ಲೋಡ ಮಾಡಿ ಮೈಲಾರಲಿಂಗೇಶ್ವರ ವೇ ಬ್ರಿಡ್ಜನಲ್ಲಿ ತೂಕ ಮಾಡಿಸಿ 10035 ಕೆಜಿ ಹಣ್ಣು ಕಳುಹಿಸಿದ್ದು ಇರುತ್ತದೆ. ನಾನು ಕಲ್ಲಂಗಡಿ ಹಣ್ಣು ಕಳುಹಿಸಿದ ತಕ್ಷಣ ರಾಜು ಜೋಷಿ ರವರಿಗೆ ಫೋನ ಮಾಡಿ ಕಲ್ಲಂಗಡಿ ಕಳುಹಿಸಿದ್ದೇನೆ 3 ಲೋಡ ಕಲ್ಲಂಗಡಿ ಹಣ್ಣಿನ ಹಣ 1,57,923/- ರೂಪಾಯಿ ಆಗುತ್ತದೆ. ಮತ್ತು 16000/- ರೂಪಾಯಿ ಲಾರಿ ಡೀಜೆಲ್ ಹಾಕಿಸಿದ್ದು ಸೇರಿ ಒಟ್ಟು 1,73,923/- ರೂಪಾಯಿ ನಿಮಗೆ ಕಲ್ಲಂಗಡಿ ಮುಟ್ಟಿದ ತಕ್ಷಣ ನನ್ನ ಅಕೌಂಟಿಗೆ ಹಣ ಹಾಕಿರಿ ಅಂದಾಗ ರಾಜು ಜೋಷಿ ರವರು ಆಯ್ತು ಅಂತಾ ಹೇಳಿದರು. ನಂತರ ನಾನು ಕಳುಹಿಸಿದ ಕಲ್ಲಂಗಡಿ ಹಣ್ಣಿನ ಲೋಡ ಲಾರಿಗಳು ರಾಜು ರವರ ಹತ್ತಿರ ತಲುಪಿದ್ದು ಅವರಿಗೆ ಹಣ ಕಳುಹಿಸಿ ಅಂತಾ ನಾನು ಫೋನಿನಲ್ಲಿ ತಿಳಿಸಿದಾಗ ಅವರು 2 ಲೋಡ ಮಾರಾಟವಾಗಿದ್ದು, 1 ಲೋಡ ಇನ್ನೂ ಮಾರಾಟವಾಗಿಲ್ಲ 2 ಲೋಡಿನ ಹಣ ಹಾಕುತ್ತೇನೆ ಅಂತಾ ತಿಳಿಸಿದರು. ಆದರೆ 7-8 ದಿನಗಳಾದರೂ ನನಗೆ ಹಣ ಹಾಕಲಿಲ್ಲ. ಆಗ ರಾಜು ರವರು ನಿನ್ನ ಕಲ್ಲಂಗಡಿ ಹಣ್ಣು ಸರಿಯಾಗಿಲ್ಲ ಕಡಿಮೆ ರೇಟಿನಲ್ಲಿ ಮಾರಾಟವಾಗಿ ನನಗೆ ಲಾಸ್ ಆಗಿದೆ ಮತ್ತು 1 ಲೋಡ ಕಲ್ಲಂಗಡಿ ಮಾರಾಟವಾಗದೇ ಇದ್ದು ಅವುಗಳನ್ನು 5000/- ರೂಪಾಯಿಗೆ ಮಾರಾಟ ಮಾಡಲೇ ಅಥವಾ ವಾಪಸ್ ಕಳುಹಿಸಿ ಕೊಡಲೇ ಅಂತಾ ಕೇಳಿದಾಗ ವಾಪಸ್ ಕಳುಹಿಸಿರಿ ಅಂದಾಗ 8-9 ದಿನಗಳ ನಂತರ ಕಲ್ಲಂಗಡಿ ಹಣ್ಣು ಮರಳಿ ಕಳುಹಿಸಿದ್ದು ಅವು ಸಂಪೂರ್ಣ ಕೊಳೆತು ಅಂದಾಜು 55000/- ರೂಪಾಯಿ ನಷ್ಟವಾಗಿದ್ದು, ನನಗೆ ಕೊಡಬೇಕಾದ 2 ಲೋಡಿನ ಹಣ ಮತ್ತು ಡೀಜೆಲ್ ಹಣ 16000/- ರೂ ಸೇರಿ ಅಂದಾಜು ಒಟ್ಟು 1,18,000/- ರೂಪಾಯಿ ಕೊಡಬೇಕಾಗಿದ್ದು ಕೊಡದೇ ನಿನಗೆ ಯಾವುದೇ ಹಣ ಕೊಡುವುದು ಇರುವುದಿಲ್ಲ. ಲಾರಿ ಬಾಡಿಗೆ ತೆಗೆದು ಉಳಿದ ಹಣ ಲಾರಿಯವರ ಹತ್ತಿರ ಕೊಟ್ಟಿದ್ದೇನೆ, ಸುಮ್ಮನೇ ನನಗೆ ಫೋನ ಮಾಡಿ ಸತಾಯಿಸಬೇಡ ಅಂತಾ ಹೇಳುತ್ತಾ ರೈತನಾದ ನನ್ನ ಬೆಳೆಯನ್ನು ಖರೀದಿಸಿ ಬೆಳೆಯ ಹಣ ಕೊಡದೇ ಮೋಸ ಮಾಡಿದ್ದು ಅಲ್ಲದೇ 1 ಲೋಡ ಕಲ್ಲಂಗಡಿ ವಾಪಸ್ ಕಳುಹಿಸಿ ಅಂದಾಜು 55000/- ರೂಪಾಯಿ ನಷ್ಟ ಉಂಟು ಮಾಡಿದ ವ್ಯಾಪಾರಸ್ಥನಾದ ರಾಜು ಜೋಷಿ ಮತ್ತು ಲಾರಿ ಮಾಲೀಕನಾದ ಶಿವಕಾಂತ ಕಾಂಬಳೆ ಇವರ ಮೇಲೆ ಕ್ರಮ ಜರುಗಿಸಬೇಕು ಅಂತಾ ಈ ಅಜರ್ಿಯ ಮೂಲಕ ವಿನಂತಿಸಿಕೊಳ್ಳುತ್ತೇನೆ ಅಂತಾ ಪಿಯರ್ಾದಿ ಆಧಾರದ ಮೇಲೆ ಠಾಣೆಯ ಗುನ್ನೆ ನಂ 125/2021 ಕಲಂ 420, 427 ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ್ ಠಾಣೆ :- 126/2021 ಕಲಂ 87 ಕೆ.ಪಿ ಆಕ್ಟ : ಇಂದು ದಿನಾಂಕ 09/06/2021 ರಾತ್ರಿ 8-50 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ವೆಂಕಟೇಶ್ ಪೊಲೀಸ್ ಉಪ-ಅಧೀಕ್ಷಕರು ಸುರಪೂರ ಉಪ ವಿಭಾಗ ಸುರಪೂರ ಇವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ: 09/06/2021 ರಂದು, ಸುರಪೂರ ಉಪವಿಭಾಗದಿಂದ ಪೇಟ್ರೋಲಿಂಗ ಕುರಿತು ಶಹಾಪೂರಕ್ಕೆ ಸಾಯಂಕಾಲ 7-00 ಗಂಟೆಯ ಸುಮಾರಿಗೆ ಬಂದಾಗ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮೇನ್ ಕೆನಾಲ ಪಕ್ಕದ ಸಜ್ಜನಶೇಟ್ಟಿ ಇವರ ಹೋಲದ ಹತ್ತಿರ ಕೆಲವು ಜನರು ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಜೂಜಾಟವಾಡುತ್ತಿದ್ದಾರೆ ಅಂತ ಮಾಹಿತಿ ಬಂದಿದ್ದು, ಸದರಿ ಮಾಹಿತಿಯು ಖಚಿತ ಪಡಿಸಿಕೊಂಡು, ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ, ಶಹಾಪೂರ ಪೊಲೀಸ್ ಠಾಣೆಗೆ ಬಂದು, ಎನ್,ಸಿ, ನಂ 31/2021 ನೇದ್ದು ದಾಖಲಿಸಿದ್ದು. ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು ಅನುಮತಿ ನೀಡಿರುತ್ತಾರೆ. ಕಾರಣ ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಡಲಾಗಿದೆ. ಅಂತ ಜ್ಞಾಪನ ಪತ್ರ ನೀಡಿದ ಪ್ರಕಾರ ಠಾಣೆ ಗುನ್ನೆ ನಂಬರ 126/2021 ಕಲಂ 87 ಕೆ.ಪಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಳ್ಳಲಾಗಿದೆ.ಸ||ತ|| ಪಿಯರ್ಾದಿಯವರು ನಂತರ ದಾಳಿ ಮಾಡಿ ಜೂಜಾಟ ಆಡುತಿದ್ದ 9 ಜನ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 129100=00 ರೂಪಾಯಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಬಂದು ಜಪ್ತಿ ಪಂಚನಾಮೇಯನ್ನು ಮುಂದಿನ ಕ್ರಮ ಕುರಿತು ಹಾಜರ ಪಡಿಸಿದ್ದು ಇರುತ್ತದೆ
ಸೈದಾಪೂರ ಪೊಲೀಸ್ ಠಾಣೆ :- 89/2021 ಕಲಂ 379 ಐಪಿಸಿ : ಇಂದು ದಿನಾಂಕ: 09-06-2021 ರಂದು ಸಾಯಂಕಾಲ 05-45 ಗಂಟೆಗೆ ಶ್ರಿ ಭೀಮರಾಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಆನೂರ(ಬಿ) ಗ್ರಾಮದ ಭಿಮಾನದಿಯಲ್ಲಿ ಮರಳು ತುಂಬಿದ ಟ್ರ್ಯಾಕ್ಟರ ನಂ. ಕೆಎ-33 ಟಿಬಿ-0876 ಅಂತಾ ಇದ್ದು ಅದಕ್ಕೆ ಕೆಂಪು ಬಣ್ಣದ ಟ್ರ್ಯಾಲಿ ಇದ್ದು ಅದರ ನಂಬರ ಕೆಎ-33 ಟಿಎ-730 ನೇದ್ದನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.89/2021 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ :- 107/2021 ಕಲಂ: 143,147,148,323,324,354,504 506 ಸಂಗಡ 149 ಐಪಿಸಿ : ಇಂದು ದಿನಾಂಕಃ 09/06/2021 ರಂದು 5 ಪಿ.ಎಮ್ ಕ್ಕೆ ಠಾಣೆಯಲ್ಲಿರುವಾಗ ಶ್ರೀಮತಿ ನೀಲಮ್ಮ ಗಂಡ ದೊಡ್ಡಯ್ಯಾಸ್ವಾಮಿ ನಂದಿಕೊಲಮಠ ವಯಾ:45 ವರ್ಷ ಉ:ಹೊಲೆ ಮನೆಕೆಲಸ ಜಾತಿ:ಜಂಗಮ ಸಾ:ದೇವಾಪೂರ ನಿನ್ನೆ ದಿನಾಂಕ: 07-06-2021 ರಂದು ರಾತ್ರಿ 8 ಗಂಟೆ ಸುಮಾರಿಗೆ ನಾನು ನನ್ನ ಗಂಡನಾದ ದೊಡ್ಡಯ್ಯಾಸ್ವಾಮಿ ಮತ್ತು ನನ್ನ ಮಗಳಾದ ಶಿಲಾದೇವಿ ಎಲ್ಲರೂ ಮನೆಯಲ್ಲಿರುವಾಗ ನಮ್ಮ ಅಣ್ಣತಮಕಿಯಾದ 1) ಮಲ್ಲಿಕಾಜರ್ುನ ತಂದೆ ರಾಚಯ್ಯಾ ಸ್ವಾಮಿ ನಂದಿಕೊಲಮಠ 2) ಗಂಗಮ್ಮ ಗಂಡ ರಾಚಯ್ಯಾ ನಂದಿಕೊಳಮಠ 3) ರಾಚಯ್ಯಾ ತಂದೆ ನಿಜಗುಣಯ್ಯಾ ನಂದಿಕೊಲಮಠ 4) ಗುರಲಿಂಗಯ್ಯಾ ತಂದೆ ಮಹಾದೇವಯ್ಯಾ ಮಠ 5) ಬಸಮ್ಮ ತಂದೆ ರಾಚಯ್ಯಾ ನಂದಿಕೊಲಮಠ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಗೆ ಬಂದವರೆ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ನಿಂತು ಕೊಂಡು ಎಲೇ ಸುಳೇ ಮಕ್ಕಳೆ ಮನೆಯಿಂದ ಹೊರಗಡೆ ಬನ್ನಿರಿ ಸುಳೇ ಮಕ್ಕಳೆ ನಿಮಗೆ ಹೋಲ ಹೆಚ್ಚಿಗೆ ಬಂದಿಗೆ ನಮಗೆ ಇನ್ನು 8 ಗುಂಟೆ ಜಮೀನು ಕೊಡ್ರಿ ಮಕ್ಕಳೇ ಅಂತಾ ಹಾಗೇ ಹೀಗೆ ಅವಾಚ್ಯವಾಗಿ ಬೈಯುತ್ತಿರುವಾಗ ನಾನು ನನ್ನ ಗಂಡನಾದ ದೊಡ್ಡಯ್ಯಾಸ್ವಾಮಿ ಇಬ್ಬರು ಮನೆಯ ಹೊರಗಡೆ ಬಂದು ಅವರ ಹತ್ತಿರ ನಿಂತು ಯಾಕೇ ನಮ್ಮ ಮನೆಗೆ ಬಂದು ಸುಮ್ಮನೆ ಬೈಯುತ್ತಿರಿ ಅಂತಾ ಕೇಳುತ್ತಿರುವಾಗ ಅವರಲ್ಲಿಯ ಮಲ್ಲಿಕಾಜರ್ುನ ಮತ್ತು ರಾಚಯ್ಯಾಸ್ವಾಮಿ ಇಬ್ಬರು ನನ್ನ ಗಂಡ ದೊಡ್ಡಯ್ಯಾಸ್ವಾಮಿ ಈತನ ಕುತ್ತಿಗೆ ಹಿಡಿದು ನುಕಾಡುತ್ತಿರುವಾಗ ಬಿಡಿಸಲು ಹೋದ ನನಗೆ ಮಲ್ಲಿಕಾಜರ್ುನ ಈತನು ನನ್ನ ಸೀರೆ ಸೆರಗು ಹಿಡಿದು ಎಳೆದನು. ರಾಚಯ್ಯಾ ಈತನು ನನ್ನ ತಲೆಯ ಮೇಲಿನ ಕೂದಲು ಹಿಡಿದು ನೆಲಕ್ಕೆ ಹಾಕಿ ಕಾಲಿನಿಂದ ನನ್ನ ಹೊಟ್ಟೆಗೆ ಒದ್ದನು. ಆಗ ನಾನು ಚಿರಾಡು ಅಳುತ್ತಿರುವಾಗ ಜಗಳ ಬಿಡಿಸಲು ಬಂದ ನನ್ನ ಮಗಳಾದ ಶಿಲಾದೇವಿ ಇವಳ ತಲೆಗೆ ಮಲ್ಲಿಕಾಜರ್ುನ ಈತನು ಒಂದು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ಹೊಡೆ ಬಡೆ ಮಾಡುತ್ತಿರುವಾಗ ಓಣಿಯ ದೇವಮ್ಮ ಮಾಲಗತ್ತಿ, ಹಾಗೂ ನಮ್ಮ ಗ್ರಾಮ ಬಸಂತಣ್ಣ ಹಾಲಬಾವಿ ಇವರು ಬಂದು ಜಗಳವನ್ನು ನೋಡಿ ಬಿಡಿಸಿರುತ್ತಾರೆ ಆಗ ಅವರು ನಮಗೆ 8 ಗುಂಟೆ ಜಮೀನು ಕೊಡದಿದ್ದರೆ ನಿಮ್ಮ ಜೀವ ಹೊಡೆಯದೆ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೊಗಿರುತ್ತಾರೆ. ನಂತರ ನಾನು ನನ್ನ ಗಂಡ ದೊಡ್ಡಯ್ಯಾ ಸ್ವಾಮಿ ಮಗಳಾದ ಶೀಲಾದೆವಿ ಮೂವರು ಒಂದು ಖಾಸಗಿ ವಾಹನದಲ್ಲಿ ಸುರಪೂರ ಸರಕಾರಿ ಆಸ್ಪತ್ರೆ ಬಂದು ಸೇರಿಕೆಯಾಗಿ ಉಪಚಾರ ಪಡೆದುಕೊಂಡು ವಿಚಾರ ಮಾಡಿ ಠಾಣೆಗೆ ಬಂದು ದೂರು ಅಜರ್ಿ ನಿಡಿದ್ದು ಇರುತ್ತದೆ. ನಮಗೆ ಹೊಡೆ ಬಡೆ ಮಾಡಿದ ಮೇಲೆ ಹೇಳಿದ 5 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರ ಸಂಚಾರಿ ಪೊಲೀಸ್ ಠಾಣೆ :- 31/2021 ಕಲಂ 279, 427 ಐಪಿಸಿ : ನಿನ್ನೆ ದಿನಾಂಕ:08/06/2021 ರಂದು ಬೆಳಗ್ಗೆ 10:00 ಗಂಟೆಯ ಸುಮಾರಿಗೆ ಲಾರಿ ನಂ: ಕೆಎ-06 ಎಎ-1445 ರ ಚಾಲಕ ಅಬ್ದುಲ್ ವಸಿಮ್ ತನ್ನ ಲಾರಿ ನಂ:ಕೆಎ-06 ಎಎ-1445 ರಲ್ಲಿ ಸಾಮಥ್ರ್ಯಕ್ಕಿಂತ ಎತ್ತರವಾಗಿ ಬೆಡ್ಗಳನ್ನು (ವಿದ್ಯಾಥರ್ಿ ವಸತಿ ನಿಲಯದ ಗಾಧಿಗಳನ್ನು) ಹೇರಿಕೊಂಡು ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಗಂಜ್ ಏರಿಯಾದ ಶ್ರೀ.ಮೌನೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ಎಲ್.ಟಿ.ಲೈನ್ ಗೆ ಹಾಯಿಸಿದ್ದರಿಂದ ಲಾರಿಗೆ ಬೆಂಕಿತಗುಲಿದ್ದು ಅಲ್ಲದೇ ಈ ಘಟನೆಯಿಂದ ನಮ್ಮ ಕಂಪನಿಗೆ ರೂ.80000/-ನಷ್ಟ ಸಂಭವಿಸಿರುತ್ತದೆ ಅಂತಾ ತಿಳಿಸಿದ ಮೇರೆಗೆ. ಈ ಅಪಘಾತಕ್ಕೆ ಕಾರಣರಾದ ಲಾರಿ ನಂ: ಕೆಎ-06 ಎಎ-1445 ರ ಚಾಲಕ ಅಬ್ದುಲ್ ವಸಿಮ್ ತಂದೆ ರಿಯಾಜ ಅಹ್ಮದ್, ವಯ:32 ವರ್ಷ, ಸಾ||ಪರಕ್ ಮೊಹಲ್ಲಾ, ಶಿರಾ, ತಾ||ಶಿರಾ ಜಿ||ತುಮಕೂರು ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 31/2021 ಕಲಂ 279, 427 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.