ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-06-2022


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 83/2022 ಕಲಂ: 279, 337, 338 304 (ಎ) ಐಪಿಸಿ ಸಂ 187 ಐಎಮ್ವ್ಹಿ ಎಕ್ಟ : ಇಂದು ದಿನಾಂಕ:06/06/2022 ರಂದು 6-15 ಪಿಎಮ್ ಕ್ಕೆ ಶ್ರೀ ಹಣಮಂತ ತಂದೆ ಬಸಪ್ಪ ಬೆಳಗುಂದಿ, ವ:56, ಜಾ:ಮಾದಿಗ, ಉ:ಒಕ್ಕಲುತನ ಸಾ:ಶೆಟ್ಟಿಗೇರಾ ತಾ:ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಿನ್ನೆ ದಿನಾಂಕ:05/06/2022 ರಂದು ನಮ್ಮ ಸ್ವಂತ ತಮ್ಮನ ಮಗನಾದ ಬಸಪ್ಪ ತಂದೆ ಶರಣಪ್ಪ ಈತನ ನಿಶ್ಚಿತಾರ್ಥ ಕಾರ್ಯಕ್ರಮವು ವಡಗೇರಾ ತಾಲೂಕಿನ ಕ್ಯಾತ್ನಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದರು. ಸದರಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ನಮ್ಮ ಹೆಣ್ಣುಮಕ್ಕಳಿಗೆ ಅಟೋಗಳಲ್ಲಿ ಮುಂದೆ ಕಳುಹಿಸಿ, ನಾವು ನಾಲ್ಕೈದು ಜನ ಗಂಡು ಮಕ್ಕಳು ನಮ್ಮ ನಮ್ಮ ಮೋಟರ್ ಸೈಕಲಗಳ ಮೇಲೆ ಕ್ಯಾತ್ನಳ ಗ್ರಾಮಕ್ಕೆ ಹೋಗಿ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಸಾಯಂಕಾಲ ಮರಳಿ ನಮ್ಮ ನಮ್ಮ ಮೋಟರ್ ಸೈಕಲ್ ಗಳ ಮೇಲೆ ವಾಪಸ ನಮ್ಮೂರಿಗೆ ಹೊರಟೆವು. ನನ್ನ ಮೋಟರ್ ಸೈಕಲ್ ಮೇಲೆ ನಾನು ಮತ್ತು ದುರುಗಪ್ಪ ತಂದೆ ಮರೆಪ್ಪ ಇಬ್ಬರೂ ಹೊರಟಿದ್ದೆವು. ಇನ್ನೊಂದು ಮೋಟರ್ ಸೈಕಲ್ ಮೇಲೆ ನಮ್ಮ ಇನ್ನೊಬ್ಬ ಅಣ್ಣನಾದ ಹಳ್ಳೆಪ್ಪನ ಮಕ್ಕಳಾದ ಮೌನೇಶ ಮತ್ತು ಕರೆಪ್ಪ ಇಬ್ಬರೂ ಹೊರಟಿದ್ದರು. ಮತ್ತೊಂದು ಮೋಟರ್ ಸೈಕಲ್ ಮೇಲೆ ಮಲ್ಲಪ್ಪ ತಂದೆ ಹಳ್ಳೆಪ್ಪ ಮತ್ತು ಮಹೇಶ ತಂದೆ ಶಿವಪ್ಪ ಇವರಿಬ್ಬರೂ ಹೊರಟಿದ್ದರು. ಸಾಯಂಕಾಲ 5-30 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ನಾಯ್ಕಲ್ ಬೈಪಾಸ ರೊಡ ಸಮೀಪ ನಮ್ಮ ಮುಂದುಗಡೆ ನಮ್ಮಣ್ಣನ ಮಗನಾದ ಮೌನೇಶ ತಂದೆ ಹಳ್ಳೆಪ್ಪ ಈತನು ತನ್ನ ಮೋಟರ್ ಸೈಕಲ್ ನಂ. ಕೆಎ 36 ಕ್ಯೂ 5786 ನೇದರ ಮೇಲೆ ತನ್ನ ತಮ್ಮನಾದ ಕರೆಪ್ಪನಿಗೆ ಕೂಡಿಸಿಕೊಂಡು ನಿಧಾನವಾಗಿ ಹೋಗುತ್ತಿದ್ದಾಗ ಎದುರುಗಡೆಯಿಂದ ಕಾರ ನಂ. ಕೆಎ 05 ಎಮ್.ಸಿ 0354 ನೇದ್ದನು ಅದರ ಚಾಲಕನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಮೌನೇಶ ಮತ್ತು ಕರೆಪ್ಪನಿಗೆ ಡಿಕ್ಕಿಪಡಿಸಿದರಿಂದ ಅವರಿಬ್ಬರು ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದುಬಿಟ್ಟರು. ನಾವು ಓಡಿ ಹೋಗಿ ನೋಡಿದಾಗ ಅಪಘಾತದಲ್ಲಿ ಮೌನೇಶನಿಗೆ ಬಲ ತಲೆಗೆ ರಕ್ತಗಾಯ, ಬಲ ಕಪಾಳಕ್ಕೆ, ಮುಖಕ್ಕೆ ಹರಿದ ರಕ್ತಗಾಯ, ಬಲ ಭುಜಕ್ಕೆ ಭಾರಿ ಗುಪ್ತ ಮತ್ತು ರಕ್ತಗಾಯ, ಬಲಗಾಲ ಪಿಕ್ಕೆ ಕಂಡಕ್ಕೆ ರಕ್ತಗಾಯವಾಗಿತ್ತು. ಕರೆಪ್ಪನ ಬಲಗೈಗೆ ಒಳಪೆಟ್ಟಾಗಿತ್ತು. ಕಾರಿನ ಚಾಲಕನು ಅಲ್ಲಿಯೇ ಕಾರ ನಿಲ್ಲಿಸಿದ್ದು, ಅವನಿಗೆ ನಾವು ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ಮಲ್ಲಯ್ಯ ತಂದೆ ದಂಡಪ್ಪ ಚಿಟ್ಟಾ ಸಾ:ಹುಲಕಲ್ (ಕೆ) ತಾ:ಶಹಾಪೂರ ಎಂದು ಹೇಳಿ ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು. ನಂತರ ನಾವು 108 ಅಂಬ್ಯುಲೇನ್ಸಗೆ ಕರೆ ಮಾಡಿ ಉಪಚಾರ ಕುರಿತು ಗಾಯಾಳುಗಳಿಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಮೌನೇಶನಿಗೆ ಪ್ರಥಮ ಉಪಚಾರ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ತಕ್ಷಣ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ ನಾವು ಮೌನೇಶನಿಗೆ ಕಲಬುರಗಿಯ ಎ.ಎಸ್.ಎಮ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ನಮ್ಮ ತಮ್ಮನ ಮಗನಿಗೆ ಕಲಬುರಗಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿ ಈಗ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸದರಿ ಕಾರಿನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 83/2022 ಕಲಂ: 279, 337, 338 ಐಪಿಸಿ ಸಂ 187 ಐಎಮ್ವ್ಹಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಇಂದು ದಿನಾಂಕ:09/06/2022 ರಂದು ಬೆಳಗ್ಗೆ 8-30 ಗಂಟೆಗೆ ಪ್ರಕರಣದ ಪಿಯರ್ಾದಿದಾರರು ಹಾಜರಾಗಿ ಹೇಳಿಕೆ ನೀಡಿದ್ದೇನೆಂದರೆ ಪ್ರಕರಣದ ಗಾಯಾಳು ಮೌನೇಶ ತಂದೆ ಹಳ್ಳೆಪ್ಪ ಬೆಳಗುಂದಿ ವ:19 ಜಾತಿ.ಮಾದಿಗ, ಉ:ಕೂಲಿ. ಸಾ:ಶೆಟ್ಟಿಗೇರಾ ಈತನು ಅಪಘಾತದಲ್ಲಿ ಆದ ಗಾಯಗಳಿಂದ ಗುಣಮುಖನಾಗದೇ ಇಂದು ದಿನಾಂಕ: 09/06/2022 ರಂದು ರಾತ್ರಿ:12-41 ಎಎಮ್ ಕ್ಕೆ ಮೃತಪಟ್ಟಿದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು. ಅಂತಾ ಹೇಳಿಕೆ ನೀಡಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ: 304 (ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ ಅಂತಾ ವಿನಂತಿ.

 

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 47/2022 ಕಲಂ: 279, 337, 338, 304(ಎ) ಐಪಿಸಿ : ಫಿರ್ಯಾದಿಯ ಗಂಡ ಸೋಮಲೆಪ್ಪ ಚವ್ಹಾಣ ಈತನು ಮಾರನಾಳ ತಾಂಡಾದಲ್ಲಿ ದೇವರ ಕಾರ್ಯಕ್ರಮಕ್ಕೆ ತಮ್ಮೂರ ಹೋಬಣ್ಣ ತಂದೆ ಜೀವಲೆಪ್ಪ ಚವ್ಹಾಣ ಈತನೊಂದಿಗೆ ಹಿರೋ ಸ್ಪ್ಲೆಂಡರ್ ಮೋಟರ್ ಸೈಕಲ್ ನಂ:ಕೆಎ-33 ವೈ-3598 ನೇದ್ದರ ಮೇಲೆ ದಿನಾಂಕ:07.06.2022 ರಂದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ಗೆದ್ದಲಮರಿ-ಬಲಶೆಟ್ಟಿಹಾಳ ರಸ್ತೆಯ ಮೇಲೆ ಬಲಶೆಟ್ಟಿಹಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಸಮೀಪ ರಸ್ತೆಯ ಮೇಲೆ ಹೊರಟಾಗ ಆರೋಪಿ ಹೋಬಣ್ಣ ಈತನು ತಾನು ಚಲಾಯಿಸುವ ಮೋಟರ್ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ರಸ್ತೆಯ ಮೇಲೆ ಹೊರಟಾಗ ನಿಯಂತ್ರಣ ತಪ್ಪಿ ಮೋಟರ್ ಸೈಕಲ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದರಿಂದ ಹಿಂದೆ ಕುಳಿತ ಗಾಯಾಳು ಸೋಮಲೆಪ್ಪ ತಂದೆ ಸುಬ್ಬಣ್ಣ ಚವ್ಹಾಣ ಈತನ ತಲೆಯ ಹಿಂಬಾಗಕ್ಕೆ ಭಾರೀ ರಕ್ತಗಾಯವಾಗಿ ಬೇವೂಷ ಆಗಿದ್ದು, ಕಾರಣ ಮೋಟರ್ ಸೈಕಲ್ನ್ನು ಚಲಾಯಿಸುತ್ತಿದ್ದ ಹೋಬಣ್ಣ ತಂದೆ ಜೀವಲೆಪ್ಪ ಚವ್ಹಾಣ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ದೂರು ಇರುತ್ತದೆ.
ಫಿರ್ಯಾದಿದಾರರು ಇಂದು ದಿನಾಂಕ:09/06/2022 ರಂದು ಬೆಳಿಗ್ಗೆ 9.30 ಗಂಟೆಗೆ ಠಾಣೆಗೆ ಬಂದು ಪುರವಣಿ ಹೇಳಿಕೆ ಕೊಟ್ಟಿದ್ದರ ಸಾರಾಂಶವೆನೆಂದರೇ, ಅಪಘಾತದಲ್ಲಿ ಗಾಯವಾಗಿದ್ದ ನನ್ನ ಗಂಡನಾದ ಸೋಮಲೆಪ್ಪ ತಂದೆ ಸುಬ್ಬಣ್ಣ ಚವ್ಹಾಣ ವ:48 ವರ್ಷ ಜಾ:ಹಿಂದೂ ಲಂಬಾಣಿ ಉ:ಕೂಲಿಕೆಲಸ ಸಾ:ಸೊನ್ನಾಪೂರ ತಾಂಡಾ ತಾ:ಹುಣಸಗಿ ಜಿ:ಯಾದಗಿರಿ ಈತನಿಗೆ ನಿನ್ನೆ ದಿನಾಂಕ:08/06/2022 ರಂದು ಸಾಯಂಕಾಲ ವಿಜಯಪೂರದ ಸಂಜೀವಿನಿ ಆಸ್ಪತ್ರೆ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರಕ್ಕಾಗಿ ಸೋಲ್ಲಾಪೂರಕ್ಕೆ ಒಯ್ಯಲು ತಿಳಿಸಿದ್ದು, ರಾತ್ರಿ 9.00 ಗಂಟೆಯ ಸುಮಾರಿಗೆ ವಿಜಯಪೂರದಿಂದ ಸೊಲ್ಲಾಪೂರಕ್ಕೆ ಹೋಗಲು ಹೊರಟಾಗ, ವಿಜಯಪೂರ ದಾಟಿ ಹೋಗುವಾಗ ರಾತ್ರಿ 12.00 ಗಂಟೆಯ ಸುಮಾರಿಗೆ ನನ್ನ ಗಂಡನು ಮಾರ್ಗದ ಮದ್ಯದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ನಂತರ ನನ್ನ ಗಂಡನ ಮೃತದೇಹವನ್ನು ಇಂದು ಬೆಳಿಗ್ಗೆ 7.00 ಗಂಟೆಯ ಸುಮಾರಿಗೆ ನಮ್ಮೂರಿಗೆ ವಾಪಸು ತಂದಿದ್ದು ಇರುತ್ತದೆ. ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಇತ್ಯಾದಿ ಪುರವಣಿ ಹೇಳಿಕೆ ಕೊಟ್ಟಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ಕಲಂ.304(ಎ) ಐಪಿಸಿ ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ವಿನಮತಿಸಿಕೊಂಡಿದ್ದು ಇರುತ್ತದೆ.

 

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 87/2022 ಕಲಂ: 143, 147, 323, 324, 504, 506 ಸಂ. 149 ಐಪಿಸಿ : ಇಂದು ದಿನಾಂಕ:09/06/2022 ರಂದು 12.15 ಪಿ.ಎಂಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿ ಹಣಮಂತಿ ಗಂಡ ತಿರುಪತಿ ಕಮತಗಿ ವ|| 28 ವರ್ಷ ಜಾ|| ಕುರಬರ ಉ|| ಹೊಲಮನೆಗೆಲಸ ಸಾ|| ದೇವರಗೊನಾಳ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನಗೆ ಸುಮಾರು 10 ವರ್ಷಗಳ ಹಿಂದೆ ನಮ್ಮೂರ ತಿರುಪತಿ ತಂದೆ ಭೀಮರಾಯ ಕಮತಗಿ ಇವರೊಂದಿಗೆ ಮದುವೆಯಾಗಿರುತ್ತದೆ. ನಮ್ಮ ತಂದೆಯಾದ ದಿ. ಮಲ್ಲಪ್ಪ ಇವರು ಒಟ್ಟು ಮೂರು ಜನ ಅಣ್ಣ ತಮ್ಮಂದಿರಿದ್ದು, ಮೂವರ ಮದ್ಯ ಸವರ್ೇ ನಂ 266/1 ಮತ್ತು 266/2 ರಲ್ಲಿ ಒಟ್ಟು 11 ಎಕರೆ 24 ಗುಂಟೆ ಜಮೀನು ಇರುತ್ತದೆ. ನಮ್ಮ ತಂದೆ ಮಲ್ಲಪ್ಪ ತಂದೆ ದಂಡಪ್ಪ ಮರೆಣ್ಣನವರ ಈತನು ಸುಮಾರು 20 ವರ್ಷಗಳ ಹಿಂದೆ ಮೃತಪಟ್ಟಿದ್ದು, ನಮ್ಮ ತಂದೆಗೆ ನಾನು ಮತ್ತು ರತ್ನಮ್ಮ ತಂದೆ ಮಲ್ಲಪ್ಪ ಮರೆಣ್ಣನವರ ಇಬ್ಬರು ಹೆಣ್ಣುಮಕ್ಕಳು ಇರುತ್ತೇವೆ. ನಮ್ಮ ತಂದೆಗೆ ಎರಡೂ ಹೊಲಗಳಲ್ಲಿ ಒಟ್ಟು 3 ಎಕರೆ 20 ಗುಂಟೆ ಪಾಲು ಬಂದಿದ್ದು, ನಮ್ಮ ತಂದೆಗೆ ಬಂದ ಪಾಲಿನ ಹೊಲವನ್ನು ನಾವೇ ಸಾಗುವಳಿ ಮಾಡುತ್ತಾ ಬಂದಿರುತ್ತೇವೆ. ನಮ್ಮ ಪಾಲಿಗೆ ಬಂದ ಹೊಲ ಇನ್ನೂ ನಮ್ಮ ದೊಡ್ಡಪ್ಪಂದಿರಾದ ಬಸಲಿಂಗಪ್ಪ ಮತ್ತು ನಿಜಲಿಂಗಪ್ಪ ಇವರ ಹೆಸರಿನಲ್ಲಿಯೇ ಇರುತ್ತದೆ. ಆದರೆ ನಮ್ಮ ದೊಡ್ಡಪ್ಪನಾದ ಬಸಲಿಂಗಪ್ಪ ತಂದೆ ದಂಡಪ್ಪ ಮರೆಣ್ಣವರ ಇವರಿಗೆ ನಮಗೆ ಬಂದ ಪಾಲನ್ನು ನಮ್ಮ ಹೆಸರಿಗೆ ವಗರ್ಾವಣೆ ಮಾಡಿಸಿಕೊಡು ಅಂತ ಕೇಳಿದಾಗ, ನೀವೆ ಹೊಲವನ್ನು ಸಾಗುವಳಿ ಮಾಡುತ್ತಿದ್ದೀರಿ, ನಾನೇನು ಹೊಲ ಹೊತಗೊಂಡು ಹೋಗುವದಿಲ್ಲ ಮುಂದೆ ನಿಮ್ಮ ಹೆಸರಿಗೆ ಮಾಡುತ್ತೇನೆ ಅಂತ ದಿನ ಮುಂದೂಡುತ್ತಾ ಇಲ್ಲಿವರೆಗೆ ನಮ್ಮ ಹೆಸರಿಗೆ ವಗರ್ಾವಣೆ ಮಾಡದೇ ಇದ್ದುದರಿಂದ ನಾವು ಮಾನ್ಯ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದು, ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಹೀಗಿದ್ದು ದಿನಾಂಕ: 03/06/2022 ರಂದು 9 ಎಎಮ್ ಸುಮಾರಿಗೆ ಹೊಲ ಸವರ್ೇ ನಂ 266/1 ರಲ್ಲಿ ನಮ್ಮ ಪಾಲಿಗೆ ಬಂದ ಹೊಲದಲ್ಲಿ ನಾನು ಮತ್ತು ನನ್ನ ತಂಗಿ ರತ್ನಮ್ಮ ತಂದೆ ಮಲ್ಲಪ್ಪ ಮರೆಣ್ಣವರ ಇಬ್ಬರು ಕಸ ತೆಗೆಯುತ್ತಿದ್ದಾಗ ನಮ್ಮ ದೊಡ್ಡಪ್ಪನಾದ 1) ಬಸಲಿಂಗಪ್ಪ ತಂದೆ ದಂಡಪ್ಪ ಮರೆಣ್ಣವರ ಹಾಗೂ 2) ಶಿವಪ್ಪ ತಂದೆ ಬಸಲಿಂಗಪ್ಪ ಮರೆಣ್ಣವರ 3) ದಂಡಪ್ಪ ತಂದೆ ಬಸಲಿಂಗಪ್ಪ ಮರೆಣ್ಣವರ 4) ಮಾನಪ್ಪ ತಂದೆ ಬಸಲಿಂಗಪ್ಪ ಮರೆಣ್ಣವರ 5) ಈಸಪ್ಪ ತಂದೆ ಸಾಬಣ್ಣ ಹಿಪ್ಪರಗಿ ಇವರೆಲ್ಲರು ಗುಂಪುಕೂಡಿ ಬಂದು ನಮ್ಮ ಪಾಲಿಗೆ ಬಂದ ಹೊಲದಲ್ಲಿ ಗಳೆ ಹೊಡೆಯಲು ಬಂದಾಗ ನಾನು ಮತ್ತು ನಮ್ಮ ತಂಗಿ ರತ್ನಮ್ಮ ಇಬ್ಬರು ಕೂಡಿ ಯಾಕೆ ನಮ್ಮ ಪಾಲಿಗೆ ಬಂದ ಹೊಲದಲ್ಲಿ ನೀವು ಗಳೆ ಹೊಡೆಯುತ್ತೀರಿ ಅಂತ ಅಂದಾಗ, ಅವರಲ್ಲಿಯ ನಮ್ಮ ದೊಡ್ಡಪ್ಪನಾದ ಬಸಲಿಂಗಪ್ಪನು ಈ ಹೊಲ ನನ್ನ ಹೆಸರಿನಲ್ಲಿದೆ, ಇದರಲ್ಲಿ ಯಾರಿಗೂ ಪಾಲು ಕೊಡುವದಿಲ್ಲ ಪಾಲು ಕೇಳಲು ನೀವ್ಯಾರು ರಂಡೇರೆ ಮುಂದೆ ಕೋರ್ಟ ಆದೇಶ ಬಂದಾಗ ನೋಡೋಣ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ, ನಾನು ಯಾಕೆ ಈ ರೀತಿ ಸುಳ್ಳು ಹೇಳುತ್ತಿರಿ ಇಲ್ಲವರೆಗೆ ನಾವೇ ಸಾಗುವಳಿ ಮಾಡುತ್ತಾ ಬಂದೀವಿ ಅಂತ ಅನ್ನುತ್ತಿದ್ದಾಗ ಬಸಲಿಂಗಪ್ಪನು ನನಗೆ ಕೈಯಿಂದ ಬೆನ್ನಿಗೆ ಹೊಡೆದನು, ಶಿವಪ್ಪ ಈತನು ಅಲ್ಲೇ ಬಿದ್ದ ಕಲ್ಲಿನಿಂದ ನನ್ನ ಎಡಗೈ ಕಿರು ಬೆರಳಿಗೆ ಹೊಡೆದು ರಕ್ತಗಾಯ ಮಾಡಿದನು. ದಂಡಪ್ಪ ಈತನು ಅಲ್ಲೇ ಬಿದ್ದ ಕಲ್ಲಿನಿಂದ ಹಣೆಗೆ ಹೊಡೆದು ರಕ್ತಗಾಯ ಮಾಡಿದನು. ಆಗ ಬಿಡಿಸಲು ಬಂದ ನಮ್ಮ ತಂಗಿ ರತ್ನಮ್ಮ ಇವಳಿಗೆ ಮಾನಪ್ಪ ಈತನು ಕಲ್ಲಿನಿಂದ ಎಡಭುಜಕ್ಕೆ ಹೊಡೆದು ಗುಪ್ತಗಾಯಪಡಿಸಿದನು. ಈಸಪ್ಪ ಈತನು ಕೈಯಿಂದ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದನು. ಆಗ ಅಲ್ಲೆ ಆಜು ಬಾಜು ಹೊಲದವರು ಮತ್ತು ತಮ್ಮ ತಮ್ಮ ಹೊಲಗಳಿಗೆ ಹೊರಟಿದ್ದ ಭೀಮಣ್ಣ ತಂದೆ ತಮ್ಮಣ್ಣ ಬೇಟೆಗಾರ, ದೇವಿಂದ್ರಪ್ಪ ತಂದೆ ಮಾನಪ್ಪ ನಾಯ್ಕೋಡಿ, ನಾಗಪ್ಪ ತಂದೆ ಶಿವಣ್ಣ ಚಿಕನಳ್ಳಿ ಎಲ್ಲರು ಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ಅವರೆಲ್ಲರು, ಇವರು ಬಂದು ಜಗಳ ಬಿಡಿಸಿದ್ದಾರೆ ಅಂತಾ ಇವತ್ತು ನಿಮಗೆ ಬಿಟ್ಟಿವಿ ಸೂಳೆರೆ ಇಲ್ಲದಿದ್ದರೆ ನಿಮ್ಮ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೊದರು. ಗಾಯಗೊಂಡ ನಾವು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರದಲ್ಲಿ ಸೇರಿಕೆ ಆದೇವು. ಹೆಚ್ಚಿನ ಉಪಚಾರ ಕುರಿತು ನಮಗೆ ಯಾದಗಿರಿ ಸರಕಾರಿ ಆಸ್ಪತ್ರೆಗೆ ಹೊಗಲು ಹೇಳಿದ್ದರಿಂದ ನಾವು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಯಾದಗಿರಿಗೆ ಹೊಗಿ ಸೇರಿಕೆಯಾಗಿ ಉಪಚಾರ ಪಡೆದುಕೊಂಡೆವು, ಈಗ ನಾನು ನನ್ನ ಗಂಡ ತಿರುಪತಿ ಇವರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ನೀಡಿರುತ್ತೇನೆ. ಕಾರಣ ನನಗೆ ಮತ್ತು ನನ್ನ ತಂಗಿಗೆ ಕೈಯಿಂದ, ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 87/2022 ಕಲಂ: 143, 147, 323, 324, 504, 506 ಸಂ.149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 10-06-2022 10:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080