ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-08-2021

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ 87/2021 ಕಲಂ 379 ಐಪಿಸಿ : ಫಿಯರ್ಾಧಿ ಸಾರಾಂಶವೇನೆಂದರೆ, ದಿನಾಂಕ 27/07/2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸಂಬಂಧಿಯಾದ ಮಲ್ಲಪ್ಪ ತಂದೆ ಸಾಬಣ್ಣ ಗಡ್ಡೆಸುಗೂರು ಇಬ್ಬರು ಕೂಡಿ ಮಲ್ಲಪ್ಪ ಗಡ್ಡೆಸುಗೂರು ಈತನ ಹಿರೋ ಸ್ಪ್ಲೆಂಡರ್ ಮೋಟರ್ ಸೈಕಲ್ ನಂ ಕೆ.ಎ 33 ಯು 4947, ನೇದ್ದರಲ್ಲಿ ಕುಳಿತು ಯಾದಗಿರಿಯ ಕೆನರ ಬ್ಯಾಂಕಿಗೆ ಬಂದೆವು. ಕೆನರ ಬ್ಯಾಂಕ್ನಲ್ಲಿ ನಮ್ಮ ಸಂಬಂಧಿಯಾದ ಮಲ್ಲಯ್ಯ ತಂದೆ ತಿಪ್ಪಣ್ಣ ಅಂಬಿಗೇರ ಸಾ|| ಕೋಲಿವಾಡ ಯಾದಗಿರಿ ಈತನು ಪಿವೂನ್ ಅಂತಾ ಕೆಲಸ ಮಾಡುತ್ತಿದ್ದು, ಆತನ ಹತ್ತಿರ ನಾನು 2,00,000/ ರೂಪಾಯಿಗಳನ್ನು ಒಕ್ಕಲುತನ ಖಚರ್ಿಗಾಗಿ ನನಗೆ ಕೊಡಲು ಕೇಳಿಕೊಂಡೆನು. ನಂತರ ಆತನು ತನ್ನ ಕೆನರಾ ಬ್ಯಾಂಕ್ ಖಾತೆ ನಂ 0523111003567, ನೇದ್ದರಲ್ಲಿ ಇದ್ದ ಹಣದಲ್ಲಿ ಡ್ರಾ ಮಾಡಿ, ನನಗೆ 2 ಲಕ್ಷ ರೂಪಾಯಿಗಳು ಕೊಟ್ಟನು. ಆಗ ಸಮಯ ಬೆಳಿಗ್ಗೆ 11-15 ಗಂಟೆಯಾಗಿತ್ತು. ನಂತರ ನಾನು ನಮ್ಮ ಸಂಬಂಧಿಕೊಟ್ಟ 2 ಲಕ್ಷ ರೂಪಾಯಿ ಹಣ ಮತ್ತು ನಾನು ಊರಿನಿಂದ ತೆಗೆದುಕೊಂಡು ಬಂದ 55,000/- ರೂಪಾಯಿಗಳನ್ನು ಒಂದು ಬ್ಯಾಗದಲ್ಲಿ ಹಾಕಿಕೊಂಡು ಹಣವನ್ನು ತೆಗದುಕೊಂಡು ನಮ್ಮ ಮೋಟರ್ ಸೈಕಲ್ದ ಮೇಲೆ ಕುಳಿತುಕೊಂಡು ಯಾದಗಿರಿಯ ಚಿತ್ತಾಪೂರ ರೋಡಿನಲ್ಲಿ ಇರುವ ವೀರಭದ್ರೇಶ್ವರ ಗೊಬ್ಬರ ಅಂಗಡಿಗೆ ಹೊರಟೆವು. ನಾನು ಹಣವನ್ನು ಹಿಡಿದುಕೊಂಡು ಹಿಂದೆ ಕುಳಿತ್ತಿದ್ದೆನು. ಮಲ್ಲಪ್ಪ ಗಡ್ಡೆಸುಗೂರು ಈತನು ಮೋಟರ್ ಸೈಕಲ್ ನಡೆಸುತ್ತಿದ್ದನು. ಇಬ್ಬರು ಕೂಡಿ ಗೊಬ್ಬರ ಅಂಗಡಿಗೆ ಬಂದು ಅಲ್ಲಿ ಸ್ವಲ್ಪ ಸಮಯ ನಿಂತು ಮಾಲಿಕರು ಇಲ್ಲದು ನೋಡಿ ಮುಂದೆ ಅವರ ಗೋಡಾನ ಹತ್ತಿರ ಹೋದರಾಯಿತು ಅಂತಾ ಹೊಗುತ್ತಿರುವಾಗ, ನಮ್ಮ ಮೋಟರ್ ಸೈಕಲ್ ಪಂಚರ ಆಯಿತು. ನಂತರ ಸದರಿ ಮೋಟರ್ ಸೈಕಲ್ ತಳ್ಳಿಕೊಂಡು ಚಿತ್ತಾಪೂರ ರೋಡಿನಲ್ಲಿ ಇರುವ ಮಹಾಲಕ್ಷ್ಮೀ ಬಟ್ಟೆ ಅಂಗಡಿ ಹತ್ತಿರ ಇರುವ ಪಂಚರ ಅಂಗಡಿಗೆ ತಳ್ಳಿಕೊಂಡು ಹೋಗುವಾಗ ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಯಾರೋ ಇಬ್ಬರು ನಮ್ಮ ಮೋಟರ್ ಸೈಕಲ್ ಮೇಲೆ ನಮ್ಮ ಹಿಂದಿನಿಂದ ಬಂದು, ರೀ ನಿಮ್ಮವು ದುಡ್ಡು ಬಿದ್ದಾವ ನೋಡ್ರಿ ಅಂತಾ ಅಂದಾಗ, ನಾವು ಮೋಟರ್ ಸೈಕಲ್ ನಿಲ್ಲಿಸಿದೆವು. ಆಗ ಒಬ್ಬನು ನಮಗೆ ಗೊತ್ತಾಗದಂತೆ ಮೈ ಮೇಲೆ ತುರಿಕೆ ಪದಾರ್ಥ ಚೆಲ್ಲಿದ್ದು ನನಗೆ ಜೋರಾಗಿ ತುಕರ್ಿ ಪಾರಂಭವಾಯಿತು. ಆಗ ನಾನು ಹಣದ ಬ್ಯಾಗನ್ನು ನಮ್ಮ ಮೋಟರ್ ಸೈಕಲ್ ಮೇಲೆ ಇಟ್ಟು ತೊರಿಸಿಕೊಳ್ಳುತ್ತ ನಿಂತಾಗ, ಮಲ್ಲಪ್ಪ ಈತನು ನಮ್ಮ ಹಿಂದೆ ಬಿದ್ದ ಚಿಲ್ಲರೆ ನೋಟುಗಳನ್ನು ತೆಗೆದುಕೊಂಡು ಬರಲು ಹೋದನು. ಆಗ ನಮಗೆ ಗೊತ್ತಾಗಂತೆ ನಮ್ಮ ಹಣ ಇಟ್ಟ ಬ್ಯಾಗನ್ನು ಯಾರೋ ಕಳ್ಳರು ತೆಗೆದುಕೊಂಡು ಹೋಗಿರುತ್ತಾರೆ. ನಂತರ ನಾನು ನಮ್ಮ ಹಣ ಹಣ ಅಂತಾ ಅಲ್ಲೆ ಸುತ್ತಾ ಮುತ್ತಾ ಹುಡುಕಾಡಿದರು ಯಾರ ಸುಳಿವು ಕಾಣಲಿಲ್ಲ. ಮೋಟರ್ ಸೈಕಲ್ ಮೇಲೆ ಬಂದು ದಾರಿಯಲ್ಲಿ ಹಣ ಚೆಲ್ಲಿದವರೇ ನಮ್ಮ ಹಣದ ಬ್ಯಾಗನ್ನು ತೆಗೆದುಕೊಂಡು ಹೋಗಿರುತ್ತಾರೆ. ನೋಡಲು ಅವರು ದಪ್ಪನೆಯ ಮೈಕಟ್ಟು ಇದ್ದು, ಪ್ಯಾಂಟ್ ಶಟರ್್ ಹಾಕಿದ್ದರು. ಮುಂದೆ ಅವರನ್ನು ನೋಡಿದಲ್ಲಿ ನಾನು ಗುತರ್ಿಸುತ್ತೇನೆ. ಮನೆಯಲ್ಲಿ ವಿಚಾರಣೆ ಮಾಡಿ ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು, ನಮ್ಮ ಹಣ ಕಳ್ಳತನ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಫಿಯರ್ಾದಿ ಸಾರಾಂಶ ವಿರುತ್ತದೆ.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 127/2021 ಕಲಂ 341, 323, 504, 506 ಸಂ. 34 ಐಪಿಸಿ. : ಸುಮಾರು 15 ದಿನಗಳ ಹಿಂದೆ ಫಿರ್ಯಾದಿದಾರ ಮಗಳಾದ ಹಣಮೀಬಾಯಿಯು ತವರು ಮನೆಗೆ ಬಂದಿದ್ದಳು. ನಂತರ ಕಳೆದ 8 ದಿನಗಳ ಹಿಂದೆ ಆಕೆಯನ್ನು ಗಂಡ ಮನೆಗೆ ಬಿಟ್ಟು ಬರುವ ಸಲುವಾಗಿ ಫಿರ್ಯಾದಿಯು ತನ್ನ ಮಗಳೊಂದಿಗೆ ಮಲ್ಲಾಪೂರ ತಾಂಡಾಕ್ಕೆ ಬಂದಿದ್ದು ಅಲ್ಲಿ ಆಕೆಯ ಮಗಳು ತನ್ನೊಂದಿಗೆ 8-10 ದಿನಗಳ ವರೆಗೆ ಇದ್ದು ಹೋಗು ಅಂತಾ ತಿಳಿಸಿದ್ದರಿಂದ ಫಿರ್ಯಾದಿಯು ತನ್ನ ಮಗಳ ಮನೆಯಲ್ಲಿದ್ದಳು. ಹೀಗಿದ್ದು ದಿನಾಂಕ 07.08.2021 ರಂದು ಸಂಜೆ 5:00 ಗಂಟೆಯ ಸುಮಾರಿಗೆ ಫಿರ್ಯಾದಿಯ ಮಗಳು ಕಸಗೂಡಿ ಚಲ್ಲಿದಿ ವಿಷಯವಾಗಿ ಫಿರ್ಯಾದಿ ಮತ್ತು ಆರೋಪಿತರ ನಡುವೆ ಮಾತಿಗೆ ಮಾತು ಬೆಳಿದ್ದು ಆಗ ಫಿರ್ಯಾದಿಯು ಮನೆ ಬಿಟ್ಟು ಹೋಗುತ್ತಿದ್ದಾಗ ಆರೋಪಿತರೆಲ್ಲಾರು ಕೂಡಿ ಆಕೆಯನ್ನು ದಾರಿಯ ಮೇಲೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಆ ವಿಷಯವನ್ನು ಫಿರ್ಯಾದಿಯು ತನ್ನ ಗಂಡನಿಗೆ ತಿಳಿಸಿದ ನಂತರ ವಿಚಾರ ಮಾಡಿ ಇಂದು ದಿನಾಂಕ 09.08.2021 ರಂದು ಸಂಜೆ 6:00 ಗಂಟೆಗೆ ಠಾಣೆಗೆ ಬಂದು ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 127/2021 ಕಲಂ 341, 323, 504, 506 ಸಂ. 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 182/2021 ಕಲಂ 279, 338 ಐ.ಪಿ.ಸಿ. ಮತ್ತು 187 ಐ.ಎಮ್.ವಿ. ಆಕ್ಟ : ಇಂದು ದಿನಾಂಕ 09-08-2021 ರಂದು 8:15 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಮಲ್ಲಪ್ಪ ತಂದೆ ಶಿವಣ್ಣ ಸಗರ ವಯ: 50 ವರ್ಷ ಜಾ: ಕುರುಬ ಉ: ಮಂಡಾಳ ವ್ಯಾಪಾರ ಸಾ: ವಿಭೂತಿಹಳ್ಳಿ ತಾ: ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪಯೂಟರ ಟೈಪ ಮಾಡಿಸಿದ ಫಿರ್ಯಾದಿ ಹಾಜರು ಪಡಸಿದ್ದು ಸದರಿ ಫಿರ್ಯಾದಿ ಏನಂದರೆ, ನನ್ನ ಮಗನಾದ ನಿಂಗಪ್ಪ 21 ವರ್ಷ ಈತನು ದಿನಾಂಕ: 30-07-2021 ರಂದು ಮುಂಜಾನೆ 10:00 ಗಂಟೆಗೆ ನಮ್ಮ ನಂಬರ ಇಲ್ಲದ ಮೊಟಾರ ಸೈಕಲ್ ಮೇಲೆ ರಸ್ತಾಪುರಕ್ಕೆ ಮಂಡಾಳ ಮಾರಾಟದ ಆದೇಶ ಕೇಳಲು ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದನು. ನಂತರ 11:40 ಗಂಟೆ ಸುಮಾರಿಗೆ ನನಗೆ ಸಗರ ಗ್ರಾಮದ ಹಣಮಂತ ತಂದೆ ಮಹಾದೇವಪ್ಪ ಗುಡಳ್ಳಿ ಈತನು ನನಗೆ ಫೋನ ಮಾಡಿ ತಿಳಿಸಿದ್ದೇನಂದರೆ ನಿನ್ನ ಮಗ ಮಲ್ಲಪ್ಪನಿಗೆ ರಸ್ತಾಪುರ ದಿಂದ ಮರಳಿ ಇಮ್ಮೂರಿಗೆ ಬರುವಾಗ ಕ್ರಾಸ ದಾಡಿದ ನಂತರ ಆಟೋ ಡಿಕ್ಕಿಮಾಡಿ ಭಾರಿ ಗಾಯವಾಗಿದೆ ನೀನು ಬಾ ಎಂದು ಹೇಳಿದನ್ದು ನಮ್ಮ ಮಂಡಾಳ ಭಟ್ಟಿಯು ವಿಭೂತಿಹಳ್ಳಿ ಯಿಂದ ರಸ್ತಾಪುರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಇದ್ದು ನಾನು ತಕ್ಷಣ ಅಲ್ಲಿಗೆ ಹೋದೆನು. ನನ್ನ ಮಗನಾದ ನಿಂಗಪ್ಪನಿಗೆ ಬಲಗೈ ಬೆರಳು ಕಟ್ ಆಗಿದ್ದು ತಲೆಗೆ ರಕ್ತಗಾಯವಾಗಿದ್ದು ಬಲಗಾಲ ಮೊಳಕಾಲಿಗೆ ಪೆಟ್ಟಾಗಿದ್ದು ಇತ್ತು ನಾನು ನನ್ನ ಮಗನಿಗೆ ಹೇಗಾಯಿತು ಎಂದು ಕೇಳಲಾಗಿ ನನ್ನ ಮಗನು ರಸ್ತಾಪುರದಿಂದ ಮರಳಿ ಮಂಡಾಳ ಬಟ್ಟಿಗೆ ಹೋಗುವಾಗ ಎದುರಿನಿಂದ ರಸ್ತಾಪುರ ಕ್ರಾಸ ದಾಟಿದ ನಂತರ ಎದುರಿನಿಂದ ಒಂದು ಆಟೋ ನಂ. ಕೆ.ಎ.33-7933 ನೇದದರ ಚಾಲಕನು ತನ್ನ ಆಟೋವನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಮೊಟಾರ ಸೈಕಲ್ ಗೆ ಡಿಕ್ಕಿ ಪಡಿಸಿದನು. ಅದರಿಂದ ನನಗೆ ಭಾರಿ ಗಾಯವಾಗಿದೆ ಆಟೋ ಚಾಲಕನು ಓಡಿ ಹೋಗಿದ್ದಾನೆ ನಾನು ನೋಡಿದರೆ ಗುರುತಿಸುತ್ತೇನೆ ಎಂದು ಹೇಳಿದನು. ನಮ್ಮ ಮೊಟಾರ ಸೈಕಲ್ ಗೆ ನಂಬರ ಇರುವುದಿಲ್ಲ. ಅದರ ಚೆಸ್ಸೀ ನಂ. ಒಃಐಎ06ಂಒಉಉ26370 ಇಂಜಿನ್ ನಂ. ಎಂ06ಇಎಉಉಎ32127 ಇರುತ್ತದೆ. ಆಗ ನಾನು ಮತ್ತು ಸಗರ ಗ್ರಾಮದ ಹಣಮಂತ ಗುಡಳ್ಳಿ ಇಬ್ಬರೂ ಕೂಡಿ ನನ್ನ ಮಗನಿಗೆ 108 ವಾಹನದಲ್ಲಿ ಶಹಾಪುರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯ ಸಲಹೆಯ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಎ.ಎಸ್.ಎಮ್ ಆಸ್ಪತ್ರೆಗೆ ಸೇರಿಕೆ ಮಾಡಿ ಉಪಚಾರ ಕೊಡಿಸಿರುತ್ತೇವೆ. ನಾನು ಒಬ್ಬಂಟಿಯಾಗಿದ್ದರಿಂದ ನನ್ನ ಮಗನೊಡನೆ ಉಪಚಾರ ಸಮಯದಲ್ಲಿ ಇದ್ದು ಇಂದು ದಿನಾಂಕ: 09-08-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಅಫಘಾತ ಪಡಿಸಿದ ಆಟೋ ಮತ್ತು ನಮ್ಮ ಮೊಟಾರ ಸೈಕಲ್ ಇನ್ನೂ ಸ್ಥಳದಲ್ಲೇ ಇರುತ್ತವೆ. ಸದರಿ ಘಟನೆಯು ದಿನಾಂಕ: 30-07-2021 ರಂದು 11:30 ಗಂಟೆಗೆ ಜರುಗಿರುತ್ತದೆ. ಆದ್ದರಿಂದ ದಿನಾಂಕ: 30-07-2021 ರಂದು 11:30 ಗಂಟೆಗೆ ರಸ್ತಾಪುರ ಕ್ರಾಸ ದಿಂದ ಗೊಲಗೇರಿ ದೊಡ್ಡಿ ಕ್ರಾಸ ಮದ್ಯದ ರಸ್ತೆಯ ಮೇಲೆ ಮೊಟಾರ ಸಸೈಕಲ್ ಮೇಲೆ ಹೊರಟ ನನ್ನ ಮಗನಿಗೆ ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಡಿಕ್ಕಿಪಡಿಸಿ ಭಾರೀ ಗಾಯಪಡಿಸಿ ಆಟೋವನ್ನು ಅಲ್ಲೇ ಬಿಟ್ಟು ಓಡಿ ಹೋದ ಆಟೋ ನಂ ಕೆ.ಎ.33-7933 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.182/2021 ಕಲಂ 279, 338 ಐ.ಪಿ.ಸಿ. ಮತ್ತು 187 ಐ.ಎಮ್.ವ್ಹಿ. ಆಕ್ಡ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 11-08-2021 10:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080