ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-08-2022

 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 37/2022 ಕಲಂ 279 ಐಪಿಸಿ: ಇಂದು ದಿನಾಂಕ 09/08/2022 ರಂದು 12-30 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಶಿವರಾಜ ತಂದೆ ರಾಯಣ್ಣಗೌಡ ರಾಮಣ್ಣೋರ ವಯ;38 ವರ್ಷ, ಜಾ;ಲಿಂಗಾಯತ್, ಉ;ಕಾರ್ ಚಾಲಕ, ಸಾ;ಬೊಮ್ಮಶೆಟ್ಟಿಹಾಳ, ತಾ;ಜಿ;ಯಾದಗಿರಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಲಿಖಿತ ದೂರನ್ನು ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಈ ಮೂಲಕ ದೂರು ಸಲ್ಲಿಸುವುದೇನೆಂದರೆ, ನಾನು ಶ್ರೀ ಹಣಮಂತರೆಡ್ಡಿ ತಂದೆ ವಿಶ್ವನಾಥರೆಡ್ಡಿ ಮುದ್ನಾಳ ಪ್ರಥಮ ದಜರ್ೆ ಗುತ್ತಿಗೆದಾರರು ಸಾ;ಯಾದಗಿರಿ ಇವರ ಕಾರ್ ನಂ.ಕೆಎ-04, ಎಮ್.ಎನ್-4102 ನೇದ್ದು ಸುಮಾರು ತಿಂಗಳಿನಿಂದ ಚಾಲನೆ ಮಾಡಿಕೊಂಡು ಬಂದಿರುತ್ತೇನೆ. ಇಂದು ದಿನಾಂಕ 09/08/2022 ರಂದು ಬೆಳಿಗ್ಗೆ 11-30 ಎ.ಎಂ.ಕ್ಕೆ ಸದರಿ ಕಾರಿನಲ್ಲಿ ನಮ್ಮ ಮಾಲೀಕರನ್ನು ಕರೆದುಕೊಂಡು ಯಾದಗಿರಿಯ ಸುಬಾಷ್ ವೃತ್ತದಿಂದ ವಾಡಿ ರಸ್ತೆ ಕಡೆಗೆ ಹೊರಟಿದ್ದಾಗ ಸುಭಾಷ್ ವೃತ್ತದಲ್ಲಿ ಟ್ರಾಫಿಕ್ ರೆಡ್ ಸಿಗ್ನಲ್ ಬಿದ್ದಾಗ ನಿಂತಿದ್ದು, ನಂತರ ಹಸಿರು ಸಿಗ್ನಲ್ ಬಿದ್ದಾಗ ವಾಡಿ ರಸ್ತೆ ಕಡೆಗೆ ಹೊರಟು ಸುಭಾಷ್ ವೃತ್ತದ ಬಲಗಡೆಯಿಂದ ಟರ್ನ ಮಾಡಿ ಮುಂದೆ ಹೋಗುತ್ತಿದ್ದಾಗ ನಮ್ಮ ಹಿಂದೆ ಬರುತ್ತಿದ್ದ ಒಬ್ಬ ಲಾರಿ ಟ್ಯಾಂಕರ್ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ, ಸದರಿ ಅಪಘಾತದಲ್ಲಿ ನಮ್ಮ ಕಾರಿನಲ್ಲಿದ್ದ ನಮ್ಮ ಮಾಲೀಕರಾದ ಶ್ರೀ ಹಣಮಂತರೆಡ್ಡಿ ರವರಿಗೆ ಮತ್ತು ಕಾರ್ ಚಾಲನೆ ಮಾಡುತ್ತಿದ್ದ ನನಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲ, ನಾವು ರಸ್ತೆ ಬದಿಗೆ ಕಾರ್ ನಿಲ್ಲಿಸಿ ಹೊರಗೆ ಬಂದು ನೋಡಲಾಗಿ ನಮ್ಮ ಕಾರಿನ ಹಿಂಭಾಗವು ಡ್ಯಾಮೇಜ್ ಆಗಿರುತ್ತದೆ. ನಮ್ಮ ಕಾರಿಗೆ ಡಿಕ್ಕಿಪಡಿಸಿದ ಲಾರಿ ಟ್ಯಾಂಕರ್ (ಪೆಟ್ರೋಲ್/ಡೀಸೆಲ್) ವಾಹನವು ಸ್ಥಳದಲ್ಲಿದ್ದು ಅದರ ನಂಬರ ಕೆಎ-19, ಸಿ-0331 ನೇದ್ದು ಇದ್ದು, ಅದರ ಚಾಲಕನು ಘಟನಾ ಸ್ಥಳದಲ್ಲಿ ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಲಾರಿ ಚಾಲಕನು ತನ್ನ ಹೆಸರು ವಿರೇಶ ತಂದೆ ನಾಗರಾಜ ಅಗಸರ ವಯ;27 ವರ್ಷ, ಜಾ;ಮಡಿವಾಳ, ಉ;ಲಾರಿ ಚಾಲಕ, ಸಾ;ಬಸರಕೋಡ, ತಾ;ಜಿ;ಬಳ್ಳಾರಿ ಅಂತಾ ತಿಳಿಸಿರುತ್ತಾನೆ. ಈ ಘಟನೆಯನ್ನು ಕಂಡು ಅಲ್ಲಿಯೇ ಇದ್ದ ಶ್ರೀ ಸುರೇಶ ರಾಠೋಡ ಮತ್ತು ಶ್ರೀ ಪಂಡಿತ ತಂದೆ ಬೋಪಾ ರಾಠೋಡ ಸಾ;ಇಬ್ಬರು ಮುದ್ನಾಳ ದೊಡ್ಡತಾಂಡ ಇವರುಗಳು ಬಂದು ನಮಗೆ ವಿಚಾರಿಸಿರುತ್ತಾರೆ. ನಂತರ ಸುಭಾಷ್ ವೃತ್ತದ ಹತ್ತಿರ ಸಂಚಾರಿ ಪಾಯಿಂಟ್ ಕರ್ತವ್ಯದ ಮೇಲೆ ಇದ್ದ ಶ್ರೀ ಬಸಣ್ಣ ಎಚ್.ಸಿ ಮತ್ತು ಶ್ರೀ ಶಿವರಾಜ ಪಿಸಿ ರವರು ಬಂದು ನಮಗೆ ವಿಚಾರಿಸಿ ಅಪಘಾತದಲ್ಲಿ ಭಾಗಿಯಾದ ಎರಡು ವಾಹನಗಳನ್ನು ಠಾಣೆಗೆ ತೆಗೆದುಕೊಂಡು ಬರುವಂತೆ ತಿಳಿಸಿರುತ್ತಾರೆ. ಹೀಗಿದ್ದು ಈ ಘಟನೆ ಬಗ್ಗೆ ನಮ್ಮ ಮಾಲೀಕರು ದೂರು ನೀಡಲು ತಿಳಿಸಿದ ಮೇರೆಗೆ ನಾನು ಕನ್ನಡದಲ್ಲಿ ಟೈಪ್ ಮಾಡಿಸಿದ ಲಿಖಿತ ದೂರನ್ನು ಸಲ್ಲಿಸುತ್ತಿದ್ದು, ನಮ್ಮ ಕಾರ್ ನಂ.ಕೆಎ-04, ಎಮ್.ಎನ್-4102 ನೇದ್ದಕ್ಕೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದು ಅಪಘಾತಪಡಿಸಿ ಡ್ಯಾಮೇಜ್ ಮಾಡಿದ ಲಾರಿ ಟ್ಯಾಂಕರ್ ನಂಬರ ಕೆಎ-19, ಸಿ-0331 ನೇದ್ದರ ಚಾಲಕ ವಿರೇಶ ಈತನ ಮೇಲೆ ಕಾನೂನಿನ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.37/2022 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 122/2022 ಕಲಂ. 457, 380 ಐಪಿಸಿ: ಇಂದು ದಿನಾಂಕ 09-08-2022 ರಂದು ಸಾಯಂಕಾಲ 5 ಪಿ.ಎಮ್ ಕ್ಕೆ ಅಜರ್ಿದಾರರಾದ ನರಸಪ್ಪಾ ತಂದೆ ಭೀಮಪ್ಪಾ ಗುಡ್ಲಾ ವಯಾ:28 ಉ:ನಿಸಾ ಸೆಕ್ಯೂರಿಟಿ ಸುಪರವೈಸರ್ ಯಾದಗಿರಿ ಸಾ: ಮಾದ್ವಾರ ಇವರು ಠಾಣೆಗೆ ಹಾಜರಾಗಿ ಲಿಖಿತ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ಮೊನ್ನೆ ದಿನಾಂಕ 07-08-2022 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಇಂಡಸ್ ಟವರಿನ ಟೆಕನಿಷಿಯನ್ ಮಹೇಂದ್ರ ಇವರು ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ ಬೆಳಗೇರಾ ಗ್ರಾಮದ ಹತ್ತಿರ ಇರುವ ಇಂಡಸ್ ಟವರ ಐಡಿ ನಂ: 1233729 ಮತತು ಸೈಟ್ ಐಡಿ ನಂ:ಃಉಇಖ01 ನೆದ್ದರಲ್ಲಿ ಅವಳಡಿಸಿದ ಬ್ಯಾಟರಿ ಬ್ಯಾಂಕ 24 ಶೇಲಗಳು ಕಳುವಾಗಿರುತ್ತವೆ ಅಂತಾ ತಿಳಿಸಿದರು. ನಾನು ನಿನ್ನೆ ದಿನಾಂಕ 08-08-2022 ರಂದು ಬೆಳಗ್ಗೆ 8 ಗಂಟೆಗೆ ಸದರಿ ಸೈಟಿಗೆ ಬೇಟಿ ಕೊಟ್ಟು ಪರಿಶೀಲಿಸಿ ನೋಡಲಾಗಿ ಯಾರೋ ಕಳ್ಳರು ಸೈಟಿನ ಒಳಗಡೆ ಇರುವ ಶೇಲ್ಟರ ರೂಮಿಗೆ ಹಾಕಿದ ಬೀಗ ಮುರಿದು ಒಳಗಡೆ ಹೋಗಿ ರ್ಯಾಕಿನಲ್ಲಿ ಅಳವಡಿಸಿದ 24 ಬ್ಯಾಟರಿ ಬ್ಯಾಂಕ ಶೇಲಗಳನ್ನು ನಟ್ ಬೋಲ್ಟ ಬಿಚ್ಚಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಘಠನೆ ದಿನಾಂಕ 06/07-08-2022 ರ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯ ಮಧ್ಯದಲ್ಲಿ ಕಳುವಾಗಿರುತ್ತದೆ. ಸದರಿ ಬ್ಯಾಟರಿ ಶೆಲಗಳ ಕಿಮ್ಮತ್ತು 80,000/-ರೂಪಾಯಿ ಗಳಾಗುತ್ತವೆ. ಅವುಗಳನ್ನು ನೋಡಿದರೆ ನಮ್ಮ ಟೆಕನೀಷಿಯನ್ ಗುರುತಿಸುತ್ತಾರೆ. ಈ ಘಟನೆಯ ವಿಷಯ ನಾನು ಖುದ್ದಾಗಿ ನೋಡಿ ನಮ್ಮ ಮೇಲಾಧೀಕಾರಿಗಳಿಗೆ ತಿಳಿಸಿ ಇಂದು ಠಾಣೆಗೆ ಬಂದು ಫಿರ್ಯಾಧಿ ಕೊಡುತ್ತಿದ್ದೆನೆ. ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 122/2022 ಕಲಂ 457,380 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 10-08-2022 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080