ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-09-2022

 

ಶಹಾಪೂರ ಪೊಲೀಸ್ ಠಾಣೆ:-

ಗುನ್ನೆ ನಂ: 152/2022 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ 09/09/2022 ರಂದು 09.00 ಎ.ಎಂ.ಕ್ಕೆ ಫಿಯರ್ಾದಿ ಶ್ರೀ ಶರಣು ತಂ/ ಶಿವಪ್ಪ ಅಂಗಡಿ ಸಾ|| ಹಳಿಸಗರ, ಶಹಾಪೂರ, ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸರಾಂಶವೆನೆಂದರೆ. ನಾನು ಕೊಡುವ ದೂರು ಅಜರ್ಿ ಏನೆಂದರೆ, ನಿನ್ನೆ ದಿನಾಂಕ: 08/09/2022 ರಂದು ನನ್ನ ಕೆಲಸ ನಿಮಿತ್ಯ ನನ್ನ ಮೋಟರ ಸೈಕಲದಲ್ಲಿ ಸುರಪುರಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಇಂದು ಬೆಳಿಗ್ಗೆ ಮರಳಿ ನಮ್ಮೂರಿಗೆ ಹೊರಟಿದ್ದಾಗ 6.00 ಎ.ಎಂ.ಕ್ಕೆ ಸುಮಾರಿಗೆ ಶಹಾಪುರ-ಸುರಪುರ ರೋಡಿನಲ್ಲಿ ಕೊಂಗಂಡಿ ಗ್ರಾಮ ಇನ್ನೂ ಅಂದಾಜು 1 ಕಿ.ಮೀ ಅಂತರದಲ್ಲಿರುವಾಗ ರಸ್ತೆಯ ಬಲಭಾಗದಲ್ಲಿ ಒಬ್ಬ ವ್ಯಕ್ತಿ ಅಂದಾಜು 30 ರಿಂದ 35 ವರ್ಷ ವಯಸ್ಸಿನವನು ಬಿದ್ದಿದ್ದನು ಹತ್ತಿರ ಹೋಗಿ ನೋಡಲಾಗಿ ಸದರಿ ವ್ಯಕ್ತಿಗೆ ಬಲ ಹಣೆಯಿಂದ ತಲೆಯ ಮೇಲ್ಬಾಗದ ವರೆಗೆ ಭಾರೀ ಕಟ್ಟಾದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನೋಡಲಾಗಿ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನ ನಡೆಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ಸದರಿ ವ್ಯಕ್ತಿಗೆ ಡಿಕ್ಕಿಪಡಿಸಿ ತನ್ನ ವಾಹನವನ್ನು ನಿಲ್ಲಿಸದೇ ಓಡಿಸಿಕೊಂಡು ಹೋದಂತೆ ಕಂಡು ಬಂದಿದ್ದು, ಘಟನೆ ಸ್ಥಳಕ್ಕೆ ಬಂದ ಕೊಂಗಂಡಿ ಗ್ರಾಮದ ಶರಣಗೌಡ ತಂ/ ಶಂಕರಗೌಡ ದಳಪತಿ ರವರು ಈಗ್ಗೆ ಅರ್ಧ ಗಂಟೆ ಮೊದಲು ಮಂಡಗಳ್ಳಿಗೆ ಹೋಗಿದ್ದು, ಆ ಸಮಯದಲ್ಲಿ ಯಾವುದೇ ಘಟನೆ ಜರುಗಿರಲಿಲ್ಲ ಅಂತಾ ತಿಳಿಸಿದ್ದು, ಘಟನೆಯು ಇಂದು ದಿನಾಂಕ: 09/09/2022 ರಂದು ಬೆಳಗಿನ ಜಾವ ಅಂದಾಜು 5.30 ಎ.ಎಂ. ಇಂದ 6.00 ಎ.ಎಂ. ಅವಧಿಯಲ್ಲಿ ಜರುಗಿದಂತೆ ಕಂಡು ಬಂದ್ದಿದ್ದು ಇರುತ್ತದೆ. ಈ ಅಪಘಾತಕ್ಕೆ ಕಾರಣನಾದ ಯಾವುದೋ ಒಂದು ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.152/2022 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 

 

ಗೋಗಿ ಪೊಲೀಸ್ ಠಾಣೆ:-

ಗುನ್ನೆ ನಂ: 68/2022 ಕಲಂ: 120(ಬಿ), 167, 406, 420 ಐಪಿಸಿ: ಇಂದು ದಿನಾಂಕ: 09/09/2022 ರಂದು 08.30 ಪಿ.ಎಮ್ ಕ್ಕೆ ಕೋರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರಾದ ಶ್ರೀ ನಾಗಪ್ಪ ಪಿಸಿ 167 ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರ ಖಾಸಗಿ ದಾವೆ ನಂ:79/2022 ನೇದ್ದನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು, ಸದರಿ ಖಾಸಗಿ ದಾವೆಯ ಸಾರಾಂಶವೇನೆಂದರೆ, ಫಿಯರ್ಾದದಾರರಾದ ವೆಂಕಟೇಶ ಮಕಾಸಿ ಸಾಲ್ದಾಳ ಇವರ ಗ್ರಾಮದ ಮತ್ತು ಶಹಹಾಪೂರ ತಾಲುಕು , ವಡಗೇರಾ ತಾಲೂಕಿನಲ್ಲಿ ಹಾದು ಹೋದಂತಹ ಎಸ್.ಬಿ.ಸಿ ಮೇನ್ ಕೆನಾಲ ರಿಪೇರಿ , ನವೀಕರಣ ಕಾಮಗಾರಿ ಕೆಲಸವನ್ನು ಮಾಡಲು ಆರೋಪಿ ನಂ 1 ರವರು ಅರ್ಹರಾಗಿರದಿದ್ದರೂ ಸದರಿಯವರಿಗೆ ಟೆಂಡರ್ ಆಗಲು ಟೆಂಡರ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಆರೋಪಿ ನಂ 1 ರವರಿಗೆ ಟೆಂಡರ್ ಮಂಜೂರಾಗಲು ಆರೋಪಿ ನಂ 2 ರವರು ಸಹಕರಿಸಿದ್ದು, ಕಾಮಗಾರಿಗೆ ಬಳಸಬೇಕಾದ 15000/- ಕ್ಯೂಬಿಕ್ ಮೀಟರ್ ಮರಳನ್ನು ಬಳಸದೇ ಕೇವಲ 174 ಕ್ಯೂಬಿಕ್ ಮೀಟರ್ ಮರಳನ್ನು ಬಳಕೆ ಮಾಡಿ ಕಳಪೆ ಕಾಮಗಾರಿ ಮಾಡಿ ಸರಕಾರಕ್ಕೆ 1,98,00,00,000/- ಕೋಟಿ ರೂಪಾಯಿಗಳನ್ನು ಸಾರ್ವಜನಿಕ ಹಣವನ್ನು ಲೂಟಿಮಾಡಿ ಸರಕಾರಕ್ಕೆ ಮೋಸ ಮಾಡಿರುತ್ತಾರೆ ಕಾರಣ ಸದರಿ ಆರೋಪಿತರ ವಿರುದ್ದ ಕಲಂ 120(ಬಿ), 167, 406, 420 ಐಪಿಸಿ ಅಡಿಯಲ್ಲಿ ಕಾನೂನಿನ ಕ್ರಮ ಕೈಕೊಳ್ಳಲು ವಿನಂತಿ ಅಂತಾ ವಗೈರೆ ಖಾಸಗಿ ಫಿಯರ್ಾದಿ ಅಜರ್ಿ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 68/2022 ಕಲಂ 120(ಬಿ), 167, 406, 420 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಇತ್ತೀಚಿನ ನವೀಕರಣ​ : 10-09-2022 10:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080