ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10-07-2021


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 97/2021 ಕಲಂ 143, 147, 148, 323, 324, 326, 307, 504, 506 ಸಂ 149 ಐಪಿಸಿ : ಇಂದು ದಿನಾಂಕ 09/07/2021 ರಂದು ಸಾಯಂಕಾಲ 7-05 ಗಂಟೆಗೆ ಜಿಜಿಎಚ್ ಯಾದಗಿರಿಯಿಂದ ಗಾಯಾಳು ಎಂ.ಎಲ್.ಸಿ. ಪೋನ ಮಾಹಿತಿ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶರಣಪ್ಪಾ ತಂದೆ ಹಣಮಂತ ಖಂಡಪ್ಪನೋರ ಸಾ: ಹತ್ತಿಕುಣಿ ತಾ:ಜಿ: ಯಾದಗಿರಿ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದೆನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ನನ್ನ ಹೆಂಡತಿ ಮಕ್ಕಳೊಂದಿಗೆ ಒಕ್ಕಲುತನ ಕೆಲಸ ಮಾಡುತ್ತಾ ನಮ್ಮ ಹೊಲದಲ್ಲಿಯೇ ಮನೆ ಮಾಡಿಕೊಂಡು ಉಪಜೀವಿಸುತ್ತೆನೆ. ಬಾಚವಾರ ಸೀಮೆಯಲ್ಲಿ ನಮ್ಮ ಹೊಲವಿದ್ದು, ನಮ್ಮ ಹೊಲದ ಪಕ್ಕದಲ್ಲಿ ಬಾಚವಾರ ಗ್ರಾಮದ ಶಾಂತಪ್ಪ ತಂದೆ ಸಾಬಣ್ಣ ಡೊಂಕನೊರ ಇವರ ಹೊಲವಿರುತ್ತದೆ, ಶಾಂತಪ್ಪ ಇತನು ನಮ್ಮಿಬ್ಬರ ಹೊಲಗಳ ಮಧ್ಯವಿರುವ ಬದುವಿನ ಸಂಬಂಧವಾಗಿ ಆಗಾಗ ತಕರಾರು ಮಾಡುತ್ತಾ ಬಂದಿರುತ್ತಾನೆ, ನಾವು ಈಗ ಮೂರ್ನಾಲ್ಕು ವರ್ಷಗಳಿಂದ ಬಾಚವಾರ ಗ್ರಾಮದ ಮೋನಪ್ಪ ತಂದೆ ಯಲ್ಲಪ್ಪ ಜಾಕನಳ್ಳಿ ಇವರ ಹೊಲವು ಪಾಲಿಗೆ ಮಾಡುತ್ತಾ ಬಂದಿದ್ದು, ಈ ಹೊಲದ ಸಂಬಂಧ ನಮ್ಮ ಸಮಾಜದವರ ಹೊಲ ನೀನೆಕೆ ಪಾಲಿಗೆ ಮಾಡುತಿ ಬೋಸಡಿ ಮಗನೇ ನೀನು ಏನು ನಮಗೆ ಹುಟ್ಟಿದಿ ಏನು ಅಂತಾ ಆ ವಿಷಯದಲ್ಲು ಕೂಡಾ ನಮ್ಮ ಜೋತೆ ದ್ವೇಶ ಸಾಧಿಸುತ್ತಾ ಬಂದಿರುತ್ತಾನೆ,ಹೀಗಿದ್ದು ಇಂದು ದಿನಾಂಕ 09/07/2021 ರಂದು ಬೆಳಿಗ್ಗೆಯಿಂದ ನಾನು, ನನ್ನ ಹೆಂಡತಿ ಜಯಮ್ಮ, ತಾಯಿ ಸಾಬಮ್ಮ ಮತ್ತು ನನ್ನ ತಂದೆಯಾದ ಹಣಮಂತ ಎಲ್ಲರೂ ಕೂಡಿಕೊಂಡು ನಾವು ಪಾಲಿಗೆ ಮಾಡಿದ ಜಾಕನಳ್ಳಿ ಇವರರ ಹೊಲದಲ್ಲಿ ಮುಳ್ಳುಕಂಟಿಗಳನ್ನು ಕಡಿದು ಬದುವಿನ ಮೇಲೆ ಹಾಕುತ್ತಾ ಹೊಲ ಸ್ವಚ್ಛ ಮಾಡುತ್ತಿದ್ದೆವು, ಆಗ ಮಧ್ಯಾಹ್ನ 12-00 ಗಂಟೆಯಾಗಿರಬಹುದು, ಅದೇ ವೇಳೆಗೆ ನಮ್ಮ ಹೊಲದ ಪಕ್ಕದ ಹೊಲದವರಾದ 1)ಶಾಂತಪ್ಪ ತಂದೆ ಸಾಬಣ್ಣ ಡೊಂಕನೊರ 2)ಶಿವಪ್ಪ ತಂದೆ ಸಾಬಣ್ಣ ಡೊಂಕನೊರ 3)ನಾಗಮ್ಮ ಗಂಡ ಶಿವಪ್ಪ ಡೊಂಕನೊರ 4)ರೇಣುಕಮ್ಮ ಗಂಡ ಶಾಂತಪ್ಪ ಡೊಂಕನೊರ ಮತ್ತು 5)ಬಸಮ್ಮ ಗಂಡ ಶಾಂತಪ್ಪ ಡೊಂಕನೊರ ಸಾಃ ಎಲ್ಲರೂ ಬಾಚವಾರ ಇವರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಹಕಾರಿ ಹೊಡೆಯುತ್ತಾ ಇವರಲ್ಲಿ ಶಾಂತಪ್ಪ ಇತನು ಕೈಯಲ್ಲಿ ಕೊಡಲಿ ಹಿಡಿದುಕೊಂಡಿದ್ದು, ನಾವು ಪಾಲಿಗೆ ಮಾಡಿದ ಹೊಲದಲ್ಲಿ ಬಂದವರೇ ನಮಗೆಲ್ಲರಿಗೆ ಲೇ ಬೋಸಡಿ ಮಕ್ಕಳೇ ನಿಮ್ಮ ಹೊಲದಲ್ಲಿಯ ಮುಳ್ಳುಕಂಟಿ ಕಡಿದು ಡ್ವಾಣದ ಮೇಲೆ ಏಕೆ ಹಾಕುತ್ತಿದ್ದಿರಿ, ಆ ಕಂಟಿಗಳಿಂದ ಮಳೆ ನೀರು ಇಲ್ಲಿಯೇ ಜಮಾ ಆಗುತ್ತವೆ, ಮುಂದೆ ಹೋಗುವದಿಲ್ಲ ನಿಮಗೆ ಬಹಳ ಸೊಕ್ಕು ಬಂದಿದೆ, ಅಲ್ಲದೇ ನಿಮಗೆ ನಮ್ಮ ಅಣ್ಣತಮ್ಮಕಿಯವರ ಹೊಲ ಪಾಲಿಗೆ ಮಾಡಬೇಡಿರಿ ಅಂತಾ ಸುಮಾರು ಸಲ ಹೇಳುತ್ತಾ ಬಂದಿದ್ದರು ಕೂಡಾ ನೀವು ನಮ್ಮ ಮಾತು ಕೇಳದೇ ಪಾಲಿಗೆ ಹೊಲ ಮಾಡುತ್ತಿದ್ದಿರಿ, ಇವತ್ತು ನಿಮಗೆ ಇಲ್ಲಿಯೇ ಖಲಾಸ ಮಾಡುತ್ತೆವೆ ಅಂತಾ ನನಗೆ ಕೊಲೆ ಮಾಡುವ ಉದ್ದೇಶದಿಂದ 1)ಶಾಂತಪ್ಪ ತಂದೆ ಸಾಬಣ್ಣ ಡೊಂಕನೊರ ಇತನು ತನ್ನ ಕೈಯಲ್ಲಿಯ ಕೊಡಲಿಯಿಂದ ನನ್ನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿದನು, ಆಗ ನಾನು ಸತ್ತೆನೆಪ್ಪೋ ಅಂತಾ ಕೆಳಗಡೆ ಬಿದ್ದಾಗ 2)ಶಿವಪ್ಪ ತಂದೆ ಸಾಬಣ್ಣ ಇತನು ಕಬ್ಬಿಣದ ರಾಡಿನಿಂದ ಎಡಮುಂಗೈಗೆ ಮತ್ತು ಬೆನ್ನಿಗೆ ಹೊಡೆದು ಭಾರಿ ಗುಪ್ತಗಾಯ ಮಾಡಿದನು, ಆಗ 3)ನಾಗಮ್ಮ ಗಂಡ ಶಿವಪ್ಪ ಡೊಂಕನೊರ 4)ರೇಣುಕಮ್ಮ ಗಂಡ ಶಾಂತಪ್ಪ ಡೊಂಕನೊರ ಮತ್ತು 5)ಬಸಮ್ಮ ಗಂಡ ಶಾಂತಪ್ಪ ಡೊಂಕನೊರ ಈ ಮೂರು ಜನರು ಈ ಸೂಳೇ ಮಗನಿಗೆ ಇಲ್ಲಿಯೇ ಖಲಾಸ ಮಾಡಬೇಕು ಅಂತಾ ಮೂವರು ಸುತ್ತುಗಟ್ಟಿ ತಮ್ಮ ಮನಸ್ಸಿಗೆ ಬಂದ ಹಾಗೇ ಕಾಲಿನಿಂದ ಒದ್ದರು, ಆಗ ಅಲ್ಲಿಯೇ ಇದ್ದ ನನ್ನ ಮಾವ ಶಿವಪ್ಪ ತಂದೆ ನರಸಪ್ಪ ಜೇಗರದೊರ ಸಾಃ ಬಂದಳ್ಳಿ ಮತ್ತು ನನ್ನ ತಂದೆ-ತಾಯಿ ಹಾಗೂ ನನ್ನ ಹೆಂಡತಿ ಎಲ್ಲರೂ ಕೂಡಿ ನನಗೆ ಹೊಡೆಯುವದನ್ನು ಬಿಡಿಸಿದರು, ಆಗ ಮತ್ತೆ ಅವರೆಲ್ಲರೂ ಕೂಡಿ ಈಗ ಉಳಿದಿದಿ ಸೂಳೇ ಮಗನೇ ಇನ್ನೊಮ್ಮೆ ಸಿಕ್ಕರೆ ನಿನಗೆ ಇಲ್ಲಿಯೇ ಮಣ್ಣಲ್ಲಿ ಮುಚ್ಚುತ್ತೆವೆ ಅಂತಾ ಜೀವಭಯ ಹಾಕುತ್ತಾ ಹೋದರು, ನಂತರ ಅಲ್ಲಿಗೆ ಬಂದಿದ್ದ ನನ್ನ ತಮ್ಮ ಶಿವಪ್ಪ ಇತನು ನನಗೆ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾನೆ, ಈ ವಿಷಯದ ಬಗ್ಗೆ ನಾವು ಮನೆಯವರೆಲ್ಲರೂ ವಿಚಾರ ಮಾಡಿಕೊಂಡು ಈಗ ತಮ್ಮ ಮುಂದೆ ಫಿರ್ಯಾಧಿ ಸಲ್ಲಿಸುತ್ತಿದ್ದೆನೆ, ಈ ಬಗ್ಗೆ ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 97/2021 ಕಲಂ 143, 147, 148, 323, 324, 326, 307, 504, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 103/2021 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 09.07.2021 ರಂದು ಸಂಜೆ 04:30 ಗಂಟೆಗೆ ಅನಪೂರ್ ಗ್ರಾಮದ ಬಸ್ನಿಲ್ದಾಣದ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ. ಐ ರವರು ಠಾಣೆ ಎನ್.ಸಿ. ನಂಬರ 17/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಹೆಚ್.ಸಿ-214 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ಸಂಜೆ 06:45 ಗಂಟೆಗೆ ತಂದು ಪಿ.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ಸಂಜೆ 07:30 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವರ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 1370/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಇಂದು ದಿನಾಂಕ 09.07.2021 ರಂದು ಸಮಯ ರಾತ್ರಿ 09:00 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 103/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಇತ್ತೀಚಿನ ನವೀಕರಣ​ : 10-07-2021 10:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080