ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-07-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 101/2022 ಕಲಂ. 279,338 ಐ.ಪಿ.ಸಿ. ಸಂಗಡ 187 ಐ.ಎಮ್,ವ್ಹಿ ಎಕ್ಟ: ಇಂದು ದಿನಾಂಕ 09-07-2022 ರಂದು ಬೆಳಿಗ್ಗೆ 8-45 ಗಂಟೆ ಸುಮಾರಿಗೆ ಫಿರ್ಯಾಧಿದಾರರು ತಮ್ಮೂರಿನಿಂದ ಮೋಟಾರ ಸೈಕಲ್ ನಂ: ಕೆ.ಎ-33/ಇಎ-0132 ನೆದ್ದರ ಮೇಲೆ ಹತ್ತಿಕುಣಿ ಗ್ರಾಮದ ಕಡೆಗೆ ಹೊರಟು ಎಸ್ ಹೊಸಳ್ಳಿ ಕಡೆಯಿಂದ ಹತ್ತಿಕುಣಿ ಗ್ರಾಮದ ಕಡೆಗೆ ಹೋಗುವ ಕ್ರಾಸ ಸಮೀಪ ಬೆಳಗ್ಗೆ 0900 ಗಂಟೆ ಸುಮಾರಿಗೆ ಹೋಗುತ್ತಿದ್ದಂತೆ ಅದೇ ವೇಳೆಗೆ ಎಸ್ ಹೊಸಳ್ಳಿ ರೋಡಿನ ಕಡೆಯಿಂದ ಒಂದು ಟ್ರ್ಯಾಕ್ಟರ ಅದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಫಿರ್ಯಾಧಿ ಮೋಟಾರ ಸೈಕಲಕ್ಕೆ ಡಿಕ್ಕಿಡಪಡಿಸಿದ್ದರಿಂದ ಫಿರ್ಯಾಧಿಗೆ ಭಾರಿ ಗಾಯಗಳಾಗಿದ್ದು ಇರುತ್ತದೆ ಅಂತಾ ವಗೈರೆ ಫಿರ್ಯಾಧಿ ಸಾರಾಂಶವಿರುತ್ತದೆ.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 84/2022 ಕಲಂ 143, 147, 447, 341, 323, 504, 506 ಸಂಗಡ 149 ಐಪಿಸಿ: ಇಂದು ದಿನಾಂಕ 09.07.2022 ರಂದು ಮಧ್ಯಾಹ್ನ 1.30 ಗಂಟೆಗೆ ನಾಗರೆಡ್ಡಿ ತಂದೆ ಚೆನ್ನಪ್ಪ ರಾಚನಳ್ಳಿ, ವ|| 55 ವರ್ಷ, ಜಾ|| ರೆಡ್ಡಿ, ಉ|| ಒಕ್ಕಲುತನ, ಸಾ|| ಗೊಂದಡಗಿ ಗ್ರಾಮ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ಗೊಂದಡಗಿ ಗ್ರಾಮ ಸೀಮಾಂತರದಲ್ಲಿ ನನ್ನ ಎರಡನೇ ಹೆಂಡತಿ ಮಗನಾದ ಸದಾಶಿವರೆಡ್ಡಿ ತಂದೆ ನಾಗರೆಡ್ಡಿ ರಾಚನಳ್ಳಿ ಈತನ ಹೆಸರಿನಲ್ಲಿ ಸವರ್ೆ ಸಂಖ್ಯೆ 28/2 ವಿಸ್ತೀರ್ಣ 4 ಎಕರೆ 28 ಗುಂಟೆ ಮತ್ತು ಸವರ್ೆ ಸಂಖ್ಯೆ 29/1 ವಿಸ್ತೀರ್ಣ 3 ಎಕರೆ 38 ಗುಂಟೆ ಸಾಗುವಳಿ ಜಮೀನಿದೆ. ನನ್ನ ಮೊದಲನೇ ಹೆಂಡತಿ ಶ್ರೀದೇವಿ ಇವಳು ಕಳೆದ 23 ವರ್ಷಗಳಿಂದೆ ನನ್ನನ್ನು ತೊರೆದು ತನ್ನ ತವರು ಮನೆಗೆ ಹೋಗಿದ್ದರಿಂದ ನಾನು ಎರಡನೇ ಮದುವೆ ಮಾಡಿಕೊಂಡಿದ್ದೆ. ನನ್ನ ಮೊದಲನೇ ಹೆಂಡತಿ ನನ್ನ ಜಮೀನಿನಲ್ಲಿ ಭಾಗಬೇಕೆಂದು ಯಾದಗಿರಿ ದಿವಾಣಿ ನ್ಯಾಯಾಲಯದಲ್ಲಿ ಕಳೆದ 6 ತಿಂಗಳ ಕೆಳಗೆ ಮೂಲದಾವೆ ಹೂಡಿದ್ದಾಳೆ.
ಹೀಗಿದ್ದು ದಿನಾಂಕ 07.07.2022 ರಂದು ನಾನು ಮತ್ತು ನನ್ನ ಜಮೀನು ಸಾಗುವಳಿ ಮಾಡುವ ನಮ್ಮೂರಿನ ಸಾಬಣ್ಣ ತಂದೆ ತಿಪ್ಪಣ್ಣ ಸಾಮಣ್ಣೋರ ನಮ್ಮ ಜಮೀನಿನಲ್ಲಿ ಸಾಗುವಳಿ ಮಾಡುವ ಕಾಲಕ್ಕೆ ಆದಿನ ಸಾಯಂಕಾಲ 4 ಗಂಟೆ ಸುಮಾರಿಗೆ ನನ್ನ ಮೊದಲನೇ ಹೆಂಡತಿ ಶ್ರೀದೇವಿ ಮತ್ತು ಅವರ ಸಂಬಂಧಿಕರು ಕೂಡಿ ಅಕ್ರಮಕೂಟ ರಚಿಸಿಕೊಂಡು ನನ್ನ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ನನ್ನ ಜಮೀನು ಸಾಗುವಳಿ ಮಾಡದಂತೆ ನನಗೆ ತಡೆದು ನಿಲ್ಲಿಸಿದರು. ಅದಕ್ಕೆ ನಾನು ಕೋರ್ಟನಲ್ಲಿ ಆಸ್ತಿ ಪಾಲು ವಿಷಯ ಸಂಬಂಧ ಈಗಾಗಲೇ ಕೇಸ್ ಹಾಕಿದ್ದೀರಿ ನ್ಯಾಯಾಲಯ ತೀಪರ್ಿನಂತೆ ನಾನು ನಡೆದುಕೊಳ್ಳುತ್ತೇನೆ ಅಂತಾ ಹೇಳಿದರೂ ಸಹ ಕೇಳದೆ ಮೊದಲನೇ ಹೆಂಡತಿಗೆ ಹೊಲದಲ್ಲಿ ಭಾಗ ಕೊಟ್ಟ ನಂತರವೇ ನೀನು ಉಳುಮೆ ಮಾಡು ಅಂತಾ ಅವರೆಲ್ಲರೂ ಸೇರಿ ನನಗೆ ಕೈಯಿಂದ ಹೊಡೆಬಡೆ ಮಾಡಿದ್ದಲ್ಲದೆ ನನಗೆ ಸುಳೆ ಮಗನೆ, ರಂಡಿ ಮಗನೆ ಅಂತಾ ಅಸಭ್ಯ ಶಬ್ದಗಳಿಂದ ನಿಂದಿಸಿದರು. ನನ್ನನ್ನು ಹೊಡೆಯುವದನ್ನು ನೋಡಿದ ಸಾಬಣ್ಣ ತಂದೆ ತಿಪ್ಪಣ್ಣ ಸಾಮಣ್ಣೋರ ಈತನು ನನ್ನನ್ನು ಪಕ್ಕಕ್ಕೆ ಸರೆಸಿಕೊಂಡರೂ ಸಹ ಬಿಡು ಈ ಮಗನಿಗೆ ಇವತ್ತ ಮುಗಿಸಿ ಇದೇ ಹೊಲದಲ್ಲಿ ಮಣ್ಣು ಮಾಡುತ್ತೇವೆ ಅಂತಾ ನನ್ನ ಮೇಲೆ ತೂರಿ ಬಂದು ನನ್ನಜೀವ ಹೊಡೆಯುವ ಭಯ ಹಾಕಿದರು ಅಂತಾ ಆಪಾದನೆ.

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 115/2022 ಕಲಂ: 00 ಒಕ ಕಅ (ಮಹಿಳೆ ಕಾಣೆ): ರ್ಯಾಧಿಯ ತಂಗಿ ದಿನಾಂಕ: 23.06.2022 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ:24.06.2022 ಬೆಳಗಿನ 6.00 ಗಂಟೆಯ ಮಧ್ಯದ ಅವಧಿಯಲ್ಲಿ ಪಿರ್ಯಾಧಿ ಅಣ್ಣ ಮತ್ತು ಅಣ್ಣನ ಹೆಂಡತಿ ಪಿರ್ಯಾಧಿಯ ತಂಗಿ ಮಕ್ತಬಾಯಿ ಇವರೆಲ್ಲರೂ ಮನೆಯಲ್ಲಿ ಮಲಗಿಕೊಂಡಾಗ ಪಿರ್ಯಾಧಿಯ ತಂಗಿ ಮಕ್ತಬಾಯಿ ಇವಳು ಮನೆಯಿಂದ ಕಾಣೆಯಾಗಿದ್ದು ಅವಳನ್ನು ಪತ್ತೆ ಮಾಡಿಕೊಡಬೇಕು ಅಂತಾ ಗಣಕಿಕೃತ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:115/2022 ಕಲಂ: 00 ಒಕ ಕಅ (ಮಹಿಳೆ ಕಾಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.ಶೋರಾಪುರ ಪೊಲೀಸ್ ಠಾಣೆ:
ಗುನ್ನೆ ನಂ: 113/2022 ಕಲಂ 379 ಐ.ಪಿ.ಸಿ. ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ 1957: ಇಂದು ದಿನಾಂಕ:09/07/2022 ರಂದು7.00 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗಶ್ರೀ ಕಿರಣಡಿ.ಆರ್. ಬೂವಿಜ್ಞಾನಿಗಳು, ಗಣಿ ಮತ್ತು ಭೂ-ವಿಜ್ಞಾನ ಇಲಾಖೆ ಯಾದಗಿರಿಜಿಲ್ಲೆರವರುಠಾಣೆಗೆ ಹಾಜರಾಗಿಗಣಕೀಕೃತ ಫಿಯರ್ಾದಿ ಹಾಗೂ ಜಪ್ತಿ ಪಂಚನಾಮೆ ಹಾಜರು ಪಡಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:09/07/2022 ರಂದು ಬೆಳಿಗ್ಗೆ 07 ಗಂಟೆ ಸುಮಾರಿಗೆಯಾದಗಿರಿದಲ್ಲಿಇರುವಾಗ ಹಿರಿಯ ಭೂವಿಜ್ಞಾನಿಗಳಾದ ಡಾ|| ಪುಸ್ಪಾವತಿಇವರು ತಿಳಿಸಿದ್ದೇನೆಂದರೆ, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅದ್ಯಕ್ಷರುಜಿಲ್ಲಾ ಮಟ್ಟದ ಮರಳು ಮಾನಿಟರಿಂಗ್ ಸಮಿತಿರವರು ನನಗೆ ತಿಳಿಸಿದ್ದೇನೆಂದರೆ, ಸುರಪುರತಾಲೂಕಿನ ಚೌಡೇಶ್ವರಹಾಳ ಸೀಮಾಂತರದ ಜಮೀನುಗಳಲ್ಲಿ ಕೃಷ್ಣಾ ನದಿಯ ನೈಸಗರ್ಿಕ ಮರಳನ್ನು ಕಳ್ಳತನದಿಂದ ಮಾರಾಟ ಮಾಡುವಉದ್ದೇಶದಿಂದಅಕ್ರಮವಾಗಿ ಸಂಗ್ರಹಿಸಿರುತ್ತಾರೆ ನೀವು ಸುರಪೂರಕ್ಕೆ ಹೋಗಿರಿಅಂತಾ ಮಾಹಿತಿ ತಿಳಿಸಿದ ಮೇರೆಗೆ, ನಾನು ಹಾಗೂ ಲಿಂಗರಾಜ ಭೂ ವಿಜ್ಞಾನಿ ಮತ್ತುಜೀಪ ಚಾಲಕ ಶ್ರೀ ನಜೀರ ಮೂವರುಕೂಡಿ ನಮ್ಮ ಸರಕಾರಿಜೀಪ್ ನಂ. ಕೆಎ-04 ಜಿ-1490 ನೇದ್ದರಲ್ಲಿಯಾದಗಿರಿಯಿಂದ ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಹೊರಟು ಪೊಲೀಸ್ಠಾಣೆಗೆ, ತಹಸೀಲ ಕಾಯರ್ಾಲಯಕ್ಕೆ ಹಾಗೂ ಲೊಕೋಪಯೋಗಿ ಇಲಾಖೆಗೆ ಸದರಿ ಮಾಹಿತಿಯನ್ನು ತಿಳಿಸಿ ಸುರಪೂರ ತಹಸೀಲ ಕಾಯರ್ಾಲಯಕ್ಕೆ ಬೆಳಿಗ್ಗೆ ಅಂದಾಜು 10.30ಗಂಟೆಗೆ ತಲುಪಿದೆವು. ತಹಸೀಲ ಕಾಯರ್ಾಲಯದಲ್ಲಿಕುಮಾರಿ ಸಾವಿತ್ರಿ ಮಗ್ಗದಗ್ರಾಮ ಲೇಖಪಾಲಕರು ಚೌಡೇಶ್ವರಹಾಳ, ಶ್ರೀ ಯಂಕಪ್ಪತಂದೆದ್ಯಾವಪ್ಪಗ್ರಾಮದ ಸಹಾಯಕರು ಚೌಡೇಶ್ವರಹಾಳ ಮತ್ತು ಸುರಪುರ ಲೋಕೋಪಯೋಗಿಇಲಾಖೆಯ ಶ್ರೀ ಸಿದ್ದರಾಮ ಮೋದಿ ಕಿರಿಯಅಭಿಯಂತರರು, ಶ್ರೀ ಸೈಯ್ಯದಖುಷರ್ಿದ ಪಾಶಾ ವರ್ಕಇನ್ಸಪೇಕ್ಟರ ಹಾಗೂ ಸುರಪುರ ಪೊಲೀಸ್ಠಾಣೆಯ ಶ್ರೀ ನಬಿಲಾಲ ಪಿಎಸ್ಐ, ಶ್ರೀ ತಮ್ಮಣ್ಣ ಸಿಪಿಸಿ-193 ಇದ್ದರು. 1) ಶ್ರೀ ಸೈಯ್ಯದಖುಷರ್ಿದ ಪಾಶಾ ತಂದೆಅಬ್ದುಲ್ ಹಮೀದ ವ|| 58 ವರ್ಷಜಾ|| ಮುಸ್ಲಿಂ ಉ|| ಪಿ.ಡಬ್ಲ್ಯೂ.ಡಿ ಆಸೀಫ್ನಲ್ಲಿ ವರ್ಕಇನ್ಸಪೇಕ್ಟರ ಸಾ|| ಆಸರ ಮೊಹಲ್ಲ ಸುರಪುರ 2) ಶ್ರೀ ಲಿಂಗರಾಜತಂದೆಕುಪ್ಪೆರಾಯ ವಯಾ:31 ವರ್ಷಜಾ|| ವಡ್ಡರ ಉ: ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾದಗಿರಿಜಿಲ್ಲೆಇವರನ್ನು ಪಂಚರನ್ನಾಗಿ ಮಾಡಿಕೊಂಡು ಚೌಡೇಶ್ವರಹಾಳ ಸಿಮಾಂತರದಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು ಜಪ್ತಿ ಪಡಿಸಿಕೊಳ್ಳುವ ಸಮಯದಲ್ಲಿ ನೀವು ಸಂಗಡ ಬಂದುಜಪ್ತಿ ಪಂಚನಾಮೆ ಬರೆಯಿಸಿಕೊಡುವಂತೆ ಕೇಳಿಕೊಂಡಾಗ ಅವರುಒಪ್ಪಿಕೊಂಡರು. ನಂತರ ನಾವೇಲ್ಲರು ಪಂಚರೊಂದಿಗೆ ನಮ್ಮ ನಮ್ಮಇಲಾಖೆಯ ಸರಕಾರಿ ವಾಹನಗಳಲ್ಲಿ 11:00 ಎ.ಎಂ ಕ್ಕೆ ಹೊರಟು ಚೌಡೇಶ್ವರಹಾಳ ಗ್ರಾಮಕ್ಕೆಅಂದಾಜು 12:00 ಪಿ.ಎಂ ಗೆ ತಲುಪಿದ್ದು, ನಾವೆಲ್ಲರೂಕೂಡಿ ಈ ಕೆಳಗಿನಂತೆ ಮರಳನ್ನು ಸಂಗ್ರಹಿಸಿದ್ದು ಇರುತ್ತದೆ.
1) ಚೌಡೇಶ್ವರಹಾಳ ಸಿಮಾಂತರದ ಜಮೀನು ಸವರ್ೇ ನಂಬರ 84/ಪೋ/* ರಲ್ಲಿ 1) ಹಣಮಂತ್ರಾಯತಂದೆರಾಮಸ್ವಾಮಿ ಸಾ|| ಚೌಡೇಶ್ವರಹಾಳ, 2) ರಾಮಸ್ವಾಮಿತಂದೆದೇವಿಂದ್ರಪ್ಪ ಸಾ|| ಚೌಡೇಶ್ವರಾಳ 3) ರಂಗಣ್ಣತಂದೆ ಹಣಮಂತ್ರಾಯ ಸಾ|| ಚೌಡೇಶ್ವರಹಾಳ, 4) ನರಸಣ್ಣತಂದೆ ಮಾನಶಪ್ಪ ಸಾ|| ಚೌಡೇಶ್ವರಹಾಳ (ಸದರಿಯವರು ಮರಣಹೊಂದಿರುವದಾಗಿಕಂದಾಯಇಲಾಖೆಯಿಂದ ತಿಳಿದುಬಂದಿರುತ್ತದೆ), 5) ಬಸವರಾಜತಂದೆ ಭೀಮರಾಯ ಸಾ|| ಚೌಡೇಶ್ವರಹಾಳ 6) ರಾಮಸ್ವಾಮಿತಂದೆ ನಿಂಗಪ್ಪ ಮಕಾಶಿ ಸಾ|| ಚೌಡೇಶ್ವರಹಾಳ 7) ಕಂಠೆಪ್ಪತಂದೆ ನಿಂಗಪ್ಪ ಮಕಾಶಿ ಸಾ|| ಚೌಡೇಶ್ವರಹಾಳ 8) ಯಂಕೋಬ ತಂದೆ ನರಸಣ್ಣ ಸಾ|| ಚೌಡೇಶ್ವರಹಾಳ 9) ವಿರುಪಾಕ್ಷಪ್ಪತಂದೆ ನರಸಣ್ಣ ಸಾ|| ಚೌಡೇಶ್ವರಹಾಳ ಇವರಜಮೀನಿನಲ್ಲಿ 35 ಘನ ಮೀಟರ್ ಮರಳು ಸಂಗ್ರಹಣೆ ಮಾಡಿದ್ದುಅದರ ಮೌಲ್ಯ 47,250 ರೂ. ಆಗುತ್ತದೆ.
2) ನಂತರ ಸವರ್ೆ ನಂ.71/ಪೋ3/2 ರಜಮೀನಿನ ಮಾಲಿಕರಾದ 1) ಡೊಂಗರೆಸಾಬ ತಂದೆ ಕಾಸಿಮ್ಸಾಬ ಸಾ|| ಚೌಡೇಶ್ವರಹಾಳ ಇವರಜಮೀನಿನಲ್ಲಿ ಸಂಗ್ರಹಿಸಿದ ಸುಮಾರು 53 ಘನ ಮೀಟರ್ ಮರಳು ಸಂಗ್ರಹಣೆ ಮಾಡಿದ್ದುಅದರ ಮೌಲ್ಯ 71,550 ರೂ. ಆಗುತ್ತದೆ
3) ನಂತರ ಸವರ್ೆ ನಂ.15/2 ರಜಮೀನಿನ ಮಾಲಿಕರಾದ ಮಕ್ತುಮಸಾಬ ತಂದೆ ಸೋಫಿಸಾಬ ಇದ್ದು ಸದರಿಯವರು ಮೃತಹೊಂದಿರುವದಾಗಿಅವರ ವಾರಸುದಾರ 1) ಪೀರಸಾಬ ತಂದೆ ಮಕ್ತುಮ ಸಾಬ ಇರುವದಾಗಿಕಂದಾಯಇಲಾಖೆಯವರು ತಿಳಿಸಿರುತ್ತಾರೆ. ಇವರಜಮೀನಿನಲ್ಲಿ ಸುಮಾರು 26 ಘನ ಮೀಟರ್ ಮರಳು ಸಂಗ್ರಹಣೆ ಮಾಡಿದ್ದುಅದರ ಮೌಲ್ಯ 35,100 ರೂ. ಆಗುತ್ತದೆ.
4) ನಂತರ ಸವರ್ೆ ನಂ.16/* ರಜಮೀನಿನ ಮಾಲಿಕರಾದ 1) ಹಣಮಂತ್ರಾಯತಂದೆರಾಮಸ್ವಾಮಿ 2) ರಾಮಸ್ವಾಮಿತಂದೆದೇವಿಂದ್ರಪ್ಪ 3) ಹಣಮಂತ್ರಾಯತಂದೆ ಮಾನೆಸಪ್ಪಾ ಸಾ|| ಚೌಡೇಶ್ವರಹಾಳ ಇವರಜಮೀನಿನಲ್ಲಿ ಸಂಗ್ರಹಿಸಿದ ಸುಮಾರು 121 ಘನ ಮೀಟರ್ ಮರಳು ಸಂಗ್ರಹಣೆ ಮಾಡಿದ್ದುಅದರ ಮೌಲ್ಯ 1,63,350ರೂ. ಆಗುತ್ತದೆ. ಇದಲ್ಲದೆ ಸದರಿಜಮೀನಿನ ಮೇಲೆ ಈಗಾಗಲೆ ಗುನ್ನೆ ನಂ. 28/2021 ರಅನ್ವಯ ವಶಪಡಿಸಿಕೊಂಡ ಮರಳನ್ನು ಲೊಕೋಪಯೋಗಿ ಇಲಾಖೆ ರವರು 69 ಘನ ಮೀಟರ ಮರಳನ್ನು ವಿಲೇವಾರಿ ಮಾಡಿದ್ದು, ಆದರೂ ಮತ್ತೆ ಮರಳು ಸಂಗ್ರಹಿಸಿರುತ್ತಾರೆ ಅಂತ ಲೊಕೊಪಯೋಗಿಇಲಾಖೆಯವರು ತಿಳಿಸಿರುತ್ತಾರೆ.
5) ನಂತರ ಸವರ್ೆ ನಂ.49/* ರಜಮೀನಿನ ಮಾಲಿಕರಾದ 1) ರಂಗಪ್ಪತಂದೆ ಪರಮೇಶ್ವರಪ್ಪ ಬಿರೆದಾರ ಸಾ|| ಚೌಡೇಶ್ವರಹಾಳ ಇವರಜಮೀನಿನಲ್ಲಿ ಸುಮಾರು 24 ಘನ ಮೀಟರ್ ಮರಳು ಸಂಗ್ರಹಣೆ ಮಾಡಿದ್ದುಅದರ ಮೌಲ್ಯ 32,400 ರೂ. ಆಗುತ್ತದೆ. ಇದಲ್ಲದೆ ಸದರಿಜಮೀನಿನ ಮೇಲೆ ಈಗಾಗಲೆ ಗುನ್ನೆ ನಂ. 235/2019 ರಅನ್ವಯ ವಶಪಡಿಸಿಕೊಂಡ ಮರಳನ್ನು ಲೊಕೋಪಯೋಗಿ ಇಲಾಖೆ ರವರು 40 ಘನ ಮೀಟರ ಮರಳನ್ನು ವಿಲೇವಾರಿ ಮಾಡಿದ್ದು, ಆದರೂ ಮತ್ತೆ ಮರಳು ಸಂಗ್ರಹಿಸಿರುತ್ತಾರೆ ಅಂತ ಲೊಕೊಪಯೋಗಿಇಲಾಖೆಯವರು ತಿಳಿಸಿರುತ್ತಾರೆ.
6) ನಂತರ ಸವರ್ೆ ನಂ.21/* ರಜಮೀನಿನ ಮಾಲಿಕರಾದ 1) ಹಣಮಂತ್ರಾಯತಂದೆರಾಮಸ್ವಾಮಿ ಸಾ|| ಚೌಡೇಶ್ವರಹಾಳ 2) ರಾಮಸ್ವಾಮಿತಂದೆದೇವಿಂದ್ರಪ್ಪ ಸಾ|| ಚೌಡೇಶ್ವರಹಾಳ ಇವರಜಮೀನಿನಲ್ಲಿ ಸುಮಾರು 105 ಘನ ಮೀಟರ್ ಮರಳು ಸಂಗ್ರಹಣೆ ಮಾಡಿದ್ದುಅದರ ಮೌಲ್ಯ 1,41,750ರೂ. ಆಗುತ್ತದೆ. ಇದಲ್ಲದೆ ಸದರಿಜಮೀನಿನ ಮೇಲೆ ಈಗಾಗಲೆ ಗುನ್ನೆ ನಂ. 235/2019 ರಅನ್ವಯ ವಶಪಡಿಸಿಕೊಂಡ ಮರಳನ್ನು ಲೊಕೋಪಯೋಗಿ ಇಲಾಖೆ ರವರು 21 ಘನ ಮೀಟರ ಮರಳನ್ನು ವಿಲೇವಾರಿ ಮಾಡಿದ್ದು, ಆದರೂ ಮತ್ತೆ ಮರಳು ಸಂಗ್ರಹಿಸಿರುತ್ತಾರೆ ಅಂತ ಲೊಕೊಪಯೋಗಿಇಲಾಖೆಯವರು ತಿಳಿಸಿರುತ್ತಾರೆ. ಸದರಿ ಈ ಮೇಲಿನ ಸವರ್ೇ ನಂಬರಗಳ ಜಮೀನು, ಮಾಲಿಕರು ಹಾಗೂ ವಾರಸುದಾರರ ಹೆಸರುಗಳನ್ನು ಹಾಗೂ ಅವರ ವಿವರಗಳನ್ನು ಕಂದಾಯಇಲಾಖೆಯವರು ದೃಡಪಡಿಸಿರುತ್ತಾರೆ. ಹೀಗೆ ಒಟ್ಟು 364 ಘನ ಮೀಟರ ಮರಳು, ಅದರ ಅ.ಕಿ 4,91,400/- ರೂಗಳ ಬೆಲೆ ಬಾಳುವ ಸರಕಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಕೃಷ್ಣಾ ನದಿಯಿಂದ ಕಳ್ಳತನ ಮಾಡಿ ಮಾರಾಟ ಮಾಡುವಉದ್ದೇಶದಿಂದತಮ್ಮತಮ್ಮ ಜಮೀನುಗಳಲ್ಲಿ ಸಂಗ್ರಹಣೆ ಮಾಡಿದ್ದು ಮೇಲ್ಕಂಡ 12 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತುಎಲ್ಲಾ ಸ್ಥಳಗಳ ಜಪ್ತಿ ಪಂಚನಾಮೆಯನ್ನು ಮಾಡಿಕೊಂಡು ಸದರಿ ಪಂಚನಾಮೆಯನ್ನು ಈ ಕೂಡ ಲಗತ್ತಿಟ್ಟು ಸಲ್ಲಿಸಿದ್ದು ಸದರಿಯವರ ಮೇಲೆ ಕಾನೂನು ಕ್ರಮಜರುಗಸಲು ವಿನಂತಿ.ಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.


ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 53/2022 ಕಲಂ: 279, 337, 304(ಎ) ಐಪಿಸಿ:ಇಂದು ದಿನಾಂಕ:09.07.2022 ರಂದು ಮಧ್ಯಾಹ್ನ 3:30 ಗಂಟೆಗೆ ಪಿರ್ಯಾಧಿ ಶ್ರೀ ದೇಸಾಯಿ ತಂದೆ ಶಿವಪ್ಪ ಬಿರಾದಾರ ವ:45 ವರ್ಷ ಜಾ: ಹಿಂದೂ ಬೇಡರ ಉ:ಒಕ್ಕಲುತನ ಸಾ: ಕುರೇಕನಾಳ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯನ್ನು ಹೇಳಿ ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು. ಸದರ ಪಿರ್ಯಾದಿಯ ಹೇಳಿಕೆಯ ಸಾರಾಂಶವೆನೆಂದರೆ
ನಮ್ಮ ತಂದೆ ತಾಯಿಗೆ ನಾನು, ದೇವಪ್ಪ ಸಾಬವ್ವ, ತಿಮ್ಮಣ್ಣ ಅಂತ ನಾಲ್ಕು ಜನ ಮಕ್ಕಳಿದ್ದು ಎಲ್ಲರದೂ ಮದುವೆಯಾಗಿದ್ದು ನನ್ನ ಅಕ್ಕ ಸಾಬವ್ವ ರವರಿಗೆ ಕೊಡೆಕಲ್ಲಕ್ಕೆ ಕೊಟ್ಟು ಮದುವೆ ಮಾಡಿದ್ದು ನಾವು ಮೂರು ಜನ ಅಣ್ಣತಮ್ಮಂದಿರು ನಮ್ಮ ನಮ್ಮ ಕುಟುಂಬದೊಂದಿಗೆ ಬೇರೆ ಬೇರೆ ಮನೆ ಮಾಡಿಕೊಂಡು ಇರುತ್ತೇವೆ. ನನ್ನ ತಾಯಿ ನೀಲಮ್ಮ ರವರು ನಮ್ಮ ಜೊತೆಗೆ ಇರುತ್ತಾರೆ.
ಹೀಗಿದ್ದು ಇಂದು ದಿನಾಂಕ 09.07.2022 ರಂದು ಮುಂಜಾನೆ 09:00 ಗಂಟೆಯ ಸುಮಾರಿಗೆ ನನ್ನ ತಾಯಿ ನೀಲಮ್ಮ ಗಂಡ ಶಿವಪ್ಪ ಬಿರಾದಾರ ವ:68 ವರ್ಷ ಇವರು ನನಗೆ ನಾನು ಕೊಡೆಕಲ್ಲಕ್ಕೆ ಬ್ಯಾಂಕಿಗೆ ಹಣ ತೆಗೆದುಕೊಂಡು ಬರಲು ಹೋಗುತ್ತೇನೆ ಅಂತ ಹೇಳಿ ಹೋಗಿದ್ದು ನಂತರ 11:45 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರ ನನ್ನ ದೊಡ್ಡಪ್ಪನ ಮಗನಾದ ಪರಸಪ್ಪ ತಂದೆ ಈಶ್ವರಪ್ಪ ಬಿರಾದಾರ ಇವರು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ನಾನು ನನ್ನ ಕೆಲಸದ ನಿಮಿತ್ಯ ಕೊಡೆಕಲ್ಲಕ್ಕೆ ಬಂದು ಮರಳಿ ನಮ್ಮೂರಿಗೆ ಬರುವಾಗ ಕೊಡೆಕಲ್ಲ ಬಸ್ ಸ್ಟ್ಯಾಂಡ್ನ ಹತ್ತಿರ ನಿನ್ನ ತಾಯಿ ನೀಲಮ್ಮಳು ನಮ್ಮೂರ ಹಣಮಂತ್ರಾಯ ಇವನ ಆಟೋ ನಂ:ಕೆಎ-33 ಎ-1914 ದಲ್ಲಿ ಕುಳಿತಿದ್ದು ಅವರ ಜೊತೆಗೆ ಯರಕಿಹಾಳ ಗ್ರಾಮದ ಬಸಪ್ಪ ತಂದೆ ಅಂಬ್ರಪ್ಪ ಸಾಳಿ, ಫಕೀರಪ್ಪ ತಂದೆ ಹಣಮಪ್ಪ ಯರಗೋಡಿ ರವರು ಇದ್ದು ಆಟೋ ಮುಂದೆ ಹೋಗಿದ್ದು ನಾವು ಅವರ ಹಿಂದೆಯೇ ನನ್ನ ಮೊಟರ್ ಸೈಕಲ್ ಮೇಲೆ ಹೊರಟಿದ್ದು ಆಟೋವನ್ನು ನಮ್ಮೂರ ಹಣಮಂತ್ರಾಯ ತಂದೆ ಸೋಮನಗೌಡ ಪೊಲೀಸ್ಪಾಟೀಲ ಇತನು ಚಲಾಯಿಸುತ್ತಿದ್ದನು. ಹುಣಸಗಿ-ನಾರಾಯಣಪೂರ ಮುಖ್ಯ ರಸ್ತೆಯ ಮೇಲೆ ಜಗದೀಶ ಪೆಟ್ರೊಲ್ ಪಂಪ್ ಹತ್ತಿರ 11:30 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ಕೊಡೆಕಲ್ಲ ಕಡೆಯಿಂದ ಒಬ್ಬ ಮೊಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲ್ನ್ನು ಅಲಕ್ಷತನದಿಂದ ಅಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ನಮ್ಮೂರ ಹಣಮಂತ್ರಾಯ ರವರ ಆಟೋ ನಂ:ಕೆಎ33 ಎ-1914 ನೇದ್ದಕ್ಕೆ ಹಿಂದಿನಿಂದ ಗುದ್ದಿದ್ದರಿಂದ ಆಟೋ ಚಾಲಕನು ಬ್ಯಾಲೆನ್ಸ್ ತಪ್ಪಿ ರಸ್ತೆಯ ಎಡಮಗ್ಗಲಿಗೆ ಕಟ್ ಹೊಡೆದಿದ್ದು ಇದರಿಂದ ನಿಮ್ಮ ತಾಯಿ ನೀಲಮ್ಮ ರವರು ಆಯ ತಪ್ಪಿ ಕೆಳಗೆ ಬಿದ್ದಾಗ ಅವಳ ಮೇಲೆ ಆಟೋ ಪಲ್ಟಿಯಾಗಿ ಬಿದ್ದಿದ್ದು, ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಆಗ ಅದನ್ನು ನೋಡಿ ಅವರ ಹಿಂದೆಯೇ ನಮ್ಮ ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದ ನಾನು ಮತ್ತು ನಮ್ಮೂರ ಬಸನಗೌಡ ತಂದೆ ಭೀಮಶಪ್ಪಗೌಡ ಮಾಲಿಪಾಟೀಲ ರವರು ಹೋಗಿ ದೊಡ್ಡಮ್ಮಳಾದ ನೀಲಮ್ಮ ಹಾಗೂ ಆಟೋದಲ್ಲಿದ್ದವರಿಗೆ ಎಬ್ಬಿಸಿ ನೋಡಲಾಗಿ ದೊಡ್ಡಮ್ಮ ನೀಲಮ್ಮ ರವರಿಗೆ ನೋಡಲಾಗಿ ತಲೆಯ ಹಿಂಭಾಜುವಿಗೆ ಭಾರಿ ರಕ್ತಗಾಯವಾಗಿದ್ದು ನಂತರ ಮೋಟರ್ ಸೈಕಲ್ ಸವಾರನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ನಾಗರಾಜ ತಂದೆ ಹಣಮಂತ ಚಿನ್ನಕೋಟಿ ಸಾ:ರಾಯನಗೋಳ ದಾಸರಗೋಟ ಅಂತ ತಿಳಿಸಿದ್ದು ನೋಡಲಾಗಿ ಸದರಿಯವನ ಮುಖದ ಮೇಲೆ ತರಚಿದ ನಮೂನೆಯ ರಕ್ತಗಾಯಗಳಾಗಿದ್ದು ಸದರಿ ಮೋಟರ್ ಸೈಕಲ್ ನೋಡಲಾಗಿ ಹೋಂಡಾ ಶೈನ್ ಕಂಪನಿಯ ಬೂದು ಬಣ್ಣದಿದ್ದು ಅದಕ್ಕೆ ನೊಂದಣಿ ಸಂಖ್ಯೆ ಬರೆದಿರುವದಿಲ್ಲ. ಅದರ ಚೆಸ್ಸಿ ನಂ:ಒಇ4ಎಅ85ಇಈಓಉ080367 ಇಂಜೀನ್ ನಂಬರ:ಎಅ85ಇ-ಉ-2125558 ಅಂತ ಇದ್ದು ನಂತರ ನಾವು ದೊಡ್ಡಮ್ಮ ನೀಲಮ್ಮ ಮತ್ತು ಮೋಟರ್ ಸೈಕಲ್ ಸವಾರನಿಗೆ ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ ಉಪಚಾರಕ್ಕಾಗಿ ಕರೆದುಕೊಂಡು ಹೋಗುತ್ತಿದ್ದು ನೀನು ಕೂಡ ಬಾ ಅಂತ ತಿಳಿಸಿದ್ದು, ನಾನು ಕೂಡಲೇ ಕುರೇಕನಾಳದಿಂದ ಕೊಡೆಕಲ್ಲಗೆ ಬಂದು ನೋಡಲಾಗಿ ನನ್ನ ತಮ್ಮ ಪರಶುರಾಮ ತಿಳಿಸಿದಂತೆ ನನ್ನ ತಾಯಿಗೆ ಅಪಘಾತದಲ್ಲಿ ತಲೆಯ ಹಿಂಭಾಜುವಿಗೆ ಭಾರಿ ರಕ್ತಗಾಯವಾಗಿದ್ದು ನಂತರ ಕೊಡೆಕಲ್ಲ ಆಸ್ಪತ್ರೆಯ ವೈದ್ಯರು ನನ್ನ ತಾಯಿ ನೀಲಮ್ಮ ರವರಿಗೆ ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರ ಕುರಿತು ತಾಳಿಕೋಟಿ ಸರಕಾರಿ ಆಸ್ಪತ್ರೆಗೆ ಹೋಗಲು ತಿಳಿಸಿದ್ದು ನನ್ನ ತಾಯಿಯ ಜೊತೆಗೆ ನಾನು & ನನ್ನ ಅಕ್ಕ ಸಾಬವ್ವ ಹಾಗೂ ಅವಳ ಮಗನಾದ ರಮೇಶ ರವರು ತಾಳಿಕೋಟಿಗೆ ಹೋಗಿದ್ದು ನಂತರ ಅಲ್ಲಿನ ವೈದ್ಯರು ನನ್ನ ತಾಯಿಗೆ ಉಪಚಾರ ಮಾಡಿ ಹೆಚ್ಚಿನ ಉಪಚಾರ ಕುರಿತು ವಿಜಯಪೂರ ಸರಕಾರಿ ಆಸ್ಪತ್ರೆಗೆ ಹೋಗಲು ತಿಳಿಸಿದ್ದರಿಂದ ನನ್ನ ಅಕ್ಕ ಸಾಬವ್ವ ಮತ್ತು ಆಕೆಯ ಮಗನಾದ ರಮೇಶ ರವರು ಕೂಡಿಕೊಂಡು ನನ್ನ ತಾಯಿ ನೀಲಮ್ಮ ರವರಿಗೆ ವಿಜಯಪೂರಕ್ಕೆ ಕರೆದುಕೊಂಡು ಹೋಗಿದ್ದು ನಾನು ಅಲ್ಲಿಂದ ನಮ್ಮೂರಿಗೆ ಹೋಗಲು ಕೊಡೆಕಲ್ಲದಲ್ಲಿ 2:35 ಪಿಎಮ್ಕ್ಕೆ ಇದ್ದಾಗ ನನ್ನ ಅಳಿಯನಾದ ರಮೇಶನು ನನಗೆ ಪೋನ್ ಮಾಡಿ ಅಜ್ಜಿ ನೀಲಮ್ಮಳಿಗೆ ವಿಜಯಪೂರಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಬಸವನ ಬಾಗೇವಾಡಿ ಹತ್ತಿರ 2:30 ಪಿಎಮ್ ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ಈ ಬಗ್ಗೆ ನೀನು ಕೊಡೆಕಲ್ಲ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡು ಅಂತ ತಿಳಿಸಿದ್ದರಿಂದ ನಾನು ಠಾಣೆಗೆ ಬಂದು ದೂರು ಕೊಡುತ್ತಿದ್ದು ಈ ಅಪಘಾತವು ಬೂದು ಮೋಟರ್ ಸೈಕಲ್ ಚೆಸ್ಸಿ ನಂ:ಒಇ4ಎಅ85ಇಈಓಉ080367 ಇಂಜೀನ್ ನಂಬರ:ಎಅ85ಇ-ಉ-2125558 ನೇದ್ದರ ಸವಾರನಾದ ನಾಗರಾಜ ತಂದೆ ಹಣಮಂತ ಚಿನ್ನಕೋಟಿ ಸಾ:ರಾಯನಗೋಳ ದಾಸರಗೋಟ ಇವರ ನಿರ್ಲಕ್ಷತನದಿಂದಲೇ ಸಂಭವಿಸಿದ್ದು ನನ್ನ ತಾಯಿಯ ಶವವು ಬಸವನ ಬಾಗೇವಾಡಿಯ ಸರಕಾರಿ ಆಸ್ಪತ್ರೆಯಲ್ಲಿದ್ದು ಅಪಘಾತ ಪಡಿಸಿದ ಮೋಟರ್ ಸೈಕಲ ಸವಾರ ನಾಗರಾಜ ಇತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಪಿರ್ಯಾಧಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:53/2022 ಕಲಂ 279, 337, 304(ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

ಇತ್ತೀಚಿನ ನವೀಕರಣ​ : 11-07-2022 12:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080